✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday 10 February 2021

ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-01

🏵 ಅಮೃತಾತ್ಮರೇ ನಮಸ್ಕಾರ 🏵
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
11.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-18
••••••••••••••
✍️: ಇಂದಿನ ವಿಷಯ:
🥛ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು ಭಾಗ-01
•••••••••••••••••••••••••••••••••••••••••

📜 ಅತ್ರ ಗವ್ಯಂ ತು ಜೀವನೀಯಂ..............ರಕ್ತಪಿತ್ತಂ ಚ ನಾಶಯೇತ್ |
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23

◆ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ-
ಆದರೆ ನೆನಪಿಡಿ ಇವು *ಭಾರತೀಯ ಗೋವುಗಳ ಕ್ಷೀರದ ಗುಣಗಳು:*

1⃣ ಜೀವನೀಯಂ- ಪ್ರತಿ ಜೀವಕೋಶಗಳಿಗೆ ಪ್ರಾಣ ಇರಲು(ಚಟುವಟಿಕೆಯಿಂದ ಇರಲು) ಬೇಕಾಗುವ ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ಅನ್ಯ ಯಾವ ಆಹಾರವನ್ನೂ, ನೀರನ್ನೂ ಸೇವಿಸದೇ ಕೇವಲ ಕ್ಷೀರದಿಂದಲೇ ಒಂದು ನೂರು ವರ್ಷ ಜೀವಂತವಾಗಿಯೂ ಆರೋಗ್ಯದಿಂದಲೂ ಇರಬಲ್ಲ. ಯಾವುದೇ ಪೋಷಕಾಂಶಗಳ ಕೊರತೆ ಬರುವುದೇ ಇಲ್ಲ. ಅಥರ್ವ ಸಂಸ್ಥೆಯಲ್ಲಿ ಕೇವಲ ಹಾಲಿನಿಂದಲೇ ಆರು ತಿಂಗಳು ಚುಕಿತ್ಸೆ ಮಾಡಿದ್ದು ಜೀವಂತ ನಿದರ್ಶನವಾಗಿದೆ📿. ಆದ್ದರಿಂದ "ಜೀವನೀಯಂ" ಎಂದು ಕರೆಯುತ್ತಾರೆ. ಎಲ್ಲರೂ ಪ್ರಯತ್ನಿಸಿ ನೋಡಬಹುದು.(ದೇಸೀ ಹಸುವಿನ ಹಾಲು)

2⃣ ರಸಾಯನಂ:
ರಸಾದಿ ಸರ್ವಧಾತುಗಳಿಗೆ ಸಾರ ಶಕ್ತಿಯನ್ನು ಒದಗಿಸುತ್ತದೆ.

3⃣ ಕ್ಷತಕ್ಷೀಣ ಹಿತಂ-
ಪುಪ್ಪುಸದ ಅಲ್ವಿಯೋಲೈಗಳ ಅತಿಸೂಕ್ಷ್ಮ ರಕ್ತನಾಳಗಳು ಒಡೆದು, ಊತಬಂದಾಗ ರಕ್ತಕ್ಕೆ ಆಮ್ಲಜನಕ‌ ಕಡಿಮೆ ಸೇರುತ್ತದೆ, ಇದು ಟಿಬಿ ಕಾಯಿಲೆಗೆ ಸಮ ಸಮವಾದ ಗಂಭೀರ ತೊಂದರೆ. ಇದರಿಂದ ಮನುಷ್ಯ ಕ್ಷೀಣ/ಸೊರಗಿ ದುರ್ಬಲನಾಗುತ್ತಾನೆ. ಗೋಕ್ಷೀರ ಇಂತಹ ಸಂದರ್ಭದಲ್ಲಿ ಅತ್ಯುತ್ತಮ‌ ಔಷಧವಾಗಿದೆ, ಆದರೆ ಇಂದಿನ ಬಿಳಿದ್ರವ(ಹೈಬ್ರೀಡ್ ತಳಿಯ ಹಾಲು)ವನ್ನು ಸೇವಿಸಿದರೆ ಅದು ಕಫವನ್ನು ಹೆಚ್ಚುಮಾಡಿ ಇನ್ನಷ್ಟೂ ಅನಾರೋಗ್ಯವನ್ನು ತರುತ್ತದೆ ಎಚ್ಚರ! ಕ್ಷತಕ್ಷೀಣ ರೋಗದಲ್ಲಿ ಆಯುರ್ವೇದ ವೈದ್ಯರು ಕೆಲ ಔಷಧಿಗಳನ್ನು ಗೋ ಕ್ಷೀರದಲ್ಲಿ ಪಾಕಮಾಡಿ ಸೇವಿಸಲು ಹೇಳುತ್ತಾರೆ.

4⃣ ಮೇಧ್ಯಂ🧠
ಮೇಧಾ ಎಂದರೆ ಮೆದುಳಿನ ತೀಕ್ಷ್ಣ ಗ್ರಾಹೀ ಶಕ್ತಿ. ಇದನ್ನು ಹೆಚ್ಚುಮಾಡುವ ದ್ರವ್ಯಕ್ಕೆ ಮೇಧ್ಯ ಎನ್ನುತ್ತೇವೆ. ಸಾರ ಮೆದಸ್ಸು ಎಂದರೆ ಹಾಲಿನ‌ಸಾರ ಭಾಗವಾದ ತುಪ್ಪವಾಗಿದೆ. ಕ್ಷೀರದಲ್ಲಿನ ಸಾರ ಜಿಡ್ಡಿನ ಅಂಶ ನಮ್ಮೊಳಗಿನ‌ ಅಗ್ನಿಯಿಂದ ನಿಧಾನವಾಗಿ ಹಂತಹಂತವಾಗಿ ಪಚನವಾಗುತ್ತಾ ಪ್ರತ್ಯೇಕವಾಗುತ್ತಾ ಮೆದಸ್ಸನ್ನು ಸೇರಿ ಅಲ್ಲಿಂದ ಸಾರಭಾಗವಾಗಿ ಮೆದುಳಿನ ಜೀವಕೋಶಗಳಿಗೆ ಪೋಷಣೆ ಅಂದರೆ ತಾನೇ ಮೆದುಳಾಗಿ ಬದಲಾಗುತ್ತದೆ.  ಹೈಬ್ರೀಡ್ ಹಸು ಎಂಬ ಪ್ರಾಣಿಯ ತುಪ್ಪವನ್ನು ತಿಂದರೆ ಕೊಲೆಸ್ಟರಾಲ್ ಹೆಚ್ಚುತ್ತದೆ ಎಂದು ಸಂಶೋಧನೆ ಹೇಳುತ್ತದೆ. ದುರಾದೃಷ್ಟವಶಾತ್ ಈ ಸಂಶೋಧನೆಗಳು ಭಾರತೀಯ ತಳಿಯ ಗೋಘೃತದ ಮೇಲೆ ಆಗಿಲ್ಲ, ಹಾಗಾಗಿ ಅನೇಕ ವೈದ್ಯರು ಹೈಬ್ರೀಡ್ ತುಪ್ಪವನ್ನೇ ನೆಪ ಮಾಡಿಕೊಂಡು ಅದನ್ನು ಶತೃವಿನಂತೆ ಅಲ್ಲಗಳೆಯುತ್ತಿದ್ದಾರೆ.

5⃣ ಬಲ್ಯಂ💪
ಸಂಪೂರ್ಣ ಪೋಷಕಗಳನ್ನು ಹೊಂದಿರುವ ಹಾಲು ಮಾಂಸಧಾತುವಿನ ಘನ-ದೃಢ ಭಾವವನ್ನು(muscular minerals) ಪೋಷಣೆ ಮಾಡುತ್ತಾ ಬಲವರ್ಧನೆ ಮಾಡುತ್ತದೆ. 
ದುರ್ದೈವ ಎಂದರೆ ಬಿ.ಪಿ ಬಂದಾಗ ರಕ್ತನಾಳಗಳನ್ನು ಮೃದುಗೊಳಿಸುವ ಗೋಕ್ಷೀರಸಿದ್ಧ ದ್ರವ್ಯಪ್ರಯೋಗದ ಬದಲು, calcium channel blocker ಉಪಯೋಗಿಸಿ ಹೃದಯದ ಮಾಂಸಖಂಡಗಳ ಶಕ್ತಿಯನ್ನು ಕುಗ್ಗಿಸಿ ಬಿ.ಪಿ ತಗ್ಗಿಸುವ ವಿಧಾನ ಬಳಸುತ್ತಾರೆ!- ಆದರೆ ನೆನಪಿಡಿ, ಬಿ.ಪಿ ಇರುವವರು ಅದಕ್ಕೆ ಸಂಬಂಧಿಸಿದ ಮಾತ್ರೆ ಬಿಡುವಂತೆಯೇ ಇಲ್ಲ, ಅದು ಅತ್ಯಂತ ಅಪಾಯಕಾರಿ. ಬಹಳ ಪ್ರಯತ್ನ ಪಟ್ಟರೆ ಸೂಕ್ತ ಆಯುರ್ವೇದ ವೈದ್ಯರ ಕೈಯಲ್ಲಿ ಒಂದುವರ್ಷ ಪಥ್ಯಾಹಾರ, ಮನೋಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದ ಬಿ.ಪಿಯನ್ನು ಸಂಪೂರ್ಣ‌ ಗುಣಪಡಿಸಬಹುದು. ಅದರ ಹೊರತು ಬಿ.ಪಿ ಜೊತೆ ಆಟವಾಡದಿರಿ ಜೋಕೆ🤫

6⃣ ಸ್ತನ್ಯಕರಂ-
ಎದೆಹಾಲನ್ನು ಹೆಚ್ಚಿಸುತ್ತದೆ. ಬಹಳಷ್ಟು ಹುಡುಗಿಯರು ದಪ್ಪವಾಗುತ್ತೇವೆ, ವಾಸನೆ, ಸೇರಲ್ಲ, ಇನ್ನೇನೋ ಕಾರಣದಿಂದ ಹಾಲನ್ನೇ ಸೇವಿಸದ ಇಂದಿನ ದಿನಗಳಲ್ಲಿ, ಹೆರಿಗೆ ನಂತರ ಶೇ 40 ಜನರಿಗೆ ಎದೆಹಾಲು ಬರುತ್ತಿಲ್ಲ, ಬಂದರೂ ಸಾಕಾಗುತ್ತಿಲ್ಲ, ಇಲ್ಲಿಂದಲೇ ಮಗವಿಗೆ ಕೃತಕ ಹಾಲಿನ ದೋಷವನ್ನು ಅಂಟಿಸುತ್ತಿದ್ದೇವೆ. ತಾಯಿಯಾದ ನಂತರ ಎಷ್ಟು ಹಾಲುಕುಡಿದರೂ ಅದೇನು ಸ್ತನ್ಯವಾಗದು. ಪ್ರಾಯದ ಬೆಳವಣಿಗೆಯಲ್ಲೇ ಗೋಕ್ಷೀರಸೇವನೆ ಮಾಡಿ.

7⃣ ಸರಮ್-
ಶರೀರದ ಪ್ರತಿ ಜೀವಕೋಶಗಳಲ್ಲಿ ಚಯಾಪಚಯ ಕ್ರಿಯೆಯಿಂದ ನಿತ್ಯವೂ ಸಂಚಯವಾದ ವಿವಿಧ ಮಲಗಳನ್ನೂ, ವಿಷವಸ್ತುಗಳನ್ನೂ ತನ್ನ ಈ ಸರಗುಣದ ಸ್ವಸಾಮರ್ಥ್ಯದಿಂದ ಮೃದುಗೊಳಿಸಿ, ಪಿತ್ತದಿಂದ ಪುನಃ ಪಾಕವಾಗಗೊಡದೇ ಉಪಾಯದಿಂದ ಜಾರಿಸಿ(ಸರ) ಹೊರತರುತ್ತದೆ.

ಅನೇಕ ರೀತಿಯ ಲಿವರ್ ತೊಂದರೆಗಳಲ್ಲಿ ಉಂಟಾಗುವ ವಿಷದ ಅವಸ್ಥೆಯಲ್ಲಿ ಔಷಧ ಸಿದ್ಧ ಕ್ಷೀರಪ್ರಯೋಗವನ್ನು ಮಾಡಿ ಪ್ರಾಣಾಂತಕ cirrhosis of liver ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಿದ್ದೇವೆ, ಇದು ನಿಜವಾದ ಆಯುರ್ವೇದದ ಸಾಮರ್ಥ್ಯ. ಇಲ್ಲಿ ಕ್ಷೀರವು ಉದರದಲ್ಲಿನ ಪೋಷಕ ಜಲಸಂಚಯ(ascitic fluid)ವನ್ನು ನಿಃಷ್ಯೇಶವಾಗಿ ಹೊರಹಾಕುವುದು ಮತ್ತು ತಡೆಯುವುದು ಇದೇ *ಸರಗುಣದಿಂದ*

🔜 ಗೋಕ್ಷೀರದ ಇನ್ನೂ 11 ವಿಶೇಷ ಗುಣಗಳನ್ನು ನಾಳೆ ನೋಡೋಣ.

ನಮ್ಮ ಆಪ್ತರ ಗುಂಪನ್ನು ರಚಿಸಿಕೊಂಡು ಅಮೃತಮಯ ದೇಸೀ ಗೋವುಗಳನ್ನು ನಾವೇಕೆ ಸಾಕಬಾರದು? 

     🎀ಧನ್ಯವಾದಗಳು 🎀
••••••••••••••
ಇಂದ
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline