🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
. 🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
24.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-30
••••••••••••••
✍️: ಇಂದಿನ ವಿಷಯ:
ಮೊಳಕೆ ಕಾಳು ಆರೋಗ್ಯಕರವೋ ಅನಾರೋಗ್ಯಕರವೋ ?
•••••••••••••••••••••••••••••••••••••••••
📜 ತಿಲಪಿಣ್ಯಾಕ ವಿಕೃತಿ........ದೃಘ್ನ ದೋಷಲಂ ಗ್ಲಪನಂ ಗುರು |
- ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ-6/32-33, ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ.
ದೃಷ್ಠಿಗೆ ಹಾನಿಮಾಡತಕ್ಕ, ಸರ್ವದೋಷ ಪ್ರಕೋಪ ಮಾಡುವಂತಹ, ಅಂಗಗಳ ಶಕ್ತಿಹ್ರಾಸ ಮಾಡತಕ್ಕ ಕೆಲವು ಆಹಾರಗಳನ್ನು ಹೇಳುತ್ತಾರೆ. ಇವು ಸೇವನೆಗೆ ಯೋಗ್ಯವಲ್ಲ.
• ಎಳ್ಳಿನ ಹಿಂಡಿಯಿಂದ ತಯಾರಾದ ಭಕ್ಷ್ಯಗಳು.
• ಒಣಗಿದ ತರಕಾರಿಗಳೂ, ಎಣ್ಣೆ, ತುಪ್ಪದಲ್ಲಿ ಹುರಿಯದೇ ತಿನ್ನುವ ಸೊಪ್ಪು ಪಲ್ಯಗಳು.
• ಮೊಳಕೆ ಬರಿಸಿದ ಧಾನ್ಯಗಳು.
ಮತ್ತು
• ಹೆಸರು, ಉದ್ದುಗಳಿಂದ ಮಾಡಿದ ವಡೆಗಳು(ಉದ್ದು, ಹಲಸಂದಿ ವಡೆಗಳು)
ಇವೆಲ್ಲವೂ ಕೇವಲ ಪಚನಕ್ಕೆ ಭಾರ ಅಷ್ಟೇ ಅಲ್ಲ, ಇವು ಒಂದೊಮ್ಮೆ ಕರುಳಿನಲ್ಲಿ ಜೀರ್ಣವಾದಂತೆ ಕಂಡರೂ ರಕ್ತದಲ್ಲಿ ಪಚನವಾಗದೇ ರಕ್ತದುಷ್ಠಿಯನ್ನುಂಟುಮಾಡುತ್ತವೆ.
🖋 ಮೊಳಕೆಕಾಳು ಆರೋಗ್ಯಕರವೋ?
★ ಆಯುರ್ವೇದವು ದೋಷಕಾರಕ ಗುಂಪಿನ ಕೆಲವೇ ದ್ರವ್ಯಗಳಲ್ಲಿ ಮೊಳಕೆ ಬಂದ ಕಾಳುಗಳನ್ನು ಸೇರಿಸಿದೆ.
ಮೊಳಕೆಕಾಳಿನಲ್ಲಿರುವ ರಾಸಾಯನಿಕಗಳ ಆಧಾರದಲ್ಲಿ ವಿಜ್ಞಾನ ಅದನ್ನು ಅತ್ಯುತ್ತಮ ಎಂದಿದೆ!! ಆಶ್ಚರ್ಯ, ಮಣ್ಣಿನಲ್ಲೂ ಪೋಷಕಾಂಶಗಳು ಹೇರಳವಾಗಿವೆ!! ತಿನ್ನಲು ಸಾಧ್ಯವೇ?🤦♂
✅ ಆಹಾರ ಎಂದರೆ ನಮ್ಮ ಜೀರ್ಣಶಕ್ತಿ ಅದನ್ನು ಗುರುತಿಸಿ ಜೀರ್ಣಿಸಬೇಕೇ ಹೊರತು ಕೇವಲ ರಾಸಾಯನಿಕಗಳ ಆಧಾರದಲ್ಲಿ ಅಲ್ಲ.
🛡ಮೊಳಕೆಕಾಳು, ಒಂದು ಹೊಸ ಜೀವಿ ಹೊರಬರುವ ಕ್ರಿಯೆ.
ಅದರ ತಾಯಿ ಅದನ್ನು ಹೇಗೆ ರಕ್ಷಿಸಿರುತ್ತದೆ ಎಂದರೆ, ತನ್ನ ಸಂತತಿಯ ಬೆಳವಣಿಗೆ ಸಂದರ್ಭದಲ್ಲಿ ಯಾವ ಕ್ರಿಮಿಗಳಿಂದಲೂ ನಾಶವಾಗದಿರಲೆಂದು, ವಿಷಪೂರಿತ ಅಂಶವನ್ನು ಕಾಳಿನಸಿಪ್ಪೆ ಮತ್ತು ಮೊಳಕೆಯ ಹೊರಪೊರೆಯಲ್ಲೂ ಇಟ್ಟಿರುತ್ತದೆ. ಅದು ಸೇವನೆಗೆ ಯೋಗ್ಯವಲ್ಲ.
ಇದು ವಿಷಸಮಾನ, (poisonous protein chain)
ತಿಂದರೆ ಕರುಳುಗಳ ಎಂಜೈಮ್ ಗಳಿಗೆ ಜೀರ್ಣಿಸಲು ಸಾಧ್ಯವಾಗದೇ, ದೊಡ್ಡಕರುಳಿನಲ್ಲಿ ಗ್ಯಾಸ್ ಉಂಟಾಗಿ ಮಾಲಿಕ್ಯೂಲ್ ಗಳ ಅಣುವಿಭಜನೆ ಆಗಬೇಕಾಗುತ್ತದೆ.
ಈ ಕ್ರಿಯೆ ನಿರಂತರ ಇದ್ದರೆ ಅವಿಭಜಿತ ಮಾಲಿಕ್ಯೂಲ್ ಗಳು ರಸ ಮತ್ತು ರಕ್ತದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅವು ಸಂಚಯವಾದರೆ ಆಮವಾತ, ವಾತರಕ್ತ ಎಂಬ ಸಂಧಿಗತ ವ್ಯಾಧಿಗಳು ಬರುತ್ತವೆ. ಆಮದೋಷ ಪ್ರಕೋಪಗೊಂಡರೆ, ಚರ್ಮದ ತೊಂದರೆಗಳೂ ಬರುತ್ತವೆ.
🩸 ರಕ್ತವು ಸರ್ವದಾ ಆಮ್ಲದಿಂದ ದೂರ ಇರುವ ದ್ರವ. ಇದಕ್ಕೆ ಆಮ್ಲಭಾವ ಬಂದ ತಕ್ಷಣ ಆಂತರಿಕ ವಾತಾವರಣವೇ ಬದಲಾಗುತ್ತದೆ, ಆಗ ಸರ್ವಶರೀರ ಸಂಚಾರಿ ಆಗಿರುವ ರಕ್ತ ಅನೇಕ ಅಂಗಗಳಿಗೆ ಸರಿಯಾದ ಆಹಾರ, ಆಮ್ಲಜನಕ ಪೂರೈಸಲು ಸಾಧ್ಯವಾಗದೇ, ಗ್ಲಾನಿ
ಅಂದರೆ ಅತ್ಯಂತ ದೌರ್ಬಲ್ಯ ಉಂಟುಮಾಡುತ್ತಿರುತ್ತದೆ. ಆದರೆ ಆರಂಭದಲ್ಲೇ ಇದು ಕಂಡುಬರುವುದಿಲ್ಲ ಏಕೆಂದರೆ ಎಲ್ಲಾ ಧಾತುಗಳೂ ತಮ್ಮ ಪಚನಶಕ್ತಿ ಬಳಸಿ ರಕ್ಷಿಸಿಕೊಳ್ಳುತ್ತವೆ ಆದರೆ ಕಾಲಾಂತರದಲ್ಲಿ ಈ ಆಹಾರಗಳಿಂದ ಹಾನಿ ತಪ್ಪಿದ್ದಲ್ಲ.
👁 ನೇತ್ರವು ಮಜ್ಜಾಧಾತುವಿನಿಂದ ಉಂಟಾದ ತೀಕ್ಷ್ಣ ಅವಯವ. ಇದರಲ್ಲಿ ತೇಜಸ್ಸು ಪ್ರಖರವಾಗಿರುತ್ತದೆ, ಎಲ್ಲಾ ಇಂದ್ರಿಯಗಳು ತಮ್ಮ ಸಂಪರ್ಕಕ್ಕೆ ಬಂದ ಶಬ್ದಾದಿ ವಿಷಯಗಳನ್ನು ಗ್ರಹಿಸಿದರೆ ನೇತ್ರ ದೂರದ ವಸ್ತು ವಿಷಯಗಳನ್ನೂ ಗ್ರಹಿಸಬಲ್ಲದು, ಇದಕ್ಕೆ ಕಾರಣ ತೇಜಸ್ಸು.
ಮೇಲಿನ ದ್ರವ್ಯಗಳು ತೇಜಸ್ಸನ್ನು ಹಾನಿಗೊಳಿಸುತ್ತವೆ. ನೇತ್ರ ಮಲಿನವಾಗುತ್ತದೆ. ದೃಷ್ಟಿ ಕ್ಷೀಣಿಸುತ್ತದೆ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ
No comments:
Post a Comment