🌷 ಅಮೃತಾತ್ಮರೇ ನಮಸ್ಕಾರ 🌷
🦢ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🦢
🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀
••••••••••••••••••••••••••••••••••••••••••
03.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-12
••••••••••••••
✍️: ಇಂದಿನ ವಿಷಯ:
🔺 ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ? ಭಾಗ-೨
•••••••••••••••••••••••••••••••••••••••••
💦 ಅತ್ಯಂತ ಶ್ರೇಷ್ಠ ಜಲ:
📜 ಉಪಲಾಸ್ಫಾಲನ ಆಕ್ಷೇಪ ವಿಚ್ಛೇದೈಃ ಖೇದಿತೋದಕಾಃ ||9||
ಹಿಮವನ್ ಮಲಯೋದ್ಭೂತಾಃ .........|
- ಅಷ್ಟಾಂಗ ಹೃದಯ, ಸೂತ್ರ ಸ್ಥಾನ ಅಧ್ಯಾಯ-5
★ ಹಿಮವನ್: ಹಿಮಾಲಯ ಪರ್ವತದಲ್ಲಿ ಹುಟ್ಟುವ
★ ಮಲಯನ್: ಮಲಯ ಪರ್ವತದಲ್ಲಿ ಹುಟ್ಟುವ ನದಿಗಳ ನೀರು ಅತ್ಯಂತ ಶ್ರೇಷ್ಠ ಏಕೆಂದರೆ- ಆ ಜಲ
★ ಉಪಲಾಸ್ಫಾಲನ: ಬಂಡೆಗಳಿಂದ ಬೀಳುವುದು
★ ಆಕ್ಷೇಪ ವಿಚ್ಛೇದೈಃ: ಜಲದ ಪರಮಾಣುಗಳ ವಿಭಜನೆಯಾಗುವುದು
★ ಖೇದಿತ ಉದಕ: ಅಂಕುಡೊಂಕಾಗಿ ಬಂಡೆಗಳ ನಡುವೆ ಸೀಳಿ ಹರಿವ ನೀರು ಕುಡಿಯಲು ಅತ್ಯಂತ ಶ್ರೇಷ್ಠ.
🏞 ಈ ಜಲವನ್ನು , "ಗಂಗೋದಕ" ಎನ್ನುವರು(ಗಂಗಾ ನದಿಯ ಜಲ ಎಂಬ ಅರ್ಥವಲ್ಲ).
🚫 ಇನ್ನುಳಿದ ನೀರುಗಳು, "ಸಾಮುದ್ರಜಲ" (ಸಮುದ್ರದ ಜಲ ಎಂಬ ಅರ್ಥವಲ್ಲ, ಈ ಜಲ ಸಮುದ್ರ ಇದ್ದಂತೆ ಎಷ್ಡೇ ಪ್ರಮಾಣದಲ್ಲಿದ್ದರೂ ಬಳಸಲು ಅಯೋಗ್ಯ ಎಂಬುದು ನಿಜವಾದ ಅರ್ಥ)
📑 ಗಂಗೋದಕದ ವೈಜ್ಞಾನಿಕ ವಿವರಣೆ:
🔻 ಜಲವು ಅತ್ಯಂತ ಎತ್ತರದ ಮೇಲಿನಿಂದ ಬಂಡೆಗಳ ಮೇಲೆ ಬೀಳುವ ಕಾರಣ ಅದು ಆಕ್ಷೇಪ ವಿಚ್ಛೇದನ ಕ್ರಿಯೆಗೆ ಒಳಗಾಗಿ ತನ್ನ ಪರಮಾಣುವಿನ ಗಾತ್ರ ಕುಗ್ಗಿಸುವುದಲ್ಲದೇ, Hydrogen ವಿಭಜನೆಯಾಗಿ pH ವೃದ್ಧಿಯಾಗುವುದರಿಂದ, ಆಮ್ಲೀಯ ಗುಣವನ್ನು ಕಳೆದುಕೊಳ್ಳುತ್ತದೆ. ಇದು ವಿದ್ಯುತ್ ಪೂರಣಗೊಂಡ ಜಲವಾಗಿ ಮಾರ್ಪಡುತ್ತದೆ. ಇದೇ ಕಾರಣದಿಂದ ಈ ಜಲದ ಸಂಪರ್ಕಕ್ಕೆ ಬಂದ ಯಾವುದೇ ವಸ್ತು ಬೇಗ ಹಾಳಾಗುವುದಿಲ್ಲ, ಮನುಷ್ಯ ಕುಡಿದರೆ ಅವನಿಗೆ ಮುಪ್ಪು ಬೇಗ ಬರುವುದಿಲ್ಲ. ಸಧ್ಯಕ್ಕೆ ಜಗತ್ತಿನಲ್ಲಿ Antioxidant ಎಂಬ ಶಬ್ಧ ಅತ್ಯಂತ ಪ್ರಚಲಿತ ವಿಷಯವಾಗಿದೆ, ಈ ಜಲವು Antioxidant ಗುಣವನ್ನು ಹೊಂದಿದೆ, ಏಕೆಂದರೆ ಜಲದ ಕಣಗಳ ಗಾತ್ರ ಅತ್ಯಂತ ಚಿಕ್ಕದಾಗುತ್ತದೆ, ಖನಿಜಗಳಿಂದ ತುಂಬುತ್ತದೆ ತನ್ಮೂಲಕ ಮುಪ್ಪು, ರೋಗಗಳು ಮನುಷ್ಯರನ್ನು ಹೆಚ್ಚಾಗಿ ಬಾಧಿಸುವುದಿಲ್ಲ.
📑 ಉಪಯೋಗ ಏನು?
★ ಈ ಜಲ ಉಪಯೋಗಿಸಿದ ಮನುಷ್ಯನಿಗೆ ರೋಗಗಳ ಸಾಧ್ಯತೆ ಕಡಿಮೆ.
★ ಮುಪ್ಪು ನಿಧಾನ.
★ ಶರೀರದ *ಆಪ್ ಧಾತು* ಶ್ರೇಷ್ಠಮಟ್ಟದಲ್ಲಿರುವ ಕಾರಣ ಬೇಗ ಆಯಾಸಗೊಳ್ಳುವುದಿಲ್ಲ.
★ pH balance ಕಾರಣದಿಂದ ಜೀವಕೋಶಗಳು ಆಮ್ಲೀಯತೆಯನ್ನು ಸಾಕಷ್ಟು ಕಳೆದುಕೊಳ್ಳುತ್ತವೆ.
ಈ ಕಾರಣದಿಂದಾಗಿಯೇ ಹಿಮಾಲಯದಲ್ಲಿ ವಾಸಿಸುವ ಜನರು ಅತ್ಯಂತ ಆರೋಗ್ಯವಂತರು, ನಿತ್ಯವೂ, ಬೆಟ್ಟ ಏರಿ ಇಳಿದರೂ ಆಯಾಸಗೊಳ್ಳರು. ನಾವು ಅಲ್ಲಿಗೆ ಹೋದಾಗಲೂ ಸಹ ಎಷ್ಟೇ ನಡೆದರೂ ಸಹ, ಅಲ್ಲಿನ ವಾತಾವರಣದಲ್ಲಿ ಆ ನೀರಿನ ಪ್ರಭಾವ ಇರುವುದರಿಂದ ಆಯಾಸಗೊಳ್ಳುವುದು ಕಡಿಮೆ.
🔭 ಈಗ ಈ ಜಲ ಸಿಗುತ್ತದೆಯೇ?
ಹೌದು ಪ್ರವಾಸಕ್ಕೆ ಹೋದಾಗ ತಂದುಕೊಳ್ಳಬಹುದು. ಮತ್ತು ಇತ್ತೀಚಿಗೆ ಕೆಲವು ಜಪಾನ್ ತಂತ್ರಜ್ಞಾನ ಎಂಬ ಹೆಸರಿನಲ್ಲಿ ಜಲವನ್ನು ವಿದ್ಯುತೀಕರಣ ಮಾಡುವ ವಾಟರ್ ಫಿಲ್ಟರ್ ಗಳು ಬರುತ್ತಿವೆ.
👉 ನಾನು ಪ್ರತ್ಯಕ್ಷ ನೋಡಿದ ಉದಾಹರಣೆಯನ್ನು ಕೊಡುತ್ತೇನೆ, ಈ ರೀತಿ ವಿದ್ಯುತ್ ಕೃತ ಜಲವನ್ನು ಪ್ರಾಣಿಗಳು ಇಷ್ಟಪಟ್ಟು ಕುಡಿಯುತ್ತವೆ ಮತ್ತು ಪಕ್ಕದಲ್ಲೇ ನಮ್ಮ ಆರ್ ಒ ವಾಟರ್ ಇಟ್ಟರೂ ಅದನ್ನು ತ್ಯಜಿಸುತ್ತವೆ.
ನಮಗಿಂತ ಪ್ರಾಣಿಗಳ ಸಂವೇದನಾಶೀಲತೆ ನೂರುಪಟ್ಟು ಅಧಿಕವಲ್ಲವೇ?
👀 ಆರ್ ಒ ಜಲಪಾನ ನಿಲ್ಲಿಸಿ, ಅದು ಜಲವಲ್ಲ ಆ್ಯಸಿಡ್!! ನಿಧಾನವಾಗಿ ನಮ್ಮನ್ನು ಸುಡುತ್ತದೆ.
✍ What happens in electrolysis of water?
Due to electrolysis(ಆಕ್ಷೇಪ ವಿಚ್ಛೇದೈಃ) of water, water molecules during falling down from high mountains gets charged and having high hydrogen concentration called hingh pH value, there will be reduction in the oxidation property and reduce the size of water molecules....
🙏🙏ಧನ್ಯವಾದಗಳು 🙏🙏
••••••••••••••
ಇಂದ
ಹೆಚ್.ಬಿ.ಮೇಟಿ
Good colection&suggesion.is filter unit water safe?guide me.
ReplyDelete