✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 14 February 2021

ಮಹಿಷ, ಅಜ ಮುಂತಾದ ಪ್ರಾಣಿಗಳ ಕ್ಷೀರಗಳ ಗುಣಗಳು.

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
        ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
15.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-21
••••••••••••••
✍️: ಇಂದಿನ ವಿಷಯ:
ಮಹಿಷ, ಅಜ ಮುಂತಾದ ಪ್ರಾಣಿಗಳ ಕ್ಷೀರಗಳ ಗುಣಗಳು.
•••••••••••••••••••••••••••••••••••••••••
ಇಂದಿನ ವಿಷಯ ಸ್ವಲ್ಪ ಬಳಕೆಗೂ, ಸ್ವಲ್ಪ ಕೇವಲ ತಿಳುದುಕೊಳ್ಳಲು ಮಾತ್ರ ಇದೆ.

📜 ಹಿತಂ ಅತ್ಯಗ್ನ್ಯಂ ನಿದ್ರೇಭ್ಯೋ...................ಮಾಹಿಷಮ್......................ಅಜಂ.............................ಉಷ್ಟ್ರಂ...........ಮಾನುಷಂ..........................ಆವಿಕಂ..........ಹಸ್ತಿನ್ಯಾಃ....................... ಏಕ ಶಫಂ...............ಜಡಕಾರಕಮ್||
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/23-27

🐃 ಮಹಿಷ(ಎಮ್ಮೆ) ಕ್ಷೀರ:
• ನಿದ್ದೆ ಬಾರದವರಿಗೆ ಶ್ರೇಷ್ಠ, 
• ಆದರೆ, ಜೀರ್ಣಶಕ್ತಿ ಇರದವರಿಗೆ ಸೂಕ್ತವಲ್ಲ.

🐐 ಅಜ(ಆಡು)ಕ್ಷೀರ:
ಅಲ್ಪಜಲಪಾನ ಮಾಡುವ ಮತ್ತು ಎಲ್ಲಾ ಕಹಿರಸದ ಗಿಡಗಳನ್ನೇ ತಿನ್ನುವ ಆಡು, ಅತ್ಯಂತ ಔಷಧೀಗುಣಯುಕ್ತ ಹಾಲನ್ನು ಕೊಡುತ್ತದೆ.
•ಟಿ.ಬಿ
•ತೀವ್ರ ಅಜೀರ್ಣ
•ರಕ್ತಪಿತ್ತ, ಅಸ್ತಮಾ
•ಅತಿಸಾರಗಳಲ್ಲಿ
• ದುರ್ಬಲರಿಗೂ ಶ್ರೇಷ್ಠ.

🐪 ಉಷ್ಟ್ರ(ಒಂಟೆ)ಕ್ಷೀರ:
•ಉದರಕ್ರಿಮಿ
•ಮೂಲವ್ಯಾಧಿ 
•ಅಜೀರ್ಣ ಜನ್ಯ ಹೊಟ್ಟೆಯುಬ್ಬರದಲ್ಲಿ ಯೋಗ್ಯ. 

🦙 ಆವಿ(ಕುರಿ) ಕ್ಷೀರ: 
•ಅಹಿತಕಾರಿ, 
•ಹೃದಯರೋಗ ಉತ್ಪನ್ನ ಮಾಡುವುದು.

🐘 ಗಜ(ಆನೆ)ಕ್ಷೀರ:
• ಜೀರ್ಣಶಕ್ತಿ ಅತ್ಯಂತ ಬಲವಾಗಿದ್ದವರಿಗೆ ಇದು ಸ್ಥಿರತ್ವವನ್ನು ತರುತ್ತದೆ.

🦓🐴 ಏಕ ಖುರ(ಕುರೆ, ಕತ್ತೆ, ಒಂಟಿ..ಮುಂತಾದವು) ಪ್ರಾಣಿಗಳ ಕ್ಷೀರ:
•ಆಮ್ಲ-ಲವಣರಸ ಉಳ್ಳದ್ದು , 
•ಉರುಸ್ಥಂಭ ಎಂಬ ಅತ್ಯಂತ ಕಷ್ಟಕರವಾದ  ರೋಗವನ್ನು ಚಿಕಿತ್ಸಿಸಲು ಈ ಒಂದು ಗೊರಸಿನ ಪ್ರಾಣಿಗಳ ಕ್ಷೀರ ಒಳ್ಳೆಯದೆಂದು ಹೇಳಿದ್ದಾರೆ, ನಾವು ಈ ತನಕ ಈ ರೋಗವನ್ನು ನೋಡಿರುವುದಿಲ್ಲ.
• ಆದರೆ ಸೋಮಾರಿತನವನ್ನುಂಟು ಮಾಡುತ್ತದೆ ಎಂದೂ ತಿಳಿಸಿದ್ದಾರೆ.

🤱 ಸ್ತನ್ಯ(ಸ್ತ್ರೀ ಎದೆಹಾಲು): 
• ನೇತ್ರರೋಗಗಳಾದ ಕೆಂಪಾಗುವುದು(conjunctivitis), ಉರಿ(burning eyes), ಅಶ್ರುಸ್ರಾವ, ನೋವು, ಕೀವುಗುಳ್ಳೆಗಳು ಬಂದಾಗ, ನಿತ್ಯವೂ ಮೂರುಬಾರಿ ಸ್ತನ್ಯ(ಎದೆಹಾಲು)ವನ್ನು ನೇತ್ರಗಳಿಗೆ ಹಾಕಿಕೊಂಡರೆ ಅತ್ಯಂತ ಶೀಘ್ರ ಪರಿಣಾಮ ಎಂದಿದ್ದಾರೆ ಆಚಾರ್ಯರು. ಈ ಅಚ್ಚರಿ ಫಲಿತಾಂಶಗಳನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ.
 
       ✡ಧನ್ಯವಾದಗಳು ✡
••••••••••••••
ಇಂದ
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline