ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್
ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಂದೇ ಬಿಟ್ಟಿದೆ. ಲಕ್ಷಾಂತರ ಮಕ್ಕಳು ಬೋರ್ಡ್ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಸಂತಸದಿಂದ ಇದ್ದರೆ, ಇನ್ನು ಕೆಲವರು ಆತಂಕ ಸಂದಿಗ್ದತೆಯಲ್ಲಿ ಇದ್ದಾರೆ. ವರ್ಷ ಪೂರ್ತಿ ಅಭ್ಯಾಸ ಮಾಡಿದ್ದು ಮೂರೇ ಮೂರು ಗಂಟೆಯಲ್ಲಿ ಅಭಿವ್ಯಕ್ತಡಿಸಿ ಸಾಮರ್ಥ್ಯ ಒರೆಗೆ ಹಚ್ಚಬೇಕಾದ ಕಾಲ ಸನ್ನಿಹಿತವಾಗಿದೆ. ಶೈಕ್ಷಣಿಕ ಕವಲುದಾರಿ ಅರಸಿ, ಆರಿಸಿಕೊಂಡು ಕನಸು ಗುರಿ ನಿರ್ಧರಿಸಿಕೊಂಡು ಹಸನಾದ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕಿದೆ.
ಕೊವಿಡ್ -19 ಸಾಂಕ್ರಾಮಿಕ ರೋಗದ ಕಂಟಕ ಎಲ್ಲಡೆಯೂ ಆವರಿಸಿದ ಪರಿಣಾಮ, ಶಾಲಾ ಆರಂಭದಲ್ಲೇ ಅಧ್ಯಯನದಲ್ಲಿ ನಿರತರಾದ ಮಕ್ಕಳಿಗೆ ಒಂದಿಷ್ಟು ಭಯ ಆತಂಕ ಹುಟ್ಟಿತ್ತು. ಈ ವರ್ಷದ ಬೋರ್ಡ್ ಪರೀಕ್ಷೆ ಎದುರಿಸುವ ಮಕ್ಕಳು ಒಂಭತ್ತನೇ ತರಗತಿಯಲ್ಲಿ ಬಹುತೇಕ ಒಂದು ವರ್ಷ ಶಿಕ್ಷಣದಿಂದ ವಂಚನೆಗೆ ಒಳಗಾದವರು. ಹೀಗಾಗಿ ಒಂದಿಷ್ಟು ಆತಂಕ ಎಲ್ಲರಲ್ಲೂ ಸಹಜ. ಆದರೆ, ಪೋಷಕರು, ಮಕ್ಕಳು ಹೆದರುವ ಅಗತ್ಯವಿಲ್ಲ. ಅಂತಿಮ ಹಂತದ ಸಿದ್ಧತೆ, ತಯಾರಿಯಲ್ಲಿ ಕೊಂಚ ಯಾಮಾರಿದರೂ ನಿರೀಕ್ಷಿತ ಫಲಿತಾಂಶ ಬರದೇ ಹೋಗಬಹುದು. ಹೀಗಾಗಿ ಮಕ್ಕಳೇ ಸ್ವಯಂ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಮೂಲಕ ಪರೀಕ್ಷೆ ಬರೆಯಲು ಸನ್ನದ್ದರಾಗಿದ್ದಿರಿ. ಯಾವ ಆತಂಕ ಭಯ ದುಗುಡವಿಲ್ಲದೇ ಶಾಲೆಯಲ್ಲಿ ಬರೆಯುವ ಪರೀಕ್ಷೆಯಂತೆಯೇ ಸಹಜವಾಗಿ ಬೋರ್ಡ್ ಪರೀಕ್ಷೆ ಎದುರಿಸಿರಿ. ಈ ಒಂದಿಷ್ಟು ಮುನ್ನಚ್ವರಿಕೆಯ ಅಗತ್ಯ ಕ್ರಮ ಅನುಸರಿಸಿರಿ. ಯಶಸ್ಸು ಖಂಡಿತಾ ನಿಮ್ಮದಾಗುವದು.
ಅಂತಿಮ ಗುರಿ ತಲುಪಿ ಕನಸು ನನಸಾಗುವ ಕಾಲದಲ್ಲಿ, ಆತಂಕ ಭಯ ಬೇಡ. ಇರುವ ಒಂದೆರಡು ದಿನಗಳಲ್ಲಿ ಸಮಯಾವಕಾಶವನ್ನು ಅತ್ತ್ಯುತ್ತಮವಾಗಿ ಸದುಪಯೋಗ ಪಡಿಸಿಕೊಳ್ಳಿರಿ. ಈ ಮೂಲಕ ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಲು ಪ್ರಯತ್ನಿಸಿ.
ಪರೀಕ್ಷೆ ಮುನ್ನಾ ದಿನ, ಪರೀಕ್ಷೆ ಆರಂಭ ಆಗುವ ಮೊದಲು, ಹಾಗೂ ಪರೀಕ್ಷೆ ಬರೆಯುವಾಗ ಮಕ್ಕಳು ಏನು ಮಾಡಬೇಕು ಎನ್ನುವ ಕೆಲವು ಮುಖ್ಯ ಟಿಪ್ಸ್ ಇಲ್ಲಿ ನೀಡಲಾಗಿದೆ. ಇವು ನಿಮಗೆ ಸಹಾಯಕ್ಕೆ ಬರಬಹುದು.
ಪರೀಕ್ಷೆ ಆರಂಭದ ಹಿಂದಿನ ದಿನ
ಪರೀಕ್ಷೆ ಆರಂಭವಾಗುವ ಮುನ್ನಾದಿನ ಒಂದಿಷ್ಟು ಪೂರ್ಷ ಸಿದ್ಧತೆ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲ ಆತಂಕ ಉಂಟಾಗುವದಿಲ್ಲ. ಪರೀಕ್ಷೆ ಸುಲಭವಾಗಿ ಎದುರಿಸಲು ಸಹಕಾರಿಯಾಗುವದು.
*ಎರಡು ಪೆನ್ನು, ಪೆನ್ಸಿಲ್, ಉದ್ದದ ಸ್ಕೆಲ್, ಜಾಮಿಟ್ರಿ ಬಾಕ್ಸ್, ಸಿದ್ದಪಡಿಸಿಕೊಳ್ಳಿರಿ.
*ಪ್ರವೇಶ ಪತ್ರ ಸೂಕ್ತ ಸ್ಥಳದಲ್ಲಿ ಇಟ್ಟು ಕೊಳ್ಳಿ.
*ಉತ್ತಮವಾದ ಕ್ಲಿಪ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿರಿ.
*ಸುಲಭವಾಗಿ ಜಿರ್ಣವಾಗುವ ಆಹಾರ ಸೇವಿಸಿ.
* ಅತಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಡಿ.
*ರಾತ್ರಿ ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು ನಿದ್ದೆ ಮಾಡಿ.
*ಸಾಮಾನ್ಯ ಕೈ ಗಡಿಯಾರವೊಂದು ಇಟ್ಟುಕೊಳ್ಳಿ.
*ಪ್ರಶ್ನೆಪತ್ರಿಕೆ ಸೋರಿಕೆ, ಗಾಸಿಪ್ ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
* ಯಾರೊಂದಿಗೂ ಜಗಳ ಕಾಯಬೇಡಿ.
* ರಿಲ್ಯಾಕ್ಸ್ ಮೂಡ್ ನಲ್ಲಿ ಇರಿ.
*ಹೆಚ್ಚು ಪಾನಿಯ ರೂಪದ ಆಹಾರ ಸೇವನೆ ಮಾಡಿ.
* ಪರೀಕ್ಷೆ ಬರೆದ ನಂತರ ಆ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವದು ತರವಲ್ಲ.
* ನಕಾರಾತ್ಮಕ ಧೋರಣೆ ಯಾರೋ ಸಹಾಯ ಸಹಕಾರ ಮಾಡುತ್ತಾರೆ ಎಂದು ನಂಬಬೇಡಿ.
*ಪರೀಕ್ಷೆ ನಡೆಯುವ ದಿನಗಳಲ್ಲಿ ರಜೆ ಬಂದಾಗ ಆ ದಿನ ಸದ್ಬಳಕೆ ಮಾಡಿಕೊಳ್ಳಿ.
* ಅನಗತ್ಯ ಸಿಟ್ಟು ಮಾಡಿಕೊಳ್ಳಬೇಡಿ.
*ಪರೀಕ್ಷೆ ಹೇಗೆ ನಡೆಯುವದೊ, ಓದಿದ್ದು ಬರುವದೊ ಇಲ್ಲವೊ, ಎಂಬ ಆತಂಕಕ್ಕೆ ದುಗುಡಕ್ಕೆ ಒತ್ತಡಕ್ಕೆ ಒಳಗಾಗಬೇಡಿ.
*ಆತ್ಮವಿಶ್ವಾಸ ವಿರಲಿ. ಅತಿ ವಿಶ್ವಾಸ ಬೇಡ. ಜೊತೆಗೆ ಒಂದಿಷ್ಟು ಜಾಗೃತಿ ಇರಲಿ.
*ಉಢಾಫೆ ಬೇಜವಾಬ್ದಾರಿ ಬೇಡ ತೀಳುವಳಿಕೆ ಇರಲಿ.
* ಮುಖ್ಯಾಂಶಗಳು, ಕೀ ಪೈಂಟ್, ರಿವಿಜನ್ ಮಾಡಿರಿ.
*ಜಾತ್ರೆ ಸಭೆ ಸಮಾರಂಭ ಎಂದು ಕಾಲ ಹರಣ ಮಾಡಬೇಡಿ
*ಪ್ರಶ್ನೆ ಪತ್ರಿಕೆ ವಿನ್ಯಾಸ ಮಾದರಿ ಪಶ್ನೆ ಒಮ್ಮೆ ಕಣ್ಣಾಡಿಸಿರಿ.
*ಅತಿ ಹುರುಪು ಅತಿ ಆಲಸ್ಯೆ, ಹುಂಬುತನ ಮಾಡಬೇಡಿ.
* ಶಿಕ್ಷಕರಿಂದ ಅಂತಿಮ ಮಾರ್ಗದರ್ಶನ ಸಲಹೆ ಸೂಚನೆ ಪಡೆಯಿರಿ.
* ಅಗತ್ಯ ಎನಿಸಿದರೆ ಬೋರ್ಡ್ ಸಹಾಯವಾಣಿ ಸಂಪರ್ಕಿಸಿ.
*ಮನೆಯ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಗೆ ಹಚ್ಚಿಕೊಳ್ಳುವದು ಬೇಡ.
* ನಿಮ್ಮ ಪರೀಕ್ಷೆ ಕೇಂದ್ರ ಖಚಿತ ಪಡಿಸಿಕೊಳ್ಳಿ
* ಪರೀಕ್ಷಾ ನಿಯಮಗಳನ್ನು ತಿಳಿದುಕೊಳ್ಳಿರಿ.
* ಪರೀಕ್ಷೆ ಹಾಲ್ ನಲ್ಲಿ ಹೇಗೆ ವರ್ತಿಸಬೇಕು ಎನ್ನುವ ಸಾಮಾನ್ಯ ಅರಿವಿರಲಿ.
*ಪರೀಕ್ಷೆ ಬರೆಯುವಾಗ ಎದುರಾಗಬಹುದಾದ ಸಮಸ್ಯೆ ಗೊಂದಲಗಳಿಗೆ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಿ.
* ಪರೀಕ್ಷಾ ಕೇಂದ್ರದಲ್ಲಿ ನೀಡುವ ಸೂಚನೆಗಳು ಅರಿಯಿರಿ.
* ವಿಷಯದ ಸಂದೇಹ, ಗೊಂದಲಗಳಿದ್ದರೆ, ಸ್ನೇಹಿತರೊಂದಿಗೆ ಗುಂಪು ಚರ್ಚೆ ಮಾಡಿ.
ಪರೀಕ್ಷೆ ಆರಂಭವಾಗುವ ಮೊದಲು
ಪರೀಕ್ಷೆ ದಿನ ಬಂದೇ ಬಿಟ್ಟಿತು. ಎಷ್ಟು ಅಭ್ಯಾಸ ಮಾಡಿದೆ ಎನ್ನುವದಕ್ಕಿಂತ, ಹೇಗೆ ಪರೀಕ್ಷೆ ಬರೆಯ ಬೇಕು ಎನ್ನುವದು ಬಹು ಮುಖ್ಯವಾಗುವದು. ಹೀಗಾಗಿ ಪರೀಕ್ಷೆಯ ದಿನ ಒಂದಿಷ್ಟು ಸಿದ್ಧತೆಯಾಗುವದು ಅಗತ್ಯ.
*ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪಿರಿ.
*ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಓದು ನಿಲ್ಲಿಸಿ.
* ಹಿತ ಮಿತ ಆಹಾರ ಸೇವಿಸಿ.
* ಶುಭ್ರ ಹಿತಕರವಾದ ಬಟ್ಟೆ ಧರಿಸಿ.
*ಲೇಖನ ಸಾಮಗ್ರಿ ಅಂತಿಮವಾಗಿ ಚಕ್ ಮಾಡಿಕೊಳ್ಳಿರಿ.
* ಪರೀಕ್ಷೆ ಕೊಠಡಿ ಪ್ರವೇಶ ಮುನ್ನ ಒಮ್ಮೆ ಏನಾದರೂ ಸ್ಲಿಪ್, ಬರಹ ಇದೆ ಚಕ್ ಮಾಡಿ ತಗೆದು ಹಾಕಿಬಿಡಿ.
*ಪ್ರವೇಶ ಪತ್ರ ಹೊಂದಿಸಿಕೊಳ್ಳಿರಿ.
* ಒತ್ತಡ ದುಗುಡ ಆತಂಕ ಭಯ ಬೇಡ ರಿಲ್ಯಾಕ್ಸ್ ಆಗಿರಿ.
*ಪರೀಕ್ಷಾ ಕೊಠಡಿ ಪ್ರವೇಶ ಮಾಡಿದ ಮೇಲೆ ಯಾರೊಂದಿಗೂ ಮಾತಿಗಿಳಿಯಬೇಡಿ.
* ಕುಳಿತ ಆಸನ ಸಂಖ್ಯೆ, ಪ್ರವೇಶ ಪತ್ರ ಸಂಖ್ಯೆ ಎರಡೂ ಒಂದೇ ಎನ್ನುವದು ಖಚಿತಪಡಿಸಿಕೊಳ್ಳಿ.
* ಆಸನ ಸ್ಥಳದಲ್ಲಿ ಕುಳಿತು ಒಂದೆರಡು ನಿಮಿಷ ಧ್ಯಾನ ಮಾಡಿ. ದಿರ್ಘವಾಗಿ ಉಸಿರಾಡಿ.
*ಕೊಠಡಿ ಮೇಲ್ವಿಚಾರಕರಿಗೆ ನಿಮ್ಮ ಅಗತ್ಯ ಮಾಹಿತಿ ನೀಡಿ.
* ಉತ್ತರ ಪತ್ರಿಕೆಯು ಬರೆಯಲು ಯೋಗ್ಯವಾಗಿದೆಯೆ ಎಂದು ಖಚಿತ ಪಡಿಸಿಕೊಳ್ಳಿರಿ.
* ಪ್ರಶ್ನೆ ಪತ್ರಿಕೆ ಒಮ್ಮೆ ಪೂರ್ಣ ಓದಿಕೊಳ್ಳಿರಿ.
* ಪ್ರತಿ ಉತ್ತರಕ್ಕೂ ಅಂದಾಜು ಸಮಯ ನಿಗದಿ ಪಡಿಸಿಕೊಳ್ಳಿ.
* ಅಗತ್ಯ ಏನಿಸಿದರೆ ಒಂದು ಚಿಕ್ಕ ಬಾಟಲ್ ನೀರು ಜೊತೆಗಿರಲಿ.
* ಸಣ್ಣ ಕರವಸ್ತ್ರ ಜೋತೆಗೆ ಇಟ್ಟುಕೊಳ್ಳಿರಿ
*ಉತ್ತರ ಪತ್ರಿಕೆಯ ಸೂಕ್ತ ಸ್ಥಳದಲ್ಲಿ ನೊಂದಣಿ ಸಂಖ್ಯೆ, ಅಗತ್ಯ ಮಾಹಿತಿ ತುಂಬಿರಿ.
*ಪರೀಕ್ಷೆ ಆರಂಭದಲ್ಲೆ ಆತಂಕ ಭಯ ಖಿನ್ನತೆಗೆ ಒಳಗಾಗಬೇಡಿ.
*ಕೊಠಡಿ ಒಳಗೆ ಮೊಬೈಲ್ ಪೋನ್ ಡಿಜಿಟಲ್ ವಾಚ್ ಬ್ಲ್ಯೂಟುತ್ ಅಂತ ಸಾಮಗ್ರಿ ತಗೆದುಕೊಂಡು ಹೋಗುವಂತಿಲ್ಲ.
* ವೈಯಕ್ತಿಕ ಸ್ವಚ್ಚತೆ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ
ಪರೀಕ್ಷೆ ಬರೆಯುವಾಗ ಒಂದಿಷ್ಟು ಸಲಹೆಗಳು
ಉತ್ತರ ಬರೆಯುವದು ಒಂದು ಸ್ಕಿಲ್. ಎಷ್ಟು ಓದಿದ್ದೇವೆ ಅರ್ಥೈಸಿಕೊಂಡಿದ್ದೇವೆ ಎನ್ನುವದಕ್ಕಿಂತ ಹೇಗೆ ಉತ್ತರ ಬರೆದಿದ್ದೇವೆ ಎನ್ನುವದು ಬಹು ಮುಖ್ಯ. ನಿಗದಿತ ಮೂರು ಗಂಟೆಯಲ್ಲಿ ವ್ಯವಸ್ಥಿತವಾಗಿ, ಮೌಲ್ಯಮಾಪಕರು ನಿರೀಕ್ಷಿಸುವ ರೀತಿಯಲ್ಲಿ ಉತ್ತರ ಬರೆಯುವದು ಅತ್ಯಗತ್ಯ. ಆಗಲೇ ಹೆಚ್ಚು ಅಂಕ ಪಡೆಯಸು ಸಾಧ್ಯ. ಅತ್ಯುತ್ತಮ ಉತ್ತರ ಬರೆಯಲು ಒಂದಿಷ್ಟು ಸಲಹೆಗಳು.
* ಆದಷ್ಟು ಕ್ರಮವಾಗಿಯೇ ಉತ್ತರ ಬರೆಯಿರಿ.
*ಉತ್ತರವು ನಿಖರ, ನಿರ್ದಿಷ್ಟ, ಸ್ಪಷ್ಟವಾಗಿರಲಿ.
* ಅಗತ್ಯಕ್ಕಿಂತ ಹೆಚ್ಚು ಉತ್ತರ ಬರೆದು ಸಮಯ ಹಾಳು ಮಾಡಿಕೊಳ್ಳಬೇಡಿ.
*ಬರವಣಿಗೆ ಶುದ್ದವಾಗಿ ಅಂದವಾಗಿ ಆಕರ್ಷಣಿಯವಾಗಿರಲಿ.
*ಪ್ರತಿ ಉತ್ತರದ ನಡುವೆ ಎರಡು ಲೈನ್ ಗಳ ಅಂತರವಿರಲಿ.
*ಚಿತ್ರ, ನಕ್ಷೆಗೆ ಮಾತ್ರ ಪೆನ್ಸಿಲ್ ಬಳಸಿ.
* ಕಪ್ಪು ಅಥವಾ ನೀಲಿ ಪೆನ್ನು ಮಾತ್ರ ಬರವಣಿಗೆಗೆ ಬಳಸಿ.
*ಪೆನ್ನು ಬದಲಿಸುವ ಮುನ್ನ ಮೇಲ್ವಿಚಾರಕರಿಂದ ಅನುಮತಿ ಪಡೆಯಿರಿ.
* ಗೊಂದಲಕ್ಕಿಡುಮಾಡುವ ತಿರುಚಿದ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಂಡು ನಂತರ ಉತ್ತರಿಸಿ.
*ಉತ್ತರ ಪತ್ರಿಕೆಯಲ್ಲಿ ಯಾವುದೇ ಧಾರ್ಮಿಕ ಚಿನ್ನೆ ಹೆಸರು ಹಾಕಬೇಡಿ.
* ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಬರಹ, ಗುರುತು ಮಾಡಬೇಡಿ
*ಎಡಿಷನಲ್ ಹಾಳೆ ಕಟ್ಟುವಾಗ ಅಗತ್ಯ ಮಾಹಿತಿ ತುಂಬಿರಿ.
* ಆಸನ ಬಿಟ್ಟು ಕದಲಬೇಡಿ ಅನಗತ್ಯವಾಗಿ ನಿಲ್ಲಬೇಡಿ.
* ಮೂರು- ನಾಲ್ಕು ಅಂಕದ ಪ್ರಶ್ನೆ ಉತ್ತರಿಸುವಾಗ ಸಮಯ ನಿಗದಿಪಡಿಸಿಕೋಳ್ಳಿರಿ.
*ಹದಿನೈದು ನಿಮಿಷ ಮೊದಲೇ ಎಲ್ಲವೂ ಉತ್ತರಿಸಿ ಬಿಡಿ
*ಕೊನೆಯ ಹದಿನೈದು ನಿಮಿಷ ಉತ್ತರ ಪತ್ರಿಕೆ ಪುನ:ಪರೀಶಿಲಿಸಿ.
*ಅಗತ್ಯ ಇರುವ ಕಡೆ ಮೇಲ್ವಿಚಾರಕರ ಸಹಿ ಪಡೆಯಿರಿ.
* ಬಹು ಅಂಶ ಆಯ್ಕೆ ಉತ್ತರ ಒಮ್ಮೆ ಮಾತ್ರ ಉತ್ತರಿಸಿ ಚಿತ್ತು ಮಾಡಬೇಡಿ
*ಎ ಎಂ ಎಲ್ , ನಾಮಿನಲ್ ರೋಲ್ ಗೆ ಸಹಿ ಮಾಡುವದು ಮರೆಯದಿರಿ.
*ಉತ್ತರದ ಮುಖ್ಯಾಂಶಗಳಿಗೆ ಅಗತ್ಯವಿರುವಡೆ ಅಡಿಗೆರೆ ಹಾಕಿರಿ.
*ಉತ್ತರರಿಸಿದ ಮೇಲೆ ಮುಕ್ತಾಯ ಎಂದು ಬರೆಯಿರಿ.
*ಒಂದು ಎರಡು ಮೂರು ಅಂಕದ ಪ್ರಶ್ನೆ ಶಿಕ್ಷಾರ್ಹ ಅಪರಾಧವಾಗಿದೆ ಮಾಡಬೇಡಿ.
* ಕುಳಿತ ಆಸನದ ಸುತ್ತ ಮುತ್ತ ಹಾಳೆ ಬರವಣಿಗೆ ಏನಾದರೂ ಇದ್ದರೆ, ಮೇಲ್ವಿಚಾರಕರ ಗಮನಕ್ಕೆ ತನ್ನಿ
* ಪ್ರಶ್ನೆ ಸಂಖ್ಯೆ ದೊಡ್ಡದಾಗಿ ನಮೂದಿಸಿ.
*ಪರೀಕ್ಷೆ ಆರಂಭ ನಂತರದ ಅರ್ಧಗಂಟೆ ಶೌಚಕ್ಕೆ ಹೋಗಲು ಅವಕಾಶವಿಲ್ಲ ಎಂದು ತಿಳಿಯಿರಿ.
* ಉತ್ತರಿಸುವಾಗ ವ್ಯಾಕರಣಾಂಶಗಳತ್ತ ಗಮನ ಹರಿಸಿ
*ಕೊಠಡಿಯೊಳಗೆ ಬಂದು ಹೋಗುವ ಅಧಿಕಾರಿಗಳತ್ತ ಗಮನ ಹರಿಸುವದು ಬೇಡ.
ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಯಾವತ್ತೂ ಸಿಕ್ಕೆ ಸಿಗುತ್ತದೆ . ಅರ್ಹತೆ ಸಾಮರ್ಥ್ಯ ವರೆಗೆ ಹಚ್ಚಿ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡಿದರೆ, ಖಂಡಿತ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ. ಉಜ್ವಲ ಭವಿಷ್ಯ ನಿರ್ಮಾಣದ ಮೊದಲ ಘಟ್ಟ ದಾಟಿ, ಉನ್ನತ ಶಿಕ್ಷಣದ ರಹದಾರಿ ಪ್ರವೇಶಿಸಿ ಯಶಸ್ಸು ಸಾಧಿಸಿ. ಸುಂದರ ಬದುಕು ಕಟ್ಟಿಕೊಳ್ಳವ ಪ್ರಯತ್ನ ನಿಮ್ಮದಾಗಲಿ ಎಂದು ಶುಭ ಹಾರೈಸುವೆ.
No comments:
Post a Comment