✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 27 March 2022

**ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಪಾಲಿಸಬೇಕಾದ ಕ್ರಮಗಳು**

ಮಕ್ಕಳೇ,

 *ನಾಳೆ ಬರೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಗಮನಿಸೋಣ.* 

*ಪರೀಕ್ಷಾ ಕೊಠಡಿಗೆ ಹೊರಡುವ ಮುನ್ನ:* 

 * ಲಘುವಾಗಿ ಆಹಾರ ಸೇವಿಸುವುದು ಒಳ್ಳೆಯದು.

* ಪರೀಕ್ಷೆಯ ಹಾಲ್ ನಲ್ಲಿ  ತೆಗೆದುಕೊಂಡು ಹೋಗುವ ವಸ್ತುಗಳು.

1. ಮಾಸ್ಕ್ ಕಡ್ಡಾಯವಾಗಿ ಧರಿಸುವಂತದ್ದು. ಶಾಲೆಯ ಸಮವಸ್ತ್ರ ಹಾಕಿಕೊಂಡು ಹೋಗುವುದು. 

2. ಎರಡು ರಿಂದ ಮೂರು ಪೆನ್ ಗಳು.

3. ಕಂಪಾಸ್ ಬಾಕ್ಸ್ ತೆಗೆದುಕೊಂಡು ಹೋಗಿ.

4. ಸಾಮಾನ್ಯ ಕೈ ಗಡಿಯಾರ  ಮತ್ತು ನೀರಿನ ಬಾಟಲ್.

* ಸಮಯಕ್ಕಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಸ್ಥಳ ತಲುಪಿ.

* ಪರೀಕ್ಷೆಯಲ್ಲಿ ಭಯಪಡದೆ ಶಾಂತವಾಗಿರಿ.

* ಪರೀಕ್ಷೆ ಆರಂಭಕ್ಕೂ ಮುನ್ನ
   ಶೌಚಾಲಯಕ್ಕೆ ಹೋಗಿ ಬನ್ನಿ.

 *ಪ್ರಶ್ನೋತ್ತರಗಳನ್ನು ಆರಂಭಿಸುವುದಕ್ಕೂ ಮುನ್ನ:* 

* ಮೊದಲು ನಿಮಗೆ ಕೊಟ್ಟಿರುವ ಉತ್ತರ ಪತ್ರಿಕೆಯ ಮುಖಪುಟದಲ್ಲಿ ಸರಿಯಾಗಿ ನಿಮ್ಮ ನೋಂದಣಿ ಸಂಖ್ಯೆ ಭರ್ತಿ ಮಾಡುವುದು. 

* ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಮುಖಪುಟದಲ್ಲಿ ಇರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.

* ಮೇಲಿನ ಅಂಶ ನೋಡಿದ ನಂತರ ಐದರಿಂದ ಹತ್ತು ನಿಮಿಷಗಳ ಕಾಲಾವಧಿ ತೆಗೆದುಕೊಂಡು, ಪ್ರಶ್ನೆಪತ್ರಿಕೆಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳಿ.

* ನಂತರ ಯಾವ-ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬುವುದು ಮೊದಲು ತಿಳಿದುಕೊಳ್ಳಿ.

* ನೀವು ತಕ್ಷಣ ಉತ್ತರಿಸಬಹುದಾದ ಹಾಗೂ ಸುಲಭವಾಗಿರುವ ಪ್ರಶ್ನೆಗಳನ್ನು ಮೊದಲು ಬರೆಯಲು ಪ್ರಯತ್ನಿಸಿ.

* ಮಕ್ಕಳೇ ಗಮನವಿರಲಿ, ಬಹು ಆಯ್ಕೆ ಪ್ರಶ್ನೆ ಗಳಿಗೆ, ಉತ್ತರ ಆಯ್ಕೆ ಮಾಡಬೇಕಾದರೆ, ಸರಿಯಾಗಿ ಆಲೋಚಿಸಿ ಉತ್ತರವನ್ನು ಆಯ್ಕೆ ಮಾಡಿಕೊಂಡ ನಂತರವೇ  ನಿಮ್ಮ ಉತ್ತರ ಪತ್ರಿಕೆಯಲ್ಲಿ ಬರೆಯಿರಿ. 

* ಬಹು ಆಯ್ಕೆಯ ಪ್ರಶ್ನೆಗಳ ಉತ್ತರ ಬರೆಯಬೇಕಾದರೆ ನಾಲ್ಕು ಉತ್ತರಗಳಲ್ಲಿ  ಸರಿಯಾದ ಉತ್ತರ ಬರೆಯಬೇಕು. ಉತ್ತರದ ಹಿಂದೆ ಇರುವ A, B, C, D ಅಂತ ಬರೆದು ಉತ್ತರ ಬರೆಯಬೇಕು.   
   
* ಪ್ರಶ್ನೆಗಳ ಉತ್ತರ ಗೊತ್ತಿದ್ದು ಗೊಂದಲ ಉಂಟುಮಾಡುತ್ತಿದ್ದರೆ, ಒಂದು ನಿಮಿಷದವರೆಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಧಾನವಾಗಿ,ದೀರ್ಘವಾಗಿ, ಉಸಿರಾಡಿ. ಹೀಗೆ ಮಾಡುವುದರಿಂದ ಮೈಂಡ ಶಾಂತವಾಗಿ ಉತ್ತರ ನೆನಪಿಗೆ ಬರುವ ಸಾಧ್ಯತೆ ಇರುತ್ತೆ ಆದರೆ ನೆನಪಿರಲಿ ವಿಷಯದ ಬಗ್ಗೆ ಓದಿದಾಗ ಮಾತ್ರ.

* ಜೊತೆಗೆ ಒಂದು ಪ್ರಶ್ನೆಗೆ ಉತ್ತರ ಬರೆಯುವಾಗ, ಇನ್ನೊಂದು ಪ್ರಶ್ನೆಯ ಉತ್ತರದ ಬಗ್ಗೆ ಆಲೋಚನೆ ಮಾಡಬೇಡಿ.

* ಮುಖ್ಯವಾಗಿ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ, ಏನಾದರೂ ಕಚ್ಚಾ ಕೆಲಸ ಇದ್ದರೆ ಉತ್ತರ ಪತ್ರಿಕೆಯ ಪ್ರತಿ ಪುಟದ ಕೆಳಗಡೆ ಕಚ್ಚಾ ಉಪಯೋಗ ಅಂತ ಇರುತ್ತದೆ ಅಲ್ಲಿ ಮಾಡಬಹುದು. 

* ಯಾವುದೇ ಪ್ರಶ್ನೆಗೆ ಯೋಚನೆ ಮಾಡಲು ಉತ್ತರ ಕಷ್ಟವಾದರೆ, ಸಮಯ ಹಾಳುಮಾಡದೆ, ನಂತರದ ಪ್ರಶ್ನೆಗೆ ಹೋಗಿ, ಪುನ: ಮತ್ತೆ ಬಂದು ಮುಖ್ಯ ಪ್ರಶ್ನೆ ಸಂಖ್ಯೆ ಹಾಕಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

* ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡಬೇಡಿ, ಒಂದು ವೇಳೆ ಭಯಪಟ್ಟಿದ್ದೇ ಆದರೆ ನಿಮ್ಮ ಮೆದುಳು ಯೋಚನೆ ಮಾಡುವುದಿಲ್ಲ.

* ನಿಮ್ಮ ಸುತ್ತಮುತ್ತ ಯಾವುದೇ ಕಾರಣಕ್ಕೂ ನೋಡಬೇಡಿ,ಹಾಗೂ ನಿರಂತರವಾಗಿ ಬರೆಯುತ್ತಿರುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

* ಮಕ್ಕಳೇ, ನೆನಪಿರಲಿ ಉತ್ತರ ಬರೆಯುವಾಗ ಅತಿವೇಗ ಮತ್ತು ಅತಿ ನಿಧಾನ ಎರಡು ಅಪಾಯ.

* ವಿದ್ಯಾರ್ಥಿಗಳೇ ಕೊನೆಯದಾಗಿ, ನಿಮ್ಮ ಉತ್ತರ ಪತ್ರಿಕೆಯಲ್ಲಿ ಹಾಗೂ ಹೆಚ್ಚುವರಿ ತೆಗೆದುಕೊಂಡ ಉತ್ತರ ಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟರ್ ನಂಬರ್, ನಿಮ್ಮ ಸಹಿ ಮತ್ತು ಕೊಠಡಿ ಮೇಲ್ವಿಚಾರಕ  ಸಹಿಯನ್ನು ಪರಿಶೀಲಿಸಿಕೊಳ್ಳಿ. ಜೊತೆಗೆ ನಿಮ್ಮ ಹಾಲ್ ಟಿಕೆಟ್ ಮೇಲೆ ಕೂಡ ಮೇಲ್ವಿಚಾರಕ  ಸಹಿ ಮಾಡಿಸಿಕೊಳ್ಳಿ.

*ವಿದ್ಯಾರ್ಥಿಗಳೇ ತಮಗೆಲ್ಲರಿಗೂ ಶುಭವಾಗಲಿ.* 

*ALL THE BEST MY DEAR STUDENTS* 
👍👍👍👍👍👍👍

No comments:

Post a Comment

MATHS TIME LINE

MATHS TIME LINE https://mathigon.org/timeline