✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday 1 April 2022

_*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿

🦢  _*ಅಮೃತಾತ್ಮರೇ, ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು*_  🦢

  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-92*_
     _*ದಿನಾಂಕ: 02.04.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
   _*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿
••••••••••••••••••••••••••••••••••••••••••••
  _ಯುಗಾದಿಯಲ್ಲಿ "ಮಾನವ ಶರೀರದಲ್ಲಿ ಆಗುವ ಬದಲಾವಣೆ" ಮತ್ತು "ಬೇವು-ಬೆಲ್ಲ" ಈ ಎರಡರ ಮಹತ್ವವನ್ನು ನೋಡಿದರೆ ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿನ ಆಹಾರದಿಂದ ಒದಗಿಬರುವ ಆರೋಗ್ಯದ ಮಹತ್ವವನ್ನು ತಿಳಿಯಬಹುದು. ಇದಕ್ಕಾಗಿ ಭಾರತೀಯರು ಕಂಡುಕೊಂಡ "ಆಸ್ಪತ್ರೆ ರಹಿತ ಜೀವನ" ಮತ್ತು "ಆಯುರ್ವೇದ ಚಿಕಿತ್ಸೆ" ಎರಡನ್ನೂ ಅರಿಯಬಹುದು._
          🌿🌿🌿🌿🌿

*ಯುಗಾದಿಯಲ್ಲಿ ಮಾನವ ಶರೀರದಲ್ಲಿ ಆಗುವ ಬದಲಾವಣೆ:*

  _ಮಾನವನ ಶರೀರದಲ್ಲಿ ನಿತ್ಯವೂ ಹೆಚ್ಚುವರಿ ಶಕ್ತಿಯು ಶೇಖರಣೆಯಾಗುತ್ತದೆ. ಇದನ್ನು ಆಯುರ್ವೇದಿಯ ದೃಷ್ಟಿಯಲ್ಲಿ "ಕಫ" ಎಂದು ಕರೆಯುತ್ತೇವೆ, ಇದು ನಾವು ಉಗುಳುವ ಕಫವಲ್ಲ, ಇಲ್ಲಿ ಶರೀರದ‌ ಸರ್ವಶಕ್ತಿಯನ್ನೇ ಕಫ ಎಂದು ಸಂಬೋಧಿಸಲಾಗಿದೆ._

  _ವಸಂತ ಋತುವಿನ ಆರಂಭದ ಚೈತ್ರಮಾಸದಲ್ಲಿ ಬರುವ ಬಿಸಿಲಿನಿಂದಾಗಿ ಶಕ್ತಿರೂಪದ ಈ ಕಫವು ಕರಗಿ ಹರಿಯಲಾರಂಭಿಸುತ್ತದೆ, ಆಗ ಅದನ್ನು ಉತ್ಲೇಷ ಎಂದು ಕರೆಯುತ್ತಾರೆ. ಅಂದರೆ ತನ್ನ ಸ್ಥಾನದಿಂದ ಚ್ಯುತವಾದ ಈ ಶಕ್ತಿಯು ಶರೀರಕ್ಕೆ ಬಲ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಅದನ್ನು ಮಲರೂಪದ ಕಫ ಎನ್ನುತ್ತೇವೆ. ಮುಂದೆ ಇದೇ ಕಫವು ಇಡೀ ವರ್ಷಪೂರ್ತಿ ಸೋಂಕಿಗೆ ಆಹಾರವಾಗುತ್ತದೆ ಮತ್ತು ಸೋಂಕು ಉಳಿದುಕೊಳ್ಳಲು ಸಹಕರಿಸುತ್ತದೆ!!_ 🤔

  _ಅಂದರೆ, ಸೋಂಕು ಜೀವಾಣು ಈ ಶರೀರದಲ್ಲಿ ಉಳಿಯಲು ಅದಕ್ಕೆ ಅಂಟಿನಂತಹ ಸೂಕ್ತ ವಾತಾವರಣ ಬೇಕು ಮತ್ತು ತಿನ್ನಲು ಆಹಾರ ಬೇಕು, ಅದನ್ನು ಪೂರೈಸುವ ವ್ಯವಸ್ಥೆ ಈ ಶರೀರದಲ್ಲಿ ಇದ್ದರೆ ಅದು ಒಳಗೆ ಉಳಿದುಕೊಂಡು, ತನ್ನ ಸಂತತಿಯನ್ನು ಬೆಳೆಸುತ್ತದೆ, ಮತ್ತು ರೋಗವನ್ನು ತರುತ್ತದೆ._ 🤭
          🌿🌿🌿🌿🌿

*ರೋಗ ಬರುವುದನ್ನು ತಡೆಯುವ ವಿಧಾನಗಳು:*

*1) ಆಸ್ಪತ್ರೆ ರಹಿತವಾಗಿ*
*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

*1) ಆಸ್ಪತ್ರೆ ರಹಿತ ರೋಗ ತಡೆ:*
  _ಸನಾತನ ಭಾರತೀಯ ಆಯುರ್ವೇದವು ಸರ್ವರ ಆರೋಗ್ಯವನ್ನು ಕಾಪಾಡಲು ಆಸ್ಪತ್ರೆ ರಹಿತವಾಗಿ ಮನೆಯಲ್ಲಿಯೇ ಏನು ಮಾಡಬಹುದೆಂದು ಅಲೋಚಿಸುತ್ತದೆ. ಹಾಗಾಗಿ, ಈ ಅನಗತ್ಯ "ಮಲ ರೂಪೀ ಕಫ"ದ ಹರಿವನ್ನು ಹೋಗಲಾಡಿಸಲು ಬೇವು-ಬೆಲ್ಲವನ್ನು ರೂಢಿಗೆ ತಂದಿದೆ!_
          •~•~•~•~•

  _ಭಾರತೀಯ ಭೂಮಿ ದೇವಭೂಮಿ, ಇಲ್ಲಿ ಎಲ್ಲವೂ ಪೂಜನೀಯ, ಜನರು ಯಾವುದೇ ವೈಜ್ಞಾನಿಕ ವಿಷಯಗಳನ್ನು ಪಾಲಿಸಿ ರೋಗರಹಿತವಾಗಿರಲು, ಅದನ್ನು ಅವರ ದಾರಿಯಲ್ಲೇ ಹೇಳಬೇಕಾಗುತ್ತದೆ..._

  _ಆದ್ದರಿಂದ ಪ್ರತಿ ಹಬ್ಬದಲ್ಲಿಯೂ ನಿರ್ದಿಷ್ಟವಾಗಿ ಹೇಳುವ ಎಳ್ಳು-ಬೆಲ್ಲ, ಬೇವು-ಬೆಲ್ಲ, ಪ್ರೋಟೀನ್‌ಯುಕ್ತ ಉಂಡೆಗಳು ಹೀಗೆ, ಆಯಾ ಋತುವಿನಲ್ಲಿ ಶರೀರದೊಳಗೆ ಆಗುವ ರೋಗಕಾರಕ ಶಕ್ತಿ ಉತ್ಕ್ಲೇಷಗಳನ್ನು, ಆಯುರ್ವೇದೋಕ್ತ  ವಿಶೇಷವಾದ ಆಹಾರಗಳು ಶಮನಗೊಳಿಸಿ ನಮ್ಮ  ಜೀವಕೋಶಗಳನ್ನು ಸಂರಕ್ಷಿಸುತ್ತವೆ._
*ಮತ್ತು* 
  _ಆಚರಣೆಯ ಹಿನ್ನೆಲೆಯಲ್ಲಿನ ದೈವೀಕ‌ ಮನಸ್ಥಿತಿಯ ಕಾರಣ ಮನಸ್ಸಿನ ಪ್ರಸನ್ನತೆ ಉಂಟಾಗಿ ಹಾರ್ಮೋನ್‌ಗಳನ್ನು ಉನ್ನತೀಕರಿಸಿ ಜೀವಕೋಶಗಳ ಸತ್‌ಶಕ್ತಿಯನ್ನು  ವರ್ಧಿಸುತ್ತವೆ, ತನ್ಮೂಲಕ ಈ ಕಾರಣದಿಂದ ಬರಬಹುದಾದ ರೋಗಗಳನ್ನು ಒಂದು ವರ್ಷಪೂರ್ತಿ ತಡೆದುಬಿಡುತ್ತವೆ!_ 🤔 -- *"ಔಷಧಗಳಿಲ್ಲದೇ! ಆಸ್ಪತ್ರೆಗಳಿಲ್ಲದೇ!! ಖರ್ಚಿಲ್ಲದೇ!!!"*
          •~•~•~•~•
*ಬೇವು-ಬೆಲ್ಲದ ಮಹತ್ವ:*

*ಬೇವು:*
  _ಸಂಸ್ಕೃತದಲ್ಲಿ "ನಿಂಬ" ಎಂದು ಕರೆಸಿಕೊಳ್ಳುವ ಬೇವನ್ನು ತುಸುವೇ ಪ್ರಮಾಣದಲ್ಲಿ ಸೇವಿಸುವುದರಿಂದ ಅದು ವಿಕೃತರೂಪದಿಂದ ವೃದ್ಧಿಯಾದ ಕಫವನ್ನು ಶಮನಗೊಳಿಸಿ, ಇಡೀ ವರ್ಷ ಕಫದಿಂದ ಉಂಟಾಗುವ ಅನೇಕ ರೋಗಗಳನ್ನು ತಡೆಯುತ್ತದೆ._

          🌿🌿🌿🌿🌿

*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

  _ಆಯುರ್ವೇದ ಅಸ್ಪತ್ರೆಗಳು "ಸೇವಾ ಕೇಂದ್ರಗಳು" ರೋಗ ತರಿಸಿ, ಔಷಧಿ ಕೊಟ್ಟು ಸರಿಪಡಿಸಲು ಯೋಚಿಸುವ "ರಿಪೇರಿ ಕೇಂದ್ರಗಳಲ್ಲ." ನಮ್ಮ ಮೋಟಾರ್ ವಾಹನ ಕೆಟ್ಟಮೇಲೆ ರಿಪೇರಿಗೆ ಒಯ್ಯುತ್ತೇವೆಯೋ ಅಥವಾ ಕೆಡುವ ಮೊದಲೇ  ಸೇವಾಕೇಂದ್ರಕ್ಕೋ?_

*ವಮನ ವಸಂತ:*
  _ವಸಂತ ಋತುವಿನಲ್ಲಿ ಹೇಳುವ ವಮನವೆಂಬ ಚಿಕಿತ್ಸೆಯು ಕಫವನ್ನು ಶಮನಗೊಳಿಸುವ ಬದಲು ಶೋಧನ ಮಾಡಿ ಹೊರತೆಗೆಯುತ್ತದೆ. ಅತ್ಯಂತ ಶ್ರೇಷ್ಠ ವಿಧಾನವಾದ ಇದನ್ನು "ಸ್ವಸ್ಥ ಪಂಚಕರ್ಮ" ಎಂದು ಕರೆಯುತ್ತೇವೆ._

  _ಪಂಚಕರ್ಮದ ಈ ಶೋಧನ ಚಿಕಿತ್ಸೆಯು ಶರೀರದ ಯಾವುದೇ ಜೀವಕೋಶಗಳಲ್ಲಿ ಅಡಗಿ ಕುಳಿತಿರಬಹುದಾದ "ಮಲರೂಪೀ ಕಫ" ವನ್ನು ಎಳೆದು ಹೊರಹಾಕುತ್ತದೆ, ಆದ್ದರಿಂದ ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ._

  _ಆದರೆ, ಎಲ್ಲರಿಗೂ ಆಸ್ಪತ್ರೆಗೆ ಬಂದು ಶೋಧನ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರಬಹುದು, ಆದ್ದರಿಂದ ಋತು ಬದಲಾವಣೆಯ ಸಂದರ್ಭದಲ್ಲಿ ಅಂದರೆ ಋತುಸಂಧಿಕಾಲದಲ್ಲಿ ಆಗುವ ಶಾರೀರಿಕ ವಿಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು, ಮುಂಬರುವ ರೋಗಗಳನ್ನು ತಡೆಯಲು, ಒಂದೊಂದು ಹಬ್ಬದ ಆಚರಣೆಯನ್ನೂ ಮತ್ತು ವಿಶೇಷ ಆಹಾರಗಳನ್ನೂ ಹೇಳುತ್ತಾ ಮನುಕುಲವನ್ನು "ಸಂಪೂರ್ಣ ರೋಗರಹಿತವಾಗಿ ಇಡುತ್ತದೆ."_
••••••••••••••••••••••••••••
••••••••••••••••••••••••••••••••••••••••••••
  🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴
•••••••••••••••••••••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline