🦢 _*ಅಮೃತಾತ್ಮರೇ, ನಮಸ್ಕಾರ*
••••••••••••••••••••••••••••••••••••••••••••
_*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-91*_
_*ದಿನಾಂಕ: 24.03.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
_*ನಿಮ್ಮ ಶೇ. 70ಕ್ಕಿಂತ ಹೆಚ್ಚು ಭಾರ ಹೊರುವುದು ನಿಮ್ಮ ಸ್ನಾಯುಗಳು - ಮೂಳೆಗಳಲ್ಲ!*_
••••••••••••••••••••••••••••••••••••••••••••
_ಇಂದು ಎಲ್ಲಾ ಕೀಲುನೋವು, ಬೆನ್ನು ನೋವುಗಳಿಗೆ, ಮೂಳೆ ಸವೆದಿದೆ, ಡಿಸ್ಕ್ ಒಣಗಿದೆ -- ಇಂತಹ ಮಾತುಗಳನ್ನು ಸ್ವತಃ ವೈದ್ಯರ ಬಾಯಲ್ಲಿ ಕೇಳುತ್ತೇವೆ ಮತ್ತು ಅವುಗಳನ್ನೇ ದೃಢವಾಗಿ ನಂಬಿದ್ದೇವೆ!!_
*ವೈಜ್ಞಾನಿಕ ಸತ್ಯ ಏನು?*
_ಸಾಂಪ್ರದಾಯಿಕ ನೋವು ನಿವಾರಕಗಳು ಮತ್ತು ಆಯುರ್ವೇದ ಸಹಾಯ ರಹಿತ ಕೇವಲ ಫಿಜಿಯೋಥೆರಪಿಗಳು ತಾತ್ಕಾಲಿಕ ಪರಿಹಾರವನ್ನು ನೀಡಬಲ್ಲವು._
_ಶರೀರದ ಚಲನೆಯುಳ್ಳ ಯಾವುದೇ ಸಂಧಿಗಳಲ್ಲಿ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ, ಹತ್ತಿರವೂ ಇಲ್ಲ. ಈ ಎರಡು ಅಥವಾ ಮೂರು ಮೂಳೆಗಳನ್ನು ಬಿಗಿಯಾಗಿ ಹಿಡಿದು ಒಂದು ಸಂಧಿಯನ್ನು ಮಾಡಿರುವುದು ನಮ್ಮ ಸ್ನಾಯುಗಳು, ಇವುಗಳ ದುರ್ಬಲತೆಯೇ ಸಂಧು ಮತ್ತು ಬೆನ್ನು ನೋವುಗಳು!!_ 🤔
*ಉದಾಹರಣೆಗೆ:*
_ಸೊಂಟದ ನೋವಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ MRI Scanning ಮಾಡಿಸಿ, ಡಿಸ್ಕ್ ಒಡೆದಿದೆ, ಒಣಗಿದೆ, ನರಗಳು ಒತ್ತಿ ನೋವು ಬಂದಿದೆ, ಶಸ್ತ್ರಚಿಕಿತ್ಸೆ ಬೇಕು ಎಂದು ಟಿಪ್ಪಣಿ ಬರೆಯುತ್ತಾರೆ._
_ಸರಿ, ಸೊಂಟದ ಮೂಳೆಯ ರಚನೆ ನೋಡೋಣ -- ಅಲ್ಲಿ L5, S1, Left Hip bone, Right Hip bone ಇಷ್ಟು ಮೂಳೆಗಳು ಒಂದೊಂದು ನಿರ್ದಿಷ್ಟ ಅಂತರದಲ್ಲಿ ಸ್ಥಿತವಾಗಿ ನಿಂತಿರಲು, ನಮ್ಮ ಶರೀರದ ಭಾರವನ್ನು ಕಾಲುಗಳಿಗೆ ವರ್ಗಾಯಿಸಲು ಕಾರಣವಾಗಿರುವುದು ಅಲ್ಲಿನ ಬಲವಾದ ಆದರೆ ಮೃದುವಾದ ಚಲನೆಗೆ ಹೊಂದಿಕೊಳ್ಳುವ ಸ್ನಾಯುಗಳು!! ಇದು ಬಹುಜನರಿಗೆ ಗೊತ್ತಿಲ್ಲ, ಇಲ್ಲಿ ಒಂದು ಮೂಳೆಗೆ ಇನ್ನೊಂದು ಭಾರ ವರ್ಗಾಯಿಸುವುದು ಇದೇ ಸ್ನಾಯುಗಳಿಂದಲೇ ಹೊರತೂ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿಲ್ಲ._
*ಹಾಗೆಯೇ:*
_ಮೊಣಕಾಲಿನಲ್ಲಿ, Femur, Tibia, Patella ಮತ್ತು Fibula ಎಂಬ ಮೂಳೆಗಳನ್ನು ಹಿಡಿದಿಡಲು 4+2 ಸ್ನಾಯುಗಳು ಕೆಲಸ ಮಾಡುತ್ತವೆ._ *ಅವುಗಳೆಂದರೆ* -
_Anterior Cruciate Ligament (ACL)_
_Posterior Cruciate Ligament (PCL)_
_Medial Collateral Ligament (MCL)_
_Lateral Collateral Ligament (LCL)_
_Fibular Collateral Ligament (FCL)_
*ಮತ್ತು*
_Coronary Ligaments._
_ಮೊದಲ ನಾಲ್ಕು ಪ್ರಮುಖವಾಗಿ ಮತ್ತು ಕೊನೆಯ ಎರಡು ಸಹಾಯಕರಾಗಿ ನಮ್ಮ ಇಡೀ ಶರೀರದ ಭಾರವನ್ನು ಭೂಮಿಗೆ ವರ್ಗಾಯಿಸುತ್ತವೆ, ನಮ್ಮ ಮೊಣಕಾಲು ಮಡಿಚಿ ಕುಕ್ಕರಗಾಲಿನಲ್ಲಿ ಕುಳಿತಾಗಲೂ!! ಅಂದರೆ ಭಾರ ಹೊರುತ್ತಿರುವುದು ಮೂಳೆಗಳೋ, ಸ್ನಾಯುಗಳೋ? ಅಂದರೆ, ಚಿಕಿತ್ಸೆಗೆ ಕ್ಯಾಲ್ಸಿಯಂ ಬೇಕೋ, ಸ್ನಾಯುವಿಗೆ ತೈಲ ಬೇಕೋ?!_ 🤔
•~•~•~•~•
_ವಿಜ್ಞಾನ ಕೃತಕತೆಗೆ ಶರಣಾಗಿ ಹೋಗಿದೆ. ಅದು ತನ್ನ ಕೃತಕ ಪ್ರತಿಕೃತಿಯನ್ನು ಸೃಷ್ಟಿಸುವ ಅಸಂಬದ್ಧಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದೇವೆ._ 🙄
_ಸತ್ಯವನ್ನು ಬಚ್ಚಿಟ್ಟು ಶಸ್ತ್ರಚಿಕಿತ್ಸೆ ಒಂದೇ ದಾರಿ ಎಂದು ಕೇಳಿಸಿಕೊಂಡು ನಂಬುವ ನಾವು ತಾರ್ಕಿಕ ಯೋಚನೆಯತ್ತ ಮುಖ ಮಾಡಬೇಕಿದೆ._ 🤔
*ಚಿಕಿತ್ಸೆ ಏನು:?*
_ನಿಮ್ಮ ಆಹಾರಗಳಿಂದ ಸ್ನಾಯುಗಳನ್ನು ದುರ್ಬಲಗೊಳಿಸಬೇಡಿ. ಸದೃಢ ಸ್ನಾಯುಗಳು ಕೇವಲ ಪೋಷಕಾಂಶಗಳಿಂದ ಬರುವುದಿಲ್ಲ, ಜೊತೆಗೆ ವ್ಯಾಯಾಮ ಬೇಕು. ಹೆಚ್ಚು ಗಮನೀಯ ಅಂಶ ಎಂದರೆ, ಮಾನಸಿಕ ಒತ್ತಡ ಇದ್ದಾಗ ಬೆನ್ನು ನೋವು ಹೆಚ್ಚು ಅಲ್ಲವೇ? ನಮ್ಮ ಮನಸ್ಸು ಕ್ಷೋಭೆಗೊಂಡ ತಕ್ಷಣ ಮುಖದ ಆಕಾರ ಬದಲಾಗಲು ಕಾರಣ ಅಲ್ಲಿನ ಸ್ನಾಯುಗಳು, ಹಾಗೆಯೇ ಹೃದಯದ, ಬೆನ್ನು, ಕೈಕಾಲುಗಳ ಸ್ನಾಯುಗಳನ್ನೂ ಸೇರಿ ನಮ ಶರೀರದ ಸರ್ವ ಸ್ನಾಯುಗಳೂ ಸಂಕೋಚಗೊಳ್ಳುತ್ತವೆ. ನೋವು ಬಾರದಿರಲು ಸಾಧ್ಯವೇ?_
_ನೀವು ಖುಷಿಯಾಗಿ, ಮನಸ್ಸು ಪ್ರಸನ್ನವಾಗಿ, ಪ್ರವಾಸದಲ್ಲಿದ್ದಾಗ ನಿಮ್ಮ ಬೆನ್ನು ನೋವು ಇತ್ತೇ? ಗಮನಿಸಿ ನೋಡಿ..._ 🤭
~_ಮಾ ಶಾರದಾದಾಸ_
••••••••••••••••••••••••••••••
🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴
No comments:
Post a Comment