✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 21 February 2021

ಅಕ್ಕಿಯ ಆಯ್ಕೆ ಮತ್ತು ಅನ್ನ ತಯಾರಿಸುವ ವಿಧಾನದಿಂದಲೇ ಅತೀ ಹೆಚ್ಚಿನ ಆರೋಗ್ಯ ಗಳಿಸಬಹುದು.

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
22.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-29
••••••••••••••
✍️: ಇಂದಿನ ವಿಷಯ:
ಅಕ್ಕಿಯ ಆಯ್ಕೆ ಮತ್ತು ಅನ್ನ ತಯಾರಿಸುವ ವಿಧಾನದಿಂದಲೇ ಅತೀ ಹೆಚ್ಚಿನ ಆರೋಗ್ಯ ಗಳಿಸಬಹುದು.
••••••••••••••••••••••••••••••••••••••••• 

📜 ವರಃ ತತ್ರ *ರಕ್ತಶಾಲಿ*......||

ನವಧಾನ್ಯ ಅಭಿಷ್ಯಂದಿ.......ಲಘು *ಸಂವತ್ಸರೋಷಿತಮ್|*

ಸು ಧೌತಃ *ಪ್ರಸೃತಃ ಸ್ವಿನ್ನೋತ್ಯಕ್ತೋಷ್ಮಾ* ಚ ಓದನೇ ಲಘುಃ | ಯತ್ ಚ ಅಗ್ನೆ.............. *ಭೃಷ್ಟ ತಣ್ಡುಲಃ||* ವಿಪರೀತೋ ಗುರುಃ.....|
-ಅಷ್ಟಾಂಗ ಹೃದಯ ಸೂತ್ರಸ್ಥಾನ-6/3,24,29& 30 ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ


👉 ಕೆಂಪು ಅಕ್ಕಿಯು ಏಕದಳ ಧಾನ್ಯಗಳಲ್ಲೇ ಶ್ರೇಷ್ಠ.
ಭತ್ತ ಮತ್ತು ಅಕ್ಕಿಗಳಲ್ಲಿ ರಕ್ತಶಾಲಿ, ಕಮಲಶಾಲಿ, ಯವಕ, ಹಾಯನ, ಪಾಂಸು, ಬಾಷ್ಪಕ, ನೈಷಧಕ, ವ್ರೀಹಿ...ಮುಂತಾದ ಅನೇಕ ವಿಧಗಳನ್ನು ಹೇಳಿದ್ದರೂ *ಕೆಂಪು ಅಕ್ಕಿಯೇ ಶ್ರೇಷ್ಠ* ಎಂದಿದ್ದಾರೆ.

ಹೊಸ ಅಕ್ಕಿ ಅನಾರೋಗ್ಯಕರ, ಒಂದು ಸಂವತ್ಸರ(ವರ್ಷ) ಹಳೆಯ ಅಕ್ಕಿ ಶ್ರೇಷ್ಠ.
ಅಕ್ಕಿ ಹಳೆಯದಾದರೆ, ಪಚನಕ್ಕೆ ಹಗುರವಾಗುತ್ತದೆ ಆದರೆ ಅದರ ಶಕ್ತಿಯಲ್ಲಿ ಕಿಂಚಿತ್ತೂ ನಷ್ಟವಾಗುವುದಿಲ್ಲ. ಹಾಗಾಗಿ, ನಮ್ಮ ಕರುಳು ಅಲ್ಪ ಪಚನ ಶಕ್ತಿಯಿಂದಲೇ ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳಲು ಹಳೆಯ ಅಕ್ಕಿಯೇ ಶ್ರೇಷ್ಠ. ಹೊಸ ಅಕ್ಕಿಗೂ ಪೋಷಕಾಂಶಗಳಲ್ಲಿ, ಶಕ್ತಿಯಲ್ಲಿ ಒಂದೇ ರೀತಿಯ ಗುಣ ಇದ್ದರೂ ಪಚನಕ್ಕೆ ಗುರುತರವಾದ್ದರಿಂದ ನಮಗೆ ಅದರಿಂದ ಹೆಚ್ಚಿನ ಪೋಷಣೆ ದೊರೆಯದು.

🍃 ಅಕ್ಕಿಯನ್ನು ಸ್ವಲ್ಪ ಪಾಲೀಶ್ ಮಾಡುವುದು ಸೂಕ್ತ.

🍃 ಅನ್ನ ತಯಾರಿಗೆ ಮುನ್ನ ಸುಧೌತ ಅಂದರೆ ಚನ್ನಾಗಿ ತೊಳೆಯಬೇಕು.
ಎಲ್ಲರೂ ಮಾಡುವ ಸಾಮಾನ್ಯ ಕ್ರಿಯೆ ಇದು. ಅಕ್ಕಿಯಲ್ಲಿ ಇರಬಹುದಾದ ಕ್ರಿಮಿನಾಶಕ ಮತ್ತು ಸಂರಕ್ಷಕಗಳನ್ನು ತೆಗೆಯಲು ತೊಳೆಯುತ್ತೇವೆ. ಆದರೆ ಹಿಂದೆ ಈ ಸಮಸ್ಯೆ ಇರಲಿಲ್ಲ ಹಾಗಾಗಿ ಇಂದು ಸಾವಯವ/ನೈಸರ್ಗಿಕ, ಪಾಲೀಶ್ ಇಲ್ಲದ ಅಕ್ಕಿ ತಂದರೂ ಚನ್ನಾಗಿ ತೊಳೆಯಬೇಕು.
 ಏಕೆಂದರೆ- ಅಕ್ಕಿಯ ಮೇಲ್ಭಾಗದಲ್ಲಿ ಸೋಪಿನಂತಹ ನೊರೆಯುಳ್ಳ ಜಾರಿಹೋಗುವ ಗುಣ ಇರುತ್ತದೆ, ಇದೇ ಕಾರಣ ಪ್ರಾಣಿಗಳು ತಿಂದ ಕಾಳುಗಳು ಅದರ ಮಲದಲ್ಲಿ ಹೊರಬರುತ್ತದೆ, ಹಾಗೆ ಬಂದರೂ ಕಾಳಿನ ಗುಣಗಳನ್ನು ಅದರ ಕರುಳು ಹೀರಿಕೊಂಡಿರುತ್ತದೆ. ಆದರೆ ಮನುಷ್ಯನ ಕರುಳಿಗೆ ಈ ಗುಣ ಇಲ್ಲ, ಹಾಗಾಗಿ ತೊಳೆಯದ ಪಾಲೀಶ್ ಮಾಡದ ಅಕ್ಕಿಯ ಅನ್ನವನ್ನು ಸೇವಿಸಿದರೆ ಅದು ಇತರೆ ಆಹಾರವನ್ನೂ ಸಹ ಜಾರಿಸಿ, ಕರುಳು ಪೂರ್ಣ ಹೀರಿಕೊಳ್ಳಲು ಆಗದಂತೆ ಮಾಡುತ್ತದೆ. 
ಇದೇ ಕಾರಣದಿಂದ ಅನ್ನ ಉಂಡ ಕೆಲವರಿಗೆ ಹೀರದೇ ಉಳಿದ ಪೋಷಕಗಳು ಹೊಟ್ಟೆಯನ್ನು ಉಬ್ಬರಿಸುತ್ತವೆ ಮತ್ತು ಕಾಲಾಂತರದಲ್ಲಿ ಅನೇಕ ಖನಿಜಾಂಶಗಳ ಕೊರತೆಯೂ ಉಂಟಾಗುತ್ತದೆ.

🍃ಚನ್ನಾಗಿ ಬೆಂದ ಅನ್ನವನ್ನು  ಬಸಿಯಬೇಕು(ಬಟ್ಟೆಯಿಂದ ಸೋಸಬೇಕು). ನಂತರ ಉಳಿದ ಜಲಾಂಶ ಅತ್ಯಲ್ಪ ಬಿಸಿ ಹಬೆಯಿಂದಲೇ ಅಲ್ಲೇ ಇಂಗಿಸಬೇಕು.
ಪ್ರಷ್ಜರ್ ಕುಕ್ಕರ್ ವಿಧಾನದಲ್ಲಿ ಬೇಯಿಸಿದ ಅನ್ನ ಸರ್ವಥಾ ನಿನ್ದ್ಯವಾದದ್ದು. ಈ ವಿಧಾನ ಯುವ ಪೀಳಿಗೆಗೆ ಅನ್ನ ಮಾಡುವ ನೈಜ ಕಲೆಯನ್ನೇ ಮರೆಸಿಬಿಟ್ಟಿದೆ. ಈ ವಿಧಾನದ ಶ್ರೇಷ್ಠತೆ ತಿಳಿಸುವ ವೈಜ್ಞಾನಿಕ ವಿವರಣೆ ಬಹಳ ಇದೆ, ಇಲ್ಲಿ ಕೇವಲ ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ: 
◆ ಮಾವಿನ ಕಾಯಿ ತಂದು ಒತ್ತಡ ಹಾಕಿ ಉಜ್ಜಿ ಉಜ್ಜಿ ಮೆತ್ತಗಾಗುವಂತೆ ಮಾಡಿದರೆ ಅದಕ್ಕೆ ಮಾವಿನಹಣ್ಣಿನ ಗುಣ ಎಂದೂ ಬಾರದು, ಹಾಗೆಯೇ ಅಕ್ಕಿಯು ಗುಣದಲ್ಲಿ ಅನ್ನವಾಗುವ ಬದಲು ಕೇವಲ ಮೆತ್ತಗಾಗಿರುತ್ತದೆ ಅಷ್ಟೆ. ಹಾಗಾಗಿ ಅನ್ನ ತಿಂದರೆ ಹೊಟ್ಟೆ ಉಬ್ಬರಿಸುತ್ತದೆ. ಅಥವಾ ಸ್ವಲ್ಪ ತಿಂದರೂ ಭಾರವಾಗಿ ಬಿಡುತ್ತದೆ. 
ಇದು ಕುಕ್ಕರ್ ಅನ್ನ ಸೇವಿಸಿದ ಎಲ್ಲರ ಅನುಭವ ಅಲ್ಲವೇ?

🌾 ಸರ್ವ ರೀತಿಯ ಪೋಷಣೆಯ ಗುಣವನ್ನೂ ಅನ್ನವು ಹೊಂದಿರುವುದು. 
ಅನ್ನ ಯಾವಕಾಲದಲ್ಲೂ ಆರೋಗ್ಯ ರಕ್ಷಣೆಗೆ ಶ್ರೇಷ್ಠ 🌾

💁 ಗಮನಿಸಿ: ಚರಕಾದಿ ಮಹರ್ಷಿಗಳಲ್ಲಿ ಹೆಚ್ಚಿನವರು ಉತ್ತರ ಭಾರತದವರೇ ಆಗಿದ್ದಾರೆ. ಆದರೆ ಅವರು ಅಲ್ಲಿಗೆ ಗೋಧಿ ಪ್ರಧಾನ ಎಂದಾಗಲೀ, ದಕ್ಷಿಣಕ್ಕೆ ಅಕ್ಕಿ ಪ್ರಧಾನ ಎಂದೂ ಹೇಳದೇ, ಏಕದಳ ಧಾನ್ಯಗಳಲ್ಲೇ ಅಕ್ಕಿ ಶ್ರೇಷ್ಠ ಎಂದಿರುವ ಕಾರಣ, ಅವರನ್ನು ಅನುಸರಿಸೋಣ- ಆರೋಗ್ಯದಿಂದ ಇರೋಣ.

         🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline