✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday, 17 February 2021

ಆಹಾರವೋ-ಮಂದ ವಿಷವೋ?!!

🙏ಅಮೃತಾತ್ಮರೇ ನಮಸ್ಕಾರ 🙏
🍇ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍇
    🥝ಸ್ವಾಸ್ಥ್ಯ ಸರ್ವರದ್ದೂ ಆಗಲಿ🥝
••••••••••••••••••••••••••••••••••••••••••
18.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-24
••••••••••••••
✍️: ಇಂದಿನ ವಿಷಯ:
ಆಹಾರವೋ-ಮಂದ ವಿಷವೋ?!!
•••••••••••••••••••••••••••••••••••••••••

ನಿತ್ಯ ತಿನ್ನುವ ಬಹುತೇಕ ಆಹಾರನ್ನು ಅರಿವಿಲ್ಲದೇ ನಾವು *"ವಿಷ"* ವನ್ನಾಗಿಸಿದ್ದೇವೆ.!
ಮತ್ತು 
ನಾವು ನಿತ್ಯ ಸೇವಿಸುವ ಔಷಧಗಳು ಸ್ವತಃ ತಾವೇ ಗರವಿಷಗಳು.!!!

ಅಂದರೆ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಎಂದು ಇನ್ನೊಬ್ಬರ ಮೇಲೆ ಭಾರಹಾಕುವ  ಬದಲು, ನಮ್ಮ ಕೈಯಿಂದಲೇ ವಿಷವನ್ನಾಗಿಸಿಕೊಳ್ಳುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ.

ಸಧ್ಯಕ್ಕೆ ಸಾಧ್ಯವಾಗುವ ಪರಿಹಾರ ಇದೇ, ಮುಂದೆ ರಸಗೊಬ್ಬರ, ಕೀಟನಾಶಕಗಳನ್ನು ವಿಚಾರ ಮಾಡಿ ತ್ಯಜಿಸುವ  ಹಾದಿ ನೋಡೋಣ.

📜 ಯತ್ಕಿಂಚಿತ್ ದೋಷಂ‌ ಉತ್ಕ್ಲೇಶಃ ನ ಹರೇತ್ ತತ್‌ಸಮಾಸತಃ | ವಿರುದ್ಧಂ ಶುದ್ಧಿಃ ಅತ್ರೇಷ್ಟಾ ಶಮೋ ವಾ ತದ್ವಿರೋಧಿಭಿಃ ||*
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅನ್ನರಕ್ಷ ಅಧ್ಯಾಯ-7/45

ಒಂದು ವಾಕ್ಯದಲ್ಲಿ ಗರವಿಷ ಮತ್ತು ಶೀಘ್ರವಿಷದ ವ್ಯಾಖ್ಯೆ, ಪರಿಣಾಮ‌ ಮತ್ತು ಚಿಕಿತ್ಸೆ ಹೇಳಿದ್ದಾರೆ.

ಯಾವುದನ್ನು ತಿಂದ ನಂತರ, ಕರುಳು, ಯಕೃತ್ ಮತ್ತು ರಕ್ತಪರಿಚಲನೆಯಲ್ಲಿ ದ್ರವರೂಪದ *ಆಹಾರರಸ* ಉಂಟಾಗಿ ಜೀವಕೋಶಗಳ ಒಳಗೆ ಹೋಗಬೇಕೋ ಅಂತಹ 
ಆಹಾರರಸವು, ಪರಿಚಲನೆಯಲ್ಲಿ ಮುಂದೆ ಚಲಿಸದೆಯೂ, ಶರೀರದಿಂದ ಹೊರಕ್ಕೆ ಹೋಗದೆಯೂ, ಯಾವುದೋ ಒಂದು ಸ್ಥಳದಲ್ಲಿ  ನಿಂತುಬಿಡುವುದೋ ಅದು *ವಿಷವಾಗಿ ಅಥವಾ ಗರವಿಷವಾಗಿ* ಪರಿಣಮಿಸುತ್ತದೆ. 

🔺 ವಿಷ: ಶೀಘ್ರವಾಗಿ ಕೊಲ್ಲುವುದು.

🔴 ಗರವಿಷ: ಮರಳಿ ಗುಣಪಡಿಸಲಾಗದ ರೋಗಗಳನ್ನು ನಿಧಾನವಾಗಿ ಉಂಟುಮಾಡಿ ಶರೀರವನ್ನು ಬಹುವಾಗಿ ನರಳಿಸಿ ಕೊಲ್ಲುವುದು.

*ಎರಡರಲ್ಲೂ ಅಪಾಯಕ್ಕೆ ತುತ್ತಾಗುವ ಅಂಗ ಯಕೃತ್!! ಆದರೆ ಕೊಲ್ಲುವ ಅಂಗ ಮೂತ್ರಪಿಂಡ, ಹೃದಯ ಅಥವಾ ಮೆದುಳು!!!*

👁‍🗨 ಗಮನಿಸಿ: ಆಹಾರದಲ್ಲಿ ಶರೀರಕ್ಕೆ ಬೇಡವಾದ ಯಾವುದೇ ಅಂಶವನ್ನು ಯಕೃತ್ ಅದನ್ನು ವಿಷ ಎಂದು ಪರಿಗಣಿಸಿ ತಾನು ತೊಂದರೆ ತೆಗೆದುಕೊಂಡು ತೊಂದರೆಗೆ ಒಳಗಾಗುತ್ತದೆ.

ಇಂದಿನ ಅನೇಕರಿಗೆ ಫ್ಯಾಟೀ ಲಿವರ್ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ಅಲೋಪಥಿ ವಿಧಾನದಲ್ಲಿ ಚಿಕಿತ್ಸೆ ಇಲ್ಲದ ಕಾರಣ ಏನಾಗಲ್ಲ ಬಿಡಿ ಎಂದು ಉಪೇಕ್ಷಿಸುತ್ತಾರೆ. ಇದು ಗರವಿಷದ ಪರಿಣಾಮ ಎಂದು ಆ ವಿಜ್ಞಾನಕ್ಕೆ ಗೊತ್ತಿಲ್ಲ. ಹಾಗೇ ಇಂಡೈರೆಕ್ಟ್ ಬಿಲಿರುಬಿನ್ ಹೆಚ್ಚಾಗಿ ಬಹಳ ಕಾಲ ಉಳಿಯುವ ಜಾಂಡೀಸ್, ಯಕೃತ್ ಎಂಜೈಮ್ ವೃದ್ಧಿ ಎಲ್ಲವೂ ಉಪೇಕ್ಷೆಗೆ ಯೋಗ್ಯವೇ ಅಲ್ಲ. 
ಹಾಗೆಯೇ ಆಹಾರ ಒಂದೆಡೆಯಾದರೆ ನಿತ್ಯವೂ ಮಾತ್ರೆ ಸೇವನೆ ಮಾಡಿ ಜೀವಿಸುವ ಅದೆಷ್ಟೋ ಜನರಿಗೆ ಔಷಧಿಗಳ ಅಡ್ಡಪರಿಣಾಮವೇ ಮುಖ್ಯ ಕಾಯಿಲೆಗಿಂತ ಅಪಾಯಕಾರಿ, ಮಧುಮೇಹವನ್ನು ಆಹಾರ ವಿಹಾರಗಳಿಂದ ನಿಯಂತ್ರಿಸುವ ಬದಲು ನಿತ್ಯ ಔಷಧಿ ಸೇವಿಸುವ ಜನ ಗಮನಿಸಬೇಕು, ಆ ಎಲ್ಲಾ ಔಷಧಿಗಳೂ ಯಕೃತ್ತಿನ ಮೇಲೆ ಅಡ್ಡಪರಿಣಾಮ ಬೀರುತ್ತಿರುತ್ತವೆ, ಇವೆಲ್ಲಾ ಗರವಿಷಗಳಾದ್ದರಿಂದ ಮುಂದೆ ಕಿಡ್ನಿ, ಹೃದಯದ ತೊಂದರೆ ಬಂದಾಗ ಔಷಧಗಳ ಹೆಸರಿನಲ್ಲಿ ನುಂಗಿದ ಗರವಿಷಗಳೇ ಕಾರಣ ಎನ್ನಿಸದಂತೆ ಡಯಾಬಿಟೀಸ್ ಇದೆ ಇದೆಲ್ಲಾ ಸಾಮಾನ್ಯ ಎಂದು, ಸುಮ್ಮನಾಗಿಸುವ ವೈದ್ಯಕೀಯವನ್ನು ನಂಬುವುದು ಹಿತಕರವೇ?
ಕೆಲವರು ಕಳೆದ ಐವತ್ತು ವರ್ಷಗಳಿಂದ ಮಧುಮೇಹ ಇದ್ದರೂ ಒಂದೂ ಮಾತ್ರೆ ಇಲ್ಲದೇ ಅಥವಾ ಕೇವಲ ಒಂದು ಮಾತ್ರೆಯಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲದಂತೆ ಬದುಕುತ್ತಿರುವುದು, ಅವರ ಯಕೃತ್ ಆರೋಗ್ಯವನ್ನು ಸದೃಢವಾಗಿಟ್ಟುಕೊಂಡಿರುವುದೇ ಕಾರಣ.

ಇನ್ನು ನಮ್ಮ ಆಹಾರಕ್ಕೆ ಬಂದರೆ "ನಾಲಿಗೆಗೆ ರುಚಿಸುವುದೇ ಆಹಾರವಾಗಿ ಪರಿಗಣಿಸಿರುವ ನಾವು, ಅಂತಹ ಆಹಾರವನ್ನು ಕರುಳು ತಿರಸ್ಕಾರ ಮಾಡಿ ಎದೆ ಉರಿ, ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ ಮುಂತಾದವುಗಳ ಮೂಲಕ ತೋರಿಸಿದರೂ, ಇದು ಗ್ಯಾಸ್ಟ್ರಿಕ್‌ ಎಂದು ಉಪೇಕ್ಷಿಸಿ ಮಾತ್ರೆ ಹೆಸರಿನ ಮುಸುಕು ಔಷಧಗಳನ್ನು ಬಳಸಿ ಮುಚ್ಚಿಹಾಕುತ್ತಿರುವ ಪರಿಣಾಮವೇ ಯಕೃತ್-ಮೂತ್ರಪಿಂಡ-ಹೃದಯ-ಮೆದುಳುಗಳ ಕಾಯಿಲೆ.

ಇದು ಕೇವಲ ಥಿಯರಿ ಎನ್ನುವವರು ಗಮನಿಸಿ *ಇಂದು ಚಿಕ್ಕ ಮಕ್ಕಳಿಗೂ ಡಯಾಲೈಸಿಸ್ ಮಾಡಿಸುತ್ತಿರುವುದು* ಕಿಡ್ನಿ ರೋಗ ಅಲ್ಲದೇ ಮತ್ತೇನು? 
ಕಿಡ್ನಿಗಳು ಹಾಳಾಗುವುದು ಶರೀರದಲ್ಲಿ ವಿಷ ಸೇರಿದಾಗ ಅಲ್ಲವೇ?
ಶೀಘ್ರ ವಿಷದ ಪರಿಣಾಮ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಆದರೆ *ಗರವಿಷ* ನಿಧಾನವಾಗಿ ಕಿಡ್ನಿಗಳನ್ನು ನಾಶಮಾಡುತ್ತವೆ  ಎಂಬುದು ಬಹುತೇಕರಿಗೆ ತಿಳಿದಿಲ್ಲ, ತಿಳಿಸಬೇಕಾದ ವಿಜ್ಞಾನ ತನ್ನ ಅರೆಜ್ಞಾನದ ಕಾರಣ ತಿಳಿಸಿಲೂ ಇಲ್ಲ👁‍🗨

ಇಂತಹ ಅನೇಕ ರೀತಿಯ ಗರವಿಷಗಳನ್ನು ನಾವಿಂದು ಎಗ್ಗಿಲ್ಲದೇ, ಭಯವೂ ಇಲ್ಲದೇ ಬಳಸಿ ನೆಮ್ಮದಿಯಿಂದ ಇದ್ದೇವೆ. ಅದರಲ್ಲಿ ಕೆಲವು ನಮ್ಮ ನಿತ್ಯ ಆಹಾರಗಳು! ಕೆಲವು ಬಾಯಿಚಪಲಗಳು!! ಮತ್ತು ಹಲವಾರು ನಮ್ಮ ನಿತ್ಯ ಔಷಧಿಗಳು!!! 

🛎 ಇಂದು ನಮ್ಮ ಪರಿಚಿತರಿಗೆ ಮಾತ್ರ ಇರುವ ಇಂತಹ ಕಾಯಿಲೆಗಳು, ನಮಗೆ ಪರಿಚಯವಾಗುವ ಮೊದಲೇ ಎಚ್ಚರಗೊಳ್ಳೋಣ.

🗝 ಪರಿಹಾರ:

📜 ಶುದ್ಧೇ....ಹೇಮಚೂರ್ಣಸ್ಯ ...| 
.....ಪದ್ಮಪತ್ರೇ ಅಂಬುವತ್ ವಿಷಮ್||

ಮೊದಲು ಕ್ರಮವರಿತು ಗರವಿಷ ಸೇವನೆ ನಿಲ್ಲಿಸುವುದು.
ಇದರ ಪ್ರಮಾಣ ಅರಿತು "ಸಂಗ್ರಹ ಹೆಚ್ಚಿದ್ದರೆ ಪಂಚಕರ್ಮ ಚಿಕಿತ್ಸೆಯಿಂದ ಹೊರಹಾಕುವುದು"
"ಕಡಿಮೆ ಸಂಗ್ರಹ ಇದ್ದರೆ ಅಲ್ಲೇ ಕರಗಿಸುವ ಶಮನ ಚಿಕಿತ್ಸೆ ಮಾಡಬೇಕು".

ಕೊನೆಗೆ *ಸ್ವರ್ಣಯೋಜನೆ* ಮಾಡುವುದರಿಂದ ಎಂತಹ ವಿಷವನ್ನೂ ಗೆಲ್ಲಬಹುದು 👍

ಇಂತಹ ಅನೇಕ ಕಾಯಿಲೆಗಳ ಗುಣಪಡಿಸಲಾಗದ ಅವಸ್ಥೆಗಳಲ್ಲಿ ಅಥರ್ವ ತಂಡವು ಮೇಲಿನ ರೀತಿಯ ಚಿಕಿತ್ಸಾ ವಿಧಾನಗಳಿಂದ ಯಶಸ್ವಿಯಾಗಿ ಗುಣಪಡಿಸಿದ್ದೂ ಅಲ್ಲದೇ, ಸ್ವರ್ಣಯೋಗ ಪ್ರಯೋಗಗಳಿಂದ ಎಷ್ಟುಬಾರಿ ರಕ್ತಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದರೂ ಯಕೃತ್, ಮೂತ್ರಪಿಂಡಗಳು ವಿಷದ ದುಷ್ಪರಿಣಾಮದಿಂದ ಸಂಪೂರ್ಣ ಹೊರಬಂದು ಆರೋಗ್ಯದಿಂದ ಇರುವುದನ್ನು ನೋಡುತ್ತಿದ್ದೇವೆ.

ಈ ಅನೇಕ ಗರವಿಷಗಳನ್ನು ಹದಿನೆಂಟು ವಿಭಾಗಗಳನ್ನಾಗಿ ಎಚ್ಚರಿಸಿದ್ದಾರೆ ನಮ್ಮ ಆಚಾರ್ಯರು.

ನಾಳೆಯಿಂದ, 
1.ಯಾವ ಆಹಾರ ಗರವಿಷ?
2. ಅದರ ಪರಿಣಾಮ ಏನು?
3. ಚಿಕಿತ್ಸೆ ಹೇಗೆ?
👉 ಇವುಗಳನ್ನು ಪ್ರತಿ ದಿನ 1-2 ಅಥವಾ 3 ಗರವಿಷಗಳನ್ನು ನೋಡೋಣ.

        ✡ಧನ್ಯವಾದಗಳು ✡
•••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline