✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday, 9 February 2021

ಕ್ಷೀರವು ಅಮೃತ.

🟢 ಅಮೃತಾತ್ಮರೇ ನಮಸ್ಕಾರ 🟢
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
            🙏🙏🙏🙏🙏
••••••••••••••••••••••••••••••••••••••••••
10.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-17
••••••••••••••
✍️: ಇಂದಿನ ವಿಷಯ:
🥛 ಕ್ಷೀರವು ಅಮೃತ.
•••••••••••••••••••••••••••••••••••••••••
ಆದರೆ ಈಗ ವಿಷವಾಗಿದೆ🤦‍♂
ಎಷ್ಟೋ ಸಂಶೋಧನೆಗಳು "ಹಾಲು ಬಿಳಿ ಬಣ್ಣದ ವಿಷ!" ಎಂದು ಸಾರುತ್ತಿವೆ. ಇದು ಸತ್ಯಕ್ಕೆ ದೂರ. 

🤔 ಸತ್ಯವೇನು? 
ನಿಮ್ಮ ಅನುಭವಕ್ಕೆ ಬರುವಂತಿದ್ದರೆ ಸ್ವೀಕರಿಸಿ.
🙏
 
✍ ನಿಜವಾದ ಹಾಲಿನ ಗುಣ:

📜 ಸ್ವಾದು ಪಾಕ ರಸಂ, ಸ್ನಿಗ್ಧಂ, ಓಜಸ್ಯಂ, ಧಾತುವರ್ಧನಮ್ ||
ವಾತಪಿತ್ತ ಹರಂ ವೃಷ್ಯಂ ಶ್ಲೇಷ್ಮಲಂ ಗುರು ಶೀತಲಮ್ |
ಪ್ರಾಯಃ ಪಯಃ..‌....||
- ಅಷ್ಟಾಂಗ ಸೂತ್ರ, ಅಧ್ಯಾಯ-5

ವಿಶೇಷವಾಗಿ ಗಮನಿಸಬೇಕಾದ ಅಂಶ ಎಂದರೆ, 
ಜೀವಿಗೆ ತನ್ನ ತಾಯಿಯ ಸ್ತನ್ಯ(ಮೊಲೆಹಾಲು) ಪ್ರಾಣಕಾರಕ, ಓಜೋಕಾರಕ.
ಈ ಶ್ಲೋಕದಲ್ಲಿ ವಿಶೇಷವಾಗಿ ಎಲ್ಲಾ ಪ್ರಾಣಿಗಳ ಹಾಲಿನಿಂದ ಮನುಷ್ಯನಿಗೆ ಸಿಗುವ ಉಪಯೋಗವನ್ನು ಉದ್ದೇಶಿಸಿ ಅವುಗಳ ಗುಣಗಳನ್ನು  ವರ್ಣಿಸುತ್ತಾರೆ.

🥛 ಕ್ಷೀರವು
• ಮಧುರ ರಸ ಮತ್ತು ಜೀರ್ಣವಾಗುವಾಗಲೂ, ಜೀರ್ಣದ ನಂತರವೂ ಮಧುರವಾದದ್ದು
• ಸ್ನಿಗ್ಧವಾದದ್ದು
• ಧಾತುಗಳನ್ನು ಪೋಷಿಸುತ್ತದೆ
• ಪ್ರಾಣ-ಬಲಕಾರಕ.

🎗 ಚಿಕಿತ್ಸಾ ದೃಷ್ಟಿಯಿಂದ-
 ಅತ್ಯಂತ ಉಷ್ಣವನ್ನೂ ಮತ್ತು ಧಾತುಕ್ಷಯಮಾಡುವ ಅಂಶವನ್ನೂ ದೇಹದಿಂದ ಹೊರಹಾಕುತ್ತದೆ ಮತ್ತು ಎಲ್ಲಾ ಧಾತುಗಳನ್ನು ರಸಧಾತುವಿನಿಂದ ತುಂಬುತ್ತದೆ, ತಂಪಾಗಿಸುತ್ತದೆ,
ಪೌರುಷತ್ವವನ್ನು ಕೊಡುತ್ತದೆ.

ಇದು ಎಲ್ಲಾ ಪ್ರಾಣಿಗಳ ಹಾಲಿನ ಸಾಮಾನ್ಯ ಗುಣ.
ಆದರೆ ಅಷ್ಟಾಂಗ ಹೃದಯ ಸಂಹಿತೆಯ ವ್ಯಾಖ್ಯಾನಕಾರರು- ಒಂಟೆ ಮತ್ತು ಕುರಿಯ ಹಾಲು ಸ್ವಲ್ಪ ವಿಶೇಷ ಗುಣ ಹೊಂದಿರುತ್ತವೆ ಎಂದು ಸಾಮಾನ್ಯದಿಂದ ಪ್ರತ್ಯೇಕಿಸಿ ಹೇಳಿದ್ದಾರೆ.

✨ ಈಗ ಸಿಗುತ್ತಿರುವ ಹಾಲು ಎಂಥಹುದು?
ಆರ್ಥಿಕ ಸಬಲತೆಯೇ ಇಂದಿನ ಜೀವನದ ಬಹು ದೊಡ್ಡ ಮಾನದಂಡವಾಗಿರುವ ಕಾರಣ ಆಹಾರ ಕಲಬೆರಕೆಯಾಗಿ ಇಷ್ಟೊಂದು ಕೆಡುತ್ತಿದೆ, ಆಹಾರ ಪೂರೈಕೆ ಎಂಬುದು ಒಂದು ಉದ್ಯಮ ‌ಕ್ಷೇತ್ರವಾಗಿ ಬೆಳೆದಿದೆ.

🐄 ಗೋವುಗಳ ಲಕ್ಷಣಗಳೇನು?
ಗೋವಿನ‌ಕ್ಷೀರ ಶ್ರೇಷ್ಠ ಎಂದಿದ್ದಾರೆ, ಆದರೆ ಈಗ ಇರುವ ಹಸುಗಳು ನಿಜವಾಗಿಯೂ ಹಸುಗಳೇ ಅಲ್ಲ.

👉 ಗೋವಿನ ಲಕ್ಷಣಗಳನ್ನು ವರ್ಣಿಸುತ್ತಾ ಆಚಾರ್ಯರು-
🔸 ಗೋ ಸಂತತಿ ಎಂದು ಕರೆಸಿಕೊಳ್ಳಲು "ಗಂಗೆತೊಗಲು" "ಶೃಂಗಗಳು" "ವೃಷಭ ಉಚ್ಛ್ರ(ಹೋರಿಗೆ ಇರುವ ಭುಜ, ಬೆನ್ನು ಶಿಖರ)" ಇರುವುದೇ ಮುಖ್ಯ. ಇವುಗಳು ಇಲ್ಲದಿದ್ದರೆ ಅದನ್ನು ಗೋವು ಎನ್ನಲಾಗದು ಎಂದಿದ್ದಾರೆ. ಅದೊಂದು ಹಾಲುಕೊಡುವ ಪ್ರಾಣಿ ಅಥವಾ ಹಾಲು ತಯಾರಿಸುವ ಯಂತ್ರ ಎನ್ನಬಹುದು!

ಈಗ ನಾವು ಕುಡಿಯುತ್ತಿರುವುದು ಗೋಕ್ಷೀರವಲ್ಲ😳

ಆಚಾರ್ಯರು "ಎಂಟು" ಪ್ರಾಣಿಗಳ ಹಾಲಿನ ಗುಣದ ಬಗ್ಗೆ ಹೇಳಿದ್ದಾರೆ, ಆದರೆ ಇಂದು ಹಸು ಎಂದು ನಾವು ಕರೆಯುತ್ತಿರುವ ಗೋವಿನಾಕಾರದ ಪ್ರಾಣಿಯ ಲಕ್ಷಣ ಮತ್ತು ಇದರ ಹಾಲಿನ ಗುಣದ ಬಗ್ಗೆ ಎಲ್ಲಿಯೂ ಹೇಳಿಲ್ಲ!! ಇದು ಹಾಲು ತಯಾರಿಸುವ ಕೃತಕ ಯಂತ್ರವಾಗಿದೆ.

🔜 ಇರಲಿ ಈ ಯಾಂತ್ರಿಕ ಹಾಲಿನ ಬಗೆಗಿನ ವಿಚಾರ ಮತ್ತು ಏಕೆ ಹಾಲನ್ನು ವಿಷ ಎನ್ನುತ್ತಿದ್ದಾರೆ? ಮುಂದೆ ನೋಡೋಣ.
ನಾಳೆ ಎಲ್ಲಾ ಎಂಟು ಪ್ರಾಣಿಗಳ ಹಾಲಿನ ಉಪಯೋಗಗಳನ್ನು ನೋಡೋಣ.

🙏🙏ಧನ್ಯವಾದಗಳು 🙏🙏
•••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline