✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday 8 February 2021

ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.

🙏ಅಮೃತಾತ್ಮರೇ ನಮಸ್ಕಾರ 🙏
 🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
09.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-16
••••••••••••••
✍️: ಇಂದಿನ ವಿಷಯ:
ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.
•••••••••••••••••••••••••••••••••••••••••

📜 ನಾರಿಕೇಳೋದಕಂ ಸ್ನಿಗ್ಧಂ ಸ್ವಾದು ವೃಷ್ಯಂ ಹಿಮಂ ಲಘು |
ತೃಷ್ಣಾ, ಪಿತ್ತ-ಅನಿಲ ಹರಂ, ದೀಪನಂ ಬಸ್ತಿಶೋಧನಮ್ ||19||
- ಅಷ್ಟಾಂಗ ಸೂತ್ರಸ್ಥಾನ, ಅಧ್ಯಾಯ-5

🍃 ಎಳೆನೀರು ತಂಪು ಉಂಟುಮಾಡುತ್ತದೆ, ಆದರೂ ಅಗ್ನಿಮಾಂದ್ಯವಲ್ಲ ಹಾಗಾಗಿ ಕಫ ನೆಗಡಿ ಉಂಟುಮಾಡದು. 

🍃 ದುಃಖ, ನೋವುಗಳಲ್ಲಿ ಮನ ನೊಂದಾಗ, ಬಿಸಿಲಿಗೆ ಬಾಯಾರಿ ಬಳಲಿ ಬಂದಾಗ, ಪಿತ್ತದಿಂದಾದ ಉರಿಶೀತ, ಎದೆಯುರಿ, ಅತ್ಯಂತ ಆಯಾಸ(ಸಾದ), ಪಿತ್ತಾಜೀರ್ಣ, ಹುಳಿವಾಂತಿ, ತಲೆ ಸುತ್ತು ಇದ್ದಾಗ ಕೊಡಲೇಬೇಕಾದ ಆಹಾರರೂಪೀ ಔಷಧ.

🍃 ಮೂತ್ರಉರಿ, ರಕ್ತಮೂತ್ರ,  ಮೂತ್ರಕೋಶದ‌ಲ್ಲಿ ನೋವು, ಮೈಉರಿ ಮುಂತಾದ ಪಿತ್ತ-ವಾತ-ರಜೋ ವೃದ್ಧಿಗಳಲ್ಲಿ ಎಳೆನೀರು ಶ್ರೇಷ್ಠ.

🍃 ಆಮ್ಲಪಿತ್ತದಲ್ಲಿ ಆ್ಯಸಿಡ್ ಹೆಚ್ಚಾದ ಪರಿಣಾಮ ಉಂಟಾದ "ಅಕ್ಷುಧಾ" ನಿವಾರಿಸಿ "ಹಸಿವನ್ನು ಹೆಚ್ಚಿಸುತ್ತದೆ."

🍃 ಎಳೆನೀರು ಪುರುಷತ್ವವನ್ನು ವರ್ಧಿಸುತ್ತದೆ. ‌ಅತಿಯಾಗಿ ಬಳಸದಿದ್ದರೆ *ಓಜಸ್ಸನ್ನೂ- ತೇಜಸ್ಸನ್ನೂ(ಮನೋ-ಶರೀರ ಕಾಂತಿ) ವರ್ಧಿಸುತ್ತದೆ.

🍃 ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶಗಳಲ್ಲಿ ಶೇಖರಣೆಗೊಂಡ ನಿರುಪಯುಕ್ತ ಮತ್ತು ರೋಗಕಾರಕ ಅಂಶಗಳನ್ನು ಹೊರಹಾಕುತ್ತದೆ.

ಇದು ಬಹಳ ಜನರಿಗೆ ಗೊತ್ತಿದೆ ಆದರೆ..... ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ
ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.

🤔 ಏನು ಮಾಡುತ್ತಿದ್ದೇವೆ....?
◆ ಎಷ್ಟೋ ದಿನಗಳ ಹಿಂದೆ ಸಿದ್ಧಪಡಿಸಿ ಪ್ಯಾಕ್ ಮಾಡಿ ಇಟ್ಟದ್ದು 
◆ ಬೀದಿಯಲ್ಲಿ ಬಿಸಿಲಿಗೆ ಇಟ್ಟದ್ದು
◆ ಕೆತ್ತಿಸಿ ಮನೆಗೆ ತಂದು ಎರೆಡು ದಿನ ಇಟ್ಟದ್ದು
◆ ಕೆತ್ತದೇ ಇದ್ದರೂ, ಮರದಿಂದ ಕಿತ್ತು ಮೂರು ದಿನ ಇಟ್ಟದ್ದು
◆ ಎಳೆನೀರು ತೆಗೆದು ಫ್ರಿಜ್ ನಲ್ಲಿಟ್ಟದ್ದು
◆ ಎಳೆನೀರಿಗೆ ಉಪ್ಪು, ಸಕ್ಕರೆ, ಒ.ಆರ್.ಎಸ್ ಹಾಕಿದ್ದು
◆ ಒಳ್ಳೆಯದೆಂದು ನಿತ್ಯವೂ ಅನಿಯಂತ್ರಿತವಾಗಿ ಸೇವಿಸುವುದು
◆ ಎಳೆನೀರಿನ ಖಾದ್ಯ ತಯಾರಿಸುವುದು.... ಇವುಗಳು ಎಳೆನೀರಿನ ಲಾಭವನ್ನು ಅತ್ಯಂತ ಕ್ಷೀಣವಾಗಿಸುತ್ತವೆ ಅಥವಾ ಇಲ್ಲವಾಗಿಸುತ್ತವೆ ಮತ್ತು ವ್ಯತಿರಿಕ್ತ ಪರಿಣಾಮವನ್ನೂ ಬೀರುತ್ತವೆ. 

🚫 ಪ್ರಧಾನವಾಗಿ, ಹೆಚ್ಚಿನ ಜನ ಮಾಡುವ ತಪ್ಪು- ★ ಬಿಸಿಲಲ್ಲಿ ಇಟ್ಟ ಕಾಯಿ ಮತ್ತು ನೆರಳಿನಲ್ಲಿ ಎರೆಡು ಮೂರು ದಿನ ಇಟ್ಟ ಕಾಯಿಯ ನೀರನ್ನು ಬಳಕೆ ಮಾಡುವುದನ್ನು ಬಿಡಬೇಕು.

★ ಎಳೆ ನೀರಿನ ನಂತರ ಗಂಜಿ ಅತ್ಯಂತ ತೆಳುವಾಗಿದ್ದರೆ ಸೇವಿಸಬೇಕು, ಅದು ಎಳೆನೀರಿಗೆ ಸಮ, ಅದೇ ದಪ್ಪ ಕೊಬ್ಬರಿಯಾಗಿದ್ದರೆ, ಬರೀ ನೀರನ್ನು ಕುಡಿದು ಕೊಬ್ಬರಿ ಬಿಡಬೇಕು.

🛎 ವಿಶೇಷ ಸೂಚನೆ:
🔺 ವಿಶೇಷವಾಗಿ ಹಸಿದಾಗ ಎಳೆನೀರು ಸೇವನೆ ಮಾಡಬಾರದು ಇದರಿಂದ ಮತ್ತಷ್ಟು ಹಸಿವೆ ಹಚ್ಚಿ ಸಂಕಟವಾಗುತ್ತದೆ.
🔺 ಅತಿಯಾಗಿ ಅಂದರೆ ನಿತ್ಯವೂ ಸೇವಿಸುವ ಎಳೆನೀರು ಆರೋಗ್ಯಕರವಲ್ಲ.
🔺ರೋಗದಿಂದ ಬಳಲಿಕೆ, ಬಾಯಾರಿಕೆ, ಬಿಸಿಲಿನಿಂದ ಬಳಲಿದಾಗ ಎಳೆನೀರು ಸೂಕ್ತ.

👁‍🗨 ತಪ್ಪು ಬಳಸಿದರೆ ಏನಾಗುತ್ತದೆ.....?
👁‍🗨 ಅತಿಯಾಗಿ ಬಳಸಿದರೆ ಏನಾಗುತ್ತದೆ?
👉 ದೇಹದಲ್ಲಿ ಉಷ್ಣ ತಡೆಯುವ ಬದಲು ಏರುತ್ತದೆ
👉 ಪಿತ್ತ ಹೆಚ್ಚುತ್ತದೆ
👉  ಶರೀರದಲ್ಲಿ ಜಲ ಸಂಚಯವಾಗುತ್ತದೆ
 ಮತ್ತು
👉 ಇದು ಆರೋಗ್ಯಕರವಲ್ಲ.

🤔 ಏನು ಆಗಬೇಕು.....?
★ ಆಗ ತಾನೇ ಮರದಿಂದ ತೆಗೆದ ಮತ್ತು  ಎಳೆಯದಾಗಿರುವ ಕಾಯಿಯನ್ನು ಸೇವಿಸಬೇಕು.
★ ಏನನ್ನೂ ಬೆರೆಸಬಾರದು.
★  ಬಿಸಿಲಿನಿಂದ ಬಳಲಿಕೆಯಾದಾಗ ಮಾತ್ರ ಬಳಸಿ.

👩‍🔬 ಎಳೆನೀರ ಪರೀಕ್ಷೆ: 
✔️ ಎಳೇಕಾಯಿ ಮುಟ್ಟಿದರೆ ಮಕ್ಕಳ ಚರ್ಮದಂತೆ ನುಣುಪಾಗಿಯೂ,
✔️ ಅಲ್ಲಾಡಿಸಿದರೆ ನೀರು ಶಬ್ದಮಾಡದೆಯೂ,
✔️ ಭಾರವಾಗಿಯೂ, 
✔️ ಆದರೆ ನೀರಿನಲ್ಲಿ ಹಾಕಿದರೆ ತೇಲುತ್ತಲೂ ಇರುತ್ತದೆ.
ಈ ನಾಲ್ಕು ಗುಣ ಇಲ್ಲದೇ ಇದ್ದರೆ ಅದರಲ್ಲಿ ದೋಷ ಇದೆ ಎಂದು ತಿಳಿದು ತ್ಯಜಿಸಬೇಕು.
       ✡ಧನ್ಯವಾದಗಳು ✡
•••••••••••••
By
ಹೆಚ್.ಬಿ ಮೇಟಿ

2 comments:

MATHS TIME LINE

MATHS TIME LINE https://mathigon.org/timeline