✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Saturday, 20 February 2021

ಫ್ರುಟ್ ಮಿಲ್ಕ್-ಶೇಕ್ (ಹಾಲನ್ನು ಸೇರಿಸಿದ ಹಣ್ಣಿನ ರಸ) ಯೋಗ್ಯವೋ ಅಯೋಗ್ಯವೋ?

🙏ಅಮೃತಾತ್ಮರೇ ನಮಸ್ಕಾರ 🙏
🍒ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍒
   🍃ಸ್ವಾಸ್ಥ್ಯ ಸರ್ವರದ್ದೂ ಆಗಲಿ🍃
••••••••••••••••••••••••••••••••••••••••••
21.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-28
••••••••••••••
✍️: ಇಂದಿನ ವಿಷಯ:
             🍎🍏🍓🍈🥭
ಫ್ರುಟ್ ಮಿಲ್ಕ್-ಶೇಕ್ (ಹಾಲನ್ನು ಸೇರಿಸಿದ ಹಣ್ಣಿನ ರಸ) ಯೋಗ್ಯವೋ ಅಯೋಗ್ಯವೋ?
•••••••••••••••••••••••••••••••••••••••••

📜 ವಿರುದ್ಧಂ ಆಮ್ಲಂ ಪಯಸಾ.....ಸರ್ವ ಫಲಂ....|
-ಅಷ್ಟಾಂಗ ಹೃದಯ ಸೂತ್ರಸ್ಥಾನ-7/3,
 ಅನ್ನರಕ್ಷ ಅಧ್ಯಾಯ

🍒 ಸರ್ವ ಫಲಗಳೂ ಪ್ರಾಯಶಃ ಹುಳಿಯಾಗಿರುತ್ತವೆ, ಆಮ್ಲವೇ ಅದರ ಸಂರಕ್ಷಕ ದ್ರವ್ಯ(preservative). ಯಾವುದೇ ಹಣ್ಣುಗಳನ್ನು ಹಾಲಿನೊಡನೆ ಮಿಶ್ರಮಾಡಿ ಸೇವಿಸಿದರೆ ಉದರದಲ್ಲಿ ಹಾಲು ಒಡೆದು ಹೋಗಿ ಕೆಡುತ್ತದೆ, ಹಾಗಾಗಿ ವಿರುದ್ಧವು, ಸೇವನೆಗೆ ಯೋಗ್ಯವಲ್ಲ. 


🍏 ಮಿಲ್ಕ್‌ಶೇಕ್ ಕುಡಿದ ನಂತರ ಉದರದಲ್ಲಿ ಒಡೆದ ಹಾಲು ಮೊಸರಿನ ಗುಣವನ್ನೂ ಪಡೆಯುವುದಿಲ್ಲ. ಅದನ್ನು ಕಿಲಾಟ(ಪನ್ನೀರು ಅಥವಾ ಗಿಣ್ಣ) ಎನ್ನುತ್ತೇವೆ, ಅದು ಸೇವನೆಗೆ ಯೋಗ್ಯವಲ್ಲ. 

📜 ಕಿಲಾಟಃ ಬಲ್ಯಃ............ ವಿಷ್ಟಂಭಿ ಗುರು ದೋಷಲಾಃ||
-ಅ.ಹೃ.ಸೂತ್ರ, 5/41
ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.

"ಪನ್ನೀರು ಅಥವಾ ಗಿಣ್ಣ" ಮೂರೂ ದೋಷಗಳನ್ನು ಪ್ರಕೋಪ ಮಾಡುತ್ತದೆ, (ಅತ್ಯಂತ ಶ್ರೇಷ್ಠ ಹಸಿವನ್ನು ಹೊಂದಿದ ಮತ್ತು ಹೆಚ್ಚು ಶಾರೀರಿಕ ಶ್ರಮವಹಿಸಿ ದುಡಿಯುವವರಿಗೆ ಮಾತ್ರ ಇವು ಜೀರ್ಣವಾಗಬಲ್ಲವು.) ಆದರೆ ಅವರಿಗೂ ಹಾಲನ್ನು ಸೇರಿಸಿದ ಹಣ್ಣಿನ ರಸ ಒಳ್ಳೆಯದಲ್ಲ.

🍑 ಏನು ತೊಂದರೆ:
◆ ಅಶುದ್ಧ ರಕ್ತ ಹೆಚ್ಚಿ ರಕ್ತಪಿತ್ತ ಎಂಬ ಕಷ್ಟತಮ ಕಾಯಿಲೆ ಬರುತ್ತದೆ, ಇದನ್ನು ಬಿ.ಪಿ ಎನ್ನಬಹುದು. ಮುಂದೊಮ್ಮೆ ಹೃದ್ರೋಗ, ಪಾರ್ಶ್ವವಾಯು ಮುಂತಾದ ತೊಂದರೆಗಳ ಆರಂಭ ಹಾಲು-ಹಣ್ಣುಗಳಲ್ಲಿದೆ !!

◆ ಒಡೆದ ಹಾಲು ಪೋಷಣೆ ಮಾಡುವ ಬದಲು ರಕ್ತದಲ್ಲಿ ಯುರಿಕ್ ಆಮ್ಲ(uric acid) ಹೆಚ್ಚಿಸಿ, ಗೌಟ್(gout) ಎಂಬ ಲಿಗಮೆಂಟ್ ಆಧಾರಿತ ಸಂಧಿಗತ ರೋಗಗಳನ್ನು (ಈಗ ಬಹುತೇಕರಲ್ಲಿ ಸಣ್ಣ ಪೆಟ್ಟಿಗೂ ಲಿಗಮೆಂಟ್ ಟಿಯರ್ ಆಗುತ್ತಿರುವುದಕ್ಕೆ ಇದೂ ಒಂದು ಕಾರಣ) ಮತ್ತು ಮಜ್ಜೆಯನ್ನು ಕೆಡಿಸುವ ಗಂಭೀರ ಸಂಧಿರೋಗ ತರುತ್ತದೆ. ಇದನ್ನು *ವಾತರಕ್ತ* 
ಎನ್ನುತ್ತೇವೆ.

◆ ರಕ್ತಪಿತ್ತವು ರಕ್ತವನ್ನೂ ಮತ್ತು ವಾತರಕ್ತವು ಪರಿಚಲನೆಯನ್ನೂ ಹಾನಿಗೊಳಿಸಿ ಆಹಾರ ಕಣಗಳು ಜೀವಕೋಶಗಳನ್ನು ತಲುಪದಂತೆ ತಡೆದು ಅವುಗಳನ್ನು ನಿರ್ಬಲಗೊಳಿಸುತ್ತದೆ, ಆದಕಾರಣ ಬೇಗ ರೋಗಕ್ಕೆ ತುತ್ತಾಗುತ್ತವೆ. ಹಾಗೆಯೇ ಜೀವಕೋಶಗಳಲ್ಲಿ ಉಂಟಾಗುವ ಕಲ್ಮಶವೂ ಹೊರಹೋಗದೇ ಅವು ಗರವಿಷ(slow poison) ಭಾವವನ್ನು ಪಡೆಯುತ್ತವೆ. ಈ ಗರವಿಷವೇ ಮುಂದೆ ಬಹುದೊಡ್ಡ ಕಾಯಿಲೆಗಳನ್ನು ತಂದು ದೇಹನಾಶ ಮಾಡುತ್ತದೆ.

🍇 ಈಗ ಮಾಡುತ್ತಿರುವ ತಪ್ಪು:
ಪನ್ನೀರು, ಕೊಲೆಸ್ಟ್ರಮ್ ಒಳ್ಳೆಯದು ಬಹಳ ಶಕ್ತಿ ಇದೆ ಎಂದು, ಶಕ್ತಿಯನ್ನು ರಾಸಾಯನಿಕ ಮತ್ತು ಅದರ ಕ್ಯಾಲೋರಿಯಿಂದ ಅಳೆದು ತಿನ್ನಲು ಹೇಳುತ್ತಿರುವುದು ಜನ ವಿಜ್ಞಾನ ಎಂದು ನಂಬಿ ಸೇವಿಸಿ ತೊಂದರೆಗಳಿಂದ ನಿತ್ಯ ಔಷಧ ಸೇವಿಸುತ್ತಿರುವುದು.

🥑 ಸಾಮಾನ್ಯ ಲಕ್ಷಣಗಳು:
ಕಿಲಾಟದ ಅಂಶ ಹೊರಹೋಗಲು ಕೆಲ  ಸಾಮಾನ್ಯ ಲಕ್ಷಣಗಳು ಉಂಟಾಗುತ್ತವೆ- ಕೆಲವರಿಗೆ ಶೀತ, ಕೆಲವರಿಗೆ ಚರ್ಮದ ಅಲರ್ಜಿ ಮತ್ತೆ ಕೆಲವರಿಗೆ ಮೈಭಾರ ಆಗುತ್ತದೆ. ಈ
ಎಲ್ಲಾ ಲಕ್ಷಣಗಳೂ ಕಿಲಾಟ ರಕ್ತದಲ್ಲಿರುವುದರ ಸೂಚನೆ.
(ಉದಾ: ಗಿಣ್ಣವೂ ಕಿಲಾಟದ ಒಂದು ರೂಪ, ಗಿಣ್ಣ ತಿಂದಾಗ ಭಾರ, ಶೀತ, ಚರ್ಮದ ಅಲರ್ಜಿ ಬರುವುದು ಇದೇ ಕಾರಣಕ್ಕೆ)

🥝 ಪರಿಹಾರ ಏನು?
• ನಿದಾನ ಪರಿಮಾರ್ಜನ- ಹಾಲು ಹಣ್ಣು ಜೊತೆಗೆ ಸೇವಿಸುವುದನ್ನು ನಿಲ್ಲಿಸಿ.
• ಹಣ್ಣನ್ನು ಕಚ್ಚಿ ತಿನ್ನಿ , ರಸಸೇವನೆ ಬೇಡ.
• ಒಂದು ವೇಳೆ ಅನಿವಾರ್ಯವಾಗಿ, ಬಿಸಿಲಿನಿಂದ ಅತ್ಯಂತ ಬಾಯಾರಿಕೆ ಆದಾಗ, ಶಕ್ತಿಹ್ರಾಸದಲ್ಲಿ ಮಿಲ್ಕ್ ಶೇಕ್ ಕುಡಿದ ನಂತರ ಚರ್ಮದ, ಶೀತದ... ಲಕ್ಷಣಗಳು ಬಂದರೆ ತಪ್ಪದೇ ಬಿಸಿನೀರು ಕುಡಿದು ವಾಂತಿ ಮಾಡಿಬಿಡಿ.

🍊 ಗಮನಿಸಿ:
• ಮಕ್ಕಳ ಉದರದಲ್ಲಿ ಯಾವುದೋ ಕಾರಣದಿಂದ ಹಾಲು ಕಿಲಾಟವಾಗಿ ಬದಲಾದರೆ, ಮಕ್ಕಳು ವಾಂತಿಮಾಡಿಬಿಡುತ್ತವೆ, ಅದನ್ನು ತಡೆಯಬಾರದು.

• ತುರ್ತು ಅವಸ್ಥೆಯಲ್ಲಿ ಶರೀರಕ್ಕೆ ಆಹಾರದ ಅಗತ್ಯ ಅತೀ ಹೆಚ್ಚು ಇದ್ದರೆ ಆಗ ಮಾತ್ರ ಸೇವಿಸಿರುವ ಮಿಲ್ಕ್‌ಶೇಕ್ ಹೆಚ್ಚಿನ ತೊಂದರೆ ಮಾಡುವುದಿಲ್ಲ, ಆದರೆ ನಿತ್ಯ ಸೇವನೆ ಸರ್ವದಾ ನಿಶಿದ್ಧ.
          🙏ಧನ್ಯವಾದಗಳು 🙏
•••••••••
By 
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline