✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday 24 February 2021

✍️: *ಆಧುನಿಕ ವಿಜ್ಞಾನ ಮೊಳಕೆ ಕಾಳನ್ನು ಶ್ರೇಷ್ಠ ಎಂದು ಹೇಳಿದರೆ ; ಆಯುರ್ವೇದ ತಿನ್ನಬೇಡಿ ಎನ್ನುತ್ತದೆ!!*

🙏ಅಮೃತಾತ್ಮರೇ ನಮಸ್ಕಾರ 🙏
🙂ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🙂
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
25.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ- 31
••••••••••••••
✍️: ಇಂದಿನ ವಿಷಯ:
*ಆಧುನಿಕ ವಿಜ್ಞಾನ ಮೊಳಕೆ ಕಾಳನ್ನು ಶ್ರೇಷ್ಠ ಎಂದು ಹೇಳಿದರೆ ; ಆಯುರ್ವೇದ ತಿನ್ನಬೇಡಿ ಎನ್ನುತ್ತದೆ!!*
•••••••••••••••••••••••••••••••••••••••••


ಆತ್ಮೀಯರೇ,
🤔 ಬಹಳಷ್ಟು ಓದುಗರು ಕೇಳಿದ್ದಾರೆ,
 ಮೊಳಕೆ ಕಾಳುಗಳನ್ನು ತಿನ್ನುವುದು ಅನಾರೋಗ್ಯಕರವೇ? ಎಂದು,

★ ಇಲ್ಲ, ಅನಾರೋಗ್ಯಕರವಲ್ಲ.
ಆದರೆ,
ಮೊಳಕೆ ಕಾಳುಗಳನ್ನು ತಯಾರಿಸುವ ಮತ್ತು ತಿನ್ನುವ ವಿಧಾನ ಭಿನ್ನವಾಗಿದೆ. ಅದನ್ನು ಇಂದಿನ ಸಂಚಿಕೆಯಲ್ಲಿ ನೋಡೋಣ👇

 🔅 ವಿರೂಢಕ ಎಂದರೆ ಮೊಳಕೆ ಬಂದವುಗಳು ಎಂದರ್ಥ.

📜 ತಿಲಪಿಣ್ಯಾಕ..... *ವಿರೂಢಕಮ್*......ದೃಘ್ನ ದೋಷಲಂ ಗ್ಲಪನಂ ಗುರು |
- ಅಷ್ಟಾಂಗ ಹೃದಯ ಸೂತ್ರ ಸ್ಥಾನ ಅಧ್ಯಾಯ-6/32-33, ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ.

ಜೀವವಿಜ್ಞಾನದಲ್ಲಿ ಕೇವಲ ರಾಸಾಯನಿಕ ದೃಷ್ಠಿ ಪೂರ್ಣ ಸತ್ಯವಲ್ಲ.

ವಿಜ್ಞಾನ ಹೇಳುವ ಶ್ರೇಷ್ಠ ರಾಸಾಯನಿಕಗಳು ಮೊಳಕೆಕಾಳುಗಳಲ್ಲಿರುವುದು ಸತ್ಯ, ಆದರೆ ನಮ್ಮ ಆಂತರಿಕ ಜೈವಿಕ ಪ್ರಕ್ರಿಯೆಗಳ ಪರಿಣಾಮವನ್ನು ಆಯುರ್ವೇದ ಮಾತ್ರ ಸ್ಪಷ್ಟಪಡಿಸಿದೆ.

🤔 ಹೇಗೆ ಉಪಯೋಗಿಸುವುದು?
✍ *ಅಂಕುರಿತ ಸಸ್ಯಂ-ವಿರೂಢಕಂ* ಎಂದಿದ್ದಾರೆ ಆಚಾರ್ಯ ಅರುಣದತ್ತರು.("ಸರ್ವಾಂಗ ಸುಂದರಿ" ವ್ಯಾಖ್ಯಾನ ಗ್ರಂಥ)

ಅಂದರೆ, ದೊಡ್ಡ ದೊಡ್ಡ ಮೊಳಕೆಗಳು ಬಂದ ಧಾನ್ಯಗಳನ್ನು ಸಸ್ಯಗಳೆಂದು ಪರಿಗಣಿಸಿ, ಅಂತಹ ಮೊಳಕೆಗಳನ್ನು ತ್ಯಜಿಸಲೇಬೇಕು. ಅವುಗಳನ್ನು ತಿಂದರೆ ಒರಟಾಗಿ, ರಸಹೀನ ಅಥವಾ ಸ್ವಾದ ಇಲ್ಲದಂತೆ ಆಗಿರುತ್ತದೆ. ಇದನ್ನು ಕೊಬ್ಬೇರುವುದು ಎಂದು ಕರೆಯುತ್ತಾರೆ. ಇದು ನಿಃಸಂಶಯವಾಗಿ ತ್ರಿದೋಷಕರ ಮತ್ತು ಹಾನಿಕರ.

👇 ಮೊಳಕೆ ಬರಿಸುವ ವಿಧಾನ:
ಒಂದೇ ದಿನ ನೆನೆಸಿಟ್ಟು ಅತೀ ಪುಟ್ಟ ಮೊಳಕೆ ಬಂದ ಕಾಳುಗಳನ್ನು ಬಳಸಬಹುದು.

🤔 ಏಕೆ ಮೊಳಕೆ ಬರಿಸಬೇಕು?
✍ ಇದು ಮಾನವನ ಬುದ್ಧಿವಂತಿಕೆ.
ಧಾನ್ಯಗಳು ತಮ್ಮಲ್ಲಿ ಮೊಳಕೆ ಆರಂಭವಾದೊಡನೇ ತಮ್ಮ ಶಕ್ತಿಯನ್ನು ರಸದ ರೂಪದಲ್ಲಿ ಬಿಡುಗಡೆಗೊಳಿಸುವವು, ಏಕೆಂದರೆ  ತನ್ನ ಮಗು ಗಿಡ-ಬಳ್ಳಿ-ಮರವಾಗಿ ಬೆಳೆಯಲು ಆರಂಭಿಸಿರುವುದು, ಅದು ತಾನೇ ಸ್ವತಃ ಬೇರು ಬಿಡುವವರೆಗೆ ಈ ಧಾನ್ಯದಲ್ಲಿರುವ ಶಕ್ತಿಯೇ ತಾಯಿಯ ಎದೆಹಾಲಿನಂತೆ ಪೋಷಿಸುತ್ತದೆ. ಒಂದೊಮ್ಮೆ ಬೇರುಬಿಟ್ಟು, ಪೋಷಕಾಂಶಗಳನ್ನು ಹೀರಿ, ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಕೆ ಆರಂಭ ಮಾಡಿದರೆ, ಅದುವರೆಗೆ ಎಲೆಯಂತೆ ಕೆಲಸ ಮಾಡಿದ್ದ ಈ ಧಾನ್ಯ ಒಣಗಿ ಉದುರಿಹೋಗುತ್ತದೆ.

*ಮೊಳಕೆ ಆರಂಭದಲ್ಲಿ ಅದು ತನ್ನ ಸಂತತಿಯ ಪೋಷಣೆಗೆಂದು ರಸರೂಪಕ್ಕೆ ತಿರುಗಿದಾಗ ನಾವು ಬಳಸಿಕೊಳ್ಳುವುದು ಮಾನವನ ಬುದ್ಧಿವಂತಿಕೆ. (ಉದಾ: ಕರುವನ್ನು ಕೆಚ್ಚಲಿಗೆ ಬಿಟ್ಟು ಹಸು ಹಾಲನ್ನು ಮೊಲೆಗೆ ಇಳಿಸಿದ ತಕ್ಷಣ ಕರುವನ್ನು ಕಟ್ಟಿಹಾಕಿ ಹಾಲುಪಡೆದಂತೆ)*

🤔 ಪುಟ್ಟ ಮೊಳಕೆ ಬಂದ ನಂತರ ಏನುಮಾಡಬೇಕು?
✍ ಅದರಲ್ಲಿರುವ ಎರೆಡು ಹಾನಿಕಾರಕ ಅಂಶಗಳನ್ನು ತೆಗೆಯಬೇಕು.
1) ಸಿಪ್ಪೆ ತೆಗೆಯಬೇಕು- ತನ್ನ ಸಂತತಿ ಜೀವಾಂಕುರವಾಗಿ ಮೊಳಕೆಯಾದಾಗ, ಅದರ ಆಹಾರವನ್ನು ಯಾವಪ್ರಾಣಿಯೂ ಕಸಿದುಕೊಳ್ಳಬಾರದೆಂದು ಸಸ್ಯ ಸೃಷ್ಟಿಸಿದ *ವಿಷಯುಕ್ತ ಗಾಢ ಪ್ರೋಟೀನ್ ಪೊರೆಯೇ ಸಿಪ್ಪೆ.* 
ವಿಚಿತ್ರ ಎಂದರೆ ಈ ಗಾಢವಾದ ಪ್ರೋಟೀನ್ ಅನ್ನೇ ಆಧುನಿಕ ವಿಜ್ಞಾನ ಹೆಚ್ಚು ಪೋಷಕಾಂಶ ಉಳ್ಳದ್ದೆಂದು ತನ್ನ ರಾಸಾಯನಿಕ ದೃಷ್ಟಿಯಿಂದ ವಿಷದೀಕರಿಸಿದೆ!!, ಆದುದರಿಂದ ಬಳಕೆಗೆ ಮೊದಲು ಯಾವುದೇ ಕಾಳಿನ ಸಿಪ್ಪೆ ತೆಗೆಯಲೇಬೇಕು, ಇದು ಎಲ್ಲಾ ಪ್ರಾಣಿಗಳಿಗೂ ಹಾನಿಮಾಡುತ್ತದೆ. 
ಇರುವೆ ಮುಂತಾದ ಜೀವಿಗಳು ಸಿಪ್ಪೆ ಬಿಟ್ಟು ಕಾಳನ್ನು ಮಾತ್ರ ತಿನ್ನುವುದು ಇದೇ ಕಾರಣಕ್ಕೆ.
 ಇದು ಪಕ್ಷಿಗಳಿಗೆ ಅನ್ವಯಿಸದು ಏಕೆಂದರೆ ಅವುಗಳ ಕರುಳಿಗೆ ಹೊಂದಿಕೊಂಡಂತೆ gizzard ಎಂಬ ಕಲ್ಲನ್ನೇ ಕರಗಿಸುವ ಬಲವಾದ ಅಂಗ ಇರುತ್ತದೆ, ಅದು ಕಲ್ಲನ್ನೂ ಸೇರಿ ಎಲ್ಲವನ್ನೂ ಕರಗಿಸಿಬಿಡುತ್ತದೆ. ಮಾನವನಿಗೆ ಈ ವ್ಯವಸ್ಥೆ ಇಲ್ಲ.

2) ಮೊಳಕೆ ತೆಗೆಯಬೇಕು-
ಗಿಡಮರಗಳಿಗೆ ಮೊಳಕೆಯೇ ನಿಜವಾದ ಸಂತತಿ, ಅದರ ಶಕ್ತಿಯ ಸಣ್ಣ ಅಂದಾಜು ನಮಗೆಲ್ಲಾ ಇದೆ. 
ಮೊಳಕೆಯ ತುದಿಯಲ್ಲಿ Root cap ಹೆಸರಿನ ಎಂತಹ ಕಲ್ಲನ್ನೂ ಸೀಳಿ ಆಳಕ್ಕೆ ಇಳಿಯುವ ಶಕ್ತಿ ಇರುವ ಪ್ರೋಟೀನ್ನಿನ ಅತ್ಯಂತ ಗಾಢ ಪೊರೆ!! ಇದೆ. ರಾಸಾಯನಿಕ ದೃಷ್ಟಿಯಿಂದ ಇದೂ ಸಹ ಪ್ರೋಟೀನ್ ಸಂವೃದ್ಧ ಅಂಶ!! 
Root cap ಬಿಟ್ಟು ಉಳಿದ ಮೊಳಕೆ ಅಂಶವೂ ಸಹ ಪ್ರೋಟೀನ್ ಮತ್ತು ಕರಗದ ನಾರಿರುವ ಪದಾರ್ಥ, ಇಂದು ನಾರಿರುವ ಪದಾರ್ಥ ತಿಂದರೆ ಬೇಧಿ ಸರಿಯಾಗಿ ಆಗುತ್ತದೆ ಎಂದು ಅತಿಹೆಚ್ಚು ನಾರುತಿನ್ನುವ ರೂಢಿ ಹಾಕಿಕೊಂಡಿದ್ದೇವೆ!!
(ಮಲಬದ್ಧತೆ ನಿವಾರಣೆಗೆ ನಾರು ಪದಾರ್ಥ ಸೇವನೆ ನಿಜವಾದ ಪರಿಹಾರವೇ ಅಲ್ಲ! ಇದನ್ನು ನಾಳೆ ನೋಡೋಣ).

🤔 ಸೇವಿಸಿದರೆ ಹಾನಿ ಏನು?
✍ ನಮ್ಮ ಕರುಳಿನಲ್ಲಿ ಜೀರ್ಣವಾಗಿ ಶಕ್ತಿಕೊಡುವ ವಸ್ತುವನ್ನು ಮಾತ್ರ ಆಹಾರವೆನ್ನುತ್ತದೆ ಆಯುರ್ವೇದ. ಕಾಳುಗಳ ಸಿಪ್ಪೆ & ಮೊಳಕೆ ಎರಡೂ ಜೀರ್ಣವಾಗಲು ಕರುಳಿನಲ್ಲಿ ಗ್ಯಾಸ್ ಉತ್ಪತ್ತಿಮಾಡಿ ವಿಭಜನೆಗೊಳ್ಳುತ್ತವೆ. ಮೊಳಕೆ ತಿಂದಾಗ ಗ್ಯಾಸ್ ಉತ್ಪತ್ತಿಯಾಗುವುದು ಎಲ್ಲರ ಗಮನಕ್ಕೆ ಬರುತ್ತದೆ. 
*ಈ ವಾಯುವು ನಾವು ಸೇವಿಸಿದ ಆಹಾರವನ್ನು ಸ್ವಮಾರ್ಗದಿಂದ ಅನ್ಯಮಾರ್ಗಕ್ಕೆ ತಳ್ಳಿ ನಿಧಾನಗತಿಯಲ್ಲಿ ಗರವಿಷದಂತೆ ಮಹಾನ್ ವ್ಯಾಧಿಗಳಿಗೆ ಕಾರಣವಾಗುತ್ತದೆ.* ಅದ್ದರಿಂದಲೇ ಆಚಾರ್ಯರು *ದೋಷಲಂ*(ತ್ರಿದೋಷಕಾರಕ) ಎಂದಿದ್ದಾರೆ.

🤔 ಸೇವನಾ ಪೂರ್ವ ಸಂಸ್ಕಾರ ಹೇಗೆ?
✍ ಸಿಪ್ಪೆ-ಮೊಳಕೆ ತೆಗೆದ ಕಾಳನ್ನು ಚನ್ನಾಗಿ ಬೇಯಿಸಿ, ಎಣ್ಣೆ ಅಥವಾ ತುಪ್ಪದಿಂದ ಸಂಸ್ಕರಿಸಬೇಕು,  ಇದರಿಂದ ಮಾತ್ರ ಅದು ನಿಜವಾದ ಆಹಾರವಾಗಿ ತಯಾರಾಗುತ್ತದೆ ಆಗ ಸೇವಿಸಬೇಕು.

*ಆಯುರ್ವೇದ ಹೇಳಿರುವ ದ್ರವ್ಯ(ಆಹಾರ, ಔಷಧಿ) ಸಂಸ್ಕಾರಗಳು ಅತ್ಯಂತ ವೈಜ್ಞಾನಿಕ ಕಾರಣಗಳಿಂದ ಕೂಡಿವೆ. ಅವುಗಳನ್ನು ಮುಂದೆ ಸಂದರ್ಭ ಬಂದಾಗ ನೋಡೋಣ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

No comments:

Post a Comment

MATHS TIME LINE

MATHS TIME LINE https://mathigon.org/timeline