🙏ಅಮೃತಾತ್ಮರೇ ನಮಸ್ಕಾರ 🙏
😊ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ😊
ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
16.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-22
••••••••••••••
✍️: ಇಂದಿನ ವಿಷಯ:
ಈ ದಿನ,
ಧಾರೋಷ್ಣ ಹಾಲಿನ ಮಹತ್ವ, ಹಾಲು ಕಾಯಿಸುವ ವಿಧಾನ ಮತ್ತು ಕಾಯಿಸಿದ ಹಾಲಿನ ವಿವಿಧ ಗುಣ ಧರ್ಮಗಳನ್ನು ನೋಡೋಣ.
•••••••••••••••••••••••••••••••••••••••••
📜ಪಯೋ..ಅಭಿಷ್ಯಂದಿಃ.............................................................ಧಾರೋಷ್ಣಂ ಅಮೃತೋಪಮಮ್||
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/28-29
ಮತ್ತು
📜 ಅರ್ಧೋ ಅಧಿಕಂ................................................................................................ಸ್ಯಾತ್..ನಿರ್ಜಲಂ ಶೃತಂ ದ್ವಿ, ಚತುರ್ ಅಷ್ಟಾಂಶ ಶೋಷಿತಮ್|................ಬಲ್ಯತಮಂ ಪಯಃ................................ಭವೇತ್ ||
-ಖರನಾದ ಸಂಹಿತಾ ಸೂ.ಸ್ಥಾ-1(ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ)
💎 ಧಾರೋಷ್ಣ ಕ್ಷೀರ 🥛 ಎಂದರೆ-
🔸 ಧಾರಾ- ಹಸುವಿನಿಂದ ಹಾಲನ್ನು ಕರೆಯುತ್ತಿರುವಾಗ ಕ್ಷೀರ ಪಾತ್ರೆಗೆ ಬೀಳುವುದು.
🔸 ಉಷ್ಣ- ಹಸುವಿನ ಶರೀರದ ತಾಪಮಾನದಿಂದ ಕರೆಯುತ್ತಿರುವಾಗ ಬೆಚ್ಚಗಿರುವುದು.
ಧಾರೋಷ್ಣ ಕ್ಷೀರಪಾನ ಎಂದರೆ ಹಸುವಿನ ಕೆಚ್ಚಲಿನಿಂದ ಪಾತ್ರೆಗೆ ಹಾಲು ಬಂದ ತಕ್ಷಣ ಸೇವಿಸುವುದು ಎಂದರ್ಥ. ಇದು ಸರ್ವವಿಧದಿಂದಲೂ ಶ್ರೇಷ್ಠವಾಗಿದ್ದು, ಅದರ ವಿವರಣೆ ನೋಡೋಣ-
🔬 ವೈಜ್ಞಾನಿಕ ವಿವರಣೆ:
• ಹಾಲು ಗೋವಿನ ಕೆಚ್ಚಲಿನಲ್ಲಿರುವಾಗ ಯಾವುದೇ ಬ್ಯಾಕ್ಟೀರಿಯಾ ಬೆಳವಣಿಗೆ ಇರುವುದಿಲ್ಲ, ಹೊರಗೆ ಬಂದ ಹಾಲು ತಾಪಮಾನ ಕಡಿಮೆಯಾಗುವವರೆಗೆ(ಸುಮಾರು 24ನಿಮಿಷಗಳು) ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ. ನಂತರ ಹಾಲು ಕೆಡುವುದರಿಂದ ಅದನ್ನು ಕಾಯಿಸುವ ವಿಧಾನ ಬೆಳೆದಿದೆ.
• ಧಾರೋಷ್ಣ ಕ್ಷೀರದಲ್ಲಿ ಸ್ನೇಹಾಂಶ, ಜಲ, ಪ್ರೋಟೀನ್ ಮತ್ತು ಅನ್ಯ ಖನಿಜಗಳಲ್ಲಿ ಬೆರೆತು ಕರಗಿಕೊಂಡು ಇರುವ ಕಾರಣ ನಮ್ಮ ಜೀವಕೋಶಗಳಿಗೆ ಸಂಪೂರ್ಣ ಶಕ್ತಿ ಪೂರೈಕೆ ಮಾಡುತ್ತದೆ. ಪ್ರತ್ಯೇಕಗೊಂಡ ಅಂಶಗಳಿಂದ ಈ ತೆರನಾದ ಪರಿಪೂರ್ಣ ಪೋಷಣೆ ದೊರೆಯದು.
• ಗೋವಿನ ಮನಸ್ಸು ಸತ್ವಗುಣ ಸಂವೃದ್ಧವಾಗಿರುವುದರಿಂದ ಗೋದುಗ್ಧ ಸೇವನೆಯಿಂದ ನಮ್ಮ ಜೀವಕೋಶಗಳ ಸೂಕ್ಷ್ಮ ಸ್ಪಂದನೆ ಮಾನವೀಯವಾಗಿಯೂ, ಅತ್ಯಂತ ಸಾತ್ವಿಕವಾಗಿಯೂ, ಶಾಂತವಾಗಿಯೂ, ದೃಢವಾಗಿಯೂ ಇರುತ್ತದೆ. (ಎಮ್ಮೆಯ ಹಾಲೂ ಶಾಂತ ಆದರೆ ತಾಮಸಿಕವಾಗಿರುತ್ತದೆ, ಶಕ್ತಿ ಇದ್ದರೂ ಅಂಧಕಾರ, ಅಜ್ಞಾನ, ಕ್ರೌರ್ಯ, ನಿದ್ದೆ ತರುತ್ತದೆ).
🔅 ಹಸಿಯಹಾಲು-
ಹಾಲು ಕರೆದ ನಂತರ ಅರ್ಧ ಯಾಮಕಾಲ (ಅಂದರೆ-24ನಿಮಿಷ) ಕಳೆದ ಹಾಲನ್ನು ಹಸಿಹಾಲು ಎಂದು ಕರೆಯಬಹುದು. ಕಾಯಿಸದೇ ಇಟ್ಟ ಈ ಹಾಲು ಪಚನಕ್ಕೆ ಅತ್ಯಂತ ಕಷ್ಟ ಮತ್ತು
ಅಭಿಷ್ಯಂದಿ(ರೋಗಾಣುಗಳ ಕಾರಣ ಅಂಟುವ ಗುಣ) ಆಗಿರುವ ಕಾರಣ ಕುಡಿಯಲು, ಖಾದ್ಯ ತಯಾರಿಸಲೂ ಯೋಗ್ಯವಲ್ಲ. ಒಡೆದು ಪನೀರ್ ಮಾಡಲೂ ಸೂಕ್ತವಲ್ಲ.
🔅 ಕಾಯಿಸಿದ ಹಾಲು-
ಕಾಯಿಸಿ ಇಂಗಿಸುವ ಪ್ರಮಾಣದಿಂದ ಗುಣ ವ್ಯತ್ಯಾಸ ಆಗುತ್ತದೆ.
💠 ಅರ್ಧೋದಕಂ ಶೃತ- ಸಮಾರ್ಧ ಶುದ್ಧ ನೀರನ್ನು ಬೆರೆಸಿ ಕಾಯಿಸಿದ ಹಾಲು ಪಚನಕ್ಕೆ ಹಗುರವಾಗಿರುತ್ತದೆ. ನೀರು ಬೆರೆತಿದೆ ಎಂದರೆ ಶಕ್ತಿಹೀನವಲ್ಲ.
★ ಇದನ್ನು ಕಡಿಮೆ ಜೀರ್ಣಶಕ್ತಿ ಇರುವ ಜ್ವರಾದಿ ವ್ಯಾಧಿಪೀಡಿತ ಅವಸ್ಥೆಯಲ್ಲಿಯೂ,
★ ಮಕ್ಕಳಿಗೂ,
★ ವೃದ್ಧರಿಗೂ,
★ ಕಫ-ವಾತ ಹೆಚ್ಚು ಇರುವಾಗಲೂ ಕೊಡಬಹುದು.
★ ರುಮ್ಯಾಟಿಸಮ್ ನಲ್ಲಿ ಇದು ಶ್ರೇಷ್ಠ.
💠ನಿರ್ಜಲ ಶೃತ-
ನೀರನ್ನು ಬೆರೆಸದೇ ಕಾಯಿಸಿದ ಹಾಲು,
★ ಮಧ್ಯಮ ಪಚನ ಶಕ್ತಿ ಇರುವವರಿಗೂ,
★ ಮಧ್ಯವಯದವರಿಗೂ,
★ ನಿತ್ಯಸೇವನೆಗೂ ಯೋಗ್ಯ.
💠 ಅರ್ಧಾಂಶ, ಪಾದಾಂಶ, ಅಷ್ಟಾಂಶ ಶೋಷಿತ ಕ್ಷೀರ-
ನೀರು ಹಾಕದೇ ಕಾಯಿಸುತ್ತಾ ಅರ್ಧಕ್ಕೆ, ನಾಲ್ಕಂಶಕ್ಕೆ, ಎಂಟು ಅಂಶಕ್ಕೆ ಅಥವಾ ಪೂರ್ಣ ನೀರು ಹೋಗುವವರೆಗೆ ಕಾಯಿಸಿದರೆ( ಸಾರ ಮಾತ್ರ ಉಳಿಯುವ ಖೋವಾ ಮಾಡುವಂತೆ)
★ ಉತ್ತರೋತ್ತರ ಅತ್ಯಂತ ಬಲಕರ ಜೀರ್ಣಶಕ್ತಿ ಉಳ್ಳವರಿಗೂ,
★ ಹೆಚ್ಚು ಹೆಚ್ಚು ಶಾರೀರಿಕ ಶ್ರಮ ಮಾಡುವವರಿಗೂ ಶೀಘ್ರ ಬಲವನ್ನೀಯುತ್ತದೆ.
🔺 ಆದರೆ ಅಜೀರ್ಣ ಇರುವ ಅವಸ್ಥೆಯಲ್ಲಿ ಮತ್ತು ಅತ್ಯಲ್ಪ ಕೆಲಸ ಮಾಡುವವರಿಗೂ ನಿಶಿದ್ಧ.
(ಗಮನಿಸಿ: ಇಷ್ಟು ಶ್ರಮವಹಿಸಿ ದುಡಿವ ರೈತರು ಹಾಲನ್ನು ಬೆಣ್ಣೆಯನ್ನೂ ಮಾರಾಟ ಮಾಡಿ ಎಣ್ಣೆ ತಂದು ಸೇವಿಸುತ್ತಿರುವುದು ಮತ್ತು ಶಾರೀರಿಕ ಶ್ರಮವಹಿಸದೇ ದುಡಿವವರು ಖೋವಾ ತಿನ್ನುತ್ತಿರುವುದು ಇಂದಿನ ರೋಗಗಳಿಗೆ ಪ್ರಮುಖ ಕಾರಣ 🤦♂)
💠 ಕಾಯಿಸಿ ಪೂರ್ಣ ತಣ್ಣಗಾಗಿಸಿದ ಹಾಲು-
ಮನೋ ಶಾರೀರಿಕ ಆಯಾಸವನ್ನು ಶೀಘ್ರ ಪರಿಹರಿಸುತ್ತದೆ.
💠 ಕಾಯಿಸಿ ಬಿಸಿ ಇರುವ ಹಾಲು-
ಕಫ ವೃದ್ಧಿ ಮಾಡುವುದಿಲ್ಲ, ವಾತ ಶಮನ ಮಾಡುತ್ತದೆ.
📜 ಸದಾ ತು ವನಿತಾ ಏವ ಹಿತಂ ಪಯಃ |
• ಮನುಷ್ಯರಿಗೆ ಅಂದರೆ,
ಮಗುವಿಗೆ ತಾಯಿಯ ಹಾಲು ಸರ್ವಶ್ರೇಷ್ಠ. ತಾಯಿಹಾಲು ಇಲ್ಲದ ಸಂದರ್ಭಗಳಲ್ಲಿ ಅರ್ಧನೀರು ಬೆರೆಸಿ ಕಾಯಿಸಿದ ಗೋಕ್ಷೀರ ಶ್ರೇಷ್ಠ.
✡ಧನ್ಯವಾದಗಳು ✡
••••••••••••••
By
ಹೆಚ್.ಬಿ.ಮೇಟಿ
No comments:
Post a Comment