❄️ಅಮೃತಾತ್ಮರೇ ನಮಸ್ಕಾರ ❄️
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
06.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-13
••••••••••••••
✍️: ಇಂದಿನ ವಿಷಯ:
ಅಮ್ಲೀಯವಾದ ಫಿಲ್ಟರ್ ನೀರೇ ಸಿಗುತ್ತಿರುವ ಈ ಸಂಧರ್ಭದಲ್ಲಿ ರೋಗ ದೂರಮಾಡುವ ಪರಿಹಾರವೂ ಆಯುರ್ವೇದದಲ್ಲಿದೆ😊
•••••••••••••••••••••••••••••••••••••••••
ಅಚ್ಚರಿಯೇ..?
ಈ ಲೆಖನ ಮಾಲಿಕೆಯ ಓದುಗರೊಬ್ಬರು ಕೇಳಿದ್ದಾರೆ-
🗣 ಸರ್ ನಮ್ಮ ಊರಿನಲ್ಲಿ ಸರಕಾರದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದಾರೆ. ಕುಡಿಯಲು ಅ ನೀರನ್ನು ತಾಮ್ರದ ಪಾತ್ರೆಯಲ್ಲಿ ತುಂಬಿ ಅದನ್ನು ಕುಡಿಯುತ್ತೆವೆ. ಫಿಲ್ಟರ್ ಆಗಿರುವ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಳಸಬಹುದಾ? ಸರ್ ದಯಮಾಡಿ ತಮ್ಮ ಬಿಡುವಿನ ವೇಳೆಯಲ್ಲಿ ತಿಳಿಸಿ.
🙏🙏
✍ ನಮ್ಮ ಉತ್ತರ: ಖಂಡಿತಾ ಬೇಡ, ಮಣ್ಣಿನಪಾತ್ರೆಯಲ್ಲಿ ಸಂಗ್ರಹಿಸಿ.
ಮತ್ತು
🗣 ಓದುಗ ಮತ್ತೆ ಹೇಳಿದ್ದಾರೆ-
ಈ ನೀರನ್ನು ಬಳಸಿದ ನಂತರ ಗ್ರಾಮದ ಜನರಿಗೆ "ಆಮ್ಲಪಿತ್ತ" ಹೆಚ್ಚಾಗಿದೆ!!! ಎಂದು.
ಅಂದರೆ ಗ್ರಾಮದ ಜನರು, ಸೋಂಕುಗಳಿಂದ ದೂರವಾದರೂ, ಮೆಟಬಾಲಿಕ್ ಕಾಯಿಲೆಗಳಿಂದ ನರಳುತ್ತಿದ್ದಾರೆ....
🗣 ಪರ್ಯಾಯ ಉಪಾಯ ಏನು?
📜 ಕಾಮಂ ಅಲ್ಪಂ, ಅಶಕ್ತೌ, ತು ಪೇಯಂ ಔಷಧ ಸಂಸ್ಕೃತಮ್ | ಪಾಷಾಣ, ರೌಪ್ಯ, ಮೃದ್ಧೇಮಜತು ತಾಪಾರ್ಕತಾಪಿತಮ್|| ಪಾನೀಯಮುಷ್ಣಂ ಶೀತಂ ವಾ ತ್ರಿದೋಷಘ್ನಂ ತೃಟ್ ಜಿತ್ ಇತಿ|
- ಅಷ್ಟಾಂಗ ಸೂತ್ರ ಅಧ್ಯಾಯ-6
💦 ಸದ್ಯಕ್ಕೆ ದೀರ್ಘಕಾಲೀನ ಹಿತಕಾರಕ ಪರಿಹಾರವಾದ ಅಂತರ್ಜಲ ಹೆಚ್ಚಿಸುವುದು ಅಸಾಧ್ಯ.
ಹಾಗಾಗಿ,
ಸಧ್ಯಕ್ಕೆ ಸಿಗುತ್ತಿರುವ ಫಿಲ್ಟರ್ ನೀರಿಗೆ ಸುಣ್ಣದ ಕಲ್ಲನ್ನೋ, ಬೆಳ್ಳಿಯ-ಬಂಗಾರದ ತುಂಡನ್ನೋ ಚೆನ್ನಾಗಿ ಕೆಂಪಾಗುವಂತೆ ಕಾಯಿಸಿ ಒಂದು ಪಾತ್ರೆ ನೀರಿನೊಳಗೆ ಹಾಕಿ ಬಿಟ್ಟು, ಆ ನೀರು ತಿಳಿಯಾದಮೇಲೆ, ಬೆಚ್ಚಗಿರುವಂತೆ ಅಥವಾ ತಣ್ಣಗಾದಮೇಲೆ ಕುಡಿಯುವುದು ಶ್ರೇಯಸ್ಕರ
ಅಥವಾ,
ಜೈನ ಮುನಿಗಳು ಮಾಡುವಂತೆ- ಅರ್ಧ ಲೀಟರ್ ನೀರಿನಲ್ಲಿ ಅರ್ಧ ಗ್ರಾಂ ಸುಣ್ಣ ಕರಗಿಸಿಡಿ, ಒಂದಿಡೀ ದಿನದಲ್ಲಿ ಬೇಕೆನಿಸಿದಾಗ ಕುಡಿಯಲು ಬಳಸಿ.
👩🔬 ವೈಜ್ಞಾನಿಕ ವಿವರಣೆ ಏನು?
ನೀರಿಗೆ ಕಾಯಿಸಿದ ಶುದ್ಧ ಸುಣ್ಣದ ಕಲ್ಲು, ಶುದ್ಧ ಮಣ್ಣಿನ ಹೆಂಟೆ, ಲೋಹಾದಿಗಳನ್ನು ಚೆನ್ನಾಗಿ ಕಾಯಿಸಿ ಹಾಕಿದರೆ- "ಆಕ್ಷೇಪ ವಿಚ್ಛೇದೈಃ"(water electrolysis) ಕ್ರಿಯೆಯಿಂದ ಪರಮಾಣು ವಿಭಜನೆಯುಂಟಾಗಿ pH ವೃದ್ಧಿಯಾವುದಲ್ಲದೇ, ಲಘು ಮತ್ತು ಅತ್ಯಂತ ಆರೋಗ್ಯಕರ ಜಲ ನಮ್ಮದಾಗುತ್ತದೆ.
ಹಾಗೆಯೇ ನೀರಿಗೆ ಸ್ವಲ್ಪ ಶುದ್ಧ ಸುಣ್ಣವನ್ನು ಹಾಕಿದರೂ- ನೀರಿನ pH ಹೆಚ್ಚುತ್ತದೆ.
ಆಗ,
★ ಶರೀರದ ನಿರ್ಜಲೀಕರಣದಿಂದ ಉಂಟಾದ ನಿಶ್ಯಕ್ತಿ ದೂರವಾಗುತ್ತದೆ.
★ ಅಜೀರ್ಣ-ಆಮ್ಲಪಿತ್ತ ಇಲ್ಲವಾಗುತ್ತದೆ.
★ ಹಸಿವು ಹೆಚ್ಚುತ್ತದೆ.
★ ಮೂತ್ರ ಉರಿಯಂತಹ ಅನೇಕ ತೊಂದರೆಗಳು ಒಂದೆರೆಡು ಗಂಟೆಗಳಲ್ಲಿ ಪರಿಹಾರವಾಗುತ್ತವೆ.
★ ಮೂಳೆಗಳಿಗೆ ಸುಣ್ಣದ ಅಂಶ ಸಿಗುವ ಕಾರಣ ಗಟ್ಟಿಯಾಗುತ್ತವೆ.
★ ಹೈಪೋಥೈರಾಯ್ಡಿಸಮ್ ಬಾಧೆ ಕಡಿಮೆಯಾಗುತ್ತದೆ...
ಇನ್ನೂ ಅನೇಕ ಉಪಯೋಗಗಳು ನಮ್ಮದಾಗುತ್ತವೆ.
ಆತ್ಮೀಯರೇ,
ಈ ಕ್ರಿಯೆಗಳನ್ನು ಅನೇಕ ಚಿಕಿತ್ಸಾ ಪದ್ಧತಿಗಳಲ್ಲಿ ನಿತ್ಯಕ್ರಿಯೆಗಳಲ್ಲಿ ಅಳವಡಿಸಿಕೊಂಡು ಪರಿಹಾರ ಕಂಡುಕೊಳ್ಳಲಾಗಿದೆ. ಹಾಗಾಗಿ ನಮಗೆ ಇನ್ನಷ್ಟು ಪ್ರಮಾಣೀಕರಿಸಿ ಹೇಳಲು ಸಹಕಾರಿಯಾಗಿದೆ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ.
No comments:
Post a Comment