*ಅಮೃತಾತ್ಮರೇ,*
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-34
01.03.2021
*ಮಾನವನ ಅನ್ನಕಾಲಗಳೆಷ್ಟು*
(ಒಂದು ಅನ್ನಕಾಲ= ಒಂದು ಬಾರಿ ಸೇವಿಸುವ ಆಹಾರ)
*ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸಬೇಕು?*
____
*ತಸ್ಮಾತ್..............................ಕಾಲಯೋಃ ಉಭಯೋಃ ಅಪಿ || ಸಮಾಗ್ನೇ ತಥಾ ಆಹಾರ ದೇಯಃ..............|*
-ಸುಶ್ರುತ ಸಂಹಿತಾ
*ಕ್ಷುತ್ ಸಂಭವತಿ.............ಸೋ ಅನ್ನಕಾಲ.....||*
-ಭಾವಪ್ರಕಾಶ ನಿಘಂಟು
*ಏಕ ಕಾಲಂ.......ದುರ್ಬಲಾಗ್ನಿ......||*
-ಸುಶ್ರುತ ಸಂಹಿತಾ
*
ಸಾಮಾನ್ಯವಾಗಿ ಎಲ್ಲರಿಗೂ *ಉಭಯ ಅನ್ನ ಕಾಲ*
ಬಾಲಕರಿಗೆ, ವೃದ್ಧರಿಗೆ, ರೋಗಿಗಳಿಗೆ *ಅನೇಕ ಅನ್ನಕಾಲ*
ಅಜೀರ್ಣ ಇರುವಾಗ *ಒಂದೇ ಅನ್ನಕಾಲ*
*ಉಭಯ ಅನ್ನಕಾಲ:*
ಆರೋಗ್ಯ ಬೇಕೆಂದು ಬಯಸುವ ಯಾರೇ ಆದರೂ ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸಬೇಕು. 3-4 ಬಾರಿ ಸೇವನೆ ರೋಗ ತರುವಂತಹುದು, ಸರ್ವದಾ ನಿಷಿದ್ಧ.
ಮಾನವನ ಆಹಾರ ಸಾರವುಳ್ಳದ್ದು, ಪ್ರಾಣಿಗಳು ಗಿಡ ಮರಗಳ ಎಲೆ ದಂಟುಗಳನ್ನು ತಿನ್ನುವುದರಿಂದ ಅವು ಎಷ್ಟು ಬಾರಿ ತಿಂದರೂ ರೋಗ ಬರುವುದಿಲ್ಲ. ಧಾನ್ಯಗಳು, ಹಣ್ಣು, ಗಡ್ಡೆ ಗೆಣಸು ಮುಂತಾದವುಗಳಲ್ಲಿ ಆಯಾ ಗಿಡದ ಸಂವೃದ್ದ ಸಾರ ಶಕ್ತಿ ತುಂಬಿರುವ ಕಾರಣ, ಪ್ರಾಣಿಗಳ ಹೋಲಿಕೆಯಲ್ಲಿ ಮಾನವನ ಆಹಾರದ ಪ್ರಮಾಣವೂ ಮತ್ತು ಸೇವನಾ ಕಾಲವೂ ಕಡಿಮೆ ಇರಲೇಬೇಕು.
*ಎರೆಡು ಅನ್ನಕಾಲದ ಲಾಭ ಏನು?*
1) ಶಕ್ತಿಸಾರ ಪದಾರ್ಥ ಸೇವನೆಯ ಕಾರಣವೇ ಮಾನವ ಶರೀರ ಚಿಕ್ಕದಾಗಿದ್ದರೂ, ಬುದ್ಧಿ ಪ್ರಖರವಾಗಿ ಇಡೀ ವಿಶ್ವವನ್ನೇ ತಿಳಿಯುತ್ತಾನೆ ಮತ್ತು ಆಳುತ್ತಾನೆ. ಅತಿ ಪ್ರಮಾಣದ ಆಹಾರ ಸೇವಿಸುವವರ ಬೌದ್ಧಿಕ ಮಟ್ಟ ಸಾಮಾನ್ಯವಾಗಿ ಕಡಿಮೆ(rare exception are there). ಶರೀರ ದೃಢ ಮತ್ತು ಬುದ್ಧಿ ಚುರುಕಾಗಿರಬೇಕೇ? ದಿನಕ್ಕೆ ಎರೆಡುಬಾರಿ ಆಹಾರ ಸೇವಿಸಿ.
2) ಸಾರ ಭಾಗ ಸೇವನೆಯಿಂದ ಸತ್ವಗುಣ ವರ್ಧಿಸುತ್ತದೆ. ಕೇವಲ ಸೊಪ್ಪು-ದಂಟು ತಿನ್ನುವ ಪ್ರಾಣಿಗಳು ತಮೋಪ್ರಧಾನ(ಹಸುವನ್ನು ಹೊರತುಪಡಿಸಿ), ಮಾಂಸಾಹಾರ ಪ್ರಾಣಿಗಳು ರಜೋಪ್ರಧಾನ. ಆದರೆ ಮಾನವ ಅತಿ ಪ್ರಮಾಣ, ಪದೇ ಪದೇ ಆಹಾರ ಸೇವನೆ ಮಾಡಿದರೆ ರಜೋ/ತಮೋಗುಣ ವೃದ್ಧಿಯಾಗುತ್ತದೆ.
3) ಮಾನವನ ಜನ್ಮೋದ್ದೇಶವೇ ಆತ್ಮ ಸಾಕ್ಷಾತ್ಕಾರ ಮತ್ತು ಜಗತ್ತಿಗೆ ಹಿತ ಉಂಟುಮಾಡುವುದು. ಇವೆರಡೂ ಸತ್ವಗುಣ ಅಥವಾ ಗುಣರಹಿತ ಅವಸ್ಥೆಯಿಂದ ಮಾತ್ರ ಸಾಧ್ಯ.
*ಅನೇಕ ಅನ್ನಕಾಲ:*
ಬಾಲ್ಯಾವಸ್ಥೆ ಮುಗಿವವರೆಗೆ, ವೃದ್ಧಾವಸ್ಥೆ ಪ್ರಾಪ್ತವಾದ ನಂತರ, ರೋಗಾವಸ್ಥೆಯಲ್ಲಿ ಮತ್ತು ಶಾರೀರಿಕ ಶ್ರಮದ ಕೆಲಸ ಮಾಡಿದಾಗಲೂ ಸೇವಿಸಿದ ಆಹಾರ ಜಠರದಲ್ಲಿಯೂ ಜೀರ್ಣಿಸಿ, ರಕ್ತದಲ್ಲೂ ಜೀರ್ಣಿಸಿ, ಮಲ(ಬೆವರು, ಮೂತ್ರ, ಮಲ) ಬಹಿರ್ಗಮನವಾದರೆ ಹಸಿಉಂಟಾಗುತ್ತದೆ, ಆಗ ಅಕಾಲವಾದರೂ ಅನ್ನಕಾಲ ಎಂದು ಪರಿಗಣಿಸಿ ಆಹಾರ ಸೇವನೆ ಮಾಡಬೇಕು.
ಉದಾ: ತೀವ್ರ ಜ್ವರ, ತೀವ್ರ ನೋವುಗಳು, ಮಧುಮೇಹ ಮುಂತಾದ ಅವಸ್ಥೆಗಳಲ್ಲಿ, ನಿರ್ದಿಷ್ಟ ಅನ್ನ ಕಾಲ ಇಲ್ಲ, ರಕ್ತ ಹಸಿದರೆ, ಬೆವರಿದರೆ ಯಾವಗ ಬೇಕಾದರೂ ಆಹಾರ ಕೊಡಬೇಕು.
(ಎಷ್ಟು ಚನ್ನಾಗಿ ವಿವರಿಸಿದೆ ಆಯುರ್ವೇದ)
ಬಾಲ್ಯ ಮುಗಿದಮೇಲೂ ಹಾಗೆಯೇ ರೋಗಿಗೆ ರೋಗ ಪರಿಹಾರ ಆದನಂತರವೂ ಮತ್ತು ಶಾರೀರಿಕ ಶ್ರಮವಿಲ್ಲದ ದಿನವೂ ಕೇವಲ ಎರೆಡು ಅನ್ನಕಾಲಕ್ಕೆ ಮರಳಬೇಕು.
*ಏಕಅನ್ನಕಾಲ:*
ಜಠರ, ರಕ್ತದಲ್ಲಿ ಆಹಾರ ಜೀರ್ಣವಾಗದೇ ಉಳಿದರೆ ಹಸಿವೆಯೇ ಆಗದು(ಸಂಕಟ ಆಗಬಹುದು ಅದು ಹಸಿವಲ್ಲ, ಸಂಕಟ ಆದಾಗ ಕೇವಲ ಒಂದು ಲೋಟ ನೀರು, ಸ್ವಲ್ಪ ವ್ಯಾಯಾಮ ಮಾಡಿದರೆ ಸಾಕು) ಆಗ ಜೀರ್ಣಕ್ರಿಯೆ ಹೆಚ್ಚಿಸಲು, ಹಸಿವುಂಟುಮಾಡಲು ಉಪವಾಸ ಮಾಡಬೇಕು, ಅಂದರೆ ಒಂದು ಅನ್ನಕಾಲ ಮಾತ್ರ ಆಹಾರ ಸೇವಿಸಿ ಶೀಘ್ರವಾಗಿ ಅಗ್ನಿಯನ್ನು ವರ್ಧಿಸಬೇಕು.
*ಇವುಗಳ ಪಾಲನೆ ಸರ್ವಕಾಲಕ್ಕೂ ಆರೋಗ್ಯದಿಂದ ಇರಲು ಸಹಾಯಕ*
*ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ.*
*ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?*
By
ಹೆಚ್.ಬಿ.ಮೇಟಿ