🙏ಅಮೃತಾತ್ಮರೇ ನಮಸ್ಕಾರ 🙏
🌱ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌱
🌞ಸ್ವಾಸ್ಥ್ಯ ಸರ್ವರದ್ದೂ ಆಗಲಿ🌞
••••••••••••••••••••••••••••••••••••••••••
27.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-4
••••••••••••••
✍️: ಇಂದಿನ ವಿಷಯ:
ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ.
•••••••••••••••••••••••••••••••••••••••••
ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು, ಪ್ರತ್ಯಕ್ಷ ಅನುಭವದಲ್ಲಿ ಹೇಳಿದ್ದಾರೆ, ವಿಜಯವಾಣಿಯ ಹಿರಿಯ ಉಪಸಂಪಾದಕರಾದ ಶ್ರೀ.ಆರ್.ರಘುರಾಮ್.
★★★★★=====★★★★★
🙏ಆತ್ಮೀಯ ಬಂಧುಗಳೇ,
◆ಮಾತಾ ಮರಕತ ಶ್ಯಾಮಾ ಮಾತಂಗಿ ಮಧುಶಾಲಿನಿ.....
ಕಾಳಿದಾಸನ ಕಾವ್ಯದ ಸಾಲುಗಳಲ್ಲಿ ನಾನು ಮೊದಲ ಬಾರಿಗೆ *ಮಧು* ಪದವನು ಕೇಳಿದ್ದು ಬಾಲ್ಯದಲಿ. ಅದಾದ ನಂತರ ಹಲವುಬಾರಿ ಮಧು ಪದವು ಮನಕೆ ಬಿದ್ದಿದೆ. ಆದರೆ ದೇಹಕ್ಕೆ ಬಿದ್ದದ್ದು 8 ವರುಷಗಳ ಹಿಂದೆ.... ಇದೇ ದೊಡ್ಡ ಆಚ್ಚರಿ...😌
ಹೌದು.
ನನ್ನ ತಾಯಿಯ ತಂದೆ "ಆಯುರ್ವೇದ ಭಿಷಗ್ ರತ್ನ ಪಂಡಿತ"ರಾಗಿದ್ದರಂತೆ. ಇದನ್ನು ಅಮ್ಮನಿಂದ ಕೇಳಿದ್ದೆ. ಕಾಕತಾಳೀಯ ಅನ್ನುವಂತೆ ಬಾಲ್ಯದಿಂದ ಆಯುರ್ವೇದ ಪದ್ಧತಿಯೇ ಆಗಾಗ್ಗೆ ಅಂಟು..ನಂಟು ಬೆಳಸಿಕೊಂಡಿದೆ.
ಹೇಳಬೇಕಿರುವುದು... *ಮಧುಮೇಹದೊಂದಿಗೆ 8 ವರುಷಗಳ ಜೀವನ.* ಆದರದು ನನ್ನ ಜೀವನಕೆ ಕಹಿಯಾಗದೇ ಸಿಹಿಯಾಗುವಂತೆ ಮಾಡಿದ್ದು ಮಾತ್ರ *ಆಯುರ್ವೇದ...*
ಹೌದು.
2012ರಲ್ಲಿ ಮೊದಲ ಬಾರಿಗೆ ಮಧುಮೇಹ ಕಾಣಿಸಿಕೊಂಡಾಗ ....."ಗಾಬರಿ ಬೇಡ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆಯುರ್ವೇದ ಇದೆ", ಎಂಬ ಭರವಸೆ ಡಾ.ಮಲ್ಲಿಕಾರ್ಜುನ ಡಂಬಳ ಅವರಿಂದ ಸಿಕ್ಕಿತು.
ಸತ್ಯ.
🙏 ವೈದ್ಯ ಪದ್ಧತಿ ಜೊತೆಗೆ ಆತಂಕಿತರಿಗೆ ವೈದ್ಯರು ನೀಡುವ ಭರವಸೆಯೇ ಬಾಳಿಗೆ ಬೆಳಕಾಗುತ್ತದೆ.
ಮೊದಲಿಗೆ *ಶಿವ ಗುಳಿಕಾ* ಪ್ರಯೋಗದಿಂದ ಕುಗ್ಗಿದ ದೇಹ ಮತ್ತು ಮನಸುಗಳಿಗೆ ಶಕ್ತಿ ಬಂದಿತು, ಆದರೆ,
ಆಗ ಜನಗಳು ಹೇಳಿದರು ಮತ್ತೆ ಇಗಲೂ ಹೇಳುತ್ತಾರೆ....ತೆಳ್ಳಗೆ ಆಗಿರುವೆ ಅಂತಾ. ಆಗ ಕುಗ್ಗುವ ಭರವಸೆಗೆ ಭರಪೂರ ಉತ್ತಮ ಭಾವನೆ ತುಂಬಿ *ನಾವು ನಿಜವಾಗಿ ಇರಬೇಕಿರುವುದೇ ಹೀಗೆ, ಕೃಶತ್ವ(ತೆಳ್ಳಗೆ ಇರುವುದು) ಶ್ರೇಷ್ಠ,* ಎಂದು ಶಕ್ತಿ ತುಂಬಿದ್ದೇ ಆಯುವೇ೯ದ ವಿಜ್ಞಾನ.
ಈ ಬಗ್ಗೆ ನಂಬಿಕೆ ಏನೇ ಇದ್ದರೂ ಇಂದು ಎಲ್ಲಕ್ಕೂ ಪ್ರಮಾಣಗಳನ್ನು ಸಮಾಜ ಕೇಳುತ್ತದೆ. ಅದು trend ಕೂಡಾ ಆಗಿದೆ. ಇರಲಿ ಬಿಡಿ.
ಅದು ಏನೇ ಇದ್ದರೂ
ವಾಸ್ತವವಾಗಿ ಪ್ರಯೋಗಾಲಯಗಳು ನೀಡುವ ವರದಿಗಳನ್ನು ಒಪ್ಪಲೇ ಬೇಕು ಅಲ್ವೇ...
ಕಳೆದ ವರುಷ ನನ್ನ ಮಿತ್ರರ ಒತ್ತಾಸೆ, ಮರ್ಜಿಗೆಂದು ಬೆಂಗಳೂರಿನ ಜಯದೇವ ಆಸ್ಪತ್ರೆ ಹಿಂದಿರುವ *Karnataka Diabetic Institute* ನಲ್ಲಿ ಇರುವ
ಮಧುಮೇಹ ತಪಾಸಣಾ ಕೇಂದ್ರಕ್ಕೆ ಹೋಗಿದ್ದೆ.
*ಇದು ರಾಜ್ಯದಲ್ಲಿ ಅತಿ ನಿಖರವಾಗಿ ವರದಿ ಕೊಡುವ ಲ್ಯಾಬ್ ಗಳಲ್ಲಿ ಪ್ರಮುಖವಾದದ್ದು.* ದಿನವೂ ಸಾವ೯ಜನಿಕ ಸೇವೆಗೆ ಲಭ್ಯ ಇರುವುದು. ಅಲ್ಲಿನ ಹತ್ತಾರು ತಪಾಸಣೆ ಮತ್ತು ಲ್ಯಾಬ್ ರಿಪೋರ್ಟ್ ಪ್ರಕಾರ
ನನ್ನ ಬಗ್ಗೆ ಬಂದ ಫಲಿತಾಂಶ ನಿಮಗೆಲ್ಲ ಅಚ್ಚರಿಯನ್ನೇ ಮೂಡಿಸುತ್ತದೆ.
*ಡಯಾಬಿಟಿಕ್ ಬಂದು 4...5 ವರುಷದಲ್ಲಿ ಅದನ್ನು ಎಷ್ಟೇ ನಿಯಂತ್ರಸಿದರೂ, ಅದು ಯಾವುದಾದರೂ ಅಂಗವನ್ನು ಡ್ಯಾಮೇಜು ಮಾಡುತ್ತದಂತೆ.* ಆದರೆ ನನಗೆ ದೊರೆತ ಆಯುವೇ೯ದ ಆರೈಕೆ ಫಲ... 8 ವರುಷಗಳಾದರೂ ಕಣ್ಣು, ಹೃದಯ, ನರಗಳು, ಕೈ ಕಾಲು, ಪಾದದ ಬಿಂದುಗಳು, ಸಾಮಾನ್ಯ ಜೀಣ೯ಕ್ರಿಯಾ ಪ್ರಕ್ರಿಯೆ,
ಎಲ್ಲವೂ....Normal.....!😇
ಹೌದಲ್ಲವೇ. ನಮಗೆ ಬೇಕಿರುವುದು ಈ ರೀತಿಯ ದೀಘ೯ಕಾಲೀನ ಆರೋಗ್ಯ ಫಲಿತಾಂಶ.
ಪ್ರಸ್ತುತ ನಾನು ಸೇವಿಸುತ್ತಿರುವುದು ಆಯುರ್ವೇದದ 2 ಪುಟ್ಟ ಮಾತ್ರೆ ಮಾತ್ರ.
*Till today....no side effect*👏
ಬಣ್ಣ ಬಣ್ಣದ ಇಂದಿನ ಮಾಯೆಗಳಿಗೆ ಮರುಳಾಗದೇ ಪರಿಶುದ್ಧವಾದ
ಆಯುರ್ವೇದವನ್ನು ನಂಬಿ, ಅದರ ಜೀವನ ಪದ್ಧತಿಯನ್ನು ವ್ರತದಂತೆ ಅನವರತ ಅನುಸರಿಸಲು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಸಲ್ಪ ಶಾಂತವಾಗಿರುವ, ಸಮಾಧಾನವಾಗಿರುವ ಪಾಠವನ್ನು ನಿಮಗೆ ನೀವೇ ಬಿಡುವು ಮಾಡಿಕೊಂಡು ಹೇಳಿಕೊಳ್ಳಿ.
🌸ಭದ್ರಂ, ಶುಭಂ, ಮಂಗಳಂ🌸
🍀ಆರಾಮದಾಯಕ ಜೀವನ ನಡೆಸಿ🍀
✍ ಹೆಚ್.ಬಿ .ಮೇಟಿ.. (ಸಂಗ್ರಹ)
Last two lines very important in life sir . super sir
ReplyDeleteTHANK U FOR UR COMPLIMENTS.....
ReplyDelete