✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 31 January 2021

1)ನಮ್ಮ ಸ್ನಾನ ಆಯಾಸ ಪರಿಹಾರ ಮಾಡುತ್ತಿದೆಯೇ? 2) ಸ್ನಾನ ನಮ್ಮ ತ್ವಚೆಯನ್ನು ಕಾಂತಿಯಿಂದ‌ ಇಡುತ್ತಿದೆಯೇ? 3)ನಮ್ಮ ಸ್ನಾನಕ್ಕೆ ಮುಪ್ಪನ್ನು ದೂರಮಾಡುವ ಶಕ್ತಿ ಇದೆಯೇ?

🤝ಅಮೃತಾತ್ಮರೇ ನಮಸ್ಕಾರ 🤝
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
      🍀🍀🍀🍀🍀🍀🍀
••••••••••••••••••••••••••••••••••••••••••
01.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-10
••••••••••••••
✍️: ಇಂದಿನ ವಿಷಯ:
1)ನಮ್ಮ ಸ್ನಾನ ಆಯಾಸ ಪರಿಹಾರ ಮಾಡುತ್ತಿದೆಯೇ? 
2) ಸ್ನಾನ ನಮ್ಮ ತ್ವಚೆಯನ್ನು ಕಾಂತಿಯಿಂದ‌ ಇಡುತ್ತಿದೆಯೇ? 
3)ನಮ್ಮ ಸ್ನಾನಕ್ಕೆ ಮುಪ್ಪನ್ನು ದೂರಮಾಡುವ ಶಕ್ತಿ ಇದೆಯೇ?
•••••••••••••••••••••••••••••••••••••••••
             🛁🚿🚰
🖋 ಹಾಗಾದರೆ ಬಹು ಉಪಯೋಗಿ ಸ್ನಾನವನ್ನು ಮಾಡಬೇಕಾದದ್ದು ಹೇಗೆ?

📜 ಅಭ್ಯಂಗಂ ಆಚರೇತ್ ನಿತ್ಯಂ ಸ ಜರಾ ಶ್ರಮ ವಾತಾಃ ||7||
ದೃಷ್ಟಿಪ್ರಸಾದ ಪುಷ್ಠಿ ಆಯುಃ ಸ್ವಪ್ನ ಸು-ತ್ವಕ್ ದಾರ್ಢ್ಯಕೃತ್ |
ಶಿರಃ ಶ್ರವಣ ಪಾದೇಶು ತಂ ವಿಶೇಷೇಣ ಶೀಲಯೇತ್ ||8||
-> ವಾಗ್ಭಟ ಸೂತ್ರ -2

 ನಿತ್ಯ ತೈಲವನ್ನು ಶರೀರಕ್ಕೆ ಲೇಪಿಸದೇ ಸ್ನಾನ ಮಾಡಬಾರದು. ದುರಾದೃಷ್ಟವಶಾತ್ ಇಂದು ನಾವು ಅದಕ್ಕೆ ವಿರುದ್ಧವಾಗಿ ಸೊಪ್ ಉಪಯೋಗಿಸಿ ಸ್ನಾನ ಮಾಡುತ್ತಿರುವ ದುಸ್ಥಿತಿಗೆ ಬಂದ್ದದ್ದೂ ಅಲ್ಲದೇ, ಅದನ್ನೇ ಶ್ರೇಷ್ಠ ಎಂದೂ ನಂಬಿದ್ದೇವೆ.

🖋 ತ್ವಚೆಗೆ ನಿತ್ಯವೂ ತೈಲ ಲೇಪಿಸುವ ವೈಜ್ಞಾನಿಕ ಕಾರಣ ಏನು?
★ ಉತ್ತರ:
ತ್ವಚೆಯು ಆರು ಪದರಗಳಿಂದ ಕೂಡಿದೆ, ಏಳನೇ ಪದರವೇ ಮಾಂಸಧಾತು, ಇಲ್ಲಿಂದಲೇ ಚರ್ಮದ ಎಲ್ಲಾ ಪದರಗಳೂ ಉಂಟಾಗುತ್ತವೆ ಮತ್ತು ಬೆಳೆಯುತ್ತವೆ.‌ ಆದರೆ ಪೋಷಣೆಯ ಕಾರ್ಯ ಮಾತ್ರ ಈ ಪದರಗಳ ಮಧ್ಯ ದ್ರವರೂಪದಿಂದ ಇರುವ ರಸಧಾತುವಿನಿಂದ ಆಗುತ್ತದೆ. 
ಇಲ್ಲಿ ಎರೆಡು ವಿಶೇಷ ಪದರಗಳಿವೆ: 
1) ರೋಹಿಣಿ 
2) ವೇದಿನಿ
ಇವುಗಳಿಂದ ಚರ್ಮದ ಕಾಂತಿ ಮತ್ತು ಸ್ಪರ್ಶಜ್ಞಾನ ಉಂಟಾಗುತ್ತದೆ.

✴️ ರೋಹಿಣಿ ತ್ವಚೆ:
ರೋಹಿಣಿ ತ್ವಚೆಯಲ್ಲಿರುವ ಅತೀಸೂಕ್ಷ್ಮ ರಕ್ತನಾಳಗಳು ಚರ್ಮಕ್ಕೆ ವರ್ಣ, ಕಾಂತಿ ಕೊಡುವುದರ ಜೊತೆಗೆ ಎಲ್ಲಾ ಪದರಗಳಿಗೆ ಪೋಷಕ ರಸವನ್ನು ತಲುಪಿಸುತ್ತದೆ. ಇದೇ ಕಾರಣದಿಂದ ವಾತ ಪ್ರಧಾನ ರಕ್ತದಲ್ಲಿ ಚರ್ಮವು ಕಪ್ಪಾಗಿಯೂ, ಪಿತ್ತ ಪ್ರಧಾನ ರಕ್ತ ಇರುವ ಚರ್ಮ ನಸುಗೆಂಪು(ರಾಗವರ್ಣ) ಮತ್ತು ಕಫಪ್ರಧಾನ ರಕ್ತದಿಂದ ಗೋಧೂಮ ವರ್ಣ(ಗೋಧಿಬಣ್ಣ) ಬರುತ್ತದೆ. ನಮ್ಮ ಚರ್ಮ ನಮ್ಮ ಪ್ರಕೃತಿಯನ್ನು ಹೇಳುತ್ತದೆ. ಇರಲಿ ನಿತ್ಯ ತೈಲ ಲೇಪನದಿಂದ ಸೂಕ್ಷ್ಮ ರಕ್ತನಾಳಗಳು ಸಶಕ್ತವಾಗಿ ತ್ವಚಾಪೋಷಣ ಸೂಕ್ತವಾಗಿ ಕಾಂತಿಯುತವಾಗುತ್ತದೆ. ಇದನ್ನು ಮರೆತು ಹೊರಗಿನಿಂದ ಏನು ಲೇಪಿಸಿದರೂ ಆಂತರ್ಯದಿಂದ ಸಿಗುವ ಇಂತಹ ಕಾಂತಿ ದೊರಕುವುದು ಅಸಾಧ್ಯ.

✴️ ವೇದಿನಿ ತ್ವಚೆ:
ಇದು ಬಹು ಮುಖ್ಯ ಪದರವಾಗಿದ್ದು ಚರ್ಮದ ಇಂದ್ರಿಯಸ್ಥಾನ ‌ಇರುವುದೇ ಇಲ್ಲಿ. ಚರ್ಮದ ಸಂವೇದನೆಗಳು ಇಲ್ಲಿರುವ ತಿರ್ಯಗ್ಗಾಮಿ ಧಮನಿಗಳಿಂದ(nerve endings) ಮೆದುಳನ್ನು ತಲುಪಿ ಸರ್ವ ಶರೀರದ ಸಂವೇದನೆ ಕಾರ್ಯ ನಿರ್ವಹಿಸುವುದಲ್ಲದೇ, ತೈಲ ಲೇಪನದಿಂದ ಶಾರೀರಿಕ ಶ್ರಮವನ್ನು ಕ್ಷಣದಲ್ಲಿ ಹೋಗಲಾಡಿಸುವುದು. ಅಂದರೆ ಶರೀರದ ಸರ್ವ ನೋವುಗಳನ್ನು ತೈಲ ಲೇಪಿತ ಸ್ನಾನ ಹೋಗಲಾಡಿಸುವುದು.

ನಿತ್ಯ ದುಡಿಮೆಯಿಂದ ನಮ್ಮ ನರಗಳು ಅತಿಸಂವೇದನಾಶೀಲತೆಯನ್ನು ಪಡೆದು ಶಾರೀರಿಕ ಆಯಾಸವನ್ನೂ, ನಿರಾಸಕ್ತಿಯನ್ನೂ ಉಂಟುಮಾಡುತ್ತವೆ. ಇದನ್ನು ಪರಿಹರಿಸಲು ನರಗಳಿಗೆ  ಸ್ನೇಹದ್ರವ್ಯ(lubricants)ಗಳು ಬೇಕು, ಅದು ತೈಲಲೇಪನದಿಂದ ಸಿಗುತ್ತದೆ. ಆದರೆ ಈಗ ನಾವು ಮಾಡುತ್ತಿರುವುದೇನು? ಮತ್ತು ಬಯಸುತ್ತಿರುವುದು ಏನನ್ನು!?
ಅತ್ಯಂತ ರೂಕ್ಷ ದ್ರವ್ಯವಾದ(Anti lubricants) ಸೋಪನ್ನು 🧼 ಬಳಸಿ ಶರೀರದ ಸೌಂದರ್ಯವನ್ನೂ ಆರೋಗ್ಯವನ್ನೂ ನಿರೀಕ್ಷಿಸುವುದು ಎಷ್ಟು ಸರಿ?!

🧓👵ಇದೇ ಕಾರಣದಿಂದ ನಮ್ಮ ಹಿರಿಯರು *ಸ್ನಾನಕ್ಕೆ ಹೊರಟಾಗ ಎಣ್ಣೆ ಕೊಡು* ಎಂದು ಕೇಳುತ್ತಿದ್ದರು.
 ಇಂದು ಸೋಪು, ಶ್ಯಾಂಪು, ಲಿಕ್ವಿಡ್...ಮುಂತಾದ ಹೆಸರುವಾಸಿಯಾದ ಅನಾರೋಗ್ಯಕರ ದ್ರವ್ಯಗಳನ್ನು ಕೇಳುತ್ತೇವೆ!!!?

🖋 ಶರೀರಕ್ಕೆ ನಿತ್ಯ ತೈಲ ಲೇಪನದ ಲಾಭಗಳು:
★ ಮುಪ್ಪು ದೂರವಾಗುವುದು.
★ ಆಯಾಸ ಪರಿಹಾರವಾಗುವುದು.
★ ವಾತ ಶಮನವಾಗುವುದು (ಇದು ಅತ್ಯಂತ ಮಹತ್ವದ ಉಪಯೋಗ, ವಾತ ಶಮನವಾದರೆ ನೂರಾರು ರೋಗಗಳು ದೂರವಾಗುತ್ತವೆ).
★ ಅತ್ಯುತ್ತಮ ದೃಷ್ಟಿಶಕ್ತಿ, ನೇತ್ರಕಾಂತಿ ಬರುವುದು.
★ ಶರೀರ ದಷ್ಟಪುಷ್ಟವಾಗುವುದು.
★ ಆರೋಗ್ಯಯುತ ಆಯುಷ್ಯ ನಮ್ಮದಾಗುವುದು.
★ ಸುಖನಿದ್ದೆ ನಮ್ಮದು.
★ ತ್ವಚೆ ಕಾಂತಿಯುತವಾಗುವುದು.
★ ದೇಹ ದೃಢಗೊಳ್ಳುವುದು. 

👆 ಈ ಲಾಭಗಳು ವಿಶೇಷವಾಗಿ ಶಿರ(ತಲೆ), ಶ್ರವಣ(ಕಿವಿ), ಪಾದ(ಕಾಲು)ಗಳಿಗೆ ತೈಲಾಭ್ಯಂಗ ಅಥವಾ ಲೇಪನ ಮಾಡುವುದರಿಂದ ದೊರೆಯುತ್ತವೆ.

✍ ವಿಶೇಷವಾಗಿ ಮಕ್ಕಳಿಗೆ ತೈಲವಿಲ್ಲದೇ ಸ್ನಾನ‌ ಮಾಡಿಸಲೇಬಾರದು.

🙏🙏ಧನ್ಯವಾದಗಳು 🙏🙏
••••••••••••••
By
ಹೆಚ್.ಬಿ.ಮೇಟಿ

1 comment:

ನೆನಪಿಸಿಕೊಳ್ಳುವ ಹಂತಗಳ ವೈಜ್ಞಾನಿಕ ವಿಶ್ಲೇಷಣೆ......

ನೆನಪಿರಿಸಿಕೊಳ್ಳುವ ಹಂತಗಳು " ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ" ಎಂದು ಚಿಂತಿತರಾಗುವ ಹಲವು ವಿದ್ಯಾರ್ಥಿಗಳಿರುತ್ತ...