✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Saturday 30 January 2021

ಎಲ್ಲರಿಗೂ ಬೇಕಾದ ಅತ್ಯಂತ ಪ್ರಮುಖ ವಿಚಾರ, ದಯಮಾಡಿ ಗಮನಿಸಿ, ಆರೋಗ್ಯದಿಂದ ಇದ್ದುಬಿಡಿ.

🤝 ಅಮೃತಾತ್ಮರೇ ನಮಸ್ಕಾರ 🙏
🍁ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍁
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
31.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-9
••••••••••••••
✍️: ಇಂದಿನ ವಿಷಯ:
ಎಲ್ಲರಿಗೂ ಬೇಕಾದ ಅತ್ಯಂತ ಪ್ರಮುಖ ವಿಚಾರ, ದಯಮಾಡಿ ಗಮನಿಸಿ, ಆರೋಗ್ಯದಿಂದ ಇದ್ದುಬಿಡಿ.
•••••••••••••••••••••••••••••••••••••••••

❄️ "ಆಮ.....ವಿಷ*
ಆರೋಗ್ಯ ರಕ್ಷಣೆಯಲ್ಲಿ ಇದು ಅತ್ಯಂತ ಪ್ರಮುಖ ವಿಷಯ.

▪️ "ಆಮ" - ಇದು ರೋಗವನ್ನುಂಟುಮಾಡುತ್ತದೆ ಮತ್ತು ಅದನ್ನು ಪೋಷಿಸುತ್ತದೆ, ಆದ್ದರಿಂದ ಇದನ್ನು ವಿಷ ಎನ್ನುತ್ತಾರೆ.
ಇದರ ತೀವ್ರತೆಯ ಆಧಾರದ ಮೇಲೆ ವಿಷ ಸಣ್ಣ ತೊಂದರೆ ಮಾಡಬಹುದು ಅಥವಾ ದೇಹನಾಶವನ್ನೇ ಮಾಡಬಹುದು. 

▪️ ಆಮ ಎಂದರೇನು?
✍ ಶರೀರದ ಯಾವುದೇ ಭಾಗದಲ್ಲಿ ವಿಶೇಷವಾಗಿ ಸ್ರೋತಸ್ಸು(ಅವಯವ ಉತ್ಪತ್ತಿ ಸ್ಥಾನ)ಗಳಲ್ಲಿ ಅಗ್ನಿಯಿಂದ ಪಚನವಾಗದೇ ಅಥವಾ ಜೀರ್ಣವಾಗದೇ ಉಳಿದ ಆಹಾರದ ಯಾವುದೇ ಅಂಶಗಳನ್ನು ಅಂದರೆ ಪ್ರೊಟೀನ್, ಫ್ಯಾಟ್, ಕಾರ್ಬೋಹೈಡ್ರೇಟ್ ಗಳ ಅವಿಭಜಿತ ಅಂಶಗಳನ್ನು (non separated or unbroken molecules of carbohydrates, proteins, fats etc.,) "ಆಮ" ಎನ್ನುತ್ತೇವೆ.

▪️ ಆಮ ಎಂಬುದು ಆಹಾರದ ಅಂಶವೇ ಆದರೂ ಅಪಾಯಕಾರಿಯೇ?
✍ ಹೌದು, ಅತ್ಯಂತ ಅಪಾಯಕಾರಿ ಮತ್ತು ಇದು ಎಲ್ಲಾ ರೋಗಗಳ ಕಾರಣೀಕರ್ತ.
 ಉದಾ: ಹಾವಿನ ವಿಷವೂ ಒಂದುರೀತಿಯ ಪ್ರೋಟೀನ್, ಇದು ನಮ್ಮ ಹೊಟ್ಟೆಗೆ ಹೋದರೆ ಏನೂ ಆಗದು(ಬಾಯಿ, ಗಂಟಲು ಉದರಗಳಲ್ಲಿ ರಕ್ರಸ್ರಾವ ಇಲ್ಲದಿದ್ದರೆ)! ಬೇಳೆಕಾಳುಗಳಂತೆ ಜೀರ್ಣವಾಗಿ ನಮಗೆ ಆಹಾರವಾಗುತ್ತದೆ!! ಅದೇ ಬೇಳೆಗಳನ್ನು ಬೇಯಿಸಿದ ನೀರನ್ನು ಇಂಜೆಕ್ಷನ್ ಮೂಲಕ ರಕ್ತನಾಳಗಳಿಗೆ ಹರಿಸಿದರೆ ಕ್ಷಣದಲ್ಲಿ ಮನುಷ್ಯ ಸಾಯುತ್ತಾನೆ.
👉 ನೋಡಿ, ಪ್ರೋಟೀನ್ ನಮ್ಮ ಅಗ್ನಿಯಿಂದ ವಿಭಜನೆಗೊಂಡರೆ ಆಹಾರ, ಅದೇ ನೇರ ರಕ್ತ ಸೇರಿದರೆ ಪ್ರಾಣಕಂಟಕ.

▪️ "ಆಮವಿಷದ" ಉತ್ಪತ್ತಿ ಹೇಗೆ?
✍ ಎಲ್ಲಕ್ಕೂ ಕಾರಣ ಆಹಾರದ ಗುರುತ್ವ ಮತ್ತು ನಮ್ಮ ಜಾಠರಾಗ್ನಿಯ ದುರ್ಬಲತ್ವ.
ನಾವು ಆಹಾರವನ್ನು ಸೇವಿಸುತ್ತೇವೆ, ಆದರೆ ಅದು ಜಾಠರಾಗ್ನಿ, ಏಳು ಧಾತುಗಳ ಅಗ್ನಿಯಿಂದ ಸಂಪೂರ್ಣ ವಿಭಜನೆಗೊಂಡರೆ ಮಾತ್ರ ಆಹಾರ ಇಲ್ಲದಿದ್ದರೆ ಆಮವಿಷ. 
ಚೆನ್ನಾಗಿ ವಿಭಜನೆಗೊಂಡ ಆಹಾರದಿಂದ ಜೀವಕೋಶಗಳು ತನಗೆ ಸರಿಹೊಂದುವ ಸೂಕ್ಷ್ಮಾತಿ ಸೂಕ್ಷ್ಮಕಣಗಳನ್ನು ಸೆಳೆದುಕೊಂಡು ಆಹಾರವನ್ನೇ  ಜೀವಕೋಶವನ್ನಾಗಿ ಅಂದರೆ ಆಹಾರವನ್ನೇ ಶರೀರವನ್ನಾಗಿ ಮಾಡುತ್ತವೆ.

ವಿಭಜನೆಗೊಳ್ಳದಿದ್ದರೆ ಅದೇ ಅವಿಭಜಿತ ಪ್ರೋಟೀನ್..... ಜೀವಕೋಶಗಳನ್ನು ಹಾನಿಗೊಳಿಸುತ್ತದೆ, ರೋಗ ತರುತ್ತದೆ, ಕೆಲವೊಮ್ಮೆ ನಿಧಾನವಾಗಿ ಕೊಂದೇಹಾಕುತ್ತದೆ.

▪️ ಆಮದಿಂದ ರೋಗ ಉತ್ಪತ್ತಿ ಹೇಗೆ?
✍ ಈ ಆಮವಿಷದ "ರಚನೆ", ಇರುವ "ಸ್ಥಾನ" ಮತ್ತು "ಕಾಲಾವಧಿ" ಈ ಮೂರರ ಆಧಾರದಲ್ಲಿ ನಿರ್ಧಿಷ್ಟ ರೋಗ ಉಂಟಾಗುತ್ತದೆ.
ಸಾಮಾನ್ಯ ಮತ್ತು ಮೇಲ್ನೋಟದ ವಿವರಣೆ ಎಂದರೆ,
★  ಆಮದ ರಚನೆ ಅತ್ಯಂತ ದೃಢವಾಗಿದ್ದು ಜೀವಕೋಶಗಳನ್ನು ಒಣಗಿಸುತ್ತಿದ್ದರೆ ವಾತರೋಗ ಎಂತಲೂ, 
★ ಉಷ್ಣತೆಯನ್ನುಂಟುಮಾಡಿ ಜೀವಕೋಶಗಳನ್ನು ಕರಗಿಸುತ್ತಿದ್ದರೆ ಪಿತ್ತರೋಗ ಎಂತಲೂ, 
★ ಪ್ರಮಾಣಾಧಿಖ್ಯತೆಯಿಂದ ಜೀವಕೋಶಗಳ ಉಸಿರಾಟಾದಿ ಚಲನೆಗೇ ಅಡ್ಡಿಪಡಿಸಿ ಊತವನ್ನು ಮಾಡಿದರೆ ಕಫರೋಗ ಎಂದೂ ಚಿಕಿತ್ಸಿಸುತ್ತೇವೆ. 
ಮತ್ತು
ಅದು ಇರುವ ಸ್ಥಾನವನ್ನು ಆಧರಿಸಿ ಯಾವ ಧಾತು, ಯಾವ ಅವಯವದ ರೋಗ ಎಂದು ಗುರುತಿಸಿ ಚಿಕಿತ್ಸಿಸುತ್ತೇವೆ.
ಕೊನೆಯದಾಗಿ ಆಮ ಆ ಸ್ಥಾನದಲ್ಲಿ ಎಷ್ಟು ಕಾಲದಿಂದ ಇದೆ ಎನ್ನುವುದನ್ನಾಧರಿಸಿ ನವವ್ಯಾಧಿ, ಜೀರ್ಣವ್ಯಾಧಿ ಎಂದು ಚಿಕಿತ್ಸೆ ಮಾಡುತ್ತೇವೆ.


▪️ ಏನಿದು ವಾತ, ಪಿತ್ತ, ಕಫ? ಆಧುನಿಕ ಕಾಲದಲ್ಲೂ ಇದೇ ಭಾಷೆಯಾ? ಎನ್ನುವವರಿಗಾಗಿ
👇
✍ ಆಮದ ಎಲ್ಲಾ ಅವಸ್ಥೆಗಳೂ ರಾಸಾಯನಿಕ ಕ್ರಿಯೆಗಳೇ ಆಗಿವೆ, "ಆಮ" ಒಂದು "ಕೆಮಿಕಲ್ ಚೈನ್" ಆಹಾರದಲ್ಲಿನ ರಾಸಾಯನಿಕಗಳಿಂದಲೇ ಉಂಟಾಗುತ್ತದೆ. ನಮ್ಮ ಎಂಜೈಮ್ ಗಳು ಆಹಾರದ ರಾಸಾಯನಿಕಗಳನ್ನು ವಿಭಜಿಸದೇ ಹೋದರೆ, 'ವಿಷ' ಮತ್ತು ವಿಭಜಿಸಿದರೆ ಅದೇ ಆಹಾರ.

ಈ ಆಮವಿಷಕ್ಕೆ ಪ್ರಧಾನ ಎರಡು ಗುಣಗಳಿವೆ ಒಂದು "ನಿರ್ದಿಷ್ಟತೆ" ಮತ್ತೊಂದು "ಸಾಮರ್ಥ್ಯ".
 ಕರಾರುವಕ್ಕಾಗಿ ಒಂದು ಸ್ಥಾನವನ್ನು ಹುಡುಕಿಕೊಂಡುಹೋಗಿ ನೆಲೆಯಾಗುವುದು, ನಂತರ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಶರೀರದ ಬದಲು ತನ್ನನ್ನೇ ಬೆಳೆಸಿಕೊಳ್ಳುವುದು. ಇದು ಒಂದು ಜೀವಿಯಾಗಿ ಮಾರ್ಪಾಡಾಗುವ ಸಾಮರ್ಥ್ಯವನ್ನೂ ಹೊಂದಿದೆ!! ಆಗ ತನ್ನ ಸಂತತಿಯನ್ನು ಬೆಳೆಸಿ, ಶರೀರವನ್ನು ಕ್ಷೀಣಿಸುವಂತೆ ಮಾಡುತ್ತದೆ. 

ಆಮವಿಷದಿಂದ ಜೀವಕೋಶಗಳಿಗೆ ಆಗುವ ಹಾನಿಯನ್ನಾಧರಿಸಿ "ಸುಖಸಾಧ್ಯ",  "ಕಷ್ಟಸಾಧ್ಯ", "ಅಸಾಧ್ಯ" ಮತ್ತು "ಮಾರಣಾಂತಿಕ" ರೋಗಗಳೆಂದು ಆಯುರ್ವೇದವು ಗುರುತಿಸುತ್ತದೆ.

▪️ ಪರಿಹಾರ ಏನು?
✍ ಆಮವಿಷ ಉತ್ಪತ್ತಿಯನ್ನು ತಡೆಯುವ ಮತ್ತು ಚಿಕಿತ್ಸಿಸುವ ಎಂದು ಎರೆಡು ಪರಿಹಾರಗಳಿವೆ.

1.ಆಮೋತ್ಪತ್ತಿಯ ತಡೆ:  ನಮ್ಮ ಸಾಮರ್ಥ್ಯ ಮೀರಿ ಆಹಾರ ಸೇವಿಸದೇ, ನಮ್ಮ ಅಗ್ನಿ(ಹಸಿವು)ಯನ್ನು ಸದೃಢವಾಗಿ ಇಟ್ಟುಕೊಳ್ಳುವುದು ಮತ್ತು ಆಹಾರ ಸೇವನೆಗೆ ತಕ್ಕಷ್ಟು ಶಾರೀರಿಕ ಕೆಲಸಗಳನ್ನು ಮಾಡಿ ಆಮವನ್ನು ಕರಗಿಸಿಬಿಡಬೇಕು.

ಚೆನ್ನಾಗಿ ಹಸಿಯುವುದೇ(ನೆನಪಿಡಿ: ಸಂಕಟವಾಗುವುದು, ತಡೆಯಲಾರದ ಹಸಿವು ಹಸಿವಲ್ಲ, ಅದೊಂದು ರೋಗ) ಆಮದ ಅನುಪಸ್ಥಿತಿಗೆ ಪ್ರತ್ಯಕ್ಷ ಸಾಕ್ಷಿ ಮತ್ತು ವ್ಯಾಯಾಮದಿಂದ ಮೈ ಬೆವರುವುದೇ ಆಮ‌ವಿಷ ಕರಗಿರುವುದಕ್ಕೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

2.ಆಮ ಚಿಕಿತ್ಸೆ:
ಆಮ ಬೆಳೆಯಲು ಕಾರಣವಾದ ಆಹಾರ ನೀಡದೇ ಆಮವನ್ನು ಅದು ಇರುವಲ್ಲೇ ಕರಗಿಸುವುದು, ಅದರ ವಿರುದ್ದ ಜೀರ್ಣಶಕ್ತಿ(ಎಂಜೈಮ್) ಉಂಟುಮಾಡಿ ಅದನ್ನು ಆಹಾರವನ್ನಾಗಿ ಪರಿವರ್ತಿಸುವುದು ಮತ್ತು ಆಮ ಹೆಚ್ಚಾಗಿದ್ದರೆ ಅದನ್ನು ಪಂಚಕರ್ಮಗಳಿಂದ ಕರಗಿಸಿ ಹೊರಹಾಕುವುದು.

▪️ ಆಯುರ್ವೇದವೇ ಏಕೆ ಸೂಕ್ತ?
ಆಧುನಿಕ ಪದ್ಧತಿಗೆ- 1.ಯಾವುದು ಆಹಾರ ?2.ಯಾವುದು ಅಗ್ನಿ? 3."ಆಹಾರದಿಂದಲೇ ಇಷ್ಟೆಲ್ಲಾ ರಾಸಾಯನಿಕ ಕ್ರಿಯೆಗಳು ನಡೆಯುತ್ತಿವೆ" 
*ಈ ಮೂರೂ ಜೀವಂತ ಶರೀರದಲ್ಲಿ ಪರಸ್ಪರ ಹೊಂದಾಣಿಕೆಯಲ್ಲಿ ನಡೆಯುವುದರ ಸಣ್ಣ ಪರಿಚಯವೂ ಇಲ್ಲ!!!* 
ಈ ಶರೀರವನ್ನು ನಿರ್ಜೀವ ವಸ್ತು ಅಥವಾ ಪ್ರಾಣಿಯಂತೆ ಕಾಣುತ್ತದೆ. ರೋಗ ಕಾರಣವಾದ ಆಹಾರ ನಿಲ್ಲಿಸಲು ಹೇಳದೇ, ಏನು ಬೇಕಾದರೂ ತಿನ್ನಬಹುದೆಂದು ಹೇಳುತ್ತದೆ. ಈ ಸಂಗತಿಗಳ ಪೂರ್ಣ ಪರಿಚಯ ಇಲ್ಲದೇ ಕೊಡುವ ಔಷಧಗಳು ರೋಗವನ್ನು ನಿರ್ಮೂಲ ಮಾಡದೇ, ಕೇವಲ ಲಕ್ಷಣದೊಂದಿಗೆ ಹೋರಾಡುತ್ತಿದೆ. ಒಂದಕ್ಕೆ ಪರಿಹಾರವೆಂಬಂತೆ ಕಂಡು ಇನ್ನೊಂದು ಅಪಾಯವನ್ನು ತಂದೊಡ್ಡುತ್ತಿವೆ. ಅದಕ್ಕಾಗಿ ಆಯುರ್ವೇದ ಅತ್ಯಂತ ಸೂಕ್ತ.

ಗಮನಿಸಿ:
🤷‍♀ ಇಷ್ಟೊಂದು ವ್ಯಾಕ್ಸಿನ್, ಔಷಧಿ, ಚಿಕಿತ್ಸೆಗಳೆಲ್ಲ
ಇರುವಾಗ ಇಂದು ರೋಗಗಳ ಉತ್ಪತ್ತಿ ನಿಂತಿಲ್ಲ, ಬಂದ ರೋಗ ನಿಯಂತ್ರಣದಲ್ಲೂ ಇಲ್ಲ, ಬದಲಾಗಿ ದಿನೇ ದಿನೇ ಏರುತ್ತಿದೆ, ಅಂದರೆ ಆರೋಗ್ಯದ ವಿಷಯದಲ್ಲಿ ಬಹುದೊಡ್ಡ ಫೇಲ್ಯೂರ್ ಅಲ್ಲವೇ? ಯೋಚಿಸಿ.

  🙏ಧನ್ಯವಾದಗಳು 🙏
By
ಹೆಚ್.ಬಿ.ಮೇಟಿ

2 comments:

MATHS TIME LINE

MATHS TIME LINE https://mathigon.org/timeline