✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 24 January 2021

1) ಏನು ಮಾಡುವುದರಿಂದ ಡಯಾಬಿಟೀಸ್ ನ್ನು ಶಾಶ್ವತವಾಗಿ ತಡೆಯಬಹುದು ? 2) ಡಯಾಬಿಟೀಸ್ ಮೊದಲು ಬರುವ ಲಕ್ಷಣಗಳೇನು?

🙏ಅಮೃತಾತ್ಮರೇ ನಮಸ್ಕಾರ 🙏
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
               🧘‍♂🧘🧘‍♀
••••••••••••••••••••••••••••••••••••••••••
25.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-3
••••••••••••••
✍️: ಇಂದಿನ ವಿಷಯ:
1) ಏನು ಮಾಡುವುದರಿಂದ ಡಯಾಬಿಟೀಸ್ ನ್ನು ಶಾಶ್ವತವಾಗಿ ತಡೆಯಬಹುದು?

2) ಡಯಾಬಿಟೀಸ್ ಮೊದಲು ಬರುವ ಲಕ್ಷಣಗಳೇನು?
•••••••••••••••••••••••••••••••••••••••••
🔥ಶರೀರದಲ್ಲಿ ಅಗ್ನಿ ಅಂದರೆ ಪಚನ ಸಾಮರ್ಥ್ಯ ಎರಡು ವಿಧ, ಸ್ಥೂಲ ಅಗ್ನಿ ಕರುಳಿನಲ್ಲಿರುವುದು ಮತ್ತು ಸೂಕ್ಷ್ಮ‌ರೂಪದ ಧಾತ್ವಾಗ್ನಿಗಳು ರಕ್ತದಲ್ಲಿ ಸಂಚಾರ ಮಾಡುತ್ತಿರುವುದು.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯಿಂದಲೂ, ಪೌಷ್ಠಿಕಾಂಶದ ಹೆಸರಿನಲ್ಲಿ ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವನೆ ಮಾಡಿ ತಕ್ಕಷ್ಟು ಶಾರೀರಿಕ ಶ್ರಮ ಮಾಡದೇ ಇರುವುದರಿಂದಲೂ, ಎರಡೂ ರೀತಿಯ ಅಗ್ನಿಗಳು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತವೆ. 
ಆಗ ನಮ್ಮ ಶರೀರ ಕೊಡುವ ಪ್ರಮುಖ ಸೂಚನೆಗಳು 👉
🛎 ಮೂರು ಹಂತಗಳಲ್ಲಿ ಪ್ರಮೇಹದ ಮತ್ತು ಮಧುಮೇಹದ ಮುನ್ಸೂಚನೆಗಳನ್ನು ಕಾಣಬಹುದು. ಆಚಾರ್ಯರು ಈ ಲಕ್ಷಣಗಳನ್ನು ಪೂರ್ವರೂಪ ಎಂಬ ಹೆಸರಿನಿಂದ ಕರೆಯುತ್ತಾರೆ.

ಇದು ಆರಂಭದಲ್ಲಿ ಕರುಳಿನ ಅಗ್ನಿಯಲ್ಲಿ ಕಂಡುಬರುತ್ತದೆ. ಅದರ ಲಕ್ಷಣ‌ ಎಂದರೆ,
💠 ದುರ್ಗಂಧಯುಕ್ತ 
ಬೆವರು
💠 ದುರ್ಗಂಧ ಶರೀರ , ಮತ್ತು
💠 ದುರ್ಗಂಧ ಮೂತ್ರ 
💠 ಮಲಬದ್ಧತೆ ಅಥವಾ ವಾಸನೆಯುಕ್ತ ಮಲ.
(ಕಾರಣ: ಆಹಾರದ ಅಂಶ ಇವುಗಳಿಂದ ಬೇರ್ಪಡದೇ ಇರುವುದು)
💠 ಶರೀರ ಶಿಥಿಲತೆ ಭಾವ, 
ಯಾವುದಕ್ಕೂ ಇಚ್ಛೆ ಇಲ್ಲದೇ ಕುಂತಲ್ಲೇ ಕುಂತಿರುವ ಭಾವ.

🛎 ಈ ಹಂತದಲ್ಲಿ ಎಚ್ಚರಗೊಂಡು- ಉಪವಾಸ, ಜೀರ್ಣಕ್ಕೆ ಭಾರವಾಗದ ಆಹಾರಸೇವನೆ, ಅದಕ್ಕೆ ತಕ್ಕಷ್ಟು ಶಾರೀರಿಕ ಕೆಲಸಗಳನ್ನು ಮಾಡುತ್ತಾ ಭಯಾತಂಕಗೊಳ್ಳದೇ ಇದ್ದರೆ ನೂರಕ್ಕೆನೂರು ತಡೆದುಬಿಡಬಹುದು.

🛎 ಆಗಲೇ ಎಚ್ಚರಗೊಳ್ಳದಿದ್ದರೆ ಎರಡನೇ ಹಂತದ ಪಚನಕ್ರಿಯೆಗೆ ಅಲ್ಪವಿಭಜಿತ ಅವಸ್ಥೆಯಲ್ಲಿರುವ ಆಹಾರ ಬಂದಾಗ, ಅದು ರಕ್ತದಲ್ಲಿನ ಧಾತ್ವಾಗ್ನಿ ಕ್ರಿಯೆಗೆ ಜೀರ್ಣವಾಗದೇ,  ಸಾರಭಾಗ ಉತ್ಪತ್ತಿಗಿಂತ ಹೆಚ್ಚು ಮಲ ಉತ್ಪತ್ತಿಯಾಗುವ ಕಾರಣ ಶರೀರ ಧಾರಣೆ ಮಾಡುವ ಧಾತುಗಳ ಕಾರ್ಯ ನಡೆಯದೇ ಮಲದ ಕಾರ್ಯ ಕಂಡುಬರುತ್ತದೆ. ಅದೆಂದರೆ
💠 ಭಾರವಾದ ಮನಸ್ಸು, 
💠 ನೇತ್ರ ಭಾರತೆ,
💠 ಶ್ರವಣಾದಿ ಇಂದ್ರಿಯಗಳೂ ಶರೀರವೂ ಭಾರ ಎನಿಸುವುದು 
ಹಾಗೂ 
💠 ಮಲಸ್ವೇದದ ಕಾರಣ ಅತಿಯಾದ ತಲೆಹೊಟ್ಟು,
💠 ಅಸ್ಥಿ ಧಾತುವಿನ ಮಲಗಳಾದ ಕೂದಲು ಉಗುರುಗಳು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುವುದು.

🛎 ಈ ಹಂತದಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಕೆಲ ದ್ರವ್ಯಗಳನ್ನು ಆಹಾರದಲ್ಲಿ ಬಳಸುವುದು ಮತ್ತು ಮೊದಲ ಹಂತದ ಪರಿಹಾರ ಎರಡನ್ನೂ ಸೇರಿಸಿದರೆ ಡಯಾಬಿಟೀಸ್ ಸಂಪೂರ್ಣ ತಡಯಬಹುದು.
•••••
🛎 ಅಗ್ನಿಗಳ ಹಂತ ಮೀರಿ ಸ್ರೋತಸ್ಸು(ಶರೀರ ಅಥವಾ ಧಾತುಗಳ ಉತ್ಪತ್ತಿ ಸ್ಥಾನ)ಗಳು ದುಷ್ಠಿಯಾದಾಗ-
🤯 ಸೆಖೆಯಾಗುವುದು, ತಂಪು ಬೇಕೆನಿಸುವುದು/ಫ್ಯಾನ್ ಇಲ್ಲದೇ ಇರಲಾಗದು,
🥺 ಬಾಯಿ ಒಣಗುವಿಕೆ,
🤬 ಹಸ್ತಪಾದ ಉರಿ,
🐜 ಮೂತ್ರಕ್ಕೆ ಇರುವೆ ಮುತ್ತಿಕೊಳ್ಳುವುದರ ಮೂಲಕ ಮುನ್ಸೂಚನೆ ಕಾಣುವವು.
ಇದಾಗಲೇ ರಿಪೇರಿ ಹಂತ ಮೀರುತ್ತಿರುವ, ಆದರೂ ಪೂರ್ವರೂಪ ಅವಸ್ಥೆ.

ಇವೆಲ್ಲಾ ಪೂರ್ವರೂಪಗಳೇ ಆದ್ದರಿಂದ ಡಯಾಬಿಟೀಸ್ ಬಂತೆಂದು ಅರ್ಥವಲ್ಲ. ಆದರೆ ಮುಂದೆ ಪ್ರಮೇಹ ಮತ್ತು ಮಧುಮೇಹ ಬರುವ ಸ್ಪಷ್ಟ, ನಿಖರ ಸೂಚನೆಗಳು👈

ಈ ಹಂತದಲ್ಲಿ ಮೊದಲೆರೆಡು ಪರಿಹಾರಗಳೊಟ್ಟಿಗೆ ಆಯುರ್ವೇದ ಔಷಧವನ್ನೇ ಮಾಡಬೇಕು
ಆಗ ಶೇ 80 % ಜನರಿಗೆ ಶಾಶ್ವತ ಪರಿಹಾರ ಮತ್ತು ಶೇ 20% ಜನರಿಗೆ ಡಯಾಬಿಟೀಸ್ ಅನ್ನು 5-10ವರ್ಷಗಳ ಕಾಲ ಮುಂದೂಡಲು ಸಾಧ್ಯ.

ವಿಚಿತ್ರ ಎಂದರೆ ಇಷ್ಟು ಮುನ್ಸೂಚನೆಯಿತ್ತ ಆಯುರ್ವೇದದ ಮಾತನ್ನು ಕೇಳಿ, ಪರಿಹಾರವನ್ನು 
ಆಯುರ್ವೇದದಲ್ಲಿ ಕೇಳದೇ, ಸೂಪರ್ ಸ್ಪೆಷಾಲಿಟೀ ಎಂಬ ತಲೆಯ ಗುಂಗಿನಿಂದ ಮತ್ತು ಇದೇ ವಿಜ್ಞಾನ ಎಂಬ ಧೋರಣೆಗೊಳಗಾಗಿ- ಸಧ್ಯಕ್ಕೆ ಯಾವ ಪರಿಹಾರವನ್ನೂ ಕಂಡುಕೊಳ್ಳದ ಮತ್ತು ಅಗ್ನಿಯ ಕಾರ್ಯವನ್ನು ತಿಳಿಯದೇ ಇರುವ ಮತ್ತು ಅತೀ ಬಾಲಿಷ ಪ್ರಯೋಗ ಮಾಡುತ್ತಿರುವ ಅಲೋಪಥಿಗೆ ಮೊರೆಹೋದರೆ ಯಾವುದೇ ಕಾರಣಕ್ಕೂ ಪರಿಹಾರ ಅಸಾಧ್ಯ🙄

🗣 ಅಲ್ಲಿ ಈ ಮಾತುಗಳೇ ಕಂಡುಬರುತ್ತವೆ- 
🧐 ಅನ್ನ ಬಿಡಿ ಗೋಧಿ ತಿನ್ನಿ!!
🧐 ತುಪ್ಪ‌ತಿನ್ನಬೇಡಿ!!
🤭 ಯಾವುದಕ್ಕೂ ಒಂದು ಚಿಕ್ಕ ಮಾತ್ರೆ ಆರಂಭಿಸಿ!!
🤫 ಚಿಂತೆ ಬಿಡಿ ಬಂದಾಗ ನೋಡೋಣ!
 😷 ಏನ್ಮಾಡಕ್ಕಾಗುತ್ತೆ ಒಪ್ಕೊಳ್ಳಿ ನಿಮ್ಮೊಬ್ರಿಗಾ ಇರೋದು!
🤐 ಹೆರಿಡಿಟರಿ!
🙄 ನಿಮ್ಮ ವರ್ಕ್ ಪ್ಯಾಟ್ರನ್ ಹಾಗಿದೆ....!!!
👆ಇವೆಲ್ಲಾ ಕಾರಣಗಳೇ ಹೊರತು ಪರಿಹಾರಗಳಲ್ಲ.


🕵 ಈಗಲೇ ಎಚ್ಚೆತ್ತುಕೊಳ್ಳಿ, ಡಯಾಬಿಟೀಸ್ ಎಷ್ಟೇ ಅನುವಂಶೀಯವಾಗಿದ್ದರೂ ಬಾರದಂತೆ ತಡೆದುಬಿಡಿ.

💁‍♀ ಸರಳ ಪರಿಹಾರಗಳು:
▪️ ಹಸಿಯದೇ ಉಣದಿರೋಣ.
▪️ ಹಸಿದರೂ ಬಹಳಕಾಲ ಉಪವಾಸ ಮಾಡದಿರೋಣ.
▪️ ಚಪಾತಿ ತಿನ್ನದಿರೋಣ.
▪️ ಆಹಾರದಲ್ಲಿ ನೀರಿನ ಅಂಶ ಯಥೇಚ್ಛವಾಗಿರುವಂತೆ ನೋಡಿಕೊಳ್ಳೋಣ.
▪️ ನಿತ್ಯ ಶಾರೀರಿಕ ಕೆಲಸಗಳನ್ನು ಮಾಡೋಣ.

✔️ ಅತ್ಯಂತ ಪ್ರಾಮುಖ್ಯವಾದ ನಿತ್ಯಪರಿಹಾರದ ಅಂಶಗಳು:
ನಮ್ಮ ಹಸಿವು, ಬಾಯಾರಿಕೆ, ನಿದ್ದೆ, ಆಯಾಸ, ಮಲ, ಮೂತ್ರಗಳ ಮಾತನ್ನು ಅನುಸರಿಸೋಣವೇ ಹೊರತು, ಯಾರೋ ಹೇಳಿದರೆಂದು ಅಕಾಲದಲ್ಲಿ ಮೂಢ ಅನುಕರಣೆ ಬೇಡ. 
ನಮ್ಮ ಅವಸ್ಥೆ ನಮ್ಮ ಶರೀರಕ್ಕೆ ಸ್ಪಷ್ಟವಾಗಿ ತಿಳಿಯುತ್ತದೆಯೇ ಹೊರತು ಎದುರಿಗಿರುವ ಪಂಡಿತರಿಗಲ್ಲ ಎಂಬುದೇ ಪೂರ್ಣ ಸತ್ಯ. 
ಹಾಗಾಗಿ 
ನಮ್ಮ ನಮ್ಮ ಶರೀರ ಎಲ್ಲವನ್ನೂ ಕೇಳುತ್ತದೆ, ಕೇಳಿದಾಗ ಇಲ್ಲ ಎನದಂತೆ, ಅದು ಒಲ್ಲೆ ಎಂದರೂ ಬಾಯಿಗೆ ತುರುಕದಂತೆ ಮನಸ್ಸನ್ನು ನಿಗ್ರಹಿಸಿ.
ಮೈಭಾರ ಎನಿಸಿದರೆ ಹಗುರವಾಗುವವರೆಗೆ ಕೆಲಸ ಮಾಡಿ.

3 comments:

MATHS TIME LINE

MATHS TIME LINE https://mathigon.org/timeline