🙏ಅಮೃತಾತ್ಮರೇ ನಮಸ್ಕಾರ 🙏
🪴ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ🪴
••••••••••••••••••••••••••••••••••••••••••
27.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-5
••••••••••••••
✍️: ಇಂದಿನ ವಿಷಯ:
ಪ್ರಮೇಹ ಹೋಗಲಾಡಿಸಿಕೊಳ್ಳುವ
ಮತ್ತು
ಮಧುಮೇಹ ನಿಯಂತ್ರಣದ ಸರಳೋಪಾಯಗಳು👇
•••••••••••••••••••••••••••••••••••••••••
◆ ಹಸಿವನ್ನು ಅನುಸರಿಸಿ ಆಹಾರ ಸೇವಿಸಿ.
◆ ಶಾರೀರಿಕ ಶ್ರಮ ವಹಿಸಿ ಕೆಲಸ ಮಾಡುವವರು ಪ್ರಮಾಣದಲ್ಲಿ ಅಧಿಕವಾಗಿಯೂ ಶಕ್ತಿಯಲ್ಲಿ ಮಧ್ಯಮ ಇರುವಂತೆಯೂ ಆಹಾರ ಸೇವಿಸಿ.
◆ ಬೌದ್ಧಿಕ ಶ್ರಮ ಕೆಲಸ ಮಾಡುವವರು ಶಕ್ತಿಯಲ್ಲಿ ಅಧಿಕ, ಪ್ರಮಾಣದಲ್ಲಿ ಕಡಿಮೆ ಇರುವಂತೆಯೂ ಆಹಾರ ಸೇವಿಸುವುದು.
◆ ಹಣೆಯಲ್ಲಿ ಬೆವರು ಬರುವವರೆಗೆ ಮಾತ್ರ ವ್ಯಾಯಾಮ ಮಾಡಿ. ಕೆಲಸದಲ್ಲೂ ಅಷ್ಟೇ ಹಣೆಯಲ್ಲಿ ಬೆವರು ಬಂದಮೇಲೆ ಸ್ವಲ್ಪ ಕುಳಿತು ಕೆಲಸ ಮುಂದುವರಿಸಿ.
◆ ಚಪಾತಿಗಿಂತ ನೀರು ಅಧಿಕ ಇರುವ ಗೋಧಿ ಉಪ್ಮಾ / ಉಪ್ಪಿಟ್ಟು, ಮೆಂತ್ಯೆ ಕಡುಬು ಅತ್ಯುತ್ತಮ. ನೀರು ಕಡಿಮೆ ಇರುವ ಗೋಧಿ ಪದಾರ್ಥಗಳನ್ನು ಸೇವಿಸಬೇಡಿ.
◆ ಹಗಲು ನಿದ್ದೆ ಸರ್ವದಾ ತ್ಯಜಿಸಿ.
◆ ತಡರಾತ್ರಿ ನಿದ್ದೆ ಬೇಡ.
◆ ಚಿಂತೆ ಮಾಡುವವರು, ವಿಶೇಷವಾಗಿ ಭಯಪಡುವ ಸ್ವಭಾವದವರು, ಸೂಕ್ತ ಪರಿಹಾರ ಕಂಡುಕೊಳ್ಳದೇ ದೊಡ್ಡ ದೊಡ್ಡ ಕೆಲಸಗಳಿಗೆ, ಜವಾಬ್ದಾರಿ ಹೊರುವ ಕೆಲಸಗಳಿಗೆ ಕೈಹಾಕಬೇಡಿ.
◆ ಬೌದ್ಧಿಕ ಕೆಲಸ ನಿಮ್ಮದಾಗಿದ್ದರೆ, ನಿಮ್ಮ ರಕ್ತದಲ್ಲಿ ಸ್ವಲ್ಪ ಸಕ್ಕರೆ ಅಂಶ ಹೆಚ್ಚಿರುತ್ತದೆ, ಗಾಭರಿ ಬೇಡ.
◆ FBS+PPBS ಎರಡರ ಮೊತ್ತವನ್ನು 2 ರಿಂದ ಭಾಗಿಸಿದರೆ, ಅದು 250 ರ ಒಳಗಿದ್ದರೆ ಯಾವ ಮಾತ್ರೆಗಳನ್ನೂ ಸೇವಿಸುವ ಅಗತ್ಯ ಇಲ್ಲ. ಆದರೆ ಪ್ರತಿದಿನ ಶ್ರಮ ಮಾಡಿ.
◆ ಮೈದಾ(ಬಿಸ್ಕೆಟ್ಸ್, ಬ್ರೆಡ್, ಕೇಕ್, ಬರ್ಗರ್, ಪಿಜ್ಜಾ), ಕರಿದ ಪದಾರ್ಥಗಳು, ಮೇಲಿನಿಂದ ವಗ್ಗರಣೆ ಕಲಸಿದ ಪದಾರ್ಥಗಳು, ಅತಿಯಾದ ಮಾಂಸಹಾರ, ಸೋಂಬೇರಿತನ ಬೇಡವೇ ಬೇಡ.
◆ ಅನುವಂಶೀಕ ಪರಿವರ್ತಿತ ಆಹಾರ, ಹೆಚ್ಚು ಇಳುವರಿ ಕೊಡುವ ಸಸ್ಯ ಮತ್ತು ಮಾಂಸಗಳಿಂದ ತಯಾರಿತ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಸರ್ವಥಾ ಅಪಾಯಕಾರಿ.
◆ ನಿಮ್ಮ ಪ್ರಾಂತೀಯ ಆಹಾರವೇ ಪ್ರಧಾನವಾಗಿರಲಿ.
◆ ಮೂತ್ರ, ಬೆವರು ವಾಸನೆ ಬಂದರೆ ಮತ್ತು ಬಹಳ ಕಾಲದಿಂದ ಇದ್ದರೆ ತಕ್ಷಣ ಪರಿಹಾರ ಮಾಡಿಕೊಳ್ಳಿ.
◆ ಆಧ್ಯಾತ್ಮಿಕ ಸಾಧಕರಲ್ಲೂ ಮಧುಮೇಹ ಇರುವುದು ಏನನ್ನು ಸೂಚಿಸುತ್ತದೆ ಎಂದರೆ- ಕೇವಲ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಶಾಂತ ಜೀವನಗಳಿಂದಲೇ ಮಧುಮೇಹವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಅಸಾಧ್ಯ.
◆ ಮಾನಸಿಕ ದೃಢತೆ, ಶಾಂತ ಜೀವನ, ಸದೃಢ ಜೀರ್ಣಕ್ರಿಯೆ ಇವು ಆರೋಗ್ಯದ ಗುಟ್ಟುಗಳು.
ಧನ್ಯವಾದಗಳು 🙏🙏🙏
••••••••••••••
By
ಹೆಚ್.ಬಿ.ಮೇಟಿ
No comments:
Post a Comment