🙏ಅಮೃತಾತ್ಮರೇ ನಮಸ್ಕಾರ 🙏
🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿
🕊ಸ್ವಾಸ್ಥ್ಯ ಸರ್ವರದ್ದೂ ಆಗಲಿ🕊
••••••••••••••••••••••••••••••••••••••••••
26.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-3
••••••••••••••
✍️: ಇಂದಿನ ವಿಷಯ:
ಮಧುಮೇಹ ಚಿಕಿತ್ಸೆ ಎಷ್ಟು ಸತ್ಯ🤔
•••••••••••••••••••••••••••••••••••••••••
ಪ್ರಮೇಹ ಮಧುಮೇಹಗಳಲ್ಲಿ, ಅಪತರ್ಪಣ(ಶರೀರ ಒಣಗಿಸುವ) ಔಷಧಗಳನ್ನು ಪ್ರಯೋಗಿಸಲೇಬಾರದು.
ಆದರೆ ದುರಾದೃಷ್ಟವಶಾತ್ ಎಲ್ಲಾ ಅಲೋಪಥಿ ದ್ರವ್ಯಗಳು, ಕೊಲೆಸ್ಟರಾಲ್ ಕರಗಿಸುವ, ಸಕ್ಕರೆ ಕಡಿಮೆ ಮಾಡುವ ಕಾರ್ಯವನ್ನೇ ಮಾಡುತ್ತಿವೆ. ಅದರಿಂದ ಏನು ಉಪದ್ರವಗಳು ಬರುತ್ತವೆ ಎಂದು ಶ್ಲೋಕ ಸಂಖ್ಯೆ 17ರಲ್ಲಿ ಚರಕಾಚಾರ್ಯರು ಸ್ಪಷ್ಟವಾಗಿ ಹೇಳುತ್ತಾರೆ.
❄️ ಇಂದಿನ ನಮ್ಮ ಔಷಧಕೃತ್ಯಗಳಿಂದ ಮಧುಮೇಹಿಗಳ ಸರ್ವಧಾತುಗಳೂ ಕ್ಷಿಣಿಸುತ್ತಿವೆ, ಅಂದರೆ ನಿಧಾನವಾಗಿ ಅಕಾಲ ಮರಣದತ್ತ ಅವರನ್ನು ನೂಕುತ್ತಿದ್ದೇವೆ.
❄️ ಧಾತು ಕ್ಷೀಣತೆ ಎಂದರೆ
🔹 ಶರೀರವನ್ನು ಹಸಿಯಾಗಿಡುವ ರಸಧಾತು ಒಣಗಿದ ಕಾರಣ- ಚರ್ಮದಸುಕ್ಕು, ಕಾಂತಿನಾಶ, ಕ್ಲೈಭ್ಯ(ಲೈಂಗಿಕ ಶಕ್ತಿಹ್ರಾಸ)
🔹 ರಕ್ತಕ್ಷಯದ ಕಾರಣ ಸಿರಾ(arteries and veins) ಒಣಗುವಿಕೆ ತತ್ಕಾರಣ- ಬಿ.ಪಿ ವೃದ್ಧಿ, ಹೃದಯ/ಮೆದುಳಿನ ರಕ್ತನಾಳ ಕಟ್ಟುವಿಕೆ-ಹೃದಯಾಘಾತ, ಪಾರ್ಶ್ವವಾಯು... ಮೂತ್ರಪಿಂಡಗಳಲ್ಲಿನ ಸೂಕ್ಷ್ಮ ರಕ್ತನಾಳಗಳು ಒಣಗುವಿಕೆ(vascular hardness)ಯಿಂದ ಅವುಗಳ ಸೋಸುವಿಕೆ ಕಾರ್ಯ ಹಾಳಾಗಿ ಕಿಡ್ನಿ ಫೇಲ್ ಆಗುವುದು.
🔹 ಮಾಂಸಧಾತು ಒಣಗುವಿಕೆಯಿಂದ ಶರೀರದ ಬಲ ಕುಂದುವುದು.
🔹 ಮೇದಸ್ಸು ಒಣಗುವುದರಿಂದ ಅದರ ಉಪಧಾತುಗಳಾದ ನರಗಳು(Brain and entire nervous system) ಒಣಗಿ, ನ್ಯೂರೈಟೀಸ್(ಕೈಕಾಲು ಮರಗಟ್ಟುವಿಕೆ...) ಮ್ಯಾಕುಲಾರ್ ಡಿಜನರೇಷನ್(ಕಣ್ಣಿನ ನರವ್ಯೂಹ ರೆಟಿನಾ ಹಾಳಾಗುವುದು) ಮುಂತಾದವು,
🔹 ಅಸ್ಥಿ-ಮಜ್ಜಾಧಾತು ಒಣಗಿ ಮೂಳೆ, ಸಂಧು, ರಕ್ತೋತ್ಪತ್ತಿ ಎಲ್ಲವುಗಳು ಸೊರಗಿ ಮಾನವ ಉಸಿರಾಡುವ ಶವದಂತೆ ಆಗುತ್ತಾನೆ😞
ಇಷ್ಟಾದರೂ ರಕ್ತದ ಸಕ್ಕರೆ ಅಂಶವನ್ನೇ ಎದುರುನೋಡುವ ಅಲೋಪಥಿ ಇನ್ಸುಲಿನ್ ನಂತಹ ಮಾರಕ ಅಸ್ತ್ರ ಪ್ರಯೋಗಕ್ಕೆ ಮುಂದಾಗುವುದು ಮತ್ತು ಮಾತ್ರೆಗಳಿಗಿಂತ ಅದೇ ಶ್ರೇಷ್ಠ ಎಂದು ಹೇಳುವುದು ಅನ್ಯಾಯವೇ ಸರಿ.
❄️ ಹಿಂದೊಮ್ಮೆ ಸಕ್ಕರೆ ಕಡಿಮೆ ಮಾಡುವ ಮಾತ್ರೆಗಳು ಬೇಕೇ ಬೇಕು ಎಂದು ಹಠಮಾಡಿದ್ದ ವಿಜ್ಞಾನ ಮಾತ್ರೆಗಳಿಂದ ಯಕೃತ್, ಮೂತ್ರಪಿಂಡಗಳಿಗೆ ತೊಂದರೆ ಆಗುತ್ತದೆ ಹಾಗಾಗಿ ಇನ್ಸುಲಿನ್ ಒಳ್ಳೆಯದು ಎನ್ನುತ್ತದೆ. ಇಲ್ಲಿ ಹೋಲಿಕೆ ಮಾಡುತ್ತಿರುವುದು, ತನ್ನ ಮಾತ್ರೆಗಳು ಮತ್ತು ಇನ್ಸುಲಿನ್ ನಡುವೆಯೇ ಹೊರತು ಜಗತ್ತಿನ ಇನ್ನಾವುದೇ ಪದ್ಧತಿಯ ಔಷಧಿಗಳ ಜೊತೆ ಹೋಲಿಸುತ್ತಿಲ್ಲ, ಹಾಗೊಂದು ಪ್ರಕ್ರಿಯೆ ಪ್ರಾರಂಭವಾದ ದಿನ ಆರೋಗ್ಯ ಕ್ಷೇತ್ರದ ಸುದಿನ, ಜನರ ಗೆಲುವು ಎಂದೇ ಹೇಳಬಹುದು.
❄️ ಇನ್ನೂ ಆಶ್ಚರ್ಯ ಎಂದರೆ ಅಲೋಪಥಿ ಹಾದಿಯನ್ನೇ ಹಿಡಿದ, ಆಯುರ್ವೇದ ಸಂಶೋಧನೆಗಳೂ ಕೇವಲ ಅಪತರ್ಪಣ ದ್ರವ್ಯಗಳು ಉತ್ತಮ ಸಕ್ಕರೆ ನಿಯಂತ್ರಕಗಳು ಎಂದು ಸಾಬೀತುಪಡಿಸುತ್ತಿವೆ.
🔹 ಉದಾಹರಣೆಗೆ "ಅಡಿಕೆಯಿಂದ ತಯಾರಿಸುವ ಮಧುಮೇಹ ನಿಯಂತ್ರಕ ಔಷಧಿಗಳು"!! ಆ ಕಾರಣದಿಂದ ಉಪದ್ರವಗಳಿಂದ ಮಾನವನ ಬದುಕು ಹಾಳಾಗುವುದು ತಪ್ಪುತ್ತಿಲ್ಲ.
❄️ ಪ್ರಮೇಹವನ್ನು ಮತ್ತು ಮಧುಮೇಹವನ್ನು ಆಯುರ್ವೇದದ ರೀತಿಯಲ್ಲಿಯೇ ನೋಡಿ ಚಿಕಿತ್ಸಿಸಬೇಕೇ ಹೊರತು ಇನ್ನಾವುದೋ ಪೂರ್ವಾಗ್ರಹದ ಸಿದ್ಧಾಂತದ ಮೇಲೆ ಅಲ್ಲ.
ಇದರ ಪ್ರತ್ಯಕ್ಷ ಉದಾಹರಣೆಯನ್ನು ವಿಜಯವಾಣಿಯ ಹಿರಿಯ ಉಪಸಂಪಾದಕರು, ನಮ್ಮ ಆತ್ಮೀಯ ಹಿರಿಯ ಮರ್ಗದರ್ಶಕರಾದ.ಆರ್.ರಘುರಾಮ್ ಅವರು ತಮ್ಮ ಅನೇಕ ಉಪನ್ಯಾಸಗಳಲ್ಲಿ ಮಧುಮೇಹಕ್ಕೆ ಆಯುರ್ವೇದ ಬಳಸಿದ ಲಾಭ ಏನೆಂಬುದನ್ನು ಹೇಳುತ್ತಾರೆ.
🎤 ನಾಳಿನ ಸಂಚಿಕೆ ಅವರ ಅನುಭವವೇ ಆಗಿದೆ.
ಅವರ ಮಾತನ್ನು ಕೇಳಿದ ಮೇಲೆ ನಿಮ್ಮ ಭರವಸೆ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಧನ್ಯವಾದಗಳು 🙏🙏🙏
••••••••••••••••••••••••••••••••••••••••••
Superb sir.its good work to give the the information to society.
ReplyDelete