✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 31 January 2021

ಜೀವಸತ್ವಗಳು

CLICK HERE TO DOWNLOAD

1)ನಮ್ಮ ಸ್ನಾನ ಆಯಾಸ ಪರಿಹಾರ ಮಾಡುತ್ತಿದೆಯೇ? 2) ಸ್ನಾನ ನಮ್ಮ ತ್ವಚೆಯನ್ನು ಕಾಂತಿಯಿಂದ‌ ಇಡುತ್ತಿದೆಯೇ? 3)ನಮ್ಮ ಸ್ನಾನಕ್ಕೆ ಮುಪ್ಪನ್ನು ದೂರಮಾಡುವ ಶಕ್ತಿ ಇದೆಯೇ?

🤝ಅಮೃತಾತ್ಮರೇ ನಮಸ್ಕಾರ 🤝
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
      🍀🍀🍀🍀🍀🍀🍀
••••••••••••••••••••••••••••••••••••••••••
01.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-10
••••••••••••••
✍️: ಇಂದಿನ ವಿಷಯ:
1)ನಮ್ಮ ಸ್ನಾನ ಆಯಾಸ ಪರಿಹಾರ ಮಾಡುತ್ತಿದೆಯೇ? 
2) ಸ್ನಾನ ನಮ್ಮ ತ್ವಚೆಯನ್ನು ಕಾಂತಿಯಿಂದ‌ ಇಡುತ್ತಿದೆಯೇ? 
3)ನಮ್ಮ ಸ್ನಾನಕ್ಕೆ ಮುಪ್ಪನ್ನು ದೂರಮಾಡುವ ಶಕ್ತಿ ಇದೆಯೇ?
•••••••••••••••••••••••••••••••••••••••••
             🛁🚿🚰
🖋 ಹಾಗಾದರೆ ಬಹು ಉಪಯೋಗಿ ಸ್ನಾನವನ್ನು ಮಾಡಬೇಕಾದದ್ದು ಹೇಗೆ?

📜 ಅಭ್ಯಂಗಂ ಆಚರೇತ್ ನಿತ್ಯಂ ಸ ಜರಾ ಶ್ರಮ ವಾತಾಃ ||7||
ದೃಷ್ಟಿಪ್ರಸಾದ ಪುಷ್ಠಿ ಆಯುಃ ಸ್ವಪ್ನ ಸು-ತ್ವಕ್ ದಾರ್ಢ್ಯಕೃತ್ |
ಶಿರಃ ಶ್ರವಣ ಪಾದೇಶು ತಂ ವಿಶೇಷೇಣ ಶೀಲಯೇತ್ ||8||
-> ವಾಗ್ಭಟ ಸೂತ್ರ -2

 ನಿತ್ಯ ತೈಲವನ್ನು ಶರೀರಕ್ಕೆ ಲೇಪಿಸದೇ ಸ್ನಾನ ಮಾಡಬಾರದು. ದುರಾದೃಷ್ಟವಶಾತ್ ಇಂದು ನಾವು ಅದಕ್ಕೆ ವಿರುದ್ಧವಾಗಿ ಸೊಪ್ ಉಪಯೋಗಿಸಿ ಸ್ನಾನ ಮಾಡುತ್ತಿರುವ ದುಸ್ಥಿತಿಗೆ ಬಂದ್ದದ್ದೂ ಅಲ್ಲದೇ, ಅದನ್ನೇ ಶ್ರೇಷ್ಠ ಎಂದೂ ನಂಬಿದ್ದೇವೆ.

🖋 ತ್ವಚೆಗೆ ನಿತ್ಯವೂ ತೈಲ ಲೇಪಿಸುವ ವೈಜ್ಞಾನಿಕ ಕಾರಣ ಏನು?
★ ಉತ್ತರ:
ತ್ವಚೆಯು ಆರು ಪದರಗಳಿಂದ ಕೂಡಿದೆ, ಏಳನೇ ಪದರವೇ ಮಾಂಸಧಾತು, ಇಲ್ಲಿಂದಲೇ ಚರ್ಮದ ಎಲ್ಲಾ ಪದರಗಳೂ ಉಂಟಾಗುತ್ತವೆ ಮತ್ತು ಬೆಳೆಯುತ್ತವೆ.‌ ಆದರೆ ಪೋಷಣೆಯ ಕಾರ್ಯ ಮಾತ್ರ ಈ ಪದರಗಳ ಮಧ್ಯ ದ್ರವರೂಪದಿಂದ ಇರುವ ರಸಧಾತುವಿನಿಂದ ಆಗುತ್ತದೆ. 
ಇಲ್ಲಿ ಎರೆಡು ವಿಶೇಷ ಪದರಗಳಿವೆ: 
1) ರೋಹಿಣಿ 
2) ವೇದಿನಿ
ಇವುಗಳಿಂದ ಚರ್ಮದ ಕಾಂತಿ ಮತ್ತು ಸ್ಪರ್ಶಜ್ಞಾನ ಉಂಟಾಗುತ್ತದೆ.

✴️ ರೋಹಿಣಿ ತ್ವಚೆ:
ರೋಹಿಣಿ ತ್ವಚೆಯಲ್ಲಿರುವ ಅತೀಸೂಕ್ಷ್ಮ ರಕ್ತನಾಳಗಳು ಚರ್ಮಕ್ಕೆ ವರ್ಣ, ಕಾಂತಿ ಕೊಡುವುದರ ಜೊತೆಗೆ ಎಲ್ಲಾ ಪದರಗಳಿಗೆ ಪೋಷಕ ರಸವನ್ನು ತಲುಪಿಸುತ್ತದೆ. ಇದೇ ಕಾರಣದಿಂದ ವಾತ ಪ್ರಧಾನ ರಕ್ತದಲ್ಲಿ ಚರ್ಮವು ಕಪ್ಪಾಗಿಯೂ, ಪಿತ್ತ ಪ್ರಧಾನ ರಕ್ತ ಇರುವ ಚರ್ಮ ನಸುಗೆಂಪು(ರಾಗವರ್ಣ) ಮತ್ತು ಕಫಪ್ರಧಾನ ರಕ್ತದಿಂದ ಗೋಧೂಮ ವರ್ಣ(ಗೋಧಿಬಣ್ಣ) ಬರುತ್ತದೆ. ನಮ್ಮ ಚರ್ಮ ನಮ್ಮ ಪ್ರಕೃತಿಯನ್ನು ಹೇಳುತ್ತದೆ. ಇರಲಿ ನಿತ್ಯ ತೈಲ ಲೇಪನದಿಂದ ಸೂಕ್ಷ್ಮ ರಕ್ತನಾಳಗಳು ಸಶಕ್ತವಾಗಿ ತ್ವಚಾಪೋಷಣ ಸೂಕ್ತವಾಗಿ ಕಾಂತಿಯುತವಾಗುತ್ತದೆ. ಇದನ್ನು ಮರೆತು ಹೊರಗಿನಿಂದ ಏನು ಲೇಪಿಸಿದರೂ ಆಂತರ್ಯದಿಂದ ಸಿಗುವ ಇಂತಹ ಕಾಂತಿ ದೊರಕುವುದು ಅಸಾಧ್ಯ.

✴️ ವೇದಿನಿ ತ್ವಚೆ:
ಇದು ಬಹು ಮುಖ್ಯ ಪದರವಾಗಿದ್ದು ಚರ್ಮದ ಇಂದ್ರಿಯಸ್ಥಾನ ‌ಇರುವುದೇ ಇಲ್ಲಿ. ಚರ್ಮದ ಸಂವೇದನೆಗಳು ಇಲ್ಲಿರುವ ತಿರ್ಯಗ್ಗಾಮಿ ಧಮನಿಗಳಿಂದ(nerve endings) ಮೆದುಳನ್ನು ತಲುಪಿ ಸರ್ವ ಶರೀರದ ಸಂವೇದನೆ ಕಾರ್ಯ ನಿರ್ವಹಿಸುವುದಲ್ಲದೇ, ತೈಲ ಲೇಪನದಿಂದ ಶಾರೀರಿಕ ಶ್ರಮವನ್ನು ಕ್ಷಣದಲ್ಲಿ ಹೋಗಲಾಡಿಸುವುದು. ಅಂದರೆ ಶರೀರದ ಸರ್ವ ನೋವುಗಳನ್ನು ತೈಲ ಲೇಪಿತ ಸ್ನಾನ ಹೋಗಲಾಡಿಸುವುದು.

ನಿತ್ಯ ದುಡಿಮೆಯಿಂದ ನಮ್ಮ ನರಗಳು ಅತಿಸಂವೇದನಾಶೀಲತೆಯನ್ನು ಪಡೆದು ಶಾರೀರಿಕ ಆಯಾಸವನ್ನೂ, ನಿರಾಸಕ್ತಿಯನ್ನೂ ಉಂಟುಮಾಡುತ್ತವೆ. ಇದನ್ನು ಪರಿಹರಿಸಲು ನರಗಳಿಗೆ  ಸ್ನೇಹದ್ರವ್ಯ(lubricants)ಗಳು ಬೇಕು, ಅದು ತೈಲಲೇಪನದಿಂದ ಸಿಗುತ್ತದೆ. ಆದರೆ ಈಗ ನಾವು ಮಾಡುತ್ತಿರುವುದೇನು? ಮತ್ತು ಬಯಸುತ್ತಿರುವುದು ಏನನ್ನು!?
ಅತ್ಯಂತ ರೂಕ್ಷ ದ್ರವ್ಯವಾದ(Anti lubricants) ಸೋಪನ್ನು 🧼 ಬಳಸಿ ಶರೀರದ ಸೌಂದರ್ಯವನ್ನೂ ಆರೋಗ್ಯವನ್ನೂ ನಿರೀಕ್ಷಿಸುವುದು ಎಷ್ಟು ಸರಿ?!

🧓👵ಇದೇ ಕಾರಣದಿಂದ ನಮ್ಮ ಹಿರಿಯರು *ಸ್ನಾನಕ್ಕೆ ಹೊರಟಾಗ ಎಣ್ಣೆ ಕೊಡು* ಎಂದು ಕೇಳುತ್ತಿದ್ದರು.
 ಇಂದು ಸೋಪು, ಶ್ಯಾಂಪು, ಲಿಕ್ವಿಡ್...ಮುಂತಾದ ಹೆಸರುವಾಸಿಯಾದ ಅನಾರೋಗ್ಯಕರ ದ್ರವ್ಯಗಳನ್ನು ಕೇಳುತ್ತೇವೆ!!!?

🖋 ಶರೀರಕ್ಕೆ ನಿತ್ಯ ತೈಲ ಲೇಪನದ ಲಾಭಗಳು:
★ ಮುಪ್ಪು ದೂರವಾಗುವುದು.
★ ಆಯಾಸ ಪರಿಹಾರವಾಗುವುದು.
★ ವಾತ ಶಮನವಾಗುವುದು (ಇದು ಅತ್ಯಂತ ಮಹತ್ವದ ಉಪಯೋಗ, ವಾತ ಶಮನವಾದರೆ ನೂರಾರು ರೋಗಗಳು ದೂರವಾಗುತ್ತವೆ).
★ ಅತ್ಯುತ್ತಮ ದೃಷ್ಟಿಶಕ್ತಿ, ನೇತ್ರಕಾಂತಿ ಬರುವುದು.
★ ಶರೀರ ದಷ್ಟಪುಷ್ಟವಾಗುವುದು.
★ ಆರೋಗ್ಯಯುತ ಆಯುಷ್ಯ ನಮ್ಮದಾಗುವುದು.
★ ಸುಖನಿದ್ದೆ ನಮ್ಮದು.
★ ತ್ವಚೆ ಕಾಂತಿಯುತವಾಗುವುದು.
★ ದೇಹ ದೃಢಗೊಳ್ಳುವುದು. 

👆 ಈ ಲಾಭಗಳು ವಿಶೇಷವಾಗಿ ಶಿರ(ತಲೆ), ಶ್ರವಣ(ಕಿವಿ), ಪಾದ(ಕಾಲು)ಗಳಿಗೆ ತೈಲಾಭ್ಯಂಗ ಅಥವಾ ಲೇಪನ ಮಾಡುವುದರಿಂದ ದೊರೆಯುತ್ತವೆ.

✍ ವಿಶೇಷವಾಗಿ ಮಕ್ಕಳಿಗೆ ತೈಲವಿಲ್ಲದೇ ಸ್ನಾನ‌ ಮಾಡಿಸಲೇಬಾರದು.

🙏🙏ಧನ್ಯವಾದಗಳು 🙏🙏
••••••••••••••
By
ಹೆಚ್.ಬಿ.ಮೇಟಿ

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

Saturday, 30 January 2021

ಎಲ್ಲರಿಗೂ ಬೇಕಾದ ಅತ್ಯಂತ ಪ್ರಮುಖ ವಿಚಾರ, ದಯಮಾಡಿ ಗಮನಿಸಿ, ಆರೋಗ್ಯದಿಂದ ಇದ್ದುಬಿಡಿ.

🤝 ಅಮೃತಾತ್ಮರೇ ನಮಸ್ಕಾರ 🙏
🍁ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍁
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
31.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-9
••••••••••••••
✍️: ಇಂದಿನ ವಿಷಯ:
ಎಲ್ಲರಿಗೂ ಬೇಕಾದ ಅತ್ಯಂತ ಪ್ರಮುಖ ವಿಚಾರ, ದಯಮಾಡಿ ಗಮನಿಸಿ, ಆರೋಗ್ಯದಿಂದ ಇದ್ದುಬಿಡಿ.
•••••••••••••••••••••••••••••••••••••••••

❄️ "ಆಮ.....ವಿಷ*
ಆರೋಗ್ಯ ರಕ್ಷಣೆಯಲ್ಲಿ ಇದು ಅತ್ಯಂತ ಪ್ರಮುಖ ವಿಷಯ.

▪️ "ಆಮ" - ಇದು ರೋಗವನ್ನುಂಟುಮಾಡುತ್ತದೆ ಮತ್ತು ಅದನ್ನು ಪೋಷಿಸುತ್ತದೆ, ಆದ್ದರಿಂದ ಇದನ್ನು ವಿಷ ಎನ್ನುತ್ತಾರೆ.
ಇದರ ತೀವ್ರತೆಯ ಆಧಾರದ ಮೇಲೆ ವಿಷ ಸಣ್ಣ ತೊಂದರೆ ಮಾಡಬಹುದು ಅಥವಾ ದೇಹನಾಶವನ್ನೇ ಮಾಡಬಹುದು. 

▪️ ಆಮ ಎಂದರೇನು?
✍ ಶರೀರದ ಯಾವುದೇ ಭಾಗದಲ್ಲಿ ವಿಶೇಷವಾಗಿ ಸ್ರೋತಸ್ಸು(ಅವಯವ ಉತ್ಪತ್ತಿ ಸ್ಥಾನ)ಗಳಲ್ಲಿ ಅಗ್ನಿಯಿಂದ ಪಚನವಾಗದೇ ಅಥವಾ ಜೀರ್ಣವಾಗದೇ ಉಳಿದ ಆಹಾರದ ಯಾವುದೇ ಅಂಶಗಳನ್ನು ಅಂದರೆ ಪ್ರೊಟೀನ್, ಫ್ಯಾಟ್, ಕಾರ್ಬೋಹೈಡ್ರೇಟ್ ಗಳ ಅವಿಭಜಿತ ಅಂಶಗಳನ್ನು (non separated or unbroken molecules of carbohydrates, proteins, fats etc.,) "ಆಮ" ಎನ್ನುತ್ತೇವೆ.

▪️ ಆಮ ಎಂಬುದು ಆಹಾರದ ಅಂಶವೇ ಆದರೂ ಅಪಾಯಕಾರಿಯೇ?
✍ ಹೌದು, ಅತ್ಯಂತ ಅಪಾಯಕಾರಿ ಮತ್ತು ಇದು ಎಲ್ಲಾ ರೋಗಗಳ ಕಾರಣೀಕರ್ತ.
 ಉದಾ: ಹಾವಿನ ವಿಷವೂ ಒಂದುರೀತಿಯ ಪ್ರೋಟೀನ್, ಇದು ನಮ್ಮ ಹೊಟ್ಟೆಗೆ ಹೋದರೆ ಏನೂ ಆಗದು(ಬಾಯಿ, ಗಂಟಲು ಉದರಗಳಲ್ಲಿ ರಕ್ರಸ್ರಾವ ಇಲ್ಲದಿದ್ದರೆ)! ಬೇಳೆಕಾಳುಗಳಂತೆ ಜೀರ್ಣವಾಗಿ ನಮಗೆ ಆಹಾರವಾಗುತ್ತದೆ!! ಅದೇ ಬೇಳೆಗಳನ್ನು ಬೇಯಿಸಿದ ನೀರನ್ನು ಇಂಜೆಕ್ಷನ್ ಮೂಲಕ ರಕ್ತನಾಳಗಳಿಗೆ ಹರಿಸಿದರೆ ಕ್ಷಣದಲ್ಲಿ ಮನುಷ್ಯ ಸಾಯುತ್ತಾನೆ.
👉 ನೋಡಿ, ಪ್ರೋಟೀನ್ ನಮ್ಮ ಅಗ್ನಿಯಿಂದ ವಿಭಜನೆಗೊಂಡರೆ ಆಹಾರ, ಅದೇ ನೇರ ರಕ್ತ ಸೇರಿದರೆ ಪ್ರಾಣಕಂಟಕ.

▪️ "ಆಮವಿಷದ" ಉತ್ಪತ್ತಿ ಹೇಗೆ?
✍ ಎಲ್ಲಕ್ಕೂ ಕಾರಣ ಆಹಾರದ ಗುರುತ್ವ ಮತ್ತು ನಮ್ಮ ಜಾಠರಾಗ್ನಿಯ ದುರ್ಬಲತ್ವ.
ನಾವು ಆಹಾರವನ್ನು ಸೇವಿಸುತ್ತೇವೆ, ಆದರೆ ಅದು ಜಾಠರಾಗ್ನಿ, ಏಳು ಧಾತುಗಳ ಅಗ್ನಿಯಿಂದ ಸಂಪೂರ್ಣ ವಿಭಜನೆಗೊಂಡರೆ ಮಾತ್ರ ಆಹಾರ ಇಲ್ಲದಿದ್ದರೆ ಆಮವಿಷ. 
ಚೆನ್ನಾಗಿ ವಿಭಜನೆಗೊಂಡ ಆಹಾರದಿಂದ ಜೀವಕೋಶಗಳು ತನಗೆ ಸರಿಹೊಂದುವ ಸೂಕ್ಷ್ಮಾತಿ ಸೂಕ್ಷ್ಮಕಣಗಳನ್ನು ಸೆಳೆದುಕೊಂಡು ಆಹಾರವನ್ನೇ  ಜೀವಕೋಶವನ್ನಾಗಿ ಅಂದರೆ ಆಹಾರವನ್ನೇ ಶರೀರವನ್ನಾಗಿ ಮಾಡುತ್ತವೆ.

ವಿಭಜನೆಗೊಳ್ಳದಿದ್ದರೆ ಅದೇ ಅವಿಭಜಿತ ಪ್ರೋಟೀನ್..... ಜೀವಕೋಶಗಳನ್ನು ಹಾನಿಗೊಳಿಸುತ್ತದೆ, ರೋಗ ತರುತ್ತದೆ, ಕೆಲವೊಮ್ಮೆ ನಿಧಾನವಾಗಿ ಕೊಂದೇಹಾಕುತ್ತದೆ.

▪️ ಆಮದಿಂದ ರೋಗ ಉತ್ಪತ್ತಿ ಹೇಗೆ?
✍ ಈ ಆಮವಿಷದ "ರಚನೆ", ಇರುವ "ಸ್ಥಾನ" ಮತ್ತು "ಕಾಲಾವಧಿ" ಈ ಮೂರರ ಆಧಾರದಲ್ಲಿ ನಿರ್ಧಿಷ್ಟ ರೋಗ ಉಂಟಾಗುತ್ತದೆ.
ಸಾಮಾನ್ಯ ಮತ್ತು ಮೇಲ್ನೋಟದ ವಿವರಣೆ ಎಂದರೆ,
★  ಆಮದ ರಚನೆ ಅತ್ಯಂತ ದೃಢವಾಗಿದ್ದು ಜೀವಕೋಶಗಳನ್ನು ಒಣಗಿಸುತ್ತಿದ್ದರೆ ವಾತರೋಗ ಎಂತಲೂ, 
★ ಉಷ್ಣತೆಯನ್ನುಂಟುಮಾಡಿ ಜೀವಕೋಶಗಳನ್ನು ಕರಗಿಸುತ್ತಿದ್ದರೆ ಪಿತ್ತರೋಗ ಎಂತಲೂ, 
★ ಪ್ರಮಾಣಾಧಿಖ್ಯತೆಯಿಂದ ಜೀವಕೋಶಗಳ ಉಸಿರಾಟಾದಿ ಚಲನೆಗೇ ಅಡ್ಡಿಪಡಿಸಿ ಊತವನ್ನು ಮಾಡಿದರೆ ಕಫರೋಗ ಎಂದೂ ಚಿಕಿತ್ಸಿಸುತ್ತೇವೆ. 
ಮತ್ತು
ಅದು ಇರುವ ಸ್ಥಾನವನ್ನು ಆಧರಿಸಿ ಯಾವ ಧಾತು, ಯಾವ ಅವಯವದ ರೋಗ ಎಂದು ಗುರುತಿಸಿ ಚಿಕಿತ್ಸಿಸುತ್ತೇವೆ.
ಕೊನೆಯದಾಗಿ ಆಮ ಆ ಸ್ಥಾನದಲ್ಲಿ ಎಷ್ಟು ಕಾಲದಿಂದ ಇದೆ ಎನ್ನುವುದನ್ನಾಧರಿಸಿ ನವವ್ಯಾಧಿ, ಜೀರ್ಣವ್ಯಾಧಿ ಎಂದು ಚಿಕಿತ್ಸೆ ಮಾಡುತ್ತೇವೆ.


▪️ ಏನಿದು ವಾತ, ಪಿತ್ತ, ಕಫ? ಆಧುನಿಕ ಕಾಲದಲ್ಲೂ ಇದೇ ಭಾಷೆಯಾ? ಎನ್ನುವವರಿಗಾಗಿ
👇
✍ ಆಮದ ಎಲ್ಲಾ ಅವಸ್ಥೆಗಳೂ ರಾಸಾಯನಿಕ ಕ್ರಿಯೆಗಳೇ ಆಗಿವೆ, "ಆಮ" ಒಂದು "ಕೆಮಿಕಲ್ ಚೈನ್" ಆಹಾರದಲ್ಲಿನ ರಾಸಾಯನಿಕಗಳಿಂದಲೇ ಉಂಟಾಗುತ್ತದೆ. ನಮ್ಮ ಎಂಜೈಮ್ ಗಳು ಆಹಾರದ ರಾಸಾಯನಿಕಗಳನ್ನು ವಿಭಜಿಸದೇ ಹೋದರೆ, 'ವಿಷ' ಮತ್ತು ವಿಭಜಿಸಿದರೆ ಅದೇ ಆಹಾರ.

ಈ ಆಮವಿಷಕ್ಕೆ ಪ್ರಧಾನ ಎರಡು ಗುಣಗಳಿವೆ ಒಂದು "ನಿರ್ದಿಷ್ಟತೆ" ಮತ್ತೊಂದು "ಸಾಮರ್ಥ್ಯ".
 ಕರಾರುವಕ್ಕಾಗಿ ಒಂದು ಸ್ಥಾನವನ್ನು ಹುಡುಕಿಕೊಂಡುಹೋಗಿ ನೆಲೆಯಾಗುವುದು, ನಂತರ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಶರೀರದ ಬದಲು ತನ್ನನ್ನೇ ಬೆಳೆಸಿಕೊಳ್ಳುವುದು. ಇದು ಒಂದು ಜೀವಿಯಾಗಿ ಮಾರ್ಪಾಡಾಗುವ ಸಾಮರ್ಥ್ಯವನ್ನೂ ಹೊಂದಿದೆ!! ಆಗ ತನ್ನ ಸಂತತಿಯನ್ನು ಬೆಳೆಸಿ, ಶರೀರವನ್ನು ಕ್ಷೀಣಿಸುವಂತೆ ಮಾಡುತ್ತದೆ. 

ಆಮವಿಷದಿಂದ ಜೀವಕೋಶಗಳಿಗೆ ಆಗುವ ಹಾನಿಯನ್ನಾಧರಿಸಿ "ಸುಖಸಾಧ್ಯ",  "ಕಷ್ಟಸಾಧ್ಯ", "ಅಸಾಧ್ಯ" ಮತ್ತು "ಮಾರಣಾಂತಿಕ" ರೋಗಗಳೆಂದು ಆಯುರ್ವೇದವು ಗುರುತಿಸುತ್ತದೆ.

▪️ ಪರಿಹಾರ ಏನು?
✍ ಆಮವಿಷ ಉತ್ಪತ್ತಿಯನ್ನು ತಡೆಯುವ ಮತ್ತು ಚಿಕಿತ್ಸಿಸುವ ಎಂದು ಎರೆಡು ಪರಿಹಾರಗಳಿವೆ.

1.ಆಮೋತ್ಪತ್ತಿಯ ತಡೆ:  ನಮ್ಮ ಸಾಮರ್ಥ್ಯ ಮೀರಿ ಆಹಾರ ಸೇವಿಸದೇ, ನಮ್ಮ ಅಗ್ನಿ(ಹಸಿವು)ಯನ್ನು ಸದೃಢವಾಗಿ ಇಟ್ಟುಕೊಳ್ಳುವುದು ಮತ್ತು ಆಹಾರ ಸೇವನೆಗೆ ತಕ್ಕಷ್ಟು ಶಾರೀರಿಕ ಕೆಲಸಗಳನ್ನು ಮಾಡಿ ಆಮವನ್ನು ಕರಗಿಸಿಬಿಡಬೇಕು.

ಚೆನ್ನಾಗಿ ಹಸಿಯುವುದೇ(ನೆನಪಿಡಿ: ಸಂಕಟವಾಗುವುದು, ತಡೆಯಲಾರದ ಹಸಿವು ಹಸಿವಲ್ಲ, ಅದೊಂದು ರೋಗ) ಆಮದ ಅನುಪಸ್ಥಿತಿಗೆ ಪ್ರತ್ಯಕ್ಷ ಸಾಕ್ಷಿ ಮತ್ತು ವ್ಯಾಯಾಮದಿಂದ ಮೈ ಬೆವರುವುದೇ ಆಮ‌ವಿಷ ಕರಗಿರುವುದಕ್ಕೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

2.ಆಮ ಚಿಕಿತ್ಸೆ:
ಆಮ ಬೆಳೆಯಲು ಕಾರಣವಾದ ಆಹಾರ ನೀಡದೇ ಆಮವನ್ನು ಅದು ಇರುವಲ್ಲೇ ಕರಗಿಸುವುದು, ಅದರ ವಿರುದ್ದ ಜೀರ್ಣಶಕ್ತಿ(ಎಂಜೈಮ್) ಉಂಟುಮಾಡಿ ಅದನ್ನು ಆಹಾರವನ್ನಾಗಿ ಪರಿವರ್ತಿಸುವುದು ಮತ್ತು ಆಮ ಹೆಚ್ಚಾಗಿದ್ದರೆ ಅದನ್ನು ಪಂಚಕರ್ಮಗಳಿಂದ ಕರಗಿಸಿ ಹೊರಹಾಕುವುದು.

▪️ ಆಯುರ್ವೇದವೇ ಏಕೆ ಸೂಕ್ತ?
ಆಧುನಿಕ ಪದ್ಧತಿಗೆ- 1.ಯಾವುದು ಆಹಾರ ?2.ಯಾವುದು ಅಗ್ನಿ? 3."ಆಹಾರದಿಂದಲೇ ಇಷ್ಟೆಲ್ಲಾ ರಾಸಾಯನಿಕ ಕ್ರಿಯೆಗಳು ನಡೆಯುತ್ತಿವೆ" 
*ಈ ಮೂರೂ ಜೀವಂತ ಶರೀರದಲ್ಲಿ ಪರಸ್ಪರ ಹೊಂದಾಣಿಕೆಯಲ್ಲಿ ನಡೆಯುವುದರ ಸಣ್ಣ ಪರಿಚಯವೂ ಇಲ್ಲ!!!* 
ಈ ಶರೀರವನ್ನು ನಿರ್ಜೀವ ವಸ್ತು ಅಥವಾ ಪ್ರಾಣಿಯಂತೆ ಕಾಣುತ್ತದೆ. ರೋಗ ಕಾರಣವಾದ ಆಹಾರ ನಿಲ್ಲಿಸಲು ಹೇಳದೇ, ಏನು ಬೇಕಾದರೂ ತಿನ್ನಬಹುದೆಂದು ಹೇಳುತ್ತದೆ. ಈ ಸಂಗತಿಗಳ ಪೂರ್ಣ ಪರಿಚಯ ಇಲ್ಲದೇ ಕೊಡುವ ಔಷಧಗಳು ರೋಗವನ್ನು ನಿರ್ಮೂಲ ಮಾಡದೇ, ಕೇವಲ ಲಕ್ಷಣದೊಂದಿಗೆ ಹೋರಾಡುತ್ತಿದೆ. ಒಂದಕ್ಕೆ ಪರಿಹಾರವೆಂಬಂತೆ ಕಂಡು ಇನ್ನೊಂದು ಅಪಾಯವನ್ನು ತಂದೊಡ್ಡುತ್ತಿವೆ. ಅದಕ್ಕಾಗಿ ಆಯುರ್ವೇದ ಅತ್ಯಂತ ಸೂಕ್ತ.

ಗಮನಿಸಿ:
🤷‍♀ ಇಷ್ಟೊಂದು ವ್ಯಾಕ್ಸಿನ್, ಔಷಧಿ, ಚಿಕಿತ್ಸೆಗಳೆಲ್ಲ
ಇರುವಾಗ ಇಂದು ರೋಗಗಳ ಉತ್ಪತ್ತಿ ನಿಂತಿಲ್ಲ, ಬಂದ ರೋಗ ನಿಯಂತ್ರಣದಲ್ಲೂ ಇಲ್ಲ, ಬದಲಾಗಿ ದಿನೇ ದಿನೇ ಏರುತ್ತಿದೆ, ಅಂದರೆ ಆರೋಗ್ಯದ ವಿಷಯದಲ್ಲಿ ಬಹುದೊಡ್ಡ ಫೇಲ್ಯೂರ್ ಅಲ್ಲವೇ? ಯೋಚಿಸಿ.

  🙏ಧನ್ಯವಾದಗಳು 🙏
By
ಹೆಚ್.ಬಿ.ಮೇಟಿ

Friday, 29 January 2021

ಕೆಳಗಿನ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಿ ಎಂದರೆ, ನಿಮ್ಮದು ಅಸಾಧಾರಣ ಪ್ರಯತ್ನ! ಏಕೆಂದರೆ ನೀವು ಎಲ್ಲ ರೋಗಗಳ ಬುಡವನ್ನೇ ಕತ್ತರಿಸುವ ಪ್ರಯತ್ನದಲ್ಲಿದ್ದೀರಿ!!

🤝 ಅಮೃತಾತ್ಮರೇ ನಮಸ್ಕಾರ 🙏
 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
   ಸ್ವಾಸ್ಥ್ಯ ಸರ್ವರದ್ದೂ ಆಗಲಿ
          💎💎💎💎
••••••••••••••••••••••••••••••••••••••••••
30.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-8
••••••••••••••
✍️: ಇಂದಿನ ವಿಷಯ:
ಕೆಳಗಿನ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಿ ಎಂದರೆ, ನಿಮ್ಮದು ಅಸಾಧಾರಣ ಪ್ರಯತ್ನ! ಏಕೆಂದರೆ ನೀವು ಎಲ್ಲ ರೋಗಗಳ ಬುಡವನ್ನೇ ಕತ್ತರಿಸುವ ಪ್ರಯತ್ನದಲ್ಲಿದ್ದೀರಿ!!
•••••••••••••••••••••••••••••••••••••••••

🔹 ಯಾವ ಆಹಾರ ರುಚಿಯಾಗಿದೆ?
ರುಚಿಯ ಮೂಲ ನಾಲಿಗೆಯೋ?
◆ ಉತ್ತರ:
ನನಗೆ ಪಾಯಸ ಎಂದರೆ ಪಂಚಪ್ರಾಣ, ಯಾವಾಗ ಸಿಗುತ್ತದೋ ಎಂದು ಕಾಯುವೆ, ಎಂಬ ವ್ಯಕ್ತಿಯ ಪಂಚಪ್ರಾಣಗಳು ಪಾಯಸವನ್ನು ದ್ವೇಷಿಸುವಂತೆ ಮಾಡುವುದು ಯಾವುದು? ಅದೇ ಅವನ *ಹಸಿವು!!!*

*ಈ ಹಸಿವು ಜೀವಂತ ಇರುವಾಗ ನಮಗೆ ಎಲ್ಲವೂ ರುಚಿಸುತ್ತವೆಯೇ ಹೊರತು, ಯಾವುದೇ ನಿರ್ದಿಷ್ಟ ಆಹಾರ ಸ್ವತಃ ತಾನಾಗಿಯೇ ಯಾವ ರುಚಿಯೂ ಇಲ್ಲ!!!*

ಒಟ್ಟಾರೆ,
🔹 *ರುಚಿಯ ಮೂಲ ನಮ್ಮ ಹಸಿವು, ಹಸಿವಿನ ಮೂಲ ನಮ್ಮ ಶಾರೀರಿಕ ಕೆಲಸಗಳು*
 ಅಲ್ಲವೇ?
 ಹಾಗಾದರೆ ರುಚಿ-ರುಚಿಯಾದ ಆಹಾರ ತಿನ್ನಬೇಕೆನಿಸಿದರೆ ಮಾಡಬೇಕಾದ ಕೆಲಸ ಎಂದರೆ *ಹಸಿವನ್ನು ಹೆಚ್ಚಿಸಿಕೊಳ್ಳುದು*.
ಈ ಮೂಲ ಕಾರಣ ಬಿಟ್ಟು, ಏನೇನೋ ಸೇರಿಸಿ ಆಹಾರವನ್ನು ರುಚಿ ಮಾಡಹೊರಟರೆ, ಇನ್ನೇನೇನೋ ಹೊಸ ಕಾಯಿಲೆಗಳು ಬಾರದಿರವೇ?

🔹 ಇನ್ನು ರುಚಿಯ ಮೂಲ ನಾಲಿಗೆಯೋ?*
ಹೌದು ಎನ್ನುವುದಾದರೆ, ಹಸಿವೆ ಇಲ್ಲವಾದವನಿಗೆ ನಾಲಿಗೆ ರುಚಿಸುವುದೇ? ಹೊಟ್ಟೆ ತುಂಬಿದ ನಂತರ ರುಚಿಸುವುದೇ? ಇಲ್ಲ ಎಂದಾದರೆ ನಾಲಿಗೆಯು ನಮ್ಮ ಅಗ್ನಿಯನ್ನು /ಹಸಿವನ್ನಾಧರಿಸಿ, ರುಚಿಯನ್ನು ಸೂಚಿಸುತ್ತದೆ ಅಷ್ಟೇ, ಇದು ಇಂಡೀಕೇಟರ್ ಮಾತ್ರವಾಗಿದೆ.

🙇‍♂ ಇತ್ತೀಚಿನ ಮಕ್ಕಳನ್ನು ಗಮನಿಸಿ, ಎಂತಹ ರುಚಿರುಚಿ ಆಹಾರವನ್ನೂ ದೂರ ತಳ್ಳುತ್ತಾರೆ!?!?!?....
ಅವರ ನಾಲಿಗೆ ಆಹಾರವನ್ನು ದ್ವೇಷಿಸುತ್ತದೆ, ಅದರ ಹೊಟ್ಟೆ ತುಂಬಿದೆ ಎಂದೇನೂ ಅಲ್ಲ. ಹಾಗೆಯೇ,
ನಮ್ಮ ಆತ್ಮೀಯರು ಅನಾರೋಗ್ಯದಿಂದ ಬಳಲುವಾಗ ಯಾವ ಆಹಾರವೂ ರುಚಿಸುವುದಿಲ್ಲ, ಹಾಗಂತ ಹೊಟ್ಟೆ ತುಂಬಿದೆ ಎಂದು ಅರ್ಥವಲ್ಲ!

ಒಟ್ಟಾರೆ,
*ಹಸಿವು ಎಂಬುದು ಹೊಟ್ಟೆಯಲ್ಲಿ ಇಲ್ಲ!!!*
ಅಚ್ಚರಿಯೇ?🙄

👇ಮಹರ್ಷಿ ಅರುಣದತ್ತರ ಈ ಶ್ಲೋಕವನ್ನು ಗಮನಿಸಿ-

"ಪ್ರದ್ವೇಷೋ ವೃದ್ಧಿಹೇತುಷು........"
-ಆಯುರ್ವೇದ ದೀಪಿಕಾ(ಚರಕ ಸಂಹಿತಾ ವ್ಯಾಖ್ಯಾನ)

-> ಯಾವುದು ಶರೀರದಲ್ಲಿ, (ಅಂದರೆ ರಸಧಾತುವಿನಲ್ಲಿ) ವೃದ್ಧಿಯಾಗುತ್ತದೆಯೋ ಅದರ ಬಗ್ಗೆ ದ್ವೇಷ ಉಂಟಾಗುತ್ತದೆ.
ಇಲ್ಲಿ ಪಾಯಸದ ಬಗ್ಗೆ ದ್ವೇಷ ಉಂಟಾಗಲು ಕಾರಣ, ಅದು ರಸಧಾತುವಿನಲ್ಲಿ ಈಗಾಗಲೇ ವೃದ್ಧಿಯಾಗಿದೆ, ಇನ್ನೂ ಒತ್ತಾಯವಾಗಿ ಬಾಯಿಗೆ ತುರುಕಿದರೆ ವಾಂತಿಯಾಗುತ್ತದೆ. 

ಅಂದರೆ ಯಾವ ಅಂಶ ರಸಧಾತುವಿನಲ್ಲಿ ಹೆಚ್ಚುತ್ತದೋ ಅದರ ಬಗ್ಗೆ ದ್ವೇಷವೂ, ಯಾವ ಅಂಶ ರಸದಲ್ಲಿ ಕ್ಷೀಣವಾಗುತ್ತದೋ ಅದರ ಬಗ್ಗೆ ಇಚ್ಛೆಯು- "ಹೊಟ್ಟೆ ಹಸಿವಿನ ರೂಪದಲ್ಲಿ ಕಾಣುತ್ತದೆ ಮತ್ತು ಆ ಹಸಿವು ನಾಲಿಗೆಯಲ್ಲಿ ರುಚಿಯ ರೂಪದಲ್ಲೂ ತೋರುತ್ತದೆ"

ಒಂದು ವೇಳೆ "ಹಸಿವು" ನೀಗಿದರೆ, ಮನಸ್ಸು ಯಾವುದಕ್ಕೆ ಹಾತೊರೆಯುತ್ತಿತ್ತೋ ಅದನ್ನೇ ದೂರ ತಳ್ಳುತ್ತದೆ.

👉 ವಿಶೇಷವಾಗಿ ಗಮನಿಸಿ:  
ಪ್ಲಾಸ್ಮಾ ಗ್ಲುಕೋಸ್ ಕ್ಷೀಣಿಸಿದ ಮಧುಮೇಹಿಗಳಲ್ಲಿ ಆಹಾರಾದ ಬಗೆಗಿನ ತೀವ್ರ ತುಡಿತವನ್ನು ಗಮನಿಸಿ.  ಅಂದರೆ, ಪ್ಲಾಸ್ಮಾದಲ್ಲಿ ಯಾವುದು ಕಡಿಮೆಯಾಗುತ್ತದೋ ಅದು ಅಮೃತವೆಂಬತೆ ರುಚಿಸುತ್ತದೆ. 

"ನಿಮಗೆ ಆಹಾರ ರುಚಿಸಬೇಕೇ? ಪ್ಲಾಸ್ಮಾದಲ್ಲಿ ಸಂಗ್ರಹಿಸಿದ ಶಕ್ತಿ ರೂಪೀ ರಸವನ್ನು ಕೆಲಸದ ರೂಪದಿಂದ ಕರಗಿಸಿ ಖಾಲಿಮಾಡಿಬಿಡಿ, ಆಗ ನಿಮ್ಮ ಮುಂದೆ ಒಣ ರೊಟ್ಟಿಯನ್ನಿಟ್ಟರೂ ಎಂತಹ ರಸವತ್ತಾದ ಊಟ ನಿಮ್ಮದಾಗುತ್ತದೆ!!!"
 
👁ಬ್ರಸಧಾತುವಿನಲ್ಲಿ *ಜೀರ್ಣಿಸದ ಆಹಾರ ಸಂಗ್ರಹ* ಎಂದಿಗೂ ಒಳ್ಳೆಯದಲ್ಲ. ಅದು ಎಲ್ಲ ಕಾಯಿಲೆಗಳ ಮೂಲ. ಆಯುರ್ವೇದ ಇದನ್ನು *ಆಮವಿಷ* ಎಂದಿದೆ. 
ಇದರ ಸಂಗತಿಯನ್ನು ನಾಳೆ ನೋಡೋಣ....

🙏🙏ಧನ್ಯವಾದಗಳು 🙏🙏
•••By
ಹೆಚ್.ಬಿ.ಮೇಟಿ

Thursday, 28 January 2021

ಮಧುಮೇಹದಲ್ಲಿ ಚಪಾತಿ ತಿನ್ನಬಾರದ ವಸ್ತುವೇ⁉️

🙏ಅಮೃತಾತ್ಮರೇ ನಮಸ್ಕಾರ 🙏
🏵ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🏵
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
28.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-6
••••••••••••••
✍️: ಇಂದಿನ ವಿಷಯ:
ಮಧುಮೇಹದಲ್ಲಿ ಚಪಾತಿ ತಿನ್ನಬಾರದ ವಸ್ತುವೇ⁉️
•••••••••••••••••••••••••••••••••••••••••
ಮಧುಮೇಹದಲ್ಲಿ ಚಪಾತಿ ಬೇಡ ಎಂಬ ವಿಷಯದ ಮೇಲೆ ಹಲವಾರು ಪ್ರಶ್ನೆಗಳು ಬಂದಿವೆ.
ಚಪಾತಿಯನ್ನು ನೂರಾರು ವರ್ಷಗಳಿಂದ ಉಪಯೋಗಿಸುತ್ತಿದ್ದರೂ, ಇತ್ತೀಚೆಗೆ ಮಧುಮೇಹಿಗಳ ಸಂಖ್ಯೆ
ಹೆಚ್ಚುತ್ತಿದೆ❗️
ಹಾಗಾದರೆ ಚಪಾತಿಯನ್ನು ದೂರುವುದೇಕೆ❓

ಹೀಗೆ ನಿಮ್ಮಲ್ಲೂ ಪ್ರಶ್ನೆಗಳ ರಾಶಿಗಳೇ ಇರಬಹುದು. ಉತ್ತರ ಇಲ್ಲಿದೆ...👇

ಗೋಧಿ ಸಾವಿರಾರು ವರ್ಷಗಳಿಂದ ಉಪಯೋಗಿಸುವ ಖಾದ್ಯ, ಆದರೆ, 
*ಇತ್ತೀಚೆಗೆ ಪ್ರಾಂತ್ಯ, ಜನರ ಪ್ರಕೃತಿ, ಜೀವನ ಶೈಲಿ ಎಲ್ಲಾ ಬದಿಗಿಟ್ಟು ಗೋಧಿಯನ್ನು ಸೇವಿಸುತ್ತಿದ್ದಾರೆ.*
ಮತ್ತು
*ತಯಾರಿಕಾ ವಿಧಾನವನ್ನು ಶೀಘ್ರ ಹಾಗೂ ತಮಗೆ ಬೇಕಾದಂತೆ ಸುಲಭಗೊಳಿಸಿಕೊಂಡೂ ಬಳಸುತ್ತಿದ್ದಾರೆ.*

🖕ಇವು ಮಧುಮೇಹ ಉತ್ಪತ್ತಿಯಲ್ಲಿ ಒಂದು ಪ್ರಮುಖ ಅಂಶವಾಗಿ ಕಂಡುಬರುತ್ತಿವೆ.

❇️ ಗೋಧಿಯಲ್ಲಿ *ಗ್ಲುಟಿನ್ ಎಂಬ ರಾಸಾಯನಿಕ* ಇದೆ, ಇದು ಪ್ಯಾಂಕ್ರಿಯಾಸ್ ಜೀವಕಣಗಳನ್ನು ನೇರ ಹಾನಿಗೊಳಿಸುತ್ತದೆ. ಮತ್ತೆ ಇತರ ಜೀವಕೋಶಗಳು ತಮ್ಮ ನೀರನ್ನು ಕಳೆದುಕೊಳ್ಳುವಂತೆಮಾಡುತ್ತದೆ. ಗೋಧಿಯ ಜಿಗುಟುತನಕ್ಕೆ ಇದೇ ಕಾರಣ, ಮೈದಾದಲ್ಲಂತೂ ಇದು ಹೇರಳವಾಗಿ ಇರುತ್ತದೆ.

"ಗ್ಲುಟಿನ್" ಅನ್ನು ಕರಗಿಸಿ ಪ್ರತ್ಯೇಕಗೊಳಿಸುವ ಮತ್ತು ನಿಷ್ಕ್ರಿಯಗೊಳಿಸುವ ವಿಧಾನಗಳಿಂದ ದೂರ ಸರಿದು ಗೋಧಿಯನ್ನು ಸೇವಿಸುತ್ತಿರುವುದೇ ಇಂದಿನ ಅನಾಹುತಕ್ಕೆ ಕಾರಣ🚫

ಗೋಧಿಯನ್ನು ಸಾಕಷ್ಟು ನೀರಿನೊಳಗೆ ಬೇಯಿಸಿದರೆ "ಗ್ಲುಟಿನ್" ಬೇರ್ಪಡುತ್ತದೆ, ಹಾಗಾಗಿ ಬೇಯಿಸಿದ ಗೋಧಿಯನ್ನು ತಿನ್ನಬಹುದು.

ಇತ್ತೀಚಿಗೆ Back to nature ಹೆಸರಿನಲ್ಲಿ- ಹಿಂದೆ ಭಾರತದಲ್ಲಿ ಚಪಾತಿ ತಯಾರಿಸುತ್ತಿದ್ದ *Sourdough bread* ವಿಧಾನವನ್ನು ಬಳಸುವ ಯುವಕರು ಇಂದು ಹೆಚ್ಚುತ್ತಿರುವುದು, ಈ ನಿಟ್ಟಿನಲ್ಲಿ ಆರೋಗ್ಯಕರ ಬೆಳವಣಿಗೆ. ನಮಗೆ ಚಪಾತಿಯೇ ಬೇಕೆಂದರೆ, ಪುರಾತನ ವಿಧಾನವನ್ನು ಬಳಸಿ ತಯಾರಿಸಬೇಕು. 

✅ ಯಾವುದು ಆ ವಿಧಾನ? ಮತ್ತು ಅದರ ಲಾಭವೇನು?

★★ ಪೂರ್ಣ ಗೋಧಿಯಿಂದ ತಯಾರಿಸಿದ ಹಿಟ್ಟನ್ನು ನೆನೆಸಿ ಮುಚ್ಚಿಟ್ಟುಬಿಟ್ಟು ಹುಳಿ ಬರಿಸುತ್ತಿದ್ದರು. ಅದು ಪ್ರತಿ ಮನೆಯಲ್ಲೂ ಯಾವಾಗಲೂ ಒಂದು ಮುಚ್ಚಿದ ಡಬ್ಬದಲ್ಲಿ ಇರುತ್ತಿತ್ತು  ಮತ್ತು ಅದರಿಂದ ಸ್ವಲ್ಪ ತೆಗೆದು ಹೊಸ ಗೋಧಿ ಹಿಟ್ಟಿನೊಂದಿಗೆ ಕಲಸಿ ಮತ್ತೆ ಒಂದೆರೆಡು ತಾಸು ಬಿಡುತ್ತಿದ್ದರು, ಆಗ ನೈಸರ್ಗಿಕವಾಗಿ fermentation ಆಗುತ್ತಿತ್ತು. ಅದನ್ನು ಬಳಸಿ ಚಪಾತಿ, ಫುಲ್ಕಾ, ಪರೋಟ ಮುಂತಾದ ಖಾದ್ಯಗಳನ್ನು ತಯರಿಸಿ ಬಳಸುವುದು ರೂಢಿಯಲ್ಲಿತ್ತು.

ಮತ್ತೆ ಇದು ತಂಪು ಪ್ರಾಂತ್ಯಕ್ಕೆ ಹೆಚ್ಚು ಒಗ್ಗುತ್ತಿತ್ತು, ಅಂದರೆ ಎಲ್ಲಿ ಮೈನಸ್ ತಾಪಮಾನ( Minus temperature) ಇರುತ್ತದೋ ಅಲ್ಲಿಗೆ ಗೋಧಿ fermented ರೂಪದಲ್ಲಿ ಒಗ್ಗುತ್ತದೆ.

ಉಳಿದ ಅರೆಬಿಸಿಲು, ಬಿಸಿಲು ಪ್ರಾಂತ್ಯಗಳಿಗೆ ಹೆಚ್ಚು ನೀರಿನಲ್ಲಿ ಮೆದುವಾಗಿ ಬೇಯಿಸಿದ ಗೋಧಿ ಖಾದ್ಯಗಳು ಯಾವಾಗಲೋ ಒಮ್ಮೆ ಬಳಸುವುದು ಸೂಕ್ತ.

☢ ವೈಜ್ಞಾನಿಕ ಹಿನ್ನೆಲೆ ಏನು?*

★★ ನಮ್ಮ ಕರುಳಿನಲ್ಲಿ ಗೋಧಿ ಜೀರ್ಣವಾಗಲು ಪ್ರಮುಖ ಎರೆಡು ಅವಸ್ಥೆಗಳಿವೆ.

1) ಹೆಚ್ಚು ನೀರನ್ನು ಬಳಸಿ ಗ್ಲುಟಿನ್ ಅನ್ನು ಬೇರ್ಪಡಿಸಿ ಹೊರಹಾಕಿ ಜೀವಕೋಶಗಳ ಹಾನಿ ತಪ್ಪಿಸುತ್ತದೆ. 
ಉದಾಹರಣೆ: ಚಪಾತಿ ಮತ್ತು ಸ್ವಲ್ಪನೀರಿರುವ ಉಪ್ಮಾ ತಿಂದಾಗ ಬಾಯಾರಿಸುತ್ತದೆ. 

2) ಕಿಣ್ವೀಕರಣ(fermentation) ಗೊಳ್ಳುವಿಕೆ. ಇದರಿಂದ ಗ್ಲುಟಿನ್ ನಿಷ್ಕ್ರಿಯವಾಗುತ್ತದೆ. ಒಂದುವೇಳೆ ಗೋಧಿಯ ಚಪಾತಿಯನ್ನು ತಿಂದರೆ ಶರೀರ ಸ್ವತಃ fermentation ಮಾಡಿಕೊಂಡು ಜೀರ್ಣಿಸುತ್ತದೆ. 
ಉದಾಹರಣೆ: ಚಪಾತಿ ತಿಂದ ನಂತರ ಹೊಟ್ಟೆ ಉಬ್ಬರವಾಗುತ್ತದೆ.

ನಿರಂತರ ಸೇವನೆ ಎಷ್ಟು ತೊಂದರೆ ಎಂದರೆ, ಆಯುರ್ವೇದದ ಪ್ರಕಾರ ಇದನ್ನು "ಶುಕ್ತಪಾಕ" ಅಥವಾ "ಹಳಸುವಿಕೆ" ಎನ್ನುತ್ತಾರೆ. ಇದು ರಕ್ತದ ಸಕ್ಕರೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ತನ್ಮೂಲಕ fermentationನಲ್ಲಿ ಬಿಡುಗಡೆಗೊಳ್ಳುವ ಶಕ್ತಿರೂಪದ ಉಷ್ಣತೆ(exothermic nature)ಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ ಮತ್ತು ತಂಪಾಗಿಸುತ್ತದೆ.

✅ ನಿರಂತರ ಅಲ್ಪ ಜಲಯುಕ್ತ ಗೋಧಿ ಸೇವನೆಯು ನಮ್ಮ ರಕ್ತದ ಸಕ್ಕರೆ ಅಂಶವನ್ನು ವರ್ಧಿಸುತ್ತದೆ

ಧನ್ಯವಾದಗಳು 🙏🙏🙏
••••••••••••••
By
ಹೆಚ್.ಬಿ.ಮೇಟಿ

Wednesday, 27 January 2021

ಪ್ರಮೇಹ ಹೋಗಲಾಡಿಸಿಕೊಳ್ಳುವ ಮತ್ತು ಮಧುಮೇಹ ನಿಯಂತ್ರಣದ ಸರಳೋಪಾಯಗಳು

🙏ಅಮೃತಾತ್ಮರೇ ನಮಸ್ಕಾರ 🙏
🪴ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
       ಸ್ವಾಸ್ಥ್ಯ ಸರ್ವರದ್ದೂ ಆಗಲಿ🪴
••••••••••••••••••••••••••••••••••••••••••
27.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-5
••••••••••••••
✍️: ಇಂದಿನ ವಿಷಯ:
ಪ್ರಮೇಹ ಹೋಗಲಾಡಿಸಿಕೊಳ್ಳುವ
ಮತ್ತು 
ಮಧುಮೇಹ ನಿಯಂತ್ರಣದ ಸರಳೋಪಾಯಗಳು👇
•••••••••••••••••••••••••••••••••••••••••
◆ ಹಸಿವನ್ನು ಅನುಸರಿಸಿ ಆಹಾರ ಸೇವಿಸಿ.

◆  ಶಾರೀರಿಕ ಶ್ರಮ ವಹಿಸಿ ಕೆಲಸ ಮಾಡುವವರು ಪ್ರಮಾಣದಲ್ಲಿ ಅಧಿಕವಾಗಿಯೂ ಶಕ್ತಿಯಲ್ಲಿ ಮಧ್ಯಮ ಇರುವಂತೆಯೂ ಆಹಾರ ಸೇವಿಸಿ.

◆ ಬೌದ್ಧಿಕ ಶ್ರಮ ಕೆಲಸ ಮಾಡುವವರು ಶಕ್ತಿಯಲ್ಲಿ ಅಧಿಕ, ಪ್ರಮಾಣದಲ್ಲಿ ಕಡಿಮೆ ಇರುವಂತೆಯೂ ಆಹಾರ ಸೇವಿಸುವುದು.

◆  ಹಣೆಯಲ್ಲಿ ಬೆವರು ಬರುವವರೆಗೆ ಮಾತ್ರ ವ್ಯಾಯಾಮ ಮಾಡಿ.‌ ಕೆಲಸದಲ್ಲೂ ಅಷ್ಟೇ ಹಣೆಯಲ್ಲಿ ಬೆವರು ಬಂದಮೇಲೆ‌ ಸ್ವಲ್ಪ ಕುಳಿತು ಕೆಲಸ ಮುಂದುವರಿಸಿ.

◆ ಚಪಾತಿಗಿಂತ ನೀರು ಅಧಿಕ ಇರುವ ಗೋಧಿ ಉಪ್ಮಾ / ಉಪ್ಪಿಟ್ಟು, ಮೆಂತ್ಯೆ ಕಡುಬು ಅತ್ಯುತ್ತಮ. ನೀರು ಕಡಿಮೆ ಇರುವ ಗೋಧಿ ಪದಾರ್ಥಗಳನ್ನು ಸೇವಿಸಬೇಡಿ.

◆ ಹಗಲು ನಿದ್ದೆ ಸರ್ವದಾ ತ್ಯಜಿಸಿ.

◆ ತಡರಾತ್ರಿ ನಿದ್ದೆ ಬೇಡ.

◆ ಚಿಂತೆ ಮಾಡುವವರು, ವಿಶೇಷವಾಗಿ ಭಯಪಡುವ ಸ್ವಭಾವದವರು, ಸೂಕ್ತ ಪರಿಹಾರ ಕಂಡುಕೊಳ್ಳದೇ ದೊಡ್ಡ ದೊಡ್ಡ ಕೆಲಸಗಳಿಗೆ, ಜವಾಬ್ದಾರಿ ಹೊರುವ ಕೆಲಸಗಳಿಗೆ ಕೈಹಾಕಬೇಡಿ.

◆ ಬೌದ್ಧಿಕ ಕೆಲಸ ನಿಮ್ಮದಾಗಿದ್ದರೆ, ನಿಮ್ಮ ರಕ್ತದಲ್ಲಿ ಸ್ವಲ್ಪ ‌ಸಕ್ಕರೆ ಅಂಶ ಹೆಚ್ಚಿರುತ್ತದೆ, ಗಾಭರಿ ಬೇಡ.

◆  FBS+PPBS ಎರಡರ ಮೊತ್ತವನ್ನು 2 ರಿಂದ ಭಾಗಿಸಿದರೆ, ಅದು 250 ರ ಒಳಗಿದ್ದರೆ ಯಾವ ಮಾತ್ರೆಗಳನ್ನೂ ಸೇವಿಸುವ ಅಗತ್ಯ ಇಲ್ಲ. ಆದರೆ ಪ್ರತಿದಿನ ಶ್ರಮ ಮಾಡಿ.

◆  ಮೈದಾ(ಬಿಸ್ಕೆಟ್ಸ್, ಬ್ರೆಡ್, ಕೇಕ್, ಬರ್ಗರ್, ಪಿಜ್ಜಾ), ಕರಿದ ಪದಾರ್ಥಗಳು, ಮೇಲಿನಿಂದ ವಗ್ಗರಣೆ ಕಲಸಿದ ಪದಾರ್ಥಗಳು, ಅತಿಯಾದ ಮಾಂಸಹಾರ, ಸೋಂಬೇರಿತನ ಬೇಡವೇ ಬೇಡ.

◆ ಅನುವಂಶೀಕ ಪರಿವರ್ತಿತ ಆಹಾರ, ಹೆಚ್ಚು ಇಳುವರಿ ಕೊಡುವ ಸಸ್ಯ ಮತ್ತು ಮಾಂಸಗಳಿಂದ ತಯಾರಿತ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಸರ್ವಥಾ ಅಪಾಯಕಾರಿ.

◆ ನಿಮ್ಮ ಪ್ರಾಂತೀಯ ಆಹಾರವೇ ಪ್ರಧಾನವಾಗಿರಲಿ.

◆ ಮೂತ್ರ, ಬೆವರು ವಾಸನೆ ಬಂದರೆ ಮತ್ತು ಬಹಳ ಕಾಲದಿಂದ ಇದ್ದರೆ ತಕ್ಷಣ ಪರಿಹಾರ ಮಾಡಿಕೊಳ್ಳಿ.


◆ ಆಧ್ಯಾತ್ಮಿಕ ಸಾಧಕರಲ್ಲೂ ಮಧುಮೇಹ ಇರುವುದು ಏನನ್ನು ಸೂಚಿಸುತ್ತದೆ ಎಂದರೆ- ಕೇವಲ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಶಾಂತ ಜೀವನಗಳಿಂದಲೇ ಮಧುಮೇಹವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಅಸಾಧ್ಯ.

◆ ಮಾನಸಿಕ ದೃಢತೆ, ಶಾಂತ ಜೀವನ, ಸದೃಢ ಜೀರ್ಣಕ್ರಿಯೆ ಇವು ಆರೋಗ್ಯದ ಗುಟ್ಟುಗಳು.

ಧನ್ಯವಾದಗಳು 🙏🙏🙏
••••••••••••••
By
ಹೆಚ್.ಬಿ.ಮೇಟಿ

Tuesday, 26 January 2021

ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ....

🙏ಅಮೃತಾತ್ಮರೇ ನಮಸ್ಕಾರ 🙏
🌱ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌱
   🌞ಸ್ವಾಸ್ಥ್ಯ ಸರ್ವರದ್ದೂ ಆಗಲಿ🌞
••••••••••••••••••••••••••••••••••••••••••
27.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-4
••••••••••••••
✍️: ಇಂದಿನ ವಿಷಯ:
ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ.
•••••••••••••••••••••••••••••••••••••••••

ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು, ಪ್ರತ್ಯಕ್ಷ ಅನುಭವದಲ್ಲಿ ಹೇಳಿದ್ದಾರೆ,  ವಿಜಯವಾಣಿಯ ಹಿರಿಯ ಉಪಸಂಪಾದಕರಾದ ಶ್ರೀ.ಆರ್.ರಘುರಾಮ್.
★★★★★=====★★★★★
🙏ಆತ್ಮೀಯ ಬಂಧುಗಳೇ,

◆ಮಾತಾ ಮರಕತ ಶ್ಯಾಮಾ ಮಾತಂಗಿ ಮಧುಶಾಲಿನಿ.....
ಕಾಳಿದಾಸನ ಕಾವ್ಯದ ಸಾಲುಗಳಲ್ಲಿ ನಾನು ಮೊದಲ ಬಾರಿಗೆ *ಮಧು* ಪದವನು ಕೇಳಿದ್ದು ಬಾಲ್ಯದಲಿ. ಅದಾದ ನಂತರ ಹಲವುಬಾರಿ ಮಧು ಪದವು ಮನಕೆ ಬಿದ್ದಿದೆ. ಆದರೆ ದೇಹಕ್ಕೆ ಬಿದ್ದದ್ದು 8 ವರುಷಗಳ ಹಿಂದೆ.... ಇದೇ ದೊಡ್ಡ  ಆಚ್ಚರಿ...😌
ಹೌದು.
ನನ್ನ ತಾಯಿಯ ತಂದೆ "ಆಯುರ್ವೇದ ಭಿಷಗ್ ರತ್ನ ಪಂಡಿತ"ರಾಗಿದ್ದರಂತೆ. ಇದನ್ನು ಅಮ್ಮನಿಂದ ಕೇಳಿದ್ದೆ. ಕಾಕತಾಳೀಯ ಅನ್ನುವಂತೆ  ಬಾಲ್ಯದಿಂದ ಆಯುರ್ವೇದ ಪದ್ಧತಿಯೇ ಆಗಾಗ್ಗೆ ಅಂಟು..ನಂಟು ಬೆಳಸಿಕೊಂಡಿದೆ.

ಹೇಳಬೇಕಿರುವುದು... *ಮಧುಮೇಹದೊಂದಿಗೆ 8 ವರುಷಗಳ ಜೀವನ.* ಆದರದು ನನ್ನ ಜೀವನಕೆ ಕಹಿಯಾಗದೇ ಸಿಹಿಯಾಗುವಂತೆ ಮಾಡಿದ್ದು ಮಾತ್ರ *ಆಯುರ್ವೇದ...*
ಹೌದು.
2012ರಲ್ಲಿ ಮೊದಲ ಬಾರಿಗೆ ಮಧುಮೇಹ ಕಾಣಿಸಿಕೊಂಡಾಗ ....."ಗಾಬರಿ ಬೇಡ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆಯುರ್ವೇದ ಇದೆ", ಎಂಬ ಭರವಸೆ ಡಾ.ಮಲ್ಲಿಕಾರ್ಜುನ ಡಂಬಳ ಅವರಿಂದ ಸಿಕ್ಕಿತು.
ಸತ್ಯ.
🙏  ವೈದ್ಯ ಪದ್ಧತಿ ಜೊತೆಗೆ ಆತಂಕಿತರಿಗೆ ವೈದ್ಯರು ನೀಡುವ ಭರವಸೆಯೇ ಬಾಳಿಗೆ ಬೆಳಕಾಗುತ್ತದೆ.

ಮೊದಲಿಗೆ *ಶಿವ ಗುಳಿಕಾ* ಪ್ರಯೋಗದಿಂದ ಕುಗ್ಗಿದ ದೇಹ ಮತ್ತು ಮನಸುಗಳಿಗೆ ಶಕ್ತಿ ಬಂದಿತು, ಆದರೆ,
ಆಗ ಜನಗಳು ಹೇಳಿದರು ಮತ್ತೆ ಇಗಲೂ ಹೇಳುತ್ತಾರೆ....ತೆಳ್ಳಗೆ ಆಗಿರುವೆ ಅಂತಾ. ಆಗ ಕುಗ್ಗುವ ಭರವಸೆಗೆ ಭರಪೂರ ಉತ್ತಮ ಭಾವನೆ ತುಂಬಿ *ನಾವು ನಿಜವಾಗಿ ಇರಬೇಕಿರುವುದೇ ಹೀಗೆ, ಕೃಶತ್ವ(ತೆಳ್ಳಗೆ ಇರುವುದು) ಶ್ರೇಷ್ಠ,* ಎಂದು ಶಕ್ತಿ ತುಂಬಿದ್ದೇ ಆಯುವೇ೯ದ ವಿಜ್ಞಾನ.

ಈ ಬಗ್ಗೆ ನಂಬಿಕೆ ಏನೇ ಇದ್ದರೂ ಇಂದು ಎಲ್ಲಕ್ಕೂ ಪ್ರಮಾಣಗಳನ್ನು ಸಮಾಜ ಕೇಳುತ್ತದೆ. ಅದು trend ಕೂಡಾ ಆಗಿದೆ. ಇರಲಿ ಬಿಡಿ.

ಅದು ಏನೇ ಇದ್ದರೂ
ವಾಸ್ತವವಾಗಿ ಪ್ರಯೋಗಾಲಯಗಳು ನೀಡುವ ವರದಿಗಳನ್ನು ಒಪ್ಪಲೇ ಬೇಕು ಅಲ್ವೇ...
ಕಳೆದ ವರುಷ ನನ್ನ ಮಿತ್ರರ ಒತ್ತಾಸೆ, ಮರ್ಜಿಗೆಂದು ಬೆಂಗಳೂರಿನ ಜಯದೇವ ಆಸ್ಪತ್ರೆ ಹಿಂದಿರುವ *Karnataka Diabetic Institute* ನಲ್ಲಿ ಇರುವ
ಮಧುಮೇಹ ತಪಾಸಣಾ ಕೇಂದ್ರಕ್ಕೆ ಹೋಗಿದ್ದೆ. 
*ಇದು ರಾಜ್ಯದಲ್ಲಿ ಅತಿ ನಿಖರವಾಗಿ ವರದಿ ಕೊಡುವ ಲ್ಯಾಬ್ ಗಳಲ್ಲಿ ಪ್ರಮುಖವಾದದ್ದು.* ದಿನವೂ ಸಾವ೯ಜನಿಕ ಸೇವೆಗೆ ಲಭ್ಯ ಇರುವುದು. ಅಲ್ಲಿನ ಹತ್ತಾರು ತಪಾಸಣೆ ಮತ್ತು ಲ್ಯಾಬ್ ರಿಪೋರ್ಟ್ ಪ್ರಕಾರ
ನನ್ನ ಬಗ್ಗೆ ಬಂದ ಫಲಿತಾಂಶ ನಿಮಗೆಲ್ಲ ಅಚ್ಚರಿಯನ್ನೇ ಮೂಡಿಸುತ್ತದೆ.
*ಡಯಾಬಿಟಿಕ್ ಬಂದು 4...5  ವರುಷದಲ್ಲಿ ಅದನ್ನು ಎಷ್ಟೇ ನಿಯಂತ್ರಸಿದರೂ, ಅದು ಯಾವುದಾದರೂ ಅಂಗವನ್ನು ಡ್ಯಾಮೇಜು ಮಾಡುತ್ತದಂತೆ.* ಆದರೆ ನನಗೆ ದೊರೆತ ಆಯುವೇ೯ದ ಆರೈಕೆ ಫಲ... 8 ವರುಷಗಳಾದರೂ ಕಣ್ಣು, ಹೃದಯ, ನರಗಳು, ಕೈ ಕಾಲು, ಪಾದದ ಬಿಂದುಗಳು, ಸಾಮಾನ್ಯ ಜೀಣ೯ಕ್ರಿಯಾ ಪ್ರಕ್ರಿಯೆ, 
ಎಲ್ಲವೂ....Normal.....!😇
ಹೌದಲ್ಲವೇ. ನಮಗೆ ಬೇಕಿರುವುದು ಈ ರೀತಿಯ ದೀಘ೯ಕಾಲೀನ ಆರೋಗ್ಯ ಫಲಿತಾಂಶ. 

ಪ್ರಸ್ತುತ ನಾನು ಸೇವಿಸುತ್ತಿರುವುದು ಆಯುರ್ವೇದದ 2 ಪುಟ್ಟ ಮಾತ್ರೆ ಮಾತ್ರ.

*Till today....no side effect*👏

ಬಣ್ಣ ಬಣ್ಣದ  ಇಂದಿನ ಮಾಯೆಗಳಿಗೆ ಮರುಳಾಗದೇ ಪರಿಶುದ್ಧವಾದ
ಆಯುರ್ವೇದವನ್ನು ನಂಬಿ, ಅದರ ಜೀವನ ಪದ್ಧತಿಯನ್ನು ವ್ರತದಂತೆ ಅನವರತ ಅನುಸರಿಸಲು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಸಲ್ಪ ಶಾಂತವಾಗಿರುವ, ಸಮಾಧಾನವಾಗಿರುವ ಪಾಠವನ್ನು ನಿಮಗೆ ನೀವೇ ಬಿಡುವು ಮಾಡಿಕೊಂಡು  ಹೇಳಿಕೊಳ್ಳಿ.

 🌸ಭದ್ರಂ, ಶುಭಂ, ಮಂಗಳಂ🌸

🍀ಆರಾಮದಾಯಕ ಜೀವನ ನಡೆಸಿ🍀

✍  ಹೆಚ್.ಬಿ .ಮೇಟಿ.. (ಸಂಗ್ರಹ)

Monday, 25 January 2021

ಮಧುಮೇಹ ಚಿಕಿತ್ಸೆ ಎಷ್ಟು ಸತ್ಯ........

🙏ಅಮೃತಾತ್ಮರೇ ನಮಸ್ಕಾರ 🙏
🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿
    🕊ಸ್ವಾಸ್ಥ್ಯ ಸರ್ವರದ್ದೂ ಆಗಲಿ🕊
••••••••••••••••••••••••••••••••••••••••••
26.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-3
••••••••••••••
✍️: ಇಂದಿನ ವಿಷಯ:
ಮಧುಮೇಹ ಚಿಕಿತ್ಸೆ ಎಷ್ಟು ಸತ್ಯ🤔
•••••••••••••••••••••••••••••••••••••••••
ಪ್ರಮೇಹ ಮಧುಮೇಹಗಳಲ್ಲಿ, ಅಪತರ್ಪಣ(ಶರೀರ ಒಣಗಿಸುವ) ಔಷಧಗಳನ್ನು ಪ್ರಯೋಗಿಸಲೇಬಾರದು.
ಆದರೆ ದುರಾದೃಷ್ಟವಶಾತ್ ಎಲ್ಲಾ ಅಲೋಪಥಿ ದ್ರವ್ಯಗಳು, ಕೊಲೆಸ್ಟರಾಲ್‌ ಕರಗಿಸುವ, ಸಕ್ಕರೆ ಕಡಿಮೆ ಮಾಡುವ ಕಾರ್ಯವನ್ನೇ ಮಾಡುತ್ತಿವೆ. ಅದರಿಂದ ಏನು ಉಪದ್ರವಗಳು ಬರುತ್ತವೆ ಎಂದು ಶ್ಲೋಕ ಸಂಖ್ಯೆ 17ರಲ್ಲಿ ಚರಕಾಚಾರ್ಯರು ಸ್ಪಷ್ಟವಾಗಿ ಹೇಳುತ್ತಾರೆ.

❄️ ಇಂದಿನ ನಮ್ಮ ಔಷಧಕೃತ್ಯಗಳಿಂದ ಮಧುಮೇಹಿಗಳ ಸರ್ವಧಾತುಗಳೂ ಕ್ಷಿಣಿಸುತ್ತಿವೆ, ಅಂದರೆ ನಿಧಾನವಾಗಿ ಅಕಾಲ ಮರಣ‌ದತ್ತ ಅವರನ್ನು ನೂಕುತ್ತಿದ್ದೇವೆ.

 ❄️ ಧಾತು ಕ್ಷೀಣತೆ ಎಂದರೆ
🔹 ಶರೀರವನ್ನು ಹಸಿಯಾಗಿಡುವ ರಸಧಾತು ಒಣಗಿದ ಕಾರಣ- ಚರ್ಮದಸುಕ್ಕು, ಕಾಂತಿನಾಶ, ಕ್ಲೈಭ್ಯ(ಲೈಂಗಿಕ ಶಕ್ತಿಹ್ರಾಸ) 
🔹 ರಕ್ತಕ್ಷಯದ ಕಾರಣ ಸಿರಾ(arteries and veins) ಒಣಗುವಿಕೆ ತತ್ಕಾರಣ- ಬಿ.ಪಿ ವೃದ್ಧಿ, ಹೃದಯ/ಮೆದುಳಿನ ರಕ್ತನಾಳ ಕಟ್ಟುವಿಕೆ-ಹೃದಯಾಘಾತ, ಪಾರ್ಶ್ವವಾಯು... ಮೂತ್ರಪಿಂಡಗಳಲ್ಲಿನ ಸೂಕ್ಷ್ಮ ರಕ್ತನಾಳಗಳು ಒಣಗುವಿಕೆ(vascular hardness)ಯಿಂದ ಅವುಗಳ ಸೋಸುವಿಕೆ ಕಾರ್ಯ ಹಾಳಾಗಿ ಕಿಡ್ನಿ ಫೇಲ್ ಆಗುವುದು.
 🔹 ಮಾಂಸಧಾತು ಒಣಗುವಿಕೆಯಿಂದ ಶರೀರದ ಬಲ ಕುಂದುವುದು. 
🔹 ಮೇದಸ್ಸು ಒಣಗುವುದರಿಂದ ಅದರ ಉಪಧಾತುಗಳಾದ ನರಗಳು(Brain and entire nervous system) ಒಣಗಿ, ನ್ಯೂರೈಟೀಸ್(ಕೈಕಾಲು ಮರಗಟ್ಟುವಿಕೆ...) ಮ್ಯಾಕುಲಾರ್ ಡಿಜನರೇಷನ್(ಕಣ್ಣಿನ ನರವ್ಯೂಹ ರೆಟಿನಾ ಹಾಳಾಗುವುದು) ಮುಂತಾದವು,
 🔹 ಅಸ್ಥಿ-ಮಜ್ಜಾಧಾತು ಒಣಗಿ ಮೂಳೆ, ಸಂಧು, ರಕ್ತೋತ್ಪತ್ತಿ ಎಲ್ಲವುಗಳು ಸೊರಗಿ ಮಾನವ ಉಸಿರಾಡುವ ಶವದಂತೆ ಆಗುತ್ತಾನೆ😞
 ಇಷ್ಟಾದರೂ ರಕ್ತದ ಸಕ್ಕರೆ ಅಂಶವನ್ನೇ ಎದುರುನೋಡುವ ಅಲೋಪಥಿ ಇನ್ಸುಲಿನ್ ನಂತಹ ಮಾರಕ ಅಸ್ತ್ರ ಪ್ರಯೋಗಕ್ಕೆ ಮುಂದಾಗುವುದು ಮತ್ತು ಮಾತ್ರೆಗಳಿಗಿಂತ ಅದೇ ಶ್ರೇಷ್ಠ ಎಂದು ಹೇಳುವುದು ಅನ್ಯಾಯವೇ ಸರಿ.

❄️ ಹಿಂದೊಮ್ಮೆ ಸಕ್ಕರೆ ಕಡಿಮೆ ಮಾಡುವ ಮಾತ್ರೆಗಳು ಬೇಕೇ ಬೇಕು ಎಂದು ಹಠಮಾಡಿದ್ದ ವಿಜ್ಞಾನ ಮಾತ್ರೆಗಳಿಂದ ಯಕೃತ್, ಮೂತ್ರಪಿಂಡಗಳಿಗೆ ತೊಂದರೆ ಆಗುತ್ತದೆ ಹಾಗಾಗಿ ಇನ್ಸುಲಿನ್ ಒಳ್ಳೆಯದು ಎನ್ನುತ್ತದೆ. ಇಲ್ಲಿ ಹೋಲಿಕೆ ಮಾಡುತ್ತಿರುವುದು, ತನ್ನ ಮಾತ್ರೆಗಳು ಮತ್ತು ಇನ್ಸುಲಿನ್ ನಡುವೆಯೇ ಹೊರತು ಜಗತ್ತಿನ ಇನ್ನಾವುದೇ ಪದ್ಧತಿಯ ಔಷಧಿಗಳ ಜೊತೆ ಹೋಲಿಸುತ್ತಿಲ್ಲ, ಹಾಗೊಂದು ಪ್ರಕ್ರಿಯೆ ಪ್ರಾರಂಭವಾದ ದಿನ ಆರೋಗ್ಯ ಕ್ಷೇತ್ರದ ಸುದಿನ, ಜನರ ಗೆಲುವು ಎಂದೇ ಹೇಳಬಹುದು.

❄️ ಇನ್ನೂ ಆಶ್ಚರ್ಯ ಎಂದರೆ ಅಲೋಪಥಿ ಹಾದಿಯನ್ನೇ ಹಿಡಿದ, ಆಯುರ್ವೇದ ಸಂಶೋಧನೆಗಳೂ ಕೇವಲ ಅಪತರ್ಪಣ ದ್ರವ್ಯಗಳು ಉತ್ತಮ ಸಕ್ಕರೆ ನಿಯಂತ್ರಕಗಳು ಎಂದು ಸಾಬೀತುಪಡಿಸುತ್ತಿವೆ. 
🔹 ಉದಾಹರಣೆಗೆ "ಅಡಿಕೆಯಿಂದ ತಯಾರಿಸುವ ಮಧುಮೇಹ ನಿಯಂತ್ರಕ ಔಷಧಿಗಳು"!! ಆ ಕಾರಣದಿಂದ ಉಪದ್ರವಗಳಿಂದ ಮಾನವನ ಬದುಕು ಹಾಳಾಗುವುದು ತಪ್ಪುತ್ತಿಲ್ಲ.

❄️ ಪ್ರಮೇಹವನ್ನು ಮತ್ತು ಮಧುಮೇಹವನ್ನು ಆಯುರ್ವೇದದ ರೀತಿಯಲ್ಲಿಯೇ ನೋಡಿ ಚಿಕಿತ್ಸಿಸಬೇಕೇ ಹೊರತು ಇನ್ನಾವುದೋ ಪೂರ್ವಾಗ್ರಹದ ಸಿದ್ಧಾಂತದ ಮೇಲೆ ಅಲ್ಲ.

ಇದರ ಪ್ರತ್ಯಕ್ಷ ಉದಾಹರಣೆಯನ್ನು  ವಿಜಯವಾಣಿಯ ಹಿರಿಯ ಉಪಸಂಪಾದಕರು, ನಮ್ಮ ಆತ್ಮೀಯ ಹಿರಿಯ ಮರ್ಗದರ್ಶಕರಾದ.ಆರ್.ರಘುರಾಮ್ ಅವರು ತಮ್ಮ ಅನೇಕ ಉಪನ್ಯಾಸಗಳಲ್ಲಿ ಮಧುಮೇಹಕ್ಕೆ ಆಯುರ್ವೇದ ಬಳಸಿದ ಲಾಭ ಏನೆಂಬುದನ್ನು ಹೇಳುತ್ತಾರೆ.

🎤 ನಾಳಿನ ಸಂಚಿಕೆ ಅವರ ಅನುಭವವೇ ಆಗಿದೆ.
ಅವರ ಮಾತನ್ನು ಕೇಳಿದ ಮೇಲೆ ನಿಮ್ಮ ಭರವಸೆ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಧನ್ಯವಾದಗಳು 🙏🙏🙏
••••••••••••••••••••••••••••••••••••••••••

Sunday, 24 January 2021

1) ಏನು ಮಾಡುವುದರಿಂದ ಡಯಾಬಿಟೀಸ್ ನ್ನು ಶಾಶ್ವತವಾಗಿ ತಡೆಯಬಹುದು ? 2) ಡಯಾಬಿಟೀಸ್ ಮೊದಲು ಬರುವ ಲಕ್ಷಣಗಳೇನು?

🙏ಅಮೃತಾತ್ಮರೇ ನಮಸ್ಕಾರ 🙏
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
               🧘‍♂🧘🧘‍♀
••••••••••••••••••••••••••••••••••••••••••
25.01.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-3
••••••••••••••
✍️: ಇಂದಿನ ವಿಷಯ:
1) ಏನು ಮಾಡುವುದರಿಂದ ಡಯಾಬಿಟೀಸ್ ನ್ನು ಶಾಶ್ವತವಾಗಿ ತಡೆಯಬಹುದು?

2) ಡಯಾಬಿಟೀಸ್ ಮೊದಲು ಬರುವ ಲಕ್ಷಣಗಳೇನು?
•••••••••••••••••••••••••••••••••••••••••
🔥ಶರೀರದಲ್ಲಿ ಅಗ್ನಿ ಅಂದರೆ ಪಚನ ಸಾಮರ್ಥ್ಯ ಎರಡು ವಿಧ, ಸ್ಥೂಲ ಅಗ್ನಿ ಕರುಳಿನಲ್ಲಿರುವುದು ಮತ್ತು ಸೂಕ್ಷ್ಮ‌ರೂಪದ ಧಾತ್ವಾಗ್ನಿಗಳು ರಕ್ತದಲ್ಲಿ ಸಂಚಾರ ಮಾಡುತ್ತಿರುವುದು.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯಿಂದಲೂ, ಪೌಷ್ಠಿಕಾಂಶದ ಹೆಸರಿನಲ್ಲಿ ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವನೆ ಮಾಡಿ ತಕ್ಕಷ್ಟು ಶಾರೀರಿಕ ಶ್ರಮ ಮಾಡದೇ ಇರುವುದರಿಂದಲೂ, ಎರಡೂ ರೀತಿಯ ಅಗ್ನಿಗಳು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತವೆ. 
ಆಗ ನಮ್ಮ ಶರೀರ ಕೊಡುವ ಪ್ರಮುಖ ಸೂಚನೆಗಳು 👉
🛎 ಮೂರು ಹಂತಗಳಲ್ಲಿ ಪ್ರಮೇಹದ ಮತ್ತು ಮಧುಮೇಹದ ಮುನ್ಸೂಚನೆಗಳನ್ನು ಕಾಣಬಹುದು. ಆಚಾರ್ಯರು ಈ ಲಕ್ಷಣಗಳನ್ನು ಪೂರ್ವರೂಪ ಎಂಬ ಹೆಸರಿನಿಂದ ಕರೆಯುತ್ತಾರೆ.

ಇದು ಆರಂಭದಲ್ಲಿ ಕರುಳಿನ ಅಗ್ನಿಯಲ್ಲಿ ಕಂಡುಬರುತ್ತದೆ. ಅದರ ಲಕ್ಷಣ‌ ಎಂದರೆ,
💠 ದುರ್ಗಂಧಯುಕ್ತ 
ಬೆವರು
💠 ದುರ್ಗಂಧ ಶರೀರ , ಮತ್ತು
💠 ದುರ್ಗಂಧ ಮೂತ್ರ 
💠 ಮಲಬದ್ಧತೆ ಅಥವಾ ವಾಸನೆಯುಕ್ತ ಮಲ.
(ಕಾರಣ: ಆಹಾರದ ಅಂಶ ಇವುಗಳಿಂದ ಬೇರ್ಪಡದೇ ಇರುವುದು)
💠 ಶರೀರ ಶಿಥಿಲತೆ ಭಾವ, 
ಯಾವುದಕ್ಕೂ ಇಚ್ಛೆ ಇಲ್ಲದೇ ಕುಂತಲ್ಲೇ ಕುಂತಿರುವ ಭಾವ.

🛎 ಈ ಹಂತದಲ್ಲಿ ಎಚ್ಚರಗೊಂಡು- ಉಪವಾಸ, ಜೀರ್ಣಕ್ಕೆ ಭಾರವಾಗದ ಆಹಾರಸೇವನೆ, ಅದಕ್ಕೆ ತಕ್ಕಷ್ಟು ಶಾರೀರಿಕ ಕೆಲಸಗಳನ್ನು ಮಾಡುತ್ತಾ ಭಯಾತಂಕಗೊಳ್ಳದೇ ಇದ್ದರೆ ನೂರಕ್ಕೆನೂರು ತಡೆದುಬಿಡಬಹುದು.

🛎 ಆಗಲೇ ಎಚ್ಚರಗೊಳ್ಳದಿದ್ದರೆ ಎರಡನೇ ಹಂತದ ಪಚನಕ್ರಿಯೆಗೆ ಅಲ್ಪವಿಭಜಿತ ಅವಸ್ಥೆಯಲ್ಲಿರುವ ಆಹಾರ ಬಂದಾಗ, ಅದು ರಕ್ತದಲ್ಲಿನ ಧಾತ್ವಾಗ್ನಿ ಕ್ರಿಯೆಗೆ ಜೀರ್ಣವಾಗದೇ,  ಸಾರಭಾಗ ಉತ್ಪತ್ತಿಗಿಂತ ಹೆಚ್ಚು ಮಲ ಉತ್ಪತ್ತಿಯಾಗುವ ಕಾರಣ ಶರೀರ ಧಾರಣೆ ಮಾಡುವ ಧಾತುಗಳ ಕಾರ್ಯ ನಡೆಯದೇ ಮಲದ ಕಾರ್ಯ ಕಂಡುಬರುತ್ತದೆ. ಅದೆಂದರೆ
💠 ಭಾರವಾದ ಮನಸ್ಸು, 
💠 ನೇತ್ರ ಭಾರತೆ,
💠 ಶ್ರವಣಾದಿ ಇಂದ್ರಿಯಗಳೂ ಶರೀರವೂ ಭಾರ ಎನಿಸುವುದು 
ಹಾಗೂ 
💠 ಮಲಸ್ವೇದದ ಕಾರಣ ಅತಿಯಾದ ತಲೆಹೊಟ್ಟು,
💠 ಅಸ್ಥಿ ಧಾತುವಿನ ಮಲಗಳಾದ ಕೂದಲು ಉಗುರುಗಳು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುವುದು.

🛎 ಈ ಹಂತದಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಕೆಲ ದ್ರವ್ಯಗಳನ್ನು ಆಹಾರದಲ್ಲಿ ಬಳಸುವುದು ಮತ್ತು ಮೊದಲ ಹಂತದ ಪರಿಹಾರ ಎರಡನ್ನೂ ಸೇರಿಸಿದರೆ ಡಯಾಬಿಟೀಸ್ ಸಂಪೂರ್ಣ ತಡಯಬಹುದು.
•••••
🛎 ಅಗ್ನಿಗಳ ಹಂತ ಮೀರಿ ಸ್ರೋತಸ್ಸು(ಶರೀರ ಅಥವಾ ಧಾತುಗಳ ಉತ್ಪತ್ತಿ ಸ್ಥಾನ)ಗಳು ದುಷ್ಠಿಯಾದಾಗ-
🤯 ಸೆಖೆಯಾಗುವುದು, ತಂಪು ಬೇಕೆನಿಸುವುದು/ಫ್ಯಾನ್ ಇಲ್ಲದೇ ಇರಲಾಗದು,
🥺 ಬಾಯಿ ಒಣಗುವಿಕೆ,
🤬 ಹಸ್ತಪಾದ ಉರಿ,
🐜 ಮೂತ್ರಕ್ಕೆ ಇರುವೆ ಮುತ್ತಿಕೊಳ್ಳುವುದರ ಮೂಲಕ ಮುನ್ಸೂಚನೆ ಕಾಣುವವು.
ಇದಾಗಲೇ ರಿಪೇರಿ ಹಂತ ಮೀರುತ್ತಿರುವ, ಆದರೂ ಪೂರ್ವರೂಪ ಅವಸ್ಥೆ.

ಇವೆಲ್ಲಾ ಪೂರ್ವರೂಪಗಳೇ ಆದ್ದರಿಂದ ಡಯಾಬಿಟೀಸ್ ಬಂತೆಂದು ಅರ್ಥವಲ್ಲ. ಆದರೆ ಮುಂದೆ ಪ್ರಮೇಹ ಮತ್ತು ಮಧುಮೇಹ ಬರುವ ಸ್ಪಷ್ಟ, ನಿಖರ ಸೂಚನೆಗಳು👈

ಈ ಹಂತದಲ್ಲಿ ಮೊದಲೆರೆಡು ಪರಿಹಾರಗಳೊಟ್ಟಿಗೆ ಆಯುರ್ವೇದ ಔಷಧವನ್ನೇ ಮಾಡಬೇಕು
ಆಗ ಶೇ 80 % ಜನರಿಗೆ ಶಾಶ್ವತ ಪರಿಹಾರ ಮತ್ತು ಶೇ 20% ಜನರಿಗೆ ಡಯಾಬಿಟೀಸ್ ಅನ್ನು 5-10ವರ್ಷಗಳ ಕಾಲ ಮುಂದೂಡಲು ಸಾಧ್ಯ.

ವಿಚಿತ್ರ ಎಂದರೆ ಇಷ್ಟು ಮುನ್ಸೂಚನೆಯಿತ್ತ ಆಯುರ್ವೇದದ ಮಾತನ್ನು ಕೇಳಿ, ಪರಿಹಾರವನ್ನು 
ಆಯುರ್ವೇದದಲ್ಲಿ ಕೇಳದೇ, ಸೂಪರ್ ಸ್ಪೆಷಾಲಿಟೀ ಎಂಬ ತಲೆಯ ಗುಂಗಿನಿಂದ ಮತ್ತು ಇದೇ ವಿಜ್ಞಾನ ಎಂಬ ಧೋರಣೆಗೊಳಗಾಗಿ- ಸಧ್ಯಕ್ಕೆ ಯಾವ ಪರಿಹಾರವನ್ನೂ ಕಂಡುಕೊಳ್ಳದ ಮತ್ತು ಅಗ್ನಿಯ ಕಾರ್ಯವನ್ನು ತಿಳಿಯದೇ ಇರುವ ಮತ್ತು ಅತೀ ಬಾಲಿಷ ಪ್ರಯೋಗ ಮಾಡುತ್ತಿರುವ ಅಲೋಪಥಿಗೆ ಮೊರೆಹೋದರೆ ಯಾವುದೇ ಕಾರಣಕ್ಕೂ ಪರಿಹಾರ ಅಸಾಧ್ಯ🙄

🗣 ಅಲ್ಲಿ ಈ ಮಾತುಗಳೇ ಕಂಡುಬರುತ್ತವೆ- 
🧐 ಅನ್ನ ಬಿಡಿ ಗೋಧಿ ತಿನ್ನಿ!!
🧐 ತುಪ್ಪ‌ತಿನ್ನಬೇಡಿ!!
🤭 ಯಾವುದಕ್ಕೂ ಒಂದು ಚಿಕ್ಕ ಮಾತ್ರೆ ಆರಂಭಿಸಿ!!
🤫 ಚಿಂತೆ ಬಿಡಿ ಬಂದಾಗ ನೋಡೋಣ!
 😷 ಏನ್ಮಾಡಕ್ಕಾಗುತ್ತೆ ಒಪ್ಕೊಳ್ಳಿ ನಿಮ್ಮೊಬ್ರಿಗಾ ಇರೋದು!
🤐 ಹೆರಿಡಿಟರಿ!
🙄 ನಿಮ್ಮ ವರ್ಕ್ ಪ್ಯಾಟ್ರನ್ ಹಾಗಿದೆ....!!!
👆ಇವೆಲ್ಲಾ ಕಾರಣಗಳೇ ಹೊರತು ಪರಿಹಾರಗಳಲ್ಲ.


🕵 ಈಗಲೇ ಎಚ್ಚೆತ್ತುಕೊಳ್ಳಿ, ಡಯಾಬಿಟೀಸ್ ಎಷ್ಟೇ ಅನುವಂಶೀಯವಾಗಿದ್ದರೂ ಬಾರದಂತೆ ತಡೆದುಬಿಡಿ.

💁‍♀ ಸರಳ ಪರಿಹಾರಗಳು:
▪️ ಹಸಿಯದೇ ಉಣದಿರೋಣ.
▪️ ಹಸಿದರೂ ಬಹಳಕಾಲ ಉಪವಾಸ ಮಾಡದಿರೋಣ.
▪️ ಚಪಾತಿ ತಿನ್ನದಿರೋಣ.
▪️ ಆಹಾರದಲ್ಲಿ ನೀರಿನ ಅಂಶ ಯಥೇಚ್ಛವಾಗಿರುವಂತೆ ನೋಡಿಕೊಳ್ಳೋಣ.
▪️ ನಿತ್ಯ ಶಾರೀರಿಕ ಕೆಲಸಗಳನ್ನು ಮಾಡೋಣ.

✔️ ಅತ್ಯಂತ ಪ್ರಾಮುಖ್ಯವಾದ ನಿತ್ಯಪರಿಹಾರದ ಅಂಶಗಳು:
ನಮ್ಮ ಹಸಿವು, ಬಾಯಾರಿಕೆ, ನಿದ್ದೆ, ಆಯಾಸ, ಮಲ, ಮೂತ್ರಗಳ ಮಾತನ್ನು ಅನುಸರಿಸೋಣವೇ ಹೊರತು, ಯಾರೋ ಹೇಳಿದರೆಂದು ಅಕಾಲದಲ್ಲಿ ಮೂಢ ಅನುಕರಣೆ ಬೇಡ. 
ನಮ್ಮ ಅವಸ್ಥೆ ನಮ್ಮ ಶರೀರಕ್ಕೆ ಸ್ಪಷ್ಟವಾಗಿ ತಿಳಿಯುತ್ತದೆಯೇ ಹೊರತು ಎದುರಿಗಿರುವ ಪಂಡಿತರಿಗಲ್ಲ ಎಂಬುದೇ ಪೂರ್ಣ ಸತ್ಯ. 
ಹಾಗಾಗಿ 
ನಮ್ಮ ನಮ್ಮ ಶರೀರ ಎಲ್ಲವನ್ನೂ ಕೇಳುತ್ತದೆ, ಕೇಳಿದಾಗ ಇಲ್ಲ ಎನದಂತೆ, ಅದು ಒಲ್ಲೆ ಎಂದರೂ ಬಾಯಿಗೆ ತುರುಕದಂತೆ ಮನಸ್ಸನ್ನು ನಿಗ್ರಹಿಸಿ.
ಮೈಭಾರ ಎನಿಸಿದರೆ ಹಗುರವಾಗುವವರೆಗೆ ಕೆಲಸ ಮಾಡಿ.

Saturday, 23 January 2021

ಮಧುಮೇಹ ಎಷ್ಟು ಸತ್ಯ?

🙏ಅಮೃತಾತ್ಮರೇ ನಮಸ್ಕಾರ 🙏
   🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
      ☘ಸ್ವಾಸ್ಥ್ಯ ಸರ್ವರದ್ದೂ ಆಗಲಿ☘
••••••••••••••••••••••••••••••••••••••••••
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-1
••••••••••••••
✍️: ಇಂದಿನ ವಿಷಯ:
🤔ಮಧುಮೇಹ ಎಷ್ಟು ಸತ್ಯ?!
•••••••••••••••••••••••••••••••••••••••••
ಏಕೆಂದರೆ,‌ 
ಇಂದಿನ 100 ಜನ ಮಧುಮೇಹಿಗಳಲ್ಲಿ 80 ಜನರಿಗೆ ಇರುವುದು ಮಧುಮೇಹ ಅಲ್ಲ. ಅದು ಕೇವಲ ರಕ್ತದ ಸಕ್ಕರೆ ಹೆಚ್ಚಿರುವ ಅವಸ್ಥೆ, ಮತ್ತು ಈ 80 ಜನರಲ್ಲಿ 50 ಜನರನ್ನು ಸುಲಭವಾಗಿ ಮತ್ತು ಉಳಿದ 30 ಜನರನ್ನು ಸ್ವಲ್ಪ ಕಷ್ಟದಿಂದ ಚಿಕಿತ್ಸಿಸಿ ಗುಣಪಡಿಸಬಹುದು! ಕೇವಲ 20 ಜನರು ಮಾತ್ರ ನಿಜವಾದ ಮಧುಮೇಹಿಗಳು ಇವರಿಗೆ ನಿರಂತರ ಚಿಕಿತ್ಸೆ ಬೇಕು ಮತ್ತು ಆಯುರ್ವೇದದ ಸಿದ್ಧಾಂತ ಅನುಸರಿಸಿ ಚಿಕಿತ್ಸಿಸಿದರೆ, ಈ 20 ಜನರ ಹೃದಯ, ಮೆದುಳು, ನರಗಳು, ಕಿಡ್ನಿಗಳನ್ನು ಸಂರಕ್ಷಿಸಬಹುದು!! ಶರೀರದಲ್ಲಿ ಮಾಯದ ಗಾಯಗಳಾಗದಂತೆ ಶಾಶ್ವತವಾಗಿ ತಡೆಯಬಹುದು.!!!

📖 ಸಾಧ್ಯಾಃ ಕಫೋತ್ತಾ ದಶ, ಪಿತ್ತಜಾಃ ಷಟ್ ಯಾಪ್ಯ, ನಸಾಧ್ಯಃ ಪವನಃ ಚತುಷ್ಕಃ |
ಸಮಕ್ರಿಯತ್ವಾತ್, ವಿಷಮ ಕ್ರಿಯತ್ವಾತ್, ಮಹಾ ಆತ್ಯಯಾತ್ ಚ ಯಥಾ ಕ್ರಮಂತೇ||7||
-ಚರಕ ಸಂಹಿತೆ ಚಿಕಿತ್ಸಾ ಸ್ಥಾನ-6(ಪ್ರಮೇಹ ಚಿಕಿತ್ಸಾ)

📑 ಒಟ್ಟು 20 ರೀತಿಯ ಪ್ರಮೇಹಗಳಲ್ಲಿ,
ಕಫಜ 10 ಪ್ರಮೇಹಗಳು ಚಿಕಿತ್ಸಾ ಸಾಧ್ಯ(ಅಂದರೆ ರಕ್ತದ ಸಕ್ಕರೆ ಹೆಚ್ಚಿರುವ ಶೇ 50% ಜನರು,) ಅಂದರೆ ಗುಣಪಡಿಸಲು ಸಾಧ್ಯ 👍

ಪಿತ್ತಜ 6 ಪ್ರಮೇಹಗಳು ಚಿಕಿತ್ಸಾ ಯಾಪ್ಯ(ಅಂದರೆ ರಕ್ತದ ಸಕ್ಕರೆ ಹೆಚ್ಚಿರುವ ಶೇ 30% ಜನರು) ಅಂದರೆ ನಿರಂತರ ಆಹಾರ ಪಾಲನೆ ಅವಶ್ಯಕ, ಆದರೆ ಮೇದಸ್ಸು ಕೆಡದಿದ್ದರೆ ಈ 30% ಸಹ ಗುಣಪಡಿಸುವುದು ಸಾಧ್ಯ 🤏

ವಾತಜ 4 ಪ್ರಮೇಹಗಳು(ಇವನ್ನೇ ಮಧುಮೇಹ ಎನ್ನುವುದು), ಈ 20% ಚಿಕಿತ್ಸಾ ಅಸಾಧ್ಯ, ಆದ್ದರಿಂದ ಔಷಧಿಗಳಿಂದಲೇ ಜೀವನ ಯಾಪನಗೈಯಬೇಕು 👎

ಏಕೆ ಹೀಗೆ ಎಂದರೆ,
*ಸಮಕ್ರಿಯತ್ವಾತ್.....* ಎಂದು ಆಯುರ್ವೇದ ವೈದ್ಯರಿಗೆ ಅರ್ಥವಾಗುವ ತಾಂತ್ರಿಕ ಭಾಷೆಯಲ್ಲಿ ಹೇಳಿದ್ದಾರೆ.

ನಮ್ಮ ಒಟ್ಟಾರೆ ಅಭಿಪ್ರಾಯ ಎಂದರೆ ಡಯಾಬಿಟೀಸ್ ಎಂದು ಹಣೆಪಟ್ಟಿ ಹಚ್ಚಿದ 80% ಜನರಿಗೆ ಅದು ಬರುವ ಹಂತದಲ್ಲಿದೆ, ಇನ್ನೂ ಬಂದಿಲ್ಲ, ಚಿಕಿತ್ಸೆ ಮಾಡಿದರೆ ಸಂಪೂರ್ಣ ಗುಣಪಡಿಸಬಹುದು💯

ಅಥವಾ,
ನಿಜವಾಗಿಯೂ ಡಯಾಬಿಟೀಸ್ ಎಂದು ಕರೆಯಬಹುದಾದ ಆ ಅವಸ್ಥೆಯಲ್ಲಿ,  ಮಧುಮೇಹ ಬಂದ ಒಂದೇ ಕಾರಣದಿಂದ ಹೃದಯ, ಕಿಡ್ನಿ , ಕಣ್ಣು , ನರ ಮುಂತಾದ ಯಾವುದೇ ಅವಯವಗಳನ್ನು ಹಾಳುಮಾಡಿಕೊಳ್ಳದೇ, ಭಗವಂತ ಕೊಟ್ಟ ಆಯುಷ್ಯದಷ್ಟು ಕಾಲ ನರಳದಂತೆ ಸುಖವಾಗಿ ನಮ್ಮ ನಮ್ಮ ಕೆಲಸಗಳನ್ನು ಮಾಡಿಕೊಂಡು,  ದೇಹದಲ್ಲಿ ಕಾಯಿಲೆ ಇರುವುದೇ  ಗೊತ್ತಾಗದಂತೆ ಬದುಕು ಸಾಗಿಸಬಹುದು😇

👉 ನಿಜವಾಗಿಯೂ ಡಯಾಬಿಟೀಸ್ ಎಂಬುದು 
*ಸಿಹಿ ಮೂತ್ರದ ರೋಗವೇ ಹೊರತು, ಸಿಹಿ ರಕ್ತದ ರೋಗವಲ್ಲ* 

👀 ನೆನಪಿಡಿ, ಏನೂ ಆಗದೇ ಸುಮ್ಮನಿದ್ದವನಿಗೆ ಹೆಲ್ತ್ ಚೆಕಪ್ ನೆಪದಲ್ಲಿ ರಕ್ತ ಪರೀಕ್ಷೆ ಮಾಡಿ ಅಥವಾ ಯಾವುದೋ ಕಾರಣಕ್ಕೆ ಆರೋಗ್ಯ ಸ್ವಲ್ಪವೇ ವ್ಯತ್ಯಯ ಇದ್ದ ಕಾಲದಲ್ಲಿ ಪರೀಕ್ಷೆ ಮಾಡಿ ಡಯಾಬಿಟೀಸ್ ಹಣೆಪಟ್ಟಿ ಕಟ್ಟುವುದು ಅನ್ಯಾಯ.

ಮತ್ತೂ ಘೋರತೆ ಏನೆಂದರೆ, 
ಏನೂ ಅಲ್ಲದ ಮತ್ತು ಸುಲಭವಾಗಿ ಹೋಗಲಾಡಿಸಬಹುದಾದ ಮತ್ತು ಅನ್ಯ ಅವಯವಗಳನ್ನು ರಕ್ಷಿಸಬಹುದಾದ ಒಂದು ಕಾಯಿಲೆಗೆ, ಕಾಲಾಂತರದಲ್ಲಿ ಯಕೃತ್ತಿನ ಶಕ್ತಿಯನ್ನೇ ಕುಂದಿಸುವ ತೀಕ್ಷ್ಣ ರಾಸಾಯನಿಕಗಳಿಂದಾದ ಮಾತ್ರೆಗಳನ್ನು ಮತ್ತು ಶರೀರವನ್ನು ಒಣಗಿಸಿ ಬಿಡುವ ಇನ್ಸುಲಿನ್ ಅನ್ನು ನಿತ್ಯವೂ ಸೇವಿಸುವಂತೆ ಮಾಡಿರುವುದು ಮತ್ತು ಅದೇ ಕಾರಣದಿಂದ ರಕ್ತನಾಳ, ನರವ್ಯೂಹವನ್ನು ಕ್ಷೀಣಿಸಿ ಮನುಷ್ಯನನ್ನು ನರಕ ಸದೃಶ ಬಾಳುವಂತೆ ಮಾಡಿರುವುದು ಇಂದಿನ ವೈದ್ಯಕೀಯ ಕ್ಷೇತ್ರದ ಅತ್ಯಂತ ಬಾಲಿಷ ನಡೆ🤕

ಆದಗ್ಯೂ ಇದೇ ವಿಜ್ಞಾನ, ಇದನ್ನು ನಂಬದೇ ವಿಧಿ ಇಲ್ಲ, ಆಯುರ್ವೇದ ಬಳಸಿದಿರೋ ಮುಗಿಯಿತು ಕಥೆ ಎಂಬ ಭಯ ಹುಟ್ಟಿಸುತ್ತಿರುವುದು ಅಮಾನವೀಯ ಮತ್ತು ಹೇಯ ಕೃತ್ಯ🤦‍♀

ಮತ್ತು, 
ಎಲ್ಲದಕ್ಕಿಂತ ದೊಡ್ಡದು ಎಂದರೆ ಅದನ್ನೇ ನಂಬಿಕೊಂಡು ನರಕವಾದರೂ ಸರಿ ರಕ್ತ ಪರೀಕ್ಷೆಯಲ್ಲಿ ಸಕ್ಕರೆ ಅಂಶ ಸರಿ ಇದ್ದರೆ ಸಾಕು ಹೇಗೋ ಕಾಲನೂಕಿದರಾಯ್ತು ಎಂದು ಒಪ್ಪಿ ಬಾಳುತ್ತಿರುವುದು ಈ ಸಮಾಜದ ದೌರ್ಭಾಗ್ಯ🤢

ಮುಂದುವರಿಯುತ್ತದೆ....

  🙏ಧನ್ಯವಾದಗಳು 🙏
••••••••••••••

Monday, 18 January 2021

*ಮಹಾರಾಷ್ಟ್ರದಲ್ಲಿನ ಕನ್ನಡದ ಕುರುಹುಗಳು.....* ಒಂದು ಕಿರುನೋಟ

*ಮಹಾರಾಷ್ಟ್ರದಲ್ಲಿನ ಕನ್ನಡದ ಕುರುಹುಗಳು.....*     ಒಂದು ಕಿರುನೋಟ

 ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 'ಕನ್ನಡ' ಎಂಬ ತಾಲೂಕೇ ಇದೆ ಗೊತ್ತೇನ್ರೀ..ಇಷ್ಟೇ ಸಾಕಲ್ವೇನ್ರೀ ಕನ್ನಡ‌ ನಾಡಿನ ವಿಸ್ತಾರ ಎಷ್ಟು ಅಂತಾ ಹೇಳೋಕೆ. 

ಮರಾಠಿ ನೆಲದ ಇತಿಹಾಸ ಕೆದಕುತ್ತಾ ಹೋದ್ರೇ ಅಲ್ಲಿ ಕನ್ನಡ ಕುರುಹುಗಳೇ ದಂಡಿ ದಂಡಿಯಾಗಿ ಸಿಗ್ತವೆ.
ಮಹಾರಾಷ್ಟ್ರದ ಏಕಮೇವಾ ದ್ವಿತೀಯ ಧುರೀಣ, ಭಾರತದ ಕ್ರಾಂತಿಪುರುಷ ಲೋಕಮಾನ್ಯ ಬಾಲ ಗಂಗಾಧರ ತಿಲಕರು 1914ರಲ್ಲಿ ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿಗೆ ಬಂದಿದ್ದರು. (ಈಗದು ಮಲಪ್ರಭಾ ಅಣೆಕಟ್ಟೆಯಲ್ಲಿ ಮುಳುಗಡೆಯಾಗಿದೆ.) 

ಅಲ್ಲಿ ಕರ್ನಾಟಕ ರಾಜಕೀಯ ಪರಿಷತ್‌ ಸಮಾವೇಶ ನಡೆದಿತ್ತು. 'ಒಂದು ಕಾಲಕ್ಕೆ ಕರ್ನಾಟಕ-ಮಹಾರಾಷ್ಟ್ರ ಈ ಎರಡೂ ರಾಜ್ಯಗಳ ಜನ ಆಡುತ್ತಿದ್ದ ಭಾಷೆ ಒಂದೇ ಇತ್ತು, ಅದವೇ ಕನ್ನಡ' ಅಂತಾ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಿಲಕರು ಹೇಳಿದ್ದರು. ಇದು ಕನ್ನಡದ ತಾಕತ್ತು. ನಾವು ನಮ್ಮತನ ಮರೆಯಬಾರದು.

ಚಾಲುಕ್ಯರ ಕಾಲದಲ್ಲಿ ಕರ್ನಾಟಕ ಮಾತ್ರ ಆಗಿರದೆ, ಮಹಾರಾಷ್ಟ್ರವೇ ಆಗಿದ್ದಿತು. 1605 ಸ್ಥಾಪನೆಗೊಂಡ ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿಯೇ ತನ್ನ ದಾಖಲೆಗಳಲ್ಲಿ ಇದನ್ನ ಉಲ್ಲೇಖಿಸಿದೆ. 1676ರಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಮುಂಬೈನಲ್ಲಿ ತನ್ನ ವ್ಯಾಪಾರಿ ಮಳಿಗೆ ಸ್ಥಾಪಿಸಿತು. 

ಆಗ ತನ್ನೊಂದಿಗೆ ವ್ಯಾಪಾರ ಮಾಡಲು ಬಯಸುವವರು ಕನ್ನಡ ಮತ್ತು ಪೋರ್ತುಗೀಜ ಭಾಷೆಯಲ್ಲಿ ವ್ಯವಹರಿಸಬೇಕೆಂದು ಜಾಹೀರನಾಮೆ ಹೊರಡಿಸಿತ್ತು. ಅಷ್ಟೇ ಅಲ್ಲ, ಇತ್ತೀಚೆಗಿನ ಇತಿಹಾಸ ನೋಡ್ತಾ ಬಂದ್ರೇ, ಮುಂಬೈ ನಗರದಲ್ಲಿ ಜನರಾಡುವ ಭಾಷೆ ಕನ್ನಡವೇ ಆಗಿತ್ತು. 

ಅಚ್ಚ ಕನ್ನಡ ದೊರೆಗಳಾದ 'ಶಿಲಾಹಾರರು' ಮುಂಬೈ ನಗರ ಆಳಿದ್ದರು. ಇಲ್ಲಿನ ದೊಂಬವಳ್ಳಿ, ಬೋರಿವಳ್ಳಿ, ಕಂದವಳ್ಳಿ, ಮಲ್ಲಾಡ ಕನ್ನಡ ದೊರೆಯ ಆಡಳಿತಕ್ಕೊಳಪಟ್ಟಿದ್ದವು. 

1818ರಲ್ಲಿ ಮುಂಬೈ ಪ್ರಾಂತದ ಮೊಟ್ಟಮೊದಲ ಗವರ್ನರ್‌ ಸರ್‌ ವಿಲಿಯಂ ಎಲಫಿನ್ಸ್‌ಟನ್‌ಗೆ ನೀಡಿದ್ದ ಮೊಟ್ಟ ಮೊದಲ ಮಾನಪತ್ರ ಕನ್ನಡದಲ್ಲಿತ್ತು. ಮಹಾರಾಷ್ಟ್ರದ ಅರ್ಧಕ್ಕೂ ಹೆಚ್ಚು ನಗರ ಮತ್ತು ಹಳ್ಳಿಗಳ ಹೆಸರು ಕನ್ನಡವೇ ಆಗಿವೆ. 

ಅವು ಎಷ್ಟೇ ಸ್ಥಿತ್ಯಂತರಗೊಂಡಿದ್ರೂ ತಮ್ಮ ಮೂಲ ಸ್ವರೂಪ ಇನ್ನೂ ಕಳೆದುಕೊಂಡಿಲ್ಲ. ಅವು ಕನ್ನಡವೆಂದು ಅವುಗಳ ಗುರುತನ್ನ ಈಗಲೂ ಹಿಡಿಯಬಹುದಾಗಿದೆ. ಇದನ್ನ ಮರಾಠಿ ಸಂಶೋಧಕ ರಾಜನವಾಡೆ ಯಾವುದೇ ಅಳುಕಿಲ್ಲದೇ ದಾಖಲಿಸಿದ್ದಾರೆ.

ಸಂಗೊಳ್ಳಿ ಎಂಬ ಕನ್ನಡ ಪದ  ಈಗ ಸಂಗೋಲಾ ಆಗಿದೆ. ಮಂಗಳವೀಡು ಅದೀಗ ಮಂಗಳವೇಡೆ ಅಂತಿದೆ. ಸಿಂಧುದುರ್ಗ ಜಿಲ್ಲೆಯ ಸಾವಂತವಾಡಿಯಿಂದ ವೆಂಗುರ್ವಾಕ್ಕೆ ಹೋಗುವ ಘಟ್ಟ ಮಾರ್ಗವು ದೊಡ್ಡ ಮಾರ್ಗ ಎನ್ನುವ ಹೆಸರಿತ್ತು. ಅದೀಗ ದೊಡಾ ಮಾರ್ಗ ಎಂದಾಗಿದೆ ಅಷ್ಟೇ.. 

ಪುಣೆ ಬಳಿಯ ಕೆಂದೂರು ಇದೆ. ಭೂಕಂಪಕ್ಕೆ ಗುರಿಯಾದ ಲಾತೂರು ಇದೆ. ಅದು ರಟ್ಟರ ರಾಜಧಾನಿ. ಪುಣೆಯಿಂದ ರೈಲಿನಲ್ಲಿ ಹೋದ್ರೆ ಪಿಂಪರಿ ದಾಟಿದ  ಮೇಲೆ ಮೆಲುವಳಿ ಬರುತ್ತದೆ. ಮಂದೆ ಲೋಣಾವಳಾ ಇದೆ. ಅದು ಪ್ರಾಚೀನ ಲೋಣವಳ್ಳಿ. ಅಲ್ಲಿ ಒಂದು ಕನ್ನಡ ಶಿಲಾಶಾಸನ ಸಿಕ್ಕಿದೆ. 

ಕಲ್ಯಾಣದಿಂದ ಮುಂಬಯಿಗೆ ಹೊರಟವರಿಗೆ ದೊಂಬಿವಲಿ ಎದುರಾಗುತ್ತೆ. ಅದು ಕನ್ನಡದ ಡೊಂಬವಳ್ಳಿ. ಅಲ್ಲಿ ಬೋರಿವಲಿ ಇದೆ ಅದು ಬೋರವಳ್ಳಿ. ಕಾಂದಿವಿಲಿ ಇದೆ ಅದು ಕಂಷವಳ್ಳಿ, ಮಲಾಡ್ ಇದೆ ಅದು ಮಲ್ಲಾಡ. ಮಹಾರಾಷ್ಟ್ರದ ರತ್ನಗಿರಿ,ಕುಲಾಬಾ, ಸಿಂಧುದುರ್ಗ ಜಿಲ್ಲೆಯೊಳಗಿನ ಕನ್ನಡ ಹಳ್ಳಿಗಳ ಹೆಸರು ಹೇಳಿದ್ರೆ ಕೌತುಕ ಎನಿಸದೆ ಇರಲ್ಲ. ಸಾಮಾನ್ಯವಾಗಿ ಊರು ಅಂತಾ ಇದ್ರೇ ಅದು ಕನ್ನಡ ಪದವೇ..

ಪೊಯ್ನಾಡು, ಕಲ್ಮಠ,ಅಕ್ಕಲಕೊಪ್ಪ, ದೇವಿಕೊಪ್ಪ, ಉಳವಿ, ಬೇವೂರು, ದೋಣಿ, ನಿಧಿರ್ಗುಡಿ, ಕಣಕವಲ್ಲಿ,ಬ್ರಹ್ಮನಾಳ,ಕಳಸ,ಕುರುಡೀವಾಡಿ, ಇತ್ಯಾದಿ. ಮಹಾರಾಷ್ಟ್ರದೊಳಗಿನ ಇಂಥ ಸಾವಿರಾರು ಹೆಸರು ಹೇಳಬಹುದು. 

ಪುರಂದರದಾಸರು ಪುರಂದರ ಗಡದವರು. ಅವರು ಬಹು ಅರ್ಥಪೂರ್ಣ ತಿಳುಗನ್ನಡಕ್ಕೆ ಹೆಸರಾಗಿದ್ದಾರೆ. ಅವರು ಬರೆದ 'ಜ್ಞಾನೇಶ್ವರಿ'ಯಲ್ಲಿ ಶೇ. 40ರಷ್ಟು ಕನ್ನಡ ಪದಗಳಿವೆ. 

ಭಾರತದ ಗೌರವ ಪ್ರತಿಷ್ಠೆ ಮೆರೆಸಿದ ಶಿವಾಜಿ ಮಹಾರಾಜನ ಜನ್ಮಸ್ಥಳ ಶಿವನೇರಿ. ಅಚ್ಚಗನ್ನಡ ಹಳ್ಳಿ ಅದು. ಈಗ ನಾಂದೇಡ ಜಿಲ್ಲೆಯಲ್ಲಿದೆ. ಇದೇ ನಾಂದೇಡ ಮೊದಲು ಕನ್ನಡದ ನಂದಿವಾಡ ಆಗಿತ್ತು. ಅದರ ಮೇಲೆ ದೇಗಲೂರು ಇದೆ. ಈಗಲೂ ಕೂಡ ನಾಂದೇಡ ಸಂತೆಗೆ ಬರುವ ಹಳ್ಳಿ ಜನ ಆಡುವ ಮಾತಿನ ಕಡೆಗೆ ಕಿವಿಗೊಟ್ಟರೆ, ಹರಕು ಮುರಕು ಕನ್ನಡ ಪದ ಕಿವಿಗೆ ಬೀಳ್ತವೆ.

ಮಹಾರಾಷ್ಟ್ರದ ಜನಪದ ಕರ್ನಾಟಕದಿಂದಲೇ ಬಹಳಷ್ಟು ಪ್ರಭಾವಿತವಾಗಿದೆ. ಮನುಷ್ಯನ ಕರುಳಿಗೆ ಹತ್ತಿದ, ಹೃದಯಕ್ಕೆ ಸಂಬಂಧಿಸಿದ ಕಕ್ಕುಲಾತಿಯ ಶಬ್ಧಗಳನ್ನೆಲ್ಲ ಅದು ಕನ್ನಡದಿಂದಲೇ ಪಡೆದಿದೆ. ಅಪ್ಪ-ಅವ್ವ, ತಾಯಿ, ಅಣ್ಣ, ಅಕ್ಕ, ಕಾಕಾ ಇವೆಲ್ಲ ಪದಗಳು ಈಗಲೂ ಅಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿವೆ. 

ಮರಾಠಿ ಶಬ್ಧಕೋಶದಲ್ಲೂ ಅಡಕವಾಗಿವೆ. ಕನ್ನಡದ ಅಪ್ಪ-ಅಣ್ಣ, ಕಾಕಾ ಇವೆಲ್ಲ ಮರಾಠಿಯಲ್ಲಿ ಅಪ್ಪಾಸಾಹೇಬ, ಅಣ್ಣಾಸಾಹೇಬ, ಕಾಕಾಸಾಹೇಬ ಎಂದಾಗಿವೆ. ಅವ್ವ,ತಾಯಿ ಅಕ್ಕ ಮಾತ್ರ ಅತ್ಯಲ್ಪ ಬದಲಾವಣೆಯೊಂದಿಗೆ ಹಾಗೆಯೇ ಉಳಿದಿವೆ. ಶಾಲಿನಿತಾಯಿ,ಉಷಾತಾಯಿ, ಲತಾತಾಯಿ ಎಂಬ ಹೆಸರುಗಳನ್ನ ಕಾಣಬಹುದು. 

ಧಾರವಾಡದ ಕಂದೀರರು ಕನ್ನಡ ನಾಟಕ ಪರಂಪರೆಯನ್ನ ಮಹಾರಾಷ್ಟ್ರಕ್ಕೆ ಕೊಂಡೊಯ್ದರು. ಮರಾಠಿ ನಾಟಕ ಹಾಡುಗಳಿಗೆಲ್ಲ ಕನ್ನಡದ ನಾಟಕದ ಹಾಡುಗಳೇ ಧಾಟಿ ಒದಗಿಸಿದವು. ಮಹಾಲಿಂಗಪುರದ ಲಿಂಗಾಸಾನಿಯ ಹಾಡಿನ ಚಾಲಿನಂತೆ ಎಂದು ತಮ್ಮ ನಾಟಕದ ಹಾಡಿನ ಚಾಲು ಇರಬೇಕೆಂದು ಮರಾಠಿ ನಾಟಕಕಾರರು, ಆ ಹಾಡಿನ ಹೆಸರಿನ ಕೆಳಗೆ ಸೂಚನೆ ಕೊಟ್ಟಿರುತ್ತಿದ್ದರು. 

ಮಹಾರಾಷ್ಟ್ರದಲ್ಲಿ ಉದ್ದಿಮೆಯುಗ ಸ್ಥಾಪಿಸಿದ ಲಕ್ಷ್ಮಣರಾವ್‌ ಕಿರ್ಲೋಸ್ಕರರು ಸವದತ್ತಿ ತಾಲೂಕಿನ ಗುರ್ಲಹೊಸೂರಿನ ಗ್ರಾಮದವರು. ಅದು ಕನ್ನಡದ ಸಂಶೋಧಕ, ವೈಚಾರಿಕ ಡಾ. ಶಂ.ಬಾ ಜೋಶಿ ಹುಟ್ಟೂರು. ಮಹಾರಾಷ್ಟ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಒದಗಿಸಿದ 'ಸಕಾಳ' ಪರುಳೀಕರರು ಕೂಡ ಅದೇ ಗುರ್ಲಹೊಸೂರಿನಿಂದ ಬಂದವರು. ಕನ್ನಡಿಗನೊಬ್ಬ ಮರಾಠಿ ಮುದ್ರಣದ ಮೊಳೆಗಳನ್ನ ಸಿದ್ಧಪಡಿಸಿಕೊಟ್ಟ. 

ಅವು, ಅವನ ಹೆಸರಿನಿಂದ ಬಿಜಾಪುರ ಟೈಪ್‌ ಎದು ಹೆಸರಾಗಿವೆ. ಈಗಲೂ ಮುಂಬೈನಲ್ಲಿ ಕನ್ನಡ ಕರಾವಳಿ ಜನ ಹೋಟೆಲ್‌ ಉದ್ಯಮ ಕಟ್ಟಿ ಬೆಳೆಸಿದ್ದಾರೆ.
ಈಗಲೂ ಬೆಂಗಳೂರಿಗಿಂತಲೂ ಹೆಚ್ಚು ಕನ್ನಡಿಗರು ಮುಂಬೈನಲ್ಲಿ ವಾಸವಿದ್ದಾರೆ ಅದುವೇ ಕನ್ನಡಿಗರ ಶಕ್ತಿ.

ಮಹಾರಾಷ್ಟ್ರದ ಮೂಲ ಪುರುಷ ಶಹಾಜಿ. ಆತ ಬಿಜಾಪುರದ ಆದಿಲಶಾಹಿಗಳ ಸೇವೆಯಲ್ಲಿದ್ದ. ಆ ಆದಿಲ್‌ಶಾಹಿಗಳ ಪ್ರತಿನಿಧಿಯಾಗಿ ಬೆಂಗಳೂರಿನ ಗವರ್ನರ್‌ ಕೂಡ ಆಗಿದ್ದ. ತಂದೆ ಶಹಾಜಿ ಬಿಜಾಪುರ ಮತ್ತು ಬೆಂಗಳೂರಿನಲ್ಲಿದ್ದಾಗ, ಬಾಲಕ ಶಿವಾಜಿ ಕೂಡ ಬಾಲ್ಯದಲ್ಲಿ ತಾಯಿಯೊಂದಿಗೆ  ಬೆಂಗಳೂರು ಮತ್ತು ಬಿಜಾಪುರದಲ್ಲಿ ಕಳೆದಿರಲಕ್ಕೂ ಸಾಕು. 

ಅಷ್ಟೇ ಅಲ್ಲ, ಶಿವಾಜಿಯ ಮದುವೆ ಆಗಿದ್ದು ಬೆಂಗಳೂರಿನಲ್ಲಿ ಅನ್ನೋದು ಎಷ್ಟು ಜನಕ್ಕೆ ಗೊತ್ತು. ಶಹಾಜಿ ತನ್ನ ಕೊನೆಯ ದಿನಗಳಲ್ಲಿ ಕರ್ನಾಟಕದಲ್ಲಿಯೇ ಕಳೆದ. ಅವನ ಸಮಾಧಿ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗ್ಗೆರೆ ಗ್ರಾಮದಲ್ಲಿದೆ. 

1857ರ ಪ್ರಥಮ ಸ್ವಾತಂತ್ಯ್ರ ಯುದ್ಧದ ಹೋರಾಟದ ಪ್ರಮುಖರಲ್ಲಿ ಒಬ್ಬನಾದ ಧೊಂಡೀಬಾ ವಾಢ ಶಿವಮೊಗ್ಗ ಜಿಲ್ಲೆ ಚೆನ್ನಗಿರಿಯವನು. ಕರ್ನಾಟಕ-ಮಹಾರಾಷ್ಟ್ರದ ಸಂಬಂಧ ಬೇರುಗಳು ಬಹು ನಿಬಿಡವಾಗಿ ಬಿಡಿಸಲು ಬಾರದಂತೆ ಗಾಢವಾಗಿವೆ ಹೆಣೆದುಕೊಂಡಿವೆ. 

ಕರ್ನಾಟಕ ಎಲ್ಲಿ ಕೊನೆಗೊಂಡಿದೆಯೋ ಅಲ್ಲಿ ಮಹಾರಾಷ್ಟ್ರ ಆರಂಭಗೊಂಡಿದೆ. ಈಗ ಮಹಾರಾಷ್ಟ್ರದವರು ಬೆಳಗಾವಿ ನಗರ  ಹಾಗೂ ಆ ಜಿಲ್ಲೆಯ ಕೆಲ ಪ್ರದೇಶಗಳ ತಮ್ಮ ಹಕ್ಕು ದಾರಿಕೆ ಇದೆಯೆಂದು ಹೇಳುತ್ತಿರುವರೋ, ಅವುಗಳನ್ನೆಲ್ಲ ಬಾಲಗಂಗಾಧರ ತಿಲಕರ ಬಲಗೈ ಬಂಟ ಕೇಳಕರ್‌ರೇ ಕರ್ನಾಟಕದಲ್ಲಿರಿಸಿದ್ದರು. 

1924ರಲ್ಲಿ ಬೆಳಗಾವಿ ನಗರದಲ್ಲಿ ಮಹಾತ್ಮ ಗಾಂಧೀಜಿ  ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮ್ಮೇಳನ ಸೇರಿದ್ದಿತು. ಆಗ ಅಲ್ಲಿಯೇ ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಸೇರಿತ್ತು. ಅದಕ್ಕೆ ಸಿದ್ದಪ್ಪ ಕಂಬಳಿ ಅವರೇ ಅಧ್ಯಕ್ಷರಾಗಿದ್ದರು. ಮುಂದೆ ಅದೇ ಕಂಬಳಿ ಅವರು (ಸರ್‌ ಆದರು)

ಜಗತ್ತಿನಲ್ಲಿ 3500ಕ್ಕೂ ಹೆಚ್ಚು ಭಾಷೆಗಳಿವೆ. ಅದರಲ್ಲಿ 30 ಅತ್ಯುನ್ನತ ಭಾಷೆಗಳಲ್ಲಿ ಕನ್ನಡ ಸ್ಥಾನ 27. ಇದು ಕನ್ನಡಿಗರ ಹೆಮ್ಮೆ ಅಲ್ವೇ.. ಮಹಾರಾಷ್ಟ್ರದಲ್ಲಿ ಈವರೆಗೂ ಸಿಕ್ಕ ಶೇ.85ರಷ್ಟು ಶಿಲಾಶಾಸನಗಳು ಕನ್ನಡದಲ್ಲಿಯೇ ಇವೆ. ಮಿಕ್ಕುಳಿದ 10 ಮರಾಠಿಯಲ್ಲಿದ್ರೇ, ಉಳಿದ 5 ಬ್ರಾಹ್ಮಿ ಭಾಷೆಯಲ್ಲಿವೆ.

ಇದನ್ನ ಪ್ರಾಚ್ಯವಸ್ತು ಪಂಡಿತರಾಜ ಡಾ. ಶ್ರೀನಿವಾಸ್ ರಿತ್ತಿಯವರು ಉಲ್ಲೇಖಿಸಿದ್ದಾರೆ. ರತ್ನಗಿರಿಯಲ್ಲೂ ಸಹ ಕನ್ನಡ ಶಿಲಾಶಾಸನ ಸಿಕ್ಕಿದೆ.  1956ರಲ್ಲಿ ಭಾಷಾವಾರು ಪ್ರಾಂತಗಳ ಪುನರ್ವಿಂಗಡನೆಯಾದಾಗ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಪ್ರದೇಶಗಳು ಹುಟ್ಟಿಕೊಂಡು ತಮ್ಮ ಪ್ರದೇಶಗಳನ್ನ ಹೆಚ್ಚಿಸಿಕೊಂಡವು. ಸೊರಗಿ ಕುಬ್ಜವಾದದ್ದು ಮಾತ್ರ ಕರ್ನಾಟಕವೊಂದೇ.

ಔರಂಗಾಬಾದಿನ ಪೈಠಣವು ಹಿಂದೆ ಪ್ರತಿಷ್ಠಾನವೆನಿಸಿತ್ತು. 9 ಹಾಗೂ 10 ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಕೇಂದ್ರವಾಗಿತ್ತೆಂದು ಪ್ರದ್ಯೋತನ ಸೂರಿ ಎಂಬ ಸಂಸ್ಕೃತ ಪಂಡಿತ ತನ್ನ ಕುವಲಯಮಾಲಾ ಎಂಬ ಗ್ರಂಥದಲ್ಲಿ ಬರೆದಿದ್ದಾನೆ. 

ಔರಂಗಾಬಾದ್ ಜಿಲ್ಲೆಯಲ್ಲಿ ಕನ್ನಡ ಎಂಬ ಹೆಸರಿನ ತಾಲೂಕು ಇದೆ. ಈ ಪ್ರದೇಶವೆಲ್ಲ ಈ ಹಿಂದೆ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಪ್ರಭುತ್ವಗಳಿಗೆ ಸೇರಿತ್ತು. ಇಲ್ಲಿನ ವೆರೂಳು ಗ್ರಾಮದಲ್ಲಿ ವಿಶ್ವವಿಖ್ಯಾತ ಏಕಶಿಲೆಯಲ್ಲಿ ನಿರ್ಮಿತ ಕೈಲಾಸ ದೇವಾಲಯವಿದೆ. ಅದನ್ನ ಕಟ್ಟಿಸಿದ್ದು ರಾಷ್ಟ್ರಕೂಟ ಚಕ್ರವರ್ತಿ ಮೊದಲನೆಯ ಕೃಷ್ಣ ಎಂಬುದರ ಬಗ್ಗೆ ಶಿಲಾಲಿಪಿ ಇದೆ. ಇದ್ದಾಗಲೇ ಸತ್ತಂತಿದ್ದವರನ್ನ ಸತ್ತ ಮೇಲೆ ಮೆರೆಸ್ತಾರೆ.. ಇದ್ದಾಗಲೂ ಅಳಿದ ಮೇಲೂ ಉಳಿದ ಕನ್ನಡಿಗರನ್ನ ಈಗ ಮರೆತಿದ್ದಾರೆ.

ಪ್ರಾಚ್ಯವಸ್ತು ಪಂಡಿತರಾಗಿದ್ದ ಸರ್‌ ಮಾರ್ಟಿಮರ್ ವ್ಹಿಲರ್‌ ಹೀಗೆ ಹೇಳ್ತಾರೆ- 'ಪಾಕಿಸ್ತಾನ ಅದು ಹೆಚ್ಚು ಆಳಕ್ಕಿಳಿದು ನೋಡಲು ಬಯಸುವುದಿಲ್ಲ. ಯಾಕಂದ್ರೆ, ಅದಕ್ಕೆ ಆಳಕ್ಕಿಳಿದಂತೆಲ್ಲ ಭಾರತೀಯ ಬೇರು, ಕುರುಹುಗಳೇ ಕಾಣಸಿಗುತ್ತವೆ. ಹಾಗೇ ಮರಾಠಿಗರೂ ಸಹ ಹೆಚ್ಚು ಇತಿಹಾಸದ ಆಳಕ್ಕಿಳಿದು ನೋಡಲ್ಲ. ಯಾಕಂದ್ರೆ, ಮರಾಠಿಗರಿಗೆ ಆಳಕ್ಕಿಳಿದಂತೆ ಕನ್ನಡದ ಬೇರು, ಕುರುಹುಗಳೇ ಕಾಣಸಿಗುತ್ತವೆ. 

ಇಷ್ಟೆಲ್ಲ ಕನ್ನಡದ ಪರಂಪರೆ ಇರಿಸಿಕೊಂಡ ನಾವು ಅಭಿಮಾನ ಶೂನ್ಯರಾದ್ರೇ ಹೇಗೆ? ನಮ್ಮ ತನವನ್ನೇ ಮರೆತರೇ ಹೇಗೆ?. ಪೂರ್ಣಚಂದ್ರ ತೇಜಸ್ವಿ ಅವರು ಒಂದು ಮಾತು ಹೇಳಿದ್ರು. ಸಂಸ್ಕೃತ ಭಾಷೆ ಯಾಕೆ ಅಳಿಯಿತು ಅಂದ್ರೇ ಅದು ಹೆಚ್ಚು ಜನ ಬಳಕೆಯಾಗಲಿಲ್ಲ. 

ಹಾಗೇ ನಮ್ಮ ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿ, ಜನಪದ ಹೆಚ್ಚು ಹೆಚ್ಚು ಕನ್ನಡಿಗರ ನಾಲಿಗೆಯಲ್ಲಿ ನಲಿಯಬೇಕು ಅಂದಾಗ ಮಾತ್ರವೇ ಕನ್ನಡ ಉಳಿದೀತು. ಉದ್ಧವ್ ಠಾಕ್ರೆಯಂತ ಲಕ್ಷ ಜನ ಬಂದರೂ ಕನ್ನಡ ಇತಿಹಾ ಸ ಅಳಿಸಲಾಗದು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ..


ಇಂದ *_ಹೆಚ್.ಬಿ.ಮೇಟಿ_*

Wednesday, 13 January 2021

2020-21ನೇ ಸಾಲಿನ NTSE NMMS ಪರೀಕ್ಷೆಗಳಿಗೆ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡುವ ಬಗ್ಗೆ*

CLICK HERE TO DOWNLOAD

*🌻ಇಪ್ಪತ್ತನೇಯ ಶತಮಾನದ ಕನ್ನಡ ಸಾಹಿತ್ಯದ ಘಟ್ಟಗಳು🌻*

*FDA, SDA, KAS, IAS ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ......*

✅ನವೋದಯ ಪೂರ್ವ ಕನ್ನಡ ಸಾಹಿತ್ಯ ಘಟ್ಟ
✅ಕನ್ನಡ ನವೋದಯ ಸಾಹಿತ್ಯ ಘಟ್ಟ
✅ಕನ್ನಡ ಪ್ರಗತಿಶೀಲ ಸಾಹಿತ್ಯ ಘಟ್ಟ
✅ಕನ್ನಡ ನವ್ಯ ಸಾಹಿತ್ಯ ಘಟ್ಟ
✅ಕನ್ನಡ ದಲಿತ ಸಾಹಿತ್ಯ ಘಟ್ಟ
✅‌ಕನ್ನಡ ಬಂಡಾಯ ಸಾಹಿತ್ಯ ಘಟ್ಟ
✅ಬಂಡಾಯೋತ್ತರ ಕನ್ನಡ ಸಾಹಿತ್ಯ ಘಟ್ಟ


CLICK HERE TO DOWNLOAD

NMMS PPT

CLICK HERE TO DOWNLOAD

Monday, 4 January 2021

ವಿಜ್ಞಾನ ವಿಸ್ಮಯ

ಭೂಮಿಗೆ ಬೀಳುವ ಎಲ್ಲ ವಸ್ತುಗಳೂ ಒಂದೇ ವೇಗದ ದರದಲ್ಲಿ‌ ಬೀಳುತ್ತವೆ ಎಂದು ೧೫ನೇ ಶತಮಾನದಲ್ಲಿ ಗೆಲಿಲಿಯೊ ಹೇಳಿದ್ದ. ಗುಂಡು ಮತ್ತು ಹಕ್ಕಿಯ ಪುಕ್ಕಗಳನ್ನು ಒಂದೆ ಎತ್ತರದಿಂದ ಏಕ ಕಾಲಕ್ಕೆ ಬಿಟ್ಟರೆ, ಅವಕ್ಕೆ ಗಾಳಿಯ ಪ್ರತಿರೋಧವಿಲ್ಲದಿದ್ದಲ್ಲಿ, ಅವು ಎರಡೂ ಏಕ ಕಾಲಕ್ಕೆ ಭೂಮಿಯನ್ನು ತಲುಪುತ್ತವೆ ಎಂದು ಹೇಳಿದ್ದ. ಅದನ್ನು ವಿವರಿಸುವುದು ಅವನಿಗೆ ತುಂಬ ಕಾಲದವರೆಗೆ ಕಷ್ಟವಾಗಿತ್ತು ಆರು ಶತಮಾನಗಳ ಅನಂತರ ತಂತ್ರಜ್ಞಾನದ ನೆರವಿನಿಂದ ಅದನ್ನು ಪ್ರಯೋಗಿಸಿ ತೋರಿಸಲು ಸಾಧ್ಯವಾಗಿದೆ. ಈ ವಿಡಿಯೊವನ್ನು ನೊಡುವುದೇ ಕಣ್ಣಿಗೆ ಹಬ್ಬ. ಇದನ್ನು ಎಲ್ಲರಿಗೂ, ಅದರಲ್ಲಿಯೂ ಮಕ್ಕಳಿಗೆ ದಯವಿಟ್ಟು ತೋರಿಸಿ..

MATHS TIME LINE

MATHS TIME LINE https://mathigon.org/timeline