Tuesday, 21 December 2021
ಇಂದಿನ ವಿಷಯ: *ಚರ್ಮದ ವ್ಯಾಧಿಗಳು {Skin diseases}*
Thursday, 9 December 2021
Friday, 3 December 2021
Thursday, 25 November 2021
Monday, 22 November 2021
Sunday, 14 November 2021
Wednesday, 3 November 2021
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
Deepawali special ದೀಪಾವಳಿ ವಿಶೇಷ.
ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
ದೀಪಾವಳಿ:
ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ದೀಪಾವಳಿ ಅರ್ಥ ಏನು?
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.
ನೀರು ತುಂಬುವ ಹಬ್ಬ :-
ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.
ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ
ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.
ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.
ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ, ಮುಂದಿನ ದೀಪಾವಳಿ ಆಚರಿಸೊಣವೇ? ಒಮ್ಮೆ ಚಿಂತಿಸಿ.
ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ;
ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಆಚರಿಸುವ ದಿನಗಳು
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. ೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.
ಪ್ರಾಮುಖ್ಯತೆ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿ ಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
ಆಚರಣೆ
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
Sunday, 17 October 2021
ಇಂದಿನ ವಿಷಯ:_ *ಅಕಾಲ ಮುಪ್ಪನ್ನು ತಡೆಯಿರಿ...
Wednesday, 6 October 2021
ಇಂದಿನ ವಿಷಯ: - ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!
Monday, 27 September 2021
ಜೀವರಸ ಶುದ್ಧಿಯೇ ಆರೋಗ್ಯ
Wednesday, 15 September 2021
Wednesday, 25 August 2021
Thursday, 19 August 2021
Thursday, 12 August 2021
ಆಸ್ಪತ್ರೆ ರಹಿತ ಜೀವನಕ್ಕೆ ಮನೋ ವಿಶ್ಲೇಷಣೆಯ ಮಹತ್ವ
Monday, 9 August 2021
Tuesday, 27 July 2021
*ಆತ್ಮೀಯ ಅಧ್ಯಯನಾಸಕ್ತರೆ,* 🙏*GEOGRAPHICAL TERMS* _*ಭೂಗೋಳಶಾಸ್ತ್ರದ ಪರಿಕಲ್ಪನೆ ಗಳು*_🌏🏔️🌋🏖️⛰️🗻🏕️🌐*IF YOU TOUCH ENGLISH WORDS; YOU'LL GET INFORMATION IN* ```ENGLISH!!``` *& IF YOU TOUCH KANNADA WORDS; YOU'LL GET INFORMATION IN* ```KANNADA!!!```_*ಇಂಗ್ಲಿಷ್ ಪದಗಳನ್ನು ಮುಟ್ಟಿದರೆ ನಿಮಗೆ ಮಾಹಿತಿಗಳು ಇಂಗ್ಲೀಷ್ನಲ್ಲಿಯೂ, ಕನ್ನಡದ ಪದಗಳನ್ನು ಮುಟ್ಟಿದರೆ ಮಾಹಿತಿಗಳು ಕನ್ನಡದಲ್ಲಿಯೂ ದೊರೆಯುತ್ತದೆ!!!*
Friday, 23 July 2021
Thursday, 22 July 2021
ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*
Monday, 19 July 2021
*ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*........!!!
Saturday, 17 July 2021
Know Ur 2nd PUC Reg. No.: ನೋಂದಾಯಿಸಿದ ಹೊಸ & ಪುನರಾವರ್ತಿತ (Fresher's & Repeater's) ವಿದ್ಯಾರ್ಥಿಗಳು ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನೋಡಿಟ್ಟುಕೊಳ್ಳಿ.!!
ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"* *ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_
ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ತೆಗೆದುಕೊಳ್ಳುವವರಿಗಾಗಿ ಬೇಕಾಗುವ ದಾಖಲೆಗಳು..
Thursday, 15 July 2021
Tuesday, 13 July 2021
ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ e- ಸಾಹಿತ್ಯ...
Monday, 12 July 2021
Sunday, 11 July 2021
ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು..
ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ ರಾತ್ರಿ ಪೂರ್ತಿ ಖಾಲಿ ಹೊಟ್ಟೆಯಲ್ಲಿದ್ದು, ನಂತರ ಸೇವಿಸುವ ಆಹಾರವಾಗಿರುತ್ತದೆ.
· ಚಹಾ ಅಥವಾ ಕಾಫಿಯ ಖಾಲಿ ಸೇವನೆಯು ಹಾನಿಕಾರಕವಾಗಿದೆ.
· ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಎಂದಿಗೂ ಸೇವಿಸಬೇಡಿ.
· ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ ರಾತ್ರಿ ಪೂರ್ತಿ ಖಾಲಿ ಹೊಟ್ಟೆಯಲ್ಲಿದ್ದು, ನಂತರ ಸೇವಿಸುವ ಆಹಾರವಾಗಿರುತ್ತದೆ. ಹಾಗಿ ಬೆಳಗಿನ ಉಪಹಾರದಲ್ಲಿ ಯಾವಾಗಲೂ ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಾಹಾರದಲ್ಲಿ ಹುಳಿ ವಸ್ತುಗಳನ್ನು ತಪ್ಪಿಸಬೇಕು. ಏಕೆಂದರೆ ಅವುಗಳ ಸೇವನೆಯು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸಬೇಡಿ:
1. ಟೀ-ಕಾಫಿ:
ಹೆಚ್ಚಿನವರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹಾನಿಕಾರಕ. ಹಾಗಾಯಿ ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯುವಾಗ ಬಿಸ್ಕೆಟ್ ಆದರೂ ಜೊತೆಗಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸುವುದರಿಂದ ಆಸಿಡಿಟಿ ಉಂಟಾಗುತ್ತದೆ.
2. ಪೇರಳೆ ಹಣ್ಣು : ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಹಣ್ಣು ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು.
3. ಸೇಬುಹಣ್ಣು : ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇಬಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸುವುದು ಹಾನಿಕಾರಕವಾಗಿದೆ.
4. ಸಲಾಡ್: ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಲಾಡ್ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಸೇವಿಸುವುದರಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗುತ್ತದೆ.
Thursday, 8 July 2021
Tuesday, 6 July 2021
Thursday, 1 July 2021
Wednesday, 30 June 2021
Monday, 28 June 2021
Sunday, 27 June 2021
Saturday, 26 June 2021
Friday, 25 June 2021
ಸೇತುಬಂಧ ಕಾರ್ಯಕ್ರಮ ವಿವರಣೆ ಇಲಾಖೆಯ ವೆಬ್ನಲ್ಲಿ ನಭ್ಯವಿದೆ..
Saturday, 19 June 2021
ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ.
Tuesday, 15 June 2021
ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*
MATHS TIME LINE
MATHS TIME LINE https://mathigon.org/timeline
-
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ...
-
CLICK HERE TO DOWNLOAD
-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ...