✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday, 19 July 2021

*ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*........!!!

*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 69
     *ದಿನಾಂಕ: 20/07/2021*
 ••••••••••••••••••••••••••••••••••••••••
*ಅಮೃತಾತ್ಮರೇ, ನಮಸ್ಕಾರ*
       🙏🙏🙏🙏🙏
_ಇಂದಿನ ವಿಷಯ:_ 
  * *ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*...!!_ ••••••••••••••••••••••••••••••••••••••
_ಸಹೃದಯ ಓದುಗರೆ,_

*ಪಾರ್ಶ್ವವಾಯು ಏಕೆ ಬರುತ್ತದೆ:*
  _ಮೆದುಳಿಗೆ ಹರಿಯುವ ರಕ್ತದ ಪ್ರಮಾಣ 3 ಸೆಕೆಂಡುಗಳ ಕಾಲ ಕ್ಷೀಣಿಸಿದರೆ ಅಥವಾ ನಿಂತರೆ ತಕ್ಷಣ ದೇಹದ ಚಲನೆ ಸ್ತಬ್ದವಾಗಿಬಿಡುತ್ತದೆ. ಇದು ಪಾರ್ಶ್ವವಾಯು ಆಗಬಹುದು ಅಥವಾ ಪೂರ್ಣವಾಯು ಆಗಬಹುದು._
••••••••••••••••••••••••••••••••••••••••••••••••
  _ನಿನ್ನೆಯ ಸಂಚಿಕೆಯಲ್ಲಿ ನೋಡಿದಂತೆ, ರಕ್ತನಾಳಗಳ ಗಡುಸುತನ, ಅದರಿಂದ ಅವು ಕಟ್ಟಿಕೊಳ್ಳುವಿಕೆ, ರಕ್ತವನ್ನು ಸರಾಗವಾಗಿ ಹರಿಯದಂತೆ ತಡೆಯೊಡ್ಡುವುದು ಮತ್ತು ಆ ತಡೆ ಯಾವ ಅವಯವಕ್ಕೆ ರಕ್ತ ಸರಬರಾಜನ್ನು ನಿಲ್ಲಿಸುತ್ತದೆ ಎನ್ನುವುದರ ಆಧಾರದಲ್ಲಿ ರೋಗಗಳು ಬರುತ್ತವೆ!_

  _ಕತ್ತಿನ ಎಡಬಲಬದಿ ಇರುವ ಕೆರೋಟಿಡ್ ಆರ್ಟರಿ ಹೆಸರಿನಲ್ಲಿ ಕರೆಯಲ್ಪಡುವ ರಕ್ತನಾಳಗಳು ಮೆದುಳಿಗೆ ಅತಿ ಹೆಚ್ಚು ಆಮ್ಲಜನಕವನ್ನು ಹೊಂದಿರುವ ರಕ್ತವನ್ನು ಹರಿಸುತ್ತವೆ. ಗಮನಿಸಬೇಕಾದ ಅತ್ಯಂತ ಮುಖ್ಯ ಸಂಗತಿ ಎಂದರೆ, ಮೆದುಳು ಕ್ರಿಯಾಶೀಲವಾಗಿರಲು ಆಮ್ಲಜನಕ ಮತ್ತು ಸಕ್ಕರೆ ಅಂಶ(ಗ್ಲುಕೋಸ್) ನಿರಂತರವಾಗಿ ಬೇಕು. ಕ್ಷಣಮಾತ್ರ ಇವುಗಳ ಪೂರೈಕೆ ನಿಂತರೆ ಮೆದುಳು ಅರೆಕ್ರಿಯೆ ಅಥವಾ ನಿಷ್ಕ್ರಿಯೆಗೊಳ್ಳುತ್ತದೆ. ಇದನ್ನೇ ಪಾರ್ಶ್ವವಾಯು ಎನ್ನುತ್ತೇವೆ._
               •|•|•|•|•|•

*ಕೇವಲ ಪ್ರೋಟೀನ್ ಸೇವನೆಯಿಂದ ಏನಾಗುತ್ತದೆ:*
      ಅನುಭವದಲ್ಲಿ ಸೂಕ್ಷ್ಮಗ್ರಾಹಿಯಾಗಿ ನೋಡಿದಾಗ. ರೋಗಿಗಳ ಇತಿಹಾಸ ಹೆಕ್ಕಿ ತೆಗೆದು ಮೂಲ ಕಾರಣ ಕಂಡುಕೊಳ್ಳದೇ ಚಿಕಿತ್ಸೆಗೆ ಕೈ ಹಾಕುವುದಿಲ್ಲ . ಶೇಕಡಾ 90 ಜನರ ಕೆರೋಟಿಡ್ ಆರ್ಟರಿ, ಕರೋನರಿ ಆರ್ಟರಿ, ಪೋರ್ಟಲ್ ವೇನ್ ಮುಂತಾದವುಗಳು ಕಟ್ಟಿಕೊಳ್ಳುವುದಕ್ಕೆ ಅತಿ ಕಡಿಮೆ ಜಿಡ್ಡಿನ ಅಂಶ ಸೇವನೆ ಮತ್ತು ಅತಿ ಹೆಚ್ಚು ಪ್ರೋಟೀನ್ ಸೇವನೆಯೇ ಕಾರಣ. ಹೀಗೆ ಪ್ರೋಟೀನ್-ಕೊಬ್ಬಿನ ಅಂಶಗಳ  ಅಸಮತೋಲನದಿಂದ ಗಡುಸುಗೊಳ್ಳುವ ರಕ್ತನಾಳಗಳು ರಕ್ತಪೂರೈಕೆಯಲ್ಲಿ ವಿಫಲವಾಗಿ ನೋರಾರು ರೋಗಗಳನ್ನು ತರುತ್ತದೆ._
               •|•|•|•|•|•

_*ಮೆದುಳಿನ ಮೂಲ ವಸ್ತು ಯಾವುದು*?_
_ಪ್ರೋಟೀನ್ ಅಥವಾ ಕೊಬ್ಬು?_

  _ಮಾನವನ ಮೆದುಳು ಹೆಚ್ಚು ಜಿಡ್ಡಿನಿಂದಲೇ ತಯಾರಾಗಿದೆ. ಅತ್ಯುತ್ತಮ ಕೊಬ್ಬು ಮೆದುಳಿಗೆ ಅಗತ್ಯ ಎನ್ನುವ ಸಂಶೋಧನೆಗಳು ಒಮೆಗಾ-3, 6 ಫ್ಯಾಟೀ ಆ್ಯಸಿಡ್‌ಗಳು ಬೇಕು ಎನ್ನುತ್ತವೆ. ಇದರ ಮೂಲ ಭಾರತೀಯ ಗೋ ತಳಿಗಳ ಹಾಲು ಮತ್ತು ತುಪ್ಪದಲ್ಲಿ ಇವೆ ಎಂಬುದನ್ನು ಮಾತ್ರ ಮುಚ್ಚಿಡುತ್ತವೆ. ಏಕೆಂದರೆ ತುಪ್ಪ ಎನ್ನುವ ಪದಾರ್ಥವನ್ನು ಪಾಶ್ಚಾತ್ಯ ಪದ್ಧತಿಯಿಂದ ತಯಾರಿಸಿ ಸಂಶೋಧಿಸಲಾಗುತ್ತಿದೆ ಮತ್ತು ಅಂಗಡಿಗಳಲ್ಲಿ ಸಿಗುವ ಈ ರೀತಿಯ ತುಪ್ಪ ಹಾಲಿನ ಕೊಬ್ಬೇ ಹೊರತೂ ಶುದ್ಧ ತುಪ್ಪವಲ್ಲ. ಮಜ್ಜಿಗೆ ಕಡೆದು ಬೆಣ್ಣೆ ತೆಗೆದು ಮಾಡುವ ತುಪ್ಪ ಮಾತ್ರ ಮೆದುಳನ್ನು ಪೋಷಣೆ ಮಾಡಬಲ್ಲುದು!_

_*.....ಧೀ ಸ್ಮೃತಿ ಕಾಂಕ್ಷಿಣಾಂ ಸಸ್ಯತೇ ಘೃತಂ*_
  _ಧೈರ್ಯ ಮತ್ತು ನೆನಪಿನ‌ಶಕ್ತಿ ಬಯಸುವವರು ತುಪ್ಪ ಸೇವಿಸಿ ಎಂಬುದು ಶ್ಲೋಕದ ಅರ್ಥ._
               •|•|•|•|•|•

*ಕೇವಲ ಪ್ರೋಟೀನ್‌ ಸೇವನೆಯಿಂದ ಮೆದುಳಿಗೆ ಆಗುವ ಹಾನಿ ಎಂಥಾದ್ದು?*
  _ಇತ್ತೀಚಿಗೆ ನಾವೆಲ್ಲಾ ಹೆಚ್ಚು  ಕೇಳಲ್ಪಡುತ್ತಿರುವ "ಅಲ್ಜೀಮಿರ್" ಅಂದರೆ "ಮರೆಗುಳಿತನ" ಎಂಬ ರೋಗಕ್ಕೆ ಮೆದುಳಿನಲ್ಲಿ ಸಂಚಯವಾಗುತ್ತಿರುವ ಪ್ರೋಟೀನ್ ಕಾರಣವಾಗಿದೆ, ಅದನ್ನು ಹೇಗೆ ತೆಗೆಯುವುದು? ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಂಶೋಧನೆಗಳು, ಹೇಗೆ ತಡೆಯಬಹುದು ಎಂದು ಯೋಚಿಸುತ್ತಲೇ ಇಲ್ಲ!!!_

  _ಯುರಿಕ್ ಆ್ಯಸಿಡ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುತ್ತೇವಲ್ಲ ಅದು ಅಧಿಕ ಪ್ರೋಟೀನ್ ಸೇವನೆಯಿಂದಾಗುವ ಪ್ರಥಮ ಹಾನಿ, ಅದೇ ಮುಂದೆ ಮೆದುಳು, ಹೃದಯ,‌ ಯಕೃತ್ತು ರಕ್ತನಾಳಗಳಿಗೆ ಮಹತ್ತರವಾದ ಅಪಾಯವನ್ನು ತರುತ್ತದೆ ಎಂದು ಗ್ರಹಿಸದೇ ಯುರಿಕ್ ಆ್ಯಸಿಡ್ ಕೇವಲ ಮೂಳೆಗಳ, ಸಂಧು ಕೀಲುಗಳ ಸಮಸ್ಯೆ ಎಂದು ಭಾವಿಸಿ ಸುಖವಾಗಿದ್ದೇವೆ, ಇದು ಹೆಚ್ಚು ಸಂಚಯಗೊಂಡರೆ ಸೂಕ್ಷ್ಮ ರಕ್ತನಾಳಗಳು ಹಾಳಾಗಿ ಕಟ್ಟಿಕೊಂಡು ಯಕೃತ್ ಸಿರೋಸಿಸ್, ಕಿಡ್ನಿ ಫೇಲ್ಯೂರ್ ಬರುತ್ತವೆ..._ 🤔
               •|•|•|•|•|•

  _ಒಟ್ಟಾರೆ ಕೇವಲ‌ ಪ್ರೋಟೀನ್ ಸೇವನೆ ಮೆದುಳಿಗೆ ಎರಡು ರೀತಿಯ ಅಪಾಯವನ್ನು ತರುತ್ತದೆ._
1) _ರಕ್ತನಾಳಗಳು ಕಟ್ಟಿಕೊಂಡು ಉಂಟಾಗುವ ಪಾರ್ಶ್ವವಾಯು_
2) _ಮೆದುಳು ಸವೆತ ಉಂಟಾಗಿ ಧಾತುಕ್ಷಯದಿಂದಾಗುವ ಪಾರ್ಶ್ವವಾಯು (ಇದು ಚಿಕಿತ್ಸೆಗೆ ಅಸಾಧ್ಯ) ಇದನ್ನು ಅಟ್ರೋಪಿಡ್ ಬ್ರೇನ್ ಎಂದು ಕರೆಯುತ್ತಾರೆ ಅಂದರೆ ಮೆದುಳು ತನ್ನ ಗಾತ್ರದಲ್ಲಿ ಕುಗ್ಗಿದೆ ಎಂದು ಅರ್ಥ._
               •|•|•|•|•|•

*ನಮ್ಮ ಚಿಕಿತ್ಸಾ ವಿಧಾನ ಎಷ್ಟು ಹಾಸ್ಯಾಸ್ಪದವಾಗಿದೆ?*
_ಪಾರ್ಶ್ವವಾಯು ಪೀಡಿತರಿಗೆ_ -
• _ಕೊಬ್ಬನ್ನು ಕರಗಿಸುವ ಸ್ಟ್ಯಾಟಿನ್ ಮಾತ್ರೆಗಳು!?_
• _ಯಥೇಚ್ಛವಾಗಿ ತಿನ್ನಿಸುವ ಮೊಳಕೆ ಕಾಳುಗಳು!?_
• _ನಿರ್ದಾಕ್ಷಿಣ್ಯವಾಗಿ ನಿಲ್ಲಿಸುವ ಹಾಲು, ತುಪ್ಪಗಳು?!_
• _ಕೊಬ್ಬನ್ನು ಹೆಚ್ಚಿಸಿ ಶರೀರದ ತೂಕವನ್ನು ಹೆಚ್ಚಿಸುವ ನಿದ್ದೆಮಾತ್ರೆಗಳು!?_
• _ಜಿಡ್ಡನ್ನು ಬಳಸದೇ ಮಾಂಸಖಂಡಗಳಿಗೆ ವಿಪರೀತ ತೊಂದರೆ ಕೊಡುವ ಕೇವಲ ಫಿಜಿಯೋಥೆರಪಿಗಳು?!_
  _ಮನುಷ್ಯ ತಾನು ಸಾಯದೆಯೂ ಮತ್ತು ಔಷಧಿಗಳ ಮೇಲೆ ನಿರಂತರ ಅವಲಂಬಿತನಾಗಿಯೂ ಇರುವಂತೆ ಮಾಡುವ ಚಿಕಿತ್ಸೆಗಳು?!_ 😟
               •|•|•|•|•|•

*ಆತ್ಮೀಯರೇ,*
  _ಈ ಸಂದೇಶದ ಸಾರವನ್ನು ಗ್ರಹಿಸಿ, ಭಯವನ್ನು ಬಿಡಿ, ಜಿಡ್ಡು ಅತ್ಯಂತ ಅವಶ್ಯಕ ಎಂದು ಎಣ್ಣೆ ತಿನಿಸುಗಳನ್ನು ತಿನ್ನುವ ಬದಲು ಭಾರತೀಯ ಗೋ ತಳಿಗಳ ಹಾಲಿನಿಂದ ಮನೆಯಲ್ಲಿಯೇ ಬೆಣ್ಣೆ ತಯಾರಿಸಿ ತುಪ್ಪ ಮಾಡಿಕೊಂಡು ಬಳಸಿರಿ. ಆರೋಗ್ಯದಿಂದ ಇರಿ._

  _*ನಿಮ್ಮ‌ಮಕ್ಕಳಿಗೆ ಹಾಲು-ತುಪ್ಪಗಳನ್ನು ಕೊಡಿ ಮತ್ತು ಚೆನ್ನಾಗಿ ಆಟವಾಡಲು ಬಿಡಿ.*_

    🙏 *ಧನ್ಯವಾದಗಳು* 🙏
••••••••••••••••••••••••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline