*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 65
*ದಿನಾಂಕ: 18-07-2021
*ಅಮೃತಾತ್ಮರೇ, ನಮಸ್ಕಾರ*
🙏🙏🙏🙏🙏
_ಇಂದಿನ ವಿಷಯ:_
*"ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"*
*ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_
••••••••••••••••••••••••••••••••••••••••••
_ಪ್ರತ್ಯಕ್ಷ ಪ್ರಮಾಣ, ಅನುಮಾನ ಅಥವಾ ಊಹೆ, ಪ್ರಮಾಣ ಉಪಮಾನ, ಪ್ರಮಾಣ ಮತ್ತು ಆಪ್ತೋಪದೇಶ ಅಥವಾ ಶಬ್ದಪ್ರಮಾಣ ಎಂಬ ನಾಲ್ಕು ಜ್ಞಾನದ ಹಾದಿಗಳಿವೆ._
_ನಾವೆಲ್ಲಾ ಈ ನಾಲ್ಕರಲ್ಲಿ ಒಂದನ್ನು ಬಳಸಿ ಜ್ಞಾನ ಸಂಪಾದಿಸುತ್ತೇವೆ._
_ಈಗ ಹೇಳಲು ಹೊರಟಿರುವ ಆರೋಗ್ಯ ಸೂತ್ರವು_ *"ಆಪ್ತೋಪದೇಶ"* _ಪ್ರಮಾಣದ ಆಧಾರದಲ್ಲಿ_ *"ಉಪಮಾನ ಪ್ರಮಾಣ"* _ವನ್ನು ಅನುಸರಿಸಿ ಆರೋಗ್ಯ ಜ್ಞಾನ ಹಂಚುವ ಕಾರ್ಯವಾಗಿದೆ. ತಾವುಗಳು, ಇದನ್ನು ಗ್ರಹಿಸಿ, ಊಹಿಸಿ, ತಾಳೆನೋಡಿ, ಇದರಿಂದ ಪ್ರತ್ಯಕ್ಷ ತೊಂದರೆ ಅನುಭವಿಸುತ್ತಿರುವವರನ್ನು ಗಮನಿಸಿ ನಂತರ ದೃಢಪಡಿಸಿಕೊಳ್ಳಿ. ಕೊನೆಗೆ_ *ಪಾಲಿಸಿರಿ ಮತ್ತು ಆರೋಗ್ಯದಿಂದ ಇರಿ...*
_ಇದೊಂದು ಸೂತ್ರದಿಂದ ನಾವು ಈ ಕೆಳಗಿನ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಮತ್ತು ಮುಕ್ತರಾಗಲೂಬಹುದು!_
• _ಹೃದ್ರೋಗ_
• _ಪಾರ್ಶ್ವವಾಯು_
• _ಯಕೃತ್ ವಿಕಾರಗಳು, ಲಿವರ್ ಸಿರೋಸಿಸ್_
• _ಗಾಲ್‌ಬ್ಲ್ಯಾಡರ್ ತೊಂದರೆ_
• _ಮೂತ್ರಪಿಂಡದ ಕಲ್ಲುಗಳು_
• _ವಿವಿಧ ರೀತಿಯ ಸಂಧಿಶೂಲಗಳು_
• _ಮಾಂಸಖಂಡಗಳ ಸೆಳೆತ_
• _80ಕ್ಕೂ ಹೆಚ್ಚು ಅಟೋ ಇಮ್ಯೂನ್ ಕಾಯಿಲೆಗಳು_
• _ವಿವಿಧ ಭಾಗದ ಸ್ಪಾಂಡಿಲೋಸಿಸ್_
• _ಸ್ಪಾಂಡಿಲೈಟೀಸ್_
• _ಹೈಪೋಥೈರಾಯ್ಡಿಸಮ್_
• _ಮಧುಮೇಹ_
• _ರಕ್ತದೊತ್ತಡ_
• _ಮ್ಯಕುಲಾರ್ ಡಿಜನರೇಷನ್_
• _ಕಣ್ಣಿನಲ್ಲಿ ರಕ್ತ ಸೋರುವಿಕೆ_
• _ನೆನಪಿನ ಶಕ್ತಿ ಕುಂದುವಿಕೆ_
• _ನರಗಳ ದೌರ್ಬಲ್ಯ_
•
•
_ಎಷ್ಟೊಂದು ಕಾಯಿಲೆಗಳ ಪಟ್ಟಿ ಇದೆ ಇಲ್ಲಿ, "ಕೇವಲ" ಪ್ರೋಟೀನ್ ಸೇವನೆಯ ದುಷ್ಪರಿಣಾಮಗಳು ಇವು..!! ಆಶ್ಚರ್ಯ ಎನಿಸಿದರೂ ಸತ್ಯ._
_ಜಗತ್ತಿನ ಜನರ ತಲೆಗೆ ಆಧುನಿಕ ವಿಜ್ಞಾನ_ *ಎಂದೂ ಇಲ್ಲದ ಒಂದು ಭೂತವನ್ನು ಬಿಟ್ಟಿದೆ...*
_?!# ಪ್ರತಿ ನಿತ್ಯ ಇಂತಿಷ್ಟು ಪ್ರೋಟೀನ್ ಬೇಕೇ ಬೇಕು ಎಂಬುದು_
_?!# ಕೊಲೆಸ್ಟರಾಲ್ ತಿಂದರೆ ಅಪಾಯ ಎನ್ನುವುದು_
*ಪ್ರೋಟೀನ್ ಮತ್ತು ಕೊಲೆಸ್ಟರಾಲ್‌ಗಳ ನಡುವಿನ ಬಾಂಧವ್ಯವನ್ನು ಮುರಿದು, ಇನ್ನಿಲ್ಲದ ರೋಗಗಳಿಗೆ ಅನ್ಯಾಯವಾಗಿ ತುತ್ತಾಗುತ್ತಿದ್ದೇವೆ...*
•|•|•|•|•|•
_ಆತ್ಮೀಯರೇ, ಸೂಕ್ಷ್ಮವಾಗಿ ಗಮನಿಸಿ ಅಳವಡಿಸಿಕೊಂಡರೆ, ಸದೃಢ ಆರೋಗ್ಯ ನಮ್ಮದಾಗುವುದು!_ 🙏
•|•|•|•|•|•
_ಉಪಮಾನ(ಹೋಲಿಕೆ) ಎಂಬುದು "ಒಂದು ಪ್ರಮಾಣ" ಅಂದರೆ, ವ್ಯಕ್ತಿ ಹಿಂದೆ ನೋಡಿದ ಒಂದನ್ನು ಹೋಲಿಸಿ ಹೊಸದರ ಬಗ್ಗೆ ತಿಳಿವಳಿಕೆ ಅಥವಾ ಜ್ಞಾನ ಮೂಡಿಸುವುದು._
_ಈ ಉಪಮಾನ ಪ್ರಮಾಣದ ಅನ್ವಯ ಇಂದಿನ ನಮ್ಮ ಆಹಾರದಲ್ಲಿನ ಪ್ರೋಟೀನ್-ಫ್ಯಾಟ್ ಅಸಮತೋಲನವು ಈ ಮೇಲೆ ಸೂಚಿಸಿದ ಅನೇಕ ಕಾಯಿಲೆಗಳ ಉತ್ಪತ್ತಿ, ಉಲ್ಬಣ, ಅಪಾಯ, ಪ್ರಾಣಹಾನಿ ಮಾಡುತ್ತಿರುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ._
•|•|•|•|•|•
_ತಾವೆಲ್ಲರೂ ಹೋಳಿಗೆ ಅಥವಾ ಒಬ್ಬಟ್ಟು ನೋಡಿದ್ದೀರಿ, ತಿಂದಿದ್ದೀರಿ ಹಾಗೆಯೇ, ಬಹುಜನರ ಅತ್ಯಾಪ್ಯಾಯ ಖಾದ್ಯವಾದ ಒಬ್ಬಟ್ಟು, ಆತ್ಮೀಯರನ್ನು ಉಪಚರಿಸಲು ಮಾಡುವ ಬಹುಮೂಲ್ಯ ಆಹಾರವೂ ಹೌದು. ಹೋಳಿಗೆ ತಯಾರಿಕೆಯನ್ನು ಒಮ್ಮೆ ಗಮನಿಸಿ - "ಆಯುರ್ವೇದದಲ್ಲಿ ಹೋಳಿಗೆಗೆ_ *ಉತ್ಕಾರಿಕಾ* _ಎಂದು ಕರೆಯುತ್ತಾರೆ." ಹೋಳಿಗೆಯು ಪ್ರಧಾನವಾಗಿ ಬೇಳೆಯಿಂದ ಆಗಿರುತ್ತದೆ. ಬೇಳೆ ಪ್ರೋಟೀನ್ ಪ್ರಧಾನ ಧಾನ್ಯ. ಆಯುರ್ವೇದದಲ್ಲಿ ತಿಳಿಸಲಾಗಿದೆ_ - *ಎಲ್ಲಾ ಬೇಳೆಗಳೂ ಅತ್ಯಂತ ಪ್ರಬಲ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ* _ಎಂದು. ಏಕೆಂದರೆ, ಬೇಳೆಗಳು - ಒಗರು ರಸವನ್ನು ಹೊಂದಿರುತ್ತವೆ ಮತ್ತು ಅದರಿಂದ ಶರೀರದ ವಾತವು ಜಾಸ್ತಿಯಾಗಿ ಅತ್ಯಂತ ಹೆಚ್ಚು ಚಟುವಟಿಕೆಯನ್ನು ಉಂಟುಮಾಡುತ್ತದೆ. ಆದರೆ ಆ ಆಂತರಿಕ ಚಟುವಟಿಕೆಯ ಕಾರಣ ಜೀವಕೋಶಗಳು ರಸವನ್ನೂ, ದ್ರವವನ್ನೂ, ಸ್ನೇಹಾಂಶ(ಜಿಡ್ಡನ್ನೂ) ಕಳೆದುಕೊಂಡು ಒಣಗುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ವಾಸ್ತವದಲ್ಲಿ ಎಲ್ಲರ ಅನುಭವಕ್ಕೆ ಬರುವ ಅತ್ಯಂತ ಸ್ಪಷ್ಟವಾದ ವಿಚಾರ._
_ಉತ್ಕಾರಿಕಾ(ಹೋಳಿಗೆ)ದಲ್ಲಿ ಬಳಸುವ ಬೇಳೆಯು ತನ್ನ ವಾತವರ್ಧಕ ಗುಣದಿಂದ ಜೀವಕೋಶಗಳನ್ನು ಒಣಗಿಸಬಾರದೆಂದು ಅದಕ್ಕೆ_
• _ಬೆಲ್ಲ(ಸಿಹಿ ರಸ) ಹಾಕುತ್ತಾರೆ_
• _ಬೇಯಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ(ಜಿಡ್ಡು) ಹಾಕುತ್ತಾರೆ_
• _ಅಷ್ಟು ಎಣ್ಣೆ ಹಾಕಿದರೂ ಸಹ, ಈಗಾಗಲೇ ಬೆಲ್ಲದ ಸಿಹಿಯಿಂದ ತೃಪ್ತವಾಗಿದ್ದರೂ ಸಹ ಬೇಳೆಯು ಎಲ್ಲಾ ಎಣ್ಣೆಯನ್ನು ಹೀರಿ ಇನ್ನೂ ಒಣಗಿದಂತೆಯೇ ಇರುತ್ತದೆ_
• _ಹಾಗಾಗಿ ಊಟ ಮಾಡುವಾಗ ಅದಕ್ಕೆ ಹೆಚ್ಚು ತುಪ್ಪವನ್ನು ಬಳಸುತ್ತಾರೆ_
• _ಇನ್ನೂ ಸಾಲದೆಂಬಂತೆ ಸಿಹಿ ಹಣ್ಣುಗಳ ಶೀ(ಸೀ)ಕರಣೆಯನ್ನು ಬಳಸುತ್ತಾರೆ. ಆ ಶೀಕರಣೆಗೆ ಮತ್ತೆ ಬೆಲ್ಲ ಬೆರೆಸುತ್ತಾರೆ!!_
*ಅಬ್ಬಾ ಪ್ರೋಟೀನ್(ಒಗರು ರಸ) ಪ್ರಧಾನ ಬೇಳೆ ಪದಾರ್ಥಗಳಿಗೆ ಇಷ್ಟೊಂದು ಮಧುರ(ಸಿಹಿ), ಸ್ನಿಗ್ಧ(ಜಿಡ್ಡು) ಪದಾರ್ಥಗಳ ಜೋಡು!!!*
_ಹಾಗೆಯೇ, ಅಡಿಕೆಯನ್ನು ಬೆಲ್ಲದಲ್ಲಿ ಬೇಯಿಸಿ ಮಾರಾಟ ಮಾಡಿದರೆ, ಅದನ್ನು ತಂದು ತುಪ್ಪದಲ್ಲಿ ಹುರಿದು, ಸಕ್ಕರೆ, ಗುಲ್ಕಂದ ಮುಂತಾಗಿ ಸೇರಿಸಿ ತಿನ್ನುತ್ತೇವೆ!! ಅಲ್ಲವೇ?_
_ನಮ್ಮ ನೆರೆರಾಜ್ಯದವರಾದ ಆಂಧ್ರಪ್ರದೇಶದಲ್ಲಿ_ *ಬೇಳೆಪಪ್ಪುಗೆ* _ಯಥೇಚ್ಛ ಎಣ್ಣೆ ಬಳಸುತ್ತಾರೆ ಮತ್ತು ಅದನ್ನು ಕೇವಲ ಸಿಹಿ ಮತ್ತು ದ್ರವಪ್ರಧಾನ ಅಕ್ಕಿಯ ಅನ್ನದೊಂದಿಗೆ ಸೇವಿಸುತ್ತಾರೆ, ಚಪಾತಿಯೊಂದಿಗೆ ಅಲ್ಲ._
_ಉತ್ತರ ಭಾರತದ ಗೋಧಿ ಪದಾರ್ಥಗಳನ್ನು ನೇರ ಬೆಂಕಿಯಲ್ಲಿ ಸುಟ್ಟು ಅದರ ವಾತ ಗುಣವನ್ನು ಕಡಿಮೆ ಮಾಡುತ್ತಾರೆ, ಬಾಟಿ, ಫುಲ್ಕಾ ತಿನ್ನುವಾಗ ಅದಕ್ಕೆ ಯಥೇಚ್ಛವಾಗಿ ತುಪ್ಪ, ಗುಡ(ಬೆಲ್ಲ) ಸೇರಿಸಿಕೊಳ್ಳುತ್ತಾರೆ, ದಾಲ್ ಸೇವಿಸುವುದಿಲ್ಲ. ಅದೇ ಸಿಹಿ-ದ್ರವ ಪ್ರಧಾನ ಅನ್ನಕ್ಕೆ ದಾಲ್(ಬೇಳೆ) ಬಳಸುತ್ತಾರೆ. ದಾಲ್-ಚಾವಲ್ ಪ್ರಚಲಿತವಾಗಿದೆಯೇ ಹೊರತು, ಪ್ರೋಟೀನ್ ಪ್ರಧಾನ ಗೋಧಿಗೆ ಇನ್ನೊಂದು ಪ್ರೋಟೀನ್ ಸೇರಿಸುವ ಅವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ. ಗೋಧಿ ಉತ್ಪನ್ನಗಳ ಜೊತೆಗೆ ಗುಡ-ಘೀ(ಬೆಲ್ಲ-ತುಪ್ಪ) ಬಳಸುತ್ತಾರೆ._
•|•|•|•|•|•
_ಹೀಗೆ ಪ್ರೋಟೀನ್‌ನಲ್ಲಿರುವ ಶಕ್ತಿಯನ್ನು ನಿಯಂತ್ರಣದಲ್ಲಿಡಲು_ *ದ್ರವ, ಮಧುರ, ಸ್ನಿಗ್ಧ* _ಗುಣಗಳು ಅತ್ಯಂತ ಅನಿವಾರ್ಯ. ಜಿಡ್ಡಿಲ್ಲದ ಪ್ರಬಲ ಶಕ್ತಿಯ ಆಕರವಾದ ಪೆಟ್ರೋಲ್ ಬಳಸಿ ದೀಪ ಬೆಳಗಿಸಲಾಗದು, ಆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ, ಅದರ ಬದಲು ಸ್ವಲ್ಪ ಜಿಡ್ಡು ಜಿಡ್ಡಾಗಿರುವ, ಗಟ್ಟಿ ದ್ರವದಿಂದ ಕೂಡಿ, ನಿಯಂತ್ರಿತ ಶಕ್ತಿಯನ್ನು ಹೊಂದಿರುವ ಎಣ್ಣೆಯನ್ನು ಬಳಸಿ ದೀಪ ಬೆಳಗಿಸಬಹುದು._
_ನಮ್ಮ ಶರೀರದಲ್ಲಿ ನಿಯಂತ್ರಿತ ಶಕ್ತಿ ಇರಬೇಕೇ ಹೊರತು, ಅನಿಯಂತ್ರಿತ ಶಕ್ತಿ ಇರಬಾರದು, ಅದರಿಂದ ಶರೀರ ಶಕ್ತಿಯುತವಾದರೂ ರೋಗಗಳನ್ನು ಉದ್ದೀಪನಗೊಳಿಸುತ್ತದೆ, ಈ ಉದ್ದೀಪಿತ ವಾತದ ಶಕ್ತಿಯಿಂದ - ಮೇಲೆ ತಿಳಿಸಿದ ರೋಗಗಳು ಮಾನವರನ್ನು ಕಾಡುತ್ತವೆ. ಮತ್ತು ನಿಯಂತ್ರಣಕ್ಕೆ ಸಿಗುವುದೇ ಇಲ್ಲ..._
_ಆತ್ಮೀಯರೇ, ಕೇವಲ ಪ್ರೋಟೀನ್ ಸೇವನೆಯ ದುಷ್ಪರಿಣಾಮ ಊಹೆಗೂ ನಿಲುಕದು, ಅದು ನಿಯಂತ್ರಿತವಾಗಿರಬೇಕಾದುದು ದೀರ್ಘಾಯುಷ್ಯಕ್ಕೆ ಅತ್ಯಾವಶ್ಯಕ. ಇಲ್ಲದಿದ್ದರೆ ಶೀಘ್ರವಾಗಿ ರಕ್ತನಾಳಗಳು ಒಣಗಿ ಅಲ್ಲಲ್ಲಿ ಕಟ್ಟಿಕೊಂಡು ವ್ಯಕ್ತಿ ಅತ್ಯಂತ ದಾರುಣ ಅವಸ್ಥೆ ತಲುಪುತ್ತಾನೆ._
•|•|•|•|•|•
_ಹೆಚ್ಚಿನ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ..._
•|•|•|•|•|•
••••••••••••••••••••••••••••••••••••••••••••••••
*ಆತ್ಮೀಯರೇ,*
_ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಎಷ್ಟು ಪಚನವಾಗುತ್ತದೆ ಎನ್ನುವುದರ ಆಧಾರದಲ್ಲಿ ನಮಗೆ ಶಕ್ತಿ ಲಭಿಸುತ್ತದೆ._
🙏 *ಧನ್ಯವಾದಗಳು* 🙏
••••••••••••••••••••••••••••••••••••••••
No comments:
Post a Comment