✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday 6 October 2021

ಇಂದಿನ ವಿಷಯ: - ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!

🦢  *ಅಮೃತಾತ್ಮರೇ ನಮಸ್ಕಾರ*  🦢

🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
••••••••••••••••••••••••••••••••••••••••••••
     *ದಿನಾಂಕ: 06.10.2021*
  *ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-70
••••••••••••••••••••••••••••••••••••••••••••
✍️: *ಇಂದಿನ ವಿಷಯ:*
  _ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!_
•••••••••••••••••••••••••••••••••••••••••
  *ಈ ವರ್ಷದ ನವರಾತ್ರಿಯ ದಿನಾಂಕ:*
  _06/07.10.2021 ರಿಂದ  14/15.10.2021 ರವರೆಗೆ ಇರುತ್ತದೆ._

*ಶರದೃತುವಿನಲ್ಲಿ ಭೂಮಿಯಲ್ಲಿ ಏನು ಬದಲಾವಣೆ ಆಗುತ್ತದೆ?:* 
  _ವರ್ಷಾ ಋತು ಮಳೆಯನ್ನು ಧಾರಾಕಾರವಾಗಿ ಸುರಿಸಿ, ಭೂಮಿಯ ಮೇಲಿನ ಕೊಳೆ, ಕಸ, ಗಿಡಮರಗಳ ಕೊಳೆತ ಅವಶೇಷ, ಸತ್ತ ಪ್ರಾಣಿಗಳ ಅವಶೇಷ ಮುಂತಾದವುಗಳನ್ನು ಎಳೆದು ತಂದು ನದಿ, ಹಳ್ಳ, ಕೆರೆ, ಡ್ಯಾಂ ಗಳಿಗೆ, ಕೊನೆಗೆ ಸಮುದ್ರಕ್ಕೂ ತಳ್ಳಿರುತ್ತದೆ. ಹೀಗೆ ಬಳಸುವ ಜಲಮೂಲಗಳೆಲ್ಲಾ ದೋಷಪೂರಿತವಾಗುವ ಕಾರಣ, ಶರದೃತುವಿನಲ್ಲಿ ಭೂಮಿಯ ಉತ್ತರಾರ್ಧ ಗೋಳದಲ್ಲಿ ಪಿತ್ತದೋಷ ಬಲವಾಗಿ ವರ್ಧಿಸುತ್ತದೆ. ಹೀಗೆ ಭೂಮಿಯಲ್ಲಿ ಪಿತ್ತದೋಷ ವರ್ಧಿಸಿದಾಗ ಮಾನವಾದಿ ಜೀವಿಗಳ ಶರೀರದಲ್ಲೂ ಪಿತ್ತದೋಷ ಹೆಚ್ಚುತ್ತದೆ!_ 

*ಶರದೃತುವಿನಲ್ಲಿ ದೇಹದ ಕ್ರಿಯೆ ಹೇಗಿರುತ್ತದೆ?:*
  _ವರ್ಷಾ ಋತು ಕಳೆದು ಶರದೃತು ಬರುತ್ತಿದ್ದಂತೆಯೇ, ಮಳೆ ನಿಂತು ಅಥವಾ ಕಡಿಮೆಯಾಗಿ ಸೂರ್ಯ ಪ್ರಕಾಶಿಸತೊಡಗುವ ಮತ್ತು ಸಂಜೆಯಾದೊಡೆ ಚಳಿ ಆರಂಭವಾಗುವ ಈ ಸಮಯದಲ್ಲಿ ವರ್ಷಾ ಋತುವಿನಲ್ಲಿ ನಮ್ಮ ಶರೀರದಲ್ಲಿ ಸಂಚಯಗೊಂಡ ಪಿತ್ತದೋಷವು ಸರ್ವ ಶರೀರಕ್ಕೂ ಪಸರಿಸುತ್ತದೆ..._

  _ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ನಮಗೆ ತಿಳಿಯುವ ಸತ್ಯ ಎಂದರೆ, ಈ ಕಾಲದಲ್ಲಿ ಪಿತ್ತಸ್ಥಾನದ, ಪಿತ್ತದೋಷದ ರೋಗಗಳಾದ, ರಕ್ತನಾಳಗಳ ವಿಕಾರಗಳು ಹೆಚ್ಚುತ್ತವೆ,_ *ಉದಾಹರಣೆಗೆ:* _ವೆರಿಕೋಸ್ ವೇನ್ಸ್, ಹೃದಯದ ರಕ್ತನಾಳಗಳು ಕಟ್ಟಿಕೊಂಡು ಹೃದಯಾಘಾತಗಳು, ಮೆದುಳಿನ ರಕ್ತನಾಳಗಳು ಕಟ್ಟಿಕೊಂಡು ಪಾರ್ಶ್ವವಾಯು, ಗ್ಯಾಂಗ್ರೀನ್, ಹಾಗೆಯೇ ಜಾಂಡೀಸ್, ನೇತ್ರದಾಹ, ಹಸ್ತ-ಪಾದ ದಾಹ, ಮೈಗ್ರೇನ್‌, ಆಮ್ಲಪಿತ್ತ ಮುಂತಾದ ಅನೇಕ ರೋಗಗಳು ಹೆಚ್ಚುವುದನ್ನು ಆಸ್ಪತ್ರೆಗಳ ಸಂಖ್ಯಾತ್ಮಕ ಪರಿಶೋಧನೆಯಿಂದ ತಿಳಿಯಬಹುದು..._

 *ಉಪವಾಸ ಏಕೆ?* 
  _ಪಿತ್ತ ವರ್ಧಿಸಿರುವಾಗ, ಆಹಾರ ಸರಿಯಾಗಿ ಪಚನವಾಗದೇ, ಮತ್ತಷ್ಟು ಪಿತ್ತ ವರ್ಧಿಸುತ್ತದೆ. ಹಾಗಾಗಿ ಈಗಾಗಲೇ ಪ್ರಕೃತಿ ಸಹಜತೆಯಿಂದ ವೃದ್ಧಿಗೊಂಡ ಈ ಪಿತ್ತವನ್ನು ಹೊರಹಾಕಲು ಎರಡು ವಿಧಾನಗಳಿವೆ..._

1. *ವಿರೇಚನ‌ ಚಿಕಿತ್ಸೆ*
2. *ಒಂಭತ್ತು ದಿನಗಳ ಉಪವಾಸ!*
 
  _ಈ ಪ್ರಕುಪಿತ ಪಿತ್ತವನ್ನು ಹೊರಹಾಕಿದಾಗ ಶರೀರದ ಆರೋಗ್ಯ ಸುಧಾರಿಸಿ, ನವಚೈತನ್ಯ ತುಂಬುವುದನ್ನು ಅನುಭವಿಸಿಯೇ ನೋಡಬೇಕು!_ 🤔

  _ವಿರೇಚನ ಚಿಕಿತ್ಸೆಯ ವಿಧಿ-ವಿಧಾನಗಳನ್ನು ಹತ್ತಿರದ ಆಯುರ್ವೇದ ಪಂಚಕರ್ಮ ಚಿಕಿತ್ಸಕರ ಬಳಿ ಕೇಳಿ ತೆಗೆದುಕೊಳ್ಳಬಹುದು._

  *ಉಪವಾಸದ ಮೂರು ವಿಧಾನಗಳನ್ನು ಇಲ್ಲಿ ತಿಳಿಸುತ್ತೇವೆ...*

*ಉಪವಾಸದ ಅವಧಿ:* 
  _ಈ ವರ್ಷದಲ್ಲಿ ದಿನಾಂಕ: 06/07.10.2021 ರಿಂದ  14/15.10.2021 ರವರೆಗೆ ಒಂಭತ್ತು ದಿನಗಳ ವರೆಗೆ ಪಾಲಿಸಬೇಕು._

*ಅವರ ಉಪವಾಸ:* 
  _ಅಶಕ್ತರು, ವೃದ್ಧರು, ರೋಗದಿಂದ ಕ್ಷೀಣರಾದವರು ದೀರ್ಘ ಉಪವಾಸ ಮಾಡಲು ಅಸಾಧ್ಯವಿರುವರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ‌ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ, ಉಪಹಾರ ಬೇಡ._

  _ಸಂಜೆ 5-6 ರ ಒಳಗೆ ಮತ್ತೆ ರಾತ್ರಿಯ ಆಹಾರ ಮಾಡಿ ಮುಗಿಸಿ._

  _ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._

  _ಹಣ್ಣು, ಹಾಲು, ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡ._

*ಮಧ್ಯಮ ಉಪವಾಸ:* 
  _ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಮಧ್ಯಮ ಶಾರೀರಿಕ ಬಲ ಉಳ್ಳ ಸಾಮಾನ್ಯರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ‌ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ,_

  _ಸಂಜೆ 5-6 ರ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._

  _ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._

  _ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._

*ಪ್ರವರ ಉಪವಾಸ:* 
  _ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಉತ್ತಮ ಶಾರೀರಿಕ ಬಲ ಉಳ್ಳವರು ಈ ವಿಧಾನ ಅನುಸರಿಸಬಹುದು._

  _ಈ ವಿಧಾನದಲ್ಲಿ - ಬೆಳಿಗ್ಗೆ 7-8ಕ್ಕೆ 200ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಸಂಜೆ 5-6 ರ ಮಧ್ಯದಲ್ಲಿ ಮತ್ತೆ 200ml ರಾಗಿ‌ ಅಥವಾ ಅಕ್ಕಿ ಗಂಜಿ ಸೇವಿಸಿ_

  _ಐದನೇ ದಿನದ ನಂತರ ಬಳಲಿಕೆಯಾದರೆ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._

  _ಮಧ್ಯದಲ್ಲಿ ಬಾಯಾರಿದರೆ ಅಗತ್ಯ ಪ್ರಮಾಣದ ಕುದಿಸಿ ಆರಿಸಿದ ಜಲ ಸೇವನೆ ಶ್ರೇಷ್ಠ._

  _ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._

*ಉಪವಾಸದ ಲಾಭಗಳು:* 
  _ಪಿತ್ತದೋಷವೇ ಇಂದಿನ ಕಾಲದ ರೋಗಕಾರಕ ದೋಷವಾಗಿದೆ, ಇದರ ನಿಯಂತ್ರಣದಿಂದ ಎಲ್ಲಾ ವಿಧದ ಪಿತ್ತಜ ರೋಗಗಳು ಅಂದರೆ ಆಮ್ಲಪಿತ್ತ, ರಕ್ತಪಿತ್ತ, ಸಂಧಿಶೂಲ, ಅಸ್ತಮಾ, ನೆಗಡಿ, ಶೀತ,‌ ಕಾಮಾಲೆ, ಪಿತ್ತಜ ಪ್ರಮೇಹ ಮುಂತಾದವು ನಿಯಂತ್ರಣಕ್ಕೆ ಬರುತ್ತವೆ!_ 🙄

*ವಿರೇಚನದ ಲಾಭಗಳು:*
  _ಮುಂದಿನ ಒಂದು ವರ್ಷ ಮೇಲೆ ಸೂಚಿಸಿದ ರೋಗಗಳ ಬಾಧೆ ಇರುವುದಿಲ್ಲ. ಹಾಗೆಯೇ, ವಾತ ದೋಷ ಅನುಲೋಮ ಹೊಂದುವ ಕಾರಣ, ಅನೇಕ ರೀತಿಯಿಂದ ಶಾಶ್ವತವಾಗಿ ಬಾಧಿಸುವ ಹಾರ್ಮೋನ್ ರೋಗಗಳಾದ ಹೈಪೋಥೈರಾಯ್ಡಿಸಮ್, ಮಧುಮೇಹ, ಸ್ಥೌಲ್ಯ, PCOD, ಋತುಸ್ರಾವದ ವಿಕಾರಗಳು, ಗರ್ಭಾಶಯ-ಸ್ತನದ ಗಡ್ಡೆಗಳು, ಮೆದುಳಿನ ವಿಕಾರಗಳಾದ ಆತಂಕ, ಚಂಚಲತ್ವ, ಸ್ಮೃತಿನಾಶ ಮುಂತಾದವು ದೂರವೇ ಉಳಿಯುತ್ತವೆ!_

  _ಸ್ವಾಸ್ಥ್ಯ ಪಂಚಕರ್ಮ ಚಿಕಿತ್ಸಾ ಭಾಗವಾದ, ಶರದೃತುವಿನ ವಿರೇಚನ ಚಿಕಿತ್ಸೆಯನ್ನು ಮನೆಯಲ್ಲಿಯೇ ಇದ್ದುಕೊಂಡು ಪಡೆಯಲೂ ಬಹುದು._

      🙏  *ಧನ್ಯವಾದಗಳು*  🙏
••••••••••••••••••••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline