🦢 *ಅಮೃತಾತ್ಮರೇ, ನಮಸ್ಕಾರ* 🦢
🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
•••••••••••••••••••••••••••••••••••••••
*ದಿನಾಂಕ: 18.10.2021*
_*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-73*
••••••••••••••••••••••••••••••••••••••
✍️: _ಇಂದಿನ ವಿಷಯ:_
*ಅಕಾಲ ಮುಪ್ಪನ್ನು ತಡೆಯಿರಿ...*
••••••••••••••••••••••••••••••••••••••••
_ಆಮ್ಲೋ.... ಅತ್ಯಭ್ಯಾಸ್ಯ ತು ತನೋಃ ಕುರ್ಯಾತ್ ಶೈಥಿಲ್ಯಂ....||_
_ಲವಣಃ..... ಸೋ ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_
~_ಅಷ್ಟಾಂಗ ಹೃದಯ ಸೂತ್ರ ಸ್ಥಾನ, ಅಧ್ಯಾಯ-10/10-13_
_*ಅಂದರೆ, ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರದ ಶಿಥಿಲತೆಯೂ, ಅಕಾಲ ವಲಯ ಫಲಿತಗಳೂ ಉಂಟಾಗುತ್ತವೆ ಎಂದು...*_
*ಶಿಥಿಲ* = _ಮೆತ್ತಗಾಗುವಿಕೆ ಅಥವಾ ಹಣ್ಣಾಗುವಿಕೆ_
*ವಲಯ* = _ಚರ್ಮದ ಸುಕ್ಕುಗಳು_
*ಫಲಿತ* = _ಕೂದಲು ಬೆಳ್ಳಗಾಗುವುದು_
_*ವಲಯ ಫಲಿತಗಳು ಇಲ್ಲಿ ರೋಗರೂಪದಿಂದ ಬರುವಂತಹುಗಳಲ್ಲ, ಬದಲಾಗಿ ವಾರ್ಧಖ್ಯದ ಸೂಚಕವಾಗಿ ಬರುತ್ತವೆ!*_
_*ಸುಕ್ಕುಗಳು ಕೇವಲ ಹೊರ ಚರ್ಮದಲ್ಲಿ ಕಾಣಿಸಿಕೊಳ್ಳುತ್ತಿವೆ ಆದರೆ ವಾಸ್ತವದಲ್ಲಿ ಅದು ಒಳಗಿನ ಜೀವಕೋಶಗಳ ಮುದುಡಿಕೊಳ್ಳುವಿಕೆ, ಗಡುಸುಗೊಳ್ಳುವಿಕೆ ಮತ್ತು ಶಕ್ತಿಗುಂದಿಸುವಿಕೆಯಿಂದ ಆದದ್ದು, ಇದನ್ನೇ ಜೀವಕೋಶಗಳ ಅಂದರೆ ಈ ಶರೀರದ ವೃದ್ಧಾಪ್ಯ ಎಂದು ಕರೆಯುತ್ತೇವೆ.*_
*ವೃದ್ದಾವಸ್ಥೆ ಯಾವಾಗ ಬರಬೇಕು?*
_*ವಾಸ್ತವದಲ್ಲಿ ತನ್ನ 70ನೇ ಸಂವತ್ಸರದ ನಂತರ ವೃದ್ಧ ಎಂದು ಕರೆಸಿಕೊಳ್ಳಬೇಕಾದ ಮಾನವ ಶರೀರ ಇಂದು 40-50ಕ್ಕೇ ಬಂದಿಳಿದಿರುವುದು ಶೋಚನೀಯ?!*_ 🤔 🤔
_*ಮರಣ ಯಾವಾಗಲಾದರೂ ಬರಲಿ, ಅದು ಆಕಸ್ಮಿಕ 0-100+ ವರೆಗೆ ಯಾವಾಗಂದರೆ ಆಗ ದಾಳಿಯಿಡುವ ಮರಣದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಅಕಾಲ ವಾರ್ಧಖ್ಯದಿಂದ ಅನುಭವಿಸುವ ದೌರ್ಬಲ್ಯ, ರೋಗಗಳ ಬಗ್ಗೆ ಮಾನವ ಕಣ್ಣು ತೆರೆದು ನೋಡಬೇಕಿದೆ...*_
*ವೃದ್ಧಾವಸ್ಥೆ ಬೇಗ ಏಕೆ ಬರುತ್ತಿದೆ?*
_ಆಚಾರ್ಯ ವಾಗ್ಭಟರು ಹೇಳುವಂತೆ,_
📜
_ಆಮ್ಲೋ.... ಕುರ್ಯಾತ್ ಶೈಥಿಲ್ಯಂ....||_
_ಲವಣಃ.....ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_
_*ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರ ಹಣ್ಣಾಗುವುದು, ಅಕಾಲ ವಲಯ, ಫಲಿತಗಳು ಉಂಟಾಗುತ್ತವೆ!*_
_*ಶರೀರದಲ್ಲಿನ ಜೀವರಸವಾದ ವಿಪಾಕವನ್ನು ಆಮ್ಲೀಯತೆಯಿಂದ ಅಂದರೆ ಹುಳಿಬಿಡುವ ಆಹಾರ ಸೇವನೆಯ ಕಾರಣದಿಂದ ಮತ್ತು ಲವಣಾಧಿಕವಾದ ಕಟುತ್ವದಿಂದ ಅಂದರೆ ಅಧಿಕ ಲವಣಾಂಶಗಳನ್ನು ಸೇವಿಸುವ ಕಾರಣದಿಂದ ಹಾನಿಗೊಳಿಸಿಕೊಂಡು ಬೇಗ ಮುಪ್ಪನ್ನು ಬರಮಾಡಿಕೊಂಡಿದ್ದೇವೆ!!*_
*ಅಧಿಕ ಆಮ್ಲಸೇವನೆ ಎಂದರೆ ಯಾವುದು ಅದರಿಂದ ಏನಾಗುತ್ತಿದೆ?*
_*ಕೇವಲ ಹುಳಿರಸ ಇರುವ ಪದಾರ್ಥ ಸೇವನೆ ಎಂದುಕೊಳ್ಳುವುದು ಅರ್ಧ ಸತ್ಯವಾಗುತ್ತದೆ, ಯಾವುದು ನೀರಿನ ಸಂಪರ್ಕಕ್ಕೆ ಬಂದರೆ ಹುಳಿಯಾಗಿ ಬದಲಾಗುತ್ತದೋ ಅದು ಶರೀರದ ಒಳಗೆ ಹೋಗಿ ಹುಳಿಯನ್ನೇ ಬಿಡುತ್ತದೊ ಅವು ಕೂಡಾ ಹುಳಿರಸಗಳು. ಹಾಗಾಗಿ ಹುಳಿ ಎಂದರೆ, ನೇರ ಹುಳಿ ಇರುವ ಪದಾರ್ಥಗಳು ಮತ್ತು ಹುಳಿಬಿಡುವ ಪದಾರ್ಥಗಳು ಎರಡನ್ನೂ ಗ್ರಹಿಸಬೇಕು...*_
_*ಹಾಗಾದರೆ ಹುಳಿರಸ ಸೇವನೆ ಹಾನಿಕಾರಕವೇ? ಎಂದರೆ ಅಲ್ಲ ಖಂಡಿತಾ ಅಲ್ಲ ಅದು ಹೃದ್ಯ, ಅಂದರೆ ಹೃದಯ ಮತ್ತು ರಕ್ತನಾಳಗಳಿಗೆ ಹಿತವನ್ನು ಉಂಟುಮಾಡುತ್ತದೆ ಆದರೆ,*_
• _ಹುಳಿಯ ಮೂಲ ಮತ್ತು_
• _ಹುಳಿಯ ಪ್ರಮಾಣ ಬಹುಮುಖ್ಯ ಅಂಶ_
_*ಅಂದರೆ ಪ್ರಾಕೃತಿಕವಾಗಿ ಹುಳಿ ಇರುವ ಪದಾರ್ಥಗಳು ಆರೋಗ್ಯಕರ, ನಾವಾಗಿಯೇ ಕೃತಕವಾಗಿ ಹುಳಿ ಬರಿಸಿಕೊಳ್ಳುವ ಪದಾರ್ಥಗಳು ಅನಾರೋಗ್ಯಕರ ಎಂದು ಸ್ಥೂಲವಾಗಿ ವಿಂಗಡಿಸಿದರೂ.....*_
_*ಪ್ರಾಕೃತಿಕ ಹುಳಿಯನ್ನೇ ಅಧಿಕ ಪ್ರಮಾಣದಲ್ಲಿ ಸೇವಿಸುವುದು ವೃದ್ಧಾಪ್ಯವನ್ನು ಬೇಗ ತರುತ್ತದೆ!*_
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 1)*
_ನೇರ ಹುಳಿ ಇರುವ ನಿಂಬೆ, ಮಾವು, ಕಿತ್ತಲೆ, ದಾಳಿಂಬೆ, ಮೊಸಂಬಿ, ಹುಣಸೆ ಮುಂತಾದವುಗಳು ಶರೀರಕ್ಕೆ ಬೇಕು ಮತ್ತು ಇವು ಆರೋಗ್ಯಕರ..._
*ಆದರೆ ಪ್ರಮಾಣ ಮೀರಿದರೆ ಇವೂ ಸಹ ಅತ್ಯಂತ ಅಪಾಯಕರ!*
_ಉದಾಹರಣೆಗೆ:_
*ಉಪ್ಪಿನಕಾಯಿ ಕಲಸಿಕೊಂಡು ಅನ್ನ ಸೇವನೆ; ಪಲ್ಯ, ಸಾಂಬಾರುಗಳಿಗೆ ನಿಂಬೆಹಣ್ಣನ್ನು ಹೆಚ್ಚಾಗಿಯೇ ಹಿಂಡಿಕೊಂಡು ಸೇವಿಸುವುದು; ಅಡುಗೆಯಲ್ಲಿ ಹುಳಿಯನ್ನೇ ಹೆಚ್ಚು ಇರುವಂತೆ ತಯಾರಿಸುವುದು, ಇವೆಲ್ಲಾ ಅಪಾಯಕರ!*
_ಮಿತವಾದ ನೇರ ಹುಳಿ ಅತ್ಯಂತ ಆರೋಗ್ಯಕರ, ಅಂದರೆ_ *ಊಟಕ್ಕೆ ಉಪ್ಪಿನಕಾಯಿ ಎಷ್ಟೋ ಅಷ್ಟೇ* _ಆದರೆ ಸೂಕ್ತ!_ 🙄
••••••••••••••••••••••••••••••••••••••••••••••
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 2)*
_ಇನ್ನೊಂದು ರೀತಿಯ ಹುಳಿ ಪದಾರ್ಥಗಳಿವೆ, ನೀರಿನ ಸಂಪರ್ಕ ಬಂದನಂತರ ಹುಳಿಬಿಡುವ ಇವು ಮತ್ತು ಕಾಲ ಗತಿಸಿದಂತೆ ಹುಳಿಬಿಡುವ ಕೆಲವು ಪದಾರ್ಥಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ!_
_ಉದಾಹರಣೆಗೆ:_
*ಗೋಧಿ*
*ಮೈದಾ*
*ಉದ್ದಿನಬೇಳೆ*
_ಇವು ಕಿಣ್ವೀಕರಣಗೊಂಡು ಹುಳಿಬಿಡುವ ಕಾರಣ ಅಲ್ಕೋಹಾಲ್ ಉತ್ಪತ್ತಿ ಮಾಡುತ್ತವೆ, ಸೇವಿಸುವಾಗ ಹುಳಿ ಇರದಿದ್ದರೂ ಅನ್ನನಾಳದಲ್ಲಿ ಹುಳಿಬಿಟ್ಟು ಜೀವರಸವನ್ನು ಕೆಡಿಸುತ್ತವೆ, ಅವುಗಳೆಂದರೆ, ಚಪಾತಿ, ಬಿಸ್ಕೆಟ್, ಬ್ರೆಡ್, ಬನ್, ಕೇಕ್, ಪಿಜ್ಜಾ, ಬರ್ಗರ್ ಮುಂತಾದವುಗಳು...!_
*ಮೊಸರು* _ಸ್ವಭಾವತಃ ಸಿಹಿ ಅಥವಾ ಅತ್ಯಲ್ಪ ಹುಳಿ, ಆದರೆ ಸ್ವಲ್ಪವೇ ತಡಮಾಡಿ ಸೇವಿಸಿದರೂ ಹುಳಿಯಾಗಿ ಆರೋಗ್ಯ ಕೆಡಿಸುತ್ತದೆ...!_
*ಮಜ್ಜಿಗೆ* _ಸ್ವಭಾವತಃ ಒಗರಾಗಿದ್ದು ಅತ್ಯಂತ ಶ್ರೇಷ್ಠ ಆರೋಗ್ಯದಾಯಕ ಪೇಯ, ಸರ್ವರಿಗೂ ಸೂಕ್ತ, ಆದರೆ ತಡಮಾಡಿ ಸೇವಿಸಿದರೆ ಆರೋಗ್ಯವನ್ನು ಕೆಡಿಸುತ್ತದೆ!_
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 3)*
_*ನಾವು ಸೃಷ್ಠಿಸಿಕೊಂಡ ಕೃತಕ ಜಲ ಆರ್.ಒ. ವಾಟರ್, ಇದು ಕುಡಿಯಲು ಎಳ್ಳಷ್ಟೂ ಯೋಗ್ಯವಲ್ಲದ ಆ್ಯಸಿಡ್ ರೂಪದ ದ್ರವ...! ಆರ್.ಒ. ಜಲ ಹುಳಿ ಇರುವ ಕಾರಣದಿಂದ ಸ್ವಲ್ಪ ರುಚಿ ಎನಿಸುತ್ತದೆ, ಹಾಗಾಗಿ ಬಾಟಲಿಯಲ್ಲಿ ಮಾರಾಟವಾಗುವ ಈ ಜಲ ರುಚಿಯಲ್ಲಿ ಸ್ವಲ್ಪ ಹಿತ ಎನಿಸುತ್ತದೆ, ಆದರೆ ವಾಸ್ತವದಲ್ಲಿ ಅತ್ಯಂತ ಅಪಾಯಕಾರ! ಏಕೆಂದರೆ, ನಿತ್ಯವೂ ಶರೀರಕ್ಕೆ ಇಂತಿಷ್ಟೇ ಪ್ರಮಾಣದ ಜಲ ಬೇಕೇ ಬೇಕು ಮತ್ತು ಈ ಶರೀರ ಜಲಾಂಶ ಪ್ರಧಾನವಾಗಿದೆ...*_
_*ಜೀವಕೋಶಗಳ ಒಳಗೆ ತುಂಬಿಕೊಂಡ ಜೀವಕ್ಕೆ ಆಧಾರಸ್ಥಂಭವಾದ ಇಂತಹ ಜೀವದ್ರವವನ್ನೇ ಹುಳಿಯಾಗಿಸಿಕೊಂಡರೆ ಅದು ಅತ್ಯಂತ ಅಪಾಯಕರ...*_ 🤔
•|•|•|•|•|•
*ಹುಳಿಯ ಅತಿ ಸೇವನೆಯು ಶರೀರದ ಶಿಥಿಲತೆಗೆ ಮತ್ತು ವೃದ್ಧಾಪ್ಯಕ್ಕೆ ಕಾರಣ ಏಕೆ?*
_ಹುಳಿ ಪಿತ್ತವನ್ನು ವರ್ಧಿಸುತ್ತದೆ, ಪಿತ್ತವು ಈ ಶರೀರದ ಜೀವಕೋಶಗಳ ಪೊರೆಯನ್ನು ಮೃದುವಾಗಿಸುತ್ತದೆ. ಅಂದರೆ ಹುಳಿಯ ಮೂಲವನ್ನು ಗ್ರಹಿಸದೇ ಸೇವಿಸಿದರೆ ಮತ್ತು ಪ್ರಾಕೃತಿಕವಾಗಿ ಸಿಗುವ ಹುಳಿಯನ್ನು ಅತಿಯಾಗಿ ಸೇವಿಸಿದರೆ ದೃಢವಾಗಿ ಮತ್ತು ಸ್ಥಿರವಾಗಿ ಇರಬೇಕಾದ ಕೋಶಪೊರೆ ಮೃದುವಾಗಿ ಮತ್ತು ಅಸ್ಥಿರವಾಗಿಬಿಡುತ್ತದೆ. ಆಗ ಅದು ಬಳುಗುವಂತಾಗಿ ಸುಕ್ಕುಗಟ್ಟುವುದು ಅನಿವಾರ್ಯ ಇದನ್ನೇ ಶರೀರದ ಶಿಥಿಲತೆ ಎಂದು ಕರೆಯಲಾಗಿದೆ., ಇದೇ ವೃದ್ಧಾಪ್ಯ. ಇದು ಅಕಾಲವೋ ಸಕಾಲವೋ ಎನುವುದು ಮುಖ್ಯ._
•|•|•|•|•|•
_*ಮುಂದುವರಿದು, ಸಕಾಲೀನ ವೃದ್ಧಾಪ್ಯ ಬರುವುದು ಹುಳಿಯಿಂದ ಅಲ್ಲ, ಅಲ್ಲಿ ಜೀವಕೋಶಗಳು ಗಡುಸಾಗುತ್ತಾ ಸಾಗುತ್ತವೆ, ಅದು ಪ್ರಕೃತಿ. ಆದರೆ ಉಪ್ಪು ಸೇವನೆಯಿಂದ ನಾವಾಗಿ ತಂದುಕೊಳ್ಳುವ ಗಡುಸುತನ ಅದುವೇ ಕೃತ್ರಿಮ ಮತ್ತು ಅಕಾಲ ವೃದ್ಧಾಪ್ಯ...*_
*ಅತಿಯಾದ ಉಪ್ಪು ಸೇವನೆಯ ಹಾನಿಯನ್ನು ನಾಳೆ ನೋಡೋಣ...*
🙏 *ಧನ್ಯವಾದಗಳು* 🙏
••••••••••••••••••••••••••••••••••••••
No comments:
Post a Comment