✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday, 15 June 2021

ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
16.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :60
•••••••••
✒️ ಇಂದಿನ ವಿಷಯ:
*ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*
••••••••••••••
ಇಲ್ಲಿಯವರೆಗೆ ಹೇಳಿದ್ದೀರಿ-
• ಪಾಮ್ ಆಯಿಲ್ ಹಾನಿಕರ
• ರಿಫೈನ್ಡ್ ಆಯಿಲ್ ಹಾನಿಕರ
• ಸಂಸ್ಕರಿಸದ ಕೋಲ್ಡ್‌ಪ್ರಸ್ ಎಣ್ಣೆ ಹಾನಿಕರ
• ಕರಿದದ್ದು ಹಾನಿಕರ
• ಒಗ್ಗರಣೆ ಕಲಸಿದ ಅನ್ನಗಳು ಹಾನಿಕರ

ಸರಿ, ಈಗಾಗಲೇ ಗೊತ್ತಿಲ್ಲದೇ ಸೇವಿಸಿದ್ದೇವೆ, ಇನ್ನುಮುಂದೆ ಈ ತಪ್ಪು ಮಾಡುವುದಿಲ್ಲ ಆದರೆ, ಈಗಾಗಲೇ ಈ ರೀತಿ ಸೇವಿಸಿದ ಎಣ್ಣೆಯ ದುಷ್ಪರಿಣಾಮ ನಮ್ಮ ದೇಹದಲ್ಲಿದೆಯಲ್ಲ ಅದನ್ನು ಹೋಗಲಾಡಿಸಲು ಯಾವುದಾದರೂ ಉಪಾಯ ತಿಳಿಸಿ.

ಓದುಗರ ಈ ಪ್ರಶ್ನೆಗೆ ಸರಳ ಉಪಾಯವನ್ನಿಂದು ಕೊಡುತ್ತಿದ್ದೇವೆ.
•••

*ಸರಳ‌ ಉಪಾಯಗಳು:*
• ಮೊದಲು ಎಣ್ಣೆಯನ್ನು ವಿಕೃತ ಸಂಸ್ಕಾರದಿಂದ ತಿನ್ನುವ ಕ್ರಮವನ್ನು ಶಾಶ್ವತವಾಗಿ ನಿಲ್ಲಿಸಿ.
• ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ.
• ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ.
•••••••

*ವಿಕೃತ ಕ್ರಮದಿಂದ ಎಣ್ಣೆಯ ಸೇವನೆ ನಿಲ್ಲಿಸಿ*
• ಎಣ್ಣೆ/ತುಪ್ಪದಲ್ಲಿ ಕರಿದ, ಹುರಿದ, ಒಗ್ಗರಣೆಯನ್ನು ಮೇಲಿನಿಂದ ಕಲಸಿದ, ನೀರೇ ಇಲ್ಲದಂತೆ ಒಣಗಿಸಿ ಎಣ್ಣೆ ಬೆರೆಸಿ ಸೇವಿಸುವ ಕ್ರಮವನ್ನು ನಿಲ್ಲಿಸಿ. 
• ಪಾಮ್ ಆಯಿಲ್ ಬಳಕೆ, ರಿಫೈನ್ಡ್ ಆಯಿಲ್ ಬಳಕೆ ಮತ್ತು ಮನೆಯಲ್ಲಿ ಪುನಃ ಸಂಸ್ಕರಿಸದೇ ಉಪಯೋಗಿಸುವ ಕೋಲ್ಡ್‌ಪ್ರಸ್ ಎಣ್ಣೆ 
ಇವುಗಳನ್ನು ಇನ್ನು ಮುಂದೆ ಸೇವಿಸದಿರಲು ನಿರ್ಧರಿಸಿ.
• ಅಪರೂಪಕ್ಕೆ ಯಾರದ್ದೋ ಮನೆಗೆ ಹೋದಾಗ ಅವರಿಗೆ ಮುಜುಗರ ಉಂಟಾಗದಂತೆ ಅತ್ಯಲ್ಪ‌ ಪ್ರಮಾಣದಲ್ಲಿ ಸೇವಿಸಿ, ಅಗತ್ಯ ಎನ್ನಿಸಿದರೆ ಎಣ್ಣೆಯ ಬಗೆಗಿನ‌ ಮಾಹಿತಿ ಹಂಚಿಕೊಂಡು ಬನ್ನಿ.
ಹಬ್ಬ ಹರಿದಿನಗಳಲ್ಲಿ ತಯಾರಿಸಿದ ಅಪರೂಪದ ಎಣ್ಣೆ ಅಡುಗೆಯನ್ನು ಅತ್ಯಂತ ನಿಯಮಿತವಾಗಿ ಸೇವಿಸಿ ಒಂದು ಬಾರಿ ಉಪವಾಸ ಮಾಡಿ.

ಇವುಗಳನ್ನು ಪಾಲಿಸಿದರೆ ಆರೋಗ್ಯ ಹಾನಿಯಿಂದಲೂ ಮತ್ತು ಇಂದಿನ ಪ್ರಪಂಚದಿಂದ ಆಗುವ ಮುಜುಗರದಿಂದಲೂ ತಪ್ಪಿಸಿಕೊಳ್ಳಬಹುದು.
ಹಾಗೆಯೇ, ಅಪರೂಪಕ್ಕೆ ಬಾಯಿ ಚಪಲ ತೀರಿಸಿಕೊಳ್ಳಲೂ ಬಹುದು, ಇಲ್ಲದೇ ಪೂರ್ಣ ತ್ಯಜಿಸಿದರೆ ಕೆಲವರಿಗೆ ಒಮ್ಮೆಗೇ ಅನಾಹುತ ಆಗುವಷ್ಟು ತಿನ್ನಬೇಕೆನಿಸುತ್ತದೆ.
•••

*ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ*

• ದಿನಕ್ಕೆ ಅರ್ಧ ಹೋಳು ನಿಂಬೆ ಸರವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಹಿಂಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ 21  ಅಥವಾ 48 ದಿನಗಳ ಕಾಲ ಮಾಡುವುದರಿಂದ ಶರೀರದಲ್ಲಿ, ರಕ್ತನಾಳಗಳಲ್ಲಿ, ಯಕೃತ್ತಿನಲ್ಲಿ, ಮೂತ್ರಪಿಂಡಗಳಲ್ಲಿ ಮೆತ್ತಿಕೊಂಡ ಜಿಡ್ಡು ಕರಗಿ ಮಲದಿಂದ ಹೊರಹೋಗುತ್ತದೆ. ಅಂದರೆ, ದಿನಕ್ಕೆ ಒಂದು ಅಥವಾ ಎರಡುಬಾರಿ ಸಹಜ ಮಲಪ್ರವೃತ್ತಿಯಾಗಿ ಹೊರಹೋಗುತ್ತದೆ, ಹೆಚ್ಚು ಬಾರಿ ಮಲಪ್ರವೃತ್ತಿ ಆಗುವುದಿಲ್ಲ, ಭಯ ಬೇಡ.

ಆ ನಂತರ ವಾರಕ್ಕೆ ಒಂದು ಬಾರಿ ಈ ಪದ್ಧತಿಯನ್ನು ಮುಂದುವರಿಸಿರಿ ಮತ್ತು ಮೇಲೆ ತಿಳಿಸಿದಂತೆ ಆದರ್ಶ ಎಣ್ಣೆಸೇವನಾ ವಿಧಾನ ಅನುಸರಿಸಿ. 
ನಿಮಗೆ ಯಾವುದೇ ಹಾನಿಯಾಗದೇ ಆರೋಗ್ಯ ಸಹಜವಾಗಿ ಲಭಿಸುತ್ತದೆ.

ಸೂಚನೆ-
ತುಂಬಾ ತೆಳ್ಳಗೆ ಇರುವವರು, ಅತ್ಯಂತ ಹೆಚ್ಚು ಶಾರೀರಿಕ ಶ್ರಮ ಮಾಡುವವರು ತಿಂಗಳಿಗೆ ಒಂದು ಬಾರಿ ನಿಂಬೆ ಸೇವನೆ ಮಾಡಬಹುದು.
•••

*ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ*

ಇದೊಂದು ಅತ್ಯುತ್ತಮ ಸಿದ್ಧ ವಿಧಾನ, ಇತ್ತೀಚಿನ ಮಾಧ್ಯಮಗಳಲ್ಲಿ ಪ್ರಕಟವಾಗುವ ನೂರೆಂಟು ವಿಧಿ ವಿಧಾನಗಳಿಂದ ಭಯ ಹೊಗಿಸಿಕೊಂಡು ಬದುಕಿದರೆ, ನಿತ್ಯವೂ ಅಮೃತ ಸೇವಿಸುತ್ತಿದ್ದರೂ ಅದು ಅನಾರೋಗ್ಯ ತರುತ್ತದೆ. 
ಎಲ್ಲ ಮರೆತು ಶಾರೀರಿಕ ಶ್ರಮವನ್ನು ಚನ್ನಾಗಿ ಮಾಡಿ, ಶರೀರದಿಂದ ಬೆವರು ಹೊರಬಂದು ಶುದ್ಧವಾಗುತ್ತೀರಿ. ಹಾಗೆಯೇ 
ಶಾರೀರಿಕ ಶ್ರಮವು ಮನಸ್ಸಿಗೆ ಉತ್ತಮ‌ ನಿದ್ದೆಯನ್ನು ಕೊಡುತ್ತದೆ ಮತ್ತು ಆತಂಕ ದೂರಮಾಡುತ್ತದೆ.

ಎಲ್ಲ ಮರೆತು ನೆಮ್ಮದಿಯ ನಿದ್ದೆಗೆ ಜಾರಲು- 
• ಹಗಲು ಹೆಚ್ಚು ಶಾರೀರಿಕ ಶ್ರಮ ಮಾಡಿ(ರಾತ್ರಿ ಊಟದ ನಂತರ ವಾಕ್ ಒಳ್ಳೆಯದಲ್ಲ)
• ಜಿಡ್ಡು ಸೇವನೆ ಕಡಿಮೆಮಾಡಿ
ಮತ್ತು
• ರಾತ್ರಿ ಆಹಾರ ಪ್ರಮಾಣ ಕಡಿಮೆ ಗೊಳಿಸಿ.

ಧನ್ಯವಾದಗಳು
•••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline