✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Saturday, 19 June 2021

ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ.

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
20.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :62
•••••••••
✒️ ಇಂದಿನ ವಿಷಯ:
ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ. 
•••••••••••••••••••

ರಾಸಾಯನಿಕ ಸಂಘಟನೆಗಳ ಆಧಾರದ ಮೇಲೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಅನುಚಿತ ನಿರ್ಧಾರಗಳಿಂದ ಹೆಸರಾಂತ ಆಹಾರ ತಜ್ಞರು, ವೈದ್ಯರೂ ಸೇರಿದಂತೆ ಅಲ್ಪ ಮಾಹಿತಿ ಹೊಂದಿದವರೂ ಸಹ ಇಂಥದೇ ಆಹಾರ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದೆಂದು ಸಾರುತ್ತಿದ್ದಾರೆ. 

ಈ ರೀತಿಯ ಅನುಚಿತ ಹೇಳಿಕೆಗಳಲ್ಲಿ ಖಾದ್ಯ ತೈಲವೂ ಸೇರಿಕೊಂಡುಬಿಟ್ಟಿದೆ. ರಿಫೈನ್ಡ್ ಎಣ್ಣೆಯ ಬಳಕೆ ದೋಷಪೂರಿತವಾದುದು ಎಂದು ತಿಳಿದಮೇಲಂತೂ ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ದೊರೆಯುವ ಖಾದ್ಯ ತೈಲವನ್ನು ಇಡೀ ಜಗತ್ತಿಗೆ ಹಂಚಲು ಅಸಾಧ್ಯವೆಂದು ತಿಳಿದೂ ಸಹ ಅದರ ಗುಣವಿಶೇಷಗಳನ್ನು ಹೋಗಳುತ್ತ ಅದನ್ನು ಬಳಸುವವರು ಶ್ರೇಷ್ಠ ಎಂತಲೂ ,ಅದನ್ನು ಬಳಸದವರು ಏನೋ ಕಳೆದುಕೊಂಡವರಂತೆ ಕೀಳರಿಮೆಯಿಂದ ಬಾಳುವಂತಾಗುತ್ತಿದೆ. 
ಇದು ಪಾಶ್ಚಾತ್ಯರ ವ್ಯಾಪಾರೀಕರಣದ ಭಾವಧೋರಣೆ. ಆಲೀವ್ ಆಯಿಲ್ ಅನ್ನು ಹೆಚ್ಚು ಪ್ರಚಾರ ಮಾಡುವ ಅವರ ಹಾದಿಯನ್ನೇ ಅನುಸರಿಸಿ ಕೇವಲ ಕೊಬ್ಬರಿ ಎಣ್ಣೆಯೊಂದೇ ಶ್ರೇಷ್ಠ ಎಂದು ಸಾರುತ್ತಿದ್ದೇವೆ. ಈ ದೇಶ ಪ್ರಾಂತ್ಯವಾರು ಆಹಾರ , ಜೀವನಶೈಲಿ ಅಷ್ಟೇ ಏಕೆ ನೈಸರ್ಗಿಕವಾಗಿ ಬರುವ  ಶಾರೀರಿಕ ಪ್ರಕೃತಿಗಳನ್ನೂ ಪ್ರಾಂತ್ಯವಾರು ವಿಭಿನ್ನವಾಗಿ ಇಟ್ಟಿದೆ. ಕನ್ನಡ ಭಾಷೆಯನ್ನೇ ಹತ್ತು ಶೈಲಿಗಳಲ್ಲಿಯೂ , ಮತ್ತು ಒಂದೇ ವಸ್ತುವಿಗೆ ಇದೊಂದೇ ಭಾಷೆಯಲ್ಲಿ ಪ್ರಾಂತ್ಯವಾರು ಬೇರೆ ಬೇರೆ ಶಬ್ದಗಳಿಂದ ಕರೆಯುವಷ್ಟು ವೈವಿದ್ಯಮಯ ಸಹಜ ಬಾಳು ಭಾರತೀಯರದು. 

ಇಂತಹ ವಿಭಿನ್ನ ಶಾರೀರಿಕ ಪ್ರಕೃತಿ ಉಳ್ಳವರಿಗೆ ಒಂದು ನಿರ್ದಿಷ್ಟ ಆಹಾರವೇ ಶ್ರೇಷ್ಠ ಎಂದು ತಜ್ಞರಾದಿ ಸಾಮಾನ್ಯರೂ ಹೇಳುತ್ತಿರುವುದು ಅನುಚಿತ ಎನಿಸುತ್ತಿದೆ. 

ಆತ್ಮೀಯರೇ,
ನೀವು ಹುಟ್ಟಿದ , ಬೆಳೆದು ಬಾಳಿದ ಪ್ರಾಂತ್ಯದಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸುವುದರಿಂದ ಶರೀರ ಆರೋಗ್ಯದಿಂದ ಇರಬಲ್ಲದು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವಲಸೆ ಹೋಗಿ ನೇಲಿಸಿದವರು ಕನಿಷ್ಠ ಶೇಕಡಾ 70 ಭಾಗ ತಮ್ಮ ಮೂಲ ಆಹಾರವನ್ನು ಉಳಿದ 30 ಭಾಗ ತಾವು ನೆಲೆಸಿದ ಪ್ರಾಂತೀಯ ಭಾಗದ ಆಹಾರವನ್ನು ಸೇವಿಸುತ್ತ ನಿಧಾನವಾಗಿ ಆಯಾ ಪ್ರಾಂತೀಯ ಆಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. 
★ ಉದಾಹರಣೆಗೆ:
ಕರಾವಳಿಯ ಜನರ ಪ್ರಧಾನ ಆಹಾರ ಮೀನು, ಅವರು ಒಳನಾಡುಗಳಲ್ಲಿ ನೆಲೆಸಿ ಮೀನನ್ನೇ ಪ್ರಧಾನ ಆಹಾರವಾಗಿ ಸೇವಿಸಿದರೆ ಅವರಿಗೆ ಚರ್ಮದ ರೋಗ, ಮಧುಮೇಹ ಬರುವ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ, ಕರಾವಳಿಯಲ್ಲಿ ಸದಾ ಬೆವರು ಹೊರಹೋಗುತ್ತ ಚರ್ಮದ ಅಡಿ ಸಂಚಯವಾಗುವ ಕ್ಲೇದ ಅಥವಾ ಜಿಡ್ಡು ನಿರಂತರವಾಗಿ ಬೆವರಿನ ಮುಖಾಂತರ ಹೊರಕ್ಕೆ ಹೋಗಿ ಚರ್ಮ ಮತ್ತು ದೇಹ ನೈಸರ್ಗಿಕವಾಗಿ ಶುದ್ಧಿಯಾಗುತ್ತದೆ. ಅದೇ, ಒಳ ಪ್ರಾಂತ್ಯದಲ್ಲಿ ಅಷ್ಟು ಪ್ರಮಾಣದ ಬೆವರು ಹೊರ ಹೋಗದ ಕಾರಣ ಅದು ಶರೀರದಲ್ಲಿ ಸಂಚಯವಾಗಿ ಚರ್ಮದ ಕಾಯಿಲೆಯನ್ನೋ, ಮಧುಮೇಹವನ್ನೋ ತರುತ್ತದೆ.
●●●●

ಈಗ, ಖಾದ್ಯತೈಲಕ್ಕೆ ಬರೋಣ.
ಕರಾವಳಿ ಮಲೆನಾಡಿನ ಜನರಿಗೆ ಶುದ್ಧ ತೆಂಗಿನಎಣ್ಣೆಯು , ಒಳನಾಡಿನವರಿಗೆ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಯೂ, ಉತ್ತರಕರ್ನಾಟಕ ಭಾಗದವರಿಗೆ ಶೇಂಗಾ, ಕುಸುಬೆ ಎಣ್ಣೆಗಳನ್ನೂ ಹಾಗೆಯೇ, ಉತ್ತರಭಾರತಕ್ಕೆ ಹೋದರೆ ಸಾಸುವೆ ಎಣ್ಣೆಯನ್ನು ಬಳಸುವುದು ಅತ್ಯಂತ ಶ್ರೇಯಸ್ಕರವಾಗಿರುತ್ತದೆ. 
ಶತಮಾನಗಳಿಂದ ಈ ಶರೀರಕ್ಕೆ ಸಾತ್ಮ್ಯವಾಗಿರುವ ಎಣ್ಣೆಯನ್ನೇ ಬಳಸುವುದರಿಂದ ಆಯಾ ಹವಾಮಾನಕ್ಕೆ ಸೂಕ್ತವಾಗಿ ಶರೀರವನ್ನು ಸಧೃಢವಾಗಿ ಇಟ್ಟಿರುತ್ತದೆ.

 ಉತ್ತರಕರ್ನಾಟಕದ ಜನರು ಕಡಿಮೆ ಜಿಡ್ಡಿನ ಅಂಶವುಳ್ಳ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅವರ ಶರೀರ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಹಾಗೆಯೇ ಮಲೆನಾಡಿನ ಶೀತ ಭಾಗದ ಜನ ಹೆಚ್ಚು ಜಿಡ್ಡುಳ್ಳ ಶೇಂಗಾ ಎಣ್ಣೆಯನ್ನು ಬಳಸಿದರೆ ತೊಂದರೆ ಉಂಟಾಗುತ್ತದೆ. ಇತ್ತೀಚಿನ ಜನರ ಜೀವನ ಶೈಲಿಯ ಆಧಾರದಲ್ಲಿ ನಾವು ಆಹಾರವನ್ನು ಹೀಗೆ ವಿಂಗಡಿಸಬಹುದು.
ಮಾನವ ಯಾವ ಯಾವ ಪ್ರಾಂತ್ಯದಲ್ಲಿ ನೆಲೆಸಿದರೂ ಅವರು ಅತ್ಯಂತ ಕಡಿಮೆ ಶಾರೀರಿಕ ಶ್ರಮದಿಂದ ಮತ್ತು ಹೆಚ್ಚು ಬೌದ್ಧಿಕ ಸಾಮರ್ಥ್ಯದಿಂದ ದುಡಿಮೆ ಮಾಡುವವರು ಕೊಬ್ಬರಿ ಎಣ್ಣೆಯನ್ನೂ, ಹೆಚ್ಚು ಶಾರೀರಿಕ ಶ್ರಮದಿಂದ ದುಡಿಮೆ ಮಾಡುವವರು ಶೇಂಗಾ, ಸೂರ್ಯಕಾಂತಿ ಮುಂತಾದ ತೈಲಗಳನ್ನು ಬಳಸಬಹುದೆಂದು ಸ್ಥೂಲವಾಗಿ ಹೇಳಬಹುದು. 
ಆದಾಗ್ಯೂ , ಪ್ರಾಂತೀಯಮಟ್ಟದ ಆಹಾರ ಸೇವನೆ ಸರ್ವದಾ ಶ್ರೇಷ್ಠವಾಗಿ ಇರುವುದು.

ಧನ್ಯವಾದಗಳು
•••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline