🙏ಅಮೃತಾತ್ಮರೇ ನಮಸ್ಕಾರ 🙏
🍀🍀🍀🍀🍁🍁🍀🍀🍀🍀
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
05.03.2021
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ*
ಸಂಚಿಕೆ-35
••••••••••••••
✍️: ಇಂದಿನ ವಿಷಯ:
ತಾಂಬೂಲ ಅಮೃತವೇ ವಿಷವೇ?
•••••••••••••••••••••••••••••••••••••••••
🛡 ಸರಿಯಾದ ವಿಧಾನದಲ್ಲಿ ತಾಂಬೂಲ ಸೇವನೆ ಅಮೃತ ಸಮಾನ.
ಆದರೆ,
🛡 ಇಂದಿನ ಕಾಲದಲ್ಲಿ ಬಹುತೇಕರಿಗೆ ತಾಂಬೂಲ ಸೇವನೆ ನಿಶಿದ್ಧ.
☸ ಎಲೆ ಅಡಿಕೆ ಆಯ್ಕೆ ಹೇಗೆ?
★ ತಾಂಬೂಲ(ಎಲೆ):
📖 ತಾಂಬೂಲ ಪತ್ರಂ.........................ಪರ್ಣಮೂಲಂ..... ವಹ್ನಿನಾಶಿನೀ||
- ರಾಜ ನಿಘಂಟು
★ ಅಡಿಕೆ:
📖 ಶುಷ್ಕಂ ಅಗ್ನಿಕರಂ...........ವಹ್ನಿ ನಾಶನಮ್||
-ರಾಜನಿಘಂಟು
💠 ಎಲೆ:
ಪರ್ಣ ಮೂಲ (ಎಲೆಯ ತುಂಬು) ಮತ್ತು ಪರ್ಣಾಗ್ರ(ಎಲೆಯ ತುದಿ) ತೆಗೆಯಬೇಕು ಇದು ದೋಷ ಕಾರಕ .
ಪರ್ಣ ಸಿರಾ ಅಂದರೆ ಎಲೆಯಲ್ಲಿರುವ ಗೆರೆಗಳನ್ನು ತೆಗೆಯಬೇಕು ಇವು ಅಗ್ನಿ ನಾಶ, ಬುದ್ಧಿಶಕ್ತಿ ಕ್ಷೀಣಿಸುತ್ತದೆ.
ಒಣಗಿದ ಎಲೆ/ಹಣ್ಣಾದ ಎಲೆ ಆಯಷ್ಯವನ್ನು ಕಡಿಮೆಮಾಡುತ್ತದೆ.
💠 ಅಡಿಕೆ:
ಒಣ ಅಡಿಕೆ ಜೀರ್ಣಶಕ್ತಿ ವರ್ಧಿಸುತ್ತದೆ.
ಹಳೆಯದಾದ ಅಡಿಕೆ ದೋಷಕರವಾಗಿದೆ.
ಅಡಿಕೆ ಕಷಾಯ ರಸ ಇರುವ ಕಾರಣ ಬೆಲ್ಲದಲ್ಲಿ ಬೇಯಿಸಿ, ತುಪ್ಪದಲ್ಲಿ ಹುರಿದ ಅಡಿಕೆ ಆರೋಗ್ಯಕರ.
➡️ ಸೇರಿಸುವ ಪದಾರ್ಥಗಳು:
📝 ಕರ್ಪೂರ, ಜಾತಿ, ಕಕ್ಕೋಲ, ಲವಂಗ....... ಪತ್ರಂ ತಾಂಬೂಲಜಂ ಶುಭಂ//.....
ಸುಣ್ಣ, ಲವಂಗ, ಕಾಳು ಮೆಣಸು, ಗಂಧ ಮೆಣಸು, ಜಾಜಿಕಾಯಿ, ಪಚ್ಚ ಕರ್ಪೂರ, ಏಲಕ್ಕಿ, ಕಾಚು, ತಕ್ಕಷ್ಟು ಪ್ರಮಾಣದಲ್ಲಿ ಬಳಸಿ.
ತಾಂಬೂಲ ಅಮೃತವೂ ಹೌದು ಮತ್ತು ವಿಷವೂ ಹೌದು❗️
📖 ಆದ್ಯಂ, ವಿಷೋಪಮಂ........... ಸುಧಾತುಲ್ಯಂ ರಸಾಯನಮ್||
-ಭಾವಪ್ರಕಾಶ ನಿಘಂಟು
ಬಾಯಿ ತುಂಬಾ ರಸ ಬರುವವರೆಗೆ ತಾಂಬೂಲವನ್ನು ಅಗೆದು ಉಗಿಯಬೇಕು. ಮೊದಲು ಬಂದ ರಸವನ್ನು ನುಂಗಿದರೆ ದೂಷಿ ವಿಷದಂತೆ ತೊಂದರೆಯನ್ನೂ ಮತ್ತು ಎರಡನೇ ಬಾರಿ ತುಂಬಿದ ರಸವನ್ನು ನುಂಗಿದರೆ ಜೀರ್ಣಕ್ಕೆ ಹಾನಿಯನ್ನು ತರುತ್ತದೆ. ತದನಂತರ ಬರುವ ಅಲ್ಪಲ್ಪ ರಸ ಸೇವಿಸಿದರೆ ಅಮೃತದಂತೆ ಜೀರ್ಣಶಕ್ತಿ ಕೊಡುತ್ತದೆ, ರಸಾಯನದಂತೆ ಕೆಲಸ ಮಾಡುತ್ತದೆ.
🔆 ರಸಾಯನವಾಗಿ ಹೇಗೆ ಕೆಲಸ ಮಾಡುತ್ತದೆ?
ಹಿಂದಿನ ಕಾಲದಂತೆ ಶಾಸ್ತ್ರೋಕ್ತವಾಗಿ ಸ್ನಿಗ್ಧ, ಉಷ್ಣ ಆಹಾರ ಸೇವಿಸುವವರಿಗೆ ಆಹಾರವನ್ನು ಜೀರ್ಣಿಸಲು ಮತ್ತು ಅದರ ಅಂಶಗಳು ಸೂಕ್ಷ್ಮಾತಿಸೂಕ್ಷ್ಮ ಸ್ಥಳಗಳಿಗೆ ಹೋಗಲು ರಕ್ತನಾಳಗಳನ್ನು (ರಸಾಯನಿಗಳ) ಶುದ್ಧ ಮಾಡುತ್ತದೆ. ಅಡಿಕೆಗೆ ವಿಕಾಶಿ (ಧಾತುಗಳನ್ನು ಮೃದುಗೊಳಿಸುವ) ಶಕ್ತಿ ಇರುವುದರಿಂದ ಆಹಾರವನ್ನು ಚನ್ನಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.
🚫 ತಾಂಬೂಲ ಯಾರಿಗೆ ವ್ಯರ್ಜ್ಯ?
📖 ರಕ್ತಂ ಪಿತ್ತ, ಕ್ಷತ ಕ್ಷೀಣ........
ನ ಹಿತಂ...||
-ಸುಶ್ರುತ ಸಂಹಿತಾ
📖 ತಾಂಬೂಲಂ ನಾತಿ ಸೇವೇತ............ಸ್ಯಾದ್.....ಅತಿ ತಾಂಬೂಲ ಭಕ್ಷಾಣತ್||
-ಭಾವಪ್ರಕಾಶ ನಿಘಂಟು
◆ ಜೀವಕೋಶಗಳಲ್ಲಿ ಜಲೀಯ ಅಂಶ ಕಡಿಮೆ ಇರುವವರು
◆ ರಕ್ತ ಪಿತ್ತ (BP, Varicose veins)
◆ ಬಹುಕಾಲದ ಆಮ್ಲಪಿತ್ತ ಇರುವವರು(Severe chronic gastritis)
◆ ಪ್ರಮೋಹ(Anxiety)
◆ ಧಾತು ಕ್ಷಯ ಉಳ್ಳವರು
◆ ಮಕ್ಕಳು
◆ ವೃದ್ಧರು
◆ ಉಪವಾಸ ಇರುವವರು
◆ ಒಣ ಆಹಾರ (ಕಾಫಿ-ಟೀ ,ಬೀಡಿ-ಸಿಗರೇಟು) ಸೇವಿಸುವ ಅಭ್ಯಾಸ ಇರುವವರು
ತಾಂಬೂಲ ಸೇವಿಸಬಾರದು.
ಹಾಗೆಯೇ, ಅತಿಯಾಗಿ ಯಾರೂ ತಾಂಬೂಲ ಸೇವನೆ ಮಾಡಬಾರದು.
💠 ಏಕೆ?
ಅನ್ನನಾಳದಲ್ಲಿ ಜೀವಕೋಶಗಳು ಈಗಾಗಲೇ ಒಣಗಿದ ಅವಸ್ಥೆಯಲ್ಲಿರುತ್ತವೆ. ಅಡಿಕೆ ಅವುಗಳನ್ನು ಮೆತ್ತಗೆ ಮಾಡುತ್ತದೆ ಮತ್ತು ತಾಂಬೂಲಪತ್ರ ತನ್ನ ತೀಕ್ಷ್ಣತೆಯಿಂದ ಭೇದಿಸುತ್ತದೆ.
ಪ್ರಸ್ತುತ ಬಹುತೇಕರ ಆಹಾರ ಶುಷ್ಕವಾಗಿದೆ, ತಾಂಬೂಲ ಸೇವನೆಯಿಂದ
ಇನ್ನಷ್ಟು ಶುಷ್ಕವಾಗಿ ಧಾತುಬಲನಾಶ, ಆಯುಷ್ಯ ಕ್ಷೀಣತೆಗೆ ಕಾರಣವಾಗುತ್ತದೆ.
🔴 ಅಡಿಕೆ ಅಪಾಯಕರ!!!
ಇತ್ತೀಚೆಗೆ ತಂಬಾಕು ಸೇರಿಸಿದ ಅಡಿಕೆ(ಗುಟ್ಕಾ) ವ್ಯಾಪಾರ ಜೋರಾಗಿದೆ. ಇದು ಸಮಾಜವನ್ನು ಹೀರಿ ತಿನ್ನುತ್ತಿರುವುದು. ಇದು ಪ್ರತ್ಯಕ್ಷ ದ್ರೋಹ. ಹರೆಯದ ಮಕ್ಕಳಿಗೆ ಅವರ ಧಾತು ಬೆಳವಣಿಗೆಯ ಹಂತದಲ್ಲಿ ಅಡಿಕೆ ತಂಬಾಕು ತಿನ್ನಿಸಿದರೆ ಇಡೀ ಜೀವನ ಶಕ್ತಿಹಿನವಾಗಿ ಬಾಳಬೇಕಾಗುತ್ತದೆ.
🔄 ಅಡಿಕೆ ಸಂಸ್ಕಾರ ಅತ್ಯಾವಶ್ಯಕ:
ಒಗರುರಸ ಇರುವ ಅಡಕೆಯನ್ನು ನೇರ ಸೇವಿಸಬಾರದು. ಅದನ್ನು ಸಿಹಿ ಪದಾರ್ಥದೊಂದಿಗೆ ಸೇರಿಸಿ
ತುಪ್ಪದಂತಹ ಸ್ನಿಗ್ಧ ದ್ರವ್ಯದಲ್ಲಿ ಸಂಸ್ಕರಿಸಿ ಸೇವಿಸಬಹುದು.
🔺ಹಸಿ ಅಡಿಕೆ ಸರ್ವದಾ ನಿಶಿದ್ಧ🔺
🙏ಧನ್ಯವಾದಗಳು 🙏
•••••••••••
By
ಹೆಚ್.ಬಿ.ಮೇಟಿ
No comments:
Post a Comment