🙏ಅಮೃತಾತ್ಮರೇ ನಮಸ್ಕಾರ 🙏
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌿🌿🌿🌿🌷🌿🌿🌿🌿
••••••••••••••••••••••••••••••••••••••••••
15.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-38
••••••••••••••
✍️: ಇಂದಿನ ವಿಷಯ:
ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು
ಭಾಗ-3
*ವ್ಯಾಯಾಮದ ವಿಧಿ-ನಿಷೇಧಗಳು*
•••••••••••••••••••••••••••••••••••••••••
🌟 ವಯೋ ಬಲ ಶರೀರಾಣೆ...ರೋಗಂ ಆಪ್ನಿಯಾತ್//
-ಸುಶ್ರುತ ಸಂಹಿತಾ
👉 ವ್ಯಾಯಾಮ ಪೂರ್ವ ಗಮನಿಸಬೇಕಾದ ವಿಷಯಗಳು.
ಶರೀರದ ವಯಸ್ಸು, ಬಲ, ವಾಸಿಸುವ ದೇಶ, ಕಾಲ ಇವುಗಳ ಆಧಾರದಲ್ಲಿ ವ್ಯಾಯಾಮ ಮಾಡಬೇಕು.
ಇಲ್ಲದಿದ್ದರೆ ಯಾವ ವ್ಯಾಯಾಮ ಅಮೃತವೋ, ಅದೇ ರೋಗಗಳನ್ನು ತರುತ್ತದೆ.
ಅಂದರೆ ಗಾಭರಿಯಾಗಬೇಕಿಲ್ಲ, ವ್ಯಾಯಾಮ ಎಂದರೆ walking ಅಲ್ಲ, ಯೋಗಾಸನಗಳೂ ಅಲ್ಲ, ನಿತ್ಯವೂ ಶಾರೀರಿಕ ಶ್ರಮದಿಂದ ಮಾಡುವ ನಮ್ಮ ನಮ್ಮ ಕೆಲಸಗಳನ್ನೇ ವ್ಯಾಯಾಮ ಎನ್ನುತ್ತೇವೆ. ಇದನ್ನು ವಯಸ್ಸು, ಬಲ, ದೇಶ, ಕಾಲಗಳ ಆಧಾರದಲ್ಲಿ ಮಾಡಬೇಕು.
⏳ ವಯಸ್ಸು: ಮಧ್ಯಮ ವಯಸ್ಸು ಶಾರೀರಿಕ ಶ್ರಮಗಳಿಗೆ ಸೂಕ್ತ. ಬಾಲ್ಯ ಮತ್ತು ವೃದ್ಧಾವಸ್ಥೆ ಶ್ರಮದ ಕೆಲಸಗಳಿಗೆ ಸೂಕ್ತವಲ್ಲ.
ಬಾಲ್ಯ(12 ವರ್ಷಗಳ ವರೆಗೆ)ದಲ್ಲಿ ಬಲ ಹೆಚ್ಚಿರುವವರಿಂದಲೂ ಸಹ ಅತೀ ಒತ್ತಡ ಹಾಕಿ ಶ್ರಮದ ಕೆಲಸ ಮಾಡಿಸಬಾರದು. ಆಗ ಶರೀರದ ಧಾತುಗಳು ವರ್ಧಮಾನ ಅವಸ್ಥೆ(increasing order)ಯಲ್ಲಿ ಇರುವ ಕಾರಣ, ವೃದ್ಧಿಯಾಗಬೇಕಾದ ಮೂಲ ಧಾತುಗಳೇ ಪಾಕ ವಾಗುತ್ತವೆ ಮತ್ತು ಮುಂದಿನ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ತೀವ್ರ ಹಾನಿಯಾಗುತ್ತದೆ.(ಉದಾ: ಬಾಲ ಕಾರ್ಮಿಕ ಪದ್ಧತಿ, ಜೀತದಾಳುವಿನಂತೆ ದುಡಿವ ಮಕ್ಕಳ ಬೆಳವಣಿಗೆ ಗಮನಿಸಿ)
ಮತ್ತು
ಆ ವಯೋಮಾನದ ಮಕ್ಕಳು ನೈಸರ್ಗಿಕಕ್ಕೆ ಹತ್ತಿರ ಇದ್ದು ಚನ್ನಾಗಿ ಆಟವಾಡುತ್ತಾರೆ ಅದೇ ಅವರಿಗೆ ತಕ್ಕ ವ್ಯಾಯಾಮ, ಹಾಗೆಯೇ ಆಯಾಸವಾದರೆ ಯಾವ ಯೋಚನೆಯೂ ಇಲ್ಲದೇ ವಿಶ್ರಮಿಸುತ್ತಾರೆ(ಎಲ್ಲಿದ್ದರಲ್ಲಿ ನಿದ್ದೆ ಮಾಡುತ್ತಾರೆ) ಹಸಿದರೆ ತಡೆಯದೆ ತಿನ್ನುತ್ತಾರೆ.
ಹಾಗಾಗಿ ವಿಶೇಷವಾಗಿ ಚನ್ನಾಗಿ ಬಲ ಇದ್ದರೂ ಬೆಳವಣಿಗೆಯ ದೃಷ್ಟಿಯಿಂದ ಒತ್ತಡದ ಕಾರ್ಯಗಳನ್ನು ಮಾಡಿಸಲೇಬಾರದು.
12-16 ( *ಕೌಮಾರ*) ವರ್ಷಗಳವರೆಗೆ ಅತ್ಯಲ್ಪ ಜವಾಬ್ದಾರಿಯ ಮತ್ತು ಮಧ್ಯಮ ಶ್ರಮದ ಕೆಲಸಗಳು ಸೂಕ್ತ.
🏋♂ ಬಲ: ಶರೀರದ ಬಲ ಮಧ್ಯಮ ಅಥವಾ ಉತ್ತಮ ವಾಗಿರಬೇಕು ಆಗ ವಯಸ್ಸು ಹೆಚ್ಚಾಗಿದ್ದರೂ ಶ್ರಮದ ಕೆಲಸಗಳನ್ನು ಮಾಡಬಹುದು. ವಯಸ್ಸು ಕಡಿಮೆ ಇದ್ದರೆ ಮಾತ್ರ ವ್ಯಾಯಾಮ ಸಲ್ಲದು.
🏔 ದೇಶ: ದೇಶ ಎಂದರೆ ರಾಷ್ಟ್ರ ಎಂದು ಅರ್ಥವಲ್ಲ, "ಜಾಂಗಲ ದೇಶ" ಅಂದರೆ ಬಿಸಿಲು ಹೆಚ್ಚಿರುವ ಉಷ್ಣ ಪ್ರಧಾನ ಸ್ಥಳ, "ಅನೂಪ ದೇಶ" ಅಂದರೆ ಸದಾ ನೀರು, ನೆರಳು, ಹಸಿರೇ ಇರುವ ಸ್ಥಳ, ಮತ್ತು "ಸಾಧಾರಣ ಸ್ಥಳ"ಗಳೆಂದು ವಿಭಾಗಿಸಿದ್ದಾರೆ.
ಉಷ್ಣ ಸ್ಥಳಗಳಲ್ಲಿ ಆತ್ಯಂತ ಕಡಿಮೆ ವ್ಯಾಯಾಮದಿಂದಲೂ, ಶೀತ ಸ್ಥಳಗಳಲ್ಲಿ ಹೆಚ್ಚು ಮತ್ತು ಸಾಧಾರಣ ಸ್ಥಳಗಳಲ್ಲಿ ಮಧ್ಯಮ ಪ್ರಮಾಣದ ವ್ಯಾಯಾಮ ಮಾಡುವುದರಿಂದಲೇ ಪೂರ್ಣ ಅಥವಾ ಅತಿ ಹೆಚ್ಚು ಪ್ರಮಾಣದ ಲಾಭಗಳಿಸಬಹುದೇ ವಿನಃ ಎಲ್ಲಾ ಸ್ಥಳ, ಎಲ್ಲಾ ಕಾಲ, ಎಲ್ಲಾ ವಯಸ್ಸಿನಲ್ಲೂ ವ್ಯಾಯಾಮವು ಒಂದೇ ರೀತಿಯ ಫಲಿತಾಂಶವನ್ನು ಕೊಡದು.
★ ನೆನಪಿಡಿ:
ಕಿಲೋಮೀಟರ್ ಲೆಕ್ಕದಲ್ಲಿ ವ್ಯಾಯಾಮ ಮಾಡುವುದು ವ್ಯರ್ಥ ಅಥವಾ ಅಪಾಯಕರ.
★★ ವಿಶೇಷ ಗಮನಕ್ಕೆ:
ಇಂದಿನ ಕಾಲಕ್ಕೆ ವಾಯುಮಾಲಿನ್ಯ ನಗರಗಳಲ್ಲಿ ವಾಸಿಸುವವರು ಅದನ್ನು ಶೀತ, ಉಷ್ಣ ಸಾಧಾರಣ ಎಂದು ಗುರುತಿಸುವ ಬದಲು, ಹೀನ ಸ್ಥಳ/ವಾಸಕ್ಕೆ ಅಯೋಗ್ಯ ಸ್ಥಳ ಎಂದು ಪರಿಗಣಿಸಬೇಕು. *ಅಲ್ಲಿ ವ್ಯಾಯಾಮ ಮಾಡಿದರೂ ಪುಪ್ಪುಸಗಳಿಗೆ ಮಲಿನ ಗಾಳಿ ಪ್ರವೇಶಿಸಿ ಅನಾರೋಗ್ಯ ಬರುತ್ತದೆ* ಹಾಗೆಯೇ ವ್ಯಾಯಾಮ ಮಾಡದಿದ್ದರೂ *ಮೇದಸ್ಸು ಹೆಚ್ಚಾಗಿ ರೋಗತರುತ್ತದೆ.* ವಾಯು, ಜಲ ಮಾಲಿನ್ಯಗಳಿರುವ ಸ್ಥಳ ಆರೋಗ್ಯದ ದೃಷ್ಟಿಯಿಂದ ವಾಸಿಸಲು ಅಯೋಗ್ಯ.
💫 ಕಾಲ:
(ಇಲ್ಲಿ ಹೇಳುವ ಕಾಲಗಳು ಭೂಮಿಯ ಉತ್ತರಾರ್ಧದಲ್ಲಿ ವಾಸಿಸುವ ಜನರಿಗೆ ಮಾತ್ರ ಅನ್ವಯಿಸುತ್ತದೆ. ಉದಾ: ಭಾರತ, ಚೀನಾ, ಕೆನಡಾ, ಅಮೆರಿಕಾ.ಸಂ.ಸಂಸ್ಥಾನ. ದಕ್ಷಿಣಾರ್ಧ ಭಾಗದ ಜನರಿಗೂ ಹಾಗೂ ಧೃವ ಪ್ರದೇಶದ ಜನರಿಗೂ ಅನ್ವಯಿಸುವುದಿಲ್ಲ.
ಉದಾ: ಆಸ್ಟ್ರೇಲಿಯಾ, ದಕ್ಷಿಣ ಅಮೇರಿಕಾ- ಬ್ರೆಜಿಲ್ ಮುಂತಾದವು)
● ಕಾಲ-
🌥 ಹೇಮಂತ, ಶಿಶಿರ, ವಸಂತ ಋತು ಅಂದರೆ ಶೀತ ಕಾಲದಲ್ಲಿ (ಅಕ್ಟೊಬರ್ - ಮಾರ್ಚ್):
ಭೂಮಿಯಲ್ಲೂ, ದೇಹದಲ್ಲೂ ಮತ್ತು ವಾತಾವರಣದಲ್ಲೂ ಅಧಿಕ ಶಕ್ತಿ ಇರುವ ಕಾರಣ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವುದರಿಂದ ಮಾತ್ರ ಗರಿಷ್ಠ ಲಾಭಗಳಿಸಬಹುದು. ನಾವು ಅದರ ವಿರುದ್ಧವಾಗಿ ಚಳಿಗೆ ಹೊದ್ದುಕೊಂಡು ಮಲಗುತ್ತೇವೆ! ತೀವ್ರ ಚಳಿ ಇರುವ ಪ್ರದೇಶಗಳಲ್ಲಿ ಮನೆಯೊಳಗೇ ಹೆಚ್ಚು ಹೆಚ್ಚು ಶ್ರಮದ ಕಾರ್ಯಗಳನ್ನು ಮಾಡಬೇಕು.
🌤 ಉಷ್ಣ ಋತುಗಳಲ್ಲಿ (ಏಪ್ರಿಲ್-ಸೆಪ್ಟಂಬರ್):
ಮಧ್ಯಮದಿಂದ ಕಡಿಮೆ ಪ್ರಮಾಣದ ವ್ಯಾಯಾಮ ಮಾಡುವುದರಿಂದ ಮಾತ್ರ ಗರಿಷ್ಠ ಲಾಭ ಪಡೆಯಬಹುದೇ ಹೊರತು ಬೇಗ ಸೂರ್ಯೋದಯ ಮತ್ತು ತಡವಾಗಿ ಸೂರ್ಯಾಸ್ತವಾಗುವ ಕಾರಣ ಬೇಗ ಎದ್ದು ಜಾಗಿಂಗ್ ಮುಂತಾದ ಕೆಲಸ ಮಾಡಿ, ದಿನದ ಕೆಲಸಗಳ ಜೊತೆ ರಾತ್ರಿ ತಂಪಿನ ವಾತಾವರಣಕ್ಕೆ ಹೊರಗಡೆ ವಾಕ್ ಮಾಡಿ ಬಂದು ತಡವಾಗಿ ಮಲಗಿದರೆ ಶರೀರ ಶಿಥಿಲವಾಗುತ್ತದೆ. ಅದರ ಬದಲು ಅಲ್ಪ ಮನೆಗೆಲಸಗಳನ್ನು ಮಾಡಿ, ಮಧ್ಯಾಹ್ನ ಊಟಕ್ಕೆ ಮುನ್ನ ಅರ್ಧಗಂಟೆ ನಿದ್ದೆ ಮಾಡಿ, ಮತ್ತೆ ಹಗುರ ಕೆಲಸ ಮಾಡಿಕೊಂಡು ಬೇಗ ವಿಶ್ರಮಿಸಬೇಕು. ಆಗ ಬಾಧೆ ತಟ್ಟದು, ಶರೀರ ಮೆತ್ತಗಾಗದು.
ಉಷ್ಣ ಕಾಲದ ಅನೇಕ ವೈರಸ್ ರೋಗಗಳು ಆಪ್ ಧಾತುಕ್ಷಯದಿಂದಲೇ (ನಿರ್ಜಲೀಕರಣ/dehydration) ಬರುತ್ತವೆ ಮತ್ತು ಅತ್ಯಂತ ಹಾನಿಮಾಡುತ್ತವೆ. ಶರೀರದ ಆಪ್ ಧಾತು(body fluid) ಚನ್ನಾಗಿಟ್ಟುಕೊಳ್ಳುವುದರ ಲಾಭದ ಮುಂದೆ ರೋಗ ಬಂದಾಗ ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯಂತ ಕನಿಷ್ಟ ಫಲದಾಯಕ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ
No comments:
Post a Comment