✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 25 April 2021

ಕೊರೋನಾ ಸೋಂಕಿನ ಅವಸ್ಥೆಯಲ್ಲಿ "ವಿಶ್ರಾಂತಿಯೇ ಜೀವನ-ಅವಿಶ್ರಾಂತಿಯೇ ಅಪಾಯ"

ಅಮೃತಾತ್ಮರೇ ನಮಸ್ಕಾರ
     ✨✨✨✨✨✨✨✨
 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
         ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
26.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-58
••••••••••••••••
✍️: ಇಂದಿನ ವಿಷಯ:

ಕೊರೋನಾ ಸೋಂಕಿನ ಅವಸ್ಥೆಯಲ್ಲಿ 
"ವಿಶ್ರಾಂತಿಯೇ ಜೀವನ-ಅವಿಶ್ರಾಂತಿಯೇ ಅಪಾಯ" ••••••••••••••••••••••••••••••••••••••••••
 
ಎಲ್ಲರಿಗೂ ಗೊತ್ತಿರುವಂತೆ ಆಮ್ಲಜನಕದ ಕೊರತೆಯಿಂದಲೇ ಮನುಷ್ಯನ ಜೀವ ಅಪಾಯಕ್ಕೆ ತಲುಪುತ್ತಿರುವುದು. ಇಲ್ಲಿ ನಾವು ಗಮನಿಸಲೇಬೇಕಾದ ಮತ್ತು ಅನುಸರಿಸಲೇಬೇಕಾದ  ಕಡ್ಡಾಯ ವಿಷಯವೆಂದರೆ ರಕ್ತದಲ್ಲಿನ ಆಮ್ಲಜನಕದ ಸಾಂದ್ರತೆ. ಇದು ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿ ವಿಶ್ರಾಂತಿಯು ಬಹುಪಾಲು ದೊಡ್ಡದು. 

ಏಕೆಂದರೆ, 
🔷ಮನುಷ್ಯ ಕುಳಿತ ಸ್ಥಾನದಿಂದ ಎದ್ದು ಹತ್ತಿಪ್ಪತ್ತು ಹೆಜ್ಜೆ ಹಾಕಿದರೂ ಶರೀರದ ಮಾಂಸಖಂಡಗಳಿಗೆ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ, ಅದರ ಪೂರೈಕೆಯು ಪುಪ್ಪುಸಗಳನ್ನಲ್ಲದೇ ಬೇರೆ ಅವಯವಗಳಿಂದ ಸಿಗದು. ಹಾಗಾಗಿ, ಸಣ್ಣ ಕೆಲಸವೆಂದು ನಾಲ್ಕು ಹೆಜ್ಜೆ ಹಾಕಿದರೂ ಸಹ ಉಸಿರಾಟದ ಕ್ರಿಯೆ ಹೆಚ್ಚಿ ಹೃದಯದ ಬಡಿತ ಹೆಚ್ಚಿ ಆಮ್ಲಜನಕ ಪೂರೈಕೆಯಾಗಬೇಕಾಗುತ್ತದೆ .

🔷ಜೀರ್ಣಕ್ರಿಯೆಗೆ ಆಮ್ಲಜನಕವು ಹೆಚ್ಚಾಗಿ ಬೇಕಾಗುವುದರಿಂದ ಉದರ ಕರುಳುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತವು ಸಂಚರಿಸಬೇಕಾಗುತ್ತದೆ. ನಾವು ಹೆಚ್ಚು ಅತಿಹೆಚ್ಚು ಶಕ್ತಿಯುತ ಆಹಾರಗಳೆಂದು ಜೀರ್ಣಕ್ರಿಯೆಗೆ ಕಷ್ಟವಾಗುವ ಮಾಂಸಾಹಾರ, ಗೋಧಿ, ಮೈದಾ, ಉದ್ದು, ಎಣ್ಣೆ , ಸಿಹಿಗಳನ್ನು ಸೇವಿಸಿದಲ್ಲಿ ಅತಿ ಹೆಚ್ಚು ಆಮ್ಲಜನಕವನ್ನು ಬಳಸಿ ಪಚನಕ್ರಿಯೆ ನಡೆಯುವುದರಿಂದ ಪುಪ್ಪುಸಕ್ಕೆ ದೊಡ್ಡ ಹೊರೆ ಬೀಳುತ್ತದೆ.

🔷ಶಾರೀರಿಕ ಶ್ರಮ ಅಲ್ಲದಿದ್ದರೂ ಬಹು ಸಮಯ ಮಾತನಾಡುವುದು ಅಂದರೆ, ಸ್ನೇಹಿತರೋ, ಸಂಬಂಧಿಗಳೋ, ಮೊಬೈಲ್ ನಲ್ಲಿಯೂ.... ಹೆಚ್ಚು ಸಮಯ ಮಾತನಾಡುತ್ತಿದ್ದರೆ, ಪ್ರತಿ ಅಕ್ಷರಕ್ಕೂ ಪುಪ್ಪುಸಗಳಿಂದಲೇ ಗಾಳಿಯನ್ನು ಹೊರಹಾಕಬೇಕಾಗುವುದರಿಂದ ಅದಕ್ಕೆ ಒತ್ತಡ ಹೇರುತ್ತೇವೆ ಮತ್ತು ಮಾತನಾಡುವ ಕೆಲಸಕ್ಕೆ ಧ್ವನಿಪೆಟ್ಟಿಗೆಗೆ ಅತೀ ಹೆಚ್ಚು ಆಮ್ಲಜನಕ ಖರ್ಚಾಗುವುದರಿಂದ ಅದನ್ನು ಪೂರೈಸಲು ಪುಪ್ಪುಸಗಳು ಪ್ರಯತ್ನಿಸಬೇಕಾಗುತ್ತದೆ. 

🔷ಶಾರೀರಿಕ ಕೆಲಸಕ್ಕೆ ಆಮ್ಲಜನಕದ ಅವಶ್ಯಕತೆ ಎಷ್ಟಿದೆಯೋ ಅದರ ನಾಲ್ಕುಪಟ್ಟು ಅವಶ್ಯಕತೆ ಮನಸ್ಸಿನ/ಮೆದುಳಿನ ಕೆಲಸಕ್ಕೆ ಬೇಕಾಗುತ್ತದೆ. ಹೀಗೆ ಚಿಂತನೆ, ಓದು, ಚಿಂತೆ, ಭಯ, ಆತಂಕ, ಇವುಗಳೂ ಸಹ ಆಮ್ಲಜನಕದ ಬೇಡಿಕೆಯನ್ನು ಪುಪ್ಪುಸಗಳ ಮೇಲೆ ಇಡುತ್ತವೆ. 

🔷ಧನಾತ್ಮಕವೋ , ಋಣಾತ್ಮಕವೋ ಒಟ್ಟಾರೆ ಉದ್ವೇಗ ಎಂಬುದು ಹೃದಯಬಡಿತವನ್ನು, ಆವೇಗವನ್ನು ಹೆಚ್ಚಿಸುತ್ತದೆ. ಆಗಲೂ ಪುಪ್ಪುಸಗಳ ಮೇಲೆ ಒತ್ತಡ ಬೀಳುವುದು ಅನಿವಾರ್ಯ. 


♦️♦️♦️♦️♦️
ವಿಶೇಷವಾಗಿ ಗಮನಿಸಿ..
ಕೊರೋನಾ ಸೊಂಕಿನಲ್ಲಿ ಹಾನಿಗೊಳಗಾಗುತ್ತಿರುವ ಅಂಗವೇ ಪುಪ್ಪುಸ. ಅದಕ್ಕೆ ಮತ್ತಷ್ಟು ಒತ್ತಡ ಹೇರದಿರಲು, ಪುಪ್ಪುಸಗಳ ವಿಶ್ರಾಂತಿಗೆಂದು ಉಸಿರಾಡದೇ ಇರಲು ಅಸಾಧ್ಯ. ಹಾಗಾಗಿ, ಪುಪ್ಪುಸಗಳಿಂದ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮತ್ತು ಅತ್ಯಗತ್ಯ ಕ್ರಿಯೆಗೆ ಬೇಕಾದಷ್ಟು ಕೆಲಸವನ್ನು ಮಾತ್ರ ಮಾಡಿಸಿಕೊಳ್ಳಿ. 
ಅದಕ್ಕಾಗಿ ಹೀಗೆ ಮಾಡಬಹುದು👇

ಸೋಂಕಿತ ಅವಸ್ಥೆಯಲ್ಲಿ-
◆ಶಾರೀರಿಕ ಶ್ರಮ ಬೇಡ.
◆ಅತಿಯಾದ ಅಥವಾ ಪಚನಕ್ಕೆ ಕಷ್ಟವಾಗುವ ಆಹಾರ ಬೇಡ.
◆ಅತಿಯಾದ ಮಾತುಗಳು ಬೇಡ.
◆ಅತಿಯಾದ ಚಿಂತನೆಗಳು, ಓದು ಮುಂತಾದವುಗಳು ಬೇಡ.
◆ಆತಂಕ ಅಥವಾ ಉದ್ವೇಗಕ್ಕೆ ಒಳಗಾಗುವುದು ಬೇಡ.

⚛️ಆತ್ಮೀಯರೇ,
ದಯಮಾಡಿ ಈ ಮೇಲಿನ ಅಂಶಗಳನ್ನು ಉಪೇಕ್ಷಿಸದೇ ಅನುಸರಿಸಿ, 
ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಿ.
••••••••••••••••••••••••••••••••••••••
      🙏ಧನ್ಯವಾದಗಳು 🙏
••••••••••••••••••••••••••••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline