✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Wednesday, 7 April 2021

ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?

🙏ಅಮೃತಾತ್ಮರೇ ನಮಸ್ಕಾರ 🙏
🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
08.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-47
••••••••••••••
✍️: ಇಂದಿನ ವಿಷಯ:
ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?
•••••••••••••••••••••••••••••••••••••••••

📖 ಯತ್ ದ್ರವ್ಯಂ *ಸ್ನಿಗ್ಧತ್ವಂ,‌ ಖರತ್ವಂ, ಶೋಷಣತ್ವಂ* ತತ್ ಅಸ್ಥಿನಾಂ ವರ್ಧಯಂತಿ |

🖊 ಮೂಳೆ ವರ್ಧಕ ಅಂಶಗಳು:
 ಮೂಳೆ ಉತ್ಪತ್ತಿಗೆ ಬೇಕಾಗುವ ಅಂಶಗಳು ಎರೆಡು- 
1) ತುಪ್ಪ ಸೇವನೆ(ಸ್ನಿಗ್ಧತ್ವಂ)
ಮತ್ತು 
2) ಶಾರೀರಿಕ ಶ್ರಮ(ಖರತ್ವಂ, ಶೋಷಣತ್ವಂ)
ಈ ಎರಡರಲ್ಲಿ ಕೇವಲ ಒಂದು ಮಾತ್ರ ಪಾಲಿಸಿದರೆ ನಮ್ಮ ತೂಕ ಹೆಚ್ಚುತ್ತದೆ ಅಥವಾ ಮೂಳೆ ಸವೆಯುತ್ತದೆ.
ಆದರೆ,

📍ವಿ.ಸೂಚನೆ: ತುಪ್ಪ (ಅಥವಾ ಯಾವುದೇ ಶಕ್ತಿಯುತ ಆಹಾರ) ಸೇವನೆಯ ತಕ್ಷಣ ಶಾರೀರಿಕ ವ್ಯಾಯಾಮ ಮಾಡುವುದು ಬೇಡ, ಅದರಿಂದ ಮೂಳೆ ಉತ್ಪತಿಗೆ ಮೊದಲೇ ಶರೀರದ ಸಂಧಿ, ಮಾಂಸಗಳಲ್ಲಿ ಗಂಟುಗಳಾಗುತ್ತವೆ, ರುಮ್ಯಾಟಿಸಮ್ ಬರಬಹುದು.

•  ಶಾರೀರಿಕ ಕೆಲಸ ಮಾಡದೇ ಮೂಳೆಯ ಬೆಳವಣಿಗೆ ಮತ್ತು ಮಾಂಸಖಂಡಗಳ ಗಟ್ಟಿತನ ಬರುವುದು ಸಾಧ್ಯವೇ ಇಲ್ಲ, ಆದರೆ ಶಾರೀರಿಕ ಶ್ರಮಕ್ಕೆ ಒಂದು ಸೂಕ್ತ ವಿಧಾನ ಅನುಸರಿಸಬೇಕು.

🍯 ತುಪ್ಪಸೇವನೆ ವಿಧಾನ:

•  ಗಟ್ಟಿತುಪ್ಪ ತಿನ್ನಬಾರದು,  ತುಪ್ಪದ ಪಾತ್ರೆಯನ್ನು ನೇರವಾಗಿ ಬೆಂಕಿಗೆ ಇಟ್ಟು ಕರಗಿಸಬಾರದು, ಅದರ ಬದಲು ಬಿಸಿ ಅಥವಾ ಕುದಿಯುವ ನೀರಿಗೆ ಇಟ್ಟು ಕರಗಿಸಿರಿ. ಏಕೆಂದರೆ, ನೀರು 100°c  ಗಿಂತ ಹೆಚ್ಚು ಬಿಸಿಯಾಗುವುದಿಲ್ಲ. ಆಗ ತುಪ್ಪ ಹೊಗೆಯಾಡುವಷ್ಟು ಅಥವಾ ಆವಿಯಾಗುವಷ್ಟು ಬಿಸಿಯಾಗುವುದಿಲ್ಲ. ಹೊಗೆಯಾಡಿದ ತುಪ್ಪವನ್ನು ಚೆಲ್ಲಿಬಿಡುವುದೇ ಲೇಸು. ಹಣ ದಂಡವಾಗುತ್ತದೆ ಆದರೆ ಆರೋಗ್ಯ ಉಳಿಯುತ್ತದೆ.

•  ನಾನು ತುಪ್ಪವನ್ನೇ ತಿನ್ನುವುದಿಲ್ಲ ಎನ್ನುವವರ ಮೂಳೆ ಬೇಗ ಸವೆಯುತ್ತವೆ ಮತ್ತು ಮಜ್ಜಾ ಧಾತು ಒಣಗುವ ಕಾರಣ, ಅದರಿಂದ ಉತ್ಪತ್ತಿಯಾಗುವ ರಕ್ತ ಮತ್ತು ಅದರ ಉಪಧಾತುಗಳಾದ ರಕ್ತನಾಳಗಳೂ ಒಣಗಿ ಹೃದಯ, ಮೆದುಳಿನ, ಕಿಡ್ನಿಯ ತೊಂದರೆಗಳು ಬರುವ ಸಂಭವ ಹೆಚ್ಚು.

•  ವೈದ್ಯರು ಹೇಳುತ್ತಾರೆ ತುಪ್ಪ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಅಪಾಯ! ಎಂದು, ಅದರ ವಿಚಾರವನ್ನು ಮುಂದೆ ತಿಳಿಸುತ್ತೇವೆ. 
ಯಾವ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಹೇಗಿರುವವೋ ಹಾಗೇ ಶರೀರದಲ್ಲಿ ಹೆಚ್ಚಾಗುವುದಿದ್ದರೆ ಎಲ್ಲಾ ರಾಸಾಯನಿಕಗಳನ್ನು ಬಳಸಿ ಎಲ್ಲಾ ರೋಗಗಳನ್ನು ನಿಯಂತ್ರಿಸಬಹುದಿತ್ತು ಅಲ್ಲವೇ⁉️
ಆರೋಗ್ಯಕ್ಕೆ ನಮ್ಮ ಜೀರ್ಣಕ್ರಿಯೆಯೇ ಪ್ರಧಾನ ಪಾತ್ರದಾರಿ ಹಾಗಾಗಿ ಸೇವಿಸಿದ ಅನ್ನ ಜೀರ್ಣವಾಗಲು ಕೆಲಸಗಳನ್ನು ಯಥೇಚ್ಛ ಮಾಡಿ ಮತ್ತು ನಿಮ್ಮ ಮಕ್ಕಳಿಂದ ಹೆಚ್ಚು ಶಾರೀರಿಕ ಶ್ರಮ ಆಗುವ ಆಟಗಳನ್ನು ಆಡಿಸಿ.

•  ಕೊಲೆಸ್ಟ್ರಾಲ್ ಕೊಂಚ ಹೆಚ್ಚಿರುವುದು ಉತ್ತಮ ಅದಕ್ಕೆ ಕೊಬ್ಬನ್ನು ಒಣಗಿಸುವ ಮಾತ್ರೆ ಸೇವಿಸಿದರೆ ರಕ್ತನಾಳ ಒಣಗುವ ಜೊತೆಗೆ ಮೂಳೆ ಸವೆತವು  ಹೆಚ್ಚುತ್ತದೆ.

•  ಕೊಲೆಸ್ಟ್ರಾಲ್  ಕಡಿಮೆ ಮಾಡಿಕೊಳ್ಳಲು ನಿತ್ಯ statin(atorvastatin, rosuvastatin....) ಮಾತ್ರೆ ಸೇವಿಸುವ ಜನರು ದಯವಿಟ್ಟು ಗಮನಿಸಿ.
 ನಿಮ್ಮ ಸಂದು ಕೀಲುಗಳು ಬೇಗ ನೋವು, ಸವೆತ ಬರುತ್ತವೆ. statin ಮಾತ್ರೆಗಳಿಂದ ಅಲ್ಲಿರುವ ನೈಸರ್ಗಿಕ lubricating liquid ಒಣಗುತ್ತದೆ. 

•  ಕೊಲೆಸ್ಟ್ರಾಲ್  ಭೂತಕ್ಕೆ ಹೆದರಿ ಕೊಬ್ಬನ್ನು ಕರಗಿಸುವ ಮಾತ್ರೆ ಸೇವಿಸುವ ಬದಲು, ಶಾರೀರಿಕ ಶ್ರಮದಿಂದ ಕರಗಿಸಿದರೆ ಅದೇ ಕೊಬ್ಬು ಮೂಳೆಯಾಗಿಬಿಡುತ್ತದೆ. ಮಾತ್ರೆಯಿಂದ ಒಣಗಿಸಿದರೆ ಅದೇ ರೋಗವಾಗುತ್ತದೆ ಎರಡನ್ನು ಬಿಟ್ಟು ತುಪ್ಪ ತಿನ್ನುವುದನ್ನೇ ಬಿಟ್ಟರೆ ಮೂಳೆ ಉತ್ಪತ್ತಿ ಸರಿಯಾಗಿ ಆಗುವುದೇ ಇಲ್ಲ, ಆಗ ಎಷ್ಟೇ calcium ಮಾತ್ರೆ ತಿಂದರೂ ಮೂಳೆ ಬೆಳೆಯದು, ಎಷ್ಟೇ iron ಮಾತ್ರೆ ತಿಂದರೂ ರಕ್ತ ಹೆಚ್ಚಾಗದು, ಏನೇ ನಿಗಾವಹಿಸಿದರೂ hypothyroidism ತಪ್ಪಿಸಲಾಗದು, ಎಷ್ಟು ಉಪವಾಸ ಮಾಡಿದರೂ ತೂಕ ಇಳಿಯದು.

•  ಮಜ್ಜಾದಿಂದಲೇ ರಕ್ತಕಣಗಳು ಉಂಟಾಗುವುದರಿಂದ, ತುಪ್ಪ ತಿನ್ನದೆ ಗಟ್ಟಿ ಮೂಳೆ ಮತ್ತು ಸಾರ ಮಜ್ಜಾ ಉತ್ಪತ್ತಿಯಾಗದು. ರಕ್ತೋತ್ಪತಿ ಕ್ಷೀಣಿಸುತ್ತದೆ. ಎಷ್ಟೇ iron ಮಾತ್ರೆ ತಿಂದರೂ ರಕ್ತ ಕಣಗಳೇ ಇಲ್ಲದೆ iron ಹೊರ ಹೋಗುತ್ತದೆ.

•  ರಕ್ತಕಣಗಳಿಗೆ ಶಕ್ತಿ ಇಲ್ಲದೆ ಹೋಗುವುದರಿಂದ ಚಿಕ್ಕ ಚಿಕ್ಕ ರಕ್ತ ಕಣಗಳು ಬಿಡುಗಡೆಯಾಗುತ್ತವೆ, ಇದು ಹೇಗೆಂದರೆ, ಒಂದಿಬ್ಬರು ದೊಡ್ಡವರು ಸುಲಭದಲ್ಲಿ ಮಾಡಿಮುಗಿಸುವ ಕೆಲಸಕ್ಕೆ, ನೂರಾರು ಅತೀ ಪುಟ್ಟ ಮಕ್ಕಳನ್ನು ಕಳಿಸಿದರೆ ಸಾಧ್ಯವಾದೀತೇ? ಈಗ ಹೆಚ್ಚಿನ ಜನರ ರಕ್ತದಲ್ಲಿ ಕಣಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚು, ಗಾತ್ರ ಅತ್ಯಂತ ಸಣ್ಣ ಮತ್ತು immature cells, ಇದೇ ಕಾಲಾಂತರದಲ್ಲಿ hypothyrodism  ಗೆ ತಿರುಗುತ್ತದೆ. ಇದೇ ರಕ್ತಹೀನತೆಯ ಕಾರಣ.
 ಮೇದಸ್ಸಿನಲ್ಲಿ ಜೀರ್ಣಕ್ರಿಯೆ ಕುಂದುವುದರಿಂದ ಉಪವಾಸ ಮಾಡಿದರೂ ತೂಕ ಇಳಿಯದು.

• ತುಪ್ಪ ಎಂದರೆ ಶುದ್ಧ ಹಸುವಿನ ತುಪ್ಪ ಎಂದು ಗ್ರಹಿಸಿ ಬಳಸುವುದು ಶ್ರೇಷ್ಠ.

•  ಜನರು ಅತ್ಯಂತ ಶ್ರದ್ಧೆ ಇಟ್ಟು ಅವರ ನೂರಾರು ಉತ್ಪನ್ನಗಳನ್ನು ಬಳಸುವ ಹೆಸರಾಂತ ತಯಾರಕರೊಬ್ಬರು ತಮ್ಮ ಕಂಪನಿಯಿಂದ "ಶುದ್ಧ ಹಸುವಿನ ತುಪ್ಪ" ಎಂಬ ಹೆಸರಿನಲ್ಲಿ ಕಳಪೆದರ್ಜೆಯ ತುಪ್ಪವನ್ನು ಭಾರತಾದ್ಯಂತ ಮಾರಾಟ ಮಾಡುತ್ತಿದ್ದಾರೆ!! ಆ ಬಗ್ಗೆ ಗಮನವಿರಲಿ.

•  ಶುದ್ಧ ಹಸುವಿನ ತುಪ್ಪ ಸಿಗದಿದ್ದರೆ, ಯೋಚನೆ ಬೇಡ, ಮನೆಯಲ್ಲೇ ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆದು, ಬೆಣ್ಣೆ ತಗೆದು ಕಾಯಿಸಿ ತುಪ್ಪ ಮಾಡಿ ಬಳಸಿ. ಈ ರೀತಿ ಸಂಸ್ಕರಿಸದೇ, ನೇರ ಹಾಲಿನಿಂದಲೇ ಕೊಬ್ಬನ್ನು ತೆಗೆದು ತಯಾರಿಸಿದ ತುಪ್ಪ ಸೇವನೆಯು ಮೂಳೆ, ಮಜ್ಜೆ, ರಕ್ತ ಆಗುವ ಬದಲು ಕೊಬ್ಬನ್ನು  ಹೆಚ್ಚಿಸುತ್ತದೆ. ವೈದ್ಯರು ಹೇಳುವ ದುರ್ಗುಣದ ತುಪ್ಪ ಇದು. ಇದನ್ನು ತುಪ್ಪ ಎನ್ನುವ ಬದಲು *"ಅಸಂಸ್ಕಾರಿತ ಕೊಬ್ಬು"* ಎಂದು ಕರೆಯಬಹುದು .

ಧನ್ಯವಾದಗಳು

No comments:

Post a Comment

MATHS TIME LINE

MATHS TIME LINE https://mathigon.org/timeline