✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday, 16 April 2021

ಕೊರೋನಾ ಭಾಗ-3ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ

ಆತ್ಮೀಯರೇ ನಮಸ್ಕಾರ, 🙏.
***********************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
17.04.2021.                
  ಸಂಚಿಕೆ-52
***********************
✍️: ಇಂದಿನ ವಿಷಯ:- 
ಕೊರೋನಾ ಭಾಗ-3

ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.
***********************
ಮತ್ತೆ ಕರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಲವು ಕಡೆ ಸೀಮಿತವಾಗಿರುವ ನಿರ್ದಾಕ್ಷಿಣ್ಯ ಲಾಕ್ ಡೌನ್ ಎಲ್ಲಕಡೆ ಲಾಕ್ ಡೌನ್ ಮಾಡುವ ಆತಂಕವೂ ಇದೆ.

ಹಾಗಾದರೆ ಪರಿಹಾರವೇನು? ಎಂದರೆ, ನಾವು ಅತ್ಯಗತ್ಯ ಕೆಲಸಗಳಿಗಾಗಿ ಹೊರಹೋಗಲೇಬೇಕಾದ ಪರಿಸ್ಥಿತಿಯಲ್ಲಿ ವೈರಾಣು ಗೊತ್ತಲ್ಲದಂತೆ ಸೋಂಕಲು ಬಂದರೆ  ಅದನ್ನು ನಮ್ಮ ಗಂಟಲಿಂದ ಒಳಗಿಳಿಯದಂತೆ ತಡಡದುಬಿಡೋಣ.


ಆತ್ಮೀಯರೇ,
ಪ್ರಕೃತಿ ನಮ್ಮ ಆಸೆಗಳನ್ನು ಸಂಪೂರ್ಣವಾಗಿ ಪೂರೈಸಲು ಸಮರ್ಥವಾಗಿದೆ ಆದರೆ ದುರಾಸೆಯನ್ನಲ್ಲ.

ಮೊದಲು ಅತ್ಯಾವಶ್ಯಕವಾಗಿ ಬೇಕಾದ ಕೆಲಸಗಳನ್ನು ಮಾತ್ರ ಮಾಡುವ ಸಂಕಲ್ಪ ಮಾಡೋಣ.

ನಮ್ಮದು ಶೇ 75 ಕ್ಕಿಂತ ಹೆಚ್ಚು 
• ಅನಗತ್ಯ ಮಾತು
• ಅನಗತ್ಯ ಓಡಾಟ
• ಅನಗತ್ಯ ದುಡಿಮೆ ಹಿಂದಿನ ಓಟ

ಹೌದೋ ಅಲ್ಲವೋ ಒಮ್ಮೆ ಪರಿಶೀಲಿಸಿ ನೋಡಿಕೊಳ್ಳೋಣ.

*

ಅದೇನೇ ಇರಲಿ,
ಮನುಷ್ಯ ತನ್ನ ಅಗತ್ಯಕ್ಕಾದರೂ ಹೊರ ಬರಲೇ ಬೇಕಲ್ಲ ಆಗ ಈ ಕೆಳಗಿನ ಒಂದಂಶ ಪಾಲಿಸಿದರೆ ವೈರಾಣು ಸೋಂಕನ್ನು ಎಷ್ಟೋ ಪಾಲು ತಡೆದಂತೆಯೇ ಸರಿ.

ಈ ಸಂಧರ್ಭದಲ್ಲಿ-
ಅಮೃತಸಮಾನವಾಗಿ ನಮ್ಮನ್ನು ರಕ್ಷಿಸುವ 2 ದ್ರವ್ಯಗಳೆಂದರೆ:
ತುಳಸಿ ಮತ್ತು ಜೇಷ್ಠ ಮಧು......

ಈ ಎರೆಡೂ ಯಾವುದೇ ತೆರನಾದ ವೈರಾಣುಗಳನ್ನು ತಡೆಯಲು ಅತ್ಯಂತ ಶ್ರೇಷ್ಠ ಎಂದು ಸಂಶೋಧನೆಗಳಿಂದ ದೃಢವಾಗಿದೆ.

ಇವುಗಳನ್ನು ಹೇಗೆ ಬಳಸಬೇಕೆಂದು ನೋಡೋಣ-

ಜೇಷ್ಠಮಧು ಫಾಂಟಾ ತಯಾರಿಕಾ ವಿಧಾನ:
(ನಾಲ್ಕು ಜನರಿಗೆ)

ರಾತ್ರಿ ಮಲಗುವ ಮೊದಲು 150 ಮಿ.ಲೀ ನೀರನ್ನು ಒಲೆಯಮೇಲೆ ಇಟ್ಟು ಅದು ಕುದಿಯಲು ಆರಂಭಿಸಿದೊಡನೆ 25ಗ್ರಾಂ ಜೇಷ್ಠಮಧು ಪುಡಿಯನ್ನು ಹಾಕಿ ಒಲೆಯನ್ನು ಆರಿಸಿ, ಸ್ವಲ್ಪ ಕದಡಿ ಮುಚ್ಚಿಟ್ಟು ಬಿಡಿ.

ಮರುದಿನ ಬೆಳಿಗ್ಗೆ ಅದನ್ನು ಮತ್ತೊಮ್ಮೆ ಕದಡಿ,‌ ಸೋಸಿ ತೆಗೆಯಿರಿ, ಬಂದ ದ್ರವವೇ "ಜೇಷ್ಠಮಧು ಫಾಂಟಾ" ಇದಕ್ಕೆ 10 ತುಳಸಿ ಎಲೆಗಳನ್ನು ಹಾಕಿ ಅದನ್ನುನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಬಳಸಬೇಕು.

ಬಳಸುವ ವಿಧಾನ:

"ಸುಮಾರು 10ಮಿ.ಲೀ. ಬೆಚ್ಚಗಿನ ಫಾಂಟಾವನ್ನು ಬಾಯಿಯಲ್ಲಿ ಹಾಕಿಕೊಂಡು ಗಂಟಲನ್ನು 60-120 ಸೆಕೆಂಡುಗಳ ಕಾಲ ತೊಳೆದುಕೊಳ್ಳಬೇಕು."

ಈ ವಿಧಾನವನ್ನು ಮನೆಯಿಂದ ಹೊರಗೆ ಹೋಗುವಾಗ, ಹೊರಗಿನಿಂದ ಬಂದ ತಕ್ಷಣ ಸಂಜೆ ಮತ್ತು ರಾತ್ರಿ ಮಲಗುವಾಗ ಅನುಸರಿಸಿದರೆ ಯಾವುದೇ ತೆರನಾದ ವೈರಾಣು ಗಂಟಲಿನಿಂದ ಪುಪ್ಪುಸಕ್ಕೆ ಇಳಿಯುವುದೇ ಇಲ್ಲ. ಏಕೆಂದರೆ ಎರೆಡೂ ದ್ರವ್ಯಗಳು ಶ್ರೇಷ್ಠ ವೈರಾಣುನಾಶಕಗಳಾಗಿವೆ ಮತ್ತು ಗಂಟಲಿನ ಕಫವನ್ನು ಛೇದಿಸಿ ಸೋಂಕಿಗೆ ಬೇಕಾದ ಮೂಲ ವಾತಾವರಣವನ್ನೇ ಇಲ್ಲವಾಗಿಸುತ್ತವೆ.

ವಿಶೇಷ ಎಂದರೆ, ಒಂದೊಮ್ಮೆ ಈ ವೈರಾಣುಗಳು ಹೊಟ್ಟೆಯೊಳಕ್ಕೆ ಹೋದರೆ ಅಲ್ಲಿನ ಆಮ್ಲೀಯತೆಗೆ ಸತ್ತುಹೋಗುತ್ತವೆ. 

ವಿಶೇಷ ಸೂಚನೆ:
ಬೆಳಿಗ್ಗೆ ಎದ್ದನಂತರ ಹಲ್ಲುಜ್ಜಲು ಯಾವ ಕಾರಣಕ್ಕೂ ಟೂತ್‌ಪೇಸ್ಟ್ ಬಳಸಬೇಡಿ. ಇದೊಂದು ಅನೇಕ ರೋಗಗಳ ಮೂಲ. ಅದರ ಬದಲು ಬೇವಿನ‌ಕಡ್ಡಿ, ಉಪ್ಪುನೀರಿನಿಂದ ಹಲ್ಲುಜ್ಜಿದರೆ ನೂರು ಪಾಲು ಉತ್ತಮ ದಂತಾರೋಗ್ಯ, ಜೀರ್ಣಶಕ್ತಿಯನ್ನು ಪಡೆಯಬಹುದು. 

*************************

No comments:

Post a Comment

ನೆನಪಿಸಿಕೊಳ್ಳುವ ಹಂತಗಳ ವೈಜ್ಞಾನಿಕ ವಿಶ್ಲೇಷಣೆ......

ನೆನಪಿರಿಸಿಕೊಳ್ಳುವ ಹಂತಗಳು " ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ" ಎಂದು ಚಿಂತಿತರಾಗುವ ಹಲವು ವಿದ್ಯಾರ್ಥಿಗಳಿರುತ್ತ...