🙏ಅಮೃತಾತ್ಮರೇ ನಮಸ್ಕಾರ 🙏
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🔆🔆🔆🔆🌷🔆🔆🔆🔆
••••••••••••••••••••••••••••••••••••••••••
11.04.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-48
••••••••••••••
✍️: ಇಂದಿನ ವಿಷಯ:
ಮೂಳೆಯ ಸಾಮರ್ಥ್ಯ ವೃದ್ಧಿಸುವುದು ಹೇಗೆ? ಭಾಗ -2
•••••••••••••••••••••••••••••••••••••••••
ಮೂಳೆ ಬೆಳವಣಿಗೆಗೆ ತುಪ್ಪ ಸೇವನೆಗೆ ತಿಳಿಸಿದ್ದೆವು, ಆದರೆ ತುಪ್ಪ ಸೇವನೆ ಅಭ್ಯಾಸ ಇಲ್ಲದವರು ತುಪ್ಪಕ್ಕೆ ಪರ್ಯಾಯವನ್ನು ಕೇಳಿದ್ದಾರೆ.
ತುಪ್ಪವು ಅತ್ಯಂತ ಶ್ರೇಷ್ಠ, ಅದಕ್ಕೆ ಅನಿವಾರ್ಯ ಪರ್ಯಾಯ ಎಂದರೆ- ಪ್ರಾಣಿಗಳ(ಆಡು,ಕೋಳಿ) ಮೂಳೆಯೊಳಗಿನ ಮಜ್ಜೆ ಅಥವಾ ಯಕೃತ್ (ಲಿವರ್) ಸೇವಿಸಬಹುದು, ಆದರೆ ಅತಿಯಾದ ಮಸಾಲೆ ಬೆರೆಸಿ ಮತ್ತು ಅತಿ ಪ್ರಮಾಣದಲ್ಲಿ ಸೇವಿಸಬಾರದು. ಶುದ್ಧ ಸಸ್ಯಹಾರಿಗಳಿಗೆ ಕೊಬ್ಬರಿಎಣ್ಣೆ ಶ್ರೇಷ್ಠ, ಅದರ ನಂತರ ಕುಸುಬೆ, ಶೇಂಗಾ, ಸಾಸುವೆ ಎಣ್ಣೆಗಳು ಸೇರುತ್ತವೆ. ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಪರ್ಯಾಯ ಸ್ನೇಹಗಳನ್ನು ಬಳಸಬಹುದು. ಆಲಿವ್ ಎಣ್ಣೆ ಪ್ರಚಲಿತದಲ್ಲಿ ಇದೆಯಾದರೂ ಕೊಬ್ಬರಿಎಣ್ಣೆ ಅದಕ್ಕಿಂತಲೂ ಶ್ರೇಷ್ಠ.
🍃 ಶಾರೀರಿಕ ಶ್ರಮ (ಖರತ್ವಂ ಮತ್ತು ಶೋಷಣತ್ವಂ):
◆ ವ್ಯಾನೇನ ರಸಧಾತುಃ ಹಿ ವಿಕ್ಷೇಪೋ...............ಭಾಷಿತಮ್||
-ಚರಕಸಂಹಿತಾ. ಚಿಕಿತ್ಸಾ ಸ್ಥಾನ-15, (ಗ್ರಹಣೀ(ಅಗ್ನಿ) ಚಿಕಿತ್ಸಾ ಅಧ್ಯಾಯ)
ವ್ಯಾಯಾಮದಿಂದ ಶರೀರದಲ್ಲಿ ಉಷ್ಣತೆ ಉತ್ಪತ್ತಿಯಾಗುತ್ತದೆ, ಅದರಿಂದಲೇ ಉದರದೊಳಗೆ ಹೋದ ಆಹಾರವು ಧಾತುಗಳ ಕಡೆಗೆ ಹರಿಯುತ್ತದೆ (ಬೆವರು ಖರ್ಚಾದಂತೆ ಕರುಳಿನಲ್ಲಿರುವ ಆಹಾರ ಧಾತುಗಳ ಕಡೆಗೆ ಹರಿಯುತ್ತದೆ) ಇದು ಶ್ರೇಷ್ಠ ಉಪಾಯ.
ಸಸ್ಯಗಳಲ್ಲಿ ascent of sap ಪ್ರಕ್ರಿಯೆಯಿಂದ ಬೇರು ನೀರನ್ನು ಹೀರುವಂತೆ.
ಆದರೆ Guttation ಎಂಬ ವಿಧಾನದಿಂದ ತಾನಾಗಿ ಬೇರುಗಳನ್ನು ಅತಿಕ್ರಮಿಸಿ ತುಂಬಿದ ಹೆಚ್ಚಿನ ನಿರು ಉಕ್ಕಿ ಹೊರ ಹರಿಯುವಂತೆ.
ಅಂದರೆ, ಹೆಚ್ಚಾಗಿ ತಿಂದ ಅಥವಾ ಶಾರೀರಿಕ ಶ್ರಮವಿಲ್ಲದೇ ತಿಂದ ಆಹಾರವು ಕರುಳಿನಿಂದ ಕೊಬ್ಬಿನ ಅಂಶದವರೆಗೆ ಬಂದು ನಿಂತುಬಿಡುತ್ತದೆ ಅದು ಮೂಳೆಯಾಗಿ ಬದಲಾಗುವುದು ಅತ್ಯಲ್ಪ ಪ್ರಮಾಣ ಅಷ್ಟೇ.
• ವ್ಯಾಯಾಮ (ಶಾರೀರಿಕ ಶ್ರಮ)ದಿಂದ ಖರ್ಚಾದ ಶಕ್ತಿಯು ಉಷ್ಣತೆಯನ್ನು ಬಿಡುಗಡೆಗೊಳಿಸಿ ರಕ್ತವನ್ನು ಖಾಲಿಮಾಡುತ್ತದೆ. ಯಾವುದೇ ಅಂಶ ರಕ್ತದಲ್ಲಿ ಕಡಿಮೆ ಆದರೆ ಮಾತ್ರ ಉದರದಲ್ಲಿನ ಆಹಾರ ರಕ್ತಕ್ಕೆ ಬರುತ್ತದೆ. ಇಲ್ಲದಿದ್ದರೆ ಅಲ್ಲಿಯೇ ಶೇಖರಣೆಗೊಂಡು ಕಾಲಾಂತರದಲ್ಲಿ ಅನಗತ್ಯ ಕೊಬ್ಬಿನ ಅಂಶವಾಗಿ ಬೆಳೆಯುತ್ತದೆ.
• ಆಹಾರ ಸೇವನೆಯ ಕನಿಷ್ಠ 45 ನಿಮಿಷ, ಗರಿಷ್ಟ 90 ನಿಮಿಷಗಳವರೆಗೆ ಬೆವರು ಬರುವಂತೆ ವ್ಯಾಯಾಮ ಮಾಡುವುದು, ಲೈಂಗಿಕಕ್ರಿಯೆ ನಡೆಸುವುದು, ದೂರದ ಪ್ರಯಾಣ ಮಾಡುವುದು, ಓಡುವುದು ಸರ್ವಥಾ ಅನರ್ಥಕಾರಿ. ಊಟ ಮಾಡಿ ಓಡುವವನನ್ನು ಮರಣವೇ ಹಿಂಬಾಲಿಸುತ್ತದೆ ಎಂದಿದ್ದಾರೆ ಆಚಾರ್ಯರು. ಏಕೆಂದರೆ ನಾವು ಸೇವಿಸುವ ಆಹಾರ ಕರುಳಿನಲ್ಲಿ, ಯಕೃತ್ತಿನಲ್ಲಿ ಸರಿಯಾಗಿ ಸಂಸ್ಕಾರವಾಗದೇ ರಕ್ತಕ್ಕೆ ಸೇರಿದರೆ ದೀರ್ಘಕಾಲೀನ ಮತ್ತು ಅಪಾಯಕಾರಿ ರೋಗಗಳಿಗೆ ಎಡೆಮಾಡುತ್ತದೆ.
• ಬೆವರು ಬರುವಂತೆ ಕೆಲಸ ಮಾಡುವುದರಿಂದ ಆ ಬೆವರಿನ ಮೂಲಕ ತ್ಯಾಜ್ಯ ಕೊಬ್ಬು(ಕ್ಲೇದ) ಹೊರ ಹೋಗಿ ಬಿಡುತ್ತದೆ. ಉಳಿದ ಸಾರ ಮೇದಸ್ಸು ಗಟ್ಟಿಗೊಳ್ಳುತ್ತಾ ಸದೃಢ ಮೂಳೆ ಮತ್ತು ಮಜ್ಜಾ ಉತ್ಪತ್ತಿಯಾಗುತ್ತದೆ.
• ಅತೀ ಸಾಹಸ ಮಾಡುವವರಿಗೆ, ಹಸಿದ ಮೇಲೂ ಊಟಮಾಡದೆ ಕೆಲಸ ಮಾಡುವವರಿಗೆ ಸಾರ ಮೇದಸ್ಸು ಕರಗಿ ಶಕ್ತಿ ಕೊಡುತ್ತಿರುತ್ತದೆ. ಅದು ಇಲ್ಲಿಯೇ ಕರಗಿದರೆ ಮೂಳೆ ತುಂಬುವುದು ಸಾಧ್ಯವಾಗದೇ ಸವಕಳಿ ಹೆಚ್ಚುತ್ತದೆ.
• ನಾವು ನಿತ್ಯವೂ 10-20 ಬಾರಿ ಮನೆಯ ಮೇಲೆ ಹತ್ತಿ ಇಳಿಯುವುದೇ ಸಾಕಷ್ಟು ವ್ಯಾಯಾಮವಾಗುತ್ತದೆ ಎನ್ನುವರಿದ್ದಾರೆ. ಅದರಿಂದ ಮೊಣಕಾಲಿನ ಕೀಲುಗಳಿಗೆ ( knee joint ) ತುಂಬಾ ತೊಂದರೆಯಾಗುತ್ತದೆ. ಶರೀರದ ಇತರೆ ಮೂಳೆಗಳು ಚನ್ನಾಗಿದ್ದರೂ ಮೊಣಕಾಲು ಸವೆದು ಹೋಗುತ್ತದೆ. ಮಹಡಿ ಮನೆ ವಾಸ ಲಿಫ್ಟ್ ಇದರಷ್ಟೇ ಯೋಗ್ಯ. ಆಗೊಮ್ಮೆ ಈಗೊಮ್ಮೆ ಹತ್ತಿಳಿಯುವುದು ಆಗಬಹುದು. ಹಾಗೆಯೇ ವ್ಯಾಯಾಮಕ್ಕೆ ಬ್ಯಾಟ್ಮಿಂಟನ್ ಆಯ್ಕೆ ಮಾಡಿಕೊಂಡವರ ಎರಡೂ ಮೊಣಕಾಲು ಮತ್ತು ಭುಜ ಬಹು ಬೇಗ ಹಾಳುಮಾಡಿಕೊಂಡು ಚಿಕಿತ್ಸೆಗೆ ಬರುವವರನ್ನು ನಮ್ಮಲ್ಲಿ ನಿತ್ಯವೂ ನೋಡುತ್ತೇವೆ.
• ಯೋಗ ಮಾಡುವವರು, ಜಾಗಿಂಗ್, ವಾಕಿಂಗ್ ಮುಂತಾದ ಕಸರತ್ತಿನ ಕೆಲಸದವರು ಬೆಳಿಗ್ಗೆ ಎದ್ದಾಕ್ಷಣ ಭೇದಿ ಸರಿಯಾಗಿ ಆಗಿದ್ದರೆ ಮಾತ್ರ ಇವುಗಳನ್ನು ಮಾಡಿ ಇಲ್ಲದಿದ್ದರೆ ಒಳಗಿರುವ ಕಲ್ಮಶವು ಗ್ಯಾಸ್ ರೂಪದಲ್ಲಿ ಇಡೀ ರಕ್ತನಾಳಗಳ ವ್ಯವಸ್ಥೆಯನ್ನೆ ಹಾಳುಮಾಡಿಬಿಡುತ್ತದೆ.
• ಕ್ಯಾಲ್ಸಿಯಂ ಮಾತ್ರೆ ನಿತ್ಯ ಸೇವಿಸುವವರು ಅದರ ಅಪಾಯವನ್ನು ಮರೆಯದೆ ತಿಳಿದುಕೊಳ್ಳಿ.
• ಒಟ್ಟಾರೆಯಾಗಿ ಸ್ನಿಗ್ಧ ಆಹಾರ, ತಾಜಾ ಆಹಾರ, ಸೇವಿಸಿದ ನಂತರ 45-90 ನಿಮಿಷ ಹಾಯಾಗಿ ಕುಳಿತಿರಿ ನಂತರ ಶ್ರಮವಹಿಸಿ ಕೆಲಸ ಮಾಡಿರಿ.
• ಕರುಳಿನ ಒಳಗೆ ಆಹಾರವಾಗಲೀ, ನೀರಾಗಲೀ, ಮಲ-ಮೂತ್ರವಾಗಲೀ ಇರದೇ ಸ್ವಚ್ಛವಾಗಿರುವ ಸಮಯದಲ್ಲಿ ಪ್ರತಿದಿನ ಬಿಡುವು ಮಾಡಿಕೊಂಡು ಶಾರೀರಿಕ ಶ್ರಮದ ಕಾರ್ಯಗಳನ್ನು ಮಾಡುವುದು ಸರ್ವಶ್ರೇಷ್ಠ.
🙏ಧನ್ಯವಾದಗಳು 🙏
•••••••••••••
No comments:
Post a Comment