✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday 22 July 2021

ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*

*ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*
====================
*ದೇಶದಲ್ಲಿ ಕೇಂದ್ರ ಸರ್ಕಾರದ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರಾಗಿ ನಿವೃತ್ತರಾದವರಿಗೆ ಕೇಂದ್ರ ಸರಕಾರವೂ, ಅದೇರೀತಿ ರಾಜ್ಯ ಸರಕಾರಿ ನೌಕರರು ಹಾಗೂ ರಾಜ್ಯ ಸರಕಾರಿ ನೌಕರರಾಗಿ ನಿವೃತ್ತಿ ಆದವರಿಗೆ ಆಯಾಯಾ ರಾಜ್ಯ ಸರಕಾರಗಳು ತುಟ್ಟಿ ಭತ್ಯೆ ಪ್ರಕಟಿಸುವುದು ಒಂದು ನಿಯಮಿತ ಪದ್ಧತಿ.  ಸೇವೆಯಲ್ಲಿ ಇರುವ ನೌಕರರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DA ಅಂತಲೂ, ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DR ಎಂದೂ ಕರೆಯಲಾಗುತ್ತದೆ. DA ಅಂದರೆ Dearness Allowance ಎಂದೂ, DR ಅಂದರೆ Dearness Relief ಎಂದೂ ಕರೆಯಲಾಗುತ್ತದೆ*. 

1) *ತುಟ್ಟಿ ಭತ್ಯೆ(DA) ಎಂದರೇನು* ?
ಪ್ರಶ್ನೆಯಲ್ಲಿಯೇ ಉತ್ತರವೂ ಇದೆ. ತುಟ್ಟಿ ಎಂದರೆ ಸಾಮಾನ್ಯ ಅರ್ಥದಲ್ಲಿ ಹೆಚ್ಚಾಗು, ಅಧಿಕವಾಗು, ಬೆಲೆ ಏರಿಕೆಯಾಗು ಎಂದಾಗುತ್ತದೆ. ಅಂದರೆ, ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ತೊಂದರೆಗೆ ಒಳಗಾಗದೇ ನೆಮ್ಮದಿಯ ಬದುಕು ಸಾಗಿಸುವುದರ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ಖುಷಿಯಿಂದ ಮಾಡಲಿ ಎನ್ನುವ ಉದ್ದೇಶದಿಂದ ಸರಕಾರಗಳು ಒದಗಿಸುವ ಆರ್ಥಿಕ ಸೌಲಭ್ಯ ಎಂದು ಸರಳವಾಗಿ ಹೇಳಬಹುದು. 

2) *ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಯಾವಾಗ ಪ್ರಕಟಿಸಲಾಗುತ್ತದೆ* ?
ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಕ್ಯಾಲೆಂಡರ್ ವರ್ಷದ ಜನವರಿ ಹಾಗೂ ಜುಲೈ ತಿಂಗಳುಗಳಲ್ಲಿ ಪ್ರಕಟಿಸಲಾಗುತ್ತದೆ. ಒಂದುವೇಳೆ ಬೇರೆ ತಿಂಗಳುಗಳಲ್ಲಿ ಪ್ರಕಟಿಸಿಸಿದರೂ, ಜನವರಿ ಅಥವಾ ಜುಲೈ ತಿಂಗಳುಗಳಿಂದಲೇ ಅನ್ವಯ ಆಗುವಂತೆ ಲೆಕ್ಕಾಚಾರ ಮಾಡಲಾಗುತ್ತದೆ. ಹಾಗಾದಾಗ ಬಾಕಿ ಪಾವತಿ ಮಾಡಿರುವುದೂ ಇದೆ.

3) *ತುಟ್ಟಿ ಭತ್ಯೆ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತದೆಯೆ* ?
ಪ್ರಾರಂಭದಲ್ಲಿ ತುಟ್ಟಿ ಭತ್ಯೆ ಯ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತಿತ್ತು. ನಂತರದ ದಿನಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರಗಳ(NSC) ರೂಪದಲ್ಲಿ ಕೊಡಲಾಯಿತು. ಹಾಗೆ ಕೊಟ್ಟಾಗ ನೌಕರರಿಗೆ ಪೇಪರ್ ಬೆನಿಫಿಟ್ ಸಿಗುತ್ತಿತ್ತು. ಸರಕಾರಕ್ಕೆ ಹಣ ಸಿಗುತ್ತಿತ್ತು. ಆ ಹಣವನ್ನು ಸರಕಾರಗಳು ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ತುಟ್ಟಿ ಭತ್ಯೆ ಬಾಕಿಯನ್ನು ಪುನಃ ನಗದು ರೂಪದಲ್ಲಿ ಕೊಡಲಾಗುತ್ತಿದೆ.           
                                                                                                    4) *ತುಟ್ಟಿ ಭತ್ಯೆ (DA/DR) ಯನ್ನು ಯಾವ ಲೆಕ್ಕಾಚಾರದಲ್ಲಿ ಪ್ರಕಟಿಸಲಾಗುತ್ತದೆ* ?
ಕರ್ನಾಟಕ ರಾಜ್ಯ ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ (DA/DR) ಯನ್ನು 1-1-1987ಕ್ಕೂ  ಮೊದಲು ನೌಕರನ ಅಥವಾ ನಿವೃತ್ತ ನೌಕರನ ಮೂಲ ವೇತನಕ್ಕೆ ಅನುಗುಣವಾಗಿ ರೂಪಾಯಿಗಳ ಲೆಕ್ಕಾಚಾರದಲ್ಲಿ ಅಂದರೆ, 2ರೂ, 5ರೂ, 8ರೂ, 10 ರೂ, 15ರೂ........... ಹೀಗೆ ಪ್ರಕಟ ಮಾಡುತ್ತಿತ್ತು. ಅಷ್ಟೇ ಅಲ್ಲ ಹಾಗೆ ಪ್ರಕಟ ಮಾಡುವಾಗ  ಅದಕ್ಕೆ ಕಾಲಮಿತಿ ಏನೂ ಇರಲಿಲ್ಲ. ವರ್ಷಕ್ಕೆ ಹಲವಾರು ಬಾರಿ, ಕೆಲವೊಮ್ಮೆ ಒಂದೇ ತಿಂಗಳಲ್ಲಿ  ಎರಡು ಮೂರು ಬಾರಿಯೂ DA / DR ಪ್ರಕಟಿಸಿರುವ ಉದಾಹರಣೆಗಳೂ ಇವೆ. 

ರಾಜ್ಯದ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಕಾಲಕಾಲಕ್ಕೆ ಪ್ರಕಟಿಸಿ , ಅದಕ್ಕೆ ಅಗತ್ಯವಾದ ಹಣಕಾಸು ಬಿಡುಗಡೆ ಮಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಅದಕ್ಕಾಗಿ ಯಾವಕಾಣಕ್ಕೂ ಕೇಂದ್ರ ಸರಕಾರದ ನಿಲುವು ನಿರೀಕ್ಷಿಸ ಬೇಕಾದ ಅಗತ್ಯ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಗುಂಡೂರಾಯರು  ವಿಧಾನಸಭೆಯಲ್ಲಿ ಪ್ರಕಟಿಸಿದ್ದರು ಎಂಬುದು ಸದನದ ದಾಖಲೆಗಳಲ್ಲಿ ದಾಖಲಾಗಿದೆ .

1-1-1987 ರ ನಂತರ ಕರ್ನಾಟಕ ರಾಜ್ಯ ಸರ್ಕಾರ ತನ್ನ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ  (%) ಶೇಕಡಾವಾರು ಪ್ರಮಾಣದಲ್ಲಿ ಪ್ರಕಟಿಸಲು ಆರಂಭಿಸಿತು. ನಂತರ ಅದೇ ಒಂದು ಸಹಜ ಕ್ರಿಯೆಯೇ ಆಗಿ ನಡೆದು ಬಂದಿದೆ. 
1-1-1987 ರಲ್ಲಿ ರಾಜ್ಯ ಸರ್ಕಾರ ತನ್ನ ನೌಕರನ ಮೂಲ ವೇತನಕ್ಕೆ 4% DA ಪ್ರಕಟಿಸಿತು. ಹಾಗೆ ಕಾಲಾನುಕಾಲಕ್ಕೆ ಪ್ರಕಟಿಸಿದ DA 1998 ರ ವೇಳೆಗೆ 178% ಆಗಿತ್ತು. ಅಂದರೆ, ಆಗ ನೌಕರನ ಸಂಬಳ 1000 ರೂಪಾಯಿಗಳು ಇತ್ತು ಎಂದರೆ, ಅವನು/ಳು ಪಡೆಯುತ್ತಿದ್ದ DA 1780 ರೂಪಾಯಿಗಳಾಗುತ್ತಿತ್ತು. ಅಂದರೆ ಅವನ/ಳ ಮೂಲ ವೇತನ 1000 + 1780(DA) = 2780 ರೂಪಾಯಿಗಳಾಗುತ್ತಿತ್ತು. 

5) *ಕರ್ನಾಟಕ ರಾಜ್ಯದಲ್ಲಿ ತುಟ್ಟಿ ಭತ್ಯೆಯ ಬೆಳವಣಿಗೆ ಹೇಗೆ ಬೆಳೆದು ಬಂದಿದೆ* ?
ಕರ್ನಾಟಕ ರಾಜ್ಯದಲ್ಲಿ  1-4-1998ರಲ್ಲಿ ನೌಕರನ ಮೂಲ ವೇತನ ಹಾಗೂ ಅದಕ್ಕೆ ಪಡೆಯುತ್ತಿದ್ದ 178% ತುಟ್ಟಿ ಭತ್ಯೆಯನ್ನು ವಿಲೀನ ಮಾಡಿ ಅದನ್ನು ನೌಕರನ ಮೂಲ ವೇತನವನ್ನಾಗಿ ಮಾಡಲಾಯಿತು. ಆಗ ಆದ ಮೂಲ ವೇತನಕ್ಕೆ 16% ತುಟ್ಟಿ ಭತ್ಯೆ ಪ್ರಕಟಿಸಲಾಯಿತು.  ಹಾಗೆಯೇ ಕಾಲಾನಂತರದಲ್ಲಿ ಸರಕಾರ ಪ್ರಕಟಿಸಿದ ತುಟ್ಟಿ ಭತ್ಯೆಯು  2006ರ ಜುಲೈ ವೇಳೆಗೆ 79% ತಲುಪಿತ್ತು. 
2006ರ ಜುಲೈ ತಿಂಗಳಲ್ಲಿ 70% ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನ ಮಾಡಿದ ನಂತರ ಆದ ಮೂಲ ವೇತನಕ್ಕೆ 2.625% ತುಟಿ ಭತ್ಯೆ ಪ್ರಕಟಿಸಲಾಯಿತು. 
ಅನಂತರದ ದಿನಗಳಲ್ಲಿ ಪ್ರಕಟಿಸಿದ ತುಟ್ಟಿ ಭತ್ಯೆ 2012ರ ವೇಳೆಗೆ 76.75% ತಲುಪಿತು. 
ಆಗ ಆ 76.75% ತುಟ್ಟಿ ಭತ್ಯೆಯನ್ನು ನೌಕರನ/ಳ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನದ ನಂರತ ಆದ ಮೂಲ ವೇತನಕ್ಕೆ  4% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು.  ಅನಂತರ ಕಾಲಕಾಲಕ್ಕೆ ಪ್ರಕಟಿಸಿದ ತುಟ್ಟಿ ಭತ್ಯೆ 2017ರ ಜುಲೈ ವೇಳೆಗೆ 45.25% ಆಯಿತು. 2017ರಲ್ಲಿ ಆ 47.25% ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. 
ಆಗ ಆದ ಮೂಲ ವೇತನಕ್ಕೆ 2018ರ ಜನವರಿ ತಿಂಗಳಿನಿಂದ 1.75% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಪ್ರಕಟವಾದ ತುಟ್ಟಿ ಭತ್ಯೆ 2019ರ ಜುಲೈ ವೇಳೆಗೆ 11.25% ಆಯಿತು. 
ಅಲ್ಲಿಂದ ಕರೋನ ಕಾರಣಕ್ಕಾಗಿ  ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ ಎನ್ನುವ ಕಾರಣ ಮುಂದಿಟ್ಟು  ಸರಕಾರ 3 DAಗಳನ್ನು ಪ್ರಕಟಿಸುವುದೇ ಇಲ್ಲ ಎನ್ನುವ ಕೇಂದ್ರ ಸರಕಾರದ  ಆದೇಶವನ್ನು ರಾಜ್ಯ ಸರಕಾರವೂ ಹೊರಡಿಸಿದೆ. 
ಕಳೆದ ಒಂದೂವರೆ ವರ್ಷದಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರುತ್ತಲೇ ಇವೆ. ಆದರೂ ಸರಕಾವೂ DA ಪ್ರಕಟಿಸಿಲ್ಲ.  ಇದರಿಂದಾಗಿ ರಾಜ್ಯದ ಪ್ರತಿ ನೌಕರರಿಗೆ ಸದ್ಯಕ್ಕೆ ಸಾವಿರಾರು ರೂಪಾಯಿಗಳ ನಷ್ಟ. ಸೇವಾವಧಿ ಪೂರ್ತಿ ಹಾಗೂ ನಿವೃತ್ತಿ ಜೀವನ ಮತ್ತು ಜೀವನ ಪೂರ್ತಿ ಲೆಕ್ಕ ಮಾಡಿದರೆ ಲಕ್ಷಾಂತರ ರೂಪಾಯಿಗಳ ನಷ್ಟ  ಆಗತ್ತದೆ.

6) *ತುಟ್ಟಿ ಭತ್ಯೆಯನ್ನು ಯಾವ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ* ?
ತುಟ್ಟಿ ಭತ್ಯೆಯನ್ನು AICPI ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. 

7) *AICPI ಎಂದರೇನು* ? 
AICPI ಎಂದರೆ All India Consumer Price Index ಎಂದರ್ಥ. ಕನ್ನಡದಲ್ಲಿ ಅದನ್ನು ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕ ಎನ್ನುತ್ತಾರೆ. 

8) *AICPIಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ* ?
AICPIಯನ್ನು ಜೀವನ ಅವಶ್ಯಕ ವಸ್ತುಗಳ ಬೆಲೆಗಳ ಏರಿಕೆಯನ್ನು ಒಂದು ವರ್ಷದಲ್ಲಿ ಲೆಕ್ಕಾಚಾರ ಮಾಡಿ ಅದರ ಸರಾಸರಿಯನ್ನು ಗುರುತಿಸುವ ಮೂಲಕ ಮಾಡಲಾಗುತ್ತದೆ. 
ಉದಾಹರಣೆಗೆ 2015ರ ಜನವರಿಯಿಂದ - ಡಿಸೆಂಬರ್ ವರೆಗಿನ ಒಂದು ವರ್ಷದ ಅವಧಿಯಲ್ಲಿ ಜೀವನ ಅವಶ್ಯಕ ಸಾಮಾಗ್ರಿಗಳ ಬೆಲೆ ಏರಿಕೆಯ ಒಟ್ಟು ಮೊತ್ತ 3137.12 ರೂಪಾಯಿಗಳಾಗಿತ್ತು.
 ಆ 3137.12 ÷12 = 261.41 ಆಗಿತ್ತು. ಅದರ ಆಧಾರದಲ್ಲಿ  2016ರ ಜನವರಿ ತಿಂಗಳಲ್ಲಿ DA ಪ್ರಕಟಿಸಲಾಯಿತು. ಅಂತೆಯೇ 2016ರ DA ಪ್ರಕಟಿಸುವಾಗ ಜೂನ್ 2015 ರಿಂದ ಮೇ 2016 ರ ವರೆಗಿನ ಒಂದು ವರ್ಷದ ಅವಧಿಯಲ್ಲಿನ ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಯಿತು. ಪ್ರತಿ ಬಾರಿ DA ಪ್ರಕಟ ಮಾಡುವಾಗಲೂ ಇದೇ ಪ್ರಕ್ರಿಯೆ ಮಾಡಲಾಗುತ್ತದೆ.

9) *DA ಪ್ರಕಟಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದೇ ಅಥವಾ ರಾಜ್ಯ ಸರಕಾರದ್ದೇ* ? 
ಕೇಂದ್ರ ಸರಕಾರಿ ನೌಕರರಿಗೆ ಕೇಂದ್ರ ಸರಕಾರವೂ, ರಾಜ್ಯ ಸರಕಾರಿ ನೌಕರರಿಗೆ ರಾಜ್ಯ ಸರಕಾರವೂ ಪ್ರತ್ಯೇಕವಾಗಿ DA ಪ್ರಕಟಿಸುತ್ತವೆ. ರಾಜ್ಯ ಸರಕಾರಿ ನೌಕರರಿಗೆ DA ಪ್ರಕಟಿಸುವುದಕ್ಕಾಗಿ ಕೇಂದ್ರ ಸರಕಾರ ಯಾವುದೇ ರೀತಿಯ ಹಣಕಾಸು ನೆರವು ನೀಡುವ ಪದ್ಧತಿ ಇಲ್ಲವೇ ಇಲ್ಲ. ..

10) *ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದೇ* ? 
ಇಲ್ಲ. ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದಿಲ್ಲ. AICPI ಒಂದೇ ಆದರೂ, DA ಪ್ರಕಟಿಸುವಲ್ಲಿ ತಾರತಮ್ಯ ಇದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ  ಮೂಲ ವೇತನಕ್ಕೆ ಹೋಲಿಸಿದರೆ ಕೇಂದ್ರ ಸರಕಾರಿ ನೌಕರರ ಮೂಲ ವೇತನ ಬಹಳ ಹೆಚ್ಚು. ಹಾಗಾಗಿ ಕೇಂದ್ರ ಸರಕಾರವು ಸ್ವಲ್ಪವೇ DA ಪ್ರಕಟಿಸಿದರೂ ಆ ನೌಕರರಿಗೆ ಹೆಚ್ಚು ಹಣ ದೊರೆಯುತ್ತದೆ. ರಾಜ್ಯ ಸರಕಾರಿ ನೌಕರರಿಗೆ ಮೂಲ ವೇತನ ಕಡಿಮೆ ಇರುವುದರಿಂದ ಕೇಂದ್ರದ  1% DA = ರಾಜ್ಯದ 0.944% ನಿಯಮವನ್ನು ಕರ್ನಾಟಕ  ರಾಜ್ಯ ಸರಕಾರ ಅನುಸರಿಸುತ್ತಿರುವುದರಿಂದ ರಾಜ್ಯದ ನೌಕರರಿಗೆ "ಕೈ ಹೊಡೆತ ಕಂಬದ ಬಡಿತ" ಎನ್ನುವ ಗಾದೆ ಮಾತಿನಂತೆ ಎರಡೆರಡು ರೀತಿಯಲ್ಲಿ ಅನ್ಯಾಯಗಳು ಆಗುತ್ತಿವೆ.

11)  *ಕೋವಿಡ್-19ರ ಹಿನ್ನೆಲೆಯಲ್ಲಿ  ರಾಜ್ಯ ಸರಕಾರ ತನ್ನ ನೌಕರರಿಗೆ 3 DAಗಳನ್ನು ಕೊಡದೇ ಇರಲು  ಆದೇಶ ಮಾಡಿರುವುದರಿಂದ ನೌಕರರಿಗೆ ಯಾವ ರೀತಿಯ ಪರಿಣಾಮ ಆಗಿದೆ* ?
ಖಂಡಿತ ಭಾರೀ ಪ್ರಮಾಣದ ನಷ್ಟ ಆಗಿದೆ. ಅದು ಏಕ ಮುಖ ನಷ್ಟವಲ್ಲ. ಅನೇಕ ಮುಖ ನಷ್ಟಗಳಾಗಿವೆ. ಅವುಗಳನ್ನು ಉದಾಹರಣೆಗಳ ಸಮೇತವೇ ವಿವರಿಸುವ ಅಗತ್ಯವಿದೆ. ಅಗತ್ಯ ಸಾಮಾಗ್ರಿಗಳ  ವಿಪರೀತ ಬೆಲೆ  ಬೆಲೆ ಏರಿಕೆ ಆಗುತ್ತಿದ್ದರೂ,
ಜುಲೈ 2019 ರಿಂದಲೂ ರಾಜ್ಯದ ಸರಕಾರಿ ನೌಕರರು 11.25% DA ಪಡೆಯುತ್ತಿದ್ದೇವೆ. 
ಜನವರಿ 2020, 
ಜುಲೈ 2020 ಹಾಗೂ 
ಜನವರಿ 2021 ಈ ಮೂರೂ ಅವಧಿಗಳಲ್ಲಿ ರಾಜ್ಯ ಸರಕಾರ ಕ್ರಮವಾಗಿ  ಕೇವಲ 2% + 2% + 2% DA ಪ್ರಕಟಿಸಿದ್ದರೂ ನೌಕರರಿಗೆ ಎಷ್ಟೋ ಅನುಕೂಲ ಆಗುತ್ತಿತ್ತು. ಸರಕಾರ ಹಾಗೆ ಮಾಡದೇ ಇರುವುದರಿಂದ ನೌಕರರಿಗೆ ಭಾರೀ ಪ್ರಮಾಣದ ನಷ್ಡ ಆಗಿದೆ.  ಅಷ್ಟೇ ಅಲ್ಲ ಅವರ ವೃತ್ತಿ ಜೀವನ ಅವಧಿಯಲ್ಲಿ ಮಾತ್ರವಲ್ಲ, ನಿವೃತ್ತಿ ಜೀವನದ ಮೇಲೂ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ. 

ನಷ್ಟದ ಲೆಕ್ಕಾಚಾರ ಹೀಗೂ ಮಾಡಬಹುದು.
1)ಮೂಲವೇತನ × ಪಡೆಯುತ್ತಿರುವ DA 11.25%
2)ಮೂಲವೇತನ× 13.25% DA -11.25%= ವ್ಯತ್ಯಾಸ × 6= ಮೊತ್ತ
3) ಮೂಲವೇತನ

ಉದಾಹರಣೆಗೆ ಒಬ್ಬ ದ್ವಿದಸ ಅವರ ಮೂಲ ವೇತನ 21400 ಇದೆ. 
21400×11.25%=2408
21400×13.25%=2836
21400×15.25%=3263
21400×17.25%=3691

2836-2408=428×6 =2568
3263-2408=855×6=5130
3691-2408=1283×6=7698
-------------------------------------------
                            ಒಟ್ಟು 15396 ರೂಪಾಯಿಗಳ ನಷ್ಟ . ಅದೂ ಕೇವಲ ಒಂದೂವರೆ ವರ್ಷದಲ್ಲಿ. 

ಸರಕಾರ ಪ್ರತಿ ಆರು ತಿಂಗಳಿಗೊಮ್ಮೆ ಕೇವಲ 2% DA ಪ್ರಕಟಿಸಿದ್ದರೂ ಕೂಡಾ ಕಡಿಮೆ ಸೇವಾ ಅವಧಿ ಇರುವ ನೌಕರರಿಗೆ ಗರಿಷ್ಠ ಪ್ರಮಾಣದ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. ದೀರ್ಘ ಸೇವಾವಧಿ ಇರುವ ನೌಕರರಿಗೆ ದೀರ್ಘಾವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. DA ಪ್ರಕಟಿಸಿದ್ದರೆ ಮುಂದಿನ ವೇತನ ಆಯೋಗದ ಸಂದರ್ಭದಲ್ಲಿ ಅದು ಮೂಲ ವೇತನಕ್ಕೆ ವಿಲೀನವಾಗಿ ಅದಕ್ಕೆ  DA ದೊರಕುತ್ತಿತ್ತು.  ನಂತರ ನಿವೃತ್ತಿ ಸಂದರ್ಭದಲ್ಲಿ ನಿವೃತ್ತಿ ವೇತನ ಹೆಚ್ಚಿಗೆ ನಿಗದಿಯಾಗುತ್ತಿತ್ತು. ಒಂದುವೇಳೆ ಕುಟುಂಬ ಪಿಂಚಣಿ ಸೌಲಭ್ಯ ಪಡೆಯಬೇಕಾದ ಸಂದರ್ಭ ಬಂದಲ್ಲಿ ಕುಟುಂಬ ಪಿಂಚಣಿ ಕೂಡಾ ಕನಿಷ್ಠ  3% ಹೆಚ್ಚಿಗೆ ನಿಗದಿ ಆಗುತ್ತಿತ್ತು. ಸರಕಾರ DA ಪ್ರಕಟ ಮಾಡದೇ ತಡೆಹಿಡಿದಿರುವ ಕಾರಣ ಸರ್ವ ನೌಕರರಿಗೂ, ಸರ್ವ ಪಿಂಚಣಿದಾರರಿಗೂ ಜೀವನ ಪರ್ಯಂತ ಆರ್ಥಿಕ ಹೊಡೆತ ಆಗಿದೆ.


ಕರ್ನಾಟಕ ರಾಜ್ಯ ಸರಕಾರವು 3 DA ಪ್ರಕಟ ಪಡಿಸದ ಕಾರಣ ಯಾವಯಾವ ಮೂಲವೇತನದವರಿಗೆ ಕನಿಷ್ಠ ಎಷ್ಟು ಆರ್ಥಿಕ ನಷ್ಟ ಆಗುತ್ತಿದೆ ಎಂಬುದರ ಕೆಲವು ಉದಾಹರಣೆಗಳು ಈ ಕೆಳಗಿನಂತೆ ಇವೆ.
ಮೂಲ ವೇತನ    ನಷ್ಟ( ರೂಗಳಲ್ಲಿ) 
25800                 18033
34300                  24693
42000                  30240
45300                   32616
61150                  43428
ಹೀಗೆ ನಿಮ್ಮ ವೇತನ ನಷ್ಟ ಲೆಕ್ಕ ಮಾಡಿಕೊಳ್ಳಿ.

*ತುಟ್ಟಿಭತ್ಯೆ ಬಗ್ಗೆ ಕರ್ನಾಟಕ ರಾಜ್ಯ 6ನೇ ವೇತನ ಆಯೋಗದ ಆದೇಶಗಳು*

ಹೊಸ ವೇತನ ಶ್ರೇಣಿಗಳನ್ನು ರಚಿಸುವಲ್ಲಿ ಅಖಿಲಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 276.9 ಅಂಶಗಳ ವರೆಗಿನ (ಆಧಾರ ವರ್ಷ 2001=100) ತುಟ್ಟಿಭತ್ತೆಯನ್ನು ದಿನಾಂಕ1.7.2017 ರಂದು ಲಭ್ಯವಿದ್ದ ಸರಕಾರಿ ನೌಕರನ ಮೂಲವೇತನದೊಂದಿಗೆ ವಿಲೀನಗೊಳಿಸಲಾಗಿರುತ್ತದೆ. ಆದುದರಿಂದ ಪರಿಷ್ಕೃತವೇತನ ಶ್ರೇಣಿಗಳಲ್ಲಿ ಮೊದಲ ಕಂತಿನ ವೇತನ ತುಟ್ಟಿ ಭತ್ಯೆಯು ದಿನಾಂಕ1.1.2018 ರಂದು ಪ್ರಾಪ್ತವಾಗುತ್ತದೆ. 

ಸರಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಭಾರತ ಸರ್ಕಾರ ರೂಪಿಸಿರುವ ತುಟ್ಟಿಭತ್ತೆ ಸೂತ್ರಕ್ಕೆ ಅನುಸಾರವಾಗಿ ಪಾವತಿಸತಕ್ಕದ್ದು.

 ಪರಿಷ್ಕೃತವೇತನ ಶ್ರೇಣಿಗಳಲ್ಲಿ ಸರಕಾರಿ ನೌಕರರಿಗೆ ಸಂದಾಯ ಮಾಡಬೇಕಾದ ತುಟ್ಟಿಭತ್ಯೆಯನ್ನು ಕೇಂದ್ರ ಸರಕಾರವು ಮಂಜೂರು ಮಾಡುವ ತುಟ್ಟಿಭತ್ಯೆಯ ಪ್ರತಿ ಶೇಕಡಾ 1ಕ್ಕೆ 0.944 ದರದಲ್ಲಿ (multiflication factor) ಲೆಕ್ಕಾಚಾರ ಮಾಡತಕ್ಕದ್ದು.

 ಇದನ್ನು ಒಂದನೇ ಜನವರಿ ಮತ್ತು ಒಂದನೆ ಜುಲೈ ರಿಂದ ಜಾರಿಗೆ ಬರುವಂತೆ ವರ್ಷಕ್ಕೆರಡು ಬಾರಿ ಪಾವತಿಸತಕ್ಕದ್ದು. 

ಹಣದುಬ್ಬರದ ತಟಸ್ಥೀಕರಣ ವು ಎಲ್ಲ ಹಂತಗಳಲ್ಲಿ ಶೇಕಡಾ ನೂರರಷ್ಟು ಏಕರೂಪವಾಗಿ ರತಕ್ಕದ್ದು.

 ತುಟ್ಟಿಭತ್ತೆಯನ್ನು ಸಂಭಾವನೆಯ ವಿಶಿಷ್ಟ  ಅಂಶವಾಗಿ ತೋರಿಸುವುದನ್ನು ಮುಂದುವರಿಸಲಾಗುವುದು 

*ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶಗಳು ದಿನಾಂಕ : 01-01-1987 ರಿಂದ 01-07-2021 ರ ವರೆಗೆ ನಮ್ಮ ಎಲ್ಲಾ ನೌಕರರಿಗೆ ಶೇರ್ ಮಾಡಿ ಮಾಹಿತಿ ಹಂಚಿಕೊಳ್ಳಿ*

*ದಿನಾಂಕ ಹೆಚ್ಚಳ -ಶೇಕಡ*

01-01-1987- 4% 
01-07-1987- 8% 
01-01-1988- 13% 
01-07-1988- 19% 
01-01-1989- 24% 
01-07-1989- 29% 
01-01-1990- 33% 
01-07-1990- 37% 
01-01-1991- 45% 
01-07-1991 54% 
01-01-1992- 65% 
01-07-1992- 76% 
01-01-1993- 85% 
01-07-1993- 90% 
01-01-1994- 96% 
01-07-1994- 106% 
01-01-1995- 116% 
01-07-1995- 127% 
01-01-1996- 138% 
01-07-1996- 149% 
01-01-1997- 160% 
01-07-1997- 171% 
01-01-1998- 178% 
01-07-1998 - 192%
01-04-1998- 16%
01-07-1998- 22%
01-01-1999 - 32%
01-07-1999 - 37%
01-01-2000 - 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01-07-2016- 40.25%
01-01-2017- 43.25%
01-07-2017- 45.25%
01-01-2018-1.75% 01-07-2018- 3.75%
01-01-2019-  6.50%
01-07-2019- 11.25%
01-07-2021-22.25%.

★ NAVODAYA EXAM HALL TICKET: ★ ✍🏻🍁✍🏻🍁ನವೋದಯ ವಿದ್ಯಾಲಯದ 2021-22ನೇ ಸಾಲಿನ 6ನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು (Hall ticket) ಇಂದಿನಿಂದ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ.!!Registration Number & Date Of Birth ನಮೂದಿಸಿ ಡೌನ್ಲೋಡ್ ಮಾಡಿಕೊಳ್ಳಿ.!👇🏻👇🏻👇🏻👇🏻👇🏻👇🏻👇🏻👇🏻

CLICK HERE TO DOWNLOAD

Monday 19 July 2021

*ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*........!!!

*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 69
     *ದಿನಾಂಕ: 20/07/2021*
 ••••••••••••••••••••••••••••••••••••••••
*ಅಮೃತಾತ್ಮರೇ, ನಮಸ್ಕಾರ*
       🙏🙏🙏🙏🙏
_ಇಂದಿನ ವಿಷಯ:_ 
  * *ಕೇವಲ ಪ್ರೋಟೀನ್ ಸೇವನೆಯಿಂದ ಪಾರ್ಶ್ವವಾಯು*...!!_ ••••••••••••••••••••••••••••••••••••••
_ಸಹೃದಯ ಓದುಗರೆ,_

*ಪಾರ್ಶ್ವವಾಯು ಏಕೆ ಬರುತ್ತದೆ:*
  _ಮೆದುಳಿಗೆ ಹರಿಯುವ ರಕ್ತದ ಪ್ರಮಾಣ 3 ಸೆಕೆಂಡುಗಳ ಕಾಲ ಕ್ಷೀಣಿಸಿದರೆ ಅಥವಾ ನಿಂತರೆ ತಕ್ಷಣ ದೇಹದ ಚಲನೆ ಸ್ತಬ್ದವಾಗಿಬಿಡುತ್ತದೆ. ಇದು ಪಾರ್ಶ್ವವಾಯು ಆಗಬಹುದು ಅಥವಾ ಪೂರ್ಣವಾಯು ಆಗಬಹುದು._
••••••••••••••••••••••••••••••••••••••••••••••••
  _ನಿನ್ನೆಯ ಸಂಚಿಕೆಯಲ್ಲಿ ನೋಡಿದಂತೆ, ರಕ್ತನಾಳಗಳ ಗಡುಸುತನ, ಅದರಿಂದ ಅವು ಕಟ್ಟಿಕೊಳ್ಳುವಿಕೆ, ರಕ್ತವನ್ನು ಸರಾಗವಾಗಿ ಹರಿಯದಂತೆ ತಡೆಯೊಡ್ಡುವುದು ಮತ್ತು ಆ ತಡೆ ಯಾವ ಅವಯವಕ್ಕೆ ರಕ್ತ ಸರಬರಾಜನ್ನು ನಿಲ್ಲಿಸುತ್ತದೆ ಎನ್ನುವುದರ ಆಧಾರದಲ್ಲಿ ರೋಗಗಳು ಬರುತ್ತವೆ!_

  _ಕತ್ತಿನ ಎಡಬಲಬದಿ ಇರುವ ಕೆರೋಟಿಡ್ ಆರ್ಟರಿ ಹೆಸರಿನಲ್ಲಿ ಕರೆಯಲ್ಪಡುವ ರಕ್ತನಾಳಗಳು ಮೆದುಳಿಗೆ ಅತಿ ಹೆಚ್ಚು ಆಮ್ಲಜನಕವನ್ನು ಹೊಂದಿರುವ ರಕ್ತವನ್ನು ಹರಿಸುತ್ತವೆ. ಗಮನಿಸಬೇಕಾದ ಅತ್ಯಂತ ಮುಖ್ಯ ಸಂಗತಿ ಎಂದರೆ, ಮೆದುಳು ಕ್ರಿಯಾಶೀಲವಾಗಿರಲು ಆಮ್ಲಜನಕ ಮತ್ತು ಸಕ್ಕರೆ ಅಂಶ(ಗ್ಲುಕೋಸ್) ನಿರಂತರವಾಗಿ ಬೇಕು. ಕ್ಷಣಮಾತ್ರ ಇವುಗಳ ಪೂರೈಕೆ ನಿಂತರೆ ಮೆದುಳು ಅರೆಕ್ರಿಯೆ ಅಥವಾ ನಿಷ್ಕ್ರಿಯೆಗೊಳ್ಳುತ್ತದೆ. ಇದನ್ನೇ ಪಾರ್ಶ್ವವಾಯು ಎನ್ನುತ್ತೇವೆ._
               •|•|•|•|•|•

*ಕೇವಲ ಪ್ರೋಟೀನ್ ಸೇವನೆಯಿಂದ ಏನಾಗುತ್ತದೆ:*
      ಅನುಭವದಲ್ಲಿ ಸೂಕ್ಷ್ಮಗ್ರಾಹಿಯಾಗಿ ನೋಡಿದಾಗ. ರೋಗಿಗಳ ಇತಿಹಾಸ ಹೆಕ್ಕಿ ತೆಗೆದು ಮೂಲ ಕಾರಣ ಕಂಡುಕೊಳ್ಳದೇ ಚಿಕಿತ್ಸೆಗೆ ಕೈ ಹಾಕುವುದಿಲ್ಲ . ಶೇಕಡಾ 90 ಜನರ ಕೆರೋಟಿಡ್ ಆರ್ಟರಿ, ಕರೋನರಿ ಆರ್ಟರಿ, ಪೋರ್ಟಲ್ ವೇನ್ ಮುಂತಾದವುಗಳು ಕಟ್ಟಿಕೊಳ್ಳುವುದಕ್ಕೆ ಅತಿ ಕಡಿಮೆ ಜಿಡ್ಡಿನ ಅಂಶ ಸೇವನೆ ಮತ್ತು ಅತಿ ಹೆಚ್ಚು ಪ್ರೋಟೀನ್ ಸೇವನೆಯೇ ಕಾರಣ. ಹೀಗೆ ಪ್ರೋಟೀನ್-ಕೊಬ್ಬಿನ ಅಂಶಗಳ  ಅಸಮತೋಲನದಿಂದ ಗಡುಸುಗೊಳ್ಳುವ ರಕ್ತನಾಳಗಳು ರಕ್ತಪೂರೈಕೆಯಲ್ಲಿ ವಿಫಲವಾಗಿ ನೋರಾರು ರೋಗಗಳನ್ನು ತರುತ್ತದೆ._
               •|•|•|•|•|•

_*ಮೆದುಳಿನ ಮೂಲ ವಸ್ತು ಯಾವುದು*?_
_ಪ್ರೋಟೀನ್ ಅಥವಾ ಕೊಬ್ಬು?_

  _ಮಾನವನ ಮೆದುಳು ಹೆಚ್ಚು ಜಿಡ್ಡಿನಿಂದಲೇ ತಯಾರಾಗಿದೆ. ಅತ್ಯುತ್ತಮ ಕೊಬ್ಬು ಮೆದುಳಿಗೆ ಅಗತ್ಯ ಎನ್ನುವ ಸಂಶೋಧನೆಗಳು ಒಮೆಗಾ-3, 6 ಫ್ಯಾಟೀ ಆ್ಯಸಿಡ್‌ಗಳು ಬೇಕು ಎನ್ನುತ್ತವೆ. ಇದರ ಮೂಲ ಭಾರತೀಯ ಗೋ ತಳಿಗಳ ಹಾಲು ಮತ್ತು ತುಪ್ಪದಲ್ಲಿ ಇವೆ ಎಂಬುದನ್ನು ಮಾತ್ರ ಮುಚ್ಚಿಡುತ್ತವೆ. ಏಕೆಂದರೆ ತುಪ್ಪ ಎನ್ನುವ ಪದಾರ್ಥವನ್ನು ಪಾಶ್ಚಾತ್ಯ ಪದ್ಧತಿಯಿಂದ ತಯಾರಿಸಿ ಸಂಶೋಧಿಸಲಾಗುತ್ತಿದೆ ಮತ್ತು ಅಂಗಡಿಗಳಲ್ಲಿ ಸಿಗುವ ಈ ರೀತಿಯ ತುಪ್ಪ ಹಾಲಿನ ಕೊಬ್ಬೇ ಹೊರತೂ ಶುದ್ಧ ತುಪ್ಪವಲ್ಲ. ಮಜ್ಜಿಗೆ ಕಡೆದು ಬೆಣ್ಣೆ ತೆಗೆದು ಮಾಡುವ ತುಪ್ಪ ಮಾತ್ರ ಮೆದುಳನ್ನು ಪೋಷಣೆ ಮಾಡಬಲ್ಲುದು!_

_*.....ಧೀ ಸ್ಮೃತಿ ಕಾಂಕ್ಷಿಣಾಂ ಸಸ್ಯತೇ ಘೃತಂ*_
  _ಧೈರ್ಯ ಮತ್ತು ನೆನಪಿನ‌ಶಕ್ತಿ ಬಯಸುವವರು ತುಪ್ಪ ಸೇವಿಸಿ ಎಂಬುದು ಶ್ಲೋಕದ ಅರ್ಥ._
               •|•|•|•|•|•

*ಕೇವಲ ಪ್ರೋಟೀನ್‌ ಸೇವನೆಯಿಂದ ಮೆದುಳಿಗೆ ಆಗುವ ಹಾನಿ ಎಂಥಾದ್ದು?*
  _ಇತ್ತೀಚಿಗೆ ನಾವೆಲ್ಲಾ ಹೆಚ್ಚು  ಕೇಳಲ್ಪಡುತ್ತಿರುವ "ಅಲ್ಜೀಮಿರ್" ಅಂದರೆ "ಮರೆಗುಳಿತನ" ಎಂಬ ರೋಗಕ್ಕೆ ಮೆದುಳಿನಲ್ಲಿ ಸಂಚಯವಾಗುತ್ತಿರುವ ಪ್ರೋಟೀನ್ ಕಾರಣವಾಗಿದೆ, ಅದನ್ನು ಹೇಗೆ ತೆಗೆಯುವುದು? ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಂಶೋಧನೆಗಳು, ಹೇಗೆ ತಡೆಯಬಹುದು ಎಂದು ಯೋಚಿಸುತ್ತಲೇ ಇಲ್ಲ!!!_

  _ಯುರಿಕ್ ಆ್ಯಸಿಡ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುತ್ತೇವಲ್ಲ ಅದು ಅಧಿಕ ಪ್ರೋಟೀನ್ ಸೇವನೆಯಿಂದಾಗುವ ಪ್ರಥಮ ಹಾನಿ, ಅದೇ ಮುಂದೆ ಮೆದುಳು, ಹೃದಯ,‌ ಯಕೃತ್ತು ರಕ್ತನಾಳಗಳಿಗೆ ಮಹತ್ತರವಾದ ಅಪಾಯವನ್ನು ತರುತ್ತದೆ ಎಂದು ಗ್ರಹಿಸದೇ ಯುರಿಕ್ ಆ್ಯಸಿಡ್ ಕೇವಲ ಮೂಳೆಗಳ, ಸಂಧು ಕೀಲುಗಳ ಸಮಸ್ಯೆ ಎಂದು ಭಾವಿಸಿ ಸುಖವಾಗಿದ್ದೇವೆ, ಇದು ಹೆಚ್ಚು ಸಂಚಯಗೊಂಡರೆ ಸೂಕ್ಷ್ಮ ರಕ್ತನಾಳಗಳು ಹಾಳಾಗಿ ಕಟ್ಟಿಕೊಂಡು ಯಕೃತ್ ಸಿರೋಸಿಸ್, ಕಿಡ್ನಿ ಫೇಲ್ಯೂರ್ ಬರುತ್ತವೆ..._ 🤔
               •|•|•|•|•|•

  _ಒಟ್ಟಾರೆ ಕೇವಲ‌ ಪ್ರೋಟೀನ್ ಸೇವನೆ ಮೆದುಳಿಗೆ ಎರಡು ರೀತಿಯ ಅಪಾಯವನ್ನು ತರುತ್ತದೆ._
1) _ರಕ್ತನಾಳಗಳು ಕಟ್ಟಿಕೊಂಡು ಉಂಟಾಗುವ ಪಾರ್ಶ್ವವಾಯು_
2) _ಮೆದುಳು ಸವೆತ ಉಂಟಾಗಿ ಧಾತುಕ್ಷಯದಿಂದಾಗುವ ಪಾರ್ಶ್ವವಾಯು (ಇದು ಚಿಕಿತ್ಸೆಗೆ ಅಸಾಧ್ಯ) ಇದನ್ನು ಅಟ್ರೋಪಿಡ್ ಬ್ರೇನ್ ಎಂದು ಕರೆಯುತ್ತಾರೆ ಅಂದರೆ ಮೆದುಳು ತನ್ನ ಗಾತ್ರದಲ್ಲಿ ಕುಗ್ಗಿದೆ ಎಂದು ಅರ್ಥ._
               •|•|•|•|•|•

*ನಮ್ಮ ಚಿಕಿತ್ಸಾ ವಿಧಾನ ಎಷ್ಟು ಹಾಸ್ಯಾಸ್ಪದವಾಗಿದೆ?*
_ಪಾರ್ಶ್ವವಾಯು ಪೀಡಿತರಿಗೆ_ -
• _ಕೊಬ್ಬನ್ನು ಕರಗಿಸುವ ಸ್ಟ್ಯಾಟಿನ್ ಮಾತ್ರೆಗಳು!?_
• _ಯಥೇಚ್ಛವಾಗಿ ತಿನ್ನಿಸುವ ಮೊಳಕೆ ಕಾಳುಗಳು!?_
• _ನಿರ್ದಾಕ್ಷಿಣ್ಯವಾಗಿ ನಿಲ್ಲಿಸುವ ಹಾಲು, ತುಪ್ಪಗಳು?!_
• _ಕೊಬ್ಬನ್ನು ಹೆಚ್ಚಿಸಿ ಶರೀರದ ತೂಕವನ್ನು ಹೆಚ್ಚಿಸುವ ನಿದ್ದೆಮಾತ್ರೆಗಳು!?_
• _ಜಿಡ್ಡನ್ನು ಬಳಸದೇ ಮಾಂಸಖಂಡಗಳಿಗೆ ವಿಪರೀತ ತೊಂದರೆ ಕೊಡುವ ಕೇವಲ ಫಿಜಿಯೋಥೆರಪಿಗಳು?!_
  _ಮನುಷ್ಯ ತಾನು ಸಾಯದೆಯೂ ಮತ್ತು ಔಷಧಿಗಳ ಮೇಲೆ ನಿರಂತರ ಅವಲಂಬಿತನಾಗಿಯೂ ಇರುವಂತೆ ಮಾಡುವ ಚಿಕಿತ್ಸೆಗಳು?!_ 😟
               •|•|•|•|•|•

*ಆತ್ಮೀಯರೇ,*
  _ಈ ಸಂದೇಶದ ಸಾರವನ್ನು ಗ್ರಹಿಸಿ, ಭಯವನ್ನು ಬಿಡಿ, ಜಿಡ್ಡು ಅತ್ಯಂತ ಅವಶ್ಯಕ ಎಂದು ಎಣ್ಣೆ ತಿನಿಸುಗಳನ್ನು ತಿನ್ನುವ ಬದಲು ಭಾರತೀಯ ಗೋ ತಳಿಗಳ ಹಾಲಿನಿಂದ ಮನೆಯಲ್ಲಿಯೇ ಬೆಣ್ಣೆ ತಯಾರಿಸಿ ತುಪ್ಪ ಮಾಡಿಕೊಂಡು ಬಳಸಿರಿ. ಆರೋಗ್ಯದಿಂದ ಇರಿ._

  _*ನಿಮ್ಮ‌ಮಕ್ಕಳಿಗೆ ಹಾಲು-ತುಪ್ಪಗಳನ್ನು ಕೊಡಿ ಮತ್ತು ಚೆನ್ನಾಗಿ ಆಟವಾಡಲು ಬಿಡಿ.*_

    🙏 *ಧನ್ಯವಾದಗಳು* 🙏
••••••••••••••••••••••••••••••••••••••

2020-21ನೇ ಸಾಲಿನ SSLC ಗಣಿತ ವಿಷಯದ ಉತ್ತರಗಳು

CLICK HERE TO DOWNLOAD

Saturday 17 July 2021

Know Ur 2nd PUC Reg. No.: ನೋಂದಾಯಿಸಿದ ಹೊಸ & ಪುನರಾವರ್ತಿತ (Fresher's & Repeater's) ವಿದ್ಯಾರ್ಥಿಗಳು ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನೋಡಿಟ್ಟುಕೊಳ್ಳಿ.!!

Know Ur 2nd PUC Reg. No.:~
✍🏻🗒️✍🏻🗒️✍🏻🗒️✍🏻🗒️✍🏻

♣️ 2021ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಜುಲೈ-20 ರಂದು ಪ್ರಕಟಗೊಳ್ಳಲಿದೆ.!!

♣️ ನೋಂದಾಯಿಸಿದ ಹೊಸ & ಪುನರಾವರ್ತಿತ (Fresher's & Repeater's) ವಿದ್ಯಾರ್ಥಿಗಳು ತಮ್ಮ ತಮ್ಮ ನೋಂದಣಿ ಸಂಖ್ಯೆಯನ್ನು ನೋಡಿಟ್ಟುಕೊಳ್ಳಿ.!!

♣️ Check your No. here:
👇🏻👇🏻

CLICK HERE TO VIEW

ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"* *ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_

*ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ -- ಸಂಚಿಕೆ: 65
       *ದಿನಾಂಕ: 18-07-2021
*ಅಮೃತಾತ್ಮರೇ, ನಮಸ್ಕಾರ*
       🙏🙏🙏🙏🙏

_ಇಂದಿನ ವಿಷಯ:_
  *"ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ"* 

  *ಕೇವಲ ಪ್ರೋಟೀನ್* _ಸೇವನೆ ಎಂತಹ ಅನಾಹುತ ಗೊತ್ತೇ..!?_
••••••••••••••••••••••••••••••••••••••••••
  _ಪ್ರತ್ಯಕ್ಷ ಪ್ರಮಾಣ, ಅನುಮಾನ ಅಥವಾ ಊಹೆ, ಪ್ರಮಾಣ ಉಪಮಾನ, ಪ್ರಮಾಣ ಮತ್ತು ಆಪ್ತೋಪದೇಶ ಅಥವಾ ಶಬ್ದಪ್ರಮಾಣ ಎಂಬ ನಾಲ್ಕು ಜ್ಞಾನದ ಹಾದಿಗಳಿವೆ._

  _ನಾವೆಲ್ಲಾ ಈ ನಾಲ್ಕರಲ್ಲಿ ಒಂದನ್ನು ಬಳಸಿ ಜ್ಞಾನ ಸಂಪಾದಿಸುತ್ತೇವೆ._

  _ಈಗ ಹೇಳಲು ಹೊರಟಿರುವ ಆರೋಗ್ಯ ಸೂತ್ರವು_ *"ಆಪ್ತೋಪದೇಶ"* _ಪ್ರಮಾಣದ ಆಧಾರದಲ್ಲಿ_ *"ಉಪಮಾನ ಪ್ರಮಾಣ"*‌ _ವನ್ನು ಅನುಸರಿಸಿ ಆರೋಗ್ಯ ಜ್ಞಾನ ಹಂಚುವ ಕಾರ್ಯವಾಗಿದೆ. ತಾವುಗಳು, ಇದನ್ನು ಗ್ರಹಿಸಿ, ಊಹಿಸಿ, ತಾಳೆನೋಡಿ, ಇದರಿಂದ ಪ್ರತ್ಯಕ್ಷ ತೊಂದರೆ ಅನುಭವಿಸುತ್ತಿರುವವರನ್ನು ಗಮನಿಸಿ ನಂತರ ದೃಢಪಡಿಸಿಕೊಳ್ಳಿ. ಕೊನೆಗೆ_ *ಪಾಲಿಸಿರಿ ಮತ್ತು ಆರೋಗ್ಯದಿಂದ ಇರಿ...*

  _ಇದೊಂದು ಸೂತ್ರದಿಂದ ನಾವು ಈ ಕೆಳಗಿನ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಮತ್ತು ಮುಕ್ತರಾಗಲೂಬಹುದು!_

• _ಹೃದ್ರೋಗ_
• _ಪಾರ್ಶ್ವವಾಯು_
• _ಯಕೃತ್ ವಿಕಾರಗಳು, ಲಿವರ್ ಸಿರೋಸಿಸ್_
• _ಗಾಲ್‌ಬ್ಲ್ಯಾಡರ್ ತೊಂದರೆ_
• _ಮೂತ್ರಪಿಂಡದ ಕಲ್ಲುಗಳು_
• _ವಿವಿಧ ರೀತಿಯ ಸಂಧಿ‌ಶೂಲಗಳು_
• _ಮಾಂಸಖಂಡಗಳ ಸೆಳೆತ_
• _80ಕ್ಕೂ ಹೆಚ್ಚು ಅಟೋ ಇಮ್ಯೂನ್ ಕಾಯಿಲೆಗಳು_
• _ವಿವಿಧ ಭಾಗದ ಸ್ಪಾಂಡಿಲೋಸಿಸ್_
• _ಸ್ಪಾಂಡಿಲೈಟೀಸ್_
• _ಹೈಪೋಥೈರಾಯ್ಡಿಸಮ್_
• _ಮಧುಮೇಹ_
• _ರಕ್ತದೊತ್ತಡ_
• _ಮ್ಯಕುಲಾರ್ ಡಿಜನರೇಷನ್_
• _ಕಣ್ಣಿನಲ್ಲಿ ರಕ್ತ ಸೋರುವಿಕೆ_
• _ನೆನಪಿನ ಶಕ್ತಿ ಕುಂದುವಿಕೆ_
• _ನರಗಳ ದೌರ್ಬಲ್ಯ_
• 

  _ಎಷ್ಟೊಂದು ಕಾಯಿಲೆಗಳ ಪಟ್ಟಿ ಇದೆ ಇಲ್ಲಿ, "ಕೇವಲ" ಪ್ರೋಟೀನ್ ಸೇವನೆಯ ದುಷ್ಪರಿಣಾಮಗಳು ಇವು..!! ಆಶ್ಚರ್ಯ ಎನಿಸಿದರೂ ಸತ್ಯ._

  _ಜಗತ್ತಿನ ಜನರ ತಲೆಗೆ ಆಧುನಿಕ ವಿಜ್ಞಾನ_ *ಎಂದೂ ಇಲ್ಲದ ಒಂದು ಭೂತವನ್ನು ಬಿಟ್ಟಿದೆ...*

   _?!# ಪ್ರತಿ ನಿತ್ಯ ಇಂತಿಷ್ಟು ಪ್ರೋಟೀನ್ ಬೇಕೇ ಬೇಕು ಎಂಬುದು_ 

  _?!# ಕೊಲೆಸ್ಟರಾಲ್‌ ತಿಂದರೆ ಅಪಾಯ ಎನ್ನುವುದು_

  *ಪ್ರೋಟೀನ್ ಮತ್ತು ಕೊಲೆಸ್ಟರಾಲ್‌‌ಗಳ ನಡುವಿನ ಬಾಂಧವ್ಯವನ್ನು ಮುರಿದು, ಇನ್ನಿಲ್ಲದ ರೋಗಗಳಿಗೆ ಅನ್ಯಾಯವಾಗಿ ತುತ್ತಾಗುತ್ತಿದ್ದೇವೆ...* 
                   •|•|•|•|•|•

  _ಆತ್ಮೀಯರೇ, ಸೂಕ್ಷ್ಮವಾಗಿ ಗಮನಿಸಿ ಅಳವಡಿಸಿಕೊಂಡರೆ, ಸದೃಢ ಆರೋಗ್ಯ ನಮ್ಮದಾಗುವುದು!_ 🙏
                   •|•|•|•|•|•

  _ಉಪಮಾನ(ಹೋಲಿಕೆ) ಎಂಬುದು "ಒಂದು ಪ್ರಮಾಣ" ಅಂದರೆ, ವ್ಯಕ್ತಿ ಹಿಂದೆ ನೋಡಿದ ಒಂದನ್ನು ಹೋಲಿಸಿ ಹೊಸದರ ಬಗ್ಗೆ ತಿಳಿವಳಿಕೆ ಅಥವಾ ಜ್ಞಾನ ಮೂಡಿಸುವುದು._

  _ಈ ಉಪಮಾನ ಪ್ರಮಾಣದ ಅನ್ವಯ ಇಂದಿನ ನಮ್ಮ ಆಹಾರದಲ್ಲಿನ ಪ್ರೋಟೀನ್-ಫ್ಯಾಟ್ ಅಸಮತೋಲನವು ಈ ಮೇಲೆ ಸೂಚಿಸಿದ ಅನೇಕ ಕಾಯಿಲೆಗಳ ಉತ್ಪತ್ತಿ, ಉಲ್ಬಣ, ಅಪಾಯ, ಪ್ರಾಣಹಾನಿ ಮಾಡುತ್ತಿರುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ._
                    •|•|•|•|•|•

  _ತಾವೆಲ್ಲರೂ ಹೋಳಿಗೆ ಅಥವಾ ಒಬ್ಬಟ್ಟು ನೋಡಿದ್ದೀರಿ, ತಿಂದಿದ್ದೀರಿ ಹಾಗೆಯೇ, ಬಹುಜನರ ಅತ್ಯಾಪ್ಯಾಯ ಖಾದ್ಯವಾದ ಒಬ್ಬಟ್ಟು, ಆತ್ಮೀಯರನ್ನು ಉಪಚರಿಸಲು ಮಾಡುವ ಬಹುಮೂಲ್ಯ ಆಹಾರವೂ ಹೌದು. ಹೋಳಿಗೆ ತಯಾರಿಕೆಯನ್ನು ಒಮ್ಮೆ ಗಮನಿಸಿ - "ಆಯುರ್ವೇದದಲ್ಲಿ ಹೋಳಿಗೆಗೆ_ *ಉತ್ಕಾರಿಕಾ* _ಎಂದು ಕರೆಯುತ್ತಾರೆ." ಹೋಳಿಗೆಯು ಪ್ರಧಾನವಾಗಿ ಬೇಳೆಯಿಂದ ಆಗಿರುತ್ತದೆ. ಬೇಳೆ ಪ್ರೋಟೀನ್ ಪ್ರಧಾನ ಧಾನ್ಯ. ಆಯುರ್ವೇದದಲ್ಲಿ ತಿಳಿಸಲಾಗಿದೆ_ - *ಎಲ್ಲಾ ಬೇಳೆಗಳೂ ಅತ್ಯಂತ ಪ್ರಬಲ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ* _ಎಂದು. ಏಕೆಂದರೆ, ಬೇಳೆಗಳು - ಒಗರು ರಸವನ್ನು ಹೊಂದಿರುತ್ತವೆ ಮತ್ತು ಅದರಿಂದ ಶರೀರದ ವಾತವು ಜಾಸ್ತಿಯಾಗಿ ಅತ್ಯಂತ ಹೆಚ್ಚು ಚಟುವಟಿಕೆಯನ್ನು ಉಂಟುಮಾಡುತ್ತದೆ. ಆದರೆ ಆ ಆಂತರಿಕ ಚಟುವಟಿಕೆಯ ಕಾರಣ ಜೀವಕೋಶಗಳು ರಸವನ್ನೂ, ದ್ರವವನ್ನೂ, ಸ್ನೇಹಾಂಶ(ಜಿಡ್ಡನ್ನೂ) ಕಳೆದುಕೊಂಡು ಒಣಗುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ವಾಸ್ತವದಲ್ಲಿ ಎಲ್ಲರ ಅನುಭವಕ್ಕೆ ಬರುವ ಅತ್ಯಂತ ಸ್ಪಷ್ಟವಾದ ವಿಚಾರ._

  _ಉತ್ಕಾರಿಕಾ(ಹೋಳಿಗೆ)ದಲ್ಲಿ ಬಳಸುವ ಬೇಳೆಯು ತನ್ನ ವಾತವರ್ಧಕ ಗುಣದಿಂದ ಜೀವಕೋಶಗಳನ್ನು ಒಣಗಿಸಬಾರದೆಂದು ಅದಕ್ಕೆ_
• _ಬೆಲ್ಲ(ಸಿಹಿ ರಸ) ಹಾಕುತ್ತಾರೆ_
• _ಬೇಯಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ(ಜಿಡ್ಡು) ಹಾಕುತ್ತಾರೆ_
• _ಅಷ್ಟು ಎಣ್ಣೆ ಹಾಕಿದರೂ ಸಹ, ಈಗಾಗಲೇ ಬೆಲ್ಲದ ಸಿಹಿಯಿಂದ ತೃಪ್ತವಾಗಿದ್ದರೂ ಸಹ ಬೇಳೆಯು ಎಲ್ಲಾ ಎಣ್ಣೆಯನ್ನು ಹೀರಿ ಇನ್ನೂ ಒಣಗಿದಂತೆಯೇ ಇರುತ್ತದೆ_
• _ಹಾಗಾಗಿ ಊಟ ಮಾಡುವಾಗ ಅದಕ್ಕೆ ಹೆಚ್ಚು ತುಪ್ಪವನ್ನು ಬಳಸುತ್ತಾರೆ_
• _ಇನ್ನೂ ಸಾಲದೆಂಬಂತೆ ಸಿಹಿ ಹಣ್ಣುಗಳ ಶೀ(ಸೀ)ಕರಣೆಯನ್ನು ಬಳಸುತ್ತಾರೆ. ಆ ಶೀಕರಣೆಗೆ ಮತ್ತೆ ಬೆಲ್ಲ ಬೆರೆಸುತ್ತಾರೆ!!_

  *ಅಬ್ಬಾ ಪ್ರೋಟೀನ್(ಒಗರು ರಸ) ಪ್ರಧಾನ ಬೇಳೆ ಪದಾರ್ಥಗಳಿಗೆ ಇಷ್ಟೊಂದು ಮಧುರ(ಸಿಹಿ), ಸ್ನಿಗ್ಧ(ಜಿಡ್ಡು) ಪದಾರ್ಥಗಳ ಜೋಡು!!!*

  _ಹಾಗೆಯೇ, ಅಡಿಕೆಯನ್ನು ಬೆಲ್ಲದಲ್ಲಿ ಬೇಯಿಸಿ ಮಾರಾಟ ಮಾಡಿದರೆ, ಅದನ್ನು ತಂದು ತುಪ್ಪದಲ್ಲಿ ಹುರಿದು, ಸಕ್ಕರೆ, ಗುಲ್ಕಂದ ಮುಂತಾಗಿ ಸೇರಿಸಿ ತಿನ್ನುತ್ತೇವೆ!! ಅಲ್ಲವೇ?_

  _ನಮ್ಮ ನೆರೆರಾಜ್ಯದವರಾದ ಆಂಧ್ರಪ್ರದೇಶದಲ್ಲಿ_ *ಬೇಳೆಪಪ್ಪುಗೆ* _ಯಥೇಚ್ಛ ಎಣ್ಣೆ ಬಳಸುತ್ತಾರೆ ಮತ್ತು ಅದನ್ನು ಕೇವಲ ಸಿಹಿ ಮತ್ತು ದ್ರವಪ್ರಧಾನ ಅಕ್ಕಿಯ ಅನ್ನದೊಂದಿಗೆ ಸೇವಿಸುತ್ತಾರೆ, ಚಪಾತಿಯೊಂದಿಗೆ ಅಲ್ಲ._

  _ಉತ್ತರ ಭಾರತದ ಗೋಧಿ ಪದಾರ್ಥಗಳನ್ನು ನೇರ ಬೆಂಕಿಯಲ್ಲಿ ಸುಟ್ಟು ಅದರ ವಾತ ಗುಣವನ್ನು ಕಡಿಮೆ ಮಾಡುತ್ತಾರೆ, ಬಾಟಿ, ಫುಲ್ಕಾ ತಿನ್ನುವಾಗ ಅದಕ್ಕೆ ಯಥೇಚ್ಛವಾಗಿ ತುಪ್ಪ, ಗುಡ(ಬೆಲ್ಲ) ಸೇರಿಸಿಕೊಳ್ಳುತ್ತಾರೆ, ದಾಲ್ ಸೇವಿಸುವುದಿಲ್ಲ. ಅದೇ ಸಿಹಿ-ದ್ರವ ಪ್ರಧಾನ ಅನ್ನಕ್ಕೆ ದಾಲ್(ಬೇಳೆ) ಬಳಸುತ್ತಾರೆ. ದಾಲ್-ಚಾವಲ್ ಪ್ರಚಲಿತವಾಗಿದೆಯೇ ಹೊರತು, ಪ್ರೋಟೀನ್ ಪ್ರಧಾನ ಗೋಧಿಗೆ ಇನ್ನೊಂದು ಪ್ರೋಟೀನ್ ಸೇರಿಸುವ ಅವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ. ಗೋಧಿ ಉತ್ಪನ್ನಗಳ ಜೊತೆಗೆ ಗುಡ-ಘೀ(ಬೆಲ್ಲ-ತುಪ್ಪ) ಬಳಸುತ್ತಾರೆ._
                    •|•|•|•|•|•

  _ಹೀಗೆ ಪ್ರೋಟೀನ್‌ನಲ್ಲಿರುವ ಶಕ್ತಿಯನ್ನು ನಿಯಂತ್ರಣದಲ್ಲಿಡಲು_ *ದ್ರವ, ಮಧುರ, ಸ್ನಿಗ್ಧ* _ಗುಣಗಳು ಅತ್ಯಂತ ಅನಿವಾರ್ಯ. ಜಿಡ್ಡಿಲ್ಲದ ಪ್ರಬಲ ಶಕ್ತಿಯ ಆಕರವಾದ ಪೆಟ್ರೋಲ್ ಬಳಸಿ ದೀಪ ಬೆಳಗಿಸಲಾಗದು, ಆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ, ಅದರ ಬದಲು ಸ್ವಲ್ಪ ಜಿಡ್ಡು ಜಿಡ್ಡಾಗಿರುವ, ಗಟ್ಟಿ ದ್ರವದಿಂದ ಕೂಡಿ, ನಿಯಂತ್ರಿತ ಶಕ್ತಿಯನ್ನು ಹೊಂದಿರುವ ಎಣ್ಣೆಯನ್ನು ಬಳಸಿ ದೀಪ ಬೆಳಗಿಸಬಹುದು._

  _ನಮ್ಮ ಶರೀರದಲ್ಲಿ ನಿಯಂತ್ರಿತ ಶಕ್ತಿ ಇರಬೇಕೇ ಹೊರತು, ಅನಿಯಂತ್ರಿತ ಶಕ್ತಿ ಇರಬಾರದು, ಅದರಿಂದ ಶರೀರ ಶಕ್ತಿಯುತವಾದರೂ ರೋಗಗಳನ್ನು ಉದ್ದೀಪನಗೊಳಿಸುತ್ತದೆ, ಈ ಉದ್ದೀಪಿತ ವಾತದ ಶಕ್ತಿಯಿಂದ - ಮೇಲೆ ತಿಳಿಸಿದ ರೋಗಗಳು ಮಾನವರನ್ನು ಕಾಡುತ್ತವೆ. ಮತ್ತು ನಿಯಂತ್ರಣಕ್ಕೆ ಸಿಗುವುದೇ ಇಲ್ಲ..._

  _ಆತ್ಮೀಯರೇ, ಕೇವಲ ಪ್ರೋಟೀನ್ ಸೇವನೆಯ ದುಷ್ಪರಿಣಾಮ ಊಹೆಗೂ ನಿಲುಕದು, ಅದು ನಿಯಂತ್ರಿತವಾಗಿರಬೇಕಾದುದು ದೀರ್ಘಾಯುಷ್ಯಕ್ಕೆ ಅತ್ಯಾವಶ್ಯಕ. ಇಲ್ಲದಿದ್ದರೆ ಶೀಘ್ರವಾಗಿ ರಕ್ತನಾಳಗಳು ಒಣಗಿ ಅಲ್ಲಲ್ಲಿ ಕಟ್ಟಿಕೊಂಡು ವ್ಯಕ್ತಿ ಅತ್ಯಂತ ದಾರುಣ ಅವಸ್ಥೆ ತಲುಪುತ್ತಾನೆ._
                    •|•|•|•|•|•

  _ಹೆಚ್ಚಿನ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ..._
                    •|•|•|•|•|•

••••••••••••••••••••••••••••••••••••••••••••••••
*ಆತ್ಮೀಯರೇ,*
  _ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಎಷ್ಟು ಪಚನವಾಗುತ್ತದೆ ಎನ್ನುವುದರ ಆಧಾರದಲ್ಲಿ ನಮಗೆ ಶಕ್ತಿ ಲಭಿಸುತ್ತದೆ._

    🙏 *ಧನ್ಯವಾದಗಳು* 🙏
••••••••••••••••••••••••••••••••••••••••

ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ತೆಗೆದುಕೊಳ್ಳುವವರಿಗಾಗಿ ಬೇಕಾಗುವ ದಾಖಲೆಗಳು..

*ಸಂಧ್ಯಾಸುರಕ್ಷ*
 ತಿಂಗಳಿಗೆ 1,000 / - ( ಪಿಂಚನಿ ಯೋಜನೆ )

*ವಯೋಮಿತಿ* :- 65 ರಿಂದ 80 ರ ಒಳಗೆ
ಬೇಕಾಗುವ ದಾಖಲೆಗಳು : 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್‌ಬುಕ್
4 ) ಫೋಟೋ ಒಂದು 

*ಸೀನಿಯರ್ ಸಿಟಿಝನ್ ಕಾರ್ಡ್* 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್ 
3 ) ಫೋಟೋ ಒಂದು

*ಕಿಸಾನ್ ಸನ್ಯಾನ್ ಯೋಜನೆ*
ರೈತರಿಗೆ ವಾರ್ಷಿಕ 6,000 / - ಪಿಂಚನಿ 
( 15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ )
1 ) ಆಧಾರ್ ಕಾರ್ಡ್ 
2 ) RTC
3 ) ಬ್ಯಾಂಕ್ ಪಾಸ್‌ಬುಕ್

*PF Claim ( ಭವಿಷ್ಯ ನಿಧಿ )*
1 ) ಆಧಾರ್ ಕಾರ್ಡ್ 
2 ) ಬ್ಯಾಂಕ್ ಪಾಸ್‌ಬುಕ್
3 ) UAN Number 
4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

*ರೇಷನ್ ಕಾರ್ಡ್ ಹೊಸತು ಮತ್ತು ಸೇರ್ಪಡೆ*
*APL*
1 ) ಆಧಾರ್ ಕಾರ್ಡ್
*BPL*
1 )ಆಧಾರ್ ಕಾರ್ಡ್
2 ) ಆದಾಯ ಪ್ರಮಾಣ ಪತ್ರ

*ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್*
1 ) ಆಧಾರ್ ಕಾರ್ಡ್ 
2 ) ರೇಷನ್ ಕಾರ್ಡ್

*ಪಾನ್ ಕಾರ್ಡ್*
1 ) ಆಧಾರ್ ಕಾರ್ಡ್ 
2 ) 2 ಫೋಟೊ

*ಪಾಸ್‌ಪೋರ್ಟ್*
1 ) ಆಧಾರ್ ಕಾರ್ಡ್
2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ 
3 ) ಬ್ಯಾಂಕ್ ಪಾಸ್ ಬುಕ್

 
*ಕಟ್ಟಡ ಕಾರ್ಮಿಕರ ನೋಂದಾಣಿ ಮತ್ತು ರಿನೆವಲ್*
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್ ಬುಕ್
4 ) ಫೋಟೊ ಒಂದು
5 ) ವೋಟರ್ ಐಡಿ
6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ
7 ) ನಾಮಿನಿ ಆಧಾರ್ 
8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್
9 ) ಮಕ್ಕಳ ಆಧಾರ್ ಕಾರ್ಡ್
10 ) ೨ ಪೋಟೊ

 *ದಯವಿಟ್ಟು ಈ ಯೋಜನೆಯ ಬಗ್ಗೆ  ಜಾಗೃತಿ ಮೂಡಿಸಿ**

*ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ  ಈ ಸುದ್ದಿಯನ್ನ ದಯವಿಟ್ಟು  ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ* 

       *ಕಾರ್ಮಿಕ ಕಾರ್ಡ್*

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 *ಉಪಯೋಗಗಳು*
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/- 
 
ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ವಯಸ್ಸಿನ ಮಿತಿ 18 ರಿಂದ 55 ವರ್ಷ.

 *ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ* 

*ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ*

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ 
      👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

*ಅರ್ಜಿ ನಮೂನೆಯನ್ನು*

 *ವಿಧವೆಯಾರಿಗಾಗಿ*
*(ಕೇಂದ್ರ ಸರ್ಕಾರ ಸ್ಕೀಮ್)*
********************
ರಾಷ್ಟ್ರೀಯ ಕುಟುಂಬ  ಸಹಾಯಧನ ಯೋಜನೆ
ವಿಧವೆ ಸ್ರೀಯರಿಗೆ  20000/-ರೂಪಾಯಿ ಧನಸಹಾಯ ಯೋಜನೆ.

*ಅರ್ಜಿ ಹಾಕಬೇಕಾಗಿರೋದು ಅವರವರ ಊರಿನ ಗ್ರಾಮಲೆಕ್ಕಿಗರಿಗೆ(VA).*

*ಅರ್ಜಿಯೊಂದಿಗೆ :*
•ಆಧಾರ್ ಕಾರ್ಡ್(ಗಂಡ & ಹೆಂಡತಿ ಇಬ್ಬರ ಆಧಾರ್ ಕಾರ್ಡ್)
•ರೇಷನ್ ಕಾರ್ಡ್
•ಬ್ಯಾಂಕ್ ಖಾತೆ
•ಗಂಡನ ಡೆತ್ ಸರ್ಟಿಫಿಕೇಟ್
 xerox ಕಾಪಿ ಸೇರಿಸಿ ಕೊಡಬೇಕು.

🛑ಸೂಚನೆ‼️
*ಮರಣ ಹೊಂದಿದ ವ್ಯಕ್ತಿ 60ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಮರಣ ಹೊಂದಿದ 6 ತಿಂಗಳ ಒಳಗೆ ಅರ್ಜಿಹಾಕತಕ್ಕದ್ದು*

ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ ವಿದವೆಯರಾದ ಸ್ತ್ರೀಯರಿಗೆ ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ*

*ಅರ್ಜಿ ಸಲ್ಲಿಸಲು ಕಚೇರಿಯಲ್ಲಿ  ವಿಚಾರಗಳನ್ನು ತಿಳಿಯಬಹುದು.

*1.ಮನೆ ನಿರ್ಮಾಣಕ್ಕೆ ಸಹಾಯಧನ:*

*a)* ಹಳೆ ಮನೆ / ಖಾಲಿ ಜಾಗ ಇದ್ದವರಿಗೆ ನಗರ ಪ್ರದೇಶದವರಿಗೆ:
ವಾಜಪೇಯಿ ವಸತಿ ಯೋಜನೆ 2.7 ಲಕ್ಷ (1.2  state Govt + 1.5 Central Govt)ಹಂತ ಹಂತದಲ್ಲಿ ಹಣ ಬಿಡುಗಡೆ.

*b)* ಹಳೆ ಮನೆ / ಖಾಲಿ ಜಾಗ ಇದ್ದ  ಗ್ರಾಮೀಣ ಪ್ರದೇಶದವರಿಗೆ: (ಮಹಿಳಾ ಅರ್ಜಿದಾರರಿಗೆ)
ಬಸವ ವಸತಿ ಯೋಜನೆ 1.2 ಲಕ್ಷ + 20000 (ನರೇಗಾ ಜಾಬ್ ಕಾರ್ಡ್ ಮಾಡಿದ್ದಲ್ಲಿ ಮಾತ್ರ)
ಹಂತ ಹಂತದಲ್ಲಿ ಹಣ ಬಿಡುಗಡೆ.

*ಅರ್ಜಿ ಸಲ್ಲಿಸುವುದು*: ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆ /Self in Online  (ಪ್ರಧಾನ ಮಂತ್ರಿ ಆವಾಸ್ ಯೋಜನೆಯ http://pmaymis.gov.in/  ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಅದು ಆಯಾ ವ್ಯಾಪ್ತಿಯ ಗ್ರಾಮ ಪಂ/ ನಗರಪಾಲಿಕೆಗಳಿಗೆ ರವಾನೆಯಾಗುತ್ತದೆ)

*ಬೇಕಾದ ದಾಖಲೆಗಳು* 
1. ಆರ್ ಟಿ ಸಿ. Copy.
2.ಒಪ್ಪಿಗೆ ಪತ್ರದ.
3.ಖಾತೆ ಪತ್ರದ copy.
4 Aadar Card copy.
5.Ration Card.
6. Voter Id copy.
7.Bank PassBook Copy
8.Income & Caste Certificate copy
9.Passport size photo-1
(ಅರ್ಜಿದಾರರು ಅಲ್ಲದ ಮನೆಯ ಇತರ ಸದಸ್ಯರ ಹೆಸರಿನಲ್ಲಿ ಆರ್ ಟಿ ಸಿ ಇದ್ದಲ್ಲಿ ಅವರಿಂದ ಒಪ್ಪಿಗೆ ಪತ್ರ)

*2.ಜಾಗ ಇಲ್ಲದವರು ನಿವೇಶನಕ್ಕಾಗಿ ಅರ್ಜಿ*
ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆಗಳಲ್ಲಿ ಅರ್ಜಿ ಸಲ್ಲಿಸುವುದು.
1.Aadar Card copy
2.Ration Card
3.Voter Id copy
4.Bank PassBook Copy
5.Income & Caste Certificate copy

*ನಿವೇಶನ (ಜಾಗ) ಮಂಜೂರಾದಲ್ಲಿ ವಾಜಪೇಯಿ ವಸತಿ ಯೋಜನೆ / ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಧನಸಹಾಯ ಕೂಡ ಪಡೆಯಬಹುದು*

*3.ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್:*
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕುಗಳಲ್ಲಿ ಆರು ಲಕ್ಷ ಲೋನ್ ಪಡೆದಲ್ಲಿ ಬಡ್ಡಿ ಮೊತ್ತ 6 % ರಂತೆ ಸುಮಾರು ಎರಡು ಲಕ್ಷದವರೆಗೆ ಸಬ್ಸಿಡಿ ಕೇಂದ್ರ ಸರಕಾರದಿಂದ ಖಾತೆಗೆ ಬೀಳಲಿದ್ದು, ಉಳಿದ ಹಣ ಪಾವತಿಮಾಡಬೇಕು. ಯೋಜನೆಗೆ ಅರ್ಜಿಯನ್ನು ಬ್ಯಾಂಕ್ ಮೂಲಕವೇ ಸಲ್ಲಿಸುವುದು.

*4.* ಗ್ರಾಮೀಣ ಪ್ರದೇಶದವರಿಗೆ ನರೇಗಾ ಯೋಜನೆ ಅಡಿಯಲ್ಲಿ ಬಾವಿ ತೋಡಲು ಸುಮಾರು 1 ಲಕ್ಷದ ವರೆಗೂ & ದನದ ಕೊಟ್ಟಿಗೆ ಗೆ 16000 ವರೆಗೂ ಸಹಾಯಧನವಿದೆ.



1) *ಸ್ವಯಂ ಉದ್ಯೋಗ ಯೋಜನೆ*
2) *ಸ್ವಯಂ ಉದ್ಯೋಗ ಯೋಜನೆ*
3) *ಶ್ರಮಶಕ್ತಿ ಯೋಜನೆ* 
4)    *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
5)    *ಕಿರುಸಾಲ ಯೋಜನೆ*
6)    *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*
7)    *ಗಂಗಾಕಲ್ಯಾಣ ಯೋಜನೆ* 
8)    *ಪಶು ಸಂಗೋಪನಾ ಯೋಜನೆ*
9)    *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ* 

1) *ಸ್ವಯಂ ಉದ್ಯೋಗ ಯೋಜನೆ*: 

  ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್ಗವಳು/ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5.00 ಲಕ್ಷ ರೂವರೆಗೆ ಆರ್ಥಿಕ ನೆರವು ಒದಗಿಸುವುದು. ಘಟಕ ವೆಚ್ಚ 5,00,000/- ರೂಗಳವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1,65,000/-ಗಳ ಸಹಾಯಧನ ಹಾಗೂ ಘಟಕವೆಚ್ಚದ ರೂ.1,00,000/-ರೂಗಳ ಒಳಗೆ ಇರುವ ಚಟುವಟಿಕೆಗಳಿಗೆ ಶೇಕಡಾ 50% ಅಥವಾ ಗರಿಷ್ಟ ಮಿತಿ ರೂ. 35,000/- ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ಗಿಳು ಭರಿಸುವುದು. 
ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಕೊಟೇಶನ್/ಯೋಜನಾವರದಿ ಮತ್ತು ಲೈಸಸ್ಸ್ 
4.)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನುಾ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರಣ  ಪತ್ರ) 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು 
8)ಅರ್ಜಿದಾರರು ಬ್ಯಾಂಕ್ ಪ್ರಭಂದಕರನ್ನು ಸಂರ್ಪಕಿಸಿ ಸಾಲ ನಿಡುವ ಬಗ್ಗೆ ಕಚಿತಪಡಿಸುವುದು.

2) *ಶ್ರಮಶಕ್ತಿ ಯೋಜನೆ*
 
ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಡು ಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿಕುಲಕಸುಬುದಾರರು ಆಧುನಿಕತಂತ್ರಜ್ಞಾನ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯಾ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ, „ಶ್ರಮಶಕ್ತಿ‟ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಸಾಂಪ್ರದಾಯಿಕ ವೃತ್ತಿ ಕುಲಕಸುಬುಗಳಾದ ಅಟೋಮೊಬೈಲ್ರಿಿಪೇರಿ ಮತ್ತು ಸರ್ವಿಸಿಂಗ್, ಗ್ಯಾಸ್ ಅಂಡ್ ಅರ್ಕ್ ವೆಲ್ಡಿಂಗ್, ಬೆಡ್ ಮೇಕಿಂಗ್, ವಲ್ಕನೈಸಿಂಗ್ ಮರದಕೆತ್ತನೆ ಕೆಲಸ, ಬಡಗಿ, ಟೈಲರಿಂಗ್, ಬಟ್ಟ ಮೇಲೆ ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ, ಬೆತ್ತದ ಕೆಲಸ ಸಿಲ್ಕ್ ರೀಲಿಂಗ್ ಮತ್ತು ಟ್ವಸ್ಟಿಂಗ್ ಕೆಲಸ, ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಮರದ ಆಟಿಕೆ ತಯಾರಿಕೆ ಮಂಡಕ್ಕೆ ಬಟ್ಟಿ, ಅವಲಕ್ಕೆ ಬಟ್ಟಿ, ಬಿದರಿ ವರ್ಕ್, ಕುಮ್ಮಾರಿಕೆ, ಎಲೆಕ್ಟೀಕಲ್ ವೈರಿಂಗ್ ಅಂಡ್ ರೀವೈಡಿಂಗ್ ಆಫ್ ಮೋಟಾರ್ಸ್, ಮೀನುಗಾರಿಕೆ ಸಲಕರಣೆ ಖರೀದಿ, ಹ್ಯಾಂಡಿಕ್ರಾಪ್ಟ್, ಹೈನುಗಾರಿಕೆ, ಕಲ್ಲುಕತ್ತನೆ ಕೆಲಸ, ಪಾತ್ರೆ ತಯಾರಿಕೆ, ಕಲಾಯಿ ಕೆಲಸ, ಸುಣ್ಣದಕಲ್ಲು ಸುಡುವಿಕೆ, ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಅಡಿಕೆತಟ್ಟೆ ಕಾಗದ ತಟ್ಟೆ ತಾಯಾರಿಕೆ, ಕಿರಾಣಿ ಅಂಗಡಿ, ಫಾಸ್ಟ್ ಪುಡ್ ಸೆಂಟರ್, ಬೇಕರಿ ಮತ್ತು ಕಾಂಡಿಮೆಂಟ್ಸ್, ತಂಪು ಪಾನೀಯ, ಕಬ್ಬಿನರಸ, ರೇμÉ್ಮ/ಹತ್ತಿ ನೇಕಾರಿಕೆ, ಏಲಕ್ಕಿ ಹಾರತಯಾರಿಕೆ, ಮೇಣದ ಬತ್ತಿ ತಯಾರಿಕೆ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಪೊರಕೆ ತಯಾರಿಕೆ, ಸೋಫಾ ಸೆಟ್ ತಯಾರಿಕೆ, ಬ್ಯೂಟಿ ಪಾರ್ಲರ್, ಎಲೆಕ್ಟಿಕಲ್ ಲಾಂಡ್ರಿ ಎ.ಸಿ/ಪ್ರಿಡ್ಜ್ರಿಪೇರಿ, ಜರ್ಡೋಸಿ/ಎಂಬ್ರಾಯಿಡರಿ, ಫೋಟೋ ಫ್ರೇಮಿಂಗ್ ಮುಂತಾದ ಅವಶ್ಯಕತೆಗೆ ಇರುವ ಯಂತರೋಪಕರಣಗಳು/ಸಲಕರಣೆಗಳು ಹಾಗೂ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು ರೂ. 50,000/- ದವರೆಗೆ ಸಾಲ:ಸಹಾಯಧನ ಸೌಲಭ್ಯವನ್ನು ನೀಡಲಾಗುವುದು. ಘಟಕ ವೆಚ್ಚ ರೂ. 50,000/-ಗಳ ಸಾಲದ ಮಂಜೂರಾತಿಯು ಸಾಂಪ್ರದಾಯಿಕ (ಪರಂಪರಾಗತ ಕುಶಲಕಮಿಗಳು/ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕೆತೆ ಮತ್ತು ಆದಾಯಗಳಿಕಗೆ ಅನುಗುಣವಾಗಿ ರೂ.25,000/-ಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇಕಡಾ 50% ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇಕಡಾ 4%ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು. 

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2).ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ ಮತ್ತು ಲೈಸಸ್ಸ್ 
4)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5)ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರ ಪತ್ರ) 
7)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

3) *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
 
ಈ ಯೋಜನೆಯ ಅಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್(ಎಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೋಮಾ, ನರ್ಸಿಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್ ಮೈಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಕಲ್ ಮ್ಯಾನೆಜ್ಮೆಂ ಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ. 10,000/- ದಿಂದ ರೂ.75,000/-ದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯು ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ. 

‘ಅರಿವು’ (CET) ಯೋಜನೆ
 
ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಕಿಂಗ್ ಪಡೆದು ವೃತ್ತಿಪರಶಿಕ್ಷಣಕ್ಕೆ ಸೀಟನ್ನು ಆಯ್ಕೆಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಏಇಂ ಮೂಲಕ ಪಾವತಿಸುತ್ತದೆ.
 
‘ಅರಿವು’ (NEET) ಯೋಜನೆ 

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ, ಅವರ ಬೋಧನಾ ಶುಲ್ಕದ ಸರ್ಕಾರಿ ಸೀಟ್ನಂ ಶೇ.100ರಷ್ಟು ಅಥವಾ ಖಾಸಗಿ ಸೀಟ್ನಹ ಶೇ.50ರಷ್ಟು ಸಾಲವನ್ನಾಗಿ ಮಂಜೂರು ಮಾಡಲಾಗುತ್ತದೆ. 

ಬೇಕಾಗುವ ದಾಖಲಾತಿಗಳು: 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 6,00,000/-ರೂಗಳ ಒಳಗಿರಬೇಕು. 
2) ವಿದ್ಯಾರ್ಥಿಯ 4 ಭಾವಚಿತ್ರ ಮತ್ತು ತಂದೆ ಅಥವಾ ತಾಯಿಯ 2 ಭಾವಚಿತ್ರ. 
3)ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
4) ಎಸ್.ಎಸ್.ಎಲ್.ಸಿ, ಡಿಪ್ಲೋಮಾ, ಪಿಯುಸಿ, ಡಿಗ್ರಿ ಮತ್ತು ಸೆಮಿಸ್ಟರ್ ಮಾಕ್ರ್ಸ್ ಕಾರ್ಡ್(ದೃಡಿಕರಿಸಿದ ಪ್ರತಿ)
5) ಸ್ಟಡಿ ಸರ್ಟಿಫಿಕೇಟ್ ಮೂಲ ಪ್ರತಿ
6)ಫೀಸ್ ಸ್ಟ್ರಕ್ಚರ್ (ಒಟ್ಟು ವ್ಯಾಸಂಗದ ಅವಧಿ). 
7) ಸಿಇಟಿ/ನೀಟ್ ಪ್ರಮಾಣ ಪತ್ರದ ಜರಾಕ್ಸ್. 
8) 50 ರೂಪಾಯಿಯ ಛಾಪಾ ಕಾಗದ (Indemnity Bond) ತಂದೆ ಅಥವಾ ತಾಯಿಯ ಹೆಸರಿನಲ್ಲಿ (ನೋಟರಿಯೊಂದಿಗೆ) 2nd Party DM KMDC  ಎಂದು ನಮೂದಿಸಬೇಕು. 
9) ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ ಬ್ಯಾಂಕ್ ಖಾತೆ, (Bank name, Account payee name, Account number, ifsc code) ಮತ್ತು ಇಮೇಲ್ ಐಡಿ.

4) *ಕಿರುಸಾಲ ಯೋಜನೆ*. 

ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮತೀಯ ಅಲ್ಪಸಂಖ್ಯಾತರು ಸಾಮನ್ಯಾವಾಗಿ ಅನಕ್ಷರಸ್ಥರಾಗಿದ್ದು, ಅಂತಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವಾ ಕುಶಲಯಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. 
ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗುಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ ಸಹಾಯ ಗುಂಪುಗಳು ಮೂಲಕ ಯೋಜನೆಯನ್ನು ಸಿದ್ದಪಡಿಸಿ ಅನುμÁ್ಠನಗೊಳಿಸಬುದಾಗಿದೆ. ಸ್ವ-ಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದಲ್ಲ. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇಕಡ 50 ರಷ್ಟು ಸಹಯಾಧನ, ಗರಿಷ್ಟ ರೂ.5,000/-ಗಳು ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕಿನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವ ಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇಕಡ 5ರಬಡ್ಡಿ ದರದಲ್ಲಿ ನೀಡಬೇಕು. 

ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಸಂಘದ ಹೆಸರಿನ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ. ಮತ್ತುssಸಂಘ ರಚನೆಯಾಗಿ  ಕನಿಷ್ಟ 1 ವರ್ಷ ಆಗಿರಬೇಕು 
6) ಬ್ಯಾಂಕ್ ಬೇ ಬಾಕಿ ಪ್ರಮಾಣ ಪತ್ರ. 
7) ಸಂಘದ ನಡಾವಳಿ ಪುಸ್ತಕ. 
8) ಸ್ವಸಹಾಯ ಗುಂಪಿನ ಗಾತ್ರ ಕನಿಷ್ಟ 10 ರಿಂದ ಗರಿಷ್ಟ 20 ಸದಸ್ಯರ ಮಿತಿಯಲ್ಲಿರಬೇಕು.
9)ಪ್ರತಿ ಸದಸ್ಯರ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜರಾಕ್ಸ್ಪ್ರರತಿ. 
10)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 10) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು. 

5) *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*  (Minoritys Farmers Scheme) :

ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ಕೀಳುವ ಯಂತ್ರ, ಪಂಪ್ಸೆ ಟ್, ಟ್ರಾಕ್ಟರ್, ಮುಂತಾದ ನೂತನ ಕೃಷಿ ಸಲಕರಣಿಗಳನ್ನು sಶೇ.50 ರಷ್ಟು ಸಹಾಯಧನ ಸೇರಿ ಗರಿಷ್ಟ 1 ಲಕ್ಷ ರೂ. ಘಟಕ ವೆಚ್ಚದಲ್ಲಿ ನೀಡಲಾಗುವುದು.

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
2)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ)
3) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
4) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್
5) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
6) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು್ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
7) )ಆರ್.ಟಿ.ಸಿಯ ಮೂಲಪ್ರತಿ  
8) ಕೊಟೇಶನ್  
9) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ(Affidavit).
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ (Affidavit).

6) *ಗಂಗಾಕಲ್ಯಾಣ ಯೋಜನೆ*
 
ಈ ಯೋಜನೆಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಯಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2.00 ಲಕ್ಷ ರೂಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ತೆರೆದ ಬಾವಿ ಕೊರೆಯಿಸಿ ಪಂಪ್ಸೆ ಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸುವುದು.
ಬೇಕಾಗುವ ದಾಖಲಾತಿಗಳು : 

1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/
2) ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಆರ್.ಟಿ.ಸಿಯ ಮೂಲಪ್ರತಿ ಹಾಗೂ ಅರ್ಜಿದಾರರ 4 ಭಾವಚಿತ್ರ 
4) ಇಸಿ, ಭೂ ನಕ್ಷೆ, ವಂಶವೃಕ್ಷ(ಸಂತತಿ ನಕ್ಷೆ) ಮತ್ತು ಕಂದಾಯ ರಶೀದಿ ಮೂಲ ಪ್ರತಿ 
5) ಸಣ್ಣ ಹಿಡುವಳಿದಾರರ ಪ್ರಮಾಣಪತ್ರ.(ತಹಶೀಲ್ದಾರರಿಂದ) 
6).ಕೃಷಿ ಅವಲಂಬಿತರಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಂದ ದೃಢೀಕರಣ ಪತ್ರ. 
7) ಬೇರೆ ನೀರಾವರಿ ಸೌಲಭ್ಯ ಇಲ್ಲದ ಬಗ್ಗೆ ಸ್ವಯಂ ಘೋಷಣಾ ಪತ್ರ. 
8) ಕೊಳವೆ ಬಾವಿ ಕೊರೆಯುವ ಬಗ್ಗೆ ಗ್ರಾಮ ಪಂಚಾಯತ್ನ  ಪಿ.ಡಿ.ಒ ರಿಂದ ಪಡೆದ ಆಕ್ಷೇಪಣಾ ರಹಿತ ಪ್ರಮಾಣ ಪತ್ರ. 9)ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಮಾಣ ಪತ್ರ. 
10) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 11)ಅರ್ಜಿದಾರರ ವಯಸ್ಸು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

7) *ಪಶು ಸಂಗೋಪನಾ ಯೋಜನೆ*
 
ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ.50 ರಷ್ಟು ಸಹಾಯಧನ ಸೇರಿ ರೂ.40,000 ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ.100ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗುವುದು. 

ಬೇಕಾಗುವ ದಾಖಲಾತಿಗಳು: 
1) ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 1,03,000/- ಒಳಗಿರಬೇಕು. 
2) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಜಾನುವಾರು ಮೌಲ್ಯ ಬಗ್ಗೆ ಪಶು ವೈದ್ಯಾದಿಕಾರಿಯಿಂದ ಪ್ರಮಾಣ ಪತ್ರ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ). 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
8) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ
9) ಕಳೆದ 05 ವರ್ಷಗಳಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

8) *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*
 
ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದವರು ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿಧ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಗದೇ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಟ 3.00ಲಕ್ಷಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಟ ರೂ. 4.00 ಲಕ್ಷಗಳಿಂದ ಗರಿಷ್ಟ ರೂ. 7.50ಲಕ್ಷಗಳಾಗಿರತಕ್ಕದ್ದು (ತೆರಿಗೆಯನ್ನು ಹೊರತುಪಡಿಸಿ). 

ಬೇಕಾಗುವ ದಾಖಲಾತಿಗಳು: 
1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
 2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
3ಕೊಟೇಶನ್ ಮತ್ತು ಲೈಸಸ್ಸ್ ಬ್ಯಾಡ್ಜ್ನೊಂ.ದಿಗೆ. 
4. ಅರ್ಜಿದಾರರ  ತಲಾ ಮೂರು ಭಾವಚಿತ್ರ. 
5. ಅರ್ಜಿದಾರರ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ. 
6. ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
7.ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ  ಪತ್ರ) 
8. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
9. ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ. 
10. ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
11. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.




 ಇದರ ಅಡಿಯಲ್ಲಿ ತಮ್ಮ ಹತ್ತಿರದ  ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ ಉದ್ಯೋಗ ಚೀಟಿ (job card) ಮಾಡಿಸಿ ಕೊಳ್ಳಲು ವಿನಂತಿ.  

ಒಂದು ಕುಟುಂಬಕ್ಕೆ 150 ದಿನಗಳ ಉದ್ಯೋಗ ಖಾತರಿ,ಒಂದು ದಿನಕ್ಕೆ 249/-ಕೂಲಿ ದರವನ್ನಾಗಿ ನಿಗದಿ ಪಡಿಸಲಾಗಿದೆ. 

ಇದರ ಮುಖ್ಯ ಉದ್ದೇಶ ಗ್ರಾಮೀಣ ಬಡ ಜನರಿಗೆ ಆಧಾರವಾಗಿ ನೈಸಗ೯ಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥಿ೯ಕ ಭದ್ರತೆ ಒದಗಿಸುವುದು ಮತ್ತು ಆಸ್ತಿ ಸೃಜನೆ ಮಾಡುವುದಾಗಿದೆ.

 ಇದರಿಂದಾಗುವ ಪ್ರಯೋಜನಗಳು:-

1.ಸಕಾ೯ರದಿಂದ ವಸತಿ ಮಂಜೂರಾದರೆ ಈ ಯೋಜನೆಯ ಅಡಿಯಲ್ಲಿ ಕೂಲಿ ಹಣ 22,410 ರೂ/- ದೊರೆಯುತ್ತದೆ.

2.ದನದ ಕೊಟ್ಟಿಗೆ ,ಕುರಿ ಶೆಡ್,ಮೇಕೆ ಶೆಡ್,ಕೋಳಿ ಶೆಡ್,ಹಂದಿ ಶೆಡ್ ನಿಮಾ೯ಣಕ್ಕೆ 43,000/- ದೊರೆಯುತ್ತದೆ.

3. ಜಮೀನು ಸಮತಟ್ಟು ಮಾಡಲು 10,000/- ದೊರೆಯುತ್ತದೆ.

4. ಜಮೀನಿನಲ್ಲಿ ತಡೆ ಗೋಡೆ( ರಿವೀಟ್ ಮೆಂಟ್ ) ಕಟ್ಟಲು ಪ್ರತೀ ರೈತರಿಗೆ 1 ಲಕ್ಷ ರೂ/- ವರೆಗೆ ದೊರೆಯುತ್ತದೆ.

5.ಜಮೀನಿನಲ್ಲಿ ಕೃಷಿ ಹೊಂಡ ನಿಮಾ೯ಣ ಮಾಡಲು 43.000/- ದೊರೆಯುತ್ತದೆ.

6.ಜಮೀನಿನಲ್ಲಿ ಕೊಳವೆ ಬಾವಿಗೆ ಹಿಂಗು ಗುಂಡಿ ನಿಮಾ೯ಣ ಮಾಡಲು 19.000/- ದೊರೆಯುತ್ತದೆ.

7. ಮನೆಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗೆ 30.000/- ದೊರೆಯುತ್ತದೆ.

8. ತಮ್ಮ ಜಮೀನುಗಳಲ್ಲಿ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳು

   ಬೆಳೆ         ಹೆಕ್ಟೇರ್ ಗೆ

a. ತೆಂಗು   - 62.496/-
b. ಗೇರು    - 72.048/-
c. ಮಾವು,ಸಪೋಟ  - 101957 
d. ದಾಳಿಂಬೆ - 59879/-
e. ಸೀಬೆ  -  94704/-
f.  ಸಿಟ್ರಸ್ - 71316/-
g. ಹುಣಸೆ - 94704/-
h.ಸೀತಾಫಲ  -  53330/-
i. ನುಗ್ಗೆ     -    116996/-
j. ಬಾಳೆ   -    211656/-
k. ಪಪ್ಪಾಯ - 205498/- 

9. ತೇಗ, ವನ್ನೆ, ಬೀಟೆ, ಶ್ರೀಗಂಧ,ಅಕೇಶಿ, ರಕ್ತಚಂಧನ, ಸಿಲ್ವರ್, ಟೇಕ್ ಇತರೆ ಜಾತಿಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಲು MGNREGA  ಯೋಜನೆಯಲ್ಲಿ ಸಹಾಯ ಧನ  ದೊರೆಯುತ್ತದೆ.

10. ಹಿಪ್ಪುನೇರಳೆ ಹೊಸ ನಾಟಿ ಮತ್ತು ಹಿಪ್ಪುನೇರಳೆ ಮರದ ಕಡ್ಡಿ ನೆಡಲು ಸಹಾಯ ಧನ ದೊರೆಯುತ್ತದೆ.

11. ಮೀನು ಸಾಕಾಣಿಕೆ ತೊಟ್ಟಿ ನಿಮಿ೯ಸಲು ಸಹಾಯ ಧನ ದೊರೆಯುತ್ತದೆ.



1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. ​ವಿದ್ಯಸಿರಿ​ ​ಮತ್ತು ಶುಲ್ಕ​ ​ವಿನಾಯಿತಿ​
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. ​ಸರ್ಕಾರದ​ ​ಧನಸಹಾಯಗಳ​ ​ವೆಬ್ ವಿಳಾಸ​

http://karepass.cgg.gov.in/ 

14. ​ಜಿಂದಾಲ್ scholarship​

 http://www.sitaramjindalfoundation.org/scholarships.php 

15. ​B.L ಹೇಮವತಿ ಧನಸಹಾಯ​

 http://www.blhtrust.org/schpro.html 

16. ​ಕೇಂದ್ರ ಸರ್ಕಾರದ ಧನಸಹಾಯಗಳು​

Central Govt Scholarship

     http://mhrd.gov.in/ 

Thursday 15 July 2021

Learners Tech

CLICK HERE TO VIEW

ಶಿಕ್ಷಕರ ವೇದಿಕೆ

CLICK HERE TO VIEW

ಕಗ್ಗ

CLICK HERE TO DOWNLOAD

HIGH SCHOOL MITR

CLICK HERE TO VIEW

ತನ್ವಿ ಚಿತ್ರಕಲಾ ಅಕಾಡೆಮಿ

ತನ್ವಿ ಚಿತ್ರಕಲಾ ಅಕಾಡೆಮಿ

ಸಕಾಲ

ಸಕಾಲ ಆನ್ ಲೈನ್ ಮಾಹಿತಿ

ಡಿ.ಎಸ್.ಇ.ಆರ್.ಟಿ ಯಿಂದ 4ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರಕಟಿಸಿರುವ ಅಭ್ಯಾಸ ಪುಸ್ತಕಗಳು

CLICK HERE TO DOWNLOAD

Tuesday 13 July 2021

ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ e- ಸಾಹಿತ್ಯ...

ಕರ್ನಾಟಕ ಸರ್ಕಾರ
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ1063044 e-ಪುಸ್ತಕಗಳು 63550 ಜರ್ನಲಗಳು 6858 ಮೌಲ್ಯಮಾಪನಗಳು  ಜೊತೆಗೆ ರಸಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು344 ಸಿಮ್ಯುಲೇಶನ ಲ್ಯಾಬಗಳನ್ನು ಕೂಡ ನೋಡಬಹುದು.ಕಲೆ,ವಾಣಿಜ್ಯ,ಲಿಟರೇಚರ್ ,ರ್ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ,ವಾಣಿಜ್ಯ ಸಾಹಿತ್ಯ,ಬಿಡುವಿನ ವೇಳೆಯಲ್ಲಿ ಸಾಹಿತ್ಯ ,ಮ್ಯಾಗ್ಜಿನ್ ಗಳು ನ್ಯೂಸ್ ಪೇಪರ್ ಗಳು,ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ,ಶಾಲೆ,ವಿಜ್ಞಾನ ಮತ್ತು ತಂತ್ರಜ್ಞಾನ,ಅಂತರರಾಷ್ಟ್ರೀಯ ವಿಡಿಯೋಗಳು ಲಭ್ಯ ಇವೆ.

CLICK HERE TO DOWNLOAD

Sunday 11 July 2021

ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು..

ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ  ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ.

·         ಚಹಾ ಅಥವಾ ಕಾಫಿಯ ಖಾಲಿ ಸೇವನೆಯು ಹಾನಿಕಾರಕವಾಗಿದೆ.

·         ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಎಂದಿಗೂ ಸೇವಿಸಬೇಡಿ.

·         ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. 


ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ. ಹಾಗಿ ಬೆಳಗಿನ ಉಪಹಾರದಲ್ಲಿ ಯಾವಾಗಲೂ ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಾಹಾರದಲ್ಲಿ ಹುಳಿ ವಸ್ತುಗಳನ್ನು ತಪ್ಪಿಸಬೇಕು.  ಏಕೆಂದರೆ ಅವುಗಳ ಸೇವನೆಯು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸಬೇಡಿ: 
1. ಟೀ-ಕಾಫಿ: 
ಹೆಚ್ಚಿನವರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸುವುದು ಹಾನಿಕಾರಕ. ಹಾಗಾಯಿ ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯುವಾಗ ಬಿಸ್ಕೆಟ್  ಆದರೂ ಜೊತೆಗಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸುವುದರಿಂದ ಆಸಿಡಿಟಿ  ಉಂಟಾಗುತ್ತದೆ.

2.  ಪೇರಳೆ ಹಣ್ಣು : ಪೇರಳೆ ಹಣ್ಣು ಜೀರ್ಣಕ್ರಿಯೆಗೆ  ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ  ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಹಣ್ಣು  ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು. 

3.  ಸೇಬುಹಣ್ಣು : ವಿಟಮಿನ್ ಎಬಿಸಿಕ್ಯಾಲ್ಸಿಯಂಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸೇಬಿನಲ್ಲಿ ಹೇರಳವಾಗಿ ಕಂಡುಬರುತ್ತವೆ.  ಇವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಸೇವಿಸುವುದು ಹಾನಿಕಾರಕವಾಗಿದೆ. 

4. ಸಲಾಡ್: ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಲಾಡ್ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಸೇವಿಸುವುದರಿಂದ ಆಸಿಡಿಟಿ  ಮತ್ತು ಎದೆಯುರಿ ಉಂಟಾಗುತ್ತದೆ.

MATHS TIME LINE

MATHS TIME LINE https://mathigon.org/timeline