Sunday, 14 November 2021
Wednesday, 3 November 2021
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
Deepawali special ದೀಪಾವಳಿ ವಿಶೇಷ.

ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
ದೀಪಾವಳಿ:
ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ದೀಪಾವಳಿ ಅರ್ಥ ಏನು?
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.
ನೀರು ತುಂಬುವ ಹಬ್ಬ :-
ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.
ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ
ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.
ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.
ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ, ಮುಂದಿನ ದೀಪಾವಳಿ ಆಚರಿಸೊಣವೇ? ಒಮ್ಮೆ ಚಿಂತಿಸಿ.
ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ;
ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಆಚರಿಸುವ ದಿನಗಳು
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. ೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.
ಪ್ರಾಮುಖ್ಯತೆ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿ ಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
ಆಚರಣೆ
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
Sunday, 17 October 2021
ಇಂದಿನ ವಿಷಯ:_ *ಅಕಾಲ ಮುಪ್ಪನ್ನು ತಡೆಯಿರಿ...
🦢 *ಅಮೃತಾತ್ಮರೇ, ನಮಸ್ಕಾರ* 🦢
🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
•••••••••••••••••••••••••••••••••••••••
*ದಿನಾಂಕ: 18.10.2021*
_*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-73*
••••••••••••••••••••••••••••••••••••••
✍️: _ಇಂದಿನ ವಿಷಯ:_
*ಅಕಾಲ ಮುಪ್ಪನ್ನು ತಡೆಯಿರಿ...*
••••••••••••••••••••••••••••••••••••••••
_ಆಮ್ಲೋ.... ಅತ್ಯಭ್ಯಾಸ್ಯ ತು ತನೋಃ ಕುರ್ಯಾತ್ ಶೈಥಿಲ್ಯಂ....||_
_ಲವಣಃ..... ಸೋ ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_
~_ಅಷ್ಟಾಂಗ ಹೃದಯ ಸೂತ್ರ ಸ್ಥಾನ, ಅಧ್ಯಾಯ-10/10-13_
_*ಅಂದರೆ, ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರದ ಶಿಥಿಲತೆಯೂ, ಅಕಾಲ ವಲಯ ಫಲಿತಗಳೂ ಉಂಟಾಗುತ್ತವೆ ಎಂದು...*_
*ಶಿಥಿಲ* = _ಮೆತ್ತಗಾಗುವಿಕೆ ಅಥವಾ ಹಣ್ಣಾಗುವಿಕೆ_
*ವಲಯ* = _ಚರ್ಮದ ಸುಕ್ಕುಗಳು_
*ಫಲಿತ* = _ಕೂದಲು ಬೆಳ್ಳಗಾಗುವುದು_
_*ವಲಯ ಫಲಿತಗಳು ಇಲ್ಲಿ ರೋಗರೂಪದಿಂದ ಬರುವಂತಹುಗಳಲ್ಲ, ಬದಲಾಗಿ ವಾರ್ಧಖ್ಯದ ಸೂಚಕವಾಗಿ ಬರುತ್ತವೆ!*_
_*ಸುಕ್ಕುಗಳು ಕೇವಲ ಹೊರ ಚರ್ಮದಲ್ಲಿ ಕಾಣಿಸಿಕೊಳ್ಳುತ್ತಿವೆ ಆದರೆ ವಾಸ್ತವದಲ್ಲಿ ಅದು ಒಳಗಿನ ಜೀವಕೋಶಗಳ ಮುದುಡಿಕೊಳ್ಳುವಿಕೆ, ಗಡುಸುಗೊಳ್ಳುವಿಕೆ ಮತ್ತು ಶಕ್ತಿಗುಂದಿಸುವಿಕೆಯಿಂದ ಆದದ್ದು, ಇದನ್ನೇ ಜೀವಕೋಶಗಳ ಅಂದರೆ ಈ ಶರೀರದ ವೃದ್ಧಾಪ್ಯ ಎಂದು ಕರೆಯುತ್ತೇವೆ.*_
*ವೃದ್ದಾವಸ್ಥೆ ಯಾವಾಗ ಬರಬೇಕು?*
_*ವಾಸ್ತವದಲ್ಲಿ ತನ್ನ 70ನೇ ಸಂವತ್ಸರದ ನಂತರ ವೃದ್ಧ ಎಂದು ಕರೆಸಿಕೊಳ್ಳಬೇಕಾದ ಮಾನವ ಶರೀರ ಇಂದು 40-50ಕ್ಕೇ ಬಂದಿಳಿದಿರುವುದು ಶೋಚನೀಯ?!*_ 🤔 🤔
_*ಮರಣ ಯಾವಾಗಲಾದರೂ ಬರಲಿ, ಅದು ಆಕಸ್ಮಿಕ 0-100+ ವರೆಗೆ ಯಾವಾಗಂದರೆ ಆಗ ದಾಳಿಯಿಡುವ ಮರಣದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಅಕಾಲ ವಾರ್ಧಖ್ಯದಿಂದ ಅನುಭವಿಸುವ ದೌರ್ಬಲ್ಯ, ರೋಗಗಳ ಬಗ್ಗೆ ಮಾನವ ಕಣ್ಣು ತೆರೆದು ನೋಡಬೇಕಿದೆ...*_
*ವೃದ್ಧಾವಸ್ಥೆ ಬೇಗ ಏಕೆ ಬರುತ್ತಿದೆ?*
_ಆಚಾರ್ಯ ವಾಗ್ಭಟರು ಹೇಳುವಂತೆ,_
📜
_ಆಮ್ಲೋ.... ಕುರ್ಯಾತ್ ಶೈಥಿಲ್ಯಂ....||_
_ಲವಣಃ.....ಅತಿಯುಕ್ತೋ.... ಖಲಿತಿಂ ಫಲಿತಂ ವಲಿಮ್ ||_
_*ಆಮ್ಲ ಮತ್ತು ಲವಣ ರಸಗಳ ಅಧಿಕ ಸೇವನೆಯಿಂದ ಶರೀರ ಹಣ್ಣಾಗುವುದು, ಅಕಾಲ ವಲಯ, ಫಲಿತಗಳು ಉಂಟಾಗುತ್ತವೆ!*_
_*ಶರೀರದಲ್ಲಿನ ಜೀವರಸವಾದ ವಿಪಾಕವನ್ನು ಆಮ್ಲೀಯತೆಯಿಂದ ಅಂದರೆ ಹುಳಿಬಿಡುವ ಆಹಾರ ಸೇವನೆಯ ಕಾರಣದಿಂದ ಮತ್ತು ಲವಣಾಧಿಕವಾದ ಕಟುತ್ವದಿಂದ ಅಂದರೆ ಅಧಿಕ ಲವಣಾಂಶಗಳನ್ನು ಸೇವಿಸುವ ಕಾರಣದಿಂದ ಹಾನಿಗೊಳಿಸಿಕೊಂಡು ಬೇಗ ಮುಪ್ಪನ್ನು ಬರಮಾಡಿಕೊಂಡಿದ್ದೇವೆ!!*_
*ಅಧಿಕ ಆಮ್ಲಸೇವನೆ ಎಂದರೆ ಯಾವುದು ಅದರಿಂದ ಏನಾಗುತ್ತಿದೆ?*
_*ಕೇವಲ ಹುಳಿರಸ ಇರುವ ಪದಾರ್ಥ ಸೇವನೆ ಎಂದುಕೊಳ್ಳುವುದು ಅರ್ಧ ಸತ್ಯವಾಗುತ್ತದೆ, ಯಾವುದು ನೀರಿನ ಸಂಪರ್ಕಕ್ಕೆ ಬಂದರೆ ಹುಳಿಯಾಗಿ ಬದಲಾಗುತ್ತದೋ ಅದು ಶರೀರದ ಒಳಗೆ ಹೋಗಿ ಹುಳಿಯನ್ನೇ ಬಿಡುತ್ತದೊ ಅವು ಕೂಡಾ ಹುಳಿರಸಗಳು. ಹಾಗಾಗಿ ಹುಳಿ ಎಂದರೆ, ನೇರ ಹುಳಿ ಇರುವ ಪದಾರ್ಥಗಳು ಮತ್ತು ಹುಳಿಬಿಡುವ ಪದಾರ್ಥಗಳು ಎರಡನ್ನೂ ಗ್ರಹಿಸಬೇಕು...*_
_*ಹಾಗಾದರೆ ಹುಳಿರಸ ಸೇವನೆ ಹಾನಿಕಾರಕವೇ? ಎಂದರೆ ಅಲ್ಲ ಖಂಡಿತಾ ಅಲ್ಲ ಅದು ಹೃದ್ಯ, ಅಂದರೆ ಹೃದಯ ಮತ್ತು ರಕ್ತನಾಳಗಳಿಗೆ ಹಿತವನ್ನು ಉಂಟುಮಾಡುತ್ತದೆ ಆದರೆ,*_
• _ಹುಳಿಯ ಮೂಲ ಮತ್ತು_
• _ಹುಳಿಯ ಪ್ರಮಾಣ ಬಹುಮುಖ್ಯ ಅಂಶ_
_*ಅಂದರೆ ಪ್ರಾಕೃತಿಕವಾಗಿ ಹುಳಿ ಇರುವ ಪದಾರ್ಥಗಳು ಆರೋಗ್ಯಕರ, ನಾವಾಗಿಯೇ ಕೃತಕವಾಗಿ ಹುಳಿ ಬರಿಸಿಕೊಳ್ಳುವ ಪದಾರ್ಥಗಳು ಅನಾರೋಗ್ಯಕರ ಎಂದು ಸ್ಥೂಲವಾಗಿ ವಿಂಗಡಿಸಿದರೂ.....*_
_*ಪ್ರಾಕೃತಿಕ ಹುಳಿಯನ್ನೇ ಅಧಿಕ ಪ್ರಮಾಣದಲ್ಲಿ ಸೇವಿಸುವುದು ವೃದ್ಧಾಪ್ಯವನ್ನು ಬೇಗ ತರುತ್ತದೆ!*_
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 1)*
_ನೇರ ಹುಳಿ ಇರುವ ನಿಂಬೆ, ಮಾವು, ಕಿತ್ತಲೆ, ದಾಳಿಂಬೆ, ಮೊಸಂಬಿ, ಹುಣಸೆ ಮುಂತಾದವುಗಳು ಶರೀರಕ್ಕೆ ಬೇಕು ಮತ್ತು ಇವು ಆರೋಗ್ಯಕರ..._
*ಆದರೆ ಪ್ರಮಾಣ ಮೀರಿದರೆ ಇವೂ ಸಹ ಅತ್ಯಂತ ಅಪಾಯಕರ!*
_ಉದಾಹರಣೆಗೆ:_
*ಉಪ್ಪಿನಕಾಯಿ ಕಲಸಿಕೊಂಡು ಅನ್ನ ಸೇವನೆ; ಪಲ್ಯ, ಸಾಂಬಾರುಗಳಿಗೆ ನಿಂಬೆಹಣ್ಣನ್ನು ಹೆಚ್ಚಾಗಿಯೇ ಹಿಂಡಿಕೊಂಡು ಸೇವಿಸುವುದು; ಅಡುಗೆಯಲ್ಲಿ ಹುಳಿಯನ್ನೇ ಹೆಚ್ಚು ಇರುವಂತೆ ತಯಾರಿಸುವುದು, ಇವೆಲ್ಲಾ ಅಪಾಯಕರ!*
_ಮಿತವಾದ ನೇರ ಹುಳಿ ಅತ್ಯಂತ ಆರೋಗ್ಯಕರ, ಅಂದರೆ_ *ಊಟಕ್ಕೆ ಉಪ್ಪಿನಕಾಯಿ ಎಷ್ಟೋ ಅಷ್ಟೇ* _ಆದರೆ ಸೂಕ್ತ!_ 🙄
••••••••••••••••••••••••••••••••••••••••••••••
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 2)*
_ಇನ್ನೊಂದು ರೀತಿಯ ಹುಳಿ ಪದಾರ್ಥಗಳಿವೆ, ನೀರಿನ ಸಂಪರ್ಕ ಬಂದನಂತರ ಹುಳಿಬಿಡುವ ಇವು ಮತ್ತು ಕಾಲ ಗತಿಸಿದಂತೆ ಹುಳಿಬಿಡುವ ಕೆಲವು ಪದಾರ್ಥಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ!_
_ಉದಾಹರಣೆಗೆ:_
*ಗೋಧಿ*
*ಮೈದಾ*
*ಉದ್ದಿನಬೇಳೆ*
_ಇವು ಕಿಣ್ವೀಕರಣಗೊಂಡು ಹುಳಿಬಿಡುವ ಕಾರಣ ಅಲ್ಕೋಹಾಲ್ ಉತ್ಪತ್ತಿ ಮಾಡುತ್ತವೆ, ಸೇವಿಸುವಾಗ ಹುಳಿ ಇರದಿದ್ದರೂ ಅನ್ನನಾಳದಲ್ಲಿ ಹುಳಿಬಿಟ್ಟು ಜೀವರಸವನ್ನು ಕೆಡಿಸುತ್ತವೆ, ಅವುಗಳೆಂದರೆ, ಚಪಾತಿ, ಬಿಸ್ಕೆಟ್, ಬ್ರೆಡ್, ಬನ್, ಕೇಕ್, ಪಿಜ್ಜಾ, ಬರ್ಗರ್ ಮುಂತಾದವುಗಳು...!_
*ಮೊಸರು* _ಸ್ವಭಾವತಃ ಸಿಹಿ ಅಥವಾ ಅತ್ಯಲ್ಪ ಹುಳಿ, ಆದರೆ ಸ್ವಲ್ಪವೇ ತಡಮಾಡಿ ಸೇವಿಸಿದರೂ ಹುಳಿಯಾಗಿ ಆರೋಗ್ಯ ಕೆಡಿಸುತ್ತದೆ...!_
*ಮಜ್ಜಿಗೆ* _ಸ್ವಭಾವತಃ ಒಗರಾಗಿದ್ದು ಅತ್ಯಂತ ಶ್ರೇಷ್ಠ ಆರೋಗ್ಯದಾಯಕ ಪೇಯ, ಸರ್ವರಿಗೂ ಸೂಕ್ತ, ಆದರೆ ತಡಮಾಡಿ ಸೇವಿಸಿದರೆ ಆರೋಗ್ಯವನ್ನು ಕೆಡಿಸುತ್ತದೆ!_
*ಹುಳಿಯ ಮೂಲ ಮತ್ತು ಪ್ರಮಾಣಕ್ಕೆ ಉದಾಹರಣೆ 3)*
_*ನಾವು ಸೃಷ್ಠಿಸಿಕೊಂಡ ಕೃತಕ ಜಲ ಆರ್.ಒ. ವಾಟರ್, ಇದು ಕುಡಿಯಲು ಎಳ್ಳಷ್ಟೂ ಯೋಗ್ಯವಲ್ಲದ ಆ್ಯಸಿಡ್ ರೂಪದ ದ್ರವ...! ಆರ್.ಒ. ಜಲ ಹುಳಿ ಇರುವ ಕಾರಣದಿಂದ ಸ್ವಲ್ಪ ರುಚಿ ಎನಿಸುತ್ತದೆ, ಹಾಗಾಗಿ ಬಾಟಲಿಯಲ್ಲಿ ಮಾರಾಟವಾಗುವ ಈ ಜಲ ರುಚಿಯಲ್ಲಿ ಸ್ವಲ್ಪ ಹಿತ ಎನಿಸುತ್ತದೆ, ಆದರೆ ವಾಸ್ತವದಲ್ಲಿ ಅತ್ಯಂತ ಅಪಾಯಕಾರ! ಏಕೆಂದರೆ, ನಿತ್ಯವೂ ಶರೀರಕ್ಕೆ ಇಂತಿಷ್ಟೇ ಪ್ರಮಾಣದ ಜಲ ಬೇಕೇ ಬೇಕು ಮತ್ತು ಈ ಶರೀರ ಜಲಾಂಶ ಪ್ರಧಾನವಾಗಿದೆ...*_
_*ಜೀವಕೋಶಗಳ ಒಳಗೆ ತುಂಬಿಕೊಂಡ ಜೀವಕ್ಕೆ ಆಧಾರಸ್ಥಂಭವಾದ ಇಂತಹ ಜೀವದ್ರವವನ್ನೇ ಹುಳಿಯಾಗಿಸಿಕೊಂಡರೆ ಅದು ಅತ್ಯಂತ ಅಪಾಯಕರ...*_ 🤔
•|•|•|•|•|•
*ಹುಳಿಯ ಅತಿ ಸೇವನೆಯು ಶರೀರದ ಶಿಥಿಲತೆಗೆ ಮತ್ತು ವೃದ್ಧಾಪ್ಯಕ್ಕೆ ಕಾರಣ ಏಕೆ?*
_ಹುಳಿ ಪಿತ್ತವನ್ನು ವರ್ಧಿಸುತ್ತದೆ, ಪಿತ್ತವು ಈ ಶರೀರದ ಜೀವಕೋಶಗಳ ಪೊರೆಯನ್ನು ಮೃದುವಾಗಿಸುತ್ತದೆ. ಅಂದರೆ ಹುಳಿಯ ಮೂಲವನ್ನು ಗ್ರಹಿಸದೇ ಸೇವಿಸಿದರೆ ಮತ್ತು ಪ್ರಾಕೃತಿಕವಾಗಿ ಸಿಗುವ ಹುಳಿಯನ್ನು ಅತಿಯಾಗಿ ಸೇವಿಸಿದರೆ ದೃಢವಾಗಿ ಮತ್ತು ಸ್ಥಿರವಾಗಿ ಇರಬೇಕಾದ ಕೋಶಪೊರೆ ಮೃದುವಾಗಿ ಮತ್ತು ಅಸ್ಥಿರವಾಗಿಬಿಡುತ್ತದೆ. ಆಗ ಅದು ಬಳುಗುವಂತಾಗಿ ಸುಕ್ಕುಗಟ್ಟುವುದು ಅನಿವಾರ್ಯ ಇದನ್ನೇ ಶರೀರದ ಶಿಥಿಲತೆ ಎಂದು ಕರೆಯಲಾಗಿದೆ., ಇದೇ ವೃದ್ಧಾಪ್ಯ. ಇದು ಅಕಾಲವೋ ಸಕಾಲವೋ ಎನುವುದು ಮುಖ್ಯ._
•|•|•|•|•|•
_*ಮುಂದುವರಿದು, ಸಕಾಲೀನ ವೃದ್ಧಾಪ್ಯ ಬರುವುದು ಹುಳಿಯಿಂದ ಅಲ್ಲ, ಅಲ್ಲಿ ಜೀವಕೋಶಗಳು ಗಡುಸಾಗುತ್ತಾ ಸಾಗುತ್ತವೆ, ಅದು ಪ್ರಕೃತಿ. ಆದರೆ ಉಪ್ಪು ಸೇವನೆಯಿಂದ ನಾವಾಗಿ ತಂದುಕೊಳ್ಳುವ ಗಡುಸುತನ ಅದುವೇ ಕೃತ್ರಿಮ ಮತ್ತು ಅಕಾಲ ವೃದ್ಧಾಪ್ಯ...*_
*ಅತಿಯಾದ ಉಪ್ಪು ಸೇವನೆಯ ಹಾನಿಯನ್ನು ನಾಳೆ ನೋಡೋಣ...*
🙏 *ಧನ್ಯವಾದಗಳು* 🙏
••••••••••••••••••••••••••••••••••••••
Wednesday, 6 October 2021
ಇಂದಿನ ವಿಷಯ: - ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!
🦢 *ಅಮೃತಾತ್ಮರೇ ನಮಸ್ಕಾರ* 🦢
🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
••••••••••••••••••••••••••••••••••••••••••••
*ದಿನಾಂಕ: 06.10.2021*
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-70
••••••••••••••••••••••••••••••••••••••••••••
✍️: *ಇಂದಿನ ವಿಷಯ:*
_ಶರನ್ನವರಾತ್ರಿಯ ಉಪವಾಸವು ನೂರಾರು ರೋಗಗಳನ್ನು ತಡೆಯುತ್ತದೆ!_
•••••••••••••••••••••••••••••••••••••••••
*ಈ ವರ್ಷದ ನವರಾತ್ರಿಯ ದಿನಾಂಕ:*
_06/07.10.2021 ರಿಂದ 14/15.10.2021 ರವರೆಗೆ ಇರುತ್ತದೆ._
*ಶರದೃತುವಿನಲ್ಲಿ ಭೂಮಿಯಲ್ಲಿ ಏನು ಬದಲಾವಣೆ ಆಗುತ್ತದೆ?:*
_ವರ್ಷಾ ಋತು ಮಳೆಯನ್ನು ಧಾರಾಕಾರವಾಗಿ ಸುರಿಸಿ, ಭೂಮಿಯ ಮೇಲಿನ ಕೊಳೆ, ಕಸ, ಗಿಡಮರಗಳ ಕೊಳೆತ ಅವಶೇಷ, ಸತ್ತ ಪ್ರಾಣಿಗಳ ಅವಶೇಷ ಮುಂತಾದವುಗಳನ್ನು ಎಳೆದು ತಂದು ನದಿ, ಹಳ್ಳ, ಕೆರೆ, ಡ್ಯಾಂ ಗಳಿಗೆ, ಕೊನೆಗೆ ಸಮುದ್ರಕ್ಕೂ ತಳ್ಳಿರುತ್ತದೆ. ಹೀಗೆ ಬಳಸುವ ಜಲಮೂಲಗಳೆಲ್ಲಾ ದೋಷಪೂರಿತವಾಗುವ ಕಾರಣ, ಶರದೃತುವಿನಲ್ಲಿ ಭೂಮಿಯ ಉತ್ತರಾರ್ಧ ಗೋಳದಲ್ಲಿ ಪಿತ್ತದೋಷ ಬಲವಾಗಿ ವರ್ಧಿಸುತ್ತದೆ. ಹೀಗೆ ಭೂಮಿಯಲ್ಲಿ ಪಿತ್ತದೋಷ ವರ್ಧಿಸಿದಾಗ ಮಾನವಾದಿ ಜೀವಿಗಳ ಶರೀರದಲ್ಲೂ ಪಿತ್ತದೋಷ ಹೆಚ್ಚುತ್ತದೆ!_
*ಶರದೃತುವಿನಲ್ಲಿ ದೇಹದ ಕ್ರಿಯೆ ಹೇಗಿರುತ್ತದೆ?:*
_ವರ್ಷಾ ಋತು ಕಳೆದು ಶರದೃತು ಬರುತ್ತಿದ್ದಂತೆಯೇ, ಮಳೆ ನಿಂತು ಅಥವಾ ಕಡಿಮೆಯಾಗಿ ಸೂರ್ಯ ಪ್ರಕಾಶಿಸತೊಡಗುವ ಮತ್ತು ಸಂಜೆಯಾದೊಡೆ ಚಳಿ ಆರಂಭವಾಗುವ ಈ ಸಮಯದಲ್ಲಿ ವರ್ಷಾ ಋತುವಿನಲ್ಲಿ ನಮ್ಮ ಶರೀರದಲ್ಲಿ ಸಂಚಯಗೊಂಡ ಪಿತ್ತದೋಷವು ಸರ್ವ ಶರೀರಕ್ಕೂ ಪಸರಿಸುತ್ತದೆ..._
_ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ನಮಗೆ ತಿಳಿಯುವ ಸತ್ಯ ಎಂದರೆ, ಈ ಕಾಲದಲ್ಲಿ ಪಿತ್ತಸ್ಥಾನದ, ಪಿತ್ತದೋಷದ ರೋಗಗಳಾದ, ರಕ್ತನಾಳಗಳ ವಿಕಾರಗಳು ಹೆಚ್ಚುತ್ತವೆ,_ *ಉದಾಹರಣೆಗೆ:* _ವೆರಿಕೋಸ್ ವೇನ್ಸ್, ಹೃದಯದ ರಕ್ತನಾಳಗಳು ಕಟ್ಟಿಕೊಂಡು ಹೃದಯಾಘಾತಗಳು, ಮೆದುಳಿನ ರಕ್ತನಾಳಗಳು ಕಟ್ಟಿಕೊಂಡು ಪಾರ್ಶ್ವವಾಯು, ಗ್ಯಾಂಗ್ರೀನ್, ಹಾಗೆಯೇ ಜಾಂಡೀಸ್, ನೇತ್ರದಾಹ, ಹಸ್ತ-ಪಾದ ದಾಹ, ಮೈಗ್ರೇನ್, ಆಮ್ಲಪಿತ್ತ ಮುಂತಾದ ಅನೇಕ ರೋಗಗಳು ಹೆಚ್ಚುವುದನ್ನು ಆಸ್ಪತ್ರೆಗಳ ಸಂಖ್ಯಾತ್ಮಕ ಪರಿಶೋಧನೆಯಿಂದ ತಿಳಿಯಬಹುದು..._
*ಉಪವಾಸ ಏಕೆ?*
_ಪಿತ್ತ ವರ್ಧಿಸಿರುವಾಗ, ಆಹಾರ ಸರಿಯಾಗಿ ಪಚನವಾಗದೇ, ಮತ್ತಷ್ಟು ಪಿತ್ತ ವರ್ಧಿಸುತ್ತದೆ. ಹಾಗಾಗಿ ಈಗಾಗಲೇ ಪ್ರಕೃತಿ ಸಹಜತೆಯಿಂದ ವೃದ್ಧಿಗೊಂಡ ಈ ಪಿತ್ತವನ್ನು ಹೊರಹಾಕಲು ಎರಡು ವಿಧಾನಗಳಿವೆ..._
1. *ವಿರೇಚನ ಚಿಕಿತ್ಸೆ*
2. *ಒಂಭತ್ತು ದಿನಗಳ ಉಪವಾಸ!*
_ಈ ಪ್ರಕುಪಿತ ಪಿತ್ತವನ್ನು ಹೊರಹಾಕಿದಾಗ ಶರೀರದ ಆರೋಗ್ಯ ಸುಧಾರಿಸಿ, ನವಚೈತನ್ಯ ತುಂಬುವುದನ್ನು ಅನುಭವಿಸಿಯೇ ನೋಡಬೇಕು!_ 🤔
_ವಿರೇಚನ ಚಿಕಿತ್ಸೆಯ ವಿಧಿ-ವಿಧಾನಗಳನ್ನು ಹತ್ತಿರದ ಆಯುರ್ವೇದ ಪಂಚಕರ್ಮ ಚಿಕಿತ್ಸಕರ ಬಳಿ ಕೇಳಿ ತೆಗೆದುಕೊಳ್ಳಬಹುದು._
*ಉಪವಾಸದ ಮೂರು ವಿಧಾನಗಳನ್ನು ಇಲ್ಲಿ ತಿಳಿಸುತ್ತೇವೆ...*
*ಉಪವಾಸದ ಅವಧಿ:*
_ಈ ವರ್ಷದಲ್ಲಿ ದಿನಾಂಕ: 06/07.10.2021 ರಿಂದ 14/15.10.2021 ರವರೆಗೆ ಒಂಭತ್ತು ದಿನಗಳ ವರೆಗೆ ಪಾಲಿಸಬೇಕು._
*ಅವರ ಉಪವಾಸ:*
_ಅಶಕ್ತರು, ವೃದ್ಧರು, ರೋಗದಿಂದ ಕ್ಷೀಣರಾದವರು ದೀರ್ಘ ಉಪವಾಸ ಮಾಡಲು ಅಸಾಧ್ಯವಿರುವರು ಈ ವಿಧಾನ ಅನುಸರಿಸಬಹುದು._
_ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ ಅಥವಾ ಅಕ್ಕಿ ಗಂಜಿ ಸೇವಿಸಿ_
_ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ, ಉಪಹಾರ ಬೇಡ._
_ಸಂಜೆ 5-6 ರ ಒಳಗೆ ಮತ್ತೆ ರಾತ್ರಿಯ ಆಹಾರ ಮಾಡಿ ಮುಗಿಸಿ._
_ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._
_ಹಣ್ಣು, ಹಾಲು, ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡ._
*ಮಧ್ಯಮ ಉಪವಾಸ:*
_ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಮಧ್ಯಮ ಶಾರೀರಿಕ ಬಲ ಉಳ್ಳ ಸಾಮಾನ್ಯರು ಈ ವಿಧಾನ ಅನುಸರಿಸಬಹುದು._
_ಈ ವಿಧಾನದಲ್ಲಿ - ಬೆಳಿಗ್ಗೆ 7ಕ್ಕೆ 100ml ರಾಗಿ ಅಥವಾ ಅಕ್ಕಿ ಗಂಜಿ ಸೇವಿಸಿ_
_ಬೆಳಿಗ್ಗೆ 10-11ಕ್ಕೆ ಸಾಮಾನ್ಯ ಊಟದ ಪ್ರಮಾಣದ ಶೇಕಡಾ 75 ರಷ್ಟು ಪ್ರಮಾಣದಲ್ಲಿ ನೇರವಾಗಿ ಊಟ ಮಾಡಿರಿ,_
_ಸಂಜೆ 5-6 ರ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._
_ಮಧ್ಯದಲ್ಲಿ ಬಾಯಾರಿದರೆ ಮಾತ್ರ ಕುದಿಸಿ ಆರಿಸಿದ ಸ್ವಲ್ಪ ಜಲ ಸೇವನೆ ಶ್ರೇಷ್ಠ._
_ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._
*ಪ್ರವರ ಉಪವಾಸ:*
_ಯಾವುದೇ ದೀರ್ಘಕಾಲಿಕ ರೋಗ ಇಲ್ಲದೇ ಉತ್ತಮ ಶಾರೀರಿಕ ಬಲ ಉಳ್ಳವರು ಈ ವಿಧಾನ ಅನುಸರಿಸಬಹುದು._
_ಈ ವಿಧಾನದಲ್ಲಿ - ಬೆಳಿಗ್ಗೆ 7-8ಕ್ಕೆ 200ml ರಾಗಿ ಅಥವಾ ಅಕ್ಕಿ ಗಂಜಿ ಸೇವಿಸಿ_
_ಸಂಜೆ 5-6 ರ ಮಧ್ಯದಲ್ಲಿ ಮತ್ತೆ 200ml ರಾಗಿ ಅಥವಾ ಅಕ್ಕಿ ಗಂಜಿ ಸೇವಿಸಿ_
_ಐದನೇ ದಿನದ ನಂತರ ಬಳಲಿಕೆಯಾದರೆ ಮಧ್ಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹಣ್ಣು ಅಥವಾ ಹಾಲು ಸೇವಿಸಬಹುದು._
_ಮಧ್ಯದಲ್ಲಿ ಬಾಯಾರಿದರೆ ಅಗತ್ಯ ಪ್ರಮಾಣದ ಕುದಿಸಿ ಆರಿಸಿದ ಜಲ ಸೇವನೆ ಶ್ರೇಷ್ಠ._
_ಜ್ಯೂಸ್, ಬಿಸ್ಕೆಟ್, ಬ್ರೆಡ್ ಮುಂತಾದ ಸೇವನೆ ಬೇಡವೇ ಬೇಡ._
*ಉಪವಾಸದ ಲಾಭಗಳು:*
_ಪಿತ್ತದೋಷವೇ ಇಂದಿನ ಕಾಲದ ರೋಗಕಾರಕ ದೋಷವಾಗಿದೆ, ಇದರ ನಿಯಂತ್ರಣದಿಂದ ಎಲ್ಲಾ ವಿಧದ ಪಿತ್ತಜ ರೋಗಗಳು ಅಂದರೆ ಆಮ್ಲಪಿತ್ತ, ರಕ್ತಪಿತ್ತ, ಸಂಧಿಶೂಲ, ಅಸ್ತಮಾ, ನೆಗಡಿ, ಶೀತ, ಕಾಮಾಲೆ, ಪಿತ್ತಜ ಪ್ರಮೇಹ ಮುಂತಾದವು ನಿಯಂತ್ರಣಕ್ಕೆ ಬರುತ್ತವೆ!_ 🙄
*ವಿರೇಚನದ ಲಾಭಗಳು:*
_ಮುಂದಿನ ಒಂದು ವರ್ಷ ಮೇಲೆ ಸೂಚಿಸಿದ ರೋಗಗಳ ಬಾಧೆ ಇರುವುದಿಲ್ಲ. ಹಾಗೆಯೇ, ವಾತ ದೋಷ ಅನುಲೋಮ ಹೊಂದುವ ಕಾರಣ, ಅನೇಕ ರೀತಿಯಿಂದ ಶಾಶ್ವತವಾಗಿ ಬಾಧಿಸುವ ಹಾರ್ಮೋನ್ ರೋಗಗಳಾದ ಹೈಪೋಥೈರಾಯ್ಡಿಸಮ್, ಮಧುಮೇಹ, ಸ್ಥೌಲ್ಯ, PCOD, ಋತುಸ್ರಾವದ ವಿಕಾರಗಳು, ಗರ್ಭಾಶಯ-ಸ್ತನದ ಗಡ್ಡೆಗಳು, ಮೆದುಳಿನ ವಿಕಾರಗಳಾದ ಆತಂಕ, ಚಂಚಲತ್ವ, ಸ್ಮೃತಿನಾಶ ಮುಂತಾದವು ದೂರವೇ ಉಳಿಯುತ್ತವೆ!_
_ಸ್ವಾಸ್ಥ್ಯ ಪಂಚಕರ್ಮ ಚಿಕಿತ್ಸಾ ಭಾಗವಾದ, ಶರದೃತುವಿನ ವಿರೇಚನ ಚಿಕಿತ್ಸೆಯನ್ನು ಮನೆಯಲ್ಲಿಯೇ ಇದ್ದುಕೊಂಡು ಪಡೆಯಲೂ ಬಹುದು._
🙏 *ಧನ್ಯವಾದಗಳು* 🙏
••••••••••••••••••••••••••••••••••
Monday, 27 September 2021
ಜೀವರಸ ಶುದ್ಧಿಯೇ ಆರೋಗ್ಯ
🌷 ಅಮೃತಾತ್ಮರೇ, ನಮಸ್ಕಾರ"* 🌷
🦢 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ** 🦢
🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🍀
•••••••••••••••••••••••••••••••••••••••
ದಿನಾಂಕ: 27.08.2021
ಸ್ವಸ್ಥ ಜೀವನಕ್ಕೆ ಆಯುರ್ವೇದ, ಸಂಚಿಕೆ-69
•••••••••••••••••••••••••••••••••••••••
✍️: ಇಂದಿನ ವಿಷಯ:
ಜೀವರಸ ಶುದ್ಧಿಯೇ ಆರೋಗ್ಯ 💦
•••••••••••••••••••••••••••••••••••••••
ಮಾನವನ ಜೀವಕೋಶಗಳು ಆಹಾರವನ್ನು ಸ್ವೀಕರಿಸುವುದು ದ್ರವರೂಪದ ಮಾಧ್ಯಮದಿಂದ ಮಾತ್ರ. ಇಂತಹ ಜೀವ ದ್ರವವನ್ನು ಹುಳಿ ಬರಿಸಿಕೊಂಡು ಜೀವಕೋಶಗಳನ್ನು ರಕ್ಷಿಸುವುದು ಅಸಾಧ್ಯ...
•|•|•|•|•|•
ನಾವು ಸೇವಿಸಿದ ಆಹಾರ ಮೊದಲು ಕ್ರಿಯಾತ್ಮಕವಾಗಿ ಮೂರು ಭಾಗವಾಗಿ ವಿಂಗಡಿಸಲ್ಪಡುತ್ತದೆ ಆದರೆ ಅದು ಭೌತಿಕವಾಗಿ ದ್ರವರೂಪದಲ್ಲಿ ಒಂದಾಗಿಯೇ ಇರುತ್ತದೆ.
ಇಲ್ಲಿ ನಾವು ಹೇಳುತ್ತಿರುವುದು ರಾಸಾಯನಿಕಗಳ ವಿಭಜನೆಯಲ್ಲ, ಅದು ಶುದ್ಧ ಜೈವಿಕ ಪರಿವರ್ತನೆಯಾಗಿರುತ್ತದೆ.
ಈ ಸತ್ಯವನ್ನು ಕಂಡುಕೊಳ್ಳದ ಆಧುನಿಕ ವೈದ್ಯ ವಿಜ್ಞಾನ ಆಹಾರವನ್ನು ಕೇವಲ ರಾಸಾಯನಿಕಗಳ ರೂಪದಲ್ಲಿ ನೋಡಿ, ಆಹಾರವೇ ಜೀವಿಯಾಗಿ ಉನ್ನತೀಕರಿಸಿಕೊಳ್ಳುತ್ತದೆ ಎಂಬ ಸತ್ಯವನ್ನು ಮರೆತು ಕೃತಕ ರಾಸಾಯನಿಕಗಳನ್ನು ಸೃಷ್ಟಿಸುತ್ತಾ ರೋಗಗಳನ್ನು ನಿರ್ಮೂಲನೆ ಮಾಡಲು ನೋಡುತ್ತಿದೆ. ಅದು ಸರ್ವದಾ ಅಸಾಧ್ಯ...
ಈ ಜೈವಿಕ ಪರಿವರ್ತನೆಯ ದ್ರವರೂಪದ ಅಂಶವನ್ನೇ ಆಯುರ್ವೇದ ವಿಪಾಕ ಎನ್ನುತ್ತದೆ. ಈ ವಿಪಾಕ ದ್ರವದೊಳಗೆ ಆಹಾರದಿಂದ ವಿಭಜಿತವಾಗಿ ದ್ರವರೂಪದಿಂದ ಸಂಗ್ರಹಿಸಲ್ಪಟ್ಟ ಮೂರು ಕ್ರಿಯಾತ್ಮಕ ಘಟಕಗಳೇ ಫೇನಕಫ, ಶುದ್ಧಪಿತ್ತ ಮತ್ತು ಪೋಷಕ ವಾಯು ಆಗಿವೆ.
ವಿಪಾಕ ಅಥವಾ ವಿಪಾಕದ್ರವ ಎಂದರೆ ವಿಶೇಷವಾದ ಪಾಕ ಎಂದರ್ಥ. ಇದನ್ನು ರಾಸಾಯನಿಕವಾಗಿ ನೋಡುವ ಬದಲು ಜೀವರಸದ ರೂಪದಲ್ಲಿ ದರ್ಶಿಸುತ್ತದೆ ಆಯುರ್ವೇದ...
ಈ ವಿಪಾಕ ಎಂಬುದು ಮಧ್ಯದ ಅವಸ್ಥೆಯ ಜೀವಧಾರಕ ಅಂಶವಾಗಿದೆ. ಅಂದರೆ ಅತ್ತ ಆಹಾರವೂ ಅಲ್ಲ, ಇತ್ತ ಶರೀರವೂ ಅಲ್ಲ, ಆಹಾರ ಶರೀರವಾಗಿ ಮಾರ್ಪಡಲು ತನ್ನನ್ನು ತಾನು ರೂಪಾಂತರಗೊಳಿಸಿಕೊಂಡ ಒಂದು ದ್ರವ ರೂಪದ ಜೀವರಸ ಅವಸ್ಥೆಯೇ ವಿಪಾಕ ಅಥವಾ ವಿಪಾಕದ್ರವ.
•|•|•|•|•|•
ಇಂದು ನಮ್ಮ ಶರೀರಗಳು ರೋಗಗ್ರಸ್ತವಾಗಲು ಏನು ಕಾರಣ?
ವಿಪಾಕ ಮೂರು ರೂಪದಲ್ಲಿರುತ್ತದೆ --
• ಮಧುರ ವಿಪಾಕ
• ಆಮ್ಲವಿಪಾಕ
• ಕಟುವಿಪಾಕ
ಮಧುರ ವಿಪಾಕವು ಶರೀರದ ಜೀವಕೋಶಗಳನ್ನು ವರ್ಧಿಸುತ್ತಾ, ಸವಕಳಿಯನ್ನು ತುಂಬುತ್ತಾ ದೃಢವಾಗಿ ಇಡುತ್ತದೆ.
ಆಮ್ಲವಿಪಾಕವು ಶರೀರದ ಅಗ್ನಿಯನ್ನೂ, ರಕ್ತವನ್ನೂ ಪೋಷಿಸುತ್ತದೆ.
ಕಟುವಿಪಾಕವು ಶರೀರಕ್ಕೆ ಚಲನೆಯನ್ನು ಕೊಡುತ್ತದೆ.
ಈಗ ಆಗುತ್ತಿರುವ ತೊಂದರೆ ಎಲ್ಲಿದೆ ಎಂದರೆ --
ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಮಧುರವಿಪಾಕವು ಕಡಿಮೆ ಪ್ರಮಾಣದಲ್ಲಿ ಅಥವಾ ದುರ್ಬಲ ರೂಪದಿಂದ ಉಂಟಾಗುತ್ತಿದೆ. ಹಾಗಾಗಿ ನಮ್ಮ ಮಕ್ಕಳ ಜೀವಕೋಶಗಳು ಸರಿಯಾಗಿ ವರ್ಧಿಸದೇ ನಮ್ಮ ಜೀವಕೋಶಗಳ ಸವಕಳಿ ಸರಿಯಾಗಿ ತುಂಬದೇ, ದೃಢತೆ ಕುಗ್ಗಿ ಅಂದರೆ ಜೀವಕೋಶಗಳ ಪ್ರತಿರೋಧಕ ಶಕ್ತಿ ಕುಗ್ಗಿ, ಹೆಚ್ಚು ಹೆಚ್ಚು ರೋಗಕ್ಕೆ ತುತ್ತಾಗುತ್ತಿದ್ದೇವೆ.
ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗಬೇಕಿದ್ದ ಆಮ್ಲವಿಪಾಕವು ಯಥೇಚ್ಛವಾಗಿ ರೂಪಾಂತರವಾಗುತ್ತಿದೆ, ಹಾಗಾಗಿ ಎಲ್ಲರ ಶರೀರವೂ "ಹೀಟ್" ಎನ್ನುತ್ತೇವೆ ಮತ್ತು ಇಂದು ಔಷಧ ವ್ಯವಹಾರಿಕ ಜಗತ್ತನ್ನು ಆಳುತ್ತಿರುವ ಗ್ಯಾಸ್‌ಟ್ರೈಟೀಸ್, ಕೊಲೈಟೀಸ್, ಆತಂಕ, ಭಯ, ಮಧುಮೇಹ, ಬಿ.ಪಿ. ಹೃದ್ರೋಗ, ಹೈಪೋಥೈರಾಯ್ಡಿಸಮ್, ಸ್ಪಾಂಡಿಲೈಟೀಸ್, ರುಮಟಾಯ್ಡ್ / ಗೌಟ್(uric acid), ಅಟೋಇಮ್ಯೂನ್ ರೋಗಗಳು ಮುಂತಾದ ಜೀವನಪರ್ಯಂತ ಹಣ ಸುರಿದೂ ಸರಿಯಾಗದ ರೋಗಗಳಿಗೆ ಕಾರಣವೇ ನಮ್ಮ ಹುಳಿಮೈ ಅಥವಾ ಆಮ್ಲವಿಪಾಕ ಆಗಿದೆ.
ಇನ್ನು, ಅತ್ಯಲ್ಪ ಪ್ರಮಾಣದಲ್ಲಿ ಮತ್ತು ನಿಯಂತ್ರಿತ ರೂಪದಲ್ಲಿ ಉಂಟಾಗಬೇಕಿದ್ದ ಕಟುವಿಪಾಕ ಹೆಚ್ಚು ಮತ್ತು ಅನಿಯಂತ್ರಿತಗೊಂಡಿದೆ, ಹಾಗಾಗಿ ನಮ್ಮ ಭಾವನೆಗಳ, ಚಲನವಲನಗಳ ನಿಯಂತ್ರಣ ಕಳೆದುಕೊಳ್ಳುತ್ತಿದ್ದೇವೆ ಮತ್ತು ಅದರಿಂದ ಹೃದಯಾಘಾತ, ಪಕ್ಷಾಘಾತ, ಅಪಘಾತಗಳಿಂದ ನರಳುತ್ತಿದ್ದೇವೆ ಮತ್ತು ಆತ್ಮಹತ್ಯೆಗಳಂತಹ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದೇವೆ... 🤔🤔
•|•|•|•|•|•
ತೀರ್ಮಾನಕ್ಕೆ ಒಂದು ಮಾತು --
ನಾವು ನಮ್ಮ ಶರೀರ ಉತ್ಪತ್ತಿ ಮಾಡುವ ಜೀವರಸವಾದ ವಿಪಾಕದ್ರವವನ್ನು ಹುಳಿ ಅಥವಾ ಆ್ಯಸಿಡ್ ರೂಪದಲ್ಲಿ ಇಟ್ಟುಕೊಂಡಿದ್ದೇವೆ. ಇದರ ಪರಿಣಾಮವೇ ಹೀಟ್! ಈ ಆ್ಯಸಿಡ್‌ನಲ್ಲಿ ನಮ್ಮ ಜೀವಕೋಶಗಳು ಮೆತ್ತಗಾಗುತ್ತಿವೆ, ಅಸ್ಥಿಗಳು ಕರಗುತ್ತಿವೆ, ಬೇಗ ಮುಪ್ಪು ಆವರಿಸುತ್ತಿದೆ. ಇದನ್ನೇ ಆಕ್ಸಿಡೇಷನ್ ಪ್ರೊಸೆಸ್ ಎನ್ನುವ ಆಧುನಿಕ ವಿಜ್ಞಾನ ಆ್ಯಂಟಿ ಆಕ್ಸಿಡಂಟ್ ಔಷಧಗಳನ್ನು ಸೂಚಿಸಿ ವ್ಯಾಪಾರ ಮಾಡುತ್ತಿದೆಯೇ ಹೊರತು ಆ್ಯಸಿಡ್ ತಡೆಯುವ ತಂತ್ರವನ್ನು ಹೇಳಿಕೊಡುತ್ತಿಲ್ಲ... 🙄🙄
•|•|•|•|•|•
ರೋಗಗಳನ್ನು ತಡೆಯುವ ತಂತ್ರಗಳೇನು?
ಸುಲಭವಾಗಿ ಜೀರ್ಣವಾಗದ ಕಾರಣ ಆಮ್ಲವಿಪಾಕ(ಹುಳಿರಸ) ಉಂಟುಮಾಡುವ ಗೋಧಿ, ಉದ್ದು, ಮೈದಾ, ಮೊಳಕೆಕಾಳು, ನೆನೆಸಿದ ಹಸಿಕಾಳು, ಸಕ್ಕರೆಗಳನ್ನು ತ್ಯಜಿಸುವುದು...
ಹೊಟ್ಟೆ ಬಿರಿಯುವಂತೆ ತಿನ್ನುವ ಕಾರಣ ಜೀರ್ಣವಾಗದೇ ಶುದ್ಧ ಆಹಾರವೂ ಆಮ್ಲವಿಪಾಕ (ಹುಳಿ ಬಿಡುವ) ಆಗುವ ಕಾರಣ, ಮಿತ ಆಹಾರ ಅಥವಾ ಶಾರೀರಿಕ ಶ್ರಮದ ಅಗತ್ಯದಷ್ಟು ಪ್ರಮಾಣದ ಆಹಾರ ಸೇವನೆ ಮಾಡುವುದು...
ಆರ್.ಒ. ಜಲ ಸೇವಿಸಿ ಅದರ ಆಮ್ಲತೆಯ ಕಾರಣ ಸೇವಿಸಿದ ಶುದ್ಧ ಅಹಾರ ಆಮ್ಲವಿಪಾಕವಾಗುವ ಕಾರಣ ಅದನ್ನು ಸರ್ವದಾ ತ್ಯಜಿಸುವುದು...
ಫ್ರಿಜ್‌ನಲ್ಲಿ ಇಟ್ಟ ಕಾರಣ ಆಹಾರ ಸತ್ವವನ್ನು ಇಟ್ಟುಕೊಂಡಿರುವುದಿಲ್ಲ, ತಿನ್ನುವಾಗ ತಿಳಿಯುವುದಿಲ್ಲ ಅಷ್ಟೇ ಒಳಹೋಗಿ ಆಮ್ಲವಿಪಾಕ (ಹುಳಿರಸ) ಬಿಡುವ ಕಾರಣ ಫ್ರಿಜ್ ಆಹಾರ ತ್ಯಜಿಸುವುದು...
Wednesday, 15 September 2021
Subscribe to:
Posts (Atom)
ಮಜ್ಜಿಗೆಯ ಮಾತು ಭಾಗ-01
🦢 ಅಮೃತಾತ್ಮರೇ, ನಮಸ್ಕಾರ 🦢 ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ ಸಂಚಿಕೆ-92, ದಿನಾಂಕ: 19.07.2026 ••••••••••••••••••••••••••••••••••••••• ...
-
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ...
-
CLICK HERE TO DOWNLOAD
-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ...