✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday, 25 June 2021

ಸೇತುಬಂಧ ಕಾರ್ಯಕ್ರಮ ವಿವರಣೆ ಇಲಾಖೆಯ ವೆಬ್ನಲ್ಲಿ ನಭ್ಯವಿದೆ..

*👆ಸಾರ್ವಜನಿಕ ಶಿಕ್ಷಣ ಇಲಾಖೆ , ಡಿಎಸ್ಇಆರ್.ಟಿ ಯಿಂದ ಬಿಡುಗಡೆಗೊಂಡ 2020 -21 ನೇ ಸಾಲಿನ ಸೇತುಬಂಧ ಸಾಹಿತ್ಯ*👇👇 ಅಧಿಕೃತವಾದದ್ದು.

CLICK HERE TO DOWNLOAD

Saturday, 19 June 2021

ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ.

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
20.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :62
•••••••••
✒️ ಇಂದಿನ ವಿಷಯ:
ಯಾವ ಪ್ರಾಂತ್ಯದವರಿಗೆ ಯಾವ ಎಣ್ಣೆ ಸೂಕ್ತ. 
•••••••••••••••••••

ರಾಸಾಯನಿಕ ಸಂಘಟನೆಗಳ ಆಧಾರದ ಮೇಲೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಅನುಚಿತ ನಿರ್ಧಾರಗಳಿಂದ ಹೆಸರಾಂತ ಆಹಾರ ತಜ್ಞರು, ವೈದ್ಯರೂ ಸೇರಿದಂತೆ ಅಲ್ಪ ಮಾಹಿತಿ ಹೊಂದಿದವರೂ ಸಹ ಇಂಥದೇ ಆಹಾರ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದೆಂದು ಸಾರುತ್ತಿದ್ದಾರೆ. 

ಈ ರೀತಿಯ ಅನುಚಿತ ಹೇಳಿಕೆಗಳಲ್ಲಿ ಖಾದ್ಯ ತೈಲವೂ ಸೇರಿಕೊಂಡುಬಿಟ್ಟಿದೆ. ರಿಫೈನ್ಡ್ ಎಣ್ಣೆಯ ಬಳಕೆ ದೋಷಪೂರಿತವಾದುದು ಎಂದು ತಿಳಿದಮೇಲಂತೂ ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ದೊರೆಯುವ ಖಾದ್ಯ ತೈಲವನ್ನು ಇಡೀ ಜಗತ್ತಿಗೆ ಹಂಚಲು ಅಸಾಧ್ಯವೆಂದು ತಿಳಿದೂ ಸಹ ಅದರ ಗುಣವಿಶೇಷಗಳನ್ನು ಹೋಗಳುತ್ತ ಅದನ್ನು ಬಳಸುವವರು ಶ್ರೇಷ್ಠ ಎಂತಲೂ ,ಅದನ್ನು ಬಳಸದವರು ಏನೋ ಕಳೆದುಕೊಂಡವರಂತೆ ಕೀಳರಿಮೆಯಿಂದ ಬಾಳುವಂತಾಗುತ್ತಿದೆ. 
ಇದು ಪಾಶ್ಚಾತ್ಯರ ವ್ಯಾಪಾರೀಕರಣದ ಭಾವಧೋರಣೆ. ಆಲೀವ್ ಆಯಿಲ್ ಅನ್ನು ಹೆಚ್ಚು ಪ್ರಚಾರ ಮಾಡುವ ಅವರ ಹಾದಿಯನ್ನೇ ಅನುಸರಿಸಿ ಕೇವಲ ಕೊಬ್ಬರಿ ಎಣ್ಣೆಯೊಂದೇ ಶ್ರೇಷ್ಠ ಎಂದು ಸಾರುತ್ತಿದ್ದೇವೆ. ಈ ದೇಶ ಪ್ರಾಂತ್ಯವಾರು ಆಹಾರ , ಜೀವನಶೈಲಿ ಅಷ್ಟೇ ಏಕೆ ನೈಸರ್ಗಿಕವಾಗಿ ಬರುವ  ಶಾರೀರಿಕ ಪ್ರಕೃತಿಗಳನ್ನೂ ಪ್ರಾಂತ್ಯವಾರು ವಿಭಿನ್ನವಾಗಿ ಇಟ್ಟಿದೆ. ಕನ್ನಡ ಭಾಷೆಯನ್ನೇ ಹತ್ತು ಶೈಲಿಗಳಲ್ಲಿಯೂ , ಮತ್ತು ಒಂದೇ ವಸ್ತುವಿಗೆ ಇದೊಂದೇ ಭಾಷೆಯಲ್ಲಿ ಪ್ರಾಂತ್ಯವಾರು ಬೇರೆ ಬೇರೆ ಶಬ್ದಗಳಿಂದ ಕರೆಯುವಷ್ಟು ವೈವಿದ್ಯಮಯ ಸಹಜ ಬಾಳು ಭಾರತೀಯರದು. 

ಇಂತಹ ವಿಭಿನ್ನ ಶಾರೀರಿಕ ಪ್ರಕೃತಿ ಉಳ್ಳವರಿಗೆ ಒಂದು ನಿರ್ದಿಷ್ಟ ಆಹಾರವೇ ಶ್ರೇಷ್ಠ ಎಂದು ತಜ್ಞರಾದಿ ಸಾಮಾನ್ಯರೂ ಹೇಳುತ್ತಿರುವುದು ಅನುಚಿತ ಎನಿಸುತ್ತಿದೆ. 

ಆತ್ಮೀಯರೇ,
ನೀವು ಹುಟ್ಟಿದ , ಬೆಳೆದು ಬಾಳಿದ ಪ್ರಾಂತ್ಯದಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸುವುದರಿಂದ ಶರೀರ ಆರೋಗ್ಯದಿಂದ ಇರಬಲ್ಲದು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವಲಸೆ ಹೋಗಿ ನೇಲಿಸಿದವರು ಕನಿಷ್ಠ ಶೇಕಡಾ 70 ಭಾಗ ತಮ್ಮ ಮೂಲ ಆಹಾರವನ್ನು ಉಳಿದ 30 ಭಾಗ ತಾವು ನೆಲೆಸಿದ ಪ್ರಾಂತೀಯ ಭಾಗದ ಆಹಾರವನ್ನು ಸೇವಿಸುತ್ತ ನಿಧಾನವಾಗಿ ಆಯಾ ಪ್ರಾಂತೀಯ ಆಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. 
★ ಉದಾಹರಣೆಗೆ:
ಕರಾವಳಿಯ ಜನರ ಪ್ರಧಾನ ಆಹಾರ ಮೀನು, ಅವರು ಒಳನಾಡುಗಳಲ್ಲಿ ನೆಲೆಸಿ ಮೀನನ್ನೇ ಪ್ರಧಾನ ಆಹಾರವಾಗಿ ಸೇವಿಸಿದರೆ ಅವರಿಗೆ ಚರ್ಮದ ರೋಗ, ಮಧುಮೇಹ ಬರುವ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ, ಕರಾವಳಿಯಲ್ಲಿ ಸದಾ ಬೆವರು ಹೊರಹೋಗುತ್ತ ಚರ್ಮದ ಅಡಿ ಸಂಚಯವಾಗುವ ಕ್ಲೇದ ಅಥವಾ ಜಿಡ್ಡು ನಿರಂತರವಾಗಿ ಬೆವರಿನ ಮುಖಾಂತರ ಹೊರಕ್ಕೆ ಹೋಗಿ ಚರ್ಮ ಮತ್ತು ದೇಹ ನೈಸರ್ಗಿಕವಾಗಿ ಶುದ್ಧಿಯಾಗುತ್ತದೆ. ಅದೇ, ಒಳ ಪ್ರಾಂತ್ಯದಲ್ಲಿ ಅಷ್ಟು ಪ್ರಮಾಣದ ಬೆವರು ಹೊರ ಹೋಗದ ಕಾರಣ ಅದು ಶರೀರದಲ್ಲಿ ಸಂಚಯವಾಗಿ ಚರ್ಮದ ಕಾಯಿಲೆಯನ್ನೋ, ಮಧುಮೇಹವನ್ನೋ ತರುತ್ತದೆ.
●●●●

ಈಗ, ಖಾದ್ಯತೈಲಕ್ಕೆ ಬರೋಣ.
ಕರಾವಳಿ ಮಲೆನಾಡಿನ ಜನರಿಗೆ ಶುದ್ಧ ತೆಂಗಿನಎಣ್ಣೆಯು , ಒಳನಾಡಿನವರಿಗೆ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಯೂ, ಉತ್ತರಕರ್ನಾಟಕ ಭಾಗದವರಿಗೆ ಶೇಂಗಾ, ಕುಸುಬೆ ಎಣ್ಣೆಗಳನ್ನೂ ಹಾಗೆಯೇ, ಉತ್ತರಭಾರತಕ್ಕೆ ಹೋದರೆ ಸಾಸುವೆ ಎಣ್ಣೆಯನ್ನು ಬಳಸುವುದು ಅತ್ಯಂತ ಶ್ರೇಯಸ್ಕರವಾಗಿರುತ್ತದೆ. 
ಶತಮಾನಗಳಿಂದ ಈ ಶರೀರಕ್ಕೆ ಸಾತ್ಮ್ಯವಾಗಿರುವ ಎಣ್ಣೆಯನ್ನೇ ಬಳಸುವುದರಿಂದ ಆಯಾ ಹವಾಮಾನಕ್ಕೆ ಸೂಕ್ತವಾಗಿ ಶರೀರವನ್ನು ಸಧೃಢವಾಗಿ ಇಟ್ಟಿರುತ್ತದೆ.

 ಉತ್ತರಕರ್ನಾಟಕದ ಜನರು ಕಡಿಮೆ ಜಿಡ್ಡಿನ ಅಂಶವುಳ್ಳ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅವರ ಶರೀರ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಹಾಗೆಯೇ ಮಲೆನಾಡಿನ ಶೀತ ಭಾಗದ ಜನ ಹೆಚ್ಚು ಜಿಡ್ಡುಳ್ಳ ಶೇಂಗಾ ಎಣ್ಣೆಯನ್ನು ಬಳಸಿದರೆ ತೊಂದರೆ ಉಂಟಾಗುತ್ತದೆ. ಇತ್ತೀಚಿನ ಜನರ ಜೀವನ ಶೈಲಿಯ ಆಧಾರದಲ್ಲಿ ನಾವು ಆಹಾರವನ್ನು ಹೀಗೆ ವಿಂಗಡಿಸಬಹುದು.
ಮಾನವ ಯಾವ ಯಾವ ಪ್ರಾಂತ್ಯದಲ್ಲಿ ನೆಲೆಸಿದರೂ ಅವರು ಅತ್ಯಂತ ಕಡಿಮೆ ಶಾರೀರಿಕ ಶ್ರಮದಿಂದ ಮತ್ತು ಹೆಚ್ಚು ಬೌದ್ಧಿಕ ಸಾಮರ್ಥ್ಯದಿಂದ ದುಡಿಮೆ ಮಾಡುವವರು ಕೊಬ್ಬರಿ ಎಣ್ಣೆಯನ್ನೂ, ಹೆಚ್ಚು ಶಾರೀರಿಕ ಶ್ರಮದಿಂದ ದುಡಿಮೆ ಮಾಡುವವರು ಶೇಂಗಾ, ಸೂರ್ಯಕಾಂತಿ ಮುಂತಾದ ತೈಲಗಳನ್ನು ಬಳಸಬಹುದೆಂದು ಸ್ಥೂಲವಾಗಿ ಹೇಳಬಹುದು. 
ಆದಾಗ್ಯೂ , ಪ್ರಾಂತೀಯಮಟ್ಟದ ಆಹಾರ ಸೇವನೆ ಸರ್ವದಾ ಶ್ರೇಷ್ಠವಾಗಿ ಇರುವುದು.

ಧನ್ಯವಾದಗಳು
•••••••••••••••••

Tuesday, 15 June 2021

ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
16.06.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.
ಸಂಚಿಕೆ :60
•••••••••
✒️ ಇಂದಿನ ವಿಷಯ:
*ಈಗಾಗಲೇ ತಿಂದಿರುವ ಕೆಟ್ಟ ಎಣ್ಣೆಗಳ ಪರಿಣಾಮವನ್ನು ಹೋಗಲಾಡಿಸಿಕೊಳ್ಳುವ ಉಪಾಯ*
••••••••••••••
ಇಲ್ಲಿಯವರೆಗೆ ಹೇಳಿದ್ದೀರಿ-
• ಪಾಮ್ ಆಯಿಲ್ ಹಾನಿಕರ
• ರಿಫೈನ್ಡ್ ಆಯಿಲ್ ಹಾನಿಕರ
• ಸಂಸ್ಕರಿಸದ ಕೋಲ್ಡ್‌ಪ್ರಸ್ ಎಣ್ಣೆ ಹಾನಿಕರ
• ಕರಿದದ್ದು ಹಾನಿಕರ
• ಒಗ್ಗರಣೆ ಕಲಸಿದ ಅನ್ನಗಳು ಹಾನಿಕರ

ಸರಿ, ಈಗಾಗಲೇ ಗೊತ್ತಿಲ್ಲದೇ ಸೇವಿಸಿದ್ದೇವೆ, ಇನ್ನುಮುಂದೆ ಈ ತಪ್ಪು ಮಾಡುವುದಿಲ್ಲ ಆದರೆ, ಈಗಾಗಲೇ ಈ ರೀತಿ ಸೇವಿಸಿದ ಎಣ್ಣೆಯ ದುಷ್ಪರಿಣಾಮ ನಮ್ಮ ದೇಹದಲ್ಲಿದೆಯಲ್ಲ ಅದನ್ನು ಹೋಗಲಾಡಿಸಲು ಯಾವುದಾದರೂ ಉಪಾಯ ತಿಳಿಸಿ.

ಓದುಗರ ಈ ಪ್ರಶ್ನೆಗೆ ಸರಳ ಉಪಾಯವನ್ನಿಂದು ಕೊಡುತ್ತಿದ್ದೇವೆ.
•••

*ಸರಳ‌ ಉಪಾಯಗಳು:*
• ಮೊದಲು ಎಣ್ಣೆಯನ್ನು ವಿಕೃತ ಸಂಸ್ಕಾರದಿಂದ ತಿನ್ನುವ ಕ್ರಮವನ್ನು ಶಾಶ್ವತವಾಗಿ ನಿಲ್ಲಿಸಿ.
• ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ.
• ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ.
•••••••

*ವಿಕೃತ ಕ್ರಮದಿಂದ ಎಣ್ಣೆಯ ಸೇವನೆ ನಿಲ್ಲಿಸಿ*
• ಎಣ್ಣೆ/ತುಪ್ಪದಲ್ಲಿ ಕರಿದ, ಹುರಿದ, ಒಗ್ಗರಣೆಯನ್ನು ಮೇಲಿನಿಂದ ಕಲಸಿದ, ನೀರೇ ಇಲ್ಲದಂತೆ ಒಣಗಿಸಿ ಎಣ್ಣೆ ಬೆರೆಸಿ ಸೇವಿಸುವ ಕ್ರಮವನ್ನು ನಿಲ್ಲಿಸಿ. 
• ಪಾಮ್ ಆಯಿಲ್ ಬಳಕೆ, ರಿಫೈನ್ಡ್ ಆಯಿಲ್ ಬಳಕೆ ಮತ್ತು ಮನೆಯಲ್ಲಿ ಪುನಃ ಸಂಸ್ಕರಿಸದೇ ಉಪಯೋಗಿಸುವ ಕೋಲ್ಡ್‌ಪ್ರಸ್ ಎಣ್ಣೆ 
ಇವುಗಳನ್ನು ಇನ್ನು ಮುಂದೆ ಸೇವಿಸದಿರಲು ನಿರ್ಧರಿಸಿ.
• ಅಪರೂಪಕ್ಕೆ ಯಾರದ್ದೋ ಮನೆಗೆ ಹೋದಾಗ ಅವರಿಗೆ ಮುಜುಗರ ಉಂಟಾಗದಂತೆ ಅತ್ಯಲ್ಪ‌ ಪ್ರಮಾಣದಲ್ಲಿ ಸೇವಿಸಿ, ಅಗತ್ಯ ಎನ್ನಿಸಿದರೆ ಎಣ್ಣೆಯ ಬಗೆಗಿನ‌ ಮಾಹಿತಿ ಹಂಚಿಕೊಂಡು ಬನ್ನಿ.
ಹಬ್ಬ ಹರಿದಿನಗಳಲ್ಲಿ ತಯಾರಿಸಿದ ಅಪರೂಪದ ಎಣ್ಣೆ ಅಡುಗೆಯನ್ನು ಅತ್ಯಂತ ನಿಯಮಿತವಾಗಿ ಸೇವಿಸಿ ಒಂದು ಬಾರಿ ಉಪವಾಸ ಮಾಡಿ.

ಇವುಗಳನ್ನು ಪಾಲಿಸಿದರೆ ಆರೋಗ್ಯ ಹಾನಿಯಿಂದಲೂ ಮತ್ತು ಇಂದಿನ ಪ್ರಪಂಚದಿಂದ ಆಗುವ ಮುಜುಗರದಿಂದಲೂ ತಪ್ಪಿಸಿಕೊಳ್ಳಬಹುದು.
ಹಾಗೆಯೇ, ಅಪರೂಪಕ್ಕೆ ಬಾಯಿ ಚಪಲ ತೀರಿಸಿಕೊಳ್ಳಲೂ ಬಹುದು, ಇಲ್ಲದೇ ಪೂರ್ಣ ತ್ಯಜಿಸಿದರೆ ಕೆಲವರಿಗೆ ಒಮ್ಮೆಗೇ ಅನಾಹುತ ಆಗುವಷ್ಟು ತಿನ್ನಬೇಕೆನಿಸುತ್ತದೆ.
•••

*ಮೆತ್ತಿಕೊಂಡ ಎಣ್ಣೆಯನ್ನು ಶರೀರದಿಂದ ಹೊರಹಾಕಿ*

• ದಿನಕ್ಕೆ ಅರ್ಧ ಹೋಳು ನಿಂಬೆ ಸರವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಹಿಂಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ 21  ಅಥವಾ 48 ದಿನಗಳ ಕಾಲ ಮಾಡುವುದರಿಂದ ಶರೀರದಲ್ಲಿ, ರಕ್ತನಾಳಗಳಲ್ಲಿ, ಯಕೃತ್ತಿನಲ್ಲಿ, ಮೂತ್ರಪಿಂಡಗಳಲ್ಲಿ ಮೆತ್ತಿಕೊಂಡ ಜಿಡ್ಡು ಕರಗಿ ಮಲದಿಂದ ಹೊರಹೋಗುತ್ತದೆ. ಅಂದರೆ, ದಿನಕ್ಕೆ ಒಂದು ಅಥವಾ ಎರಡುಬಾರಿ ಸಹಜ ಮಲಪ್ರವೃತ್ತಿಯಾಗಿ ಹೊರಹೋಗುತ್ತದೆ, ಹೆಚ್ಚು ಬಾರಿ ಮಲಪ್ರವೃತ್ತಿ ಆಗುವುದಿಲ್ಲ, ಭಯ ಬೇಡ.

ಆ ನಂತರ ವಾರಕ್ಕೆ ಒಂದು ಬಾರಿ ಈ ಪದ್ಧತಿಯನ್ನು ಮುಂದುವರಿಸಿರಿ ಮತ್ತು ಮೇಲೆ ತಿಳಿಸಿದಂತೆ ಆದರ್ಶ ಎಣ್ಣೆಸೇವನಾ ವಿಧಾನ ಅನುಸರಿಸಿ. 
ನಿಮಗೆ ಯಾವುದೇ ಹಾನಿಯಾಗದೇ ಆರೋಗ್ಯ ಸಹಜವಾಗಿ ಲಭಿಸುತ್ತದೆ.

ಸೂಚನೆ-
ತುಂಬಾ ತೆಳ್ಳಗೆ ಇರುವವರು, ಅತ್ಯಂತ ಹೆಚ್ಚು ಶಾರೀರಿಕ ಶ್ರಮ ಮಾಡುವವರು ತಿಂಗಳಿಗೆ ಒಂದು ಬಾರಿ ನಿಂಬೆ ಸೇವನೆ ಮಾಡಬಹುದು.
•••

*ಮಾನಸಿಕವಾಗಿ ಕೊರಗದೇ ಸುಖವಾದ ನಿದ್ದೆ ಮಾಡಿ*

ಇದೊಂದು ಅತ್ಯುತ್ತಮ ಸಿದ್ಧ ವಿಧಾನ, ಇತ್ತೀಚಿನ ಮಾಧ್ಯಮಗಳಲ್ಲಿ ಪ್ರಕಟವಾಗುವ ನೂರೆಂಟು ವಿಧಿ ವಿಧಾನಗಳಿಂದ ಭಯ ಹೊಗಿಸಿಕೊಂಡು ಬದುಕಿದರೆ, ನಿತ್ಯವೂ ಅಮೃತ ಸೇವಿಸುತ್ತಿದ್ದರೂ ಅದು ಅನಾರೋಗ್ಯ ತರುತ್ತದೆ. 
ಎಲ್ಲ ಮರೆತು ಶಾರೀರಿಕ ಶ್ರಮವನ್ನು ಚನ್ನಾಗಿ ಮಾಡಿ, ಶರೀರದಿಂದ ಬೆವರು ಹೊರಬಂದು ಶುದ್ಧವಾಗುತ್ತೀರಿ. ಹಾಗೆಯೇ 
ಶಾರೀರಿಕ ಶ್ರಮವು ಮನಸ್ಸಿಗೆ ಉತ್ತಮ‌ ನಿದ್ದೆಯನ್ನು ಕೊಡುತ್ತದೆ ಮತ್ತು ಆತಂಕ ದೂರಮಾಡುತ್ತದೆ.

ಎಲ್ಲ ಮರೆತು ನೆಮ್ಮದಿಯ ನಿದ್ದೆಗೆ ಜಾರಲು- 
• ಹಗಲು ಹೆಚ್ಚು ಶಾರೀರಿಕ ಶ್ರಮ ಮಾಡಿ(ರಾತ್ರಿ ಊಟದ ನಂತರ ವಾಕ್ ಒಳ್ಳೆಯದಲ್ಲ)
• ಜಿಡ್ಡು ಸೇವನೆ ಕಡಿಮೆಮಾಡಿ
ಮತ್ತು
• ರಾತ್ರಿ ಆಹಾರ ಪ್ರಮಾಣ ಕಡಿಮೆ ಗೊಳಿಸಿ.

ಧನ್ಯವಾದಗಳು
•••••••••••••••••

Monday, 14 June 2021

ಪಾಮ್ ಆಯಿಲ್ ಸೇವನೆಯ ಅನಾಹುತಗಳು.

•••••••••••••••••••
ಅಮೃತಾತ್ಮರೇ ನಮಸ್ಕಾರ🙏🏼
15.06.2021
•••••••••
✒️ ಇಂದಿನ ವಿಷಯ:
*ಅಡುಗೆಮನೆ ಆಲಸ್ಯದಿಂದ ಆಸ್ಪತ್ರೆಗಳ ಮೆರೆದಾಟ*
ಸಂಚಿಕೆ :59
ಪಾಮ್ ಆಯಿಲ್ ಸೇವನೆಯ ಅನಾಹುತಗಳು.
•••••••••••••••••••

"ಎಣ್ಣೆ ಖರೀದಿಸುವಾಗ ದೀರ್ಘಕಾಲದ ಆರೋಗ್ಯ ಗಮನದಲ್ಲಿ ಇರಬೇಕೆ ಹೊರತು ಎಣ್ಣೆಯ ದರವಲ್ಲ."
 
ಇಂದು ಅಡುಗೆ ಎಣ್ಣೆ ಇನ್ನೂರು ರೂಪಾಯಿ ಹತ್ತಿರ ತಲುಪಿದೆ ನಿಜ , ಅದರ ಆರ್ಥಿಕ ಹೊರೆಯನ್ನು 
ಸರಿದೂಗಿಸಿಕೊಳ್ಲಲು ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿ ಶುದ್ಧ ಎಣ್ಣೆಯನ್ನು ಬಳಸಿಕೊಳ್ಳಬಹುದು ಅಥವಾ ಪ್ರತೀ ಮನೆಯಲ್ಲೂ ಬಳಸುತ್ತಿರುವ ಹಾಲನ್ನು ಕಾಯಿಸಿ ಕೆನೆ ತೆಗೆದು ಕಡೆದು ಬೆಣ್ಣೆ ತೆಗದು ತುಪ್ಪವನ್ನು ಮಾಡಿ ಅದನ್ನು ಎಣ್ಣೆಯ ಬದಲಾಗಿ ಬಳಸಬಹುದು.

ಇದರ ಹೊರತು ಕಡಿಮೆ ದರದ ಪಾಮ್ ಆಯಿಲ್ ಅಥವಾ ರೀಫೈನ್ಡ್ ಎಣ್ಣೆಯನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.!!!

ಪಾಮ್ ಆಯಿಲ್ ಅನ್ನು ಏಕೆ ಬಳಸಬಾರದು?
ಹದಿಹರೆಯದವರು ಹೃದಯ ಸ್ಥಂಬನದಿಂದ ಹಠಾತ್ ಮರಣಕ್ಕೆ ತುತ್ತಾಗುತ್ತಿರುವುದಕ್ಕೆ , ಮೂತ್ರಪಿಂಡಗಳನ್ನು ಕಳೆದುಕೊಳ್ಳುತ್ತಿರುವುದಕ್ಕೆ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿರುವುದಕ್ಕೆ ಈ ಪಾಮ್ ಆಯಿಲ್ ಸೇವನೆಯೇ ಕಾರಣ. !!!
ಇಂದು ತಯಾರಿಸುತ್ತಿರುವ ಎಲ್ಲಾ ರೀತಿಯ ಬಿಸ್ಕೆಟ್, ಬೇಕರಿ ಉತ್ಪನ್ನಗಳು , ಎಣ್ಣೆಯಲ್ಲಿ ಕರಿದು ಮಾರಾಟವಾಗುತ್ತಿರುವ ಚಿಪ್ಸ್, ಚಕ್ಕುಲಿ, ಸಂಡಿಗೆ ಮುಂತಾದವುಗಳು ಪಾಮ್ ಆಯಿಲ್ ನಲ್ಲಿ ಮಿಂದೆದ್ದು ಬಂದಿರುತ್ತವೆ.
 ಇದು ಏಕೆಂದು ವಿಚಾರಿಸಿದರೆ ಸಿಗುವ ಉತ್ತರ " ಶುದ್ಧ ಎಣ್ಣೆಯಲ್ಲಿ ಕರಿದರೆ ಪದಾರ್ಥಗಳು ಒಂದು ವಾರದಲ್ಲಿ ವಿಚಿತ್ರ ವಾಸನೆಯನ್ನು ಹೊರಸೂಸುತ್ತವೆ. ಅವುಗಳನ್ನು ಯಾರೂ ತಿನ್ನಲು ಇಷ್ಟಪಡುವುದಿಲ್ಲ , ಅದೇ ಪಾಮ್ ಆಯಿಲ್ ನಲ್ಲಿ ತಯಾರಿಸಿದರೆ ಆರು ತಿಂಗಳು ಇಡಬಹುದು" ಎಂಬ ಉತ್ತರ ಸಿಗುತ್ತದೆ. 
ಇದು ಏನ್ನನು ಸೂಚಿಸುತ್ತದೆ ಎಂದರೆ, ಪಾಮ್ ಆಯಿಲ್ ನಿಂದ ತಯಾರಿಸಿದ ಪದಾರ್ಥಗಳನ್ನು ನೈಸರ್ಗಿಕವಾಗಿ ಬದುಕುವ ಯಾವ ಕ್ರಿಮಿಕೀಟಾದಿಗಳೂ ತಿನ್ನುವುದಿಲ್ಲ , ಆದ್ದರಿಂದ ಆ ಪದಾರ್ಥಗಳು ಬೇಗ ಹಾಳಾಗುವುದಿಲ್ಲ. 

ಮತ್ತೊಂದು ಸತ್ಯವನ್ನು ಗಮನಿಸಿ , ಮನೆಯಲ್ಲಿ ಶುದ್ಧ ಎಣ್ಣೆಯಿಂದ ತಯಾರಿಸಿದ ಎಣ್ಣೆ ತಿಂಡಿಗಳು ಜಿಡ್ಡಿನಿಂದ ಕೂಡಿರುತ್ತವೆ. ಅದೇ, ಹೊರಗಿನ ತಿಂಡಿಗಳು ಒಣಗಿದಂತೆ ಗರಿಗರಿಯಾಗಿ ಇರುತ್ತವೆ. ಇದೊಂದು, ಅಪಾಯಕಾರಿ ಸೂಚನೆ. 

ನಮ್ಮ ರಕ್ತನಾಳಗಳು ಶುದ್ಧ ತುಪ್ಪದಂತಹ ( ಅಂಗಡಿಗಳಲ್ಲಿ ದೊರಕುವ ಸಿದ್ಧ ತುಪ್ಪಗಳು ವಾಸ್ತವದಲ್ಲಿ ತುಪ್ಪವೇ ಇಲ್ಲ ) 
ಶ್ರೇಷ್ಠ ಅಥವಾ ಸಾರ ಸ್ನೇಹಾಂಶದಿಂದ ಮೃದುವಾಗಿ ಇರುತ್ತವೆ. 

ಕರಿದ ನಂತರ ತನ್ನ ಜಿಡ್ಡಿನ ಅಂಶವನ್ನು ಕಳೆದುಕೊಳ್ಳುವ ಪಾಮ್ ಆಯಿಲ್ ರಕ್ತನಾಳಗಳನ್ನು ಒಣಗಿಸಿಬಿಡುತ್ತದೆ. ಈ ಒಣಗುವಿಕೆಯೇ ರಕ್ತನಾಳಗಳು ಗಡುಸಾಗಲು , ಕಠಿಣವಾಗಿ ಕಟ್ಟಿಕೊಂಡು ರಕ್ತಹರಿಯುವಿಕೆಗೆ ಮಾರ್ಗ ಅವರೋಧವನ್ನು ಉಂಟುಮಾಡುತ್ತವೆ. 

ಯಾವ ಸ್ಥಾನದ ರಕ್ತನಾಳಗಳು ಹೆಚ್ಚು ಗಡುಸಾಗಿವೆ ಎನ್ನುವುದರ ಆಧಾರದಲ್ಲಿ  ಹೃದ್ರೋಗವೋ, ಮೂತ್ರಪಿಂಡ ವೈಫಲ್ಯವೋ , ಪಾರ್ಶ್ವವಾಯುವೋ ಉಂಟಾಗುತ್ತದೆ. ಈಗ ಹದಿಹರೆಯದಲ್ಲಿ ಈ ಗಂಭೀರ ಕಾಯಿಲೆಗಳನ್ನು ನಾವು ನೋಡುತ್ತಿರುವುದರ ಹಿಂದೆ ಕುಳಿತಿರುವ ಬಹುದೊಡ್ಡ ಶತ್ರು ಎಂದರೆ ಈ ಪಾಮ್ ಆಯಿಲ್.

ಬಳಸಬಾರದ ಉತ್ಪನ್ನಗಳು:
ಬಿಸ್ಕೆಟ್
ಚಾಕಲೇಟ್
ಬೇಕರಿ ಉತ್ಪನ್ನಗಳು
ಪಾನಿಪುರಿ
ಗೋಬಿಮಂಚೂರಿ
ಫ್ರೈಡ್ ರೈಸ್ 
ಜೀರ-ಎಗ್ ರೈಸ್
ವಿವಿಧ ಚಿಪ್ಸ್ ಗಳು
ಮುಂತಾದವುಗಳು.....

ಧನ್ಯವಾದಗಳು
••••••••••••••••••

MATHS TIME LINE

MATHS TIME LINE https://mathigon.org/timeline