✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Thursday, 4 February 2021

ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️!!!

🙏ಅಮೃತಾತ್ಮರೇ ನಮಸ್ಕಾರ 🙏
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
   💫💫💫💫💫💫💫💫💫💫
•••••••••••••••••••••••••••••••••••••
•••••
05.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-12
••••••••••••••
✍️: ಇಂದಿನ ವಿಷಯ:
ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️!!!
•••••••••••••••••••••••••••••••••••••••••
✨ ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

👁 ವಿಚಿತ್ರವಾದರೂ ಸತ್ಯ: 
ಅತಿಯಾಗಿ ನೀರು ಕುಡಿಯುವುದರಿಂದಲೇ ಕಿಡ್ನಿಯಲ್ಲಿ ಕಲ್ಲುಗಳುಂಟಾಗುತ್ತವೆ.!!

👇 ಈ ಶ್ಲೋಕವನ್ನು ಗಮನಿಸಿ: 
📜 ನ ಅಂಬು ಪೇಯಂ ಅಶಕ್ತ್ಯಾ ವಾ ಸ್ವಲ್ಪಂ ಅಲ್ಪಾಗ್ನಿ ಗುಲ್ಮಿಭಿಃ ||13||
ಪಾಂಡು, ಉದರ, ಅತಿಸಾರ, ಅರ್ಶ, ಗ್ರಹಣಿದೋಷ, ಶೋಥಿಭಿಃ |
ಋತೇ ಶರನ್ನಿದಾಘಾಭ್ಯಾಂ ಪಿಬೇತ್ ಸ್ವಸ್ಥೋ ಅಪಿ ಚ ಅಲ್ಪಶಃ ||14||
-ವಾಗ್ಭಟ ಸೂತ್ರಸ್ಥಾನ

◆ ಉಷ್ಣ ಕಾಲದಲ್ಲೂ ಅಂದರೆ,
ಗ್ರೀಷ್ಮ ಋತು (ಮೇ-ಜೂನ್) ಮತ್ತು
ಶರದೃತು(ಅಕ್ಟೋಬರ್-ನವೆಂಬರ್) ಗಳಲ್ಲಿ ಅಗತ್ಯಕ್ಕನುಸಾರ ನೀರನ್ನು ಕುಡಿಯಬಹುದು, ಉಳಿದ ತಿಂಗಳುಗಳಲ್ಲಿ  ಅಲ್ಪ ನೀರು ಸಾಕು, ಹೆಚ್ಚು ಕುಡಿದರೆ ಅನೇಕ ರೋಗಗಳು ಬರುತ್ತವೆ!!! 

👉 ಹೆಚ್ಚು ನೀರನ್ನು ಸೇವಿಸಿದರೆ-
• ನಿಶ್ಯಕ್ತಿ 
• ಅಗ್ನಿಮಾಂದ್ಯ
• ಗುಲ್ಮ
• ರಕ್ತಹೀನತೆ 
• ಮೂಲವ್ಯಾಧಿ
• ಗ್ಯಾಸ್ಟ್ರೈಟೀಸ್
• ಕೊಲೈಟೀಸ್ 
ಮುಂತಾದ ಅನೇಕ ರೋಗಗಳು ಬರುತ್ತವೆ!!!

ನಮ್ಮ ಈ ಮಾತು ಸತ್ಯ, ಏಕೆಂದರೆ ಆಚಾರ್ಯರು ನಿಃಸ್ವಾರ್ಥರು, ಅಹಂಕಾರ ರಹಿತರು, ಕೇವಲ ಮನುಜಕುಲದ ಆರೋಗ್ಯ ಅವರ ಆಶಯವಾಗಿತ್ತು ಎನುವುದು ಸ್ಪಷ್ಟ, ಹಾಗಾಗಿ ಅಸತ್ಯವಲ್ಲ ಮತ್ತು 
ಪ್ರತ್ಯಕ್ಷವಾಗಿ ಅನುಭವ ಪೂರ್ವಕ ನೋಡಿದರೆ,  "ಕಡಿಮೆ ನೀರು ಕುಡಿಯುವವ ಯೋಗಿ, ಹೆಚ್ಚು ಕುಡಿಯುವವ ರೋಗಿ" ಆಗಿದ್ದಾರೋ ಇಲ್ಲವೋ?

ಪ್ರಾಣಿಗಳನ್ನು ಗಮನಿಸಿ ದಿನಕ್ಕೆ ಒಂದುಬಾರಿ ನೀರು ಸೇವಿಸುತ್ತವೆ, ಅದುವೇ ನೈಸರ್ಗಿಕ ಜೀವನ.

📩 ಆಯುರ್ ವಿಜ್ಞಾನ ಏಕೆ ಹೀಗೆ ಹೇಳಿದೆ? ನೋಡೋಣ: 
◆ ಆಹಾರ ಸ್ನಿಗ್ಧವೂ, ಮೃದುವೂ ಮತ್ತು ಸುಖೊಷ್ಣವಾಗಿಯೂ ಇರಬೇಕು. ಚನ್ನಾಗಿ ಬೇಯಿಸಿರಬೇಕು. ಇದರಿಂದಲೇ ಶರೀರಕ್ಕೆ ಬೇಕಾದಷ್ಟು ನೀರು ಸೇರುತ್ತದೆ. 

ಶೀತಲ ಭೂಮಿಯ ಆಹಾರಗಳು ಪಚನಕ್ಕೆ ಕಷ್ಟವಾಗಿ ರೋಗ ತರುತ್ತವೆ, ಕಾರಣ ಅದರಲ್ಲಿರುವ ಹೆಚ್ಚಿನ ನೀರು. ಹಾಗೇ ಉಷ್ಣವಲಯದ ಆಹಾರಗಳು ಪಚನಕ್ಕೆ ಹಗುರ ಹಾಗಾಗಿ ಆರೋಗ್ಯ ತರುತ್ತವೆ, ಕಾರಣ ಅದರಲ್ಲಿರುವ ಅಲ್ಪ ನೀರಿನ ಪ್ರಮಾಣ.

🔥 ನಮ್ಮ ಶರೀರದ ಒಳಗೆ ಅಗ್ನಿ ಇದ್ದು, ಇದು ಅನೇಕ ಸ್ಥೂಲ-ಸೂಕ್ಷ್ಮ ಎಂಜೈಮ್ ರೂಪದಲ್ಲಿದೆ. ಇದಕ್ಕೆ ಹೆಚ್ಚು ನೀರು ಬೆರೆತರೆ ಏನಾಗುತ್ತದೆ? ಅದರ ಪಾಚನ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಸೇವಿಸುವ ಆಹಾರ ಯಾವುದೇ ಇದ್ದರೂ ಸರಿಯಾಗಿ ಪಚನವಾಗದು ಅದರ ಪರಿಣಾಮ, ಉದರದ ಊತ(ಗ್ಯಾಸ್ಟ್ರೈಟೀಸ್...) ಮಲಬದ್ಧತೆ, ಮೂಲವ್ಯಾಧಿ, ಗುಲ್ಮ ಇವುಗಳಿಂದ ರಕ್ತದ ಕೊರತೆ ಉಂಟಾಗಿ ಪಾಂಡು ಅಥವಾ ಅನಿಮಿಯಾ ಉಂಟಾಗುತ್ತದೆ. ಶರೀರದಲ್ಲಿ "ಆಮವಿಷ"(unseparated molecules of food) ಸಂಚಯವಾದ ಕಾರಣ ಸದಾ ನಿಶ್ಯಕ್ತಿ ಮೈಭಾರ ಇರುತ್ತದೆ. ಕೆಲ ಕಾಲ ಕಳೆದರೆ ಹೈಪೋಥೈರಾಯ್ಡಿಸಮ್ ಆಗಿ ಶರೀರ ಮತ್ತಷ್ಟು ದುರ್ಬಲಗೊಳ್ಳುತ್ತದೆ.

👉 ಇನ್ನು ಕಿಡ್ನಿ ಕಲ್ಲುಗಳ ಬಗ್ಗೆ ನೋಡೋಣ: 
ಮೂತ್ರಮಾರ್ಗದಲ್ಲಿ ಈಗಾಗಲೇ ಸಿಕ್ಕಿಹಾಕಿಕೊಂಡ ಕಲ್ಲುಗಳನ್ನು ಕ್ಷಾಲನ(washout) ಮಾಡಲು ಚಿಕಿತ್ಸೆಯಾಗಿ ಜಲಸೇವನೆ ಸರಿ. ಆದರೆ ಕಿಡ್ನಿ ಕಲ್ಲುಗಳನ್ನು ತಡೆಯುವ ಸಲುವಾಗಿ ನೀರನ್ನು ಕುಡಿದರೆ ಅದು ನಮ್ಮನ್ನು ಮೂರ್ಖರನ್ನಾಗಿಸುತ್ತದೆ.  ಅತಿ ಜಲಪಾನದಿಂದ ಅಗ್ನಿಮಾಂದ್ಯವಾಗುವ ಕಾರಣ ಅವಿಭಜಿತ(ಜೀರ್ಣವಾಗದ) ಲವಣಗಳು ನೆಫ್ರಾನ್ಗಳಲ್ಲಿ ಸಂಚಯವಾಗಿ ಮಾರ್ಗದಲ್ಲಿ ಕಟ್ಟಿಕೊಂಡ ಪರಿಣಾಮ ಕಿಡ್ನಿ ಕಲ್ಲುಗಳು ಪದೆ ಪದೆ ಮರುಕಳಿಸುತ್ತವೆ. 

ಬಹಳ ವಿವರ ಕೊಡಬಹುದು, ಆದರೆ ಇಷ್ಟು ಸಾಕು. ಗಮನಿಸಿ ನಿಮ್ಮ ಸುತ್ತ ಇರುವ ತೊಂಭತ್ತು- ನೂರು ವರ್ಷದ ವೃದ್ಧರ ನೀರಿನ ಪ್ರಮಾಣ ಗಮನಿಸಿ ಮತ್ತು ಹಿಂದಿನಿಂದ ಅವರು ಪಾಲಿಸಿದ ಪ್ರಮಾಣ ಗಮನಿಸಿ ಅವರ ಆರೋಗ್ಯದ ಗುಟ್ಟು ಅಲ್ಪ ಜಲಪಾನ ಎಂದು ಗೊತ್ತಾಗುತ್ತದೆ.

ಹಾಗಾಗಿ,
ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

🙏 ಧನ್ಯವಾದಗಳು 🙏
••••••••••••••
ಇಂದ 
ಹೆಚ್.ಬಿ.ಮೇಟಿ

Wednesday, 3 February 2021

ಜಲವೇ ಜೀವ. ಭಾಗ-೩

🤝 ಅಮೃತಾತ್ಮರೇ ನಮಸ್ಕಾರ 🙏
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
04.02.20201
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-13
••••••••••••••
✍️: ಇಂದಿನ ವಿಷಯ:
       ಜಲವೇ ಜೀವ. ಭಾಗ-೩
•••••••••••••••••••••••••••••••••••••••••

🖋 ಸಮರ್ಪಕವಾಗಿ ಜಲ ಸೇವಿಸುವ ವಿಧಾನ ಯಾವುದು?
★ ನಮ್ಮ ಜೀವಕೋಶಗಳು ಬದುಕಿರುವುದೇ, ಜಲದ ಆಧಾರದಲ್ಲಿ. ಎಲ್ಲಾ ಧಾತುಗಳಲ್ಲಿರುವ ದ್ರವಾಂಶವನ್ನೇ *ಆಪ್ ಧಾತು* ಎಂದು ಕರೆದಿದ್ದಾರೆ ಆಯುರ್ವೇದ ಆಚಾರ್ಯರು.

ನಾವು ಪ್ರತಿ ದಿನ ಅಳತೆಮಾಡಿ ಅಧಿಕ ಪ್ರಮಾಣದಲ್ಲಿ ಜಲ ಸೇವನೆ ಮಾಡುತ್ತಿದ್ದೇವೆ, ಆದರೂ ನಿರ್ಜಲೀಕೃತ ಕಾಯಿಲೆಗಳಾದ ಮೈಗ್ರೇನ್, ಬಿ.ಪಿ, ಆಯಾಸ, ಮೂಳೆ ಸವೆತ, ಕಿಡ್ನಿ ಕಲ್ಲುಗಳು... ಹೀಗೆ ಅನೇಕ ರೋಗಗಳಿಂದ ಕೊರಗುತ್ತಿದ್ದೇವೆ!!

💢 ಸಮರ್ಪಕವಾಗಿ ಜಲ ಸೇವನೆ ಮಾಡದಿರುವುದೇ ಈ ರೋಗಗಳಿಗೆ ಕಾರಣ.

🖋 ಜಲ ಸೇವನೆಯ ವಿಧಾನಗಳಾವುವು?
★ ಆಹಾರದಲ್ಲಿರುವ ಜಲ ಮತ್ತು ಕುಡಿಯುವ ನೀರು ಈ ಎರೆಡು ವಿಧಾನದಿಂದ ಜಲವು ನಮ್ಮ ಶರೀರವನ್ನು ಸೇರುತ್ತದೆ. ಇವುಗಳ ಅಸಮರ್ಪಕ ನಿರ್ವಹಣೆಯೇ ರೋಗೋದ್ದೀಪನಗೊಳಿಸುತ್ತಿವೆ.

1⃣ ಆಹಾರದಲ್ಲಿರುವ ಜಲ:
ಶರೀರದ ಸದೃಢ ಬೆಳವಣಿಗೆಗೆ ಆಹಾರದಲ್ಲಿರುವ ಜಲವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. 
ಗಮನಿಸಿ-
ಅಕ್ಕಿಯನ್ನು ತಿಂದು ಎಷ್ಟು ನೀರು ಕುಡಿದರೂ ಉದರದಲ್ಲಿ ಅದು ಆಹಾರ(ಅನ್ನ)ವಾಗದು.

ಆದರೆ ಇಂದು ನಾವು, ಬಾಯಿರುಚಿಗೆಂದು ಕಡಿಮೆ ನೀರಿರುವ, ತರಿತರಿಯಾದ ಆಹಾರವನ್ನೂ ಮತ್ತು ಕರಿದ ಅಥವಾ ವಗ್ಗರಣೆ ಕಲಸಿದ ಅಥವಾ ಚಪಾತಿಯಂತಹ ಕಡಿಮೆ ನೀರಿರುವ ಪದಾರ್ಥ ಸೇವಿಸುತ್ತೇವೆ! ಮತ್ತೆ ನೀರು ಒಳ್ಳೆಯದೆಂದು ಮೇಲಿನಿಂದ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತೇವೆ!! ಇದು ಸರ್ವಥಾ ರೋಗಕಾರಕ.

💥 ಇದರ ಪರಿಣಾಮ: 
ಯಾವುದೇ ಜೈವಿಕ ಪರಿವರ್ತನೆಯು ಆಹಾರದಲ್ಲಿನ ದ್ರವದ ಅವಸ್ಥೆಯಲ್ಲಿ ಮತ್ತು ಮೆದುವಾದ ಅವಸ್ಥೆಯಲ್ಲಿ ಆಗುತ್ತದೆ. 
ಹಾಗೆಯೇ, ನಮ್ಮ ಆಹಾರವು ದೃಢ ಶರೀರವಾಗಿ ಪರಿವರ್ತನೆಯಾಗಲು ಆಹಾರದೊಳಗಿನ ನೀರು ಬಹುಮುಖ್ಯ, ಇಲ್ಲದೇ ಹೋದರೆ ಆರಂಭದಲ್ಲಿ ಆಮ್ಲಪಿತ್ತ, ರಕ್ತಪಿತ್ತ, ಲಿವರ್ ನಲ್ಲಿ ಕೊಬ್ಬು ಶೇಖರಣೆ, ಪಿತ್ತಕೋಶದ ಮತ್ತು ಕಿಡ್ನಿಕಲ್ಲುಗಳು... ಮುಂತಾದವು ಉಂಟಾಗುತ್ತವೆ. ಕ್ರಮೇಣ ಗಂಭೀರ ಸ್ವರೂಪದ ಕಾಯಿಲೆಗಳು ಉಂಟಾಗುತ್ತವೆ.

💥 ಆರಂಭದಲ್ಲೇ ಇದನ್ನು ಗುರುತಿಸಿ:
ೱ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ
ೱ ಮೂತ್ರ, ಬೆವರು ದುರ್ಗಂಧದಿಂದ ಕೂಡಿದ್ದರೆ
ೱ ತಲೆಯಲ್ಲಿ ಮೊಡವೆಗಳು ಎದ್ದರೆ
ೱ ಹೊಟ್ಟು ಇದ್ದರೆ 
ತಿಳಿಯಿರಿ ನಿಮ್ಮ ಶರೀರ ನಿರ್ಜಲೀಕರಣಗೊಳ್ಳುತ್ತಿದೆ. 

💥 ಪರಿಹಾರ:
 ಎರೆಡು ದಿನ ಕೇವಲ ಅನ್ನದ ಗಂಜಿ ಸೇವಿಸಿ ನಂತರ ಒಂದು  ವಾರ ನೀರಾಗಿರುವ ಆಹಾರ ಬಳಸಿ. ಶೇ 80-90 ರಷ್ಟು ಬದಲಾವಣೆಗಳನ್ನು ಕಾಣುತ್ತೀರಿ.

2⃣ ಕುಡಿಯುವ ನೀರು:
ನೀರನ್ನು
• ಹೇಗೆ ಕುಡಿಯಬೇಕು?
• ಯಾವಾಗ ಕುಡಿಯಬೇಕು?
• ಎಷ್ಟು ಕುಡಿಯಬೇಕು?
• ಯಾವ ನೀರನ್ನು ಕುಡಿಯಬೇಕು?
ಈ ಪ್ರಶ್ನೆಗಳು ಬಹಳ ಜನರನ್ನು ಕಾಡುತ್ತಿವೆ, ಕೊನೆಗೆ ತಮಗೆ ತಿಳಿದ ಯಾವುದೋ ಒಂದು ರೂಢಿ ಅಥವಾ ಟಿ.ವಿ ನೋಡಿ ಪದೇ ಪದೇ ಬದಲಾಯಿಸುತ್ತಲೂ ಇರುತ್ತಾರೆ.

▶️ ಇದಕ್ಕೆ ಸರಳ ಉತ್ತರಗಳು:

💥 ಹೇಗೆ ಮತ್ತು ಯಾವಾಗ ನೀರು ಕುಡಿಯಬೇಕು?:
📜 ಸಮ ಸ್ಥೂಲ ಕೃಶಾ ಭುಕ್ತ ಮಧ್ಯ ಅಂತ ಪ್ರಥಮ ಅಂಬು ಪಾನಃ ||15||
- ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ-5
 ★ ಆಹಾರದ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ಜಲಪಾನ ಮಾಡುವುದರಿಂದ "ಸಮ ಶರೀರವೂ",
★ ಆಹಾರದ ನಂತರ ನೀರು ಸೇವನೆಯಿಂದ "ಸ್ಥೂಲ ಶರೀರವೂ",
★ ಆಹಾರಕ್ಕಿಂತ ಮೊದಲೇ ಸೇವಿಸುವ ಜಲವು "ಕೃಶ ದುರ್ಬಲ ಶರೀರ"ವನ್ನು ಉಂಟುಮಾಡುತ್ತದೆ.

✍ ಸಮ/ಆರೋಗ್ಯಯುತ ಶರೀರಕ್ಕಾಗಿ ಆಹಾರದ ಮಧ್ಯದಲ್ಲಿ ಸ್ವಲ್ಪ-ಸ್ವಲ್ಪ ಜಲಪಾನ ಶ್ರೇಷ್ಠ.

💥 ಎಷ್ಟು ನೀರನ್ನು ಕುಡಿಯಬೇಕು?
ಒಳಗಿನ ದ್ರವಾಂಶದ ಅಗತ್ಯವನ್ನು ನಮ್ಮ ಶರೀರ ಬಾಯಾರಿಕೆಯ ರೂಪದಲ್ಲಿ ಕೇಳುತ್ತದೆ. ಆಗ ಅದು ಕೇಳಿದಷ್ಟು ನೀರನ್ನು, ಕೇಳಿದಾಗ ಕೊಡಬೇಕು. ಸುಮ್ಮನೇ ಲೆಕ್ಕಮಾಡಿ, ಯಾರೋ ಹೇಳಿದರೆಂದು ಲೀಟರ್ ಲೆಕ್ಕದಲ್ಲಿ ಎಣಿಸಿ ಕುಡಿಯಬಾರದು.

💥 ಯಾವ ನೀರನ್ನು ಕುಡಿಯಬೇಕು?
ಆಳದ ಬೋರ್ ವೆಲ್ ನೀರು ನೇರ ಕುಡಿಯಲು ಯೋಗ್ಯವಲ್ಲ. ಅತ್ಯಂತ ಹೆಚ್ಚು ಖನಿಜಗಳಿಂದ ಕೂಡಿದ ಈ ಜಲ ಯೋಗ್ಯವಲ್ಲ, ಹಾಗೆಯೇ ಅತಿಯಾದ ಸಿಹಿ ಇರುವ ನೀರೂ ರೋಗಕಾರಕ(ಉದಾ: ತುಂಗಾ ಪಾನ)❗️

▪️ಶೈಲ ಜಲ(hilly region water) ರೋಗ ನಿವಾರಕ.
▪️ಜಾಂಗಲ ಜಲ(dry land water)ಆರೋಗ್ಯ ಕಾರಕ.
▪️ ಅನೂಪ ಜಲ(water from ever wet area) ಜೀರ್ಣಕ್ಕೆ ಕಷ್ಟ ಮತ್ತು ಆಹಾರವನ್ನೂ ಜೀರ್ಣಿಸುವುದಿಲ್ಲವಾಗಿ ರೋಗಕಾರಕ.
▪️ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಮಲಯ ಪರ್ವತ, ಹಿಮಾಲಯ ಪರ್ವತದ ಜಲವು ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. 

ಆಳದ ಕೊಳವೆಬಾವಿಯ  ನೀರನ್ನು ಕುಡಿಯಲು, ಬಳಸಲು ಆಯುರ್ವೇದದಲ್ಲಿ ಎಲ್ಲಿಯೂ ಹೇಳಿರುವುದಿಲ್ಲ. ಅದರ ಖನಿಜಾಂಶಗಳು ಹಾನಿ ಉಂಟು ಮಾಡುತ್ತವೆ, ಅದನ್ನು ಪರಿಹರಿಸಲು ಹುಟ್ಟಿಕೊಂಡದ್ದೇ ಆರ್. ಒ ಜಲ!! ಆದರೆ ಅದನ್ನು ಖನಿಜರಹಿತವಾಗಿಸಿ ಆಹಾರ ಪಚನಕ್ಕೆ ಮತ್ತು ಸ್ವತಃ ನೀರಿನ ಪಚನಕ್ಕೆ ಕಷ್ಟಮಾಡಿಕೊಂಡು ಇಂದು ನೂರಾರು ಕಾಯಿಲೆಗಳಿಗೆ ತುತ್ತಾಗಿದ್ದೇವೆ.

ಹಾಗಾಗಿ
ಅಗತ್ಯ ಪ್ರಮಾಣದ ಖನಿಜಗಳುಳ್ಳ ಅತಿಯಾಗಿ ಸಿಹಿಯಾಗಿರದ ಜಲ ಶ್ರೇಷ್ಠ

🙏🙏ಧನ್ಯವಾದಗಳು 🙏🙏
••••••••••••••
ಇಂದ
ಹೆಚ್.ಬಿ.ಮೇಟಿ

ಇ-ವೋಟರ ಐಡಿಯನ್ನು DOWNLOAD ಮಾಡಲು ಇಲ್ಲಿ ಕ್ಲಿಕ ಮಾಡಿ

CLICK HERE TO DOWNLOAD

Tuesday, 2 February 2021

ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ? ಭಾಗ-೨

🌷 ಅಮೃತಾತ್ಮರೇ ನಮಸ್ಕಾರ  🌷
🦢ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🦢
   🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀
••••••••••••••••••••••••••••••••••••••••••
03.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-12
••••••••••••••
✍️: ಇಂದಿನ ವಿಷಯ:
🔺 ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ?  ಭಾಗ-೨
•••••••••••••••••••••••••••••••••••••••••

💦 ಅತ್ಯಂತ ಶ್ರೇಷ್ಠ ಜಲ: 
 📜 ಉಪಲಾಸ್ಫಾಲನ ಆಕ್ಷೇಪ ವಿಚ್ಛೇದೈಃ ಖೇದಿತೋದಕಾಃ ||9||
ಹಿಮವನ್ ಮಲಯೋದ್ಭೂತಾಃ .........|
- ಅಷ್ಟಾಂಗ ಹೃದಯ, ಸೂತ್ರ ಸ್ಥಾನ ಅಧ್ಯಾಯ-5


★ ಹಿಮವನ್: ಹಿಮಾಲಯ ಪರ್ವತದಲ್ಲಿ ಹುಟ್ಟುವ
★ ಮಲಯನ್: ಮಲಯ ಪರ್ವತದಲ್ಲಿ ಹುಟ್ಟುವ ನದಿಗಳ ನೀರು ಅತ್ಯಂತ ಶ್ರೇಷ್ಠ ಏಕೆಂದರೆ- ಆ ಜಲ
★ ಉಪಲಾಸ್ಫಾಲನ: ಬಂಡೆಗಳಿಂದ ಬೀಳುವುದು
★ ಆಕ್ಷೇಪ ವಿಚ್ಛೇದೈಃ: ಜಲದ ಪರಮಾಣುಗಳ ವಿಭಜನೆಯಾಗುವುದು
★ ಖೇದಿತ ಉದಕ: ಅಂಕುಡೊಂಕಾಗಿ ಬಂಡೆಗಳ ನಡುವೆ ಸೀಳಿ ಹರಿವ ನೀರು ಕುಡಿಯಲು ಅತ್ಯಂತ ಶ್ರೇಷ್ಠ. 

🏞 ಈ ಜಲವನ್ನು , "ಗಂಗೋದಕ‌" ಎನ್ನುವರು(ಗಂಗಾ ನದಿಯ ಜಲ ಎಂಬ ಅರ್ಥವಲ್ಲ).

🚫 ಇನ್ನುಳಿದ ನೀರುಗಳು, "ಸಾಮುದ್ರಜಲ" (ಸಮುದ್ರದ ಜಲ ಎಂಬ ಅರ್ಥವಲ್ಲ, ಈ ಜಲ ಸಮುದ್ರ ಇದ್ದಂತೆ ಎಷ್ಡೇ ಪ್ರಮಾಣದಲ್ಲಿದ್ದರೂ ಬಳಸಲು ಅಯೋಗ್ಯ ಎಂಬುದು ನಿಜವಾದ ಅರ್ಥ)

📑 ಗಂಗೋದಕದ ವೈಜ್ಞಾನಿಕ ವಿವರಣೆ:
🔻 ಜಲವು ಅತ್ಯಂತ ಎತ್ತರದ ಮೇಲಿನಿಂದ ಬಂಡೆಗಳ ಮೇಲೆ ಬೀಳುವ ಕಾರಣ ಅದು ಆಕ್ಷೇಪ ವಿಚ್ಛೇದನ ಕ್ರಿಯೆಗೆ ಒಳಗಾಗಿ ತನ್ನ ಪರಮಾಣುವಿನ ಗಾತ್ರ ಕುಗ್ಗಿಸುವುದಲ್ಲದೇ, Hydrogen ವಿಭಜನೆಯಾಗಿ pH ವೃದ್ಧಿಯಾಗುವುದರಿಂದ, ಆಮ್ಲೀಯ ಗುಣವನ್ನು ಕಳೆದುಕೊಳ್ಳುತ್ತದೆ. ಇದು ವಿದ್ಯುತ್ ಪೂರಣಗೊಂಡ ಜಲವಾಗಿ ಮಾರ್ಪಡುತ್ತದೆ. ಇದೇ ಕಾರಣದಿಂದ ಈ ಜಲದ ಸಂಪರ್ಕಕ್ಕೆ ಬಂದ ಯಾವುದೇ ವಸ್ತು ಬೇಗ ಹಾಳಾಗುವುದಿಲ್ಲ, ಮನುಷ್ಯ ಕುಡಿದರೆ ಅವನಿಗೆ ಮುಪ್ಪು ಬೇಗ ಬರುವುದಿಲ್ಲ. ಸಧ್ಯಕ್ಕೆ ಜಗತ್ತಿನಲ್ಲಿ Antioxidant ಎಂಬ ಶಬ್ಧ ಅತ್ಯಂತ ಪ್ರಚಲಿತ ವಿಷಯವಾಗಿದೆ, ಈ ಜಲವು   Antioxidant ಗುಣವನ್ನು ಹೊಂದಿದೆ, ಏಕೆಂದರೆ ಜಲದ ಕಣಗಳ ಗಾತ್ರ ಅತ್ಯಂತ ಚಿಕ್ಕದಾಗುತ್ತದೆ, ಖನಿಜಗಳಿಂದ ತುಂಬುತ್ತದೆ ತನ್ಮೂಲಕ ಮುಪ್ಪು, ರೋಗಗಳು ಮನುಷ್ಯರನ್ನು ಹೆಚ್ಚಾಗಿ ಬಾಧಿಸುವುದಿಲ್ಲ.

📑 ಉಪಯೋಗ ಏನು?
★ ಈ ಜಲ ಉಪಯೋಗಿಸಿದ ಮನುಷ್ಯನಿಗೆ ರೋಗಗಳ ಸಾಧ್ಯತೆ ಕಡಿಮೆ.
★  ಮುಪ್ಪು ನಿಧಾನ.
★ ಶರೀರದ *ಆಪ್ ಧಾತು* ಶ್ರೇಷ್ಠಮಟ್ಟದಲ್ಲಿರುವ ಕಾರಣ ಬೇಗ ಆಯಾಸಗೊಳ್ಳುವುದಿಲ್ಲ.
★  pH balance ಕಾರಣದಿಂದ ಜೀವಕೋಶಗಳು ಆಮ್ಲೀಯತೆಯನ್ನು ಸಾಕಷ್ಟು ಕಳೆದುಕೊಳ್ಳುತ್ತವೆ. 
ಈ ಕಾರಣದಿಂದಾಗಿಯೇ ಹಿಮಾಲಯದಲ್ಲಿ ವಾಸಿಸುವ ಜನರು ಅತ್ಯಂತ ಆರೋಗ್ಯವಂತರು, ನಿತ್ಯವೂ, ಬೆಟ್ಟ ಏರಿ ಇಳಿದರೂ ಆಯಾಸಗೊಳ್ಳರು. ನಾವು ಅಲ್ಲಿಗೆ ಹೋದಾಗಲೂ ಸಹ ಎಷ್ಟೇ ನಡೆದರೂ ಸಹ, ಅಲ್ಲಿನ ವಾತಾವರಣದಲ್ಲಿ ಆ ನೀರಿನ ಪ್ರಭಾವ ಇರುವುದರಿಂದ ಆಯಾಸಗೊಳ್ಳುವುದು ಕಡಿಮೆ.

🔭 ಈಗ ಈ ಜಲ ಸಿಗುತ್ತದೆಯೇ? 
ಹೌದು ಪ್ರವಾಸಕ್ಕೆ ಹೋದಾಗ ತಂದುಕೊಳ್ಳಬಹುದು. ಮತ್ತು ಇತ್ತೀಚಿಗೆ ಕೆಲವು ಜಪಾನ್ ತಂತ್ರಜ್ಞಾನ ಎಂಬ ಹೆಸರಿನಲ್ಲಿ ಜಲವನ್ನು ವಿದ್ಯುತೀಕರಣ ಮಾಡುವ ವಾಟರ್ ಫಿಲ್ಟರ್ ಗಳು ಬರುತ್ತಿವೆ.

👉 ನಾನು ಪ್ರತ್ಯಕ್ಷ ನೋಡಿದ ಉದಾಹರಣೆಯನ್ನು ಕೊಡುತ್ತೇನೆ, ಈ ರೀತಿ ವಿದ್ಯುತ್ ಕೃತ ಜಲವನ್ನು ಪ್ರಾಣಿಗಳು ಇಷ್ಟಪಟ್ಟು ಕುಡಿಯುತ್ತವೆ ಮತ್ತು ಪಕ್ಕದಲ್ಲೇ ನಮ್ಮ ಆರ್ ಒ ವಾಟರ್ ಇಟ್ಟರೂ ಅದನ್ನು ತ್ಯಜಿಸುತ್ತವೆ.

ನಮಗಿಂತ ಪ್ರಾಣಿಗಳ ಸಂವೇದನಾಶೀಲತೆ ನೂರುಪಟ್ಟು ಅಧಿಕವಲ್ಲವೇ?


👀 ಆರ್ ಒ ಜಲಪಾನ ನಿಲ್ಲಿಸಿ, ಅದು ಜಲವಲ್ಲ ಆ್ಯಸಿಡ್!! ನಿಧಾನವಾಗಿ ನಮ್ಮನ್ನು ಸುಡುತ್ತದೆ. 

✍ What happens in electrolysis of water?
Due to electrolysis(ಆಕ್ಷೇಪ ವಿಚ್ಛೇದೈಃ) of water, water molecules during falling down from high mountains gets charged and having high hydrogen concentration called hingh pH value, there will be reduction in the oxidation property  and reduce the size of water molecules....

🙏🙏ಧನ್ಯವಾದಗಳು 🙏🙏
••••••••••••••
ಇಂದ
ಹೆಚ್.ಬಿ.ಮೇಟಿ

ಪ್ರವೇಶದ್ವಾರ:ಗಣಿತ

Monday, 1 February 2021

ತತ್ಸಮ-ತದ್ಭವಗಳು

CLICK HERE TO DOWNLOAD

ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ?🔹 ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ? ಭಾಗ-೧

🙏ಅಮೃತಾತ್ಮರೇ ನಮಸ್ಕಾರ 🙏
  🌸ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌸
      🌸ಸ್ವಾಸ್ಥ್ಯ ಸರ್ವರದ್ದೂ ಆಗಲಿ🌸
••••••••••••••••••••••••••••••••••••••••••
02.02.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-11
••••••••••••••
✍️: ಇಂದಿನ ವಿಷಯ:
🔹 ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ?
🔹 ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ?
•••••••••••••••••••••••••••••••••••••••••
 ನಗರದ ಬಹುತೇಕ ಮನೆಗಳಲ್ಲಿ ಮತ್ತು ಇತ್ತೀಚೆಗೆ ಎಲ್ಲಾ ಹಳ್ಳಿಗಳಲ್ಲಿ ಕುಡಿಯುತ್ತಿರುವ ನೀರು, ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದರೂ ಶುದ್ಧ ಎಂದು ಹೇಳುವ ಕಂಪನಿಗಳ ಮಾತು ಕೇಳಿ, ಪೇಯ್ಡ್ ರಿಸರ್ಚ್ ಗಳ ರಿಪೋರ್ಟ್ ಕೇಳಿ ನಿತ್ಯವೂ ಕುಡಿಯುತ್ತಿದ್ದೇವೆ ಮತ್ತು ಅದರಿಂದ ಮಾನವನ ಆರೋಗ್ಯ ಅತ್ಯಂತ ಶೋಚನೀಯವಾಗಿ ಕುಸಿಯುತ್ತಿದೆ!!!

*⃣ ಏನಿದು ಆರ್.ಒ.ವಾಟರ್?
🔅 ರಿವರ್ಸ್ ಆಸ್ಮೋಸಿಸ್ ನೀರು. 
ಅಂದರೆ ನೀರಿಗೆ ಇರುವ ಎಲ್ಲಾಗುಣಗಳನ್ನು ಕಳೆದುಕೊಂಡ ಆಮ್ಲೀಯ ಜಲವೇ ಆರ್.ಒ.ವಾಟರ್.
ಇಂದಿನ ಬಹುತೇಕ ಗ್ಯಾಸ್ಟ್ರೈಟೀಸ್ ಗಳಿಗೆ ಮತ್ತು ಆ್ಯಸಿಡಿಟಿಗಳಿಗೆ  ಈ ಆರ್.ಒ ಜಲವೇ ಕಾರಣವಾಗಿದೆ.

ಈಗಾಗಲೇ ಉದರದಲ್ಲಿ ಅತ್ಯಂತ ಕಡಿಮೆ 
ಪಿ.ಹೆಚ್ ಇರುವ ಆ್ಯಸಿಡ್ ಇದ್ದು ಇನ್ನಷ್ಟು ಘಾಸಿಗೊಳಿಸುತ್ತಿದೆ ಈ ಜಲ.
ಮತ್ತು
ಎಲ್ಲಾ ಖನಿಜಾಂಶಗಳನ್ನು ಇಲ್ಲವಾಗಿಸಿ ಕುಡಿಯುವ ಜಲದ ಕಾರಣದಿಂದಲೇ ಇಂದು ಬಹುತೇಕರ ಮೂಳೆಗಳು ಹರೆಯದಲ್ಲೇ ಸವಕಳಿ ಕಾಣುತ್ತಿವೆ,‌ ಶರೀರ ನೇರ ನಿಲ್ಲಲು ಕಾರಣವಾದ ಅಸ್ಥಿಧಾತುವಿನ‌ಕೊರತೆಯಿಂದಾಗಿ ಯುವಕರಲ್ಲಿ ಅತಿಯಾದ ಸೊಂಟದ ತೊಂದರೆಗಳು ಕಾಣುತ್ತಿವೆ. ಯುವತಿಯರಲ್ಲಿ ಮುಟ್ಟಿನ‌ತೊಂದರೆಗಳು ಕಾಣುತ್ತಿವೆ.


*⃣ ತಾಮ್ರದ ಪಾತ್ರೆಯ ಜಲ ಆರೋಗ್ಯದಾಯಕವೇ? ತಟಸ್ಥವೇ? ಅಥವಾ ಆರೋಗ್ಯಕ್ಕೆ ಮಾರಕವೇ?
🔅 ಇಂದು ನಾವು ಕುಡಿಯುತ್ತಿರುವ ತಾಮ್ರದ ಜಲ ನೇರವಾಗಿ ಮಾರಕವೆಂದೇ ಹೇಳಬಹುದು.
 ಬಹುತೇಕ ಉದರ, ಯಕೃತ್ ಮತ್ತು ಕಿಡ್ನಿ ತೊಂದರೆಗಳಿಗೆ ಈ ತಾಮ್ರದ ಜಲವೇ ಕಾರಣ!!

ಹಿಂದೆ ಕುಡಿಯುತ್ತಿದ್ದ ತಾಮ್ರದ ದೊಡ್ಡ ದೊಡ್ಡ ಹಂಡೆಯ ನೀರು ತಟಸ್ಥ ಅಥವಾ ಕ್ಷಾರೀಯವಾಗಿತ್ತು ಮತ್ತು ತಾಮ್ರದ ಪಾತ್ರೆಯ ಒಳಗೆ "ಕಿಲಾಯ" ಎಂಬ ಹೆಸರಿನಲ್ಲಿ ಲೋಹ ಲೇಪನ ಮಾಡುತ್ತಿದ್ದರು.

💦 ಇಂದು ಆರ್.ಒ ಜಲ, ಆಮ್ಲೀಯ ಗುಣ ಹೊಂದಿದ್ದು ಅದು ನೇರ ತಾಮ್ರಕ್ಕೆ ಸಂಪರ್ಕ ಬಂದರೆ, ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಿ ಹೆಚ್ಚಿನ ತಾಮ್ರ ಅಶುದ್ಧರೂಪದಲ್ಲಿ (ಆಯುರ್ವೆದದಲ್ಲಿ ಮಾತ್ರ ಲೋಹಗಳ ಶುದ್ಧೀಕರಣ‌ ಮತ್ತು ಭಸ್ಮೀಕರಣ‌ ಸಿದ್ಧಾಂತ ಇದೆ) ಶರೀರ ಸೇರುತ್ತದೆ. ಇದು ಕಾಲಾಂತರದಲ್ಲಿ ದೀರ್ಘಕಾಲೀನ ಯಕೃತ್ತೊಂದರೆ (Chronic Liver Disease), ಮೂತ್ರಪಿಂಡಗಳನ್ನು(Chronic Kidney Disease) ಹಾಳು ಮಾಡುತ್ತದೆ ಮತ್ತು ಇದು ಮರಳಿ ಸರಿಮಾಡಲಾಗದ ದೀರ್ಘಕಾಲೀನ ತೊಂದರೆಗಳಾಗಿ ದೇಹನಾಶ ಮಾಡುತ್ತವೆ.!!!

💢 ವಿಜ್ಞಾನ ಎಂದು ನಂಬಿ ಜೀವನಕ್ಕೇ ಕುತ್ತು ತಂದುಕೊಳ್ಳುವ ಈ ವ್ಯವಸ್ಥೆ ನಮಗೆ ಬೇಕೆ?

💢 ಮೊದಲೇ ತಾಮ್ರದ ಪಾತ್ರೆ! ಇನ್ನು ಅದರಲ್ಲಿ  ಆರ್.ಒ.ನೀರು!! ಇದನ್ನು ಕುಡಿಯುವುದು ಸರ್ವಥಾ ವರ್ಜ್ಯ.

💢 ಕ್ರಿಮಿಗಳನ್ನು ಕೊಂದರೇ ನಮ್ಮ ಬದುಕು ಎಂದು ಪ್ರಧಾನವಾಗಿ ನಂಬಿರುವ ಸಿದ್ಧಾಂತದಿಂದ ಆಂತರಿಕ ಇಕೋ ವ್ಯವಸ್ಥೆ ಹಾಳಾಗಿ, metabolic diseases ಬರುತ್ತಿವೆ.

*⃣ ಅತ್ಯಂತ ಸರಳವಾಗಿ ನೀರಿನ ಪರೀಕ್ಷೆ ಹೇಗೆ ಮಾಡಬೇಕು?
🔅 ಇದಕ್ಕೆ ಲ್ಯಾಬ್ ಗಳು ಬೇಕಿಲ್ಲ.

★ ಯೇನಾಭಿವೃಷ್ಟಂ ಅಮಲಂ ಶಾಲ್ಯಾನ್ನಂ ರಜತಸ್ಥಿತಮ್|
 ಅಕ್ಲಿನ್ನಂ ಅವಿವರ್ಣಂ‌ ಚ ತತ್ ಪೇಯಂ ‌ಗಂಗಾಮ್ ಅನ್ಯಥಾ||3||
ಸಾಮುದ್ರಂ ತತ್ ನ‌ಪಾತವ್ಯಂ..........|
- ವಾಗ್ಭಟ ಸೂತ್ರ ಸ್ಥಾನ, ಆಧ್ಯಾಯ-5 

Yenabhi vrustham  amalam shalyannam rajatha sthitam |
Aklinnam avivarnam cha tat peyam Gangaam anyatha ||3|| 
Samudram tam na patavyam...............|
- Vagbhata Sutra sthana chapter-5

✨ ಬೆಳ್ಳಿಯ ಪಾತ್ರೆಯಲ್ಲಿ ಅನ್ನವನ್ನಿಟ್ಟು, ಯಾವ ನೀರನ್ನು ಪರೀಕ್ಷಿಸಬೇಕಿದೆಯೋ ಅದನ್ನು ಚಿಮುಕಿಸಿ ಇಡಬೇಕು. ಮೂರು ಗಂಟೆಯಲ್ಲಿ ಅದು "ಕ್ಲಿನ್ನ" ಅಂದರೆ "ಅಂಟು" ಅಂಟಾಗದಿದ್ದರೆ ಮತ್ತು ಬಣ್ಣ ವ್ಯತ್ಯಾಸಗಾದಿದ್ದರೆ ಆ ಜಲ ಕುಡಿಯಲು ಯೋಗ್ಯ, ಎರಡರಲ್ಲಿ ಯಾವೊಂದು ವ್ಯತ್ಯಾಸ ಆದರೂ ಅಂತಹ ಜಲ ಕುಡಿಯಲು ಅಯೋಗ್ಯ(ಸಾಮುದ್ರ ಜಲ) ಜಲ ಎಂದು ತ್ಯಜಿಸಬೇಕು.


💧 ಯಾವ ನೀರು ಅತ್ಯಂತ ಶ್ರೇಷ್ಠ, ಈ ಕಾಲದಲ್ಲಿ ಅದನ್ನು ಕುಡಿಯಲು ಬಳಸುವುದರಿಂದ ಎಷ್ಟೆಲ್ಲಾ ರೋಗಗಳನ್ನು ತಡೆಯಬಹುದು ಎಂಬುದನ್ನು ನಾಳೆ ನೋಡೋಣ🙋‍♂

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

ಮಜ್ಜಿಗೆಯ ಮಾತು ಭಾಗ-01

🦢   ಅಮೃತಾತ್ಮರೇ, ನಮಸ್ಕಾರ   🦢   ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ     ಸಂಚಿಕೆ-92, ದಿನಾಂಕ: 19.07.2026 ••••••••••••••••••••••••••••••••••••••• ...