🦢 ಅಮೃತಾತ್ಮರೇ, ನಮಸ್ಕಾರ 🦢
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-93, ದಿನಾಂಕ: 27.09.2022
•••••••••••••••••••••••••••••••••••••••
✍️: ಇಂದಿನ ವಿಷಯ:
ಮಜ್ಜಿಗೆಯ ಮಾತು -- ಭಾಗ-2
•••••••••••••••••••••••••••••••••••••••
ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ ಸರಿ, ಆದರೆ ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುತ್ತದೆ.
ಹಾಗಾಗಿ ಸರಿಯಾದ ರೀತಿ ಬಳಸುವ ವಿಧಾನ ನೋಡೋಣ...
• ಮಜ್ಜಿಗೆ ತಯಾರಾದ ತಕ್ಷಣ ಫ್ರಿಜ್ ನಲ್ಲಿ ಇಟ್ಟರೆ ಸಂಜೆ ಸೇವಿಸಬಹುದೇ?
ಉತ್ತರ:
ಸೇವಿಸಬಹುದು, ಆದರೆ ಅದರ ಔಷಧೀಯ ಗುಣಗಳನ್ನು ಪಡೆಯಲಾರಿರಿ.
ಫ್ರಿಜ್ ನಲ್ಲಿ ಇಟ್ಟರೆ ಹುಳಿ ಬರುವುದಿಲ್ಲ, ಹಾಗಾಗಿ ವಿಷವಾಗಿ ಪರಿಣಮಿಸುವುದಿಲ್ಲ, ಆದರೆ ಅದು ಅಮೃತಪ್ರಾಯವಲ್ಲ.
• ನನಗೆ ಬಿ.ಪಿ. ಇದೆ, ಹಾಗಾಗಿ ಉಪ್ಪು ಸೇರಿಸದೇ ಮಜ್ಜಿಗೆ ಸೇವಿಸುತ್ತೇನೆ, ಇದು ಸರಿಯೇ?
ಖಂಡಿತಾ ತಪ್ಪು,
ಉಪ್ಪು ಸೇರಿಸಿದ ಮಜ್ಜಿಗೆ ಮೂಲವ್ಯಾಧಿಯನ್ನು ಹೋಗಲಾಡಿಸಿದರೆ, ಉಪ್ಪು ರಹಿತ ಮಜ್ಜಿಗೆ ಮೂಲವ್ಯಾಧಿಯನ್ನು ಉಂಟುಮಾಡುತ್ತದೆ! ಹೀಗೆನ್ನುತ್ತಾರೆ ಆಚಾರ್ಯರು.
ಅಂದರೆ, ಗುದದ್ವಾರದ ರಕ್ತನಾಳಗಳು ಊದಿಕೊಳ್ಳುವ ಮೂಲವ್ಯಾಧಿ ಮತ್ತು ರಕ್ತನಾಳಗಳ ಗಡುಸಿನಿಂದ ಆಗುವ ಬಿ.ಪಿ. ಗೂ ಖಂಡಿತಾ ಸಂಬಂಧ ಇದೆ. ಆಯುರ್ವೇದ ಈ ಎರಡನ್ನೂ "ರಕ್ತನಾಳಗಳ ವಿಕಾರ" ಎಂದೇ ಹೇಳುತ್ತದೆ. ಬಿ.ಪಿ. ಬರಲು ಕೇವಲ ಉಪ್ಪು ಕಾರಣವಲ್ಲ, ಅದೊಂದು ಸಹಾಯಕ ಕಾರಣ ಅಷ್ಟೇ...
ಉಪ್ಪು ಸೇರಿಸಿದ ಮಜ್ಜಿಗೆಯು ಆಹಾರವನ್ನು ಸೂಕ್ತ ರೀತಿಯಿಂದ ವಿಭಜಿಸುವುದೂ ಅಲ್ಲದೇ ಸಮರ್ಥವಾಗಿ ಹೀರುವಿಕೆಯನ್ನು ಮಾಡಿಸುತ್ತದೆ. ಈ ಕಾರಣದಿಂದ ಆಹಾರದ ಅತಿ ಹೆಚ್ಚಿನ ಪೋಷಕಾಂಶಗಳು ನಮಗೆ ದೊರೆಯುತ್ತವೆ.
ಮಜ್ಜಿಗೆ ಉಪ್ಪುರಹಿತವಾದರೆ, ಜೀವಕೋಶಗಳ ಒಳಗಿನ ಶಕ್ತಿಯನ್ನು ಅದು ತನ್ನತ್ತ ಸೆಳೆಯುತ್ತದೆ, ಆ ಕಾರಣದಿಂದ ಜೀವಕೋಶಗಳು ಸೊರಗಿ, ದುರ್ಬಲಗೊಳ್ಳುತ್ತವೆ. ಆಹಾರದ ಪೋಷಕಾಂಶಗಳು ಮಲದಲ್ಲಿ ಹೊರಹೋಗುತ್ತವೆ.
ನಾಳೆಗೆ ಮುಂದುವರಿಯುತ್ತದೆ...
🙏 ಧನ್ಯವಾದಗಳು 🙏
•••••••••••••••••••••••••••••••••••••••
🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••
No comments:
Post a Comment