ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭಗಳು, ದಿನಾಚರಣೆಗಳು, ಹಾಗೂ ಜಯಂತಿಗಳು, ಉತ್ಸವಗಳು – ಮಹೋತ್ಸವಗಳು ಆಳಿ ಆಳಿದರೂ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ ಅಥವಾ ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ ಅಥವಾ ನಡೆದುಹೋದ ಘಟನೆಗಳ ಗತ ವೈಭವದ ಪುನಃ ಸ್ಮರಣೆಗಳಾಗಿರುತ್ತವೆ. ಇಂತಹವುಗಳಲ್ಲಿ ಭಾರತೀಯರು ಆಚರಿಸುವ ಶಿವರಾತ್ರಿ ಯುಗಾದಿ, ಮಹಾನವಮಿ, ದೀಪಾವಳಿ ಮುಂತಾದ ಪ್ರತಿಯೊಂದು ಪ್ರತಿಯೊಂದು ಹಬ್ಬ ಹರಿ-ದಿನಗಳೂ ತಮ್ಮದೇ ಆದ ಶಿಷ್ಟ ನ್ನೆಲೆಯನ್ನು ಒಳಗೊಂಡಿರುವ ಪ್ರಾಯಲೋಪವಾಗಿರುವ ಪ್ರಾಚೀನ ಘಟನೆಯ ಪ್ರತೀಕಗಳಾಗಿವೆ.
ಪ್ರಸ್ತುತ ಸಮಯದಲ್ಲಿ ಶಿವರಾತ್ರಿ ಶಿವರಾತ್ರಿಯ ಬಗ್ಗೆ ಸಂಕ್ಷಿಪ್ತ ಸತ್ಯ ಪರಿಚಯ ವಿಶ್ವದ ಪ್ರತಿಯೊಬ್ಬ ಮಾನವನಿಗೂ ಅದರಲ್ಲಿಯೂ ಭಾರತೀಯನಿಗೆ ಅತ್ಯವಶ್ಯಕವೆಂದರೆ. ಅತಿಶಯೋಕ್ತಿಯಲ್ಲ.
ಶಿವರಾತ್ರಿಯಂದೇ ಶೇಷ ಭಕ್ತಿ ಏಕೆ? ಭಾರತೀಯರು ತಾವು ಆಚರಿಸುವ ಯಾವುದೇ ಹಬ್ಬ ಹರಿ-ದಿನಗಳಿಗಿಂತ ಶಿವರಾತ್ರಿಯನ್ನು ಬಹು ಮಹತ್ವವೆಂದು ನಂಬುತ್ತಾರೆ. ಶಿವರಾತ್ರಿಯ ಹಬ್ಬದ ದಿನದಂದು ಭಕ್ತರು ಪತಿತಪಾವನ ಪರಮಪಿತ, ಶ್ವಪಿತ, ಸರ್ವಜ್ಞ, ಸರ್ವ ಶಕ್ತಿವಂತ ಜ್ಯೋತಿರ್ಲಿಂಗ ಸ್ವರೂಪನಾದ ಶಿವಪರಮಾತ್ಮನ ಪ್ರೀತ್ಯರ್ಥವಾಗಿ ಶಿವಲಿಂಗಕ್ಕೆ ಭಕ್ತಿಪೂರ್ವಕ ಕ್ಷೀರಾಭಿಷೇಕ, ಪಂಚಮೃತಾಭಿಷೇಕ, ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಶಿವಭಜನೆ, ಶಿವ ಪುರಾಣ, ಶಿವ ಕೋಟಿ, ಜಪ ಯಜ್ಞ, ಪಾರಾಯಣ, ಶಿವ ಕಥಾ ಶ್ರವಣಗಳನ್ನು ಬಹಳ ಭಕಿಯ್ತಿಂದ, ಉಪವಾಸದಿಂದ, ಜಾಗರಣೆಯಿಂದ ಮಾಡುತ್ತಾರೆ.
ಶಿವಮಂದಿರ ಇರುವಡೆಯಲ್ಲಿ ಉತ್ಸವ, ರಥೋತ್ಸವ, ತೇರು, ಜಾತ್ರೆಗಳೂ ನಡೆಯುತ್ತವೆ. ಶಿವರಾತ್ರಿಯಂದು ಹಲವಡೆಗಳಲ್ಲಿ ಲಕ್ಷ ದೀಪಾರಾಧನೆ, ಕೋಟಿ ದೀಪಾರಾಧನೆಗಳನ್ನು ಶಿವನ ಮಂದಿಗಳಲ್ಲಿ ಶಿವನ ಭಕ್ತರು ನಡೆಸುತ್ತಾರೆ. ಶಿವರಾತ್ರಿಯ ದಿನದಂದು ಶಿವನ ಮಂದಿರಕ್ಕೆ ದರ್ಶನಾರ್ಥವಾಗಿ ಹೋಗದಿರುವಂತಹ ಭಾರತೀಯನೇ ಇಲ್ಲ. ಶಿವರಾತ್ರಿಯ ದಿನದಂದು ಶಿವಲಿಂಗ ಸ್ಥಾಪನೆಗೆ ಬಹಳ ಮಹತ್ವವನ್ನು ಕೊಡುತ್ತಾರೆ. ಶಿವರಾತ್ರಿಯಲ್ಲಿ ಅನೇಕ ಶುಭ ಕಾರ್ಯಗಳನ್ನು ಮಾಡುವುದಲ್ಲದೇ ರುದ್ರಯಜ್ಞ-ಯಾಗ, ದಾನ, ಪುಣ್ಯ, ಜಪ-ತಪಗಳಲ್ಲಿ, ಭಜನೆಗಳಲ್ಲಿ ಜನ ತಲ್ಲೀನರಾಗುತ್ತಾರೆ. ಸರ್ವೇಶ್ವರನೂ, ಸರ್ವರ ಕಲ್ಯಾಣಕಾರಿಯೂ ಆಗಿರುವ ಶಿವ ಪರಮಾತ್ಮನಿಗೆ ಪೂಜೆಯನ್ನು ಪ್ರತಿದಿನಗಳಲ್ಲಿ, ಪ್ರತಿದಿನದ ತ್ರಿಕಾಲಗಳಲ್ಲಿ ಮಾಡುತ್ತಾ ಬಂದಿದ್ದರೂ ಸಹ ಶಿವರಾತ್ರಿಯಂದೇ ಈ ಶೇಷ ಆಚರಣೆ ಏಕೆ?!!! ಎಂಬುದು ಪ್ರತಿಯೊಬ್ಬರಿಗೂ ಕುತೂಹಲಕಾರಿ ಷಯವಾಗಿಲ್ಲವಲ್ಲ! ಏಕೆ? ಈ ಸ್ಥಿತಿ.
ಶಿವರಾತ್ರಿಯಂದು ಯಾರಾದರೂ ಮರಣ ಹೊಂದಿದರೆ ಅವರನ್ನು ಶಿವನು ತಮ್ಮ ಶಿವ ಗಣಗಳಲ್ಲಿ ಸೇರಿಸಿಕೊಳ್ಳಲು ಕೈಲಾಸಕ್ಕೆ ಕರೆದೊಯ್ದನೆಂದು ಆಗ ಅವರು ಶಿವಾರ್ಪಿತರಾದರೆಂದು ತಿಳಿಸುವ ಶಿವಪುರಾಣಗಳನ್ನು ಭಾರತೀಯರು ನಂಬಿದ್ದಾರಲ್ಲವೇ?
ವಿಶ್ವೇಶ್ವರನಾದ ಶಿವಪರಮಾತ್ಮನು ಶಿವರಾತ್ರಿಯಂದು ಬಂದು ಭಕ್ತರ ಭಕ್ತಿಪೂರ್ವಕ ಸೇವೆಯನ್ನು ಮೆಚ್ಚಿ, ಭಕ್ತರನ್ನು ರೋಗರುಜಿನ ಕೇಡು, ದುಃಖ, ಭಯ, ದಾರಿದ್ರ್ಯ, ಭೂತ-ಪ್ರೇತಗಳ ಕಾಟ, ಅಪಮೃತ್ಯು ಇತ್ಯಾದಿ ಅಶಾಂತಿಯ ಅಲೆದಾಟಗಳಿಂದ ಹಾಗೂ ಭಯಾನಕ ರಾಕ್ಷಸೀ ಗುಣಗಳಿಂದ ಕಾಮ, ಕ್ರೋದ, ಲೋಭ, ಮೋಹ, ಅಹಂಕಾರಗಳಿಂದ ಮಾಯೆಯ ಬಲೆುಂದ ಬಿಡಿಸಿ ತಮಗೆ ಅಯಸ್ಸು, ಆರೋಗ್ಯ, ಐಶ್ವರ್ಯ, ಸುಖ-ಶಾಂತಿಯಾದಿಯಾಗಿ ಮುಕ್ತಿ ಜೀವನ್ಮುಕ್ತಿಗಳನ್ನು ಸದಾಕಾಲದಗಳವರೆಗೆ ಸದಾಶಿವನು ದಯಾಪಾಲಿಸುತ್ತಾನೆಂಬ ಆರ್ಯರ ಅನುಭವ ಸುಳ್ಳೇ? ಸಹಸ್ರಾರು ವರ್ಷಗಳಿಂದ ದಿನನಿತ್ಯ ತ್ರಿಕಾಲಪೂಜೆಗಳನ್ನು ಮಾಡುತ್ತಾ, ಶಿವತಂದೆಗೆ ಪತಿತಪಾವನನೇ ಬಾ ಪಾಪದ ಪ್ರಪಂಚದಿಂದ ಬಿಡುಗಡೆ ಮಾಡಿ ನಿಮ್ಮ ಬಳಿಗೆ ನಮ್ಮನ್ನು ಕರೆದುಕೊಂಡು ಹೋಗೆಂದು ನಿಮಂತ್ರಣ ಕೊಟ್ಟಿದ್ದಕ್ಕಾಗಿ, ಶಿವರಾತ್ರಿಯಂದು ಶಿವನು ಬಂದು ಬೇಡಿ-ಬೇಡಿದವರಿಗೆ ಬೇಡಿದ್ದನ್ನೆಲ್ಲಾ ನೀಡುತ್ತಾನೆಂದು ಭಕ್ತರು ನಿಶುcಸಿಕೊಂಡು ಶಿವರಾತ್ರಿಯಂದು ಶೇಷ ಭಕ್ತಿ ಮಾಡುತ್ತಿರುವಲ್ಲಿ ಆಶ್ವರ್ಯ ವೇನಿದೆ!! ಆದರೆ ಬೇರಾವ ಸಮಯಗಳಿಗಿಂತಲೂ ಶಿವರಾತ್ರಿಯಂದೇ ಶಿವನು ಬರುವುದಾದರೆ ಅಂತಹ ಶಿವರಾತ್ರಿ ಹಿಂದೆ ಎಂದೋ ನಡೆದಿತ್ತು. ಈಗ ಅಂತಹ ಶಿವರಾತ್ರಿ ಪುನಃ ನಡೆಯುತ್ತಿದೆಯೇ? ಶಿವನಿಗೂ, ರಾತ್ರಿಗೂ ಇರುವ ಸಂಬಂಧವೇನು? ಶಿವನು ಬರುವ ಅಂತಹ ರಾತ್ರಿಯನ್ನು ನಾವು ನಿರ್ಧರಿಸುವುದು ಹೇಗೆ? ಶಿವನು ಬರುವ ಅಂತಹ ರಾತ್ರಿ ನಮಗೆ ತಿಳಿದರೂ ಶಿವನ ದರ್ಶನ ನಮಗೆ ಆಗುತ್ತದೆಯೇ? ಶಿವರಾತ್ರಿಯಲ್ಲಿ ಬರುವ ಶಿವ ಪರಮಾತ್ಮನನ್ನು ದರ್ಶನ ಮಾಡಿ ಈಶ್ವರೀಯ ಜನ್ಮ ಸಿದ್ದ ಅಧಿಕಾರವನ್ನು ಪುನಃ ಪಡೆಯಿರಿ.
ಪ್ರತಿದಿನದ 24 ಘಂಟೆಗಳಲ್ಲಿ 12 ಘಂಟೆಗಳು ರಾತ್ರಿ ಇರುತ್ತದೆ. ಸೂರ್ಯ ಇಲ್ಲದ ಸಮಯಕ್ಕೆ ರಾತ್ರಿ ಎನ್ನುತ್ತಾರೆ. ಅಂದಕಾರದ ಸಮಯವೇ ರಾತ್ರಿ. ರಾತ್ರಿಯಲ್ಲಿ ಎತ್ತೆತ್ತಲೂ ಕತ್ತಲು ಕದಿರುತ್ತದೆ. ಬೆಳಕು ತೊಲಗಿರುತ್ತದೆ. ಇದೇ ರಾತ್ರಿ ಆದರೆ ಶಿವರಾತ್ರಿ ಪೃಥ್ವಿಯು ಸೂರ್ಯನ ಸುತ್ತಲೂ ಸುತ್ತುವಾಗ 24 ಘಂಟೆಗಳಲ್ಲಿ ಪ್ರಕಟವಾಗುವ ರಾತ್ರಿಯ ರಾತ್ರಿಯಂತೆ ಅಲ್ಲ ಹಾಗೇನಾದರೂ ಪ್ರತಿದಿನ ಸೂರ್ಯಾಸ್ತ ಸಮೀಪಿಸಿದಾಗ ಬರುವ ರಾತ್ರಿ ಶಿವರಾತ್ರಿ ಆಗುತ್ತಿದ್ದರೆ ದಿನ ಪ್ರತಿದಿನ ಎಲ್ಲಾ ರಾತ್ರಿಗಳು ಶಿವರಾತ್ರಿಗಳಾಗುತ್ತಿದ್ದವು. ಶಿವರಾತ್ರಿಯ ರಾತ್ರಿಯೇ ಬೇರೆ ಸೂರ್ಯಾಸ್ತವಾದ ನಂತರದ ಅಂಧಕಾರದ ರಾತ್ರಿ ಇದಾಗಿರದೇ, ಆಧ್ಯಾತ್ಮಿಕ ದೃಷ್ಟಿಕೋನದಿಂದಲೂ ನೋಡಿದಾಗ ಸೂರ್ಯನ ಬೆಳಕಿರುವಾಗಲೂ ಅಜ್ಞಾನವೆಂಬ ಕತ್ತಲು ಜನರಲ್ಲಿ ಕದಿರುತ್ತದೆ. ಅಜ್ಞಾನ – ಅಂಧಕಾರ ಆವರಿಸಿರುವ ರಾತ್ರಿ ಇದಾಗಿರುತ್ತದೆ. ಎಲ್ಲಾ ಮಾನವರು ಯಾವಾಗ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ ಅತ್ಯಾಚಾರ, ಅನಾಚಾರ, ಬ್ರಷ್ಠಾಚಾರದಲ್ಲಿ ಮುಳುಗಿ ಧರ್ಮ-ಭ್ರಷ್ಟ, ಕರ್ಮ-ಭ್ರಷ್ಟರಾಗಿ ಅಜಾnನವೆಂಬ ಅಂಧಕಾರದಲ್ಲಿ ತೊಳಲುವರೋ; ಕಣ್ಣದ್ದೂ ಕಣ್ಣು ಕಾಣದ ಕುರುಡರಂತೆ ವರ್ತಿಸುವರೋ, ಅಂತಹ ಅಜ್ಞಾನದ ರಾತ್ರಿಯೇ ಕರಾಳರಾತ್ರಿ. ಎಲ್ಲಿ ಕಾಮ, ಕ್ರೋದ, ಲೋಭ, ಮೋಹ, ಅಹಂಕಾರ ತುಂಬಿ ತುಳುಕುತ್ತಿವೆಯೋ; ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಸರ್ವವ್ಯಾಪಿ ಆಗಿವೆಯೋ. ಜಾತೀಯತೆ, ಪ್ರಾಂತೀಯಂತೆ, ಭಾಷಾಗೊಂದಲ, ಮೂಡನಂಬಿಕೆ, ಅಂಧ ವಿಶ್ವಾಸಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ತಲ್ಲಣಿಸುತ್ತ ದಾರಿಗಾಣದೆ ತಡಕಾಗುತ್ತಾರೋ ಅದೇ ಅಜಾnನಂದಾಕಾರದ ರಾತ್ರಿ ಶಿವರಾತ್ರಿ ಆಗಿದೆ. ಇದೇ ಗೀತೆಯಲ್ಲಿ ವರ್ಣಿಸಿರುವ ದರ್ಮಗ್ಲಾನಿ(ನಿಂದನೆ)ಯ ಸಮಯ ಇದೇ ಆಗಿದೆ.
ಈ ಎಲ್ಲಾ ಸಂಕಷ್ಟಗಳಿಂದ ಪಾರುಮಾಡು ತಂದೆ ಎಂದು ಜನಸಾಮಾನ್ಯರು, ಸಾಧು, ಸಜ್ಜನರು, ಭಗವಂತನಿಗೆ ಮೊರೆ ಇಡುವರೋ ಇದೇ ಘೋರರಾತ್ರಿ ಅದೇ ಶಿವರಾತ್ರಿ. ಮಹಾಶಿವರಾತ್ರಿ ಅಜಾnನದ ಅಂಧಕಾರವನ್ನು ತೊಲಗಿಸಿ, ವಿಶ್ವಕ್ಕೆ ಸತ್ಯ ಜಾnನಪ್ರಕಾಶವನ್ನು ದಯಪಾಲಿಸಲು ಜ್ಞಾನಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ. ಏಕೆಂದರೆ ಜ್ಞಾನಸಾಗರನೂ ಜ್ಞಾನ ಪ್ರಕಾಶದಿಂದ ತೊಲಗಿಸಬಲ್ಲವನಾಗಿದ್ದಾನೆ, ಅಜಾnನಾಂಧಕಾರದ ಮಹಾರಾತ್ರಿಗೂ ಮತ್ತು ಜ್ಞಾನಸೂರ್ಯನಾದ ಶಿವಪರಮಾತ್ಮನ ಆಗಮನಕ್ಕೂ ಸಂಬಂಧವನ್ನು ಸೂಚಿಸುವ ಶಬ್ದವೇ ಮಹಾಶಿವರಾತ್ರಿ.
ಅಜ್ಞಾನದ ಅಂದಕಾರವನ್ನು ತೊಲಗಿಸಿ ಸತ್ಯ ಜ್ಞಾನಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ ಆಗಿರುತ್ತದೆ. ವಿಷ್ಣು ರಾತ್ರಿ, ರಾಮನರಾತ್ರಿ, ಕೃಷ್ಣನರಾತ್ರಿ, ಎಂದು ಯಾರು ಕರೆಯುವುದಿಲ್ಲ. ಆದರೆ ಶಿವರಾತ್ರಿ ಎಂದೇ ಕರೆಯಲಾಗುತ್ತದೆ. ಏಕೆಂದರೆ ಜಾnನಸಾಗರನೂ ಸರ್ವಜ್ಞನೂ ಆಗಿರುವ ಶಿವಪರಮಾತ್ಮನೊಬ್ಬನೇ ಅಜಾnನ ಅಂಧಕಾರದ ರಾತ್ರಿಯನ್ನು ತನ್ನ ಜಾnನಪ್ರಕಾಶದಿಮದ ತೊಲಗಿಸಬಲ್ಲನನಾಗಿದ್ದಾನೆ. ಅಜ್ಞಾನಾಂಧಕಾರದ ಮಹಾರಾತ್ರಿಗೂ ಮತ್ತು ಜ್ಞಾನಸೂರ್ಯನಾದ ಪರಮಾತ್ಮನ ಆಗಮನಕ್ಕೂ ಸಂಬಂಧ ಸೂಚಿಸುಚ ಶಬ್ದವೇ ‘ಮಹಾಶಿವರಾತ್ರಿ’ ವಿಶ್ವಕಲ್ಯಾಣಾರ್ಥವಾಗಿ ಶಿವಪರಮಾತ್ಮನು ಪ್ರತಿ 5000 ವರ್ಷಗಳ ಸೃಷ್ಟಿ ಚಕ್ರದ ಅಂತಿಮ ಸಮಯದಲ್ಲಿನ ಶಿವರಾತ್ರಿಯ ಜ್ಞಾಪಕಾರ್ಥವಾಗಿ ಅರ್ಥಾತ್ ಪ್ರತಿ ಕಲಿಯುಗದ ಅಜ್ಞಾನ ಅಂದಕಾರದ ಅಂತಿಮ ಸಮಯದಲ್ಲಿ ಅವತರಣೆಯ ಜ್ಞಾಪಕಾರ್ಥವಾಗಿ ಭಕ್ತರು ದ್ವಾಪರಯುಗದಿಂದ (2500) ವರ್ಷಗಳಿಂದ ಭಾರತೀಯ ವರ್ಷದ ಕಡೆ ತಿಂಗಳಾದ ಪಾಲ್ಗುಣ ಮಾಸದಲ್ಲಿನ ಕೃಷ್ಣ ಪಕ್ಷದ 14ನೇ ರಾತ್ರಿಯ ಪೂರ್ಣಾಂದಕಾರದ ವೇಳೆಯನ್ನು ರಾತ್ರಿಯ ಸಂಕೇತವಾಗಿಟ್ಟುಕೊಂಡು ಪ್ರತಿವರ್ಷ ಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ.
ವಿಶ್ವದಲ್ಲಿ ಅಜ್ಞಾನದ ಕಾಳರಾತ್ರಿಯ, ಕಲಿಯುಗದ ಅಂತಿಮ ಪಾದವಾದ ಇಲ್ಲಿಯವರೆಗೆ ಅವತರಿಸಿರುವ ಅನೇಕ ಮಾನವರಾಗಲಿ, ಮಹಾತ್ಮರಾಗಲಿ ಸಂಪೂರ್ಣ ವಿಶ್ವ ಶಾಂತಿಯನ್ನು ದೊರಕಿಸಲಾಗಿಲ್ಲವೆಂಬುದು ಬಹಿರಂಗ ರಹಸ್ಯ ಅನೇಕ ಸಾಧು-ಸಂತ ಮಹಾತ್ಮರೂ, ಧರ್ಮಗುರುಗಳು ಈ ಸೃಷ್ಟಿಯಲ್ಲಿ ಬಂದು ಮರಳಿದರು, ಅಂದಿನಿಂದ ಇಂದಿನವರೆಗೆ ವಿಶ್ವ ಶಾಂತಿಗಾಗಿ ವಿಶ್ವ ಸಂಸ್ಥೆ ಸ್ಥಾಪನೆಯಾುತು. ಆದರೆ ವಿಶ್ವವು ಶಾಂತಿಗೆ ಬದಲಾಗಿ ಅಶಾಂತಿಯ ಕಡಲನ್ನು ತಲುಪಿತು. ಸಾಧು, ಸಂತ, ಮಹಾತ್ಮರು, ಜಾnನಿಗಳು ರಾಜಕಾರಣಿಗಳು, ಜ್ಯೋತಿಗಳು, ಜನಸಾಮಾನ್ಯರು, ಭಕ್ತರು, ಸುಖ-ಶಾಂತಿಯ ಮಾರ್ಗ ಕಾಣದಾದರು, ವಿಶ್ವದಲ್ಲಿ ಶಾಂತಿಯನ್ನು ಶ್ವಪಿತ, ಪರಮಪಿತ ಪರಮಾತ್ಮ ಸ್ಥಾಪಿಸಬಲ್ಲವನಲ್ಲದೇ ಬೇರೆ ಶರೀರಧಾರಿಗಳಿಂದ ಸಾಧ್ಯವಿಲ್ಲ ಎಂಬುದು ಬರಂಗ ಸತ್ಯ, ವಿಶ್ವಕಲ್ಯಾಣಾರ್ಥವಾಗಿ, ಪರಮಾತ್ಮನೇ ಆಗುಸಬೇಕಾಗುತ್ತದೆ ಎಂಬುದನ್ನು ಸರ್ವ ಧರ್ಮದವರು ಒಪ್ಪುತ್ತಾರೆ ಧರ್ಮ ಗ್ರಂಥಗಳು ಒಪ್ಪುತ್ತವೆ.
ಶಿವ ಪರಮಾತ್ಮ ತಪಸ್ವೀ ಶಂಕರ
ಶಿವನು ಅಶರೀರ, ಆಕಾಯ ———— ಶಂಕರ ಸೂಕ್ಷ್ಮ ದೇಹದಾರಿ
ಅವ್ಯಕ್ತ ಜ್ಯೋತಿಸ್ವರೂಪನು.
ತ್ರಿಮೂರ್ತಿಗಳಾದ ಬ್ರಹ್ಮಾ —————ಶಂಕರ ತ್ರಿಮೂರ್ತಿಗಳಲ್ಲಿ
ವಿಷ್ಣು, ಶಂಕರರ ರಚೈತ.
ಯೋಗೇಶ್ವರ —————– ಯೋಗಿ
ಕಲ್ಯಾಣ ಕಾರಿ —————– ನಾಶಕಾರಿ
ಪರಮಧಾಮ ನಿವಾಸಿ ————– ಸೂಕ್ಷ್ಮಲೋಕ ವಾಸಿ
ಎಲ್ಲಾ ಪ್ರಾಚೀನ ಗುಡಿಗಳಲ್ಲಿ ———— ಇತ್ತೀಚಿನ ಗುಡಿಗಳಲ್ಲಿ
ಶಿವಲಿಂಗವನ್ನಿಡಲಾಗಿದೆ ————- ಮಾತ್ರ ಶಂಕರನ ಚಿತ್ರ ಸ್ಥಾಪಿಸಲಾಗಿದೆ.
ಪರಮಪಿತ ಶಿವಪರಮಾತ್ಮನ ಯತಾರ್ಥ ಮಹಿಮೆಗಳು :-
1.ವಿಶ್ವನಾಥ :- ವಿಶ್ವದ ಸ್ಥಿತಿ-ಲಯಗಳಿಗೆ ಅಧಿಪತಿಯಾದ ಪರಮಾತ್ಮನಿಗೆ ವಿಶ್ವನಾಥ, ವಿಶ್ವೇಶ್ವರ ಎಂಬ ಹೆಸರಿದೆ. ಕಾಶಿಯಲ್ಲಿ ಮೊಟ್ಟ ಮೊದಲು ಆವತರಿಸಿದ್ದರಿಂದ ಕಾಶಿ ವಿಶ್ವನಾಥ ಎನ್ನುವ ಮಹಿಮೆ ಇದೆ.
2. ಅಮರನಾಥ : ಪರಮಾತ್ಮನು ಶಾಶ್ವತನು, ಅವನು ಅರ್ಥಾತ್ ಅಮರನು ಆಗಿದ್ದಾನೆ. ನಂಬಿದ ಮಾನವರಿಗೆ ಅಮರ ಪದಯ ನೀಡುವನಾಗಿದ್ದಾನೆ. ಆದ್ದರಿಂದ ಪರಮಾತ್ಮನಿಗೆ ಅಮರೇಶ್ವರ ಅಮರನಾಥ ಎಂಬ ಮಮೆ ಇದೆ.
3. ಶಾಂತಿಸಾಗರ : ಸುಖಸಾಗರ,. ಪ್ರೇಮಸಾಗರ, ದಯಾಸಾಗರ ಹಾಗೂ ಕಲ್ಯಾಣಕಾರಿ ಗುಣಗಳಿಗೆ ಶಿವಪರಮಾತ್ಮನು ಸಾಗರನಾಗಿದ್ದಾನೆ. ಬೇಡಿ ಬೇಡದ ಮಾನವನಿಗೆ ಶಾಂತಿ, ಸುಖ, ಪ್ರೇಮ, ದಯೆಗಳನ್ನು ನೀಡುತ್ತಾನೆ.
4. ಪತಿತ ಪಾವನ : ಪತಿತವಾದ ಸೃಷ್ಟಿಯನ್ನು (ಮಾನವನ್ನು) ತಾನು ಪಾವನ ಮಾಡುವುದರಿಂದ ಪತಿತ ಪಾವನ ಎಂದು ಮಹಿಮೆ ಪರಮಾತ್ಮನಿಗೆ ಮಹಿಮೆ ಇದೆ.
5. ಜ್ಞಾನೇಶ್ವರ : ಪರಮಾತ್ಮನ ಜ್ಞಾನನೇತ್ರವೆಂಬ ತ್ರಿನೇತ್ರವನ್ನು ನೀಡುವ ತ್ರಿಕಾಲದರ್ಶಿ ಆಗಿದ್ದಾನೆ. ಪರಮಾತ್ಮನು ಶ್ವದ ಆದಿ, ಮದ್ಯ, ಅಂತ್ಯಗಳನ್ನು ಸೃಷ್ಟಿ – ಸ್ಥಿತಿ – ಲಯಗಳನ್ನು ತಿಳಿದಿದ್ದಾನೆ. ವಿಶ್ವದ ಸಕಲ ಜೀವಾತ್ಮರ ಹಿಂದಿನ, ಇಂದಿನ ಹಾಗೂ ಮುಂದಿನ ಆಗ ಹೋಗುಗಳನ್ನು ಅರಿತಿದ್ದಾನೆ. ಆದ್ದರಿಂದ ಪರಮಾತ್ಮನಿಗೆ ಜ್ಞಾನೇಶ್ವರನೆಂಬ ಮಹಿಮೆ ಇದೆ. ಶರೀರಧಾರಿ ಮನುಷ್ಯಾತ್ಮನು ತನ್ನ ಮಕ್ಕಳಿಗೆ ತಂದೆ ಆದಾಗ ತನ್ನಲ್ಲಿರುವ ಭೂಮಿು, ಕನಕ, ವಸ್ತು, ವಾಹನ, ಅನ್ನ, ವಸ್ತ್ರ, ವಸತಿಗಳನ್ನು ಕೊಡುತ್ತಾನೆ. ಇವೆಲ್ಲವೂ ನಶ್ವರವಾದ ತಂದೆುಂದ ಅಲ್ಪಕಾಲಕ್ಕಾಗಿ ಸಿಗುತ್ತವೆ. ಅಮರನಾದ ಅಮರನಾಥನಿಂದ ಶಾಶ್ವತವಾದ ಆಸ್ತಿಯನ್ನು ನೀಡಲಾರರು. ಏಕೆಂದರೆ ಋಶಿಯಿುಂದ ರಾಜನವರೆಗೆ ಎಲ್ಲಾ ಮಾನವರು ಪರಮಾತ್ಮನಿಂದ ಬೇಡುವವರಾಗಿದ್ದಾರೆ. ಭೂದಾನ, ಹಿರಣ್ಯದಾನ, ಗೋದಾನ, ಕನ್ಯಾದಾನ, ಅನ್ನದಾನ ಮುಂತಾದ ಎಲ್ಲಾ ದಾನಗಳಲ್ಲಿ ಜ್ಞಾನದಾನವೇ ಮಾನವನು ಪಶು ಸಮಾನ ಜ್ಞಾನವೇ ವಿಶ್ವದಲ್ಲಿನ ಎಲ್ಲ ಐಶ್ವರ್ಯಗಳಲ್ಲಿ ಪರಮ ಶ್ರೇಷ್ಟವಾದದು. ಜ್ಞಾನಿಯೇ ಸಕಲರಿಗೂ ಪ್ರಿಯನು, ಆದ್ದರಿಂದ ನಹಿ ಜ್ಞಾನೇನ ಸದೃಶ್ಯಂ ಜ್ಞಾನಕ್ಕೆ ಸರಿಸಮಾನವಾದುದು ಯಾವುದೂ ಇಲ್ಲ ಎಂದು ಭಗವದ್ಗೀತೆ ಸಾರುತ್ತಿದೆ. ವಿಶ್ವದ ಎಲ್ಲಾ ಮಾನವರಿಗಿಂತ, ಭಕ್ತಿಗಿಂತ, ಯೋಗಿಗಳಿಗಿಂತ ಜ್ಞಾನಿಯೇ ಭಗವಂತನಿಗೆ ಅತೀಪ್ರಿಯನೆಂದು ಗೀತಾ ಜಾnನದಾತನಾದ ಪರಮಾತ್ಮ ಶಿವ ತಿಳಿಸುತ್ತಾನೆ. ಜ್ಞಾನಸಾಗರವಾದ ಭಗವಂತನಿಂದ ಪ್ರಾಪ್ತಿಮಾಡಿಕೊಳ್ಳಬಹುದಾದ ಈಶ್ವರೀಯ ಜನ್ಮಸಿದ್ದ ಅಧಿಕಾರ ಜ್ಞಾನವೇ ಪರಮ ಶ್ರೇಷ್ಟ ಜ್ಞಾನಗಳಲ್ಲಿ ಹಲವು ವಿಜ್ಞಾನ, ಸಮಾಜ ಜ್ಞಾನ, ಅರ್ಥಜ್ಞಾನ, ಬೌತ ಜ್ಞಾನ, ಒಂದೊಂದು ಜ್ಞಾನವು ಒಂದೊಂದು ಕಡೆ ಅರಿವನ್ನು ಮೂಡಿಸುತ್ತದೆ. ಪರಮಾತ್ಮ ತಿಳಿಸುವ ಜಾnನ ರುದ್ರಜ್ಞಾನ ಆಗಿದೆ. ಸಮಸ್ತ ಜ್ಞಾನವನ್ನು ಪರಮಾತ್ಮ ತಿಳಿಸುತ್ತಾರೆ. ಜಗತ್ತಿನ ಈ ರೀತಿಯಾಗಿ ಅಜ್ಞಾನಿಗಳಾದಾಗ ಜಗನ್ನಾಥನು ಈ ಜ್ಞಾನವನ್ನು ಜಗತ್ತಿನ ಜನತೆಗೆ ನೀಡುವ ಸಮಯ ಇದೇ ಆಗಿದೆ. ಆ ಕಾರ್ಯಕ್ಕಾಗಿ ಪ್ರಜಾಪಿತ ಬ್ರಹ್ಮಾ ರವರ ಶರೀರದಲ್ಲಿ ಶಿವಪರಮಾತ್ಮನು ವಿಶ್ವ ಕಲ್ಯಾಣಾರ್ಥವಾಗಿ ಸರ್ವ ಶ್ರೇಷ್ಟವಾದ ತ್ರಿಕಾಲ ಜ್ಞಾನವನ್ನು ಶಿವಭಕ್ತರಿಗೆ ಅನುಗ್ರಸಿದ್ದನೆಂದು ಶಿವ ಪುರಾಣ ಸಾರುತ್ತಿದೆ. ಈಶ್ವರನಿಂದ ಭೋದಿಸಲ್ಪಟ್ಟ ಈಶ್ವರೀಯ ಜನ್ಮಸಿದ್ದ ಅಧಿಕಾರದಲ್ಲಿ ಶ್ರೇಷ್ಟವಾದ ತ್ರಿಕಾಲಜ್ಞಾನವನ್ನು ಜನತೆ ಹೊಂದಿದಾಗ, ಅಜ್ಞಾನ ತೊಲಗಿ ಮಹಾಶಿವರಾತ್ರಿ ಆಗುತ್ತದೆ. ಅದರ ಕುರುಹನ್ನೇ ಇಂದಿಗೂ ಆಚರಿಸಲ್ಪಡುತ್ತಿರುವ ಶಿವರಾತ್ರಿ
6. ಶಿವರಾತ್ರಿ ಆಚರಿಸಲಿಕ್ಕಾಗಿ ಪರಮಾತ್ಮನು ಈಶ್ವರೀಯ ಜ್ಞಾನವನ್ನು ಜನತೆಗೆ ಭೋದಿಸಬೇಕು. ಯಾರೇ ಆಗಲಿ ಏನನ್ನೇ ಆಗಲೀ ಭೋದಿಸಲು ಶರೀರಲ್ಲದೆ ಜನತೆಗೆ ತಿಳಿಸಲು ಆಗುವುದಿಲ್ಲ. ಕೇಳುವವರಿಗೂ ಶರೀರಬೇಕು ಹೇಳುವವರಿಗೂ ಶರೀರ ಬೇಕೇ ಬೇಕು. ಈಶ್ವರನು ಜನನಮರಣ ರಹಿತನು. ಅಯೋನಿಜನು, ಅಶರೀರ ಆಗಿರುವ ಕಾರಣ ತನ್ನದೇ ಶರೀರವನ್ನು ಹೊಂದಿಲ್ಲದಿರುವ ಕಾರಣ, ಬೇರೊಬ್ಬರ ಶರೀರವನ್ನು ಎರವಲು ಪಡೆಯಬೇಕಾಗುತ್ತದೆ. ಪಡೆಯಬೇಕಾದರೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಅನ್ಯತಾ ಮಾರ್ಗವಿಲ್ಲಾ. ಶಿವಪರಮಾತ್ಮನು 1936ರಲ್ಲಿ ದಾದಾ ಲೇಖರಾಜ್ ಎಂಬ ಮಾನವನ ಶರೀರವನ್ನು ಆಧಾರ ಪಡೆದನು. ಎಂದಿನ ದಿನ ಶರೀರವನ್ನು ಆಧಾರವಾಗಿ ಪಡೆದನೋ ಅಂದಿನ ದಿನ ಪ್ರಜಾಪಿತ ಬ್ರಹ್ಮಾ ಎಂದು ದಿವ್ಯ ನಾಮಕರಣ ಮಾಡದನು. ಪರಕಾಯ ಪ್ರವೇಶ ಮಾಡಿ ಪ್ರಜಾಪಿತ ಬ್ರಹ್ಮನ ಮುಖಕಮಲದ ಮೂಲಕ ಜ್ಞಾನವನ್ನು ಮಾನವನಿಗೆ ದಾನ ಮಾಡಲು ಪರಮಾತ್ಮ ಶಿವನ ದಿವ್ಯ ಅವತರಣಮಾತು. ಅವತರಣ ಆದ ಮಾತ್ರಕ್ಕೆ ಪರಮಾತ್ಮನಿಗೆ ಪೂರ್ಣ ಶರೀರದ ಅವಶ್ಯಕತೆ ಇಲ್ಲ. ಜಾnನ ಭೋದನೆ ಮಾಡಲು ಕೇವಲ ಶರೀರದಲ್ಲಿನ ಶಿರವೇ ಪ್ರಧಾನ. ಆ ಶಿರಸ್ಸೇ ಶಿವನಿಗೆ ಆಭರಣ. ಆ ಶಿರಸ್ಸನ್ನು ಪರಮಾತ್ಮನು ಧರಿಸಿದನೋ ಅಂದೆ ಮಹಾಶಿವರಾತ್ರಿ. ಹಿಂದೆ ಒಮ್ಮೆ ಇದೇ ರೀತಿ ಕಾರ್ಯವನ್ನು ಮಾಡಿದ್ದರೆ ಗುರುತಾಗಿ ಇಂದಿಗೂ ಶಿವರಾತ್ರಿ. ಆಚರಣೆಯಲ್ಲಿದೆ. ಆ ಶಿರದ ನೆನಪಿನಾರ್ಥವಾಗಿ ಆ ಮಾನವನ ಮುಖಾಭರಣವನ್ನು ಶಿವಲಿಂಗಕ್ಕೆ ತೊಡಿಸುತ್ತಾರೆ.ಇದು ಶಿವಲಿಂಗಕ್ಕೆ ಮುಖವಾಡಡುವುದರ ಆದ್ಯಾತ್ಮಿಕ ರಹಸ್ಯ ಆಗಿದೆ.
7. ಬ್ರಹ್ಮನು ಮುಖಾಭರಣವನ್ನು ಸಾಮಾನ್ಯವಾಗಿ ಸದಾಕಾಲಕ್ಕೂ ಶಿವಲಿಂಗಕ್ಕೆ ಧರಿಸದೇ ಶಿವರಾತ್ರಿ ಇತ್ಯಾದಿ ಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸಿ ಪೂಜಿಸುತ್ತಾರೆ. ಈಗೀಗ ಸದಾ ಧರಿಸುವ ರೂಡಿಯೂ ಇದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಪರಮಾತ್ಮನು ಕೇವಲ ಸೃಷ್ಟಿಯ ಅಜ್ಞಾನ ರಾತ್ರಿಯಲ್ಲಿ ಮಾತ್ರ ಪ್ರಜಾಪಿತ ಬ್ರಹ್ಮನ ಮುಖವನ್ನು ಧರಿಸುತ್ತಾನೆ.
ಪರಮಾತ್ಮನು ವಿಶ್ವದ ತ್ರಿಕಾಲಜ್ಞಾನವನ್ನು ತಿಳಿದಿರುವುದರಿಂದ ಶಿವಲಿಂಗಕ್ಕೆ ಒಂದು ಶೇಷ ನೇತ್ರವನ್ನು ಧರಿಸುತ್ತಾರೆ. ಇದಕ್ಕೆ ತ್ರಿನೇತ್ರ ಎಂದು ಹೇಳಲಾಗುತ್ತದೆ. ತ್ರಿನೇತ್ರವೆಂದರೆ ಮೂರನೇ ಜ್ಞಾನನೇತ್ರವೆಂದರ್ಥವೇ ಹೊರತು ಮೂರು ನೇತ್ರಗಳೆಂದು ಅಲ್ಲ. ಶಿವನಿಗಲ್ಲದೇ ಈ ನೇತ್ರ ಬೇರೆ ಯಾರಿಗೂ ಇಲ್ಲ. ಪರಮಾತ್ಮನು ಮಾನವನ ಮುಖಕಮಲವನ್ನು ಧರಿಸಿದಾಗ, ತ್ರಿಕಾಲ ಜ್ಞಾನವನ್ನು ಈ ಮೂಲಕ ಜನತೆಗೆ ಕೊಟ್ಟ ಸತ್ಯವನ್ನು ಪ್ರತಿಪಾದಿಸುವ ಜಾnನದ ಸಂಕೇತ ಇದಾಗಿದೆ. ಶಿವನು ಮಾನವ ಮುಖದ ಮಸ್ತಕದಲ್ಲಿ ತನ್ನ ಶ್ರೇಷ್ಟ ಸ್ಥಾನವನ್ನು ಸ್ಥಾಪಿಸಿಕೊಂಡು ತ್ರಿಕಾಲ ಜಾnನವನ್ನು ಜನತೆ ಉಪದ್ದೇಶಿಸಿದ್ದರಿಂದ ಪರಮಾತ್ಮನಿಗೆ ಫಾಲಾಕ್ಷ, ಫಾಲನೇತ್ರ ಎಂದು ಹೇಳುತ್ತಾರೆ. ಫಾಲ ಎಂದರೆ ಹಣೆ ಅಕ್ಷ ಎಂದರೆ ನೇತ್ರ ಫಾಲಾಕ್ಷ ಎಂದರೆ ಹಣೆಯಲ್ಲಿ ಕಣ್ಣುಳ್ಳವನೆಂದು ಅರ್ಥ.
ಶಿವನು ಹಣೆ ಕಣ್ಣನ್ನು ತೆರೆದಾಗ ಶ್ವದಲ್ಲಿ ಪಾಪ ಭಸ್ಮ ಆಗುತ್ತದೆ ಎಂಬ ಗಾಯನದ ಅರ್ಥವೇನೆಂದರೆ ಪರಮಾತ್ಮನು ಜಾnನನೇತ್ರವನ್ನು ತೆರೆದಾಗ ಅರ್ಥಾತ್ ಜಾnನೋಪದೇಶ ಮಾಡಿದಾಗ ಪಾಪಗಳನ್ನು ರಾಜಯೋಗದಿಂದ ಯೋಗಾಗ್ನಿಯಿಂದ ಭಸ್ಮ ಮಾಡಿಕೊಳ್ಳುವುದಾಗಿದೆ.
ಶಿವಪರಮಾತ್ಮನು ಜ್ಞಾನ ಸಾಗರನಾಗಿದ್ದಾನೆ. ಜ್ಞಾನಗಂಗೆಯು ಅವನ ಬಳಿ ಇದೆ. ಅವನಿಗೆ ಜ್ಞಾನಗಂಗಾಧರನೆಂಬ ಮಮೆ ಇದೆ. ಶಂಕರನು ತ್ರಿಮೂರ್ತಿಗಳಲ್ಲಿ ಒಬ್ಬರು. ಮತ್ತು ಶಿವನ ರಚನೆ ಆಗಿದ್ದರಿಂದ ಶಂಕರನು ಜ್ಞಾನಗಂಗಾಧರನಲ್ಲ ಶಿವಪರಮಾತ್ಮನು ಪ್ರಜಾಪಿತ ಬ್ರಹ್ಮರವರ ಮುಖಧರಿಸಿ ಜ್ಞಾನಗಂಗೆಯ ಮಮೆಯನ್ನು ಜನತೆಗೆ ಉಪದೇಶಿಸಿದ ತ್ರಿಕಾಲಜ್ಞಾನ ರೂಪಿಸುವ ಸಾಂಕೇತಿಕವಾಗಿ ಧಾರಾಪಾತ್ರೆಯನ್ನು ಲಿಂಗದ ಮೇಲೆ ಇಟ್ಟು ಧಾರೆ (ಹನಿಹನಿ) ಯಾಗಿ ಬೀಳುವಂತೆ ಏರ್ಪಡಿಸಲಾಗಿದೆ. ಧಾರಾಪಾತ್ರೆಯಲ್ಲಿನ ನೀರು ಶಿವಲಿಂಗದ ಮೇಲೆ ಬಿದ್ದು ನಂತರ ಮುಂದಕ್ಕೆ ಹರಿದಾಗ ಶಿವತೀರ್ಥವೆಂದು ಶಿವ ಭಕ್ತರು ಸ್ವೀಕರಿಸುತ್ತಾರೆ. ಇದು ಪರಮಾತ್ಮನಿಂದ ತಾನೂ ಧರಿಸಿದ ಪ್ರಜಾಪಿತನಿಂದ ಬ್ರಹ್ಮನ ಮುಖಕಮಲದ ಮೂಲಕ ಬೋಧಿಸಲ್ಪಟ್ಟ ಜ್ಞಾನ ತೀರ್ಥವನ್ನು ಜನತೆ ಸ್ವೀಕರಿಸಿದ ಸಂಕೇತವಾಗಿದೆ.
ಧಾರಾಪಾತ್ರೆಯಲ್ಲಿ ಗಂಗೆ ಹೆಚ್ಚು ಕಡಿಮೆ ಇಲ್ಲದಂತೆ ಒಂದೊಂದೇ ಹನಿಹನಿಯಾಗಿ ಶಿವಲಿಂಗದ ಮೇಲೆ ಬೀಳುವಂತೆ ಧಾರಾಪಾತ್ರೆ ಗಂಗೆ ಹೆಚ್ಚು ಕಡಿಮೆ ಇಲ್ಲದಂತೆ ಒಂದೊಂದೇ ಹನಿಹನಿಯಾಗಿ ಶಿವಲಿಂಗದ ಮೇಲೆ ಬೀಳುವಂತೆ ಧಾರಾಪಾತ್ರೆ ಅಳವಡಿಸಲಾಗುತ್ತದೆ.
ತ್ರೆ„ಯಂಬಕೇಶ್ವರ :- ತ್ರಿ ಎಂದರೆ ತ್ರಿಮೂರ್ತಿಗಳು (ಬ್ರಹ್ಮಾ, ವಿಷ್ಣು, ಶಂಕರವನ್ನು) ಎಂದರೆ ಜನ್ಮ ಕೊಟ್ಟವರು, ಸೃಷ್ಟಿಕರ್ತ, ಜನನಿ ಅಥವಾ ತಾುಯಿ ಎಂತಲೂ ಈಶ್ವರ ಎಂದರೆ ಒಡೆಯ ಅಥವಾ ತಂದೆ ಎಂತಲೂ ಅರ್ಥಾತ್ ತ್ರಿಮೂರ್ತಿಗಳನ್ನು ರಚಿಸಿದವನಾದ್ದರಿಂದ ಶಿವ ಪರಮಾತ್ಮನನ್ನು ಮಹಾರಾಷ್ಟ್ರದ ಗೌತಮಿತಟದಲ್ಲಿ ತ್ರೆ„ಯಂಬಕೇಶ್ವರನೆಂಬ ಹೆಸರಿನಿಂದ ಪೂಜಿಸುತ್ತಾರೆ.
ಬಿಲ್ಪತ್ರೆ ಅರ್ಪಿಸುವುದರ ಅರ್ಥ :- ಪರಮಾತ್ಮ ತ್ರಿಮೂರ್ತಿಗಳ ರಚೈತನಾದ್ದರಿಂದ ಶಿವನಿಗೆ ತ್ರಿಧಳ ಬಿಲ್ಪ ಪತ್ರೆಯನ್ನು ಅರ್ಪಿಸುತ್ತಾರೆ.
ತ್ರಿಶೂಲದ ಅರ್ಥ : ತ್ರಿಲೋಕಿನಾಥ ಪರಮಾತ್ಮನು ಮೇಲೆ ಅರ್ಥಾತ್ ಪರಮಧಾಮದಲ್ಲಿ ಇದ್ದಾನೆ ಎಂದು ತ್ರಿಶೂಲ ತೋರಿಸುತ್ತಿದೆ. ಅದು ಹಿಂಸಾತ್ಮಕವಾದ ಆಯುಧವಲ್ಲ. ಆತ ಎಂದೂ ಹಿಂಸೆಯನ್ನು ಭೋದಿಸುವುದಿಲ್ಲ.
ಮಕರ ಸಂಕ್ರಮಣ…
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ ಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಜ್ಯೋತಿಷದ ತಳಹದಿ:
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ.
ಈ ಶಾಸ್ತ್ರದಂತೆ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು.
ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ.
ಖಗೋಳ ಶಾಸ್ತ್ರದ ಪ್ರಕಾರ ಒಂದು ವಿವರಣೆ:
ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ ೧೨ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.
ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. *ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ ೨೨ ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.
ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ ದಿನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.
ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಿಣಾಯನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summer solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ ೨೧ ಈ ದಿನ. ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ಧಕ್ಕೆ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ.
ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (axis) ಸುಮಾರು 22 1/2 degree ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು ‘8’ರ ಆಕೃತಿಯಲ್ಲಿ ಕಾಣುತ್ತವೆ.
ಈ ವಿನ್ಯಾಸವನ್ನು analemma ಎನ್ನುತ್ತಾರೆ. ‘8’ರ ಆಕೃತಿಯ ನೆತ್ತಿಯ ಬಿಂದು summer solstice ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು winter solstice, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದು ಹೋಗುವ ಬಿಂದು equinox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು.
ಕರ್ನಾಟಕ
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು ಬೆಲ್ಲ”. ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳುಹಂಚುವುದು” ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ]]ಕೊಬ್ಬರಿ]], ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ” ತಯಾರಿಸಲಾಗುತ್ತದೆ.
ಕರ್ನಾಟಕದ ರೈತರಿಗೆ ಸುಗ್ಗಿ (ಸುಗ್ಗಿ) ಅಥವಾ ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಯುವ ಹೆಣ್ಣುಮಕ್ಕಳು (ಮಕ್ಕಳು ಮತ್ತು ಹದಿಹರೆಯದವರು) ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ” ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್ ಸಹ ಕಬ್ಬಿನ ತುಂಡು ವಿವಿಧ ಆಕಾರಗಳನ್ನು ಸಕ್ಕರೆ ಅಚ್ಚುಗಳನ್ನು ಹೊಂದಿರುತ್ತದೆ.
ಕಬ್ಬು ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.
ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು “ಕಿಚ್ಚು ಹಾಯಿಸುವುದು” ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.
ತಮಿಳುನಾಡು
ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ – ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
ಭೋಗಿ: ಹೊಸ ಬಟ್ಟೆಗಳು
ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
ಮಾಟ್ಟು ಪೊಂಗಲ್: ಗೋಪೂಜೆ
ಕೆಲವು ಕಡೆಗಳಲ್ಲಿ “ಜಲ್ಲಿಕಟ್ಟು” ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
ಕಾಣುಮ್ ಪೊಂಗಲ್
ಕೇರಳದ ಶಬರಿಮಲೆ
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. “ಮಕರ ವಿಳಕ್ಕು”ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.
ಅಂತೂ ಇದು ವೈಜ್ಞಾನಿಕವಾಗಿ ಸಾಬೀತಾಗಿ ಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.
ಇತರ ಸ್ಥಳಗಳು ಸಂಪಾದಿಸಿ
ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು.
ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿ ಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಎಳ್ಳುಂಡೆಕೊಡುವಾಗ ತಪ್ಪದೆ, ” ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ” (ಅಂದರೆ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡಿ) ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ!
ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ “ಲೋಹರಿ,” ಎಂದು ಹೆಸರು
Deepawali special ದೀಪಾವಳಿ ವಿಶೇಷ.
ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ…
ದೀಪಾವಳಿ:
ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
ದೀಪಾವಳಿ ಅರ್ಥ ಏನು?
ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.
ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.
ನೀರು ತುಂಬುವ ಹಬ್ಬ :-
ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.
ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ
ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.
ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.
ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ, ಮುಂದಿನ ದೀಪಾವಳಿ ಆಚರಿಸೊಣವೇ? ಒಮ್ಮೆ ಚಿಂತಿಸಿ.
ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ;
ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಆಚರಿಸುವ ದಿನಗಳು
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. ೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.
ಪ್ರಾಮುಖ್ಯತೆ
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿ ಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
ಆಚರಣೆ
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿ ಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
ಸಂಬಂಧ ಬೆಸೆಯುವ ಬನ್ನಿ ಹಬ್ಬ.
ಸಂಬಂಧ ಬೆಸೆಯುವ ಬನ್ನಿ ಹಬ್ಬ
ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ.
ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ನಡೆದ ಪವಿತ್ರ ದಿನ, ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದು ಐತಿಹ್ಯಗಳು ಹೇಳುತ್ತವೆ. ಪಾಂಡವರು ಅಜ್ಞಾತವಾಸ ಹೋಗುವಾಗ ಕಾಡಿನಲ್ಲಿರುವ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಕಟ್ಟಿ, ಅಜ್ಞಾತವಾಸ ಮುಗಿಸಿದಾಗ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.
ವಿಜಯದಶಮಿಯಂದು ಬೆಳೆಸು ತುಂಬಿದ ಭೂಮಿ, ಕಾಡನ್ನು ಬಿಟ್ಟು ಊರನ್ನು ಸೇರುವುದೆಂದು ಕೃಷಿಕರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ವ್ಯಾಪಾರಿಗಳು ಆಯುಧಗಳನ್ನು ಪೂಜಿಸಿ, ಬನ್ನಿ ಸಸಿಯನ್ನು ನೆಟ್ಟು, ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳುತ್ತಾರೆ. ಪಾಂಡವರಿಗೆ ಸಂಬಂಧಿಸಿದ ಜನಪದ ಹಾಡು ವಿವರಿಸುವುದು ಹೀಗೆ “ಕಲ್ಲು ಕಡುಬು ಮಾಡಿ, ಮುಳ್ಳು ಸಾವಿಗೆ ಮಾಡಿ, ಬನ್ನಿಯ ಎಲಿಯಾಗೆ ಎಡೆಮಾಡಿ, ಪಾಂಡವರು, ಉಂಡು ಹೋಗ್ಯಾರೊ ವನವಾಸೊ” ಅಂದು ಮಕ್ಕಳು ತಾಯಂದಿರಿಗೆ ಬನ್ನಿ ಮುಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮುಡಿಸುವುದರ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.
ರಾಮಾಯಣ ಹಾಗೂ ಮಹಾಭಾರತದ ಎರಡು ಪ್ರಮುಖ ಘಟನಾವಳಿಗಳಿಗೆ ವಿಜಯದಶಮಿ ಸಾಕ್ಷಿಯಾಗಿ, ಮನುಷ್ಯರಲ್ಲಿನ ದುರ್ಗುಣಗಳ ಸಂಹಾರದ ದ್ಯೋತಕವಾಗಿದೆ. ಶಾಕ್ತೇಯರಿಂದ ‘ಅಪರಂಜಿತಾ’ ಎಂದು ಪೂಜೆಗೊಳ್ಳುತ್ತಿದ್ದ ಬನ್ನಿರಾಮಾಯಣ, ಮಹಾಭಾರತದ ಸಂದರ್ಭದಲ್ಲಿ ಮಾನ್ಯತೆ ಪಡೆದಿತ್ತು. ಶ್ರೀ ರಾಮಚಂದ್ರನು ಶಮಿವೃಕ್ಷವನ್ನು ಪೂಜಿಸಿ, ರಾವಣನ ಮೇಲೆ ಯುದ್ಧಕ್ಕೆ ಹೋದನೆಂದು, ವಿರಾಟನ ಗೋಗ್ರಹಣದ ಸಂದರ್ಭದಲ್ಲಿಯು ಅರ್ಜುನನು ಶಮಿದೇವಿಯನ್ನು ಆರಾಧಿಸಿದನೆಂಬ ಉಲ್ಲೇಖಗಳು ಜನಪದ ಮಹಾಕಾವ್ಯಗಳಲ್ಲಿವೆ.
ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮಹತ್ವದ ಸ್ಥಾನ ಪಡೆದ ಬನ್ನಿಯು ವಿಜಯದ ಸಂಕೇತವಾಗಿ, ಸಂಬಂಧಗಳನ್ನು ಬೆಸೆಯುವ ಸಾಧನವಾಗಿದೆ.
ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ.ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ.
ಬನ್ನಿ ಮುಡಿಯುವ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತುಗಳಿವು ↓
” ಬಂಗಾರ ಕೊಟ್ಟು ಬಂಗಾರದ್ಹಾಂಗ ಇರೋಣ್ರಿ… ಕೈ ಹಿಡೀರಿ, ಉಡಿ ಒಡ್ಡರೀ… ಸಾಕು ಅನ್ನುವಷ್ಟು ಬಂಗಾರ ಕೊಡ್ತೀವಿ… ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕಾಗಾಂಗಿಲ್ಲ ನಿಮ್ಮ ಮನಿತನಕ ನೀವು ಹೇಳ್ದ ಕೇಳ್ದ ಬಂಗಾರ ತಂದೀವಿ… ಎಷ್ಟು ಬೇಕು ಅಷ್ಟು ತುಗೊಳ್ರಿ…”
ಎಲ್ಲಾ ಸ್ನೇಹಿತರಿಗೆ ವಿಜಯದಶಮಿ ಹಾಗೂ ಮೋಹರಂ ಹಬ್ಬದ ಶುಭಾಶಯಗಳು.
ಬನ್ನಿ ಬಂಗಾರ.ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, ‘ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ’ ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, ‘ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ’ ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. ‘ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ’ ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗUಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.
ನಿಮಗು ಮತ್ತು ನಿಮ್ಮ ಕುಟುಂಬ ವರ್ಗದವರಿಗೆ ಆಯುಧಪೂಜಾ ಮತ್ತು ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ಗಣೇಶ ಚತುರ್ಥಿ: ಭಾಂದವ್ಯ ಬೆಸೆಯುವ ಹಬ್ಬ.
ಗಣೇಶ ಚತುರ್ಥಿ: ಭಾಂದವ್ಯ ಬೆಸೆಯುವ ಹಬ್ಬ.
ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.
ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ.
ಮನೆ, ದೇವಸ್ಥಾನಗಳಿಗೆ ಮಾತ್ರ ನಡೆಯುತ್ತಿದ್ದ ’ಚೌತಿ’ಗೆ ಸಾರ್ವಜನಿಕ ವೇದಿಕೆ ಒದಗಿಸುವ ಪರಂಪರೆಗೆ ನಾಂದಿ ಹಾಡಿದ್ದು ಬಾಲಗಂಗಾಧರ ತಿಲಕ್ ಅವರು. ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನು ಸಾಧಿಸುವ ತಿಲಕ್ ಅವರ ಪ್ರಯತ್ನ ಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.
ಅಲ್ಲಿಂದ ಮುಂದಕ್ಕೆ ಪ್ರತಿವರ್ಷ ಇದೇ ಕ್ರಮ ಮುಂದುವರಿಯಿತು. `ದೇವರು ಸರ್ವರಿಗೂ ಸೇರಿದವನು’ ಎಂಬ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ, ಪಂಥಗಳ ಜನರೂ ಒಂದಾದರು. ಒಟ್ಟಿಗೇ ಸೇರಿದರು. ಪೂಜೆ ಮಾಡಿದರು. ದೇಶಕ್ಕೆ ಒದಗಿಬಂದಿರುವ ದಾಸ್ಯವನ್ನು ತೊಲಗಿಸಲು ಸಂಕಲ್ಪ ಮಾಡತೊಡಗಿದರು. ತಮ್ಮ ತಮ್ಮ ಊರು, ಪ್ರದೇಶಗಳಿಗೂ ಮೀರಿದ ರಾಷ್ಟ್ರೀಯ ದೃಷ್ಟಿಯನ್ನು ಸಾಮಾನ್ಯ ಜನರೂ ಪಡೆಯತೊಡಗಿದರು.
ಭಾರತೀಯ ಜನರು ಒಂದೆಡೆ ಸೇರುವುದನ್ನು ತಡೆಯಲು ಬ್ರಿಟಿಷ್ ಸರಕಾರ ಯತ್ನಿಸುತ್ತಿದ್ದ ಕಾಲ ಅದು. ಆ ಸಮಯದಲ್ಲಿ ಊರೂರುಗಳಿಗೂ ಸಾರ್ವಜನಿಕ ಗಣೇಶೋತ್ಸವ ಪ್ರವೇಶಿಸಿತು. ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ಕಥಾಶ್ರವಣ, ಭಾಷಣ – ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವಂತೆ ತಿಲಕರು ಪ್ರೋತ್ಸಾಹಿಸಿದರು. ವಿವಿಧ ಭಾಷೆ ಹಾಗೂ ಪ್ರಾಂತ್ಯಗಳ, ಆದರೆ ಒಂದೇ ದೇಶದ, ಮಕ್ಕಳನ್ನು ಒಂದಾಗಿ ಬೆಸೆಯಿತು ಗಣೇಶ ಚೌತಿ.
ಹೀಗೆ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮೂಲಕ ತಿಲಕರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಕಷ್ಟಕರವಾದ ಪರಿಸ್ಥಿತಿಯನ್ನು ನಿರ್ಮಿಸಿದರು. ಭಾರತೀಯರ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾದದೇ ಇದ್ದೂದೂ ಬ್ರಿಟಷರ ನಿರ್ಗಮನಕ್ಕೆ ಒಂದು ಕಾರಣ. ಜನರು ಮಾನಸಿಕವಾಗಿ ಬ್ರಿಟಿಷರೊಡನೆ ಒಂದಾಗದೇ ಇದ್ದುದು, ಅವರ ಮೇಲ್ಮೆಯನ್ನು ಸ್ವೀಕರಿಸದೇ ಇದ್ದುದು, ಅವರ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗಣೇಶ ಚತುರ್ಥಿ ಬಹಳ ಸಹಕಾರಿಯಾಯಿತು. ಸ್ವಾತಂತ್ರ್ಯದ ಬಳಿಕವೂ ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದ ಗಣೇಶೋತ್ಸವನ್ನು ಇಂದು ಬೀದಿ-ಬೀದಿಗಳಲ್ಲಿ ಆಚರಿಸಲಾಗುತ್ತಿದೆ.
ಅದೇ ರೀತಿ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಾಗಲಿ, ಪಟ್ಟಣದಲ್ಲಾಗಲಿ ನಿಸರ್ಗಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಕುಂಬಾರರು ಜೇಡಿಮಣ್ಣಿನಲ್ಲಿ ತಯಾರಿಸಿದ ಗಣಪನ ಮೂರ್ತಿ ಪೂಜಿಸಲ್ಪಡುತ್ತಿತ್ತು. ಕಾಲಚಕ್ರ ಉರುಳಿದ ಹಾಗೆ ಗಣೇಶೋತ್ಸವ ಕೂಡ ಹೊಸ ಹಾದಿ ತುಳಿದ ಪರಿಣಾಮ ಇವತ್ತು ಜೇಡಿಮಣ್ಣಿನ ಗಣೇಶನ ಮೂರ್ತಿಗೂ ಬೆಲೆ ಇಲ್ಲದಂತಾಗಿದೆ.
ಅದರ ಬದಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಮೂಲಕ ಗಣಪತಿ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಆ ಮೂರ್ತಿಗೆ ಕೆಮಿಕಲ್ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿಗೆ ಮೆಟಲ್ಸ್ಗಳನ್ನ ಉಪಯೋಗಿಸುತ್ತಾರೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಜೇಡಿಮಣ್ಣಿನ ಗಣಪತಿ ಮೂರ್ತಿ ಅಲ್ಲಲ್ಲಿ ಕಾಣಸಿಗುತ್ತದೆ, ಆದರೆ ನಗರ-ಮಹಾನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾರಾಜಿಸುವ ಗಣಪನ ಹುಟ್ಟು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ನದ್ದು.
ವಿದ್ಯ್ಗಗೆ ಮೊದಲು ಗಣಪತಿಯನು ಒಮ್ಮೆ ನೆನಪಿಸಿ ಕೊಂಡರೆ ಆ ಕಲಿತ ವಿದ್ಯೆ ಸದಾ ಇರುವುದು ಎಂಬ ನಂಬಿಕೆ.ಗಣೇಶಾಯ ನಮಃ’ಎಂದು ಸ್ಮರಿಸಿದರೆ ಕಠಿಣ ವಿಷಯಗಳೂ ಸಹ ಸುಲಭದಲ್ಲಿ ತಿಳಿಯುದು. ಗಣೇಶ ಹಬ್ಬಕ್ಕೆ ಲಂಬೋಧರನಿಗೆ ಪ್ರಿಯವಾದ ಅನೇಕ ಬಗೆಯ ಲಡ್ಡುಗಳನ್ನು ತಯಾರಿಸುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಎಲ್ಲ ಸಭೆಗಳಲ್ಲಿ ಇ ಈ ಮಂತ್ರವನ್ನು ಜಪಿಸಿದರೆ ಆ ಕೆಲಸವೂ ಏನೇ ತೊಂದರೆ ಇಲ್ಲದೆ ಆಗುತ್ತದೆ .
ಪ್ರತಿ ವರ್ಷದ ಭಾದ್ರಪದ ಮಾಸದ ನಾಲ್ಕನೇ ದಿನ, ಚತುರ್ಥಿ ದಿನ ಈ ಹಬ್ಬವನ್ನು ಆಚರಿಸುತ್ತೇವೆ
*ಹಲವರು ಹೆಸರಿಂದ ಗಣಪತಿಯನ್ನು ಕರೆಯವರು*
೧.ವಿಘ್ನನಿವಾರಕ
೨.ಲಂಬೋದರ
೩. ಏಕದಂತ
೪.ವಕ್ರತುಂಡಾ
೫.ಅಮೇಯ
೬ ಓಂಕಾರ
೭ ಗಜಾನನ
೮ ಗಜವದನ
೯ ವಿಘ್ನೇಶ
೧೦ ವಿಘ್ನ ವಿನಾಶಕ
೧೧ ವಕ್ರತುಂಡ
೧೨ ಮೂಷಿಕ ವಾಹನ
೧೩ ಗಣನಾಯಕ
೧೪ ಗಣಪತಿ
ಹೀಗೆ ಹಲವು ಹೆಸರುಗಳಿವೆ.
*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*
*ಬಾಲ ಗಣಪತಿ*
ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
*ತರುಣ ಗಣಪತಿ*
ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
*ಭಕ್ತಿ ಗಣಪತಿ*
ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
*ವೀರ ಗಣಪತಿ*
ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ ” ವೀರ” ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
*ಶಕ್ತಿ ಗಣಪತಿ*
ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
*ದ್ವಿಜ ಗಣಪತಿ*
“ದ್ವಿಜ” ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
*ಸಿದ್ಧಿ ಗಣಪತಿ*
ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
*ಉಚ್ಚಿಷ್ಟ ಗಣಪತಿ*
ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
*ವಿಘ್ನ ಗಣಪತಿ*
ಗಣಪತಿಯನ್ನು “ವಿಘ್ನೇಶ್ವರ, ವಿಘ್ನನಾಶಕ” ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
*ಕ್ಷಿಪ್ರ ಗಣಪತಿ*
ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
*ಹೇರಂಬ ಗಣಪತಿ*
ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
*ಲಕ್ಷ್ಮೀ ಗಣಪತಿ*
ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
*ಮಹಾ ಗಣಪತಿ*
“ಮಹಾ” ಎಂಬ ಮಾತೇ “ಶ್ರೇಷ್ಟ” ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
*ವಿಜಯ ಗಣಪತಿ*
ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ “ವಿಜಯ”ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
*ನೃತ್ಯ ಗಣಪತಿ*
ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
*ಊರ್ಧ್ವ ಗಣಪತಿ*
ಊರ್ಧ್ವ ಗಣಪತಿ ಎಂದರೆ” ಉದ್ದವಾಗಿ ಇರುವ ಗಣಪತಿ” ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
*ಏಕಾಕ್ಷರ ಗಣಪತಿ*
“ಏಕಾಕ್ಷರ ಗಣಪತಿ”ಯು ಹೆಸರೇ ಸೂಚಿಸುವಂತೆ “ಒಂದೆ ಅಕ್ಷರದ “ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
*ವರದ ಗಣಪತಿ*
ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ “ಮೂರನೆ ಕಣ್ಣು” ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
*ತ್ರಯಾಕ್ಷರ ಗಣಪತಿ*
ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
*ಕ್ಷಿಪ್ರ ಪ್ರಸಾದ ಗಣಪತಿ*
ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
*ಹರಿದ್ರ ಗಣಪತಿ*
ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
*ಏಕದಂತ ಗಣಪತಿ*
ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
*ಸೃಷ್ಟಿ ಗಣಪತಿ*
ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್ನಲ್ಲಿ ಕಾಣಿಸಿಕೊಳ್ಳುತ್ತಾನೆ.
*ಉದ್ಧಂಡ ಗಣಪತಿ*
ಉದ್ಧಂಡ ಗಣಪತಿಯು ವಿಶ್ವದಲ್ಲಿ ‘ಧರ್ಮವನ್ನು ಪರಿಪಾಲಿಸುತ್ತಾನೆ” . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
*ಋಣಮೋಚನ ಗಣಪತಿ*
ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
*ದುಂಧಿ ಗಣಪತಿ*
ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
*ದ್ವಿಮುಖ ಗಣಪತಿ*
ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
*ತ್ರಿಮುಖ ಗಣಪತಿ*
ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
*ಸಿಂಹ ಗಣಪತಿ*
ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
*ಯೋಗ ಗಣಪತಿ*
ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
*ದುರ್ಗಾ ಗಣಪತಿ*
ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
*ಸಂಕಷ್ಟ ಹರ ಗಣಪತಿ*
ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.
*ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು?*
ಆದ್ರೆ ಸಂಕಷ್ಟ್ಟ ದಿನ ನೋಡಿದರೆ ಒಳ್ಳೆಯದು ಎಂಬ ನಂಬಿಕೆ .
ಕಥೆ :ಒಮ್ಮೆ ಚಂದ್ರನು (moon)ನಿನ್ನ ವಿಚಿತ್ರವಾದ ದೇಹ ,ದಡುತಿ ಹೊಟ್ಟೆ ,ನೋಡಲು ಅಸಹ್ಯ ,ನಿನ್ನ ಕಿವಿ ,ಹಾಗು ನಿನ್ನ ಆ ಸೊಂಡಿಲು ಅಸಹ್ಯ ಎಂದು ಚೇಷ್ಟೆ ಮಾಡಿದನು ,ಆಗ ಗಣಪತಿ ಸಿಟ್ಟಾಗಿ ಇನ್ನು ಮುಂದೆ ನಿನ್ನ ನ್ನು ಯಾರು ನೋಡುವರು ಅವರಿಗೆ ಸುಳ್ಳು ,ಆರೋಪ ಬರಲಿ ಎಂದು ಶಾಪ ನೀಡಿದನು ,ಹೀಗಾಗಿ ಚಂದ್ರನಿಗೆ ಮುಂದೆ ಮುಖ ಎತ್ತಿ ನಡೆಯಲು ಕಷ್ಟವಾಗಿತು,ಹೀಗಾಗಿ ಪುನ: ಚಂದ್ರನು ಗಣಪತಿ ಬಳಿ ಹೋಗಿ ಆ ಶಾಪಕ್ಕೆ ಪರಿಹಾರ ಕೇಳಿದನು ,ಅದಕ್ಕೆ ಗಣಪತಿ ನಿನ್ನನು ಯಾರು ಗಣೇಶ ಚತುರ್ಥಿಯಂದು ನೋಡಿದರೆ ಅವರಿಗೆ ಆರೋಪ ಬರುದು ಹಾಗೆ ನಿನ್ನನು ,ಯಾರು ಸಂಕಷ್ಟ ಚತುರ್ಥಿಯಂದು ನೋಡದೆ ಹೋದರೆ ಅವರಿಗೆ ಪೂಜೆ ಫಲ ದೊರೆಯಲಾರದು ಎಂದು ಹೇಳಿದನು .
ಗಣೇಶನ ಆನೆಯ ತಲೆ ನಂಬಿಕೆ,ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ.
ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತ.
ಗಣೇಶನ ವಾಹನ,ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.
ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಸೌಭಾಗ್ಯ ನೀಡುವ ಹಬ್ಬವಾಗಿದೆ
ದೇಶದ ವಿವಿಧೆಡೆಗಳಲ್ಲಿ ವಿಜೃಂಭಣೆಯಿಂದ ನಡೆಯುವ ಚೌತಿ ಹಬ್ಬವು ಇಂದು ಬಹುತೇಕ ’ಸಾರ್ವಜನಿಕ ಗಣೇಶೋತ್ಸವ’ ಗಳೊಂದಿಗೆ ಸೇರಿಹೋಗಿದೆ. ಯಾಕೆಂದರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘಗಳ ಕಾರ್ಯಚಟುವಟಿಕೆ ಆ ರೀತಿ ಇದೆ. ಕರಾವಳಿ ಕರ್ನಾಟಕದಲ್ಲಂತೂ ’ಚೌತಿ’ ಎಂಬುದು “ಮನೆ ಮನೆಗಳಲ್ಲಿ ಆರಾಧನೆ’ ಎನ್ನುವುದಕ್ಕಿಂತಲೂ ’ಸಾರ್ವಜನಿಕ ಗಣೇಶೋತ್ಸವದೊಂದಿಗೆ ಸೇರಿ ಮಾಡುವ ಆಚರಣೆ’ ಎನ್ನುವಷ್ಟರ ಮಟ್ಟಿಗಿದೆ. ಇತ್ತೀಚಿನ ವರ್ಷ ಗಳಲ್ಲಂತೂ ಗಣೇಶೋತ್ಸವ ಸಮಿತಿಗಳ ಮೂಲಕವೇ ’ಚೌತಿ’ ನಡೆಯುವಂತಾಗಿದೆ.
ಈಗ ಒಂದು, ಮೂರು, ಐದು, ಏಳು… ಹೀಗೆ ನಿಗದಿತ ದಿನಗಳವರೆಗೆ ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ನಿರ್ದಿಷ್ಟ ಸ್ಥಳದಲ್ಲಿಟ್ಟು ಅದನ್ನು ವಿಸರ್ಜಿಸುವುದಕ್ಕೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಸೀಮಿತವಾಗುಳಿದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಷ್ಟೆ ಪ್ರಾಮುಖ್ಯತೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ಗಳಿಗೂ ಗಣೇಶೋತ್ಸವಗಳಲ್ಲಿ ದೊರೆಯುತ್ತಿದೆ ಎಂಬುದು ಉಲ್ಲೇಖನೀಯ.
ಗಣೇಶೋತ್ಸವ ಸಮಿತಿಗಳು ಒಂದು ನಿರ್ದಿಷ್ಟ ಧರ್ಮದ ಜನರನ್ನು ಒಳಗೊಂಡಿರುವ ಸಮಿತಿಗಳಾಗಿ ಉಳಿದಿಲ್ಲ. ಅದರಲ್ಲಿ ಹಿಂದೂಯೇತರ ಧರ್ಮ ಬಾಂಧವರು ಕೂಡ ಸಕ್ರಿಯವಾಗಿ ಗುರುತಿಸಿಕೊಂಡಿರುವುದನ್ನು ಕರಾವಳಿಯ ಈ ಭಾಗದ ಅಲ್ಲಲ್ಲಿ ನಾವು ಕಾಣುತ್ತಿದ್ದೇವೆ. ಇದು ಸಣ್ಣತನ, ಸಂಕುಚಿತ ಭಾವವನ್ನು ಮೀರಿದ ಬೆಸುಗೆಯೇ ಸರಿ.
ಸಕಲ ಓದುಗರಿಗೆ, ಹಿತೈಷಿಗಳಿಗೆ, ಆತ್ಮೀಯರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.

‘ಈದುಲ್ ಫಿತ್ರ್’ ಯಾಕಾಗಿ ಈ ಸಂತೋಷಾಚರಣೆ?
ರಮಝಾನ್ ತಿಂಗಳಿನ ಕೊನೆಯಲ್ಲಿ ಆಚರಿಸಲಾಗುವ ಹಬ್ಬವೇ ಈದುಲ್ ಫಿತ್ರ್ ಅಥವಾ ಪಾರಣೆಯ ಹಬ್ಬ. ಒಂದು ತಿಂಗಳಿನ ಉಪವಾಸವ್ರತ ಆತ್ಮಸಂಸ್ಕರಣೆ, ಕುರ್ಆನ್ ಅಧ್ಯಯನ ಇತ್ಯಾದಿಗಳ ಮೂಲಕ ಗಳಿಸಲಾದ ಸಾಧನೆಗಳನ್ನು ಈ ಸಂದರ್ಭದಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ.
ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ.‘‘ ಉಪವಾಸ ಆಚರಿಸುವವರಿಗೆ ಸಂತೋಷದ ಎರಡು ಸಂದರ್ಭಗಳಿವೆ. ಒಂದು ಉಪವಾಸ ಬಿಡುವ ಸಂದರ್ಭ. ಎರಡನೆಯದು ಮರಣಾನಂತರ ಅವನ ಪ್ರಭುವನ್ನು ಭೇಟಿಯಾಗುವ ಸಂದರ್ಭ’’ ಇಲ್ಲಿ ‘‘ಉಪವಾಸ ಬಿಡುವ ಸಂದರ್ಭ’’ ಎಂಬುದಕ್ಕೆ ಎರಡು ಅರ್ಥವಿದೆ. ಮೊದಲನೆಯದು ಪ್ರತಿನಿತ್ಯ ಉಪವಾಸ ಬಿಡುವಾಗ ಉಪವಾಸಿಗ ಆ ದಿನದಂದು ಗಳಿಸಿದ ಆತ್ಮ ಸಂಯಮ, ತ್ಯಾಗ ಮನೋಭಾವ, ಇತರರ ಸಂಕಷ್ಟದೊಂದಿಗೆ ಸ್ಪಂದಿಸುವ ಮನೋಭಾವ ಇತ್ಯಾದಿಗಳನ್ನು ಗಳಿಸಿದ ಸಾರ್ಥಕತೆಯನ್ನು ತನ್ನದಾಗಿಸಿ ಸಂತುಷ್ಟನಾಗುತ್ತಾನೆ. ಎರಡನೆಯದಾಗಿ ಒಂದು ತಿಂಗಳ ಉಪವಾಸದ ನಂತರ ಉಪವಾಸ ತೊರೆಯುವಾಗ ತಿಂಗಳಿನಾದ್ಯಂತ ಗಳಿಸಿದ ಜ್ಞಾನ, ವ್ಯಕ್ತಿತ್ವ ಬದಲಾವಣೆ, ತಾಳ್ಮೆ ಇತ್ಯಾದಿಗಳನ್ನು ಸ್ಮರಿಸಿ ವ್ಯಕ್ತಿ ಸಂತುಷ್ಟನಾಗುತ್ತಾನೆ. ಹಾಗೆಯೇ ಮರಣಾನಂತರ ಉಪವಾಸಿಗನಿಗೆ ಖಂಡಿತ ವಿಶೇಷವಾದ ಪುರಸ್ಕಾರ ಮತ್ತು ಸಂತೋಷ ಕಾದಿದೆ ಎಂಬುದು ಪ್ರವಾದಿ ವರ್ಯ(ಸ)ರ ಈ ಮಾತಿನ ಇಂಗಿತ.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಮ್ಮೆ ನಿಜವಾದ ಸಂತೋಷ ಯಾವುದರಲ್ಲಿ ಅಡಕವಾಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ಅಧ್ಯಯನದ ಭಾಗವಾಗಿ ಜೀವನದ ಹಲವು ರಂಗಗಳಲ್ಲಿ ಕಾರ್ಯಪ್ರವೃತರಾಗಿರುವ ವ್ಯಕ್ತಿಗಳನ್ನು ಸಂದರ್ಶಿಸಲಾಯಿತು. ಆ ಪೈಕಿ ಕೈಗಾರಿಕೋದ್ಯಮಿಗಳು, ಶಿಕ್ಷಣವೇತ್ತರು, ವ್ಯಾಪಾರಿಗಳು, ರಾಜಕಾರಣಿಗಳು ಮುಂತಾದ ಹಲವು ಕ್ಷೇತ್ರಗಳಿಗೆ ಸೇರಿದ ವ್ಯಕ್ತಿಗಳು ಸೇರಿದ್ದರು. ಕೊನೆಗೆ ಸಂಶೋಧನೆಯಿಂದ ಕಂಡುಕೊಂಡ ಅಂಶವೆಂದರೆ ನಿಜವಾದ ಸಂತೊಷ ‘ಅರ್ಥಪೂರ್ಣವಾದ ಸಂಬಂಧ’ದಲ್ಲಿ ಅಡಕವಾಗಿದೆ ಎಂಬುದಾಗಿದೆ.
ರಮಝಾನ್ ತಿಂಗಳು ಅರ್ಥಪೂರ್ಣವಾದ ಸಂಬಂಧಗಳನ್ನು ಸೃಷ್ಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ‘ಇಫ್ತಾರ್’ ಎಂದೇ ಖ್ಯಾತವಾಗಿರುವ ಉಪವಾಸ ತೊರೆಯುವ ಭೋಜನಕ್ಕೆ ಕುಟುಂಬಸ್ಥರನ್ನು, ಮಿತ್ರರನ್ನು, ಬಡವರನ್ನು ಕರೆದು ಆತಿಥ್ಯ ವಹಿಸುವ ಸಂಪ್ರದಾಯ ಇಡೀ ವಿಶ್ವದಲ್ಲೇ ಇದೆ. ಸುಮಾರು ಒಂದುವರೆ ಶತಕೋಟಿಯಷ್ಟಿರುವ ಮುಸ್ಲಿಮ್ ಜನಸಂಖ್ಯೆಯಲ್ಲಿ ನಡೆಯುವ ‘ಸಂಬಂಧಗಳ ಪುನಶ್ಚೇತನ’ದ ಈ ಪ್ರಕ್ರಿಯೆ ನಿಜವಾಗಿ ಮಾನವ ಸಮಾಜದಲ್ಲಿ ಸಂತೋಷವನ್ನು ವ್ಯಾಪಕವಾಗಿ ಹರಡುತ್ತದೆ ಎಂದು ಹೇಳಬಹುದು.
ಫಿತ್ರ್ ಝಕಾತ್ ಅಥವಾ ಹಬ್ಬದ ದಿನದ ಕಡ್ಡಾಯದಾನ:
ಈದುಲ್ ಫಿತ್ರ್ನ ವಿಧಿಗಳ ಪೈಕಿ ಆ ದಿನದ ಖರ್ಚಿಗೆ ಇರುವ ಪ್ರತಿಯೊಬ್ಬ ವ್ಯಕ್ತಿ ತನ್ನ ಕುಟುಂಬಸ್ಥರ ಪರವಾಗಿ ಕೊಡಬೇಕಾದ ‘ಫಿತ್ರ್ ಝಕಾತ್’ ಅಥವಾ ಹಬ್ಬದ ದಿನದ ಕಡ್ಡಾಯ ದಾನವೂ ಒಂದಾಗಿದೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬದವರ ಪರವಾಗಿ ತಲಾ ಸುಮಾರು ಎರಡುವರೆ ಕಿಲೋ ಧಾನ್ಯ ಅಥವಾ ಅದಕ್ಕೆ ತುಲ್ಯವಾದ ಮೊತ್ತವನ್ನು ಹಬ್ಬದ ನಮಾಝಿಗೆ ಹೊರಡುವ ಮೊದಲು ಅಪೇಕ್ಷಿತರಿಗೆ ಅಥವಾ ಬಡವರಿಗೆ ದಾನ ಮಾಡಬೇಕಾಗಿದೆ. ಈ ವಿಧಿಯನ್ನು ಸರಿಯಾಗಿ ಪಾಲಿಸಿದರೆ ಈದುಲ್ಫಿತ್ರ್ ಹಬ್ಬದಂದು ಯಾವ ಬಡವ್ಯಕ್ತಿ ಅಥವಾ ಬಡಕುಟುಂಬ ಹಸಿವೆಯಿಂದ ಇರಲು ಸಾಧ್ಯವಿಲ್ಲ. ಕೊಲ್ಲಿಯಂತಹ ಸಂಪನ್ನ ರಾಷ್ಟ್ರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತಹ ವ್ಯಕ್ತಿ ಅಥವಾ ಕುಟುಂಬಗಳನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಫಿತ್ರ್ದಾನವನ್ನು ಮುಂಗಡ ಸಂಗ್ರಹಿಸಿ ಅಪೇಕ್ಷಿತರು ಹೆಚ್ಚಾಗಿರುವ ಬಡ ರಾಷ್ಟ್ರಗಳಿಗೆ ಕಳುಹಿಸುವಂತಹ ಸಂಪ್ರದಾಯವನ್ನು ಗಲ್ಫ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ಇದು ಕೂಡ ಸಿರಿವಂತರ ಮತ್ತು ಬಡವರ ನಡುವೆ ಆರೋಗ್ಯಪೂರ್ಣ ಸಂಬಂಧವನ್ನು ಬೆಳೆಸಲು ಸಹಕಾರಿಯಾಗುತ್ತದೆ.
ಸಂತೋಷಕ್ಕೆ ಇನ್ನೊಂದು ಕಾರಣ ‘ಕುರ್ಆನ್’
ರಮಝಾನ್ ತಿಂಗಳನ್ನು ಉಪವಾಸದ ತಿಂಗಳು ಎಂದು ಕರೆಯುವುದು ರೂಢಿ. ಇದು ನಿಜವೂ ಹೌದು. ಆದರೆ ಕುರ್ಆನ್ನಲ್ಲಿ ಒಂದು ಕಡೆ ಮಾತ್ರ (ಅಧ್ಯಾಯ 2, ಸೂಕ್ತ 185) ರಮಝಾನ್ ತಿಂಗಳ ಪ್ರಸ್ತಾಪ ಬಂದಿದೆ. ಅಲ್ಲಿ ಕುರ್ಆನ್ ಆ ತಿಂಗಳನ್ನು ಉಪವಾಸ ದ ತಿಂಗಳು ಎಂದು ಪರಿಚಯಿಸುವುದಿಲ್ಲ. ಬದಲಾಗಿ ಇದು ಕುರ್ಆನ್ನ ತಿಂಗಳು ಎಂದು ಪರಿಚಯಿಸುತ್ತದೆ. ‘‘ರಮಝಾನ್ ತಿಂಗಳು ಕುರ್ಆನ್ ಅವತೀರ್ಣವಾದ ತಿಂಗಳಾಗಿದೆ. ಅದು ಮಾನವರಿಗೆ ಸನ್ಮಾರ್ಗದರ್ಶನ ಮಾಡುವ ಗ್ರಂಥವಾಗಿದೆ. ಹಾಗೆಯೇ ಅದು ಸತ್ಯಾಸತ್ಯಗಳ ನಡುವಿನ ಅಂತರವನ್ನು ಸುಸ್ಪಷ್ಟವಾಗಿ ಸಾರುವ ಗ್ರಂಥ’’ ಎಂದು ಕುರ್ಆನ್ ಹೇಳುತ್ತದೆ. ರಮಝಾನ್ ತಿಂಗಳು ನಿಜವಾಗಿಯೂ ಕುರ್ಆನ್ನ ವರ್ಷಾಚರಣೆಯಾಗಿದೆ. ಈ ತಿಂಗಳಿನ ಉಪವಾಸವ್ರತವೂ ಈ ಕಾರಣಕ್ಕಾಗಿಯೇ ಆಗಿದೆ.
ಕುರ್ಆನ್ನಲ್ಲಿ ಇನ್ನೊಂದೆಡೆ, ಹೀಗೆ ಹೇಳಲಾಗಿದೆ, ‘‘ ಓ ಮನುಷ್ಯರೇ! ನಿಮಗಿದೋ ನಿಮ್ಮ ಪ್ರಭುವಿನ ಕಡೆಯಿಂದ ಉಪದೇಶ ಬಂದಿದೆ. ಇದು ಹೃದಯದಲ್ಲಿರುವ ರೋಗಗಳಿಗೆ ಸಿದ್ಧೌಷಧವಾಗಿದೆ. ಅಂತೆಯೇ ಇದು ಸತ್ಯ ವಿಶ್ವಾಸಿಗಳಿಗೆ ಅನುಗ್ರಹವಾಗಿದೆ. ಹೇಳಿರಿ. ಇದು ನಿಮ್ಮ ಪ್ರಭುವಿನ ಅಪಾರವಾದ ಕಾರುಣ್ಯ ಮತ್ತು ಅನುಗ್ರಹದಿಂದ ಬಂದ ಗ್ರಂಥ. ಆದ್ದರಿಂದ ಅವರು ಈ ಕಾರಣಕ್ಕಾಗಿ ಸಂತೋಷಾಚರಣೆ ಮಾಡಲಿ. ಈ ಗ್ರಂಥ ನೀವು ಶೇಖರಿಸುವ ಎಲ್ಲ ವಸ್ತುಗಳಿಗಿಂತ ಉತ್ತಮವಾದುದಾಗಿದೆ.’’ (ಅಧ್ಯಾಯ 10, ಸೂಕ್ತ 58,59)
ಐತಿಹಾಸಿಕವಾಗಿ ನೋಡುವುದಾದರೂ ಕುರ್ಆನ್ ಮಾನವಕುಲಕ್ಕೆ ಹಲವು ವಿಧದ ಸಂತೋಷವನ್ನೂ ತಂದು ಕೊಟ್ಟಿದೆ. ಕುರ್ಆನ್ ಅವತೀರ್ಣವಾಗುವ ಮೊದಲು ಏಳನೆ ಶತಮಾನದ ಅರಬರು ಎಲ್ಲ ರಂಗದಲ್ಲೂ ಹಿಂದುಳಿದವರಾಗಿದ್ದರು. ಯಾವುದೇ ನೈಸರ್ಗಿಕ ಸಂಪನ್ಮೂಲ ಗಳಿಲ್ಲದ ಮರಳುಗಾಡಿನಲ್ಲಿ ಅವರು ವಾಸವಾಗಿದ್ದುದರಿಂದ ಆಗಿನ ಕಾಲದ ದೊಡ್ಡ ಸಾಮ್ರಾಜ್ಯಗಳು ಅವರನ್ನು ಆಕ್ರಮಿಸುವ ಗೊಡವೆಗೂ ಹೋಗಿರಲಿಲ್ಲ. ಆದರೆ ಕುರ್ಆನ್ ಅವತೀರ್ಣವಾದ ನಂತರ ಆ ಸಮಾಜದಲ್ಲಿ ಆದ ಬದಲಾವಣೆ ಮಾನವ ಇತಿಹಾಸದ ಅದ್ಭುತಗಳಲ್ಲೊಂದಾಗಿದೆ. ಕುರ್ಆನ್ನನ್ನು ಅನುಸರಿಸಿದ ಜನ ಶಿಕ್ಷಣ, ಸಾಂಸ್ಕೃತಿಕ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲೂ ಹಿರಿಯ ಮತ್ತು ಅಚ್ಚರಿದಾಯಕ ಸಾಧನೆ ಮಾಡಿದರು.
ಆರಂಭ ಕಾಲದ ಕುರ್ಆನ್ ಅನುಯಾಯಿಗಳಾದ ಆ ಮುಸ್ಲಿಮರು ಲೋಕವನ್ನೇ ಬದಲಿಸುವಂತಹ ಸ
ಾಧನೆಗಳನ್ನು ಮಾಡಿದರು. ಇಂದಿನ ಕಾಲದ ‘ಲ್ಯಾಪ್ಟಾಪ್’ಗಳ ಉಗಮಕ್ಕೂ ಅತ್ಯಂತ ಮುಖ್ಯವಾದ ‘ಅಲ್ಜಿಬ್ರಾ’(ಬೀಜಗಣಿತ) ಎಂಬ ಗಣಿತ ಶಾಸ್ತ್ರವನ್ನೂ ಕಂಡು ಹಿಡಿದವರು ‘ಮುಹಮ್ಮದ್ ಇಬ್ನ್ ಮೂಸಾ ಅಲ್ ಖವಾರಝ್ಮಿ ಎಂಬ ಗಣಿತ ಶಾಸ್ತ್ರಜ್ಞ. ಮೂಲತಃ ಅರಬಿ ಭಾಷೆಯಲ್ಲಿದ್ದ ಈ ಶಾಸ್ತ್ರವನ್ನು ಆನಂತರ ಲ್ಯಾಟಿನ್ ಭಾಷೆಗೆ ಭಾಷಾಂತರಿಸಲಾಯಿತು ಹಾಗೂ ಯೂರೋಪಿನ ವಿಶ್ವ ವಿದ್ಯಾನಿಲಯಗಳಲ್ಲಿ ಅದನ್ನು ನೂರಾರು ವರ್ಷಗಳ ತನಕ ಕಲಿಸಲಾಗುತ್ತಿತ್ತು.
ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪ್ರದಾನ ಮಾಡುವ ಸಂಪ್ರದಾಯವೂ ಮುಸ್ಲಿಮರು ಆಳ್ವಿಕೆ ನಡೆಸುತ್ತಿದ್ದ ಸ್ಪೇನ್ನ ಮೂಲಕ ಯೂರೋಪಿಗೆ ತಲುಪಿತು. ಆನಂತರ 12ನೆ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ‘ಆಕ್ಸ್ಫರ್ಡ್’ ವಿಶ್ವವಿದ್ಯಾನಿಲಯ ಈ ಸಂಪ್ರಾದಾಯವನ್ನ್ನು ಮುಂದುವರಿಸಿತು. ಇಂದಿನ ಕಾಲದ ಕ್ಯಾಮರಾಗಳ ಉಗಮಕ್ಕೆ ಕಾರಣವಾದ ‘ಬೆಳಕಿನ ವಕ್ರೀಭವನ’ವನ್ನು ಕಂಡುಹಿಡಿದವರು ಹನ್ನೊಂದನೆ ಶತಮಾನದ ಮುಸ್ಲಿಮ್ ವಿಜ್ಞಾನಿ ಇಬ್ನ್ ಅಲ್ ಹೈತಮ್ ಎಂಬವರು. ಎಂಟನೆ ಶತಮಾನದಲ್ಲಿ ಹುಟ್ಟಿದ ಜಾಬರ್ ಇಬ್ನ್ ಹಯ್ಯೂನ್ ಆಧುನಿಕ ರಸಾಯನ ಶಾಸ್ತ್ರದ ಜನಕ ಎಂದು ಕರೆಯಲ್ಪಡುತ್ತಾರೆ. ಪಾಶ್ಚಿಮಾತ್ಯ ಗ್ರಂಥಗಳಲ್ಲಿ ‘ ಅವಿಸೆನ್ನಾ’ (Avicenna)ಎಂದು ಕರೆಯಲ್ಪಡುವ ಇಬ್ನ್ ಸೀನಾ ಆಧುನಿಕ ವೈದ್ಯಕೀಯ ಶಾಸ್ತ್ರದ ಜನಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಶಾಸ್ತ್ರದ ಬಗ್ಗೆ ಅವರು ಬರೆದ ಗ್ರಂಥಗಳು 19ನೆ ಶತಮಾನದ ತನಕ ವಿಶ್ವದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಅಧಿಕೃತ ಗ್ರಂಥವಾಗಿತ್ತು. ಈ ಸರಣಿ ಮುಂದುವರಿಯುತ್ತದೆ. ಇಂದಿನ ಕಾಲದಲ್ಲಿ ಈ ಅದ್ಭುತ ಐತಿಹಾಸಿಕ ಸಾಧನೆಗಳನ್ನು ಅಂತರ್ಜಾಲದ ಮೂಲಕ ‘ಸರ್ಚ್’ಮಾಡಿ ತಿಳಿದುಕೊಳ್ಳಬಹುದಾಗಿದೆ.
ಇನ್ನು ಆರಂಭ ಕಾಲದ ಮುಸ್ಲಿಮರು ಗಳಿಸಿದ ರಾಜಕೀಯ ಮೇಲ್ಮೆಯೂ ಅಚ್ಚರಿದಾಯಕವಾದುದಾಗಿದೆ. ಪ್ರವಾದಿ ಮುಹಮ್ಮದ್(ಸ)ರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗುವಾಗ ಅವರ ಜತೆಗೂಡಿದವರು ಸುಮಾರು ನೂರು ಮಂದಿ ಮಾತ್ರ. ಆದರೆ ನಂತರದ ಹದಿನೈದು ವರ್ಷದಲ್ಲಿ ಮುಸ್ಲಿಮರು ಆಗಿನ ಕಾಲದ ಬೃಹತ್ ಶಕ್ತಿಗಳಾದ, ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದ್ದ ಅತ್ಯಂತ ಶಕ್ತಿಯುತ ರೋಮನ್ ಮತ್ತು ಪರ್ಶಿಯನ್ ಸಾಮ್ರಾಜ್ಯವನ್ನು ಜಯಿಸಿದರು ಮತ್ತು ಶಾಶ್ವತವಾಗಿ ಅದನ್ನು ಇತಿಹಾಸದ ಪುಟಗಳಿಗೆ ಸೇರಿಸಿದರು. ಈ ರಾಜಕೀಯ ಸಾಧನೆಗಳು ಸಾವಿರಾರು ವರ್ಷಗಳ ತನಕ ಮುಂದುವರಿಯಿತು.
ಒಟ್ಟಿನಲ್ಲಿ ಕುರ್ಆನ್ ಮಾನವ ಕುಲಕ್ಕೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ನೈತಿಕ ಮೇಲ್ಮೆಯನ್ನು ಸಾಧಿಸಲು ಸಹಕಾರಿಯಾಯಿತು. ಆದ್ದರಿಂದ ಸಹಜವಾಗಿಯೇ ಇದು ಸಂತೋಷಾಚರಣೆಗೆ ಗ್ರಾಸವನ್ನೊದಗಿಸುತ್ತದೆ.
ಈದ್ನ ಸಂಭ್ರಮ:
ಇಸ್ಲಾಮಿನ ಇನ್ನೊಂದು ವಿಶೇಷತೆಯೆಂದರೆ ಅದು ಯಾವುದೇ ಪ್ರಾದೇಶಿಕ ಸಂಸ್ಕೃತಿ ಮತ್ತು ಆಚರಣೆಗಳನ್ನು ಸಂಪೂರ್ಣ ಕೊನೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇಸ್ಲಾಮಿನ ಇತಿಮಿತಿ ಮತ್ತು ಮೆರುಗನ್ನು ನೀಡುತ್ತದೆ. ಆದ್ದರಿಂದ ಹಬ್ಬದ ಸಂತೋಷಾಚರಣೆಯಲ್ಲೂ ಲೋಕದಾದ್ಯಂತ ಪ್ರಾದೇಶಿಕ ಸಂಸ್ಕೃತಿ ಮತ್ತು ಸಂಪ್ರದಾಯಗಳ ಛಾಪು ಕಂಡುಬರುತ್ತದೆ. ಉಪಖಂಡದಲ್ಲಿ ಮುಸ್ಲಿಮರು ‘ಈದ್ಗಾಹ್’ ಮೈದಾನದಲ್ಲಿ ಕುಟುಂಬ ಸಮೇತರಾಗಿ ಹೊಸಬಟ್ಟೆಗಳನ್ನು ಧರಿಸಿ ಹೆಚ್ಚುವರಿ ನಮಾಝ್ ನಿರ್ವಹಿಸುತ್ತಾರೆ. ಮಕ್ಕಳಿಗೆ ‘ಈದಿ’ ಅಥವಾ ಈದ್ನ ಹಣ ಕೊಡುವ ಸಂಪ್ರದಾಯವೂ ಸಾಮಾನ್ಯವಾಗಿದೆ. ಬಿರಿಯಾನಿ ಮೃಷ್ಟಿ ಭೋಜನವೂ ಈದ್ನ ಭಾಗವಾಗಿದೆ. ಹತ್ತಿರದ ಕುಟುಂಬಸ್ಥರನ್ನು ಮತ್ತು ಮಿತ್ರರನ್ನು ಸಂದರ್ಶಿಸಿ ಆಲಿಂಗನದೊಂದಿಗೆ ಈದ್ನ ಶುಭಾಶಯಗಳನ್ನು ಕೋರುವ ದೃಶ್ಯವೂ ಸಾಮಾನ್ಯ. ಮೆರವಣಿಗೆಯಲ್ಲಿ ಪ್ರಕೀರ್ತನೆ ಮೊಳಗಿಸುತ್ತಾ ಈದ್ಗಾಹ್ ಕಡೆಗೆ ಸಾಗುವ ಪದ್ಧತಿಯೂ ಎಲ್ಲೆಡೆ ಕಂಡುಬರುತ್ತದೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್. ಲಾ ಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್ ವಲಿಲ್ಲಾಹ್ ಹಮ್ದ್’ ಎಂಬ ಪ್ರಕೀರ್ತನೆಯನ್ನು ಲಯಬದ್ಧವಾಗಿ ಮೊಳಗಿಸಲಾಗುತ್ತದೆ. ಅದರ ಅರ್ಥ ಹೀಗಿದೆ. ‘‘ಅಲ್ಲಾಹನೇ ಮಹಾನನು. ಅಲ್ಲಾಹನೇ ಮಹಾನನು. ಅಲ್ಲಾಹನ ಹೊರತು ಬೇರೆ ಆರಾಧ್ಯರಿಲ್ಲ. ಅಲ್ಲಾಹನೇ ಮಹಾನನು. ಅಲ್ಲಾಹನೇ ಮಹಾನನು. ಎಲ್ಲ ಸ್ತುತಿ ಸ್ತೋತ್ರಗಳು ಅವನಿಗೇ ಮೀಸಲು’’.
ಬೇರೆ ಬೇರೆ ರಾಷ್ಟ್ರಗಳಲ್ಲಿ ಆ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಈ ಸಂಭ್ರಮವನ್ನು ಪ್ರಾದೇಶಿಕ ಸೊಬಗಿನೊಂದಿಗೆ ಆಚರಿಸಲಾಗುತ್ತದೆ. ಈದ್ನ ಉಡುಗೆ ತೊಡುಗೆ, ತಿಂಡಿ ತಿನಿಸು ಹಾಗೂ ಹರ್ಷಾಚರಣೆಯ ಸಂಪ್ರದಾಯಗಳು ಪ್ರತಿಯೊಂದು ರಾಷ್ಟ್ರಗಳಲ್ಲೂ ಭಿನ್ನವಾಗಿದೆ. ಆದರೆ ಹಬ್ಬದ ಕುರಿತಾದ ಇಸ್ಲಾಮಿನ ಮೂಲಭೂತ ಶಿಷ್ಟಾಚಾರಗಳಾದ ಫಿತ್ರ್ ದಾನ, ಈದ್ಗಾಹ್ನಲ್ಲಿ ಮಾಡಲಾಗುವ ಹೆಚ್ಚುವರಿ ನಮಾಝ್, ಶುಭ ಹಾರೈಕೆಗಳೆಲ್ಲವೂ ಎಲ್ಲಾ ಕಡೆಗಳಲ್ಲೂ ಸಮಾನವಾಗಿದೆ.
ಅರಬ್ ರಾಷ್ಟ್ರಗಳಲ್ಲಿ ಬಿರಿಯಾನಿಯ ಬದಲು ಅದೇ ತೆರನಾದ ಮಾಂಸ ಮತ್ತು ಅಕ್ಕಿಯಿಂದ ತಯಾರಿಸಲಾಗುವ ‘ಮಜ್ಬೂಸ್’(ಚ್ಜಚಿಟಟ) ಮತ್ತು ‘ಮಂದಿ’ ಇತ್ಯಾದಿಗಳನ್ನು ಸಿದ್ಧಪಡಿಸಲಾಗುತ್ತದೆ. ಈದ್ ಸಿಹಿ ತನಿಸುಗಳು ಕೂಡ ಭಾರತದ ವಿವಿಧೆಡೆಗಳಲ್ಲಿ ಬೇರೆ ಬೇರೆಯಾಗಿರುವಂತೆಯೇ ವಿಶ್ವದ ವಿವಿಧೆಡೆಗಳಲ್ಲೂ ತರತರದ ಸಿಹಿತಿನಿಸುಗಳನ್ನು ತಯಾರಿಸಲಾಗುತ್ತದೆ. ಅತ್ಯಧಿಕ ಮುಸ್ಲಿಮ್ ಜನಸಂಖ್ಯೆಯಿರುವ ಇಂಡೋನೇಷ್ಯದಲ್ಲಿ ಈ ಹಬ್ಬವನ್ನು ‘ಈದುಲ್ಫಿತ್ರಿ’ ಎಂದು ಕರೆಯುತ್ತಾರೆ. ಈದ್ಗಾಗಿ ಎಲ್ಲರೂ ಎಲ್ಲಿದ್ದರೂ ಮನೆಗೆ ಮರಳಿ ಹಿರಿಯರೊಂದಿಗೆ ತಪ್ಪಿಗಾಗಿ ಕ್ಷಮೆಕೋರುವ ಸಂಪ್ರಾದಾಯ ಸಾಮಾನ್ಯವಾಗಿದೆ. ಈದ್ನ ಈ ವಲಸೆಯನ್ನು ‘ಲೆಬರಾನ್’(ಔಛಿಚಿಚ್ಟಚ್ಞ) ಎಂದು ಕರೆಯಲಾಗುತ್ತದೆ. ಅದಕ್ಕಾಗಿ ರಾಷ್ಟ್ರೀಯ ರಜೆಯನ್ನೂ ಕೊಡಲಾಗುತ್ತದೆ. ಅಲ್ಲದೆ ಹೇರಳ ಸಂಖ್ಯೆಯ ವಲಸಿಗರ ಅನುಕೂಲಕ್ಕಾಗಿ ವಿಶೇಷ ಯಾತ್ರಾ ಸೌಕರ್ಯವನ್ನು ಸರಕಾರದ ಮೂಲಕ ಕಲ್ಪ್ಪಿಸಲಾಗುತ್ತದೆ. ಈದ್ನ ಹಿಂದಿನ ರಾತ್ರಿಯನ್ನು ‘ತಕ್ಬೀರಾನ್’ಎಂದು ಕರೆಯುತ್ತಾರೆ. ಎಲ್ಲರೂ ಆ ಸಂದರ್ಭ ಪ್ರಕೀರ್ತನೆಗಳನ್ನು ಮೊಳಗಿಸುತ್ತಾರೆ. ಮಲೇಷ್ಯದಲ್ಲಿ ಈ ಹಬ್ಬವನ್ನು ‘ಹರಿ ರಾಯ ಈದುಲ್ ಫಿತ್ರಿ’ ಎಂದು ಕರೆಯುತ್ತಾರೆ. ‘ಹರಿ ರಾಯ’ ಎಂದರೆ ಸಂಭ್ರಮದ ದಿನ. ಮುಸ್ಲಿಮ್ ಜನಸಂಖ್ಯೆ ಕಳೆದ ಐವತ್ತು ವರ್ಷಗಳಲ್ಲಿ 200 ಶೇಕಡಾ ಹೆಚ್ಚಾಗಿರುವ ಪಾಶ್ಚಿಮಾತ್ಯ ದೇಶಗಳಲ್ಲ್ಲಿ ಈದ್ನ್ನು ತನ್ನದೇ ಆದ ಮೆರಗು ಮತ್ತು ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಆಚರಿಸಲಾಗುತ್ತದೆ.
ಒಟ್ಟಿನಲ್ಲಿ ಕುರ್ಆನ್ ದಯಪಾಲಿಸಿದ, ಜ್ಞಾನ ಕಲ್ಪಿಸಿದ, ಪುಣ್ಯವರ್ಧನೆ ಮತ್ತು ಪಾಪ ವಿಮೋಚನೆಯ ವಸಂತ ಕಾಲವನ್ನೊದಗಿಸಿದ ದೇವನಿಗೆ ಸ್ತುತಿ ಸಲ್ಲಿಸುವ ಹಬ್ಬವೇ ‘ಈದುಲ್ ಫಿತ್ರ್’ ಅದರ ಆಚರಣೆಗಳಲ್ಲೂ ಸಾಂದರ್ಭಿಕ ಸಂತೋಷದ ಜತೆಗೆ ಸಂತೋಷದ ನೈಜ ಬುನಾದಿಗಳನ್ನೂ ಭದ್ರ ಪಡಿಸುವ ಸಂದೇಶ ಅಡಕವಾಗಿದೆ.
ಹನುಮ ಜಯಂತಿ
ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ
ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.
ಆದಿಕಾವ್ಯವಾದ ವಾಲ್ಮೀಕಿ ಮಹರ್ಷಿಯ ರಾಮಾಯಣದ ಪಾತ್ರಗಳು ನಮ್ಮ ಜೀವನದ ಮೇಲೆ ವಿಶೇಷ ಪ್ರಭಾವವನ್ನು ಬೀರಿವೆ. ರಾಮಲಕ್ಷ್ಮಣರು ಎಂದರೆ ನಮ್ಮ ಜನರಿಗೆ ತಮ್ಮ ಮನೆಯವರಷ್ಟೇ ಹತ್ತಿರದವರು ಎಂಬ ಭಾವನೆಯಿದೆ. ಇಂಥ ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ ‘ರಾಮಾಯಣ’ ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ ‘ಸೀತಾಯಾಶ್ಚರಿತಂ’ ಎಂದು ಕರೆಯಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು ‘ಹನುಮಾಯಣ’. ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದು ಕರೆದಿದ್ದರೆ
ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ನಂತರ ರಾಮಾಯಣದ ಕಥೆಯು ಆಂಜನೇಯನನ್ನೇ ಅವಲಂಬಿಸಿದೆ. ಶ್ರೀರಾಮನಿಗೂ ಸುಗ್ರೀವನಿಗೂ ಸಖ್ಯವನ್ನು ಮಾಡಿಸಿದವನು, ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ. ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದವನು ಆಂಜನೇಯನೇ. ಯುದ್ಢ ಸಮಯದಲ್ಲಿ ರಾಮನಿಗೊರಗಿದ ಅನೇಕ ಕಷ್ಟಗಳನ್ನು ತನ್ನ ಮಹತ್ ಶಕ್ತಿ ಹಾಗೂ ಬುದ್ದಿವಂತಿಕೆಯಿಂದ ನಿವಾರಣೆ ಮಾಡಿದವನೂ ಈತನೇ. ಇಂಥ ಮಹಾಮಹಿಮನನ್ನು ಇಡೀ ಭರತಖಂಡವೇ ಹಾಡಿ ಹೊಗಳುತ್ತಿದೆ. ಪುರಾಣಗಳು ಸ್ತುತಿಸುತ್ತಿವೆ. ಸೃಷ್ಟಿಕರ್ತನಾದ ಬ್ರಹ್ಮನಿಗೆ ನೇರವಾಗಿ ಪೂಜೆಯಿಲ್ಲ. ಆದರೆ ಮುಂದಿನ ಬ್ರಹ್ಮನಾಗುವ ಆಂಜನೇಯನಿಗೆ ಪೂಜೆ ಇದೆ. ಇವತ್ತು ಏಕಮುಖೀ ಹನುಮಂತನಿಂದ ಹಿಡಿದು ಸಹಸ್ರಮುಖಿ ಹನುಮಂತನವರೆಗೆ ಅನೇಕ ರೂಪಗಳಲ್ಲಿ ಅವನ ಉಪಾಸನೆ ನಡೆಯುತ್ತಿದೆ.
ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹನುಮಂತ ಮೂರ್ಛೆಹೋದ. ಇದಕ್ಕೆ ಕೋಪಗೊಂಡ ವಾಯು ಚಲಿಸದೆ ನಿಂತ. ಆಗ ಲೋಕದ ಚರಾಚರ ಪ್ರಾಣಿಗಳು ಮರಣ ಬಂದಂತಾಗಿ ತತ್ತರಿಸಿದವು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ಆ ಸಮಯದಲ್ಲಿ ದೇವಾನುದೇವತೆಗಳು ಆಂಜನೇಯನಿಗೆ ವರದಾನ ಮಾಡಿದರು. ಜೊತೆಗೆ ತನ್ನ ಬಲ, ವೀರ್ಯ, ಸಾಮರ್ಥ್ಯಗಳಿಂದ ಆಂಜನೇಯ ಗರುಡನಿಗೂ, ವಾಯುವಿಗೂ ಸಮಾನನಾದನು. ಯೋಗಶಾಸ್ತ್ರದ ಪರಮ ರಹಸ್ಯವೆಲ್ಲವನ್ನೂ ಅರಿತನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ.
ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ.
ಯತ್ರಯತ್ರ ರಘುನಾಥ ಕೀರ್ತನಂ
ತತ್ರತತ್ರ ಕೃತ ಮಸ್ತಕಾಂಜಲಿಂ
ಭಾಷ್ಫಾವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತಾ
ರಾಮಾಯಣ ಕಥೆಯಲ್ಲಿ ಹನುಮಂತನ ಪ್ರವೇಶವಾಗುವುದು ಕಿಷ್ಕಿಂಧಾಕಾಂಡದಲ್ಲಿ. ‘ಕಿಷ್ಕಿಂಧೆ’ ಎಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ. ಇಲ್ಲಿಂದ ಮುಂದೆ ಹನುಮನ ಸಾಧನೆಯ ಪ್ರಭಾವ ವಿಶೇಷವಾಗಿದೆ. ಆತನ ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿ ಎಲ್ಲವೂ ಕಂಡುಬರುವುದು ಇಲ್ಲಿಯೇ. ರಾಮಚಂದ್ರ ವನವಾಸಕ್ಕೆ ಬರಲು ಕೈಕೆ-ಮಂಥರೆಯರು ಹೇಗೆ ಕಾರಣರೋ ಹಾಗೆ ಆಂಜನೇಯ ರಾಮಚಂದ್ರನ ಆಗಮನಕ್ಕಾಗಿ ಅಂತರಂಗದಲ್ಲಿ ಹಾರೈಸುತ್ತಿದ್ದನಂತೆ. ಭಗವಂತ ಭಕ್ತನ ಹಾರೈಕೆಯನ್ನು ಈಡೇರಿಸಲು ಪ್ರತ್ಯಕ್ಷವಾಗುವಂತೆ ರಾಮಚಂದ್ರ ಆಂಜನೇಯನಿಗೆ ಕಂಡ. ಶ್ರೀರಾಮನ ಸಂದರ್ಶನವಾಗುವುದಕ್ಕೆ ಒಂದೆರೆಡು ದಿನ ಮುಂಚಿತವಾಗಿ ಆಂಜನೇಯ ಬೆಟ್ಟದ ಮೇಲೆ ಧ್ಯಾನ ಮಗ್ನನಾಗಿದ್ದ. ನಂತರ ಕಣ್ದೆರೆದು ನೋಡಿದರೆ ದೂರದಲ್ಲಿ ಪಂಪಾ ಸರೋವರದ ತೀರದಲ್ಲಿ ನಡೆದುಬರುತ್ತಿರುವ ನರಾಕೃತಿಗಳನ್ನು ಕಂಡನಂತೆ. ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ. “ಲಕ್ಶ್ಮಣಾ, ಇಲ್ಲಿಯೋ ಎಲ್ಲಿಯೋ ಕಾಣೆ! ಆದರೆ ನನ್ನ ಮನಸ್ಸಿಗೆ ಸುಳಿದಿದೆ ಇಲ್ಲಿಯೇ ನನ್ನ ಬಾಳ ಗೆಳೆಯನನ್ನು ಕಾಣುವೆನೆಂದು”. ಕೊನೆಗೆ ಎದುರಿಗಿದ್ದ ಕಲ್ಬಂಡೆಯನ್ನು ಉದ್ದೇಶಿಸಿ ಆಂಜನೇಯನನ್ನು ಎಚ್ಚರಿಸಿ ಎಬ್ಬಿಸುತ್ತಾನೆ. ಇಬ್ಬರೂ ಪರಸ್ಪರ ನೋಡಿದರು. ಒಂದಾದರು. ರಾಮ-ಆಂಜನೇಯ ಎಂಬ ಎರಡು ನದಿಗಳು ಕೂಡಿ ಒಂದಾಗಿ ಮುಂದುವರಿದಂತೆ ಆಯಿತು. ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮಾ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.
‘ಸೀತಾನ್ವೇಷಣೆ’ ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು ‘ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ’ ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ.
ಸೀತೆಯನ್ನು ಅರಸುತ್ತಾ ಹೋದಂತೆ ಸಂಪಾತಿಯಿಂದ, ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿರುವ ಸುದ್ದಿ ತಿಳಿಯುತ್ತದೆ. ಲಂಕೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಆಗ ಜಾಂಬವಂತ ಈ ಮಹಾಕಾರ್ಯಕ್ಕೆ ಆಂಜನೇಯನೇ ಸಮರ್ಥನೆಂದು ಹೇಳುತ್ತನೆ. ಉಳಿದ ಕಪಿವೀರರೆಲ್ಲಾ ಸಮುದ್ರ ಲಂಘನಕ್ಕೆ ತಮ್ಮತಮ್ಮ ಸಾಮರ್ಥವೆಷ್ಟು ಎಂದು ಜಂಭದ ಮಾತಾಡುತ್ತಿರುವಾಗ, ಆಂಜನೇಯ ಒಂದು ಬಂಡೆಯ ಮೇಲೆ ಕುಳಿತು ಕಣ್ಣಿನಲ್ಲೇ ಸಮುದ್ರದ ದೂರವನ್ನು, ತನ್ನ ಸಾಮರ್ಥ್ಯವನ್ನು ಅಳೆಯುತ್ತಿದ್ದನಂತೆ. ಆಗ ಜಾಂಬವಂತ
ಯೋಗಿ ನೀನಭ್ಯಾಸದಿಂದೆಯುಂ ತಪದಿಂದೆ, ಮೇಣ್
ಬ್ರಹ್ಮಚರ್ಯದ ಮಹಿಮೆಯಿಂದಷ್ಟಸಿದ್ಧಿಗಳ್
ನಿನಗಿಷ್ಟ ಕಿಂಕರರಲಾ, ಹನುಮಂತ ದೇವಾ ನೀಂ
ಧ್ಯಾನದಿಂದಿಕ್ಕಿಸಿದರಾವುದಾಗದೊ? ನಿನಗೆ
ಎಂದು ಅವನ ಮಹಿಮೆಯನ್ನು ಸ್ತುತಿಸಿ, ಶಕ್ತಿಯ ಅರಿವನ್ನು ನೆನಪಿಸುತ್ತಾನೆ. ಅವನಿಗೆ ಅಣಿಮಾದಿ ಸಿದ್ಧಿಗಳೆಲ್ಲಾ ತನ್ನಿಷ್ಟದಂತೆ ವರ್ತಿಸುವ ಸೇವಕರು. ಅವನು ಇಚ್ಛೆಯಿಂದ ಏನು ಬೇಕಾದರೂ ಸಾಧಿಸಬಲ್ಲ ಸಿದ್ಧಪುರುಷ. ಇಷ್ಟಾದರೂ ಯಾರಿಗೂ ಅದನ್ನು ತೋರಗೊಡದೆ ದೂರದ ಬಂಡೆಯ ಮೇಲೆ ಕುಳಿತಿದ್ದಾನೆ. ಅಹಂಕಾರವನ್ನೇ ಕಾಣದವನು ಹನುಮಂತ. ಜಾಂಬವಂತ ಹೇಳುವವರೆಗೆ ಆಂಜನೇಯ ಏಕೆ ಸುಮ್ಮನಿದ್ದ ಎಂದು ನಮಗೆ ಅನಿಸಬಹುದು. ಆದರೆ ತನ್ನ ನಿಶ್ಚಯವನ್ನು ಆತ ಮೊದಲೇ ಮಾಡಿದ್ದ. ಮಾಡುವುದನ್ನು ಆಡದೆಯೇ ಮಾಡಿ ತೋರಿಸುವ ಗುಣ ಇವನದು.
ಆಂಜನೇಯ ಸಮುದ್ರ ಲಂಘನ ಮಾಡುವ ಸನ್ನಿವೇಶ ಸುಂದರವಾಗಿದೆ. ತನ್ನ ಯೋಗಶಕ್ತಿಯನ್ನು ಜಾಗೃತಗೊಳಿಸಿ, ತನ್ನ ಜಡದೇಹವನ್ನು ಬಿಟ್ಟು ಚೇತನವಾಗಿ ರೂಪಾಂತರ ಹೊಂದಿದ. ಅದನ್ನು ನೋಡಿ ಕಪಿವೀರರೆಲ್ಲ ಜಯ-ಘೋಷವನ್ನು ಮಾಡಿದರು. ಅನಂತರ ಆಂಜನೇಯ ರುದ್ರರೂಪವನ್ನು ತಾಳಿ, ಮನುಷ್ಯನ ಕಲ್ಪನೆಯೇ ತತ್ತರಿಸುವಂತೆ ನೆಲಕ್ಕೂ ಬಾನಿಗೂ ಒಂದೇಯ ಆಗಿ ನಿಲ್ಲುತ್ತಾನೆ. ಹನುಮನ ಪಾದದ ಹೊಡೆತಕ್ಕೆ ಇಡೀ ಬೆಟ್ಟವೆ ಅಲುಗಾಡಿ ಪ್ರಾಣಿ-ಪಕ್ಷಿಗಳ ಚಿತ್ಕಾರದಿಂದ ಆ ವನಭೂಮಿ ಮಗುವಿನ ಕೈಯ್ಯ ಗಿಲಿಗಿಚ್ಚಿಯಾಯಿತಂತೆ. ಹನುಮತ ಆಗಸದಲ್ಲಿ ಹಾರುತ್ತಿದ್ದರೆ, ಆಕಾಶಕ್ಕೆ ಸಿಡಿದ ಪರ್ವತದಂತೆ ಕಾಣುತ್ತಿದ್ದ. ಹೀಗೆ ಸಾಹಸದಿಂದ ಲಂಕೆಯನ್ನು ತಲುಪಿ ಸೀತೆಗೆ ರಾಮನ ಮುದ್ರಿಕೆ ಕೊಟ್ಟ. ಭಗವಂತನ ಕೆಲಸವನ್ನು ಭಕ್ತಿಯಿಂದ ಮಾಡಿದ.
ಹನುಮಂತನ ಯೋಗಶಕ್ತಿಯನ್ನು ಗುರುತಿಸುವ ಮತ್ತೊಂದು ಸಂದರ್ಭ ನಿಕುಂಭಿಲಾ ಯಾಗ. ರಾವಣ ಮಗ ಇಂದ್ರಜಿತು ಈ ಯಾಗದಲ್ಲಿ ಶಕ್ತಿ ಸಂಪಾದಿಸಲು ತೊಡಗಿದ್ದ. ಅದನ್ನು ಕೆಡಿಸಲು ಲಕ್ಷ್ಮಣ ಬರುತ್ತಾನೆ. ಎಲ್ಲೆಲ್ಲೂ ಅಗ್ನಿಯೇ ಇರುತ್ತದೆ. ಅದನ್ನು ದಾಟುವಾಗ ಲಕ್ಷ್ಮಣ ಸೀದ ಶವದಂತಾಗುತ್ತಾನೆ. ಅವನನ್ನು ಬದುಕಿಸಲು ಇದ್ದುದು ಒಂದೇ ದಾರಿ. ಓಷಧೀ ಪರ್ವತದಲ್ಲಿದ್ದ ಸಂಜೀವಿನೀ ಬಳ್ಳಿ ತರುವುದು. ಅದನ್ನು ತರಲು ಆಂಜನೇಯ ಯೋಗಶಕ್ತಿಯನ್ನು ಬಳಸಬೇಕಾಯಿತು. ಸಾಮಾನ್ಯ ಮಾರ್ಗದಲ್ಲಿ ಸಂಚರಿಸಿದರೆ ಪರ್ವತಕ್ಕೆ ಹೋಗಿ ಬರಲು ಒಂದು ದಿನ ಬೇಕು. ಆಂಜನೇಯ ತನ್ನ ಯೋಗಶಕ್ತಿಯಿಂದ ಪರ್ವತಕ್ಕೆ ತೆರಳಿ ಸಂಜೀವಿನಿ ತಂದು ಲಕ್ಷ್ಮಣನಿಗೆ ಬಂದ ವಿಪತ್ತು ಪರಿಹಾರವಾಗಲು ಸಹಾಯ ಮಾಡುತ್ತಾನೆ.
ಆಂಜನೇಯ ಎಂತಹ ನೀತಿ ವಿಶಾರದ ಎಂಬುದನ್ನು ‘ವಿಭೀಷಣ ಶರಣಾಗತಿ’ಯಲ್ಲಿ ನೋಡಬೇಕು. ಅದು ಯುಧ್ಹದ ಸಂದರ್ಭ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಪಿವೀರರು ಚರ್ಚೆಮಾಡುತ್ತಿದ್ದರು. ಆಗ ಆಂಜನೇಯ ಎರಡೇ ಎರಡು ಮಾತಿನಿಂದ ತನ್ನ ಅಭಿಪ್ರಾಯವನ್ನು ರಾಮನಿಗೆ ತಿಳಿಸುತ್ತಾನೆ “ಮಹಾ ಪ್ರಭುವೆ ನಿನಗೆ ಬೃಹಸ್ಪತಿಯೂ ಸಮನಲ್ಲ ಆದರೂ ನಮ್ಮ ಸಲಹೆಗಳನ್ನು ಕೇಳುತ್ತಿರುವೆ. ವಿಭೀಷಣನನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇದು ಸರಿಯಾದ ಕಾಲ. ಅಣ್ಣನ ದುಷ್ಟತನವನ್ನು ನಿನ್ನ ಗುಣ ಎರಡನ್ನೂ ಕಂಡು ನಿನಗೆ ಶರಣಾಗಿದ್ದಾನೆ. ನನಗೇನೋ ಅವನು ಕಪಟಿಯಲ್ಲ ಎನ್ನಿಸುತ್ತಿದೆ. ಇದರ ಮೇಲೆ ನಿಮ್ಮ ಚಿತ್ತ” ಎಂದು ಹೇಳುತ್ತಾನೆ. ಅಪರಿಚೆತನನ್ನೂ ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ಈತನದು.
ಆಂಜನೇಯನ ಇಂಥಾ ಗುಣಗಳೇ ಇಂದಿಗೂ ಜನಸಾಮಾನ್ಯರಲ್ಲಿ ನೆಲೆಸಿದೆ. ಜನಪದರು, ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತಮ್ಮ ಊರುಗಳಾ ಮುಂದೆಯೇ ಹೋದನೆಂದು ನಂಬುತ್ತಾರೆ. ಮಕ್ಕಳು ರಕ್ಷೆಗಾಗಿ ಆಂಜನೇಯನ ತಾಯತ ಕಟ್ಟುತ್ತಾರೆ. ಊರಿನ ಗಡಿಯಲ್ಲಿ ಆಂಜನೇಯನವ ಗುಡಿ ಕಟ್ಟಿಸಿ ಊರ ರಕ್ಷಕನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡದ ಕವಿಗಳು ತಮ್ಮ ವಿಶೇಷ ದರ್ಶನವನ್ನು ಆಂಜನೇಯನ ಪಾತ್ರದಲ್ಲಿ ಕಾಣಿಸಿದ್ದಾರೆ.
ಇತ್ತೀಚೆಗೆ ಆಂಜನೇಯನನ್ನು ಕುರಿತು ಕನ್ನಡದಲ್ಲಿ ಒಂದು ಸ್ವತ೦ತ್ರ ಕಾವ್ಯವೇ ರಚನೆಯಾಗಿದೆ. ಇದುವರೆಗೆ ರಾಮಾಯಣದ ಕಥೆಯಲ್ಲಿ ಬರುವ ಹನುಮ೦ತಹ ಮಹತ್ವವನ್ನು ಹೇಳಿದರೆ ಇಲ್ಲಿ ಹನುಮ೦ತನ ಕಥೆಯೇ ‘ವತಾಲ್ಯಾಲಿಂಗನ’ ಎಂಬ ಕಾವ್ಯದಲ್ಲಿ ಮುಖ್ಯವಾಗಿದೆ. ಈ ಗದ್ಯ ಕಾವ್ಯವನ್ನು ಡಾ||ಎ.ಎಸ್.ವೇಣುಗೋಪಾಲರವರು ಬರೆದಿದ್ದಾರೆ. ರಾಮಾಯಣದ ಕಥೆಗೆ ವಿರಾಮವೇ ಇಲ್ಲ. ಕಾಲಕಾಲಕ್ಕೆ ಈ ಕಥೆ ಅನೇಕ ಕವಿಗಳಿಂದ ಪುನಃ ಸೃಷ್ಟಿಯಾಗುತ್ತಲೇ ಇದೆ. ‘ಮೌಲ್ಯಾಲಿ೦ಗನ’ ಕಾವ್ಯದಲ್ಲಿ ರಾಮಾಯಣದ ಆಂಜನೇಯನ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿದ್ದಾರೆ. ಈ ಕಾವ್ಯದಲ್ಲಿ ರಾಮಾಯಣದ ಕಿಷ್ಯಂಧಾ ಕಾಂಡದ ಕಥೆಯನ್ನು ಮಾರ್ಪಾಡು ಮಾಡಿಕೊ೦ಡು ಬರೆದಿದ್ದಾರೆ. ಈ ಕಾವ್ಯದ ಕಥೆ ವಿಶಿಷ್ವವಾಗಿದೆ. ಇದು ಪ್ರಾರ೦ಭವಾಗುವುದು ಅಂಜನಾದೇವಿಯ ಗರ್ಭವತರಣದಿಂದ. ಜನನಿಯೇ ಮಗುವಿಗೆ ಮೊದಲ ಗುರುವಾಗುತ್ತಾಳೆ. ಆ ಮಗು ಅದೆಷ್ಟು ಚುರುಕಾಗಿತ್ತೆಂದರೆ ಅದರ ಪ್ರೌಢಿಮೆಗೆ ಎಲ್ಲಿರೂ ಬೆರಗಾಗುತ್ತಾರೆ. ಕಿಷ್ಯ೦ಧೆಯ ನಿಸರ್ಗದ ಜೊತೆಯಲ್ಲೇ ಅವನ ಬಾಲಲೀಲೆ. ದಿನನಿತ್ಯದ ಅಭ್ಯಾಸ. ಒಂದು ರಾತ್ರಿಯ೦ತೂ ವಾಯುದೇವನೇ ಬ೦ದು ಆಂಜನೇಯನಿಗೆ ಸೃಷ್ಟಿಯ ರಹಸ್ಯ ಬೋಧಿಸುತ್ತಾನೆ. ಸೂರ್ಯದೇವನೂ ಅನೇಕ ವಿದ್ಯೆಯನ್ನು ಬೋಧಿಸುತ್ತಾನೆ.
ಬಾಲ್ಯದಲ್ಲೇ ಪ್ರಾಬುದ್ಧನಾದ ಆ೦ಜನೇಯ ಉತ್ತರ ದೇಶದಿ೦ದ ದಕ್ಷಿಣ ಕಡೆಗೆ ಬರುವ ಅಗಸ್ತ್ಯಮನಿಯನ್ನು ನೋಡುತ್ತಾನೆ. ಆದರೆ ಆಂಜನೇಯನ ತೇಜಸ್ವನ್ನು ಕ೦ಡಾಗ ಅಗಸ್ತ್ಯರಿಗೇ ಆಶ್ಚರ್ಯವಾಗುತ್ತದೆ. ಆ೦ಜನೇಯ ಕೇಳುತ್ತಾನೆ, ‘ಪುಣ್ಯಭೂಮಿಯೆ೦ದು ಹೆಸರಾದ ಉತ್ತರ ಭಾರತವನ್ನು ತೊರೆದು ಬರಲು ಕಾರಣವೇನು’ ಎಂದು. ಅದಕ್ಕೆ ಅವರು “ದಕ್ಷಿಣದ ಭಾಷೆಗಳ ಸತ್ಯ ಸೌಂದರ್ಯಗಳ ಹೃದಯವನ್ನು ಪಿಡಿದಾಡುವ ಹುಚ್ಚು ಹಂಬಲ ನನ್ನನಿತ್ತಲು ಸೆಳೆಯಿತು” ಎಂದು ಹೇಳುತ್ತಾರೆ. ಅಗಸ್ತ್ಯರಂತಹ ಖುಷಿಗಳು ಈ ನಾಡಿನ ಭಾಷೆ, ಸಂಸೃತಿಗಳನ್ನು ತಿಳಿಯಬೇಕೆಂದು ಹೇಳುವಲ್ಲಿ ಈ ನಾಡಿನ ಹಿರಿಮೆ ವ್ಯಕ್ತವಾಗುತ್ತದೆ.
ಈ ಕಾವ್ಯದಲ್ಲಿ ಬೇರೆ ರಾಮಾಯಣಗಳಲ್ಲಿ ಅಪೂರ್ವವಾದ ಒಂದು ದೃಶ್ಯವಿದೆ. ಲಂಕೆಯ ಯುದ್ಧ ಮುಗಿಯುತ್ತಿದಂತೆ ಸೀತಾ ರಾಮ ಲಕ್ಷ್ಮಣರು ಭರತನಿಗೆ ನೀಡಿದ್ದ ವಾಗ್ದಾನ ಈಡೇರಿಸಲು (೧೪ ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ) ನಂದಿಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ ಬರುವಾಗ ಅವರು ತಮಗಾಗಿ ಸೇವೆ ಮಾಡಿದ ವಾನರವೀರರಿಗೆ ತಮ್ಮ ಕೃತಜ್ನತೆಯನ್ನು ಸಲ್ಲಿಸಬೇಕಾದುದು ಅವರ ಕರ್ತವ್ಯವಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ‘ಲೋಕದಲ್ಲಿ ಮಾನವರಿಗೆ ಕೃತಜ್ನತೆ ಎಂಬುದೇ ಪರಮ ಮೌಲ್ಯ’. ಎಂದು ಭಾವಿಸಿದ ರಾಮ. ಅಯೋಧ್ಯೆಯಲ್ಲಿ ರಾಮನ ಪಟ್ಟಭಿಷೇಕ ಮುಗಿದ ಮೇಲೆ ಸೀತಾ ಲಕ್ಷ್ಮಣರ ಸಮೇತ ಕಿಷ್ಯಂಧೆಗೆ ಬರುತ್ತಾನೆ. ಅಲ್ಲಿ ಸೀತಾ ರಾಮ ಲಕ್ಶ್ಮಣರಿಗೆ ಸಂಭ್ರಮದ ಸ್ವಾಗತವಿತ್ತು. ಆದರೆ ಸುಗ್ರೀದ ಸಹ ಅಧಿಕಾರ ಬಂದೊಡನೆ ಸಾನಮತ್ತನಾಗಿ, ಕಾಮಿನೀಲೋಲನಾಗಿ ಮೆರೆಯುತ್ತಿದ. ಇದನ್ನು ಕಂಡ ಲಕ್ಶ್ಮಣನಿಗೆ ದುಃಖವಾಗುತ್ತದೆ. ಆದರೆ ಆಂಜನೇಯ ಬ್ರಹ್ಮಚಾರಿಯಾಗಿ ಮೆರೆದವನು. ಕಿಷ್ಯಂಧೆಯ ಅರಮನೆಯ ವಿಲಾಸ ವಿಕೃತಿಗಳನ್ನು ಮನ್ನಿಸುವಂತೆ ಕೇಳಿಕೋಳುತ್ತಾನೆ. ಎಲ್ಲ ದೇಶದಲ್ಲೂ ಹೀಗೆಯೇ ಅಲ್ಲವೆ. ಇಡೀ ಭರತ ಖಂಡದ ದೃಶ್ಯವೇ ಇಂದಿಗೂ ಹೀಗೆಯೇ ಆಗಿದೆ ಎನ್ನುತ್ತಾರೆ ಕವಿ.
ಈ ಕಾವ್ಯದಲ್ಲಿ ಬಹಳ ವಿಶೇಷವಾದದ್ದು ಏನೆಂದರೆ ಆಂಜನೇಯ ಮತ್ತು ಕನ್ನಡನಾಡು. ಇದು ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದೆ. ಕನ್ನಡ ನಾಡಿನ ಸೌಂದರ್ಯ, ಅನನ್ಯಪ್ರೇಮ, ಕಾಡು, ಬೆಟ್ಟ, ನದಿಗಳು, ಹಿರಿಯರ ನಡೆನುಡಿ-ಸ್ನೇಹ, ಕಾರ್ಯ ಸಾಧನೆ ಇವೆಲ್ಲವು ಆಕರ್ಷಸುತ್ತದೆ.
ಆಂಜನೇಯನನ್ನು ಇಲ್ಲಿ ಮುಖ್ಯವಾಗಿ ‘ಕನ್ನಡದ ಕುವರ’ನೆಂದೇ ವರ್ಣಿಸುತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರುಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ- ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗಿದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಠಿಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮೆ. ಒಮ್ಮೆಯಂತೂ ಸೀತೆಯನ್ನು ಕಂಡ ಆಂಜನೇಯ ಮಗುವಾಗಿ ಅವಳ ತೊಡೆಯ ಮೇಲೆ ಮಲಗಬೇಕೆಂದು ಬಯಸಿದನಂತೆ. ರೂಪರಾವರ್ತನ ವಿದ್ಯೆಯನ್ನು ಪಡೆದಿರುವ ಆಂಜನೇಯ ತನ್ನ ರೂಪವನ್ನು ಕಿರಿದಾಗಿಸಿಕೊಂಡು ಶಿಶುವಾಗಿ ಸೀತೆಯ ತೊಡೆಯ ಮೇಲೆ ಮಲಗಿ ಆಕೆಯ ಮುಖವನ್ನು ಮಾತೃಪ್ರೇಮದಿಂದ ನೋಡತೊಡಗಿದ. ಮಹಾಯೋಗಿಯಾದವನು ವಾತ್ಸಲ್ಯವೆಂದ ಸುಧೆಯನ್ನು ಸವಿಯುತ್ತಾ ತೊದಲು ನುಡಿಯಲ್ಲಿ ಅಮ್ಮ ಅಮ್ಮ ಎಂದು ನುಡಿದನಂತೆ. ಈ ಸನ್ನಿವೇಶದಲ್ಲಿ ಸೀತೆಯು ಮೈಮರೆತಳು. ತಾನು ಲೋಕಮಾತೆ, ರಾಮಚಂದ್ರನ ಪತ್ನಿ, ಅಯೋಧ್ಯೆಯ ರಾಣಿ ಎನ್ನುವುದನ್ನೆಲ್ಲ ಮರೆತು ಕೇವಲ ಒಬ್ಬ ತಾಯಿಯಾಗಿ ಆ ಶಿಶುವನ್ನು ಅಕ್ಕರೆಯಿಂದ ಎತ್ತಿ ಮುದ್ದಾಡಿದಳು ನಲಿದಳು. ಇದನ್ನು ಕಂಡ ರಾಮ ಹೇಳುತ್ತಾನೆ, ‘ಜನ ಮನೆ ಮನೆಗಳಲಿ ಈ ವೀರ ಮಾರುತಿಯಂತೆ ಸ್ನೇಹ-ಪ್ರೀತಿ-ಸಾಹಸ ಎಲ್ಲ ಗುಣಗಳನ್ನು ಪಡೆದ ಮಕ್ಕಳು ಬೆಳೆಯಲಿ’ ಎಂದು ಹೇಳುತ್ತಾ ಅವನ್ನು ಮಾರುತಿಯನ್ನು ಬಾಚಿ ತಬ್ಬಿದನಂತೆ.
ಈ ಕಾವ್ಯದ ಮೂಲಕ ಕವಿ ಹೇಳುತ್ತಾರೆ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ಎಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲೆ ಸ್ಥಾನ ನೀಡಿದೆ. ಈತನ ಚರಿತ್ರೆಯಲ್ಲಿ ಬರುವ ಅದ್ಭುತಗಳನ್ನು ಅರ್ಥ ಮಾಡಿಕೊಂಡರೆ ನಾವೂ ಪವಿತ್ರರಾಗುತ್ತೇವೆಂದೇ ಹೇಳುತ್ತಾರೆ.
ಯುಗಾದಿ
ಯುಗಾದಿ ಬ್ರಹ್ಮಾಂಡ ನಿರ್ಮಾಣದ ಮೊದಲ ದಿನ
ಯುಗಾದಿ ಪಾಡ್ಯ ಎಂದರೆ ಬ್ರಹ್ಮದೇವನು ಬ್ರಹ್ಮಾಂಡದ ನಿರ್ಮಿತಿಯನ್ನು ಮಾಡಿದ ದಿನ. ಬ್ರಹ್ಮದೇವನ ಹೆಸರಿನಿಂದಲೇ ‘ಬ್ರಹ್ಮಾಂಡ’ ಈ ಹೆಸರು ಬಂದಿದೆ. ಬ್ರಹ್ಮತತ್ತ್ವವು ಸತ್ಯಯುಗದಲ್ಲಿ ಮೊದಲ ಬಾರಿಗೆ ಯುಗಾದಿ ಪಾಡ್ಯದ ದಿನ ನಿರ್ಗಣದಿಂದ ನಿರ್ಗಣ-ಸಗುಣ ಮಟ್ಟಕ್ಕೆ ಬಂದು ಪೃಥ್ವಿಯಲ್ಲಿ ಕಾರ್ಯನಿರತವಾಯಿತು. ಸತ್ಯ ಮತ್ತು ತ್ರೇತಾಯುಗಗಳಲ್ಲಿ ಬ್ರಹ್ಮದೇವನ ಬಗ್ಗೆ ಅನೇಕ ಋಷಿಮುನಿಗಳಿಗೆ ಮತ್ತು ದಾನವರಿಗೆ ತಿಳಿದಿತ್ತು. ದ್ವಾಪರಯುಗದ ನಂತರ ಬ್ರಹ್ಮದೇವನ ಮಹತ್ವವು ಕ್ರಮೇಣ ಕಡಿಮೆಯಾಯಿತು. ಕಲಿಯುಗದಲ್ಲಿರುವ ಜೀವಗಳಿಗೆ ಸೃಷ್ಟಿಕರ್ತ ಬ್ರಹ್ಮದೇವನ ಬಗ್ಗೆ ಸ್ವಲ್ಪವೂ ಮಾಹಿತಿಯಿಲ್ಲ. ಬ್ರಹ್ಮತತ್ತ್ವದ ಲಾಭವಾಗಬೇಕಾದರೆ ಜೀವಗಳಲ್ಲಿ ಶೇ. 40ರಷ್ಟು ಭಾವವಿರಬೇಕು. ಜೀವಗಳಲ್ಲಿ ಭಾವವಿದ್ದರೆ ಮಾತ್ರ ಅವರಿಗೆ ಪ್ರತಿಯೊಂದು ಹಬ್ಬ ಮತ್ತು ಈಶ್ವರನಿಂದ ಆಯಾಯ ಸಮಯದಲ್ಲಿ ಹರಡುವ ಜ್ಞಾನಲಹರಿ, ಶಕ್ತಿ, ಚೈತನ್ಯ, ಸತ್ತ್ವಲಹರಿ ಮತ್ತು ವಿಶಿಷ್ಟ ದೇವತೆಗಳ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೈಸರ್ಗಿಕ ಕಾರಣಗಳು
ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ (ಸಂಪಾತಬಿಂದು ಎಂದರೆ ಮಕರ ಮತ್ತು ಕರ್ಕಾಟಕ ವೃತ್ತಗಳು ಪರಸ್ಪರ ಛೇದಿಸುವಂತಹ ಬಿಂದು) ಮತ್ತು ವಸಂತಋತು ಪ್ರಾರಂಭವಾಗುತ್ತದೆ. ‘ಎಲ್ಲ ಋತುಗಳಲ್ಲಿ ಕುಸುಮಾಕರಿ ವಸಂತಋತುವು ನನ್ನ ವಿಶೇಷ ಶಕ್ತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (10:35) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ಹವಾಗುಣವಿರುತ್ತದೆ. ಶಿಶಿರಋತುವಿನಲ್ಲಿ ಮರಗಳ ಎಲೆಗಳು ಉದುರಿದರೆ, ಪಾಡ್ಯದ ಹೊತ್ತಿಗೆ ಮರಗಳಿಗೆ ಹೊಸ ಚಿಗುರು ಬರುತ್ತಿರುವುದರಿಂದ ವೃಕ್ಷ-ಬಳ್ಳಿಗಳು ಚೈತನ್ಯಮಯವಾಗಿ ಕಾಣುತ್ತವೆ.
ಐತಿಹಾಸಿಕ ಕಾರಣಗಳು
ರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟಪ್ರವೃತ್ತಿಯುಳ್ಳ ರಾಕ್ಷಸರನ್ನು ಮತ್ತು ರಾವಣನನ್ನು ವಧಿಸಿ, ಶ್ರೀರಾಮಚಂದ್ರನು ಅಯೋಧ್ಯೆಗೆ ಈ ದಿನದಂದೇ ಹಿಂತಿರುಗಿದ್ದನು. ಶಕರು, ಹೂಣರನ್ನು ಸೋಲಿಸಿ ವಿಜಯವನ್ನು ಸಂಪಾದಿಸಿದ್ದೂ ಇದೇ ದಿನವಾಗಿದೆ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು; ಏಕೆಂದರೆ ಶಾಲಿವಾಹನನು ಈ ದಿನದಂದೇ ಶತ್ರುಗಳನ್ನು ಜಯಿಸಿದನು.
ಹಬ್ಬದ ಮಹತ್ವ
ಕ್ರಿಸ್ತಶಕವು ಜನವರಿ 1ರಿಂದ, ಆರ್ಥಿಕ ವರ್ಷವು ಏಪ್ರಿಲ್ 1ರಿಂದ, ಹಿಂದೂವರ್ಷವು ಚೈತ್ರ ಶುದ್ಧ ಪಾಡ್ಯದಿಂದ, ವ್ಯಾಪಾರೀವರ್ಷವು ಕಾರ್ತಿಕ ಶುದ್ಧ ಪಾಡ್ಯದಿಂದ, ಶೈಕ್ಷಣಿಕ ವರ್ಷವು ಜೂನ್ನಿಂದ ಪ್ರಾರಂಭವಾಗುತ್ತದೆ. ಈ ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯವಾದುದೆಂದರೆ ಚೈತ್ರಶುದ್ಧ ಪಾಡ್ಯ. ಜನವರಿ 1ರಂದು ವರ್ಷಾರಂಭ ಏಕೆ ಮಾಡಬೇಕು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಚೈತ್ರ ಶುದ್ಧ ಪಾಡ್ಯದಂದು ವರ್ಷಾರಂಭ ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ಅಧ್ಯಾತ್ಮಿಕ ಕಾರಣಗಳು
ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಆವಶ್ಯಕತೆ ಇಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭಮುಹೂರ್ತವೇ ಆಗಿರುತ್ತದೆ.
ಅಭ್ಯಂಗಸ್ನಾನ
ಯುಗಾದಿಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು, ಮೊದಲು ಅಭ್ಯಂಗಸ್ನಾನ ಮಾಡಬೇಕು. ದೇಹಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತೀಡಿ ಚರ್ಮದಲ್ಲಿ ಸೇರುವಂತೆ ಮಾಡಿ, ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ; ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿದರೆ, ಅಭ್ಯಂಗಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆಯನ್ನು ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಲಕರವೆಂದು ಬಿಸಿನೀರಿನ ಸ್ನಾನವನ್ನು ಹೇಳಲಾಗಿದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆಯು ಉಳಿಯುತ್ತದೆ. ಆದುದರಿಂದ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು. (ಸ್ನಾನದ ನಂತರ ಎಣ್ಣೆ ಹಚ್ಚುವುದು ಯೋಗ್ಯವಲ್ಲ)
ದೇಶಕಾಲಕಥನ
ಅಭ್ಯಂಗಸ್ನಾನವನ್ನು ಮಾಡುವಾಗ ದೇಶಕಾಲಕಥನ ಮಾಡಬೇಕು. ದೇಶಕಾಲಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟ ್ಯೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ, ಈ ಮನ್ವಂತರದಲ್ಲಿನ ಎಷ್ಟನೆಯ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ – ಇವೆಲ್ಲವುಗಳ ಉಲ್ಲೇಖವು ದೇಶಕಾಲಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ ಮತ್ತು ಉಳಿದ ಕಾಲವು ಎಷ್ಟು ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ. ನಾನು ಬಹಳ ದೊಡ್ಡವನು – ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ. ಆದರೆ ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸಣ್ಣವರು ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗಸ್ನಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. 1. ಸಂವತ್ಸರಾರಂಭ, 2. ವಸಂತೋತ್ಸವದ ಮೊದಲನೆಯ ದಿನ, ಅಂದರೆ ಫಾಲ್ಗುಣ ಬಹುಳ ಪ್ರತಿಪದೆ ಮತ್ತು 3. ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದ.
ಪದೆ
.
ತೋರಣ
ಸ್ನಾನವಾದ ನಂತರ ಮಾವಿನತೋರಣವನ್ನು ತಯಾರಿಸಿ ಕೆಂಪುಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. (ಕೆಂಪುಬಣ್ಣವುಶುಭದಾಯಕವಾಗಿದೆ.)ಪೂಜೆಮೊದಲು ನಿತ್ಯಕರ್ಮ ಪೂಜೆ ಮಾಡಬೇಕು . ಶಾಂತಿಯ ಆರಂಭದಲ್ಲಿ ಬ್ರಹ್ಮದೇವನ ಪೂಜೆ ಮಾಡಬೇಕು. ಏಕೆಂದರೆ ಬ್ರಹ್ಮನು ಸೃಷ್ಟಿಯನ್ನುಈ ದಿನವೇ ನಿರ್ವಿುಸಿದನು. ಪೂಜೆಯಲ್ಲಿಅವನಿಗೆ ದವನವನ್ನು ಅರ್ಪಿಸಬೇಕು.ಅನಂತರ ಹೋಮಹವನ ಮತ್ತು ಬ್ರಾಹ್ಮಣರಿಗೆಸಂತರ್ಪಣೆಯನ್ನು ನೀಡಬೇಕು. ತರುವಾಯ ಅನಂತರೂಪಗಳಲ್ಲಿ ಅವತರಿಸುವ ವಿಷ್ಣುವಿನಪೂಜೆ ಮಾಡಬೇಕು. ‘ನಮಸ್ತೇ ಬ್ರಹ್ಮರೂಪಾಯವಿಷ್ಣವೇ ನಮಃ |’ ಈ ಮಂತ್ರವನ್ನು ಹೇಳಿನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆದಕ್ಷಿಣೆ ಕೊಡಬೇಕು, ಸಾಧ್ಯವಾದರೆ ಇತಿಹಾಸ, ಪುರಾಣಗಳು ಮುಂತಾದ ಗ್ರಂಥಗಳನ್ನು ಬ್ರಾಹ್ಮಣರಿಗೆ ದಾನ ಕೊಡಬೇಕು. ಈ ಶಾಂತಿವಿಧಿಯನ್ನು ಮಾಡುವುದರಿಂದ ಸರ್ವಪಾಪಗಳ ನಾಶವಾಗುತ್ತದೆ,
ಉತ್ಪಾತ ಘಟಿಸುವುದಿಲ್ಲ, ಆಯುಷ್ಯವು ವೃದಿಟಛಿಯಾಗುತ್ತದೆ ಮತ್ತು ಧನಧಾನ್ಯಸಮೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.’ ಸಂವತ್ಸರ ಪೂಜೆ ಮಾಡಿದರೆ ಸರ್ವಪಾಪಗಳು ನಾಶವಾಗುತ್ತವೆ, ಆಯುಷ್ಯವು ವೃದ್ಧಿಯಾಗುತ್ತದೆ,ಸೌಭಾಗ್ಯವು ಹೆಚ್ಚಿ ಶಾಂತಿಯು ಲಭಿಸುತ್ತದೆ. ಈ ದಿನದಂದು ಆ ವಾರದ ದೇವತೆಯ ಪೂಜೆಯನ್ನೂ ಮಾಡಬೇಕು. ಬ್ರಹ್ಮಧ್ವಜವನ್ನು ನಿಲ್ಲಿಸುವುದು ರಾವಣವಧೆಯ ನಂತರ ಅಯೋಧ್ಯೆಗೆ ಮರಳುವ ರಾಮನ ವಿಜಯದ ಮತ್ತು ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸುತ್ತಾರೆ.
ವಿಜಯದ ಪ್ರತೀಕವು ಉನ್ನತವಾಗಿರುತ್ತದೆ. ಆದುದರಿಂದ ಬ್ರಹ್ಮಧ್ವಜವನ್ನು ಎತ್ತರದಲ್ಲಿ ಇರಿಸುತ್ತಾರೆ. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ನೂತನ ವರ್ಷದ ಸ್ವಾಗತಕ್ಕಾಗಿ ಎಲ್ಲರೂ ಉತ್ಸಾಹಭರಿತರಾಗಿರುತ್ತಾರೆ.
ಇದಕ್ಕೆ ‘ಬ್ರಹ್ಮಧ್ವಜಾಯ ನಮಃ ’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ವಿುಸಿದ ಕಾರಣ ಧರ್ಮಶಾಸಣಉದಲ್ಲಿ ಈ ಧ್ವಜವನ್ನು ಬ್ರಹ್ಮಧ್ವಜ ಎಂದು ಕರೆಯಲಾಗಿದೆ. ಕೆಲವರು ಇದನ್ನು ಇಂದ್ರಧ್ವಜವೆಂದೂ ಕರೆಯುತ್ತಾರೆ. ಬ್ರಹ್ಮಧ್ವಜದ ಮುಖಾಂತರ ವಾತಾವರಣದಲ್ಲಿನ ಪ್ರಜಾಪತಿ-ಸಂಯುಕ್ತ ಲಹರಿಗಳು ಈ ಕಲಶದ ಮಾಧ್ಯಮದಿಂದ ಮನೆಯಲ್ಲಿ ಪ್ರವೇಶಿಸುತ್ತವೆ (ಇದು ದೂರದರ್ಶನ ಯಂತ್ರದ ಆಂಟೆನಾ ಮಾಡುವ ಕಾರ್ಯದಂತೆ ಇದೆ.) ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು; ಹೀಗಾಗಿ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿರುವ ಕಲಶವು ಕುಡಿಯುವ ನೀರಿನ ಮೇಲೆ ಅಂಥ ಸಂಸ್ಕಾರಗಳನ್ನೇ ಮಾಡುತ್ತವೆ. ಆದುದರಿಂದ ನಮಗೆ ವರ್ಷವಿಡೀ ಪ್ರಜಾಪತಿ ಲಹರಿಗಳು ಪ್ರಾಪ್ತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.
ಪಂಚಾಂಗಶ್ರವಣ ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ನೂತನ ವರ್ಷದ ಪಂಚಾಂಗದ ಅರ್ಥಾತ್ ವರ್ಷಫಲದ ಶ್ರವಣ ಮಾಡುತ್ತಾರೆ. ಈ ಪಂಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ: ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದಿಟಛಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶವಾಗುತ್ತದೆ, ಯೋಗಶ್ರವಣದಿಂದ ರೋಗ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯವು ಸಿದ್ಧಿಯಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ

No comments:
Post a Comment