✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday, 3 May 2021

ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ"-ನಿಮ್ಮ ಶರೀರದಲ್ಲಿ ಈ ಅಂಶ ಇದ್ದರೆ ಸೋಂಕು ತಗುಲುವುದು ಹೆಚ್ಚು ಕಮ್ಮಿ ಗ್ಯಾರಂಟಿ - ಆ ಅಂಶವನ್ನು ಇಲ್ಲವಾಗಿಸಿದರೆ ಸೋಂಕಿನ ಅಪಾಯದಿಂದ ಪಾರಾದಂತೆಯೇ

ಅಮೃತಾತ್ಮರೇ ನಮಸ್ಕಾರ 🙏
04.05.2021, 

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ  ಸಂಚಿಕೆ: 59
••••••••••
"ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ"-

ನಿಮ್ಮ ಶರೀರದಲ್ಲಿ ಈ ಅಂಶ ಇದ್ದರೆ ಸೋಂಕು ತಗುಲುವುದು ಹೆಚ್ಚು ಕಮ್ಮಿ ಗ್ಯಾರಂಟಿ - ಆ ಅಂಶವನ್ನು  ಇಲ್ಲವಾಗಿಸಿದರೆ ಸೋಂಕಿನ ಅಪಾಯದಿಂದ ಪಾರಾದಂತೆಯೇ 
•••••••••••••••••••••••••••
ಇಂದು-
ಅಲ್ಪ ಶಾರೀರಿಕ ಶ್ರಮ ಮಾಡುವ ನಾವುಗಳು ತಿನ್ನುವ ಪದಾರ್ಥಗಳಲ್ಲಿರುವ ಶಕ್ತಿಯುತ ರಾಸಾಯನಿಕಗಳ ಆಧಾರದಲ್ಲಿ ಶರೀರಕ್ಕೆ ಒಳ್ಳೆಯದೆಂದು ಸೇವಿಸುತ್ತಿದ್ದೇವೆ!!
ಅದು ಜೀರ್ಣವಾಗಿ ಕರಗಿ ಇತ್ತ ಶರೀರದ ರಕ್ತ-ಮಾಂಸ-ಮೂಳೆಗಳಾಗಿ ಮಾರ್ಪಾಡೂ ಆಗದೇ, ಕರಗದೇ ಅತ್ತಕಡೆ ಮಲರೂಪ ಹೊಂದಿ ಹೊರಗೂ ಹೋಗದೇ(ಮಲಬದ್ಧತೆ ಉಂಟಾಗಿ) ಅತಂತ್ರ ಸ್ಥಿತಿಯಲ್ಲಿ ಉಳಿಯುತ್ತದೆ. 

ಕರಗದೇ ಇರುವ ಈ ಆಹಾರದ ರಾಸಾಯನಿಕಗಳು ನಿಧಾನವಾಗಿ ಒಳಗೊಳಗೇ ಹಳಸುವ, ಹುಳಿಯನ್ನುಂಟು ಮಾಡುವ, ಅಂಟು ಅಂಟಾದ ಲಕ್ಷಣವುಳ್ಳ "ಆಮವಿಷ" ಎಂಬ ಹೆಸರಿನಿಂದ ಶರೀರದಲ್ಲಿ ಅಲ್ಲಲ್ಲಿ ಸಂಚಯಗೊಳ್ಳುತ್ತದೆ. 
ಇದು ಎಲ್ಲಿ ಎಲ್ಲಿ ಸಂಚಯವಾಗುತ್ತದೋ ಅಲ್ಲಲ್ಲಿಯ ಹೆಸರನ್ನು ಪಡೆಯುತ್ತದೆ.
ಉದಾಹರಣೆಗೆ
ಆಮರಸವಿಷ
ಆಮರಕ್ತವಿಷ
ಆಮಮಾಂಸವಿಷ
ಆಮಪುಪ್ಪುಸವಿಷ
ಆಮಯಕೃತ್ ವಿಷ

ಹೀಗೆ ಇದರ ವ್ಯಾಪ್ತಿ ಸರ್ವಶರೀರಗತವಾಗಿದೆ.

ಸಾಮಾನ್ಯವಾಗಿ ಇದು ಅಂಟು‌ ಅಂಟಾದ ಕಫದ ರೂಪದಲ್ಲಿರುತ್ತದೆ. ಈ ಅಂಶವೇ ಸೋಂಕಿಗೆ ಬಲವಾದ ಆಹಾರವಾಗಿಬಿಡುತ್ತದೆ!!! ಎಚ್ಚರ.

ಶರೀರದಲ್ಲಿ ಈ ಅಂಶವು ಇದ್ದಷ್ಟೂ ದಿನ ಯಾವುದೇ ರೀತಿಯ ಸೋಂಕು ಸುಲಭವಾಗಿ ತಗುಲುತ್ತದೆ.

ಏಕೆಂದರೆ
ಯಾವುದೇ ಸೋಂಕು ನಮ್ಮ ಶರೀರದಲ್ಲಿ ಠಿಕಾಣಿ ಹೂಡಿ ಬೆಳೆಯಬೇಕಾದರೆ ಅದಕ್ಕೆ ನಿರಂತರ ಆಶ್ರಯ ಒದಗಿಸಲು ಮತ್ತು ಆಹಾರ ಒದಗಿಸಿ ಅದರ ಸಂತತಿ ವರ್ಧಿಸಲು ಒಂದು ಅಂಶವಂತೂ ಬೇಕೇ ಬೇಕು. ಅದೇ ಈ "ಅಂಟು ಅಂಟಾದ ಕಫರೂಪದ ಆಮವಿಷ"!!!


ಶರೀರಕ್ಕೆ ಬೇಡವಾದ ಆಹಾರದಲ್ಲಿನ ಪ್ರಬಲ ಅಥವಾ ಶಕ್ತಿಯುತ ರಾಸಾಯನಿಕ ಸಂಘಟನೆಗಳ ಗುಂಪನ್ನು "ಆಮವಿಷ" ಎನ್ನುತ್ತಾರೆ. 

ಅರ್ಧಸತ್ಯ ನಂಬಿ ಹಾಳಾಗುತ್ತಿದೆ ನಮ್ಮ ಶರೀರ-
ಹೌದು, ಅತ್ಯುತ್ತಮ ಪೋಷಕಾಂಶಗಳ ಹೆಸರಿನಿಂದ ನಾವಿಂದು ಸೇವಿಸುತ್ತಿರುವ
ಆಹಾರಗಳ ಪಟ್ಟಿಯನ್ನು ಮಾಡಿದರೆ ಹೆಚ್ಚು ಕಮ್ಮಿ ಅವುಗಳೇ ಈ ಸೋಂಕಿಗೆ ಆಹಾರ ಒದಗಿಸುತ್ತಿರುವ ಅನಾಹುತಕಾರಿ ಆಹಾರಗಳು.

ವಿಶೇಷವಾಗಿ ಗಮನಿಸಿ:
ಯಾವುದೇ ಶಕ್ತಿಯುತ ಆಹಾರವೂ ಸಹ ಸುಮ್ಮ ಸುಮ್ಮನೇ  ರಕ್ತ-ಮಾಂಸ-ಮೂಳೆಗಳಾಗಿ ಬದಲಾಗುವುದಿಲ್ಲ...!

ಈ ಶಕ್ತಿಯುತ ಆಹಾರ ಉತ್ತಮ ಅಂಶಗಳಾಗಿ ಬದಲಾಗಬೇಕಾದರೆ ಕೆಲಸವೆಂಬ, ಶಾರೀರಿಕ ಶ್ರಮವೆಂಬ ಶರೀರ ವರ್ಧಕ ವ್ಯಾಯಾಮವು ಅತೀ ಅಗತ್ಯ.

ಹಾಗೆಂದು ಸೋಂಕು ಉಂಟಾದಾಗ ಶಾರೀರಿಕ ಶ್ರಮದ ಕಾರ್ಯಗಳನ್ನು ಮಾಡಬೇಡಿ ಅದು ಮತ್ತಷ್ಟೂ ಹಾನಿಕರ.

    •••••••|•|•|•|•|•|•|•|•|•••••••

ಈ ಆಮ ಅಂಶವನ್ನು ನಿವಾರಿಸಿಕೊಂಡರೆ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಕಡಿಮೆ ಇಲ್ಲವೆಂದೇ ಹೇಳಬಹುದು.

    •••••••|•|•|•|•|•|•|•|•|•••••••

ಆಮ ವಿಷ ನಿವಾರಿಸಿಕೊಳ್ಳುವ ಸರಳ ಉಪಾಯಗಳು:
★  ಆಮವಿಷವನ್ನು ಕರಗಿಸುವ ತನ್ಮೂಲಕ ಯಾವುದೇ ಸೋಂಕಿಗೂ ಬದುಕುಳಿಯಲು ಬೇಕಾಗುವ ಆಹಾರವನ್ನೇ ಇಲ್ಲವಾಗಿಸುವ ಅತ್ಯಂತ ಸಮರ್ಥ "ಆಯುರ್ವೇದ ಕಷಾಯಗಳನ್ನು" ನಿತ್ಯವೂ ಸೇವಿಸುವುದು. 

ಕಷಾಯಗಳ ವೈಜ್ಞಾನಿಕ ಕಾರ್ಮುಕತಾ:

ಆಮವಿಷಶಮನ
ಆಮವಿಷಬಹಿರ್ಗಮನ
ಆಮವಿಷಪಾಚನ 
ಎಂಬ ಮೂರು ವಿಧದ ವಿಶೇಷ ಶಕ್ತಿಯನ್ನು ಹೊಂದಿದ್ದು, ಅದು ಶರೀರದ ಮೂಲೆ ಮೂಲೆಯಲ್ಲಿ ಸಂಚಯವಾದ  ಅನಗತ್ಯ ರಾಸಾಯನಿಕಗಳನ್ನು 
•√ ಕರಗಿಸಿ ಇಲ್ಲವಾಗಿಸುವ ( ಆಮಶಮನ) ಅಥವಾ 
•√ ಹೊರಹಾಕುವ ( ಆಮ ಬಹಿರ್ಗಮನ) ಅಥವಾ 
•√ ಪರಿವರ್ತಿಸಿ ಬಿಡುವ (ಆಮ ಪಾಚನ)

ವಿಶೇಷ ಕಾರ್ಯವನ್ನು ಮಾಡಿಬಿಡುತ್ತವೆ. ಹಾಗಾಗಿ ಶರೀರ ಕೇವಲ ಶುದ್ಧ ಘಟಕಗಳಿಂದ ತುಂಬಿಕೊಳ್ಳುತ್ತದೆ.

ಆಗ ಯಾವ ಕ್ರಿಮಿಗಳ ಕಣವೂ ಸಹ ಈ ಶರೀರವನ್ನು ಸೋಂಕುವುದು ಅಸಾಧ್ಯ. ಏಕೆಂದರೆ, ಶುದ್ಧ ರಕ್ತ-ಮಾಂಸ-ಮೇದ-ಮೂಳೆಗಳು ಹೊರಸೂಸುವ ಶಕ್ತಿ ವಿದ್ಯುತ್ ನಂತೆ ಇರುತ್ತದೆ, ಅದರ ಮುಂದೆ ಸೋಂಕು ಅತ್ಯಂತ ದುರ್ಬಲ ಜೀವಿ....

|=|=|=|=|=|=|=|•|•|•|•|•|=|=|=|=|=|=|
ಕಷಾಯಗಳ ಈ ಕಾರ್ಯವನ್ನು ಹೇಗೆ ಗುರುತಿಸಲಾಗಿದೆ:

ಆಯುರ್ವೇದವು ಸೋಂಕಿನ ಕ್ರಿಮಿಗಳನ್ನು ಕೊಲ್ಲುವ ದುಸ್ಸಾಹಸಕ್ಕೆ ಎಂದೂ ಕೈಹಾಕುವುದಿಲ್ಲ. 
ಎಷ್ಟು ಕೊಂದರೂ ಹೊಸರೂಪ ಪಡೆದುಕೊಂಡು ಬರುವ ಈ ಸೋಂಕೆಂಬ ರಕ್ತಬೀಜಾಸುರನನ್ನು ಆಹಾರವಿಲ್ಲದೇ ತಾನೇ ಸೋಲೊಪ್ಪಿಕೊಳ್ಳುವಂತೆ ಮಾಡುವುದೇ ಜಾಣತನವಲ್ಲವೇ?

ಸೋಂಕು ಬದುಕುಳಿಯಲು ಅಥವಾ ಸೋಂಕು ತಗುಲಲು ಬೇಕಾಗುವ ಅಶುದ್ಧ ಆಹಾರ ಘಟಕಗಳನ್ನು ಇಲ್ಲವಾಗಿಸುವುದೇ ಜಾಣತನ, ಅದರಿಂದಾಗಿರುವ ಲಾಭಗಳು-

★ ವರ್ಷವಾದರೂ, ಸೋಂಕಿತರೊಂದಿಗೆ ಇದ್ದರೂ ಸೋಂಕು ತಗುಲಿರುವುದಿಲ್ಲ.

★ ಒಂದೊಮ್ಮೆ ತಗುಲಿದರೂ  ಕ್ಷಣ ಕಾಲವೂ ಶರೀರದಲ್ಲಿ ಉಳಿಯುವ ಸಾಧ್ಯತೆ ಇಲ್ಲ. ಏಕೆಂದರೆ, ಅದು ಬೆಳೆಯಲು ಬೇಕಾಗುವ ಆಹಾರವನ್ನೇ ಆಯುರ್ವೇದ ಕಷಾಯಗಳು ಇಲ್ಲವಾಗಿಸಿ ಬಿಡುತ್ತವೆ. 

★ ಹಾಗಾಗಿಯೇ VIROPYRINE ಮತ್ತು AYURLUNG ಆಯುರ್ವೇದ ಔಷಧಿಗಳನ್ನು ಬಳಸುತ್ತಿರುವ ಶೇಕಡಾ 90ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿಲ್ಲ. 
★ ಈಗಾಗಲೇ ಸೋಂಕು ಉಂಟಾದವರು 12 ರಿಂದ 24 ತಾಸುಗಳಲ್ಲಿ ಗಣನೀಯವಾದ ಚೇತರಿಕೆಯನ್ನು ಕಾಣುತ್ತಿದ್ದಾರೆ. 
★ ಸೋಂಕು ಉಂಟಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾದರೂ ಅತ್ಯಾಶ್ಚರ್ಯಕರ ರೀತಿಯಲ್ಲಿ ಆಮ್ಲಜನಕ ಹೆಚ್ಚಾಗಿರುವುದನ್ನು ನಾವು ಕಂಡಿದ್ದೇವೆ. 

ವಿಶೇಷ ಗಮನಕ್ಕೆ:
ಈ ಫಲಿತಾಂಶಗಳನ್ನು ಕೇವಲ ಔಷಧಿ ಪ್ರಯೋಗಗಳಿಂದ ನಿರೀಕ್ಷಿಸದೇ ಕೆಳಗಿನ ಆಹಾರ ನಿಯಮಗಳನ್ನು ಪಾಲಿಸಿ ಆಮವಿಷ ಶರೀರವನ್ನು ಸೇರದಂತೆ ನೋಡಿಕೊಳ್ಳಬೇಕೆಂದು ಆಯುರ್ವೇದ ಹೇಳುತ್ತದೆ.

★ ನಿತ್ಯ ಶಾರೀರಿಕ ವ್ಯಾಯಾಮ.
 ಮಾಡುವುದು.

★ ಶಾರೀರಿಕ ಶ್ರಮಕ್ಕೆ ತಕ್ಕ ಪ್ರಮಾಣದ ಆಹಾರವನ್ನು ಮಾತ್ರ ಸೇವಿಸುವುದು.

★ ನೀರಿನಲ್ಲಿ ಬೇಯಿಸಿದ ಸುಲಭವಾಗಿ ಶರೀರವಾಗಿ ಮಾರ್ಪಾಡಾಗುವ ಆಹಾರ ಸೇವನೆ ಮಾಡುವುದು. 
                             ಮತ್ತು
★ ಸುಖವಾದ ನಿದ್ದೆ.
•••••••••••

No comments:

Post a Comment

MATHS TIME LINE

MATHS TIME LINE https://mathigon.org/timeline