✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday 21 August 2023

PST ಯವರಿಗೆ ಹೈಸ್ಕೂಲ್ ಸಹಶಿಕ್ಷಕ ಹುದ್ದೆಗೆ ಬಡ್ತಿ ದೊರೆಯುತ್ತಾ? ಅಥವಾ ಜಿಪಿಟಿಯವರಿಗೆ ದೊರೆಯುತ್ತಾ?

*➖ಸರಕಾರಿ ಪ್ರೌಢಶಾಲಾ ಶಿಕ್ಷಕ ವೃಂದ& ನೇಮಕಾತಿಗೆ ಹೆಚ್ಚುವರಿ ನಿಯಮಗಳ ಸೇರ್ಪಡೆ ಕುರಿತು ಹಾಗೂ PST ಯವರಿಗೆ ಹೈಸ್ಕೂಲ್ ಸಹಶಿಕ್ಷಕ ಹುದ್ದೆಗೆ ಬಡ್ತಿ ದೊರೆಯುತ್ತಾ? ಅಥವಾ ಜಿಪಿಟಿಯವರಿಗೆ ದೊರೆಯುತ್ತಾ ಈ ಕುರಿತು ಸಚಿವಾಲಯದ ಪತ್ರ* 
👉🏿ಸಮಗ್ರ ಮಾಹಿತಿಗಾಗಿ 👇🏿👇🏿


ಚಂದ್ರನ ಅಂಗಳ ಸ್ಪರ್ಶಿಸಲು ಸಿದ್ಧವಾದ ಚಂದ್ರಯಾನ-3 ನೌಕೆ; ಆಗಸ್ಟ್ 23 ರಂದು ಇಸ್ರೋ ನೇರಪ್ರಸಾರ*


ಚಂದ್ರಯಾನ-3 ರ ನೌಕೆಯು ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿಯುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಸ್ರೋ ಈ ಕೆಳಗಿನ ಲಿಂಕ್ ಗಳ ಮೂಲಕ ನೇರ ಪ್ರ ಸಾರ.    
ನೇರಪ್ರಸಾರದ ಲಿಂಕ್ ಗಳು ಹೀಗಿವೆ:
👉ISRO Website: https://www.isro.gov.in/
👉DD National TV

ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿ, ತನ್ನ ಸಂದೇಶದಲ್ಲಿ ದೇಶದ ಜನರಿಗೆ ಈ ರೀತಿಯಾಗಿ ತಿಳಿಸಿದೆ:

ಇಸ್ರೋ ಸಂದೇಶ..

ಭಾರತದ ಬಾಹ್ಯಾಕಾಶ ಅನ್ವೇಷಣೆಯ ಅಭಿಯಾನವು ಚಂದ್ರಯಾನ-3 ಮಿಷನ್ನಿನೊಂದಿಗೆ ಒಂದು ಗಮನಾರ್ಹ ಮೈಲಿಗಲ್ಲು ತಲುಪಿದೆ, ಇದು ಚಂದ್ರನ ಮೇಲ್ಮೈಗೆ ಮೃದುವಾಗಿ ಇಳಿಯಲು ಸಿದ್ಧವಾಗಿದೆ. ಈ ಸಾಧನೆ ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೈಗಾರಿಕೆಗಾಗಿ ಗಮನಾರ್ಹ ಹೆಜ್ಜೆ, ನಮ್ಮ ರಾಷ್ಟ್ರದ ಬಾಹ್ಯಾಕಾಶ ಅನ್ವೇಷಣೆಯ ಪ್ರಗತಿಯನ್ನು ಸೂಚಿಸುತ್ತದೆ.

ಈ ಉತ್ಸುಕವಾಗಿ ನಿರೀಕ್ಷಿತ ಘಟನೆಯನ್ನು 2023 ರ ಆಗಸ್ಟ್ 23 ರಂದು 17:27 IST ರಿಂದ ಲೈವ್ ಪ್ರಸಾರ ಮಾಡಲಾಗುವುದು. ಲೈವ್ ಕವರೇಜ್ ನ್ನು ISRO ವೆಬ್‌ಸೈಟ್, YouTube, ISRO ರ Facebook ಪುಟ ಮತ್ತು DD ರಾಷ್ಟ್ರೀಯ ಟಿವಿ ಚಾನೆಲ್‌ಗಳಂತಹ ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಚಂದ್ರಯಾನ-3 ರ ಮೃದು ಇಳಿಯುವಿಕೆಯು ಒಂದು ಮಹತ್ವದ ಕ್ಷಣವಾಗಿದ್ದು ಅದು ಕುತೂಹಲವನ್ನು ಹುಟ್ಟುಹಾಕುವುದಲ್ಲದೆ ನಮ್ಮ ಯುವಜನರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಉಂಟುಮಾಡುತ್ತದೆ. ಇದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೌಢಿಮೆಯನ್ನು ನಾವು ಒಟ್ಟಾಗಿ ಆಚರಿಸುವಾಗ ಗಾಢ ಭಾವನೆಯ ಗೌರವ ಮತ್ತು ಏಕತೆಯನ್ನು ಉಂಟುಮಾಡುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನವೀಕರಣದ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡುತ್ತದೆ.

ಈ ನಿಟ್ಟಿನಲ್ಲಿ, ರಾಷ್ಟ್ರದಾದ್ಯಂತದ ಎಲ್ಲಾ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಈ ಐತಿಹಾಸಿಕ ಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಲು ಆಹ್ವಾನಿಸಲಾಗಿದೆ. ಸಂಸ್ಥೆಗಳನ್ನು ನಿಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಈ ಘಟನೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ಚಂದ್ರಯಾನ-3 ರ ಮೃದು ಇಳಿಯುವಿಕೆಯ ಲೈವ್ ಸ್ಟ್ರೀಮಿಂಗ್ ಅನ್ನು ಶಾಲಾ ಆವರಣದಲ್ಲಿ ಆಯೋಜಿಸಲು ತಿಳಿಸಿದೆ.

Monday 17 July 2023

ಖಗೋಳವೆಂಬ ಕೌತುಕ ಮತ್ತು ಚಂದ್ರಯಾನ - 3.....


             ಜುಲೈ ‌14 2023 ಶುಕ್ರವಾರ ಅಂದರೆ ಇಂದು ಸಮಯ ಮಧ್ಯಾಹ್ನ ‌2/35 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲಕ್ಕೆ ಉಡಾವಣೆಯಾಗಲಿದೆ ಭಾರತದ ಉಪಗ್ರಹ.....

ಎಲ್ಲವೂ ಸರಿಯಾದರೆ ಈಗಿನ ಯೋಜನೆಯಂತೆ ಆಗಸ್ಟ್ ‌23 ರಂದು ಚಂದ್ರನ ಮೇಲೆ ಇಳಿಯಲಿದೆ. ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡಲಿದೆ......

ರಷ್ಯಾದ ಯೂರಿ ಗಗಾರಿನ್ ಎಂಬ ಮೊದಲ ಗಗನಯಾತ್ರಿ, ಚಂದ್ರನ ಮೇಲೆ  ಪಾದ ಸ್ಪರ್ಶ ಮಾಡಿದ ಮೊದಲ ಮಾನವ ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್, ವೆಲೆಂಟೈನ ಟೆರೆಶ್ಕೋವ ಎಂಬ ಮೊದಲ ಮಹಿಳಾ ಗಗನಯಾತ್ರಿ, ಭಾರತದ ರಾಕೇಶ್ ಶರ್ಮಾ ಮತ್ತು ಅವರ ಸಹಾಯಕ ರವೀಶ್ ಮಲ್ಹೋತ್ರ ಎಂಬ ಭಾರತದ ಮೊದಲ ಗಗನಯಾತ್ರಿಗಳು, ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಂಸ್ ಎಂಬ ಭಾರತೀಯ ಮೂಲದ ಇಬ್ಬರು ಗಗನಯಾತ್ರಿಗಳು ಮತ್ತು ವಿಶ್ವದ ಇತರೆ ದೇಶಗಳ ಕೆಲವು ಗಗನಯಾತ್ರಿಗಳು, ಹಗಲು ರಾತ್ರಿ ಖಗೋಳ ನಿಗೂಢ ಬೇದಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಎಲ್ಲಾ ಖಗೋಳ ಶಾಸ್ತ್ರಜ್ಞರಿಗು ಕೃತಜ್ಞಾ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ..........

ಈ ನಿಟ್ಟಿನಲ್ಲಿ ಭಾರತದ ಹೆಮ್ಮೆಯ ಹೆಸರುಗಳಾದ ಆರ್ಯಭಟ ಮತ್ತು ವಿಕ್ರಮ್ ಸಾರಾಭಾಯಿ ಅವರನ್ನು ಸ್ಮರಿಸುತ್ತಾ.......

ಅರ್ಧ ಶತಮಾನಕ್ಕೂ ಹೆಚ್ಚು ಸಮಯವನ್ನು ಈ ಭೂಮಿಯ ಮೇಲೆ ಕಳೆದ ನನಗೆ ಈಗಲೂ ಬಾಹ್ಯಾಕಾಶ ಯಾತ್ರೆಯ ಬಗ್ಗೆ ಮಗುವಿನಷ್ಟು ಕುತೂಹಲ ಮುಗ್ದತೆ ಉಳಿದಿದೆ. ಮನೆಯ ಮಹಡಿಯ ಮೇಲೆ ನಿಂತು ಕೆಳಗೆ ನೋಡಲು ಭಯವಾಗುವ ಮನಸ್ಥಿತಿಯ ನಾವು, ವಿಮಾನದ ಹಾರಾಟವನ್ನೇ ಕುತೂಹಲದಿಂದ ವೀಕ್ಷಿಸುವ ನಾವು, ಅನಂತ ಆಗಸದಲ್ಲಿ ಮಿಂಚಿನ ವೇಗದಲ್ಲಿ ಪ್ರಯಾಣಿಸುವುದನ್ನು ಊಹಿಸಿಕೊಳ್ಳುವುದು ಕಷ್ಟ.....

ಭೂಮಿಯಿಂದ ಸುಮಾರು 385000 ( ಮೂರು ಲಕ್ಷ ಎಂಬತ್ತೈದು ಸಾವಿರ ) ಕಿಲೋಮೀಟರ್ ದೂರದಲ್ಲಿ ಇರುವ ಚಂದ್ರನಲ್ಲಿಗೆ ಮನುಷ್ಯನ ಪ್ರಯಾಣವೇ ಇರಬಹುದು ಅಥವಾ ಅಲ್ಲಿ ಕೆಲ ದಿನಗಳ ವಾಸವೇ ಇರಬಹುದು ಅಥವಾ ಮಾನವ ರಹಿತ ಸಂಶೋಧನಾ ಯಂತ್ರ ಕಳಿಸುವುದೇ ಇರಬಹುದು, ಮತ್ತು ‌ಅದನ್ನು ಇಲ್ಲಿನಿಂದಲೇ ನಿಯಂತ್ರಿಸುವುದು ಇರಬಹುದು, ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ಮಾಡುವುದೇ ಇರಬಹುದು ಎಲ್ಲವೂ ಸಾಮಾನ್ಯರ ಕಲ್ಪನೆಗೆ ಮೀರಿದ್ದು.....

ಎಲ್ಲಾ ಸೌಕರ್ಯಗಳ ನಡುವೆಯೂ ಒಂದು ವಾರದ ದೂರದ ಪ್ರವಾಸ ಅಥವಾ ಒಂದು ತಿಂಗಳ ವಿದೇಶ ಯಾತ್ರೆ ಅಥವಾ ಕೆಲವು ತಿಂಗಳ ಹೊರ ರಾಜ್ಯದ ತರಬೇತಿ ಅಥವಾ ಒಂದೆರಡು ವರ್ಷಗಳ ಶೈಕ್ಷಣಿಕ ಪ್ರವಾಸ ಇಷ್ಟಕ್ಕೇ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುವ ನಾವು ಯಾರ ನೇರ ಒಡನಾಟವಿಲ್ಲದೇ ಕೇವಲ ಧ್ವನಿ ಸಂಪರ್ಕ ಮಾತ್ರದೊಂದಿಗೆ ಲಕ್ಷಾಂತರ ಕಿಲೋಮೀಟರ್ ದೂರಕ್ಕೆ ಪ್ರಯಾಣಿಸಿ ಕೆಲ ಸಮಯ ಅಲ್ಲಿ ವಾಸಿಸುವ  ರೀತಿಯೇ ಕನಸಿನ ಲೋಕದಂತೆ ಭಾಸವಾಗುತ್ತದೆ. ತಂತ್ರಜ್ಞಾನ, ತರಬೇತಿ, ದೈಹಿಕ ಮತ್ತು ಮಾನಸಿಕ ಸಿದ್ದತೆ ಗಗನಯಾತ್ರಿಗಳಿಗೆ ಇರುತ್ತದೆ ಎಂಬುದು ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಇದು ಒಂದು ವಿಸ್ಮಯ ಲೋಕ. ಅಲ್ಲಿನ‌ ಊಟ, ಸ್ನಾನ, ಆರೋಗ್ಯದ ವ್ಯತ್ಯಾಸ, ಒಂಟಿತನದ ಬೇಸರ, ಹಗಲು ರಾತ್ರಿಗಳು ಕಳೆಯುವ ರೀತಿ, ಅಲ್ಲಿನ ನೀರವತೆ, ಸಾವಿನ ಭಯ, ಪ್ರೀತಿ ಪಾತ್ರರ ನೆನಪು ಎಲ್ಲವನ್ನೂ ನಿಭಾಯಿಸುವ ರೀತಿ ನಿಜಕ್ಕೂ ಬಹುದೊಡ್ಡ ಸವಾಲು. ಏಕೆಂದರೆ ಅವರು ಸಹ ಮನುಷ್ಯರೇ ಅಲ್ಲವೇ....

ಬಾಹ್ಯಾಕಾಶ ಸಂಶೋಧನಾ ವಿಜ್ಞಾನದಲ್ಲಿ ಅಮೆರಿಕ ಮತ್ತು ರಷ್ಯಾ ಸಾಕಷ್ಟು ಅಭಿವೃದ್ಧಿ ಹೊಂದಿವೆ ಮತ್ತು ಅದರ ಮೇಲೆ ನಿಯಂತ್ರಣ ಸಾಧಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಫ್ರಾನ್ಸ್ ಜರ್ಮನಿ ಮತ್ತು ಭಾರತ ಸಹಾ ಅತಿವೇಗದಲ್ಲಿ ತಮ್ಮ ಛಾಪು ಮೂಡಿಸುತ್ತಿವೆ......

ವಿಷಯ ಯಾವುದೇ ಇರಲಿ. ಆ ಬಗ್ಗೆ ಕನಿಷ್ಠ ಮಟ್ಟದ ಕುತೂಹಲ ಬೆಳೆಸಿಕೊಳ್ಳುವ ಮನೋಭಾವ ಇದ್ದರೆ ಅದು ನಮ್ಮ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಬಹಳಷ್ಟು ಜನ ಕೆಲವು ವಿಷಯಗಳು ನಮಗೆ ಸಂಬಂಧಿಸಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಅದು ಒಟ್ಟು ವ್ಯಕ್ತಿತ್ವ ವಿಶಾಲವಾಗದೆ ಸಂಕುಚಿತಗೊಳ್ಳಲು ಕಾರಣವಾಗಿದೆ. ನಮಗೆ ರಾಜಕೀಯ ಬೇಡ, ವಿಜ್ಞಾನ ಬೇಡ, ಕಲೆ ಸಾಹಿತ್ಯ ಸಂಗೀತ ಕ್ರೀಡೆ ಬೇಡ, ಆರ್ಥಿಕ ಚಟುವಟಿಕೆಗಳ ಮಾಹಿತಿ ಬೇಡ ಎಂದು ಅದರಿಂದ ದೂರವಿದ್ದು ಕೇವಲ ತಮ್ಮ ಹಣ ಸಂಪಾದನೆ, ತಮ್ಮ ಕುಟುಂಬ ಮತ್ತು ಅದರ ನಿರ್ವಹಣೆಯ ಸುತ್ತಲೇ ಇಡೀ ಜೀವನ ರೂಪಿಸಿಕೊಂಡಿರುವ ಪರಿಣಾಮವೇ ಇಂದು ನಾವುಗಳು ಅಲ್ಪಮತಿಗಳಾಗುತ್ತಿರುವುದು.....

ನಿಮ್ಮ ಪಂಚೇಂದ್ರಿಯಗಳನ್ನು ಸ್ವಲ್ಪ ಮುಕ್ತವಾಗಿಡಿ. ಸಾಧ್ಯವಿರುವ ಮತ್ತು ಆಸಕ್ತಿ ಇರುವ ವಿಷಯಗಳನ್ನು ಸ್ವಲ್ಪ ಒಳ ಸ್ಪರ್ಶಿಸಲು ಅನುವು ಮಾಡಿಕೊಡಿ. ಆ ಮ‌ೂಲಕ ಬದುಕಿನ ಕ್ವಾಲಿಟಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು.....

ಜೊತೆಗೆ ಮಕ್ಕಳಿಗೆ ಈ ರೀತಿಯ ವಿಸ್ಮಯಕಾರಿ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ ಅವರ ಕುತೂಹಲ ಕೆರಳಿಸಿದರೆ ಖಂಡಿತ ಮುಂದಿನ ಭವಿಷ್ಯದಲ್ಲಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ. ಅನೇಕ ಹೊಸ ಹೊಸ ಸಂಶೋಧನೆಗಳು ರೂಪಗೊಂಡಿರುವುದೇ ಈ ರೀತಿಯ ಕುತೂಹಲಕಾರಿ ಪ್ರಶ್ನೆಗಳ ಮೂಲಕವೇ.
ರೇಡಿಯೋ, ರೈಲು, ವಿಮಾನ, ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಎಲ್ಲವೂ ಇದಕ್ಕೆ ಉದಾಹರಣೆಗಳು......

ನಾವು ಮಾಡಬೇಕಿರುವುದು ಮಕ್ಕಳಿಗೆ ಈ ಮಾಹಿತಿಗಳು ಸುಲಭವಾಗಿ ಸಿಗಬೇಕು ಮತ್ತು ಮನೆಗಳಲ್ಲಿ, ಶಾಲೆಗಳಲ್ಲಿ, ಗೆಳೆಯರ ಬಳಗದಲ್ಲಿ ಇದರ ಬಗ್ಗೆಯೇ ಚರ್ಚೆಗಳನ್ನು ಹುಟ್ಟು ಹಾಕಿ ಒಂದು ರೀತಿಯ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಬೇಕು. ಆಗ ಹೆಚ್ಚು ಹೆಚ್ಚು ಉತ್ತಮ ಫಲಿತಾಂಶಗಳು ಬರುತ್ತವೆ........

ಟಿವಿ ಧಾರವಾಹಿಗಳನ್ನು, ಸಿನಿಮಾಗಳನ್ನು ವೀಕ್ಷಿಸುತ್ತಾ, ಅದರ ಬಗ್ಗೆಯೇ ಚರ್ಚಿಸುತ್ತಾ, ವಿಡಿಯೋ ಗೇಮ್ ಗಳಲ್ಲಿ ಅವರನ್ನು ಮುಳುಗಿಸುತ್ತಾ, ಅತಿಯಾದ ಹೋಂ ವರ್ಕ್ ಮತ್ತು ಅಂಕಗಳಲ್ಲಿಯೇ ಅವರನ್ನು ಬಂಧಿಸುತ್ತಾ, ಮನೆ ಕಾರು ಆಸ್ತಿಗಳನ್ನು ಮಾಡುವುದೇ ಜೀವನದ ಬಹುದೊಡ್ಡ ಗುರಿ ಎಂದು ಉಪದೇಶಿಸುತ್ತಾ ಇದ್ದರೆ ಖಂಡಿತ ಈಗ ನೋಡುತ್ತಿರುವ ಅಸಹಿಷ್ಣತಾ ಮತ್ತು ಹಿಂಸಾ ಸಮಾಜದ ನಿರ್ಮಾಣ ಇನ್ನಷ್ಟು ವೇಗ ಪಡೆಯುತ್ತದೆ.....

ಆದ್ದರಿಂದ ಇನ್ನು ಮುಂದಾದರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಯೋಚಿಸೋಣ. ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಹೆಜ್ಜೆ ಇಡೋಣ. ಭಾರತದ ಚಂದ್ರ ಯಾನ - 3 ಎಂಬ ಇಸ್ರೋದ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸೋಣ. ಸಾಧ್ಯವಾದರೆ ಮಧ್ಯಾಹ್ನ ಇದನ್ನು ನೇರ ಪ್ರಸಾರದಲ್ಲಿ ವೀಕ್ಷಿಸೋಣ........

ಮಕ್ಕಳಲ್ಲಿ ಮುಂದೊಂದು ದಿನ ನಮ್ಮ ಕಲ್ಪನೆಯ " ಚಂದ ಮಾಮನಲ್ಲಿ " ವಾಸಿಸುವ ಕನಸು ಬಿತ್ತೋಣ........

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Saturday 8 July 2023

ಕ್ಷಮೆ ಅಂದರೇನು? ಒಂದು ಚರ್ಚೆ...

ಕ್ಷಮೆ

ಕ್ಷಮೆ ಅಂದರೇನು?  ನಾನು ಮತ್ತೊಬ್ಬರನ್ನು ಕ್ಷಮಿಸಿದ್ದೀನಿ ಅನ್ನೋ ಭಾವವೇ ಅಹಂಕಾರ ಜನ್ಯವಾದದ್ದು. "ಹೋಗು ಬಿಟ್ಟಿದ್ದೀನಿ, ಎಲ್ಲಾದರೂ ಬದುಕಿಕೊ" ಎಂಬ ಕಥೆ, ಸಿನಿಮಾಗಳಲ್ಲಿನ ಮಾತೇ ಮತ್ತೊಬ್ಬನಿಗೆ ಆಂತರ್ಯದಲ್ಲಿ ಅವಮಾನ‍ದ‍ ಅನುಭವ ಹುಟ್ಟಿಸುತ್ತೇನೋ!

ಪ್ರತಿ ನಿತ್ಯ ಯಾರಿಂದಲೋ ಬೇಸರ ಆಗುತ್ತೆ.  ನಾವೂ ಮತ್ತೊಬ್ಬರ ಬೇಸರಕ್ಕೆ ಕಾರಣ ಆಗಿರುತ್ತೇವೆ.  “ನಮ್ಮ ಬೇಸರಕ್ಕೆ ಮತ್ತೊಬ್ಬರು ಕಾರಣ ಎಂಬ ಭಾವವೇ ನಮ್ಮಲ್ಲಿ ಬರದಂತೆ ಅರಿವು ಮೂಡಿಸಿಕೊಳ್ಳುವುದು” ಕ್ಷಮೆಯ ಮೂಲತತ್ವ ಆಗಬೇಕೇನೋ. ನಾವು ಯಾವುದೋ ಕಾರಣಕ್ಕೆ ಕಿತ್ತಾಡಿ ಕೈಕುಲುಕಿ ಮಾಡಿಕೊಳ್ಳುವ compromise ಅನ್ನೋದು ಪೂರ್ತಿ ಕ್ಷಮೆಯ ಆಳವನ್ನು ಸ್ಪುರಿಸುವುದಿಲ್ಲ.    ಆ ವಿಚಾರವನ್ನು ಎರಡೂ ಪಕ್ಷದವರೂ  ಮತ್ತೊಬ್ಬರ ಬಳಿ ಹೋಗಿ, "ಹೀಗೆ ಹೀಗೆ ಆಯ್ತು ಹೋಕ್ಕೊಳ್ಳಿ ಅಂತ ಬಿಟ್ಟು ಬಿಟ್ಟೆ" ಎಂದು ಹೇಳಿಕೊಳ್ಳುತ್ತಾ  ಕಾಡಿನ ಬೆಂಕಿಯಂತಾ ವಿಸ್ತಾರ ಪಡೆಯುತ್ತಲೇ ಇರುತ್ತೆ.

ಕ್ಷಮೆಯ ಮೂಲ ತತ್ವಗಳು ಇಲ್ಲಿರಬಹುದೇನೋ:

1. ನಾನೂ ತಪ್ಪು ಮಾಡುವ ಸಾಧ್ಯತೆ ಇದೆ ಎಂಬ ಅರಿವು
2. ಒಂದು ಭಿನ್ನಾಭಿಪ್ರಾಯ ಬಂದಾಗ, ನಾವು ಚರ್ಚೆಯಲ್ಲಿ ಗೆಲುವು ಸಾಧಿಸುವುದರತ್ತ ಗಮನ ಹರಿಸದಿರುವುದು
3. ವಾದಗಳಲ್ಲಿ ಜಯದ ಅಪೇಕ್ಷೆ ಹೊಂದದಿರುವಾಗ ನಮ್ಮಲ್ಲಿ ಅಹಂ ಬದಲು ಮತ್ತೊಬ್ಬನನ್ನು ಕೇಳಿಸಿಕೊಳ್ಳುವ ಸೌಜನ್ಯ ನಿರ್ಮಾಣ ಆಗುತ್ತೆ
4. ಅಲ್ಲಿ ಸಮಾನ ಭಾವವಿರುತ್ತೆ, ಆಪ್ತತೆ ಹೆಚ್ಚಾಗುತ್ತೆ
 
ಇತ್ತೀಚೆಗೆ ಒಬ್ಬರ ಬಳಿ ಅಪ್ತ ಮಾತುಕತೆ ಸಂದರ್ಭದಲ್ಲಿ, ತಮಾಷೆ-ಆಪ್ತತೆಯ ಸೂಕ್ಷ್ಮತೆಗಳು ಸಡಿಲಾದ ಒಂದು ಕ್ಷಣ ಆ ವ್ಯಕ್ತಿಯಲ್ಲಿ ನನ್ನ ಕುರಿತು ಅಸಮಾಧಾನ ಹುಟ್ಟಿಸಿತು ಎಂದು ಅರಿವಿಗೆ ಬರಲಿಕ್ಕೆ ನನಗೆ ತಡವಾಗಲಿಲ್ಲ. ನಾನು ಅವರಿಗೆ ಹೃದಯಾಂತರಾಳದಿಂದ ಅಗತ್ಯವಾದ ಬೆಂಬಲ ನೀಡಿದ್ದೆ,  ಆದರೂ ಹೀಗೆ ಆಯ್ತಲ್ಲ ಎಂಬ ಹಲವು ಸಮ್ಮಿಶ್ರ ಭಾವಗಳು ಎದುರಾದವು. 

ನಮಗೆ ನೋವು ಎಂಬುದಾದಾಗ ನಿನ್ನೆ ಜೊತೆಯಾಗಿ ಸಿಹಿ ತಿಂದಿದ್ದೆವು ಎಂದು ನೆನಪಿರುತ್ತದೆ ಎನ್ನಲಿಕ್ಕಾಗುವುದಿಲ್ಲ.  ಹೀಗಾಗಿ ನಾವು ಕೊಟ್ಟ ಮತ್ತೊಂದು ಬೆಂಬಲ, ನಾವು  ಅವರ ಮನಸ್ಸಿನ ಮೇಲೆ ಹಾಕಿದ ಗೀರಿಗೆ ಸಮಜಾಯಿಷಿ ಆಗಬಾರದು.  ನನ್ನಿಂದ ಆದ  ಗೀರಿನ ದೆಸೆಯಿಂದ ಅವರಿಗೆ ನಮ್ಮಲ್ಲಿ ಮೊದಲಿನ ಆಪ್ತತೆ ಹಿಂದಿರುಗದಿದ್ದರೂ ಅಚ್ಚರಿಯಿಲ್ಲ.  'ಇದೇನು ಮಹಾ ನಾ ಮಾಡಿದ ತಪ್ಪು?' ಎಂದುಕೊಳ್ಳುವುದೇ ನನ್ನ ಅಹಂಕಾರ.  ಅವರು ನನ್ನ ಸ್ನೇಹಕ್ಕೆ ಹಿಂದಿರುಗದಿದ್ದರೂ, ಅವರೂ ಮನುಷ್ಯರು ಎಂಬ ಅರಿವು ನನ್ನಲ್ಲಿರುವುದು ಮುಖ್ಯ.  ಹೀಗಿದ್ದಾಗ ಮಾತ್ರಾ ಸಂಬಂಧಗಳ ಎಳೆಗಳ ಕುರಿತು ನನ್ನ ಅಂತರಂಗದಲ್ಲಿ ಒಂದು ಸ್ವಚ್ಛತೆ ಮೂಡೀತೇನೊ! ಆ ಸ್ವಚ್ಛತೆಯ ಆಳದೊಳಗೆ ನೆಲೆಸಿರುವುದು ಸಾಧ್ಯವಾದರೆ ಮಾತ್ರಾ  ಕ್ಷಮೆ ಎಂಬ ಅಂತಃಕರಣದ ಕಿಂಚಿತ್ ಅನುಭವವಾದರೂ  ಅಂತರಂಗದಲ್ಲಿ ಮೂಡಬಹುದೇನೊ.

ಒಂದು ಮಾತುಕತೆಯಲ್ಲಿ ಒಂದು ಅಭಿವ್ಯಕ್ತಿ  ನನ್ನಿಂದ ಮೂಡುವಲ್ಲಿ ಮತ್ತು ಇನ್ನೊಂದೆಡೆ ಅದು ಸ್ವೀಕೃತವಾಗುವಲ್ಲಿ ವೈಪರೀತ್ಯತೆ ಮೂಡಿ, ಮತ್ತೊಬ್ಬರು ನೀನು ಎಲ್ಲೆಡೆಯೂ ಹೀಗೇ ಎಂದಾಗ ಅಲುಗಾಡಿ ಹೋದೆ. ಅಹಂ ಚುಚ್ಚಲಿಲ್ಲ ಎನ್ನಲಾರೆ, ಹಲವು ಮಾನುಷೀಯ ಸಹಜ ಕೀಳರಿಮೆಗಳು ಚಿಗುರಿರಲಿಲ್ಲ ಎನ್ನಲಾರೆ.  ಆದರೆ ಅಂತಃಮಥನದಲ್ಲಿ ಈ ವ್ಯಕ್ತಿಯೇನೋ ಹೇಳಿದರು, ಹಾಗೆ ಹೇಳದೆ ಮನಸ್ಸಲ್ಲಿ ಉಳಿಸಿಕೊಂಡಿರುವವರು ಎಷ್ಟು ಜನವೊ ಎನಿಸಿದಾಗ, ಆ ವ್ಯಕ್ತಿ ನೀಡಿದ್ದು ನಿಜವಾದ ಬೆಳಕು ಅನಿಸಿತು. ಒಬ್ಬರು ಹೇಳುವುದು ಕಟುವಾಗಿದ್ದಾಗ ಅದರಲ್ಲಿ ಏನೋ ಮಹತ್ವದ್ದಿರಬಹುದು.  ಅವರು ಹಾಗೆಲ್ಲಾ ಹೇಳಿದರು; ಆದರೂ ಕ್ಷಮೆ ಹೊಂದಿದ್ದೇ ಎಂಬುದೇ ಹುಂಬತನ.  ಇಲ್ಲಿ ಕ್ಷಮೆ ಎಂಬ ಪದವೆಲ್ಲಿಯದು, ಯಾವುದೋ ಒಂದು ಮೂಲದ ಮೂಲಕ, ನಮಗೆ ಬೆಳಕು ಸಂದ ಕೃಪೆಯ ಕುರಿತು ನಮಗೆ ಇರಬೇಕಾದದ್ದು ನಮನಭಾವ.

Monday 22 May 2023

ನಮ್ಮ ಮೆದುಳಿಗಿಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಮನಸ್ಸು

*ಹಣೆಬರಹ ದೊಡ್ಡದೇ? ನಮ್ಮ ಪ್ರಯತ್ನ ದೊಡ್ಡದೇ? -- ಭಾಗ-2*
••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  _*ಸಂಚಿಕೆ: 93, ದಿನಾಂಕ: 21.05.2023*_
••••••••••••••••••••••••••••••••••••••••••••
  _*ನಮ್ಮ ಮೆದುಳಿಗಿಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಮನಸ್ಸು*_

  _ಮನಸ್ಸಿಗೆ ನಮ್ಮ ಹಣೆಬರಹ ಬರೆಯುವ ಅಸಾಧಾರಣ ಸಾಮರ್ಥ್ಯ ಎಲ್ಲಿಂದ ಬಂದಿತು ಅಥವಾ ಯಾರು ಕೊಟ್ಟರು?!ಇದನ್ನು ನೋಡೋಣ..._

  _ನಮಗೆ ತಿಳಿಯದ ಯಾವುದಾದರೂ ವಿಷಯಗಳನ್ನು ದೇವರು ಅಥವಾ ಪ್ರಕೃತಿಗೆ ಬಿಡುತ್ತೇವೆ._

  _ಆದರೆ ಮಾನವ ತನ್ನ ತರ್ಕಕ್ಕೆ ತಿಳಿಯದೇ ಇರುವ ವಿಷಯವನ್ನು ಮೂಢನಂಬಿಕೆ ಎಂದು ಕರೆಯುತ್ತಾನೆ ಮತ್ತು ಒಪ್ಪುವುದೇ? ಬಿಡುವುದೇ? ಎಂಬ ಅತಂತ್ರದಲ್ಲಿ ಮುಂದಡಿ ಇಟ್ಟು ಜೀವನವನ್ನು ಮುಗಿಸಿಬಿಡುತ್ತಾನೆ!_

  _ಬನ್ನಿ, ಇಂದು ನಮ್ಮ ಹಣೆಬರಹ ಬರೆದವರು ಯಾರು?! ಯಾರ ಕೈವಾಡದಿಂದ ನಾವು ಕಷ್ಟ ಅಥವಾ ಸುಖವನ್ನು ಅನುಭವಿಸುತ್ತಿದ್ದೇವೆ?! ಈ ಸತ್ಯವನ್ನು ತಿಳಿಯೋಣ..._
••••••••••••••••••••••••••••••••••••••••••••
  _ನಮ್ಮ ಮನಸ್ಸಿನಲ್ಲಿ ಇಂದು  ಹೋಟೆಲಿನ ದೋಸೆ ತಿನ್ನಬೇಕು ಎನಿಸಿ ತಿನ್ನುತ್ತೇವೆ. ಅದರ ಪರಿಣಾಮ ಹೊಟ್ಟೆ ಕೆಡಬಹುದು ಅಥವಾ ಇಲ್ಲ. ಇದರ ಹಾಗೆಯೇ, ಇವನು ಮಗಳಿಗೆ ಸೂಕ್ತ ಎನಿಸಿ ಮದುವೆ ಮಾಡುತ್ತೇವೆ. ಆ ಮದುವೆ ಯಶಸ್ವಿಯಾಗಬಹುದು ಅಥವಾ ಕಷ್ಟಕರ ಜೀವನ ಸಾಗಿಸಬಹುದು ಅಥವಾ ಮುರಿದುಬೀಳಬಹುದು..._

  _ಮನಸ್ಸಿನಲ್ಲಿ ಇಂದೇಕೋ ದೋಸೆ ತಿನ್ನಬೇಕೆಂಬ 'ಬಯಕೆ' ಮೂಡಿದ್ದು ಎಲ್ಲಿಂದ?! ಮಗಳಿಗೆ ಮದುವೆ ಇವನೊಂದಿಗೇ ಸೂಕ್ತ ಎಂದು ಮನಸ್ಸಿಗೆ ಅನಿಸಿದ್ದು ಯಾವುದರಿಂದ?! ಹಾಗೆಯೇ, ಕೆಲವೊಮ್ಮೆ ಮನಸ್ಸಿಗೆ ಏನೋ ಅನಿಸಿದರೂ, ಅದು ಸಾಕಾರವಾಗದೇ ಜೀವನ ಬಂದಂತೆ, ಅದು ಹೆಜ್ಜೆ ಇಡಿಸಿದಂತೆ ನಡೆದುಕೊಳ್ಳಬೇಕಾಗುತ್ತದೆ!! ಇದೆಲ್ಲದರ ಮೂಲ ಎಲ್ಲಿಯದು?!_

  _ಮನಸ್ಸಿನ ಹಿಂದೆ ಕುಳಿತು ನಮ್ಮೊಳಗೆ ಈ ಅಭಿಲಾಷೆಗಳನ್ನು ಅಥವಾ ಭಾವನೆಗಳನ್ನು ಅಥವಾ ಬಯಕೆಗಳನ್ನು ಸೃಜಿಸುವುದು ಯಾವುದೋ ಅಜ್ಞಾತ ಶಕ್ತಿಯಲ್ಲ, ನಮ್ಮ ನಿನ್ನೆಯ ಕೆಲಸಗಳೇ ಇಂದು ರೂಪ ಪಡೆದು ಬರುತ್ತವೆ, ಅವೂ ನಮ್ಮೊಳಗಿನಿಂದಲೇ ಬರುತ್ತವೆ._

  _ಹೊಲದಲ್ಲಿ ಜೋಳ ಬಿತ್ತಿದ್ದರೆ, ಸಕಾಲದಲ್ಲಿ ಜೋಳದ ಫಸಲನ್ನೇ ಕೊಡುವಂತೆ, ಹಿಂದಿನ ಕೆಲ ದಿನಗಳಲ್ಲೋ, ವರ್ಷಗಳಲ್ಲೋ, ಹಿಂದಿನ ಜನ್ಮಗಳಲ್ಲೋ ಮಾಡಿದ ಕೆಲಸಗಳಿಂದ 'ಮನದಲ್ಲಿ ಉಂಟಾಗುವ ಸ್ಪಂದನೆಗಳು' ಬೀಜಗಳಾಗಿ ಇಂದು ತತ್‌ಸಂಬಂಧಿತ ಆಲೋಚನೆ, ಅಭಿಲಾಷೆ, ಇಚ್ಛೆ ಅಥವಾ ಬಯಕೆಗಳನ್ನು ಪ್ರತಿ ಕ್ಷಣ ಹುಟ್ಟುಹಾಕುತ್ತಿರುತ್ತವೆ, ಅಂದರೆ ನಿರಂತರ ಇಚ್ಛೆಗಳನ್ನು ಸೃಜಿಸುವುದು. ಇದು ಯಾರೋ ಇಟ್ಟ ಅಥವಾ ಕೊಟ್ಟ ಆಲೋಚನೆಯಲ್ಲ, ನಮ್ಮದೇ ಕೆಲಸಗಳಿಂದ ಉಂಟಾಗುವ ಧನಾತ್ಮಕವಾದ ಅಥವಾ ಋಣಾತ್ಮಕ ಸ್ಪಂದನೆಗಳ ಸಂಚಯಗಳು. ಅಂದರೆ ನಾವೇ ದುಡಿದು ಕೂಡಿಟ್ಟ ಬ್ಯಾಂಕ್ ಬ್ಯಾಲೆನ್ಸ್. ಈ ಬ್ಯಾಲೆನ್ಸ್ ಆಧಾರದಲ್ಲಿ ನಮ್ಮ ಎಟಿಎಂ ಹಣ ಕೊಡುತ್ತದೆಯೇ ಹೊರತೂ ಎಟಿಎಂ ಅನ್ನು ಪೂಜೆ ಮಾಡಿ ಪ್ರಸನ್ನಗೊಳಿಸಿದರೆ ಕೊಡುವುದಿಲ್ಲ..._

  _ಹಾಗೆಯೇ, ಉತ್ತಮ ಜೀವನ ಬೇಕೇ, ಉತ್ತಮವಾಗಿ ಸ್ಪಂದಿಸಿ. ಶ್ರೇಷ್ಠ ಜೀವನ ಬೇಕೇ? ಶ್ರೇಷ್ಠ ರೀತಿಯಲ್ಲಿ ಸ್ಪಂದಿಸಿ._

  _ಈ ಲೆಕ್ಕಾಚಾರ ಎಲ್ಲಾ ಕಷ್ಟವೇ, ಈ ಸೃಷ್ಟಿಯ ಮೂಲ ಶಕ್ತಿಗೆ ಶರಣಾಗಿ, ಸದ್ಯಕ್ಕೆ ಎದುರಿಗೆ ಬಂದ ಕೆಲಸದೊಂದಿಗೆ, ಜನರೊಂದಿಗೆ, ಜೀವಕೋಟಿಗಳೊಂದಿಗೆ ಹಿತವಾಗಿ ಸ್ಪಂದನೆ ಮಾಡಿದರೆ, ನಾಳೆಯ ಜೀವನ ಹಿತವಾಗಿ ಸಾಗುತ್ತದೆ..._ 🤔

  _ನಮ್ಮ ನಮ್ಮ ಕೆಲಸಗಳು ಏನೇ ಇರಲಿ, ಕೆಲಸ ಎಂದಿಗೂ ಶ್ರೇಷ್ಠ ಅಥವಾ ಕನಿಷ್ಠ ಎಂದು ಇಲ್ಲವೇ ಇಲ್ಲ, ಹಿತವಾದ ಸ್ಪಂದನೆಯೊಂದನ್ನು_ _*'ಪ್ರಯತ್ನ ಪೂರ್ವಕವಾಗಿ'*_ _ರೂಢಿಸಿಕೊಳ್ಳುವುದೇ ಮಾನವ ಜೀವನ._

  _ಈ ಪ್ರಯತ್ನದಂತೆ ನಮ್ಮ ಮುಂದಿನ ಜೀವನ ನಿಂತಿರುತ್ತದೆಯೇ ಹೊರತು, ಅದು ಕಾಣದ ಕೈಗಳು ನಮ್ಮ ಮೇಲೆ ಕೃಪೆ ಮಾಡುವ ಅಥವಾ ಶಾಪ ಹಾಕುವ ಕ್ರಿಯೆಯಿಂದ ಮೂಡಿದುದಲ್ಲ._

  ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್ ಇಡದೇ ಎಟಿಎಂ ನನಗೆ ಶಾಪ ಹಾಕುತ್ತಿದೆ ಎಂದು ಅದರ ಮುಂದೆ ಗೋಗರೆದು ಅತ್ತರೆ ಏನಾದರೂ ಫಲ ಲಭಿಸಬಹುದೇ? ನಿಮ್ಮ ಎಟಿಎಂ ಕಾರ್ಡ್ ನಿಮಗೆ ಕೃಪೆ ಮಾಡಿ ಹಣ ಕೊಡುತ್ತಿದೆಯೋ ಅಥವಾ ಅದು ನಮ್ಮದೇ ಸ್ವಂತ ದುಡಿಮೆಯೇ?!_

  _ನಮ್ಮೆಲ್ಲಾ ಹಣೆಬರಹ ಬರೆದುಕೊಳ್ಳುತ್ತಿರುವವರು ನಾವೇ ಆಗಿದ್ದೇವೆ. ಕೆಲಸ ಮಾಡದೇ ಯಾವುದೇ ಜಾತಿ, ಮತ, ಪಂಥಗಳ ದೇವದೇವರುಗಳ ಹಿಂದೆ ಬಿದ್ದರೂ ಅಥವಾ ಕೊನೆಯಲ್ಲಿ ತಿಳಿಯುವುದೇನೆಂದರೆ 'ಪ್ರಯತ್ನವೇ ಫಲದಾಯಕವಾಗಿದೆ'._

  _'ಪ್ರಕೃತಿಯ ಈ ಶಕ್ತಿಗೆ, ದೈವಕ್ಕೆ ಶರಣಾಗುವೆ ' ಎಂದರೂ ಸಹ ಅದೂ ಸಹ 'ಮಾನಸಿಕ ತೀವ್ರ ಸ್ಪಂದನೆಯೇ ಆಗಿರುತ್ತದೆ.'_

  _ಒಟ್ಟಾರೆ, 'ಪ್ರಯತ್ನವೇ ಪರಮೇಶ್ವರ' ಎನುವುದು ಸ್ಪಷ್ಟ. ನಮ್ಮ ಹಣೆಬರಹದ ಕರ್ತೃಗಳು ನಾವೇ ಆಗಿದ್ದೇವೆ, ಹಾಗಾಗಿ ಪ್ರಯತ್ನದ ಹೊರತೂ ಅನ್ಯ ಮಾರ್ಗವೇ ಇಲ್ಲ..._

     🙏🏼  _*ಧನ್ಯವಾದಗಳು*_  🙏🏼
••••••••••••••••••••••••••••••••••••••••••••

Friday 19 May 2023

*ಹಣೆಬರಹ ದೊಡ್ಡದೇ? ನಮ್ಮ ಪ್ರಯತ್ನ ದೊಡ್ಡದೇ?*

••••••••••••••••••••••••••••••••••••••••••••  *ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ*
  *ಸಂಚಿಕೆ: 98, ದಿನಾಂಕ: 20.05.2023*
••••••••••••••••••••••••••••••••••••••••••••
  *ನಮ್ಮ ಮೆದುಳಿಗಿಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಮನಸ್ಸು!*

  _ಮೆದುಳು ಸುಮಾರು 500 ಟ್ರಿಲಿಯನ್ (5×10¹⁴) ಸಂದೇಶಗಳನ್ನು ತನ್ನ ಸಂಕೀರ್ಣ ಜಾಲದಿಂದ ನಿರಂತರ ಕಳಿಸುತ್ತಿರುತ್ತದೆ. ಯಾವ ಸಂದೇಶ ಯಾವ ನರತಂತುಗಳ ಮೂಲಕ ಯಾವ ಜೀವಕೋಶವನ್ನು ಸೇರುತ್ತದೆ ಎಂದು ತಿಳಿಯುವುದು ವಿಜ್ಞಾನಕ್ಕೆ ಇದುವರೆಗೆ ಅಸಾಧ್ಯವೆನಿಸಿದೆ ಮತ್ತು ಇದನ್ನು ಬುದ್ಧಿಯಿಂದಲೇ ಪೂರ್ಣವಾಗಿ ತಿಳಿಯುವುದೂ ಸಹ ಅಸಾಧ್ಯ!_ 🤔

• _ಪ್ರತಿ ಜೀವಕೋಶಗಳು ತಮ್ಮ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಮೆದುಳನ್ನು ಕೂಲಿಕಾರ್ಮಿಕನಂತೆ ಬಳಸಿಕೊಳ್ಳುತ್ತವೆ._

• _ಆದರೆ ಮೆದುಳು ಸಾಮಾನ್ಯ ಕೂಲಿಯವನಂತಲ್ಲ, ತಮ್ಮ ಸಂಸ್ಥೆಯ ಮುಖ್ಯಸ್ಥನಂತೆ (ಸಿ.ಇ.ಒ. ನಂತೆ), ಯಾವಾಗಲೂ ಇಡೀ ಸಂಸ್ಥೆಯ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಎಲ್ಲಾ ಜೀವಕೋಶಗಳನ್ನೂ ನಿಯಂತ್ರಿಸಬಲ್ಲದು!_

• _ಮೆದುಳು, ನರವ್ಯೂಹ ಮತ್ತು ಜೀವಕೋಶಗಳು ಸದಾ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಣೆಯಲ್ಲಿ ಇರುತ್ತವೆ._

• _ಬುದ್ಧಿಯನ್ನು ಮೀರಿದ ಒಂದು ಅಂಶ ಈ ಎಲ್ಲಾ ಸಂವೇದನೆಗಳನ್ನು ಸೃಜಿಸುತ್ತಿದೆ ಮತ್ತು ಸದಾ ಪರಸ್ಪರ ಪೂರಕತೆಯನ್ನು ಇಟ್ಟಿದೆ, ಇದೇ ಕಾರಣದಿಂದ 'ಜೀವನ ' ಎಂಬುದು ಇದೆ..._
••••••••••••••••••••••••••••••••••••••••••••
  _ಈ ಎಲ್ಲವನ್ನೂ ಸೃಜಿಸುವ ಆ ಶಕ್ತಿಯೇ 'ಮನಸ್ಸು'. ಅದು ತನ್ನ ಅಸಾಧಾರಣ ಸಾಮರ್ಥ್ಯದಿಂದ ಈ ದೇಹದ ಮೆದುಳನ್ನೂ ಸೇರಿಕೊಂಡು ಎಲ್ಲಾ ಜೀವಕೋಶಗಳ ರೂಪ, ಕ್ರಿಯೆ, ಆಯುಷ್ಯವನ್ನೂ ನಿರ್ಧರಿಸಿ ಅದರಂತೆ, ಪ್ರೋಗ್ರಾಂ ಬರೆದು ಪರಸ್ಪರ ಪೂರಕತೆಯನ್ನು ಇಟ್ಟಿದೆ._

  _ಇದನ್ನೇ ಆಡುಭಾಷೆಯಲ್ಲಿ_ _*ಹಣೆಬರಹ*_ _ಎಂದು ಕರೆಯುತ್ತಾರೆ!_

  _ಹಾಗಾದರೆ, ಮನಸ್ಸಿಗೆ ಈ ಅಸಾಧಾರಣ ಸಾಮರ್ಥ್ಯ ಎಲ್ಲಿಂದ ಬಂದಿತು ಅಥವಾ ಯಾರು ಕೊಟ್ಟರು?!_

  _ನಾಳೆ ನೋಡೋಣ....._

     🙏🏼  _*ಧನ್ಯವಾದಗಳು*_  🙏🏼
•••••••••••••••••••••••••••••••••••••••••••

MATHS TIME LINE

MATHS TIME LINE https://mathigon.org/timeline