✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday, 10 June 2022

ಇಂದಿನ ವಿಷಯ:__ ಮಜ್ಜಿಗೆಯ ಮಾತು

  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
    ಸಂಚಿಕೆ-96, ದಿನಾಂಕ: 10.06.2022
•••••••••••••••••••••••••••••••••••••••
✍️: __ಇಂದಿನ ವಿಷಯ:__
  ಮಜ್ಜಿಗೆಯ ಮಾತು
•••••••••••••••••••••••••••••••••••••••
  "ಶಕ್ರಸ್ಯ ತಕ್ರ ದುರ್ಲಭಮ್" ಅಂದರೆ, ದೇವಲೋಕದ ಇಂದ್ರನಿಗೂ ಮಜ್ಜಿಗೆಯು ದುರ್ಲಭ; ಏಕೆಂದರೆ ಅಲ್ಲಿ‌ ಅಮೃತ ಇದೆಯಲ್ಲ, ಮತ್ತೆ ಮಜ್ಜಿಗೆ ಏಕೆ ಬೇಕು? 

  ಅಂದರೆ, "ಮಜ್ಜಿಗೆಯು ಭೂಲೋಕದ ಅಮೃತ " ಎಂದು ಹೇಳುವುದು ಶ್ಲೋಕದ ಉದ್ದೇಶ...
•••••••••••••••••••••••••••••••••••••••
  ಮಜ್ಜಿಗೆಯು, ಅಮೃತ ಸಮಾನ ಗುಣ ಮತ್ತು ಶಕ್ತಿಯನ್ನು ಹೊಂದಿದೆ.

  ಸರಿಯಾದ ರೀತಿಯಲ್ಲಿ ಬಳಸಿದರೆ ಅಮೃತವಾಗಿಯೂ, ತಪ್ಪಾಗಿ ಬಳಸಿದರೆ ವಿಷವಾಗಿಯೂ ಪರಿಣಮಿಸುವ ಕಾರಣ ಈ ಸಂಚಿಕೆ -- "ಮಜ್ಜಿಗೆಯ ಸರಿಯಾದ  ತಯಾರಿಕೆ ಮತ್ತು ಸೂಕ್ತ ರೀತಿಯ ಬಳಕೆಯಿಂದಾಗುವ ಸತ್ಪರಿಣಾಮಗಳನ್ನು ನೋಡೋಣ..."

• ಮಜ್ಜಿಗೆ ತಯಾರಿಸುವುದು ಹೇಗೆ?
ಉತ್ತರ:
  ಹುಳಿ ಇರದ, ಆಗತಾನೇ ಪೂರ್ಣರೂಪದಿಂದ ತಯಾರಾದ ಮೊಸರನ್ನು ಕೆನೆ ಸಮೇತ ಹದವಾಗಿ ಕಡೆಯಬೇಕು, ತೀರಾ ಅನಿವಾರ್ಯ ಎನ್ನುವವರು ಮಾತ್ರ ಮಿಕ್ಸರ್ ಬಳಸಿಯೂ ಮಜ್ಜಿಗೆ ತಯಾರಿಸಬಹುದು.

  ನಂತರ ತೆಳುವಲ್ಲದ ಒಂದು ಹದದಲ್ಲಿ ಜಿಡ್ಡು ಪ್ರತ್ಯೇಕಗೊಂಡು ಬೆಣ್ಣೆ ಬರುವ ತನಕ ಕಡೆದು, ಬೆಣ್ಣೆಯನ್ನು ಪ್ರತ್ಯೇಕಗೊಳಿಸಿದ ನಂತರ ಸೋಸಿದರೆ ಸಿಗುವ ಮಹೌಷಧಿ ರೂಪದ ಭೂಲೋಕದ ಅಮೃತವೇ ನಿಜವಾದ "ಮಜ್ಜಿಗೆ"

ಮಜ್ಜಿಗೆಗೆ ಎಕ್ಸ್‌ಪೈರಿ ಸಮಯ ಇದೆಯೇ!? ಹಾಗಿದ್ದಲ್ಲಿ ಬಳಸುವ ವಿಧಾನ:
  ಮೇಲೆ ಹೇಳಿದ ರೀತಿಯಲ್ಲಿ ಚೆನ್ನಾಗಿ ಕಡೆದ ಮಜ್ಜಿಗೆಯನ್ನು ಸೋಸಿದ ನಂತರ ಅದು ಕೇವಲ 45 ನಿಮಿಷಗಳ ಕಾಲಾವಧಿ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿರುತ್ತದೆ. ಅಂದರೆ, "ತಯಾರಾದ 45 ನಿಮಿಷಗಳಿಗೆ ಮಜ್ಜಿಗೆಯು ತನ್ನ ಅಮೃತತ್ವವನ್ನು ಅಥವಾ ಔಷಧೀಯ ಗುಣಗಳನ್ನು ಕಳೆದುಕೊಂಡು ಎಕ್ಸ್‌ಪೈರಿ ಆಗುತ್ತದೆ!!"
•••••••••••••••••••••••••••••••••••••••
ನಂತರ ಸೇವಿಸಿದರೆ ಏನಾಗುತ್ತದೆ?:
  ಕರುಳಿನ ಹೀರುವ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ. ಅಂದರೆ, ಆಚಾರ್ಯರು ಉದಾಹರಣೆ ಸಹಿತ ಹೀಗೆ ವಿವರಿಸುತ್ತಾರೆ - "ಗರಿಕೆ ಎಂಬ ಕಳೆಹುಲ್ಲು ಎಷ್ಟು ತೆಗೆದರೂ ಹೋಗದಿದ್ದರೆ, ಹುಳಿಯಾದ ಮಜ್ಜಿಗೆಯನ್ನು ಸುರಿದರೆ ಅದರ ಬೇರು ಸಂಪೂರ್ಣ ಒಣಗುತ್ತದೆ ಮತ್ತು ತನ್ನ ಆಹಾರ ಹೀರುವ ಸಾಮರ್ಥ್ಯವನ್ನು ಕಳೆದುಕೊಂಡು ಒಣಗಿಹೋಗುತ್ತದೆ!!" ಅಂದರೆ ಇಲ್ಲಿ ತಯಾರಾದ 3 ತಾಸುಗಳ ನಂತರದ ಮಜ್ಜಿಗೆಯ ಬಗ್ಗೆ ಹೇಳುತ್ತಾರೆ. ಇದನ್ನು ಯಾವುದೇ ಕಳೆನಾಶಕಕ್ಕಿಂತ ಹೆಚ್ವು ಸಮರ್ಥವಾಗಿ ನಮ್ಮ ರೈತರು ಬಳಸಬಹುದು. ಇನ್ನು ಮಾನವನ ಕರುಳುಗಳ ಗತಿ ಏನಾಗಬೇಡ? 🤔

  ಕೆಲವರು ಕೇಳಿದ್ದಾರೆ, ನಮ್ಮ ಮನೆಗಳಲ್ಲಿ ಹುಳಿ ಮಜ್ಜಿಗೆ ಊಟ ಮಾಡಿಯೇ ಜೀವಿಸಿದ್ದೇವೆ, ಏನೂ ಆಗಿಲ್ಲ...?! ಎಂದು... ಹೌದು, ಬಹುಶಃ ನಿಮ್ಮ ರಕ್ತಹೀನತೆ ಕ್ಯಾಲ್ಸಿಯಂ ಕೊರತೆ... ಮುಂತಾದವುಗಳಿಗೆ ಇದೇ ಕಾರಣ ಇರಬಹುದು ಗಮನಿಸಿ, ಇಲ್ಲ ಎಂದಾದರೆ ಸಂಧಿಗಳ ನೋವು, ಮಾಂಸಖಂಡಗಳ ನೋವಿಗೆ ಸಹ ಕಾರಣ ಆಗಿರಬಹುದು ಗಮನಿಸಿ ನೋಡಿ, ಏಕೆಂದರೆ ನಮ್ಮ ಗಮನಕ್ಕೆ ಬಂದಂತೆ ಇಂತವರ 'ಯೂರಿಕ್ ಆಮ್ಲ' ಅತಿಯಾಗಿ ಮತ್ತು ಶಾಶ್ವತವಾಗಿ ವೃದ್ಧಿಯಾಗಿರುವುದನ್ನು ನೋಡಿದ್ದೇವೆ ಮತ್ತು ಚಿಕಿತ್ಸೆಯಲ್ಲಿ ಸ್ಪಂದಿಸುವ ಅವರ ಸಾಮರ್ಥ್ಯ ಸಾಕಷ್ಟು ಕುಂಠಿತವಾಗಿರುವುದನ್ನೂ ಕಂಡಿದ್ದೇವೆ.

  ನಾಳೆಗೆ ಮುಂದುವರಿಯುತ್ತದೆ...
     🙏 ಧನ್ಯವಾದಗಳು 
•••••••••••••••••••••••••••••••••••••••
  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••

No comments:

Post a Comment

MATHS TIME LINE

MATHS TIME LINE https://mathigon.org/timeline