✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 1 May 2022

ಅಕ್ಷಯ_ತೃತೀಯಾ ....ಇದರ ಬಗ್ಗೆ ನಿಮಗೆ ಎ‍ಷ್ಟು ಗೊತ್ತು ?

ಅಕ್ಷಯ_ತೃತೀಯಾ, ಅದರ ಬಗ್ಗೆ ಸ್ವಲ್ಪ ಮಾಹಿತಿ ನಿಮಗಾಗಿ....

ಭಾರತೀಯರಲ್ಲಿ ಹಬ್ಬ ಹರಿದಿನ,ವ್ರತಗಳ ಆಚರಣೆ,ಪ್ರತಿ ಮಾಸದಲ್ಲಿಯೂ ಒಂದಲ್ಲ ಒಂದು ನಡೆಯುತ್ತಲೇ ಇರುತ್ತದೆ.
ವೈಶಾಖ ಮಾಸದ ಹಬ್ಬಗಳಲ್ಲಿ ಅತಿಮುಖ್ಯವಾದುದು #ಅಕ್ಷಯ #ತೃತೀಯಾ.
ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು  ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ.
ಅದರಲ್ಲಿಯೂ ಅಂದು #ರೋಹಿಣಿ ನಕ್ಷತ್ರವಿದ್ದರೆ ತುಂಬ ಶ್ರೇಷ್ಠ.
ನಾಳೆ #ರೋಹಿಣಿನಕ್ಷತ್ರ ಇರುವುದು ವಿಶೇಷ.

ಅಕ್ಷಯ ಎಂದರೆ ಕ್ಷಯಿಸದೆ,
ಇರುವುದು ಎಂದು ಅರ್ಥ.
ಈ ಹೆಸರು ಬರಲೂ ಕಾರಣವಿದೆ.

ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣನು,

ಬಹುಣಾತ್ರ ಕಿಮುಕ್ತೇನ
ಕಿಂ ಬಹ್ವಕ್ಷರಮಾಲಯಾ |
ವೈಶಾಖಸ್ಯ ಸಿತಾಮೇಕಾಂ
ತೃತೀಯಾಮಕ್ಷಯಾಂ ಶೃಣು ||

"ಬಹಳ ಅಕ್ಷರಮಾಲೆಯನ್ನು ಹೇಳುವುದಕ್ಕಿಂತ ಅಕ್ಷಯ ತೃತೀಯಾದ ಮಹತ್ವವನ್ನು ಕೇಳು" ಎಂದು ಹೇಳಿದ್ದಾನೆ.

ಇದಕ್ಕೆ ಜಯಾ ತಿಥಿ ಎಂಬ ಹೆಸರೂ ಇದೆ.
ಅಕ್ಷಯ ತೃತೀಯೆಯ ದಿನ ಗಂಗಾಸ್ನಾನ,{ ಗಂಗೆಯಲ್ಲಿ ಸ್ನಾನ ಮಾಡಲಾಗದಿದ್ದರೆ,ನಾವು ಸ್ನಾನ ಮಾಡುವ ನೀರಿಗೇ ಗಂಗೆಯನ್ನು ಆವಾಹಿಸಿ  ಸ್ನಾನ ಮಾಡಬಹುದು }ಧೂಪದೀಪಾದಿಗಳಿಂದ ವಿಷ್ಣುವಿನ ಆರಾಧನೆಗೆ ವಿಶೇಷ ಪ್ರಾಶಸ್ತ್ಯವಿದೆ.
ಅಂದು ಮಾಡುವ ಗಂಗಾಸ್ನಾನ,
ಜಪ,ತಪ,ಅಧ್ಯಯನ,ದಾನ,ಧರ್ಮ,
ತರ್ಪಣ,ಎಲ್ಲವೂ ಅಕ್ಷಯವಾಗಿ,
ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಅರ್ಥ.

ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.! 
ಅಕ್ಷರಾಭ್ಯಾಸ,ಮದುವೆ,
ಉಪನಯನ,ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,
ಪಂಚಾಂಗ ಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.

ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.

ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.

ಶ್ರೀ ಮಹಾವಿಷ್ಣುವು  ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.

ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯ ತದಿಗೆಯಂದು.

ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ ಅಕ್ಷಯ ತದಿಗೆ.
ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.

ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.

ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ  ನಂಬಿಕೆ ಜನಮಾನಸದಲ್ಲಿದೆ.

ದೇವತೆಗಳು ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಕಡೆದಾಗ ಲಕ್ಷ್ಮಿಯು ಅವತರಿಸಿದ ದಿನ ಅಕ್ಷಯ ತೃತೀಯವಾಗಿತ್ತು.

ಮಹಾಭಾರತದ ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿ ಶ್ರೀಕೃಷ್ಣನು ಅವಳಿಗೆ ಅಕ್ಷಯವಸ್ತ್ರದಾನ ಮಾಡಿ,ಮಾನ ರಕ್ಷಿಸಿದ ದಿನವೂ ಅಕ್ಷಯ ತೃತೀಯ.

ಚಳಿಗಾಲದಲ್ಲಿ ಮುಚ್ಚುವ,
ಪವಿತ್ರ ತೀರ್ಥಕ್ಷೇತ್ರ ಬದರಿಯ ದೇವಾಲಯದ ಬಾಗಿಲು ತೆರೆಯುವುದು ಅಕ್ಷಯತೃತೀಯೆಯ ದಿನ.

೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.

ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜಗತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ

ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ,ಎಂದು.
ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,
ರಾವಣನ ಅಣ್ಣ!!
ರಾವಣ ಅಣ್ಣನಿಂದ,
ಲಂಕಾನಗರವನ್ನು
ವಶಪಡಿಸಿಕೊಂಡು,ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ.
ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು  ವಿಶ್ವಕರ್ಮರಿಂದ ಸುವರ್ಣದಿಂದ ಭೂಮಿಪೂಜೆಯನ್ನು ಮಾಡಿಸಿದ್ದನು.ಇದರಿಂದಲೇ
ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.

ಆಂಧ್ರಪ್ರದೇಶದ ಸಿಂಹಾಚಲಂನಲ್ಲಿರುವ ನರಸಿಂಹ ದೇವಾಲಯದ ಮೂಲ ಮೂರ್ತಿಯ ಮುಖವನ್ನು ಉಗ್ರರೂಪ ಕಾಣದಿರಲಿ ಎಂದು ವರ್ಷದ ೩೬೪ ದಿನಗಳು ಗಂಧ ಲೇಪನದಿಂದ ಮುಚ್ಚಿರುತ್ತಾರೆ.
ಆದರೆ ಅಕ್ಷಯ ತೃತೀಯೆಯ ದಿನ ಮಾತ್ರ ಮುಖವನ್ನು ತೊಳೆದು,
ಗಂಧ ಲೇಪಿಸದೆ,
ಮುಖದರ್ಶನ ಮಾಡಿಸುತ್ತಾರೆ.
ದರ್ಶನಕ್ಕಾಗಿಯೇ ಅಂದು ಲಕ್ಷಾಂತರ ಭಕ್ತರು ಸಿಂಹಾಚಲಕ್ಕೆ ಆಗಮಿಸುತ್ತಾರೆ.

ಅಕ್ಷಯ ತೃತಿಯದ ದಿನ ಮಾಡುವ,ದಾನಧರ್ಮಾದಿಗಳು ಅಕ್ಷಯವಾಗುತ್ತವೆ ಎಂದಿರುವುದನ್ನು,
ಈಗ ಸ್ವರ್ಣವನ್ನು ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.
ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.

ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ-ಶಾಂತಿ-
ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು .

*ಸರ್ವೇಜನಾಃ ಸುಖಿನೋ ಭವಂತು.*

No comments:

Post a Comment

MATHS TIME LINE

MATHS TIME LINE https://mathigon.org/timeline