✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday, 12 April 2022

ವಿಷಯ: ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣೆ

*9-4-2022 ರಂದು ಮಂಗಳೂರು ಸಾಹಿತ್ಯ ಹಬ್ಬದಲ್ಲಿ ನಡೆಸಿದ ಸಂವಾದದಲ್ಲಿ ಶ್ರೀ ಅರವಿಂದ ಚೊಕ್ಕಾಡಿಯವರು ಪ್ರಸ್ತಾಪಿಸಿದ ಅಂಶಗಳು:*

ವಿಷಯ: ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣೆ
ಸಂವಾದ ನಡೆಸಿದವರು: ಶ್ರೀಮತಿ ಅಶ್ವಿನಿ ದೇಸಾಯಿ
ಸಹ ಸಂವಾದಕರು: ಶ್ರೀ ರೋಹಿತ್ ಚಕ್ರತೀರ್ಥ, ಅಧ್ಯಕ್ಷರು, ಪಠ್ಯ ಪರಿಷ್ಕರಣಾ ಸಮಿತಿ

* ಪಠ್ಯ ಪುಸ್ತಕ ಬೇಕೆ? ಯಾಕೆ ಬೇಕು? ಎಂಬ ಪ್ರಶ್ನೆಗೆ ಉತ್ತರಿಸುತ್ತೇನೆ. ಪಠ್ಯ ಪುಸ್ತಕ ಬೇಡ. ಗುರು ಕೇಂದ್ರಿತ ಶಿಕ್ಷಣದಲ್ಲಿ ಪಠ್ಯ ಪುಸ್ತಕ ಇರಲೂ ಇಲ್ಲ. ಗುರುವೇ ಪಠ್ಯವಸ್ತುವನ್ನು ನಿರ್ಧರಿಸುತ್ತಿದ್ದರು.

ಕ್ರಮೇಣ ಸಮಾಜ ಹೆಚ್ಚು ಸಂಕೀರ್ಣಗೊಳ್ಳುತ್ತಾ ಹೋದಂತೆ, ಆರ್ಥಿಕ ಚಟುವಟಿಕೆ ಹೆಚ್ಚಿ ಶಿಕ್ಷಣದಲ್ಲಿ ಪ್ರಭುತ್ವದ ಪಾಲುದಾರಿಕೆ ಜಾಸ್ತಿಯಾಗತೊಡಗಿತು. ಒಬ್ಬ ಗುರುವಿನ ಲೌಕಿಕ 'ತಲುಪುವ ವ್ಯಾಪ್ತಿ' ಗಿಂತ ಪ್ರಭುತ್ವಕ್ಕೆ ತಲುಪುವ ವ್ಯಾಪ್ತಿ ಜಾಸ್ತಿ ಇರುತ್ತದೆ. ಶಿಕ್ಷಣದಲ್ಲಿ ಪ್ರಭುತ್ವ ತೊಡಗಿಕೊಳ್ಳಲು ಅದು ಕಾರಣವಾಗುತ್ತದೆ. ರೋಹಿತ್ ಅವರು 1835 ರಲ್ಲಿ ವಸಾಹತುಶಾಹಿ ಶಿಕ್ಷಣ ಬಂದ ನಂತರ ಪಠ್ಯ ರಚನೆಯಾಗಿದೆ ಎಂದರು. ಅವರು ಕೊಟ್ಟ ಮಾಹಿತಿಗೆ ಸ್ವಲ್ಪ ಸೇರಿಸುತ್ತೇನೆ. ಪಠ್ಯ ವಸಾಹತುಶಾಹಿ ಶಿಕ್ಷಣಕ್ಕೂ ಮೊದಲೇ ಇದ್ದುದನ್ನು ಧರ್ಮಪಾಲ್ ಅವರು ತಮ್ಮ ' ಬ್ಯೂಟಿಫುಲ್ ಟ್ರೀ' ಕೃತಿಯಲ್ಲಿ ಸಾಬೀತುಪಡಿಸಿದ್ದಾರೆ. ಈ ವಿಚಾರವನ್ನು ಗಾಂಧೀಜಿಯವರೂ ಲಂಡನ್ ನಲ್ಲಿ ಪ್ರಸ್ತಾಪಿಸಿದ್ದು, ವಸಾಹತುಶಾಹಿತ್ವಕ್ಕೆ ಮೊದಲು ಭಾರತದಲ್ಲಿ 60 ವಿದ್ಯಾರ್ಥಿಗಳಿಗೆ ಒಂದು ಶಾಲೆ ಇದ್ದುದನ್ನು ಹೇಳಿದ್ದಾರೆ. ಆಗಿನ ಬಳ್ಳಾರಿ ಭಾಗದ ಪಠ್ಯದಲ್ಲಿ ಕನ್ನಡದಲ್ಲಿ ಶ್ರೀಮದ್ಭಾಗವತದ ವಿಷಯಗಳು, ವಚನಗಳು ಪಾಠಗಳಿದ್ದವು.

ವಸಾಹತುಶಾಹಿ ಶಿಕ್ಷಣದಲ್ಲೂ ಪ್ರಾರಂಭದಲ್ಲಿ ಯಾರಾದರೂ ಪಾಠ ಪುಸ್ತಕಗಳನ್ನು ಬರೆದುಕೊಟ್ಟರೆ ಅದರಲ್ಲಿ ಯಾವ ಪಾಠ ಪುಸ್ತಕ ಆಗಬಹುದು ಎಂದು‌ ಮುಖ್ಯೋಪಾಧ್ಯಾಯರೇ ತೀರ್ಮಾನಿಸುವ ಪದ್ಧತಿ ಇತ್ತು. ನಂತರ ನಾಲ್ಕೈದು ಲೇಖಕರು ಪಾಠ ಪುಸ್ತಕವನ್ನು ಬರೆದು ಶಿಕ್ಷಣ ಇಲಾಖೆಗೆ ಕೊಟ್ಟರೆ ಅದರಲ್ಲಿ ಯಾವುದು ಪಾಠ ಪುಸ್ತಕ ಆಗಬಹುದು ಎಂದು ಶಿಕ್ಷಣ ಇಲಾಖೆ ತೀರ್ಮಾನಿಸಿ ಅಳವಡಿಸಿಕೊಳ್ಳುತ್ತಿತ್ತು. ನಂತರ ಬಂದದ್ದು ಈ ಪಠ್ಯ ಪುಸ್ತಕ ರಚನಾ ಸಮಿತಿಗಳು. 

ಈಗಲೂ ನಿಜವಾಗಿ ಪಾಠ ಪುಸ್ತಕ ಬೇಡ. ಒಮ್ಮೆ ಎರಡು ತಿಂಗಳಾದರೂ ಪಾಠ ಪುಸ್ತಕ ಬರಲಿಲ್ಲ ಎಂದು ಪತ್ರಿಕೆಯವರು ಬರೆದಾಗ ನಾನು ಹೇಳಿದ್ದೆ; ನಾವು ಸಂಬಂಧಿಸಿದ ವಿಷಯದಲ್ಲಿ ಪರಿಣಿತರೆಂದೇ ಅಧ್ಯಾಪಕರಾಗಿ ನೇಮಕ ಆದವರು. ಸಿಲೆಬಸ್ ಏನು ಎಂದು ಗೊತ್ತಿದೆ. ಆಮೇಲೆ ಪಾಠ ಮಾಡಲು ಪುಸ್ತಕ ಬರಬೇಕೆಂದು ನಾವು ಯಾಕೆ ಯೋಚಿಸಬೇಕು ಎಂದು ಹೇಳಿದ್ದೆ.

ಆದರೆ ಅಧಿಕೃತ ಪಾಠ ಪುಸ್ತಕದ ಅಗತ್ಯ ಏನು ಎಂದು ಹೇಳುತ್ತೇನೆ. ಇವತ್ತು ಒಬ್ಬ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ವ್ಯಾಪ್ತಿ ಇದೆ. ನಾಳೆ ನಮ್ಮ ಒಬ್ಬ ವಿದ್ಯಾರ್ಥಿ ಲ್ಯಾಟಿನ್ ಅಮೆರಿಕದಲ್ಲಿ ವಾಸಿಸಬಹುದು. ಅವನಿಗೆ ಅಲ್ಲಿ ಯಾವ ಮೂಲ ಜ್ಞಾನ ಬೇಕಾಗುತ್ತದೆ ಎನ್ನುವ ಲ್ಯಾಟಿನ್ ಅಮೆರಿಕದ ಅಗತ್ಯದ ಅನುಭವ ನನಗಿಲ್ಲ. ಆದರೆ ಪ್ರಭುತ್ವಕ್ಕೆ ಅದನ್ನೂ ಗಳಿಸಿಕೊಳ್ಳುವ ಸಂಪನ್ಮೂಲಗಳಿವೆ. ಆದ್ದರಿಂದ ಪ್ರಭುತ್ವದ ಸೂಚನೆಯಂತೆ ಪಠ್ಯವನ್ನು ಮಾಡಿದರೆ ವಿದ್ಯಾರ್ಥಿಯ ವ್ಯಾಪ್ತಿ ಹೆಚ್ಚಾಗಲು ಸಾಧ್ಯವಿದೆ ಎನ್ನುವುದು ಒಂದು ಅಂಶ. 

ಎರಡನೆಯದಾಗಿ, ಅಧ್ಯಾಪಕರ ಮೇಲೆ ಸಮಾಜಕ್ಕೆ ವಿಶ್ವಾಸ ಇಲ್ಲದಾಗ ಅಥವಾ ಅಧ್ಯಾಪಕರು ಸಮಾಜದ ವಿಶ್ವಾಸಕ್ಕೆ ಅರ್ಹರಲ್ಲದೆ ಇದ್ದಾಗ, ಕಾನೂನಿಗೆ ಮಹತ್ವ ಬರುತ್ತದೆ. ಕಾನೂನಿನ ಸಮ್ಮುಖದಲ್ಲಿ ಇದು ಹೀಗೆ ಎಂದು ಅರ್ಥೈಸಲು ಒಂದು ದಾಖಲೆ ಬೇಕಲ್ಲ; ಅದಕ್ಕಾಗಿ ಪಾಠ ಪುಸ್ತಕ ಬೇಕು. 

ಮೂರನೆಯದಾಗಿ ಕಲಿಕಾ ಪ್ರಕ್ರಿಯೆಗೆ ಒಂದು ಸ್ಪಷ್ಟ ಚೌಕಟ್ಟು ಮತ್ತು ಕ್ರಮಬದ್ಧ ವಿಸ್ತರಣೆಗಾಗಿ ಪಠ್ಯ ಪುಸ್ತಕ ಬೇಕು. ಹಾಗಾದರೆ ಪಠ್ಯ ಪುಸ್ತಕ ಪರಿಪೂರ್ಣವೇ? ಎಂದು ಕೇಳಿದರೆ ಪರಿಪೂರ್ಣ ಅಲ್ಲ. ನೋಡಿ, ಅಧ್ಯಾಪಕರ ನೇಮಕಾತಿಯಾದಾಗ 72.66% ನವನು ನೇಮಕ ಆಗುತ್ತಾನೆ. 72.65 ನವ ನೇಮಕ ಆಗುವುದಿಲ್ಲ. 0.01% ಕಡಿಮೆ ಅಂಕದವನ ಮೆರಿಟ್ ಭಾರೀ ಕಡಿಮೆ ಇದ್ದು ನೇಮಕಾತಿಗೆ ಅನರ್ಹನೇ? ಎಂದು ಕೇಳಿದರೆ ಅಲ್ಲ; ಅವನೂ ಅರ್ಹನೇ. ಆದರೆ ಒಂದು ವ್ಯವಸ್ಥೆಯಲ್ಲಿ ಯಾವುದಾದರೊಂದು ಮಾನದಂಡ ಬೇಕಾಗುತ್ತದೆ. ಪಠ್ಯವೂ ಅಷ್ಟೆ.

* ಅಧಿಕೃತ ಪಠ್ಯ ಇಲ್ಲದ ನಲಿ- ಕಲಿಯ ವೈಫಲ್ಯದ ಬಗ್ಗೆ ಕೇಳಿದ್ದೀರಿ. ಅಲ್ಲಿ ಪಠ್ಯದ ಅಗತ್ಯ ಇಲ್ಲ. ಆದರೆ ಪಾಠ ಪುಸ್ತಕ ಕೊಡದ ಮೇಲೆ ಇಂತಿಂತಹ ಸಾಮರ್ಥ್ಯ ಮಗುವಿಗೆ ಬರಬೇಕು ಎಂದು ತಿಳಿಸಿ ಬೋಧನಾ ಸ್ವಾತಂತ್ರ್ಯವನ್ನು ಅಧ್ಯಾಪಕರಿಗೆ ಕೊಡಬೇಕು. ಅದು ಬಿಟ್ಟು ನಾವು ಕಾರ್ಡ್ ಕೊಡುತ್ತೇವೆ ಎನ್ನುವುದು, ಕಾರ್ಡು ಕೊಡದೆ ಇರುವುದು, ಯಾಕೆ ಮಾಡಲಿಲ್ಲ ಎಂದು ಕೇಳುವುದು ಇಂತಾದ್ದೆಲ್ಲ ಮಾಡಿದರೆ ವಿಫಲವಾಗುತ್ತದೆ.

* ಇತಿಹಾಸ ಪಠ್ಯ ಯಾಕೆ ವಿವಾದ ಆಗುತ್ತದೆ? ಎಂದು ಕೇಳಿದ್ದೀರಿ. ಇತಿಹಾಸದಲ್ಲಿ ರಾಜಕೀಯ ಇತಿಹಾಸ ಇದೆ. ಆ ಇತಿಹಾಸದ ಬೆಳವಣಿಗೆಯೇ ಇಂದಿನ ರಾಜಕೀಯವಾಗಿರುತ್ತದೆ. ಆದ್ದರಿಂದ ಇತಿಹಾಸದ ರಾಜಕೀಯ ಅಂಶಗಳಿಗೆ ವರ್ತಮಾನದ ರಾಜಕೀಯದ ಪ್ರವೇಶವೂ ಜಾಸ್ತಿ ಇರುತ್ತದೆ. ಅಲ್ಲಿ ಒಂದು ರಾಜಕೀಯ ಸಂಕಥನವನ್ನು ಪ್ರಶ್ನಿಸುವ ಮತ್ತೊಂದು ರಾಜಕೀಯ ಸಂಕಥನ ಇದ್ದಾಗ ರಾಜಕೀಯ ಸಂಕಥನಗಳ ನಡುವಿನ ಸಂಘರ್ಷದ ಪರಿಣಾಮವಾಗಿ ವಿವಾದ ಆಗುತ್ತದೆ. ಜನಜೀವನದ ಇತಿಹಾಸ ವಿವಾದ ಆಗುವುದಿಲ್ಲ.

ನಾನು ಜನ ಜೀವನದ ಇತಿಹಾಸ ಎಂದುದನ್ನು ರೋಹಿತ್ ಚಕ್ರತೀರ್ಥ ಅವರು," ಆರ್ಯರು ಮಧ್ಯ ಏಷ್ಯಾದಿಂದ ಬಂದರು. ಅದನ್ನು ವೇದ ಕಾಲೀನ ಸಂಸ್ಕೃತಿ ಎನ್ನುತ್ತಾರೆ" ಎಂಬ ವಾಕ್ಯದ ಮೂಲಕ ಜನ ಜೀವನದ ಇತಿಹಾಸವೂ ವಿವಾದ ಆಗಲು ಸಾಧ್ಯವಿದೆ ಎಂದರು. ಅವರು ಹೇಳಿದ ವಿಷಯ ಸರಿ. ಆದರೆ ಈ ವಾಕ್ಯ ಜನ ಜೀವನದ ಇತಿಹಾಸ ಅಲ್ಲ. ಅದು ರಾಜಕೀಯ ದೃಷ್ಠಿಕೋನದ ಸಂಕಥನ. ಆದ್ದರಿಂದ ವಿವಾದ ಆಗುತ್ತದೆ. ನಾನೊಂದು ವಾಕ್ಯ ಕೊಡುತ್ತೇನೆ. " ಋಗ್ವೇದದಲ್ಲಿ ನೂಲು ತೆಗೆದು ಬಟ್ಟೆ ಮಾಡುವುದನ್ನು ಹೇಳಿದ್ದಾರೆ". ಇದು ನನ್ನ ವಾಕ್ಯ. ಇದು ಜನ ಜೀವನದ ಇತಿಹಾಸ. ಇದು ಯಾರಿಗೂ ವಿವಾದದ ವಿಷಯವಲ್ಲ. ಇನ್ನೊಂದು ವಾಕ್ಯ ಕೊಡುತ್ತೇನೆ. "ಔರಂಗಜೇಬನು ಟೊಪ್ಪಿಯನ್ನು ತಾನೇ ಹೊಲಿದು ಮಾರಾಟಕ್ಕೆ ಕಳಿಸುತ್ತಿದ್ದನು". ಇದು ನನ್ನ ವಾಕ್ಯ. ಅವನು ರಾಜ. ಅವನ ಬಗ್ಗೆ ಸಿಕ್ಕಾಪಟ್ಟೆ ವಿವಾದಗಳಿವೆ. ಆದರೆ ನಾನು ಹೇಳಿದ ವಾಕ್ಯದ ಬಗ್ಗೆ ವಿವಾದ ಎಲ್ಲಿದೆ? ಇದು ಒಬ್ಬ ಮನುಷ್ಯನಾಗಿ ಅವನ ನಡೆವಳಿಕೆ ಅಷ್ಟೆ. ಆದರೆ ಇದೂ ರಾಜಕೀಯ ದೃಷ್ಟಿಕೋನದಲ್ಲಿ ಅರ್ಥೈಸಲ್ಪಟ್ಟಾಗ ವಿವಾದ ಆಗುತ್ತದೆ.

* ವಿವಾದಿತ ವಿಷಯವನ್ನು ಒಬ್ಬ ಅಧ್ಯಾಪಕನಾಗಿ ನಾನು ಹೇಗೆ ಪಾಠ ಮಾಡುತ್ತೇನೆ ಎಂದು ಕೇಳಿದ್ದೀರಿ. ಎಷ್ಟೇ ವಿವಾದಿತ ಪಾಠವಾದರೂ ನನಗೆ ಕಿಂಚಿತ್ತೂ ಸಮಸ್ಯೆ ಇಲ್ಲ. ಅದನ್ನು ಹೇಗೆ ಪಾಠ ಮಾಡಬೇಕು ಎಂದು ನನಗೆ ಪಾಠ ಪುಸ್ತಕ ಹೇಳುವುದಿಲ್ಲ. ಬದಲು ಹಿಸ್ಟರಿ ಮೆಥಡಾಲಜಿ ನನಗದನ್ನು ಹೇಳಿದೆ. ಪಾಠ ಪುಸ್ತಕ ನೀವು ಕೊಟ್ಟದ್ದನ್ನು ನಾನು ಮಾಡಬೇಕು. ಹೇಗೆ ಮಾಡಬೇಕು ಎನ್ನುವುದು ಮೆಥಡಾಲಜಿ ನನಗೆ ಏನನ್ನು ಹೇಳಿದೆಯೋ ಅದನ್ನು ಮಾಡಬೇಕು. ಇತಿಹಾಸದ ಬೋಧನೋದ್ದೇಶ ಏನು? ಇತಿಹಾಸ ಕಳೆದುಹೋಗಿದೆ. ಏನು ಮಾಡಿಯೂ ಅದನ್ನು ತಿದ್ದಲಾಗದು. ಆದರೆ," ಹಿಸ್ಟರಿ ಈಸ್ ಟೆಲಿಸ್ಕೋಪ್ ಆಫ್ ದ ಪಾಸ್ಟ್, ಮೈಕ್ರೋಸ್ಕೋಪ್ ಆಫ್ ದ ಪ್ರಸೆಂಟ್. ಹಾರೋಸ್ಕೋಪ್ ಆಫ್ ದ ಫ್ಯೂಚರ್". ಭವಿಷ್ಯದ ನಿರ್ಮಾಣ- ವರ್ತಮಾನದ ನಿರ್ವಹಣೆ. ಮಗುವಿಗೆ ಮಾನವ ನಾಗರಿಕತೆಯ ಯಾನದ ಪರಿಚಯ ಆಗಬೇಕು. ಅದರಲ್ಲಿ ಒಳಿತು, ಕೆಡುಕು, ಅಸಹ್ಯ ಎಲ್ಲವೂ ಇದೆ. ಇದನ್ನೆಲ್ಲ ಓದಿದಾಗ ಸಂಕುಚಿತ ದೃಷ್ಟಿಕೋನ ಹೊರಟು ಹೋಗಿ ವಿಶಾಲ ದೃಷ್ಟಿ ಪ್ರಾಪ್ತವಾಗಬೇಕು. ಎರಡನೆಯದಾಗಿ ಮಗುವಿನಲ್ಲಿ ಮೆಚ್ಚುಗೆಯ ಭಾವನೆ ಬರಬೇಕು. ವಿಮರ್ಶಾ ಪ್ರಜ್ಞೆಯೂ ಬರಬೇಕು. ಯಾವುದನ್ನು ಮೆಚ್ಚುಗೆಯಾಗಿ ಕೊಡಬೇಕು, ಯಾವುದನ್ನು ವಿಮರ್ಶೆಯಾಗಿ ಕೊಡಬೇಕು ಎಂದು ನಿರ್ಧರಿಸಲಿಕ್ಕಾಗಿಯೇ ನನಗೆ ಬಿ. ಎಡ್. ಪದವಿ ಕೊಟ್ಟಿರುವುದು. ನಾಲ್ಕನೆಯದಾಗಿ ಮಾನವ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞೆ ಮಗುವಿನಲ್ಲಿ ಬರಬೇಕು. ಒಬ್ಬ ಕೆಟ್ಟ ರಾಜ ಎಂದು ಭಾವಿಸಿ. ಅಂತಹವನಿಗೂ ಸಾವು ಇತ್ತು. ಸಾಯುವ ಕೊನೆಯ ಕ್ಷಣದಲ್ಲಾದರೂ ತಾನು ಮಾಡಿದ ಕೆಡುಕುಗಳು ತಪ್ಪಾಯಿತು ಎಂದು ಅವನಿಗೆ ಅನಿಸಿರಲಿಕ್ಕಿಲ್ಲವೆ? ಏಕೆಂದರೆ ಅವನೂ ಒಬ್ಬ ಮನುಷ್ಯ. ಅಥವಾ ಅನಿಸಿಲ್ಲದೆಯೂ ಇರಬಹುದು. ಅನಿಸಿದ್ದರೆ ಯಾಕೆ ಅನಿಸಿರುತ್ತದೆ? ಅನಿಸಿಲ್ಲದಿದ್ದರೆ ಯಾಕೆ ಅನಿಸಿಲ್ಲ? ಎಂಬ ಬಹುಮುಖಿ ಚಿಂತನೆಯ ಪ್ರಶ್ನೆಯನ್ನು ಮಗುವಿಗೆ ಬಿಟ್ಟುಬಿಡುತ್ತೇನೆ. ಮಗು ಅದರ ಬಗ್ಗೆ ಯೋಚಿಸಿದಂತೆಲ್ಲ ಮಾನವ ವರ್ತನೆಗಳನ್ನು ಅದು ತನ್ನೊಳಗೆ ತಾನೇ ಅಭ್ಯಾಸ ಮಾಡುತ್ತಾ ಹೋಗುತ್ತದೆ.

* ನಾನು ಹೇಳಲೇ ಬೇಕಾದ್ದು ಶಿಕ್ಷಣ ಯಶಸ್ವಿಯಾಗಬೇಕಾದರೆ ಪಠ್ಯ ವಸ್ತು- ಕಲಿಕಾ ಪ್ರಕ್ರಿಯೆ- ಮೌಲ್ಯಮಾಪನ ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿ ಬರಬೇಕು? ಉದಾಹರಣೆಗೆ ಭಾಷಾ ಪಠ್ಯಗಳು. ಆಲಿಸುವ ಸಾಮರ್ಥ್ಯ, ಮಾತನಾಡುವ ಸಾಮರ್ಥ್ಯ, ಓದುವ ಸಾಮರ್ಥ್ಯ, ಬರೆಯುವ ಸಾಮರ್ಥ್ಯ, ಚಿಂತನಾ ಸಾಮರ್ಥ್ಯ, ಪರಾಮರ್ಶನಾ ಸಾಮರ್ಥ್ಯ ಇಷ್ಟು ಅಂಶಗಳು ಭಾಷಾ ಬೋಧನೆಯಿಂದ ಮಗುವಿಗೆ ಬರಬೇಕು. ಈ 6 ಸಾಮರ್ಥ್ಯದಲ್ಲಿ ಬರೆಯುವ ಸಾಮರ್ಥ್ಯ ಒಂದು ಮಾತ್ರ ಪರೀಕ್ಷೆಗೆ ಒಳಗಾಗುತ್ತದೆ. ಹಾಗಾದರೆ ಉಳಿದ 5 ಸಾಮರ್ಥ್ಯಗಳು‌ ಮಗುವಿಗೆ ಬಂದಿದೆಯೊ ಇಲ್ಲವೊ? ಎಂದು ಗೊತ್ತಾಗುವುದು ಹೇಗೆ? ಗೊತ್ತಾಗುವುದೇ ಇಲ್ಲ. ಪ್ರಮಾಣ ಪತ್ರ ಕೊಡಲಾಗುತ್ತದೆ. ಪಠ್ಯ ರಚನೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆಯೆ? ಉದಾಹರಣೆಗೆ ಕನ್ನಡ ಪಠ್ಯ. ಒಂದು‌ ಅಭಿಜಾತ ಕಾವ್ಯ, ಒಂದು ನವೋದಯ, ಒಂದು ನವ್ಯ, ಒಂದು ಬಂಡಾಯ, ಒಬ್ಬ ಮಹಿಳೆ, ಒಬ್ಬ ದಲಿತ, ಒಬ್ಬ ಮುಸ್ಲಿಂ, ಒಬ್ಬ ಉತ್ತರ ಕರ್ನಾಟಕ, ಒಬ್ಬ ದಕ್ಷಿಣ ಕರ್ನಾಟಕ ಎಂದು ಕವಿಗೆ ನ್ಯಾಯ ಸಲ್ಲಿಸುವ ರೀತಿಯಲ್ಲಿ ಪಾಠ ಪುಸ್ತಕ ಇರುತ್ತದೆ. ಮಗುವಿಗೆ ನ್ಯಾಯ ಸಲ್ಲಿಸಿದ್ದೀರಾ? ಶೈಕ್ಷಣಿಕ ಮನೋವಿಜ್ಞಾನವನ್ನು ಅಭ್ಯಾಸ ಮಾಡಿದವನಿಗೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಾಳ ಹಾಕಿಕೊಂಡು ಹೇಳುವ ರೀತಿಯ ಕವಿತೆ ಇಷ್ಟವಾಗುತ್ತದೆ. ಪ್ರೌಢಶಾಲಾ ಮಕ್ಕಳಿಗೆ ಏರು ದನಿಯಲ್ಲಿ 'ಜೋಶ್' ನಲ್ಲಿ ಹೇಳುವ ಕವಿತೆ ಇಷ್ಟವಾಗುತ್ತದೆ ಎಂದು ಗೊತ್ತಿರುತ್ತದೆ. ಪಠ್ಯ ರಚನೆ ಮಾಡುವವರು ಈ ಆಧಾರದಲ್ಲಿ ರಚಿಸಬೇಕಾಗುತ್ತದೆ.

ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯ, ವಿಮರ್ಶಾತ್ಮಕತೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವ ಹಂತದಲ್ಲಿ ಎಷ್ಟು? ಲಾರೆನ್ಸ್ ಕೊಹಲ್ಬರ್ಗ್ ಅವರ ನೈತಿಕತೆಯ ವಿಕಾಸದ ಪ್ರಮೇಯದ ಅರಿವಿರುವವನಿಗೆ ಇದು ಗೊತ್ತಿರುತ್ತದೆ. ಒಂದು ಸನ್ನಿವೇಶವನ್ನು ಉಳಿದ ಸನ್ನಿವೇಶಕ್ಕಿಂತ ತೀರಾ ಪ್ರತ್ಯೇಕವಾಗಿ ಇರಿಸಿ ಅರ್ಥೈಸಬೇಕಾದ ವಿಷಯಗಳನ್ನು ಪ್ರೌಢ ಹಂತದ ವರೆಗೆ ಕೊಡಬಾರದು. ಆ ಸಾಮರ್ಥ್ಯ ಬರುವುದು ಪದವಿಯ ಹಂತದಲ್ಲಿ. ಪ್ರೌಢ ಹಂತದಲ್ಲಿ ಮಗು ನೈತಿಕತೆಯ ಸಾರ್ವತ್ರಿಕ ಅಭಿಸ್ಥಾಪನೆಯ ಹಂತದಲ್ಲಿರುತ್ತದೆ. ಅಂದರೆ ನೀತಿ ಸಾರ್ವತ್ರಿಕವಾಗಿ ಅನ್ವಯವಾಗಬೇಕೆಂದು ಭಾವಿಸುವುದು. ಹಿಂದೆ ಕನ್ನಡದಲ್ಲಿ ಗೀತಾ ನಾಗಭೂಷಣರ ಒಂದು ಪಾಠ ಇತ್ತು. ಅದರಲ್ಲಿ ಬಡ ತಾಯಿ ತನ್ನ ದೇಹವನ್ನು ವಿಕ್ರಯಿಸಿ ಮಗುವಿಗೆ ಒಳ್ಳೆಯದನ್ನು ಮಾಡಲು ಹೊರಡುತ್ತಾಳೆ. ಪಾಠದ ಆಶಯ ಒಳ್ಳೆಯದೇ. ಯಾರಿಗೆ? ನಮಗೆ. ನೀತಿ ಸಾರ್ವತ್ರಿಕವಾಗಿ ಒಂದೇ ರೀತಿ ಇರಬೇಕು ಎಂದು ಭಾವಿಸುವ ವ್ಯಕ್ತಿತ್ವ ವಿಕಾಸದ ಹಂತದಲ್ಲಿರುವ ಮಗು ಇದನ್ನು ಹೇಗೆ ಅರ್ಥೈಸಬೇಕು?

* ಭಾಷಾ ಕಲಿಕೆಯ ಬಗ್ಗೆ ರೋಹಿತ್ ಚಕ್ರತೀರ್ಥ ಅವರನ್ನು ನಾನು ಪೂರ್ತಿಯಾಗಿ ಸಮರ್ಥಿಸುತ್ತೇನೆ. ಭಾಷಾ ಕಲಿಕೆ ವ್ಯಾಕರಣದ ತಳಹದಿಯಲ್ಲೆ ನಡೆಯಬೇಕು.

* ಭಾರತೀಯತೆಯ ಮೇಲೆಯೇ ಪಠ್ಯವನ್ನು ರೂಪಿಸಬಹುದು ಎಂಬ ರೋಹಿತ್ ಅವರ ವಿಚಾರ ಚೆನ್ನಾಗಿದೆ.‌ಆದರೆ ಅದರ ಸಾಧ್ಯತೆಯ ಬಗ್ಗೆ ನನಗೆ ಅನುಮಾನಗಳಿವೆ. ಮೊದಲನೆಯದಾಗಿ ಇಂದು ನಮ್ಮೆಲ್ಲರ ಅಸ್ತಿತ್ವ ಅಂತಾರಾಷ್ಟ್ರೀಯ ಅಸ್ತಿತ್ವದ ಒಂದು ಭಾಗ. ಹಾಗಿರುವಾಗ ಅದರಿಂದ ಭಾರತೀಯತೆಯನ್ನು ಪ್ರತ್ಯೇಕಿಸುವುದು ಹೇಗೆ ಎಂಬ ಪ್ರಶ್ನೆ ಇದೆ. ಸಂಸ್ಕೃತಿಯ ಆಧಾರದಲ್ಲಿ ಪ್ರತ್ಯೇಕಿಸುತ್ತೇವೆ ಎಂದು ಭಾವಿಸಿ. ಆದರೆ ಶಿಕ್ಷಣದ ಉದ್ದೇಶ ಸಂಸ್ಕೃತಿ ಮಾತ್ರವೇ ಆಗಿರುವುದಿಲ್ಲ.‌ ಸಂಸ್ಕೃತಿಗೆ ಆರ್ಥಿಕತೆಯ ಬೆಂಬಲ ಬೇಕು. ಪುರಾತನ ಗುರುಕುಲ ಶಿಕ್ಷಣ ಅಂತರಂಗದ ಸಮೃದ್ಧತೆಗೆ ಜಾಸ್ತಿ ಒತ್ತುಕೊಟ್ಟು ಬಹಿರಂಗವನ್ನು ಹೆಚ್ಚು ಗಮನಿಸದೆ ಕುಸಿಯಿತು. ಇಂದಿನ ಆಧುನಿಕ ಶಿಕ್ಷಣ ಬಹಿರಂಗಕ್ಕೆ ಮಾತ್ರ ಆದ್ಯತೆ ಕೊಟ್ಟು ಅಂತರಂಗವನ್ನು ಖಾಲಿ ಇರಿಸಿ ಕುಸಿಯುತ್ತಿದೆ. ಶಿಕ್ಷಣವು ಆರ್ಥಿಕ-ಸಾಂಸ್ಕೃತಿಕ- ಆಧ್ಯಾತ್ಮಿಕ ಮೂರೂ ಅವಶ್ಯಕತೆಗಳನ್ನೂ ತುಂಬಿಕೊಡಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮೈತ್ರೇಯಿ ಕೇಳಿದ ಪ್ರಶ್ನೆಗೆ ಯಾಜ್ಞ ವಲ್ಕ್ಯ ನಾನು ನನ್ನನ್ನು ಪ್ರೀತಿಸುವುದರಿಂದ ನಿನ್ನನ್ನು ಪ್ರೀತಿಸುತ್ತೇನೆ. ನಾನು ನನ್ನನ್ನು ಪ್ರೀತಿಸುವುದರಿಂದ ದೇವರನ್ನು ಪ್ರೀತಿಸುತ್ತೇನೆ. ನಾನು ನನ್ನನ್ನು ಪ್ರೀತಿಸುವುದರಿಂದ ವಿಶ್ವವನ್ನು ಪ್ರೀತಿಸುತ್ತೇನೆ ಎನ್ನುತ್ತಾ ವಿಶ್ವದ ಒಂದು ಭಾಗವಾಗಿಯೇ ವ್ಯಕ್ತಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಬೃಹತ್ ವಿಶ್ವಾತ್ಮಕ ದೃಷ್ಟಿಯನ್ನು ಮಂಡಿಸುತ್ತಾರೆ. ಈ ಪರಿಕಲ್ಪನೆಯ ತಾತ್ವಿಕತೆಯನ್ನು ಅಂತಾರಾಷ್ಟ್ರೀಯ ಮುಖ್ಯವಾಹಿನಿಯ ಭಾಗವಾಗಿ ಮಾಡಿದಾಗ ಭಾರತೀಯತೆಯ ಆಧಾರದಲ್ಲೆ ಶಿಕ್ಷಣವನ್ನು ರೂಪಿಸಬಹುದು.

ಇಂತಹ ಪ್ರಯೋಗಗಳು ವೈಯಕ್ತಿಕವಾಗಿ ಯಶಸ್ವಿಯಾಗುತ್ತವೆ. ನನ್ನ ಇಬ್ಬರು ಮಕ್ಕಳೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯವರೇ. ಆದರೆ ಎಲ್ಲರೂ ಅದನ್ನೆ ಮಾಡಿ ಎಂದರೆ ಸಾರ್ವತ್ರಿಕ ಸ್ವೀಕಾರಾರ್ಹತೆ ಬರುತ್ತದಾ? ಸಾರ್ವತ್ರಿಕ ಸ್ವೀಕಾರಾರ್ಹತೆ ಬರುವುದಾದರೆ ಭಾರತೀಯತೆಯ ಆಧಾರದಲ್ಲಿ ಪಠ್ಯವನ್ನು ರೂಪಿಸಬಹುದು.

* ಕಂಠಪಾಠ ಮತ್ತು ಅರ್ಥ ಮಾಡಿಕೊಂಡು ಕಲಿಯುವ ವಿಚಾರದಲ್ಲಿ ಕೇಳಿದ ಪ್ರಶ್ನೆಯ ಬಗ್ಗೆ ಉತ್ತರಿಸುವ ಮೊದಲು ಈ ಚರ್ಚೆಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಇದು ತಂದೆಯ ಕಾಲದಲ್ಲಿ ಕಿರುಕುಳ ಕೊಡುತ್ತಿದ್ದ ಬೆಕ್ಕನ್ನು ಕಟ್ಟಿ ಹಾಕಿ ಶ್ರಾದ್ಧ ಮಾಡಿದ್ದನ್ನು ನೋಡಿ ನೋಡಿ ಅದೂ ಶ್ರಾದ್ಧದ ಪದ್ಧತಿಯೇ ಎಂದು ಭಾವಿಸಿದ ಮಗ ತನ್ನ ಕಾಲದಲ್ಲಿ ಪಕ್ಕದ ಮನೆಯಿಂದ ಬೆಕ್ಕನ್ನು ತಂದು ಕಟ್ಟಿ ಹಾಕಿ ಶ್ರಾದ್ಧ ಮಾಡಿದ ಹಾಗೆ ಆಗಿದೆ. ಕಂಠ ಪಾಠ ಬೇಡ ಎಂದರೆ ಕಂಠ ಪಾಠದ ಮೂಲಕವೇ ಸಾವಿರಾರು ವರ್ಷಗಳ ಕಾಲ ನೆನಪಿರಿಸಿಕೊಂಡು ಬಂದ ಸಾಹಿತ್ಯ ಪರಂಪರೆಯ ಹಿಂದೆ ಇರುವ ನೆನಪಿನ ಸಾಮರ್ಥ್ಯಕ್ಕೆ ಆಕ್ಷೇಪ ಅಲ್ಲ. ಅದು ಕೇವಲ ಯಾಂತ್ರಿಕ ಕಲಿಕೆ ಆಗಬಾರದು ಎಂದಷ್ಟೆ. ಕಂಠ ಪಾಠವೂ ಕಲಿಕೆಯ ಒಂದು ಪದ್ಧತಿಯೇ. ಎಲ್ಲಿ ಕಂಠ ಪಾಠ ಪದ್ಧತಿಯನ್ನು ಅಳವಡಿಸಬೇಕು, ಎಲ್ಲಿ ಅರ್ಥ ಮಾಡಿಕೊಳ್ಳುವ ಪದ್ಧತಿಯನ್ನು ಅನುಸರಿಸಬೇಕು ಎಂದು ಗೊತ್ತಿರಬೇಕು.

* ವೈವಿಧ್ಯದಲ್ಲಿ ಏಕತೆಯೊ- ಏಕತೆಯಲ್ಲಿ ವೈವಿಧ್ಯವೊ ಎಂಬ ಶಬ್ದ ಜಿಜ್ಞಾಸೆಗೆ ನಾನಿಲ್ಲಿ ಹೋಗುವುದಿಲ್ಲ. ನಿಮ್ಮ ಪ್ರಶ್ನೆ ಅರ್ಥ ಆಗಿದೆ. ವೈವಿಧ್ಯವನ್ನು ಪ್ರತಿನಿಧಿಸುವ ಹಾಗೆ ಪಠ್ಯವನ್ನು ಮಾಡಬಹುದೆ? ಎಂದು ನಿಮ್ಮ ಪ್ರಶ್ನೆ. 

ಇಲ್ಲಿ ಪರಿಕಲ್ಪನಾ ಸ್ಪಷ್ಟತೆ ಬೇಕು. ಈಗ ಇತಿಹಾಸ ಮತ್ತು ಚರಿತ್ರೆ ಎರಡನ್ನೂ ಒಂದೇ ಎಂದು ನಾವು ಭಾವಿಸುತ್ತೇವೆ. ಆದರದು ಹಾಗಿಲ್ಲ. ಚರಿತ್ರೆ ನಿರೂಪಣೆ ಭಾರತೀಯ ಪದ್ಧತಿ. ರಾಮ ಚರಿತ್ರೆ, ಶರಭ ಚರಿತ್ರೆ...ಹೀಗೆ. ಅದರಲ್ಲಿ ರೂಪಕ ಭಾಷೆಯ ಬಳಕೆ ಇದೆ. ಆದರೆ ಮೌಲ್ಯಾತ್ಮಕವಾದದ್ದನ್ನು ಅದು ದಾಖಲಿಸುತ್ತದೆ. ಅದು ರಚನೆಗೊಂಡ ಕಾಲಮಾನಕ್ಕೆ ಕೆಡುಕು ಎನಿಸಿದ್ದನ್ನು ಹೆಚ್ಚು ಉಳಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ರೂಪಕ ಭಾಷೆ ಇರಕೂಡದು. ಅದು ಘಟನೆಗಳ ಸರಮಾಲೆ. ಒಳ್ಳೆಯದೊ ಕೆಟ್ಟದೊ ಎನ್ನುವುದು ಮುಖ್ಯವಲ್ಲ. ನನಗೆ ಸಿಕ್ಕಿದ ದಾಖಲೆ ಇದನ್ನು ಹೇಳುತ್ತದೆ ಎಂದಷ್ಟೆ. ಅದೇ ರೀತಿ ಅಸಮಾನತೆ ಮತ್ತು ಭಿನ್ನತೆ. ಭಿನ್ನತೆ ಪ್ರಕೃತಿಯ ನಿಯಮ. ಅಸಮಾನತೆ ಪ್ರಕೃತಿ ನಿಯಮವಲ್ಲ. ಸಿಂಹಕ್ಕಿಂತ ದುರ್ಬಲವಾದ ಜಿಂಕೆಗೆ ಸಿಂಹ ನಾನು ನೀರು ಕುಡಿಯುವ ಕೊಳದಲ್ಲಿ ನೀನು ನೀರು ಕುಡಿಯಬಾರದು ಎಂದು ಯಾವತ್ತೂ ಹೇಳುವುದಿಲ್ಲ.

ಇಲ್ಲಿ ಕಲಿಕಾ ವಸ್ತು ಮತ್ತು ಕಲಿಕಾ ಸಾಮರ್ಥ್ಯಗಳು ಬೇರೆ ಬೇರೆ ಎಂದು ಅರ್ಥ ಮಾಡಿಕೊಳ್ಳಬೇಕು. ದಕ್ಷಿಣ ಕನ್ನಡದಲ್ಲಿ ಮಳೆಗಾಲ ಹಾಕಿಕೊಳ್ಳಲು ಗೊರಬ್ಬೆ ಎಂದು ಮಾಡುತ್ತಾರೆ. ಇದನ್ನು ಮಕ್ಕಳಿಗೆ ಕಲಿಸುತ್ತೀರಿ ಎಂದು ಭಾವಿಸಿ. ಬೀದರ್‌ನಲ್ಲಿ ಬಿದರಿ ಕೆತ್ತನೆಯನ್ನು ಮಕ್ಕಳಿಗೆ ಕಲಿಸುತ್ತೀರಿ ಎಂದು ಭಾವಿಸಿ. ಎರಡೂ ಜಿಲ್ಲೆಯ ಮಕ್ಕಳಿಗೆ ಕಲಿಕಾ ವಸ್ತುಗಳು ಬೇರೆ ಬೇರೆ. ಆದರೆ ಎರಡು ಜಿಲ್ಲೆಯವರಲ್ಲೂ ಕಲಿಕಾ ಸಾಮರ್ಥ್ಯ ಸಮಾನವಾಗಿ ಹೆಚ್ಚಾಗಿದೆ. ಪಠ್ಯ ಪುಸ್ತಕಗಳನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಿದರೆ ವೈವಿಧ್ಯಗಳನ್ನು ಹೆಚ್ಚು ಒಳಗೊಳಿಸಿಕೊಂಡು ಪಠ್ಯವನ್ನು ಮಾಡಬಹುದು.

ಆದರೆ ಈ ವೈವಿಧ್ಯ ಮತ್ತು ಏಕತೆಯನ್ನು ತೀರಾ ಅತಿಯಾಗಿಸಬಾರದು. ಹಾಗೆ ವೈವಿಧ್ಯ ಎಂದರೆ ಒಬ್ಬೊಬ್ಬ ವ್ಯಕ್ತಿಯೂ ವೈವಿಧ್ಯವೇ. ಹಾಗೆಂದು ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಪಠ್ಯ ಮಾಡಲು ಬರುವುದಿಲ್ಲ. ವೈವಿಧ್ಯತೆಯ ಪ್ರತಿಪಾದನೆಯು ರಾಷ್ಟ್ರವನ್ನು ಛಿದ್ರಗೊಳಿಸುವ ಪ್ರತಿಪಾದನೆಯಾಗದೆ, ಏಕತೆಯ ಪ್ರತಿಪಾದನೆಯು ಭಿನ್ನ ಅಸ್ತಿತ್ವವೇ  ಇಲ್ಲದಂತೆ ಮಾಡುವ ಪ್ರತಿಪಾದನೆಯಾಗದೆ ಒಂದು ಸಾಮಾನ್ಯ ಸ್ತರದಲ್ಲಿ ಹೊಂದಾಣಿಕೆಯನ್ನು ಸಾಧಿಸುವ ಮಾದರಿಯಲ್ಲಿ ಇರಬೇಕಾಗುತ್ತದೆ.

ಆದರೆ ಬಹುತ್ವವನ್ನು ಒಳಗೊಳಿಸಲು ಜಿಲ್ಲಾ ಮಟ್ಟದ ಪಠ್ಯಗಳಿಗೆ ಸಾಧ್ಯವಾದರೂ ಆಗ ಶಿಕ್ಷಣ ಯಶಸ್ಸನ್ನು ಕಾಣಬೇಕಾದರೆ ಆರ್ಥಿಕ ಮತ್ತು ಆಡಳಿತಾತ್ಮಕ ಮರು ರಚನೆಗಳು ಬೇಕಾಗುತ್ತವೆ. ಆರ್ಥಿಕತೆಯೊಂದಿಗೆ ಸಂಬಂಧವನ್ನು ಸಾಧಿಸದ ಶಿಕ್ಷಣ ಯಶಸ್ವಿಯಾಗುವುದಿಲ್ಲ. ಕಾರ್ಪೊರೇಟ್ ರಂಗದ ಅಂತಾರಾಷ್ಟ್ರೀಯ ಮುಕ್ತ ಆರ್ಥಿಕತೆ, ಸ್ವಲ್ಪ ಮಟ್ಟಿಗೆ ಮಧ್ಯಮ ಹಂತದಲ್ಲಿ ಸರಕಾರದ ಮಧ್ಯಪ್ರವೇಶ ಇರುವ ನೆಹರೂವಿಯನ್ ಮಾದರಿಯ ಆರ್ಥಿಕತೆ, ತಳಹಂತದಲ್ಲಿ ಸರಕಾರದ ಪ್ರವೇಶ ಇಲ್ಲದ ಆದರೆ ಜನರ ಸಹಭಾಗಿತ್ವದ ಗಾಂಧಿಯನ್ ಮಾದರಿಯ ಸಹಕಾರಾತ್ಮಕ ಆರ್ಥಿಕತೆಯ ಸ್ವರೂಪವನ್ನು ಮಾಡಿಕೊಂಡರೆ ಅಲ್ಲಿ ಜಿಲ್ಲಾ ಮಟ್ಟದ ಪಠ್ಯಗಳು ಯಶಸ್ವಿಯಾಗಲು ಸಾಧ್ಯವಿದೆ.

*💦SSLC 2022 OFFICIAL KEY ANSWERS*🍅ಮಾರ್ಚ ಎಪ್ರೀಲ್ 2022 ರ SSLC ಮುಖ್ಯ ಪರೀಕ್ಷೆಯ ಮಾದರಿ ಕೀ ಉತ್ತರಗಳು ಅಧಿಕೃತವಾಗಿ ಪ್ರಕಟವಾಗಿದ್ದು, ವೀಕ್ಷಿಸಲು*👇🏿

ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿCLICK 

Friday, 1 April 2022

_*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿

🦢  _*ಅಮೃತಾತ್ಮರೇ, ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು*_  🦢

  _*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-92*_
     _*ದಿನಾಂಕ: 02.04.2022*_
••••••••••••••••••••••••••••••••••••••••••••
✍️: _ಇಂದಿನ ವಿಷಯ:_
   _*ಆರೋಗ್ಯದಲ್ಲಿ ಯುಗಾದಿಯ ಮಹತ್ವ*_ 🌿
••••••••••••••••••••••••••••••••••••••••••••
  _ಯುಗಾದಿಯಲ್ಲಿ "ಮಾನವ ಶರೀರದಲ್ಲಿ ಆಗುವ ಬದಲಾವಣೆ" ಮತ್ತು "ಬೇವು-ಬೆಲ್ಲ" ಈ ಎರಡರ ಮಹತ್ವವನ್ನು ನೋಡಿದರೆ ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿನ ಆಹಾರದಿಂದ ಒದಗಿಬರುವ ಆರೋಗ್ಯದ ಮಹತ್ವವನ್ನು ತಿಳಿಯಬಹುದು. ಇದಕ್ಕಾಗಿ ಭಾರತೀಯರು ಕಂಡುಕೊಂಡ "ಆಸ್ಪತ್ರೆ ರಹಿತ ಜೀವನ" ಮತ್ತು "ಆಯುರ್ವೇದ ಚಿಕಿತ್ಸೆ" ಎರಡನ್ನೂ ಅರಿಯಬಹುದು._
          🌿🌿🌿🌿🌿

*ಯುಗಾದಿಯಲ್ಲಿ ಮಾನವ ಶರೀರದಲ್ಲಿ ಆಗುವ ಬದಲಾವಣೆ:*

  _ಮಾನವನ ಶರೀರದಲ್ಲಿ ನಿತ್ಯವೂ ಹೆಚ್ಚುವರಿ ಶಕ್ತಿಯು ಶೇಖರಣೆಯಾಗುತ್ತದೆ. ಇದನ್ನು ಆಯುರ್ವೇದಿಯ ದೃಷ್ಟಿಯಲ್ಲಿ "ಕಫ" ಎಂದು ಕರೆಯುತ್ತೇವೆ, ಇದು ನಾವು ಉಗುಳುವ ಕಫವಲ್ಲ, ಇಲ್ಲಿ ಶರೀರದ‌ ಸರ್ವಶಕ್ತಿಯನ್ನೇ ಕಫ ಎಂದು ಸಂಬೋಧಿಸಲಾಗಿದೆ._

  _ವಸಂತ ಋತುವಿನ ಆರಂಭದ ಚೈತ್ರಮಾಸದಲ್ಲಿ ಬರುವ ಬಿಸಿಲಿನಿಂದಾಗಿ ಶಕ್ತಿರೂಪದ ಈ ಕಫವು ಕರಗಿ ಹರಿಯಲಾರಂಭಿಸುತ್ತದೆ, ಆಗ ಅದನ್ನು ಉತ್ಲೇಷ ಎಂದು ಕರೆಯುತ್ತಾರೆ. ಅಂದರೆ ತನ್ನ ಸ್ಥಾನದಿಂದ ಚ್ಯುತವಾದ ಈ ಶಕ್ತಿಯು ಶರೀರಕ್ಕೆ ಬಲ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಅದನ್ನು ಮಲರೂಪದ ಕಫ ಎನ್ನುತ್ತೇವೆ. ಮುಂದೆ ಇದೇ ಕಫವು ಇಡೀ ವರ್ಷಪೂರ್ತಿ ಸೋಂಕಿಗೆ ಆಹಾರವಾಗುತ್ತದೆ ಮತ್ತು ಸೋಂಕು ಉಳಿದುಕೊಳ್ಳಲು ಸಹಕರಿಸುತ್ತದೆ!!_ 🤔

  _ಅಂದರೆ, ಸೋಂಕು ಜೀವಾಣು ಈ ಶರೀರದಲ್ಲಿ ಉಳಿಯಲು ಅದಕ್ಕೆ ಅಂಟಿನಂತಹ ಸೂಕ್ತ ವಾತಾವರಣ ಬೇಕು ಮತ್ತು ತಿನ್ನಲು ಆಹಾರ ಬೇಕು, ಅದನ್ನು ಪೂರೈಸುವ ವ್ಯವಸ್ಥೆ ಈ ಶರೀರದಲ್ಲಿ ಇದ್ದರೆ ಅದು ಒಳಗೆ ಉಳಿದುಕೊಂಡು, ತನ್ನ ಸಂತತಿಯನ್ನು ಬೆಳೆಸುತ್ತದೆ, ಮತ್ತು ರೋಗವನ್ನು ತರುತ್ತದೆ._ 🤭
          🌿🌿🌿🌿🌿

*ರೋಗ ಬರುವುದನ್ನು ತಡೆಯುವ ವಿಧಾನಗಳು:*

*1) ಆಸ್ಪತ್ರೆ ರಹಿತವಾಗಿ*
*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

*1) ಆಸ್ಪತ್ರೆ ರಹಿತ ರೋಗ ತಡೆ:*
  _ಸನಾತನ ಭಾರತೀಯ ಆಯುರ್ವೇದವು ಸರ್ವರ ಆರೋಗ್ಯವನ್ನು ಕಾಪಾಡಲು ಆಸ್ಪತ್ರೆ ರಹಿತವಾಗಿ ಮನೆಯಲ್ಲಿಯೇ ಏನು ಮಾಡಬಹುದೆಂದು ಅಲೋಚಿಸುತ್ತದೆ. ಹಾಗಾಗಿ, ಈ ಅನಗತ್ಯ "ಮಲ ರೂಪೀ ಕಫ"ದ ಹರಿವನ್ನು ಹೋಗಲಾಡಿಸಲು ಬೇವು-ಬೆಲ್ಲವನ್ನು ರೂಢಿಗೆ ತಂದಿದೆ!_
          •~•~•~•~•

  _ಭಾರತೀಯ ಭೂಮಿ ದೇವಭೂಮಿ, ಇಲ್ಲಿ ಎಲ್ಲವೂ ಪೂಜನೀಯ, ಜನರು ಯಾವುದೇ ವೈಜ್ಞಾನಿಕ ವಿಷಯಗಳನ್ನು ಪಾಲಿಸಿ ರೋಗರಹಿತವಾಗಿರಲು, ಅದನ್ನು ಅವರ ದಾರಿಯಲ್ಲೇ ಹೇಳಬೇಕಾಗುತ್ತದೆ..._

  _ಆದ್ದರಿಂದ ಪ್ರತಿ ಹಬ್ಬದಲ್ಲಿಯೂ ನಿರ್ದಿಷ್ಟವಾಗಿ ಹೇಳುವ ಎಳ್ಳು-ಬೆಲ್ಲ, ಬೇವು-ಬೆಲ್ಲ, ಪ್ರೋಟೀನ್‌ಯುಕ್ತ ಉಂಡೆಗಳು ಹೀಗೆ, ಆಯಾ ಋತುವಿನಲ್ಲಿ ಶರೀರದೊಳಗೆ ಆಗುವ ರೋಗಕಾರಕ ಶಕ್ತಿ ಉತ್ಕ್ಲೇಷಗಳನ್ನು, ಆಯುರ್ವೇದೋಕ್ತ  ವಿಶೇಷವಾದ ಆಹಾರಗಳು ಶಮನಗೊಳಿಸಿ ನಮ್ಮ  ಜೀವಕೋಶಗಳನ್ನು ಸಂರಕ್ಷಿಸುತ್ತವೆ._
*ಮತ್ತು* 
  _ಆಚರಣೆಯ ಹಿನ್ನೆಲೆಯಲ್ಲಿನ ದೈವೀಕ‌ ಮನಸ್ಥಿತಿಯ ಕಾರಣ ಮನಸ್ಸಿನ ಪ್ರಸನ್ನತೆ ಉಂಟಾಗಿ ಹಾರ್ಮೋನ್‌ಗಳನ್ನು ಉನ್ನತೀಕರಿಸಿ ಜೀವಕೋಶಗಳ ಸತ್‌ಶಕ್ತಿಯನ್ನು  ವರ್ಧಿಸುತ್ತವೆ, ತನ್ಮೂಲಕ ಈ ಕಾರಣದಿಂದ ಬರಬಹುದಾದ ರೋಗಗಳನ್ನು ಒಂದು ವರ್ಷಪೂರ್ತಿ ತಡೆದುಬಿಡುತ್ತವೆ!_ 🤔 -- *"ಔಷಧಗಳಿಲ್ಲದೇ! ಆಸ್ಪತ್ರೆಗಳಿಲ್ಲದೇ!! ಖರ್ಚಿಲ್ಲದೇ!!!"*
          •~•~•~•~•
*ಬೇವು-ಬೆಲ್ಲದ ಮಹತ್ವ:*

*ಬೇವು:*
  _ಸಂಸ್ಕೃತದಲ್ಲಿ "ನಿಂಬ" ಎಂದು ಕರೆಸಿಕೊಳ್ಳುವ ಬೇವನ್ನು ತುಸುವೇ ಪ್ರಮಾಣದಲ್ಲಿ ಸೇವಿಸುವುದರಿಂದ ಅದು ವಿಕೃತರೂಪದಿಂದ ವೃದ್ಧಿಯಾದ ಕಫವನ್ನು ಶಮನಗೊಳಿಸಿ, ಇಡೀ ವರ್ಷ ಕಫದಿಂದ ಉಂಟಾಗುವ ಅನೇಕ ರೋಗಗಳನ್ನು ತಡೆಯುತ್ತದೆ._

          🌿🌿🌿🌿🌿

*2) ಆಯುರ್ವೇದೀಯ ಆಸ್ಪತ್ರೆಯಲ್ಲಿ (ಇದೊಂದು ಸೇವಾ ಕೇಂದ್ರ, ರಿಪೇರಿ ಕೇಂದ್ರವಲ್ಲ!)*

  _ಆಯುರ್ವೇದ ಅಸ್ಪತ್ರೆಗಳು "ಸೇವಾ ಕೇಂದ್ರಗಳು" ರೋಗ ತರಿಸಿ, ಔಷಧಿ ಕೊಟ್ಟು ಸರಿಪಡಿಸಲು ಯೋಚಿಸುವ "ರಿಪೇರಿ ಕೇಂದ್ರಗಳಲ್ಲ." ನಮ್ಮ ಮೋಟಾರ್ ವಾಹನ ಕೆಟ್ಟಮೇಲೆ ರಿಪೇರಿಗೆ ಒಯ್ಯುತ್ತೇವೆಯೋ ಅಥವಾ ಕೆಡುವ ಮೊದಲೇ  ಸೇವಾಕೇಂದ್ರಕ್ಕೋ?_

*ವಮನ ವಸಂತ:*
  _ವಸಂತ ಋತುವಿನಲ್ಲಿ ಹೇಳುವ ವಮನವೆಂಬ ಚಿಕಿತ್ಸೆಯು ಕಫವನ್ನು ಶಮನಗೊಳಿಸುವ ಬದಲು ಶೋಧನ ಮಾಡಿ ಹೊರತೆಗೆಯುತ್ತದೆ. ಅತ್ಯಂತ ಶ್ರೇಷ್ಠ ವಿಧಾನವಾದ ಇದನ್ನು "ಸ್ವಸ್ಥ ಪಂಚಕರ್ಮ" ಎಂದು ಕರೆಯುತ್ತೇವೆ._

  _ಪಂಚಕರ್ಮದ ಈ ಶೋಧನ ಚಿಕಿತ್ಸೆಯು ಶರೀರದ ಯಾವುದೇ ಜೀವಕೋಶಗಳಲ್ಲಿ ಅಡಗಿ ಕುಳಿತಿರಬಹುದಾದ "ಮಲರೂಪೀ ಕಫ" ವನ್ನು ಎಳೆದು ಹೊರಹಾಕುತ್ತದೆ, ಆದ್ದರಿಂದ ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ._

  _ಆದರೆ, ಎಲ್ಲರಿಗೂ ಆಸ್ಪತ್ರೆಗೆ ಬಂದು ಶೋಧನ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರಬಹುದು, ಆದ್ದರಿಂದ ಋತು ಬದಲಾವಣೆಯ ಸಂದರ್ಭದಲ್ಲಿ ಅಂದರೆ ಋತುಸಂಧಿಕಾಲದಲ್ಲಿ ಆಗುವ ಶಾರೀರಿಕ ವಿಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು, ಮುಂಬರುವ ರೋಗಗಳನ್ನು ತಡೆಯಲು, ಒಂದೊಂದು ಹಬ್ಬದ ಆಚರಣೆಯನ್ನೂ ಮತ್ತು ವಿಶೇಷ ಆಹಾರಗಳನ್ನೂ ಹೇಳುತ್ತಾ ಮನುಕುಲವನ್ನು "ಸಂಪೂರ್ಣ ರೋಗರಹಿತವಾಗಿ ಇಡುತ್ತದೆ."_
••••••••••••••••••••••••••••
••••••••••••••••••••••••••••••••••••••••••••
  🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_ 🌴
•••••••••••••••••••••••••••••••••••

MATHS TIME LINE

MATHS TIME LINE https://mathigon.org/timeline