ಮೊಟ್ಟೆ ಮೊದಲಾ..? ಕೋಳಿ ಮೊದಲಾ..? ಉತ್ತರ ಇಲ್ಲಿದೆ ನೋಡಿ..
ಹಾಯ್ ಫ್ರೆಂಡ್ಸ್, ಮೊಟ್ಟೆ ಮೊದ್ಲಾ..ಕೋಳಿ ಮೊದಲಾ..? ಈ ಪ್ರಶ್ನೆ ಜಗತ್ತಿನ ಅತೀ ಹಳೇ ಪ್ರಶ್ನೆಗಳಲ್ಲಿ ಒಂದು.. ಅಷ್ಟೇ ತಲೆ ತಿನ್ನೋ ಪ್ರಶ್ನೆ ಕೂಡ ಹೌದು.. ಕೋಳಿ ಮೊದಲು ಅಂದ್ರೆ ಕೋಳಿ ಇಲ್ಲದೇ ಮೊಟ್ಟೆ ಹೇಗೆ ಬಂತು ಅಂತ ಹೇಳ್ತಾರೆ.. ಕೋಳಿ ಮೊದಲು ಅಂದ್ರೆ ಮೊಟ್ಟೆ ಇಲ್ಲದೇ ಕೋಳಿ ಹೇಗೆ ಬಂತು ಅಂತಾರೆ.. ಈ ಪ್ರಶ್ನೆ ಯೂನಾನಿ ನಾಗರಿಕತೆಯ ಅರಿಸ್ಟಾಟಲ್ ಮುಂದೆಯೂ ಈ ಪ್ರಶ್ನೆ ಬಂದಿತ್ತು.. ತುಂಬಾ ತಲೆ ಕರ್ಚು ಮಾಡಿದ ಬಳಿಕ ಅರಿಸ್ಟಾಟಲ್ ಇದೊಂದು ಮುಗಿಯದ ಕಥೆ.. ಅನಂತ ಪ್ರಶ್ನೆ ಅನ್ನೋ ನಿಲುವಿಗೆ ಬಂದ್ರು. ಅಂದ್ರೆ ಬಾಹ್ಯಾಕಾಶ ಹೇಗೆ ಅನಂತವಾಗಿದೆಯೋ ಅದೇ ರೀತಿ ಈ ಪ್ರಶ್ನೆ ಕೂಡ ಅನಂತ.. ಸರಿಯಾದ ಮೂಲಕ್ಕೆ ಹೋಗಲು ಸಾಧ್ಯವಿಲ್ಲ ಅನ್ನೋದು ಅರಿಸ್ಟಾಟಲ್ ಅಭಿಪ್ರಾಯವಾಗಿತ್ತು. ಆದ್ರೆ ನಾವು ವಿಜ್ಞಾನದ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸೋಣ..
ಕೋಳಿ ಒಂದು ಪಕ್ಷಿಯ ಪ್ರಜಾತಿ.. ಆದ್ರೆ ಕೋಳಿ ಜಾಸ್ತಿ ದೂರ ಹಾರೋಕೆ ಆಗೋದಿಲ್ಲ. ಹೀಗಾಗಿ ಮನುಷ್ಯರು ಅದನ್ನು ಹಿಡಿದಿಟ್ಕೊಂಡು ಸಾಕೋಕೆ ಶುರು ಮಾಡಿದ್ರು. ಬರ್ತಾ ಬರ್ತಾ ಇದು ಸಾಕು ಪಕ್ಷಿ ಯಾಗಿಬದಲಾಗಿ ಹೋಯ್ತು. ಈಗ ಸಾಕು ಕೋಳಿ ಇದ್ಯಲ್ಲಾ ಅದೇ ಎಲ್ರೂ ಬಾಯಲ್ಲಿ ನೀರೂರಿಸ್ಕೊಂಡು ನಾಟಿ ಕೋಳಿ ಚಂದ ಅಂತಾರಲ್ವಾ ಅದು ಒಂದು ಕಾಡು ಪಕ್ಷಿಯ ವಂಶಸ್ಥರಾಗಿವೆ. ಇದನ್ನು ರೆಡ್ ಜಂಗಲ್ ಫೌಲ್ ಅಂತ ಕರೆಯಲಾಗುತ್ತೆ. 1920ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಇಂದಿನ ಕೋಳಿಗಳ ಪೈಕಿ ಶೇ.71ರಿಂದ 79ರಷ್ಟು ರೆಡ್ ಜಂಗಲ್ ಫೌಲ್‍ಗೆ ಮ್ಯಾಚ್ ಆಗುತ್ತೆ. ಕೋಳಿಗಳನ್ನು ಸಾಕೋ ಪ್ರಕ್ರಿಯೆ 8 ಸಾವಿರ ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ.
ಇನ್ನು ಮೊಟ್ಟೆ ವಿಚಾರಕ್ಕೆ ಬಂದ್ರೆ ಮೇಲೆ ಓಡು ಇರುತ್ತೆ. ಒಳಭಾಗದಲ್ಲಿ ಭ್ರೂಣ ಇರುತ್ತೆ. ಅದರಲ್ಲಿ ಭ್ರೂಣದ ವಿಕಾಸಕ್ಕೆ ಬೇಕಾದ ಅಂಶಗಳೂ ಇರುತ್ತವೆ. ಈ ಮೊಟ್ಟೆಗಳ ಅಸ್ತಿತ್ವ ತುಂಬಾ ಹಿಂದಿನಿಂದಲೂ ಇದೆ. ಕೋಳಿಯಿಂದಲೇ ಮೊಟ್ಟೆ ಬಂತು ಅಂತ ಹೇಳೋಕೆ ಆಗೋದಿಲ್ಲ. ಯಾಕಂದ್ರೆ ಇ ಪ್ರಪಂಚದಲ್ಲಿ ಕೋಳಿಯಂತಹ ಜೀವಿಯೇ ಇಲ್ಲದ ಸಮಯದಲ್ಲೂ ಮೊಟ್ಟೆಗಳಿದ್ದವು. ಡೈನಾಸರ್ ಮತ್ತು ಇತರೆ ಜಾತಿಯ ಜೀವಿಗಳು ಮೊಟ್ಟೆ ಇಡುತ್ತಿದ್ದವು. ಆಗಿನ ಕಾಲದ ಪ್ರಾಣಿಗಳ ಪಳಯುಳಿಕೆಗಳಿಂದ ಈ ಅಂಶವನ್ನು ಪತ್ತೆಹಚ್ಚಲಾಗಿದೆ. ಪಳಯುಳಿಕೆ ಅಂದ್ರೆ ಆಗಿನ ಕಾಲದ ಪ್ರಾಣಿಗಳ ಮೂಳೆಯಂತಹ ಅಂಶಗಳು. ಪ್ರಾಣಿಗಳು ಸತ್ರೂ ಮೂಳೆ ಹಾಗೆ ಉಳಿಯುತ್ತಲ್ವಾ ಅದು. ಈ ಪಳಯುಳಿಕೆ ಅಧ್ಯಯನ ಮೂಲಕ ಆ ಪ್ರಾಣಿಗೆ ಎಷ್ಟು ವರ್ಷ ವಯಸ್ಸು..? ಎಷ್ಟು ವರ್ಷಗಳ ಹಿಂದೆ ಸತ್ತಿತ್ತು ಅನ್ನೋದನ್ನು ಪತ್ತೆಹಚ್ಚುತ್ತಾರೆ. ಈವರೆಗೆ ಪತ್ತೆಯಾಗಿರುವ ಡೈನೋಸರ್ ಮೊಟ್ಟೆಯ ಅವಶೇಷದ ಪ್ರಕಾರ ಅದು 19 ಕೋಟಿ ವರ್ಷಗಳಷ್ಟು ಹಳೆಯದ್ದಾಗಿವೆ. ಅದೇ ಈವರೆಗೆ ಪತ್ತೆಯಾಗಿರುವ ಪಕ್ಷಿಗಳ ಮೊಟ್ಟೆ ಅವಶೇಷ 15 ಕೋಟಿ ವರ್ಷ ಹಳೆಯದ್ದಾಗಿದೆ. ಇದರ ಅರ್ಥ ಮೊಟ್ಟೆ ಕೋಳಿ ಮಾತ್ರವಲ್ಲ.. ಪಕ್ಷಿಗಿಂತಲೂ ಕೋಟ್ಯಂತರ ವರ್ಷಗಳ ಹಿಂದೆಯೂ ಇತ್ತು ಅಂತ ಆಯ್ತು. ಅಂದ್ರೆ ಪ್ರಶ್ನೆಗೆ ಉತ್ತರ ಸಿಕ್ತು.. ಕೋಳಿಗಿಂತ ಮೊಟ್ಟೆಯೇ ಮೊದಲು.. ಪಕ್ಷಿಯದ್ದು ಅಲ್ಲದೇ ಇದ್ರೂ ಬೇರೆ ಜೀವಿಯ ಮೊಟ್ಟೆ ಇತ್ತು ಅಂತ ಆಯ್ತು..
ಇದು ಕೋಳಿ ಮೊದಲ ಮೊಟ್ಟೆ ಮೊದಲಾ ಅನ್ನೋದಕ್ಕೆ ಉತ್ತರ.. ಅದೇ ಪ್ರಶ್ನೆಯನ್ನು ಬದಲಿಸಿ ಕೋಳಿ ಮೊದಲಾ ಕೋಳಿ ಮೊಟ್ಟೆ ಮೊದಲಾ ಅಂತ ಕೇಳಿದ್ರೆ ಅದಕ್ಕೆ ಉತ್ತರ ಬೇರೆ ಇದೆ.. ಅದಕ್ಕೆ ನಾವು ವಿಕಾಸವಾದದ ಸಿದ್ಧಾಂತವನ್ನು ನೋಡಬೇಕು. ಚಾರ್ಲ್ಸ್ ಡಾರ್ವಿನ್‍ರ ವಿಕಾಸವಾದ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಪೀಳಿಗೆಯಲ್ಲೂ ಕೆಲವೊಂದು ಬದಲಾವಣೆಗಳು ಬರುತ್ತವೆ. ಅದೇ ರೀತಿ ಭೂಮಿಯ ಮೇಲೆ ಪ್ರತಿಯೊಂದು ಜೀವಿಗಳ ವಿಕಾಸವಾಗಿದೆ. ಈ ಬದಲಾವಣೆ ಹೇಗಾಗುತ್ತೆ ಅಂದ್ರೆ ಜೀನ್ಸ್ಗಳ ಬದಲಾವಣೆಯಿಂದ.. ದೇಹದ ಮೇಲೆ ಹಾಕೋ ಜೀನ್ಸ್ ಅಲ್ಲ.. ದೇಹದ ಒಳಗೆ ಇರುವ ಜೀನ್ಸ್.. ಒಂದು ಜೀವದ ರಚನೆಯಲ್ಲಿ ಈ ಜೀನ್ಸ್ ಒಂದು ಕೋಡ್ ರೀತಿ ಕೆಲಸ ಮಾಡುತ್ತೆ. ಆ ಜೀವ ಹೇಗೆ ರಚನೆಯಾಗಬೇಕು ಅನ್ನೋದನ್ನು ನಿರ್ಧರಿಸೋದು ಕೂಡ ಇದೇ ಜೀನ್.. ಇದ್ರಲ್ಲಿ ಉಂಟಾಗೋ ಬದಲಾವಣೆಗಳಿಂದ ಪೀಳಿಗೆಯಿಂದ ಪೀಳಿಗೆಗೆ ಜೀವಿಗಳು ಬದಲಾಗುತ್ತವೆ. ಈ ಬದಲಾವಣೆಗಳನ್ನೇ ಮ್ಯುಟೇಷನ್ ಅಂತ ಕರೆಯಲಾಗುತ್ತೆ. ಈ ಮ್ಯುಟೇಷನ್‍ಗಳೇ ವಿಕಾಸವಾದದ ಆಧಾರ ಸ್ಥಂಭ. ಅದೇ ರೀತಿ ಕೋಳಿಗಳ ಪೂರ್ವಜರು ಜಂಗಲ್ ಫೌಲ್ ಅನ್ನೋ ಪಕ್ಷಿ. ಈ ಪಕ್ಷಿಗಳ ಪೀಳಿಗೆಯಲ್ಲಿ ವಿಕಾಸ ಆಗಿ ಆಗಿ ಮೊದಲ ಕೋಳಿ ಹುಟ್ಟಿರಬಹುದು. ಇದು ಯಾವಾಗ ಆಯ್ತು..? ಹೇಗಾಯ್ತು ಅಂತ ಪಕ್ಕಾ ಹೇಳೋಕೆ ಕಷ್ಟ..
ಅಂದ್ರೆ ಮೊದಲ ಕೋಳಿಯ ತಂದೆ-ತಾಯಿ ಕೋಳಿ ಆಗಿರಲಿಲ್ಲ. ಅವುಗಳು ಬೇರೆ ಪ್ರಜಾತಿಗೆ ಸೇರಿದ್ದವಾಗಿರಬಹುದು. ಅವು ಚಿಕನ್ಗೆ ಹತ್ತಿರದ ಸಂಬಂಧಿಯಾಗಿದ್ದ ಬೇರೆ ಯಾವುದೋ ಜೀವಿ. ಕೋಳಿಗೂ ಮೊದಲಿದ್ದ ಈ ಪ್ರಜಾತಿಯ ಎರಡು ಜೀವಿಗಳು ಒಟ್ಟಾಗಿ ಸೇರಿ ಒಂದು ಮೊಟ್ಟೆ ರೆಡಿಯಾಯ್ತು. ಆ ಮೊಟ್ಟೆಯ ಒಳಗಿದ್ದ ಭ್ರೂಣದಲ್ಲಿ ಮ್ಯುಟೇಷನ್ ಆಗಿ ಮೊದಲ ಕೋಳಿಯ ಡಿಎನ್‍ಎ ರೆಡಿಯಾಯ್ತು. ಈ ಭ್ರೂಣ ದೊಡ್ಡದಾಗಿ ಮೊಟ್ಟೆಯಿಂದ ಮೊದಲ ಕೋಳಿಯಾಗಿ ಹೊರಬಂತು. ಅಂದ್ರೆ ಪ್ರಪಂಚದ ಮೊದಲ ಕೋಳಿ ಮೊಟ್ಟೆಯಿಂದಲೇ ಬಂತು ಅಂತ ಆಯ್ತು. ಈ ಲೆಕ್ಕಾಚಾರದಲ್ಲಿ ನೋಡಿದ್ರೂ ಕೂಡ ಕೋಳಿಗಿಂತ ಮೊಟ್ಟೆಯೇ ಮೊದಲು ಅಂತ ಹೇಳಬಹುದು. ಇಲ್ಲಿ ಕೋಳಿಗಳಿಗಿಂತ ಮೊದಲಿದ್ದ ಆ ಜೀವಿಗಳನ್ನ ಪ್ರೋಟೋ ಚಿಕನ್ ಅಂತಾ ವಿಜ್ಞಾನ ಕರೆಯುತ್ತೆ. ನೀವೂ ಕೂಡಾ ಪ್ರೋಟೋ ಚಿಕನ್ ಅಂತಾ ಟೈಪ್ ಮಾಡಿ ಹುಡಕಿದರೆ ನೂರಾರು ವಿಜ್ಞಾನದ ಥಿಯರಿಗಳು ನಿಮ್ಮ ಕಣ್ಮುಂದೆ ಬರುತ್ತವೆ. ಸರಿ ಸ್ವಾಮಿ.., ಕೋಳಿ ಮೊದಲಾ ಮೊಟ್ಟೆ ಮೊದಲಾ ಪ್ರಶ್ನೆಗೆ, ಕೋಳಿಗೂ ಮೊದಲಿದ್ದ ಜೀವಿಗಳಿಂದ ಬಂದ ಮೊಟ್ಟೆಯೊಳಗಿನ ಜೆನೆಟಿಕ್ ಬದಲಾವಣೆಗಳಿಂದ ನಾಟಿ ಕೋಳಿಗಳ ಜನನ ಆಯ್ತು ಅಂತಿದೀರಿ.. ಸರಿ.., ಹಾಗಾದ್ರೆ ಕೋಳಿಗೂ ಮೊದಲಿದ್ದ ಆ ಜೀವಿಗಳು ಎಲ್ಲಿಂದ ಬಂದವು ಅಂತಾ ನೀವು ಕೇಳಬಹುದು. ಈ ಪ್ರಶ್ನೆಗೆ ವಿಜ್ಞಾನದ ಬಳಿ ಖಚಿತ ಉತ್ತರ ಇಲ್ಲ. ಚಾರ್ಲ್ಸ್ ಡಾರ್ವಿನ್ರ ವಿಕಾಸವಾದದ ಪ್ರಕಾರ ಜೀವಿಗಳು ಕಾಲ ಕಾಲಕ್ಕೆ ವಿಕಾಸ ಆಗಿ ಆಗಿ ಕೆಲ ಸಂದರ್ಭಗಳಲ್ಲಿ ಹೊಸ ರೀತಿಯ ಜೀವಿಗಳ ಜನನಕ್ಕೆ ಕಾರಣ ಆಗುತ್ತವೆ. ಇದು ಮುಂದುವರಿದುಕೊಂಡೇ ಹೋಗುತ್ತೆ. ಈಗ ಮಂಗನಿಂದ ಮಾನವ ಅಂತಾ ಡಾರ್ವಿನ್ ಹೇಳೋದೂ ಇದೇ ಆಧಾರದ ಮೇಲೆ. ಹೀಗಾಗಿ ಸಮುದ್ರದಲ್ಲಿ ಮೊದಲು ಕಾಣಿಸಿಕೊಂಡ ಸೂಕ್ಷ್ಮ ಜೀವಿಗಳು ಹಂತ ಹಂತವಾಗಿ ಬೆಳವಣಿಗೆ ಹೊಂದಿ, ನಂತರ ಸರೀಸೃಪಗಳಾಗಿ, ನಂತರ ಈ ಪ್ರಕ್ರಿಯೆ ಮುಂದುವರಿದು ಈಗ ಭೂಮಿ ಮೇಲಿನ ಇಷ್ಟೊಂದು ವಿಶಾಲ ಜೀವ ರಾಶಿಗೆ ಕಾರಣ ಆಗಿದೆ ಅಂತಾ ಸದ್ಯ ವಿಜ್ಞಾನ ಜಗತ್ತು ನಂಬಿಕೊಂಡಿದೆ.
ಮೊಟ್ಟೆ, ಕೋಳಿ ವಿಚಾರವೇನೂ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡಿದ್ರೂ ಈಗ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ಕೋಳಿ ಮತ್ತು ಅದರ ಮೊಟ್ಟೆ ಬಿಡಿ.. ಇಡೀ ವಿಶ್ವದಲ್ಲಿ ಮೊಟ್ಟೆ ಮೊದಲು ಬಂತ ಜೀವಿ ಮೊದಲು ಬಂತಾ ಅಂತ..ಅದೇ ರೀತಿ ಇರುವ ಇನ್ನೊಂದು ಪ್ರಶ್ನೆ ಅಂದ್ರೆ ಬೀಜ ಮೊದಲ ಮರ ಮೊದಲ ಅನ್ನೋದು.. ಇದಕ್ಕೆ ಉತ್ತರ ಹುಡುಕೋದು ಸ್ವಲ್ಪ ಕಷ್ಟ ಅಂತಲೇ ಹೇಳಬಹುದು.. ಆದ್ರೆ ವಿಕಾಸವಾದದ ಸಿದ್ಧಾಂತದ ಮೂಲಕ ಹೋಗೋದ್ರೆ ಮೊಟ್ಟೆಯೇ ಮೊದಲು.. ಬೀಜವೇ ಮೊದಲು..
No comments:
Post a Comment