Tuesday, 21 December 2021
ಇಂದಿನ ವಿಷಯ: *ಚರ್ಮದ ವ್ಯಾಧಿಗಳು {Skin diseases}*
🦢 *ಅಮೃತಾತ್ಮರೇ, ನಮಸ್ಕಾರ* 🦢
🌱 *ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ* 🍀 *ಸ್ವಾಸ್ಥ್ಯ ಸರ್ವರದ್ದೂ ಆಗಲಿ* 🌴
••••••••••••••••••••••••••••••••••••••
*ದಿನಾಂಕ: 21.12.2021*
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ -- ಸಂಚಿಕೆ-74
•••••••••••••••••••••••••••••••••••••ll
✍️: _ಇಂದಿನ ವಿಷಯ:_
*ಚರ್ಮದ ವ್ಯಾಧಿಗಳು {Skin diseases}*
_ಕಾಂತಿಯುತ ತ್ವಚೆ ಇರಬೇಕೆಂಬುದು ಎಲ್ಲರ ಇಚ್ಛೆ ಅಲ್ಲವೇ? ಇದು ಕೇವಲ ಒಂದು ಅಂಶದ ಮೇಲೆ ನಿರ್ಧಾರವಾಗುವುದಲ್ಲ!ಮಾಂಸಖಂಡಗಳ, ರಕ್ತನಾಳಗಳ ಮತ್ತು ನರಗಳ ಆರೋಗ್ಯ ಈ ಮೂರೂ ಸೇರಿ ಕಾಂತಿಯನ್ನು ತರುತ್ತವೆ. ಇವೇ ಮೂರು ಅಂಶಗಳು ಎಲ್ಲಾ ರೀತಿಯ ತ್ವಚಾರೋಗಗಳಿಗೆ ಕಾರಣ..._ 🤔
_ಯಾವ ಕಾರಣದಿಂದ ಈ ಮೂರರ ಆರೋಗ್ಯ ಹಾಳಾಗುತ್ತದೆ ನೋಡೋಣ..._
*ನಿದ್ದೆಗೆಡುವುದು, ಶರೀರದ ಅಗತ್ಯಕ್ಕಿಂತ ಹೆಚ್ಚು ಹುಳಿ ಸೇವನೆ (ಉದಾಹರಣೆಗೆ ಫರ್ಮೆಂಟೆಡ್ ಹಿಟ್ಟಿನಿಂದ ತಯಾರಿಸಲಾಗುವ ಇಡ್ಲಿ, ದೋಸೆ ಮತ್ತು ಮೈದಾ, ಗೋಧಿಗಳ ಅತಿಯಾದ ಹಾಗೂ ನಿರಂತರ ಬಳಕೆ), ರಾಸಾಯನಿಕಗಳಿಂದ ರುಚಿ ಹೆಚ್ಚಿಸುವ ಪಾನಿಪುರಿ ಮತ್ತು ಇತರೆ ಯಾವುದೇ ಪದಾರ್ಥಗಳ ಸೇವನೆ, ಶರೀರದ ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವನೆ, ಕೆಲವು ಶಕ್ತಿವಿರುದ್ಧ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸುವುದು (ಉದಾಹರಣೆಗೆ ಮೀನು-ಹಾಲು, ಮೀನು-ಮೊಸರು, ಹಾಲು-ಚಕ್ಕೊತ, ಪಾಲಕ, ಹುಳಿ ಸೊಪ್ಪು, ತಕ್ಷಣಕ್ಕೆ ತಣ್ಣೀರು-ಬಿಸಿನೀರು ಸೇವನೆ, ಸ್ನಾನ..., ಸುಡು ಬಿಸಿಲಿನಿಂದ ಬಂದು ತಂಪಾದ ಜಲ ಸೇವನೆ), ಅತಿಯಾದ ಚಿಂತೆ.. ಮುಂತಾದವು*
_ಇವುಗಳಿಂದ ನಮ್ಮ ರಕ್ತದಲ್ಲಿ "ಸಂಕ್ಲೇದ" ಎಂಬ ಅಂಟಾದ ಕಣಗಳು ಉಂಟಾಗುತ್ತವೆ, ಅವುಗಳು ಬೆವರು ಗ್ರಂಥಿಯ ಮಾರ್ಗಕ್ಕಿಂತ ದೊಡ್ಡ ಕಣಗಳಾಗಿದ್ದು. ಚರ್ಮವನ್ನು ಸೂಕ್ಷ್ಮವಾಗಿ ಒಡೆದು ಹೊರಬರುತ್ತವೆ, ಇದೇ ಚರ್ಮದ ಕಾಯಿಲೆ. ಚರ್ಮದ ಯಾವ ಪದರದಲ್ಲಿ ಸಂಕ್ಲೇದ ಸಂಗ್ರಹವಾಗುತ್ತದೆ ಎನ್ನುವುದರ ಮೇಲೆ ವಿವಿಧ ಚರ್ಮದ ರೋಗಗಳು ಬರುತ್ತವೆ. ಎಲ್ಲದಕ್ಕೂ ಒಂದೇ ಕಾರಣ -- ಸಂಕ್ಲೇದವೆಂಬ ಅಂಟು ರಾಸಾಯನಿಕ!_ *ಉದಾಹರಣೆಗೆ:*
_ರಕ್ತನಾಳಗಳು ಕಟ್ಟಿಕೊಳ್ಳುವ ಒಂದೇ ಕಾರಣಕ್ಕೆ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿತೊಂದರೆ... ಬರಬಹುದು, ರೋಗವು ರಕ್ತನಾಳವು ಎಲ್ಲಿ ಕಟ್ಟಿಕೊಳ್ಳುತ್ತದೆ ಎಂಬುದನ್ನು ಆಧರಿಸುತ್ತದೆ. ಹಾಗೆಯೇ, ಸಂಕ್ಲೇದವೆಂಬ ಅಂಟು ಎಲ್ಲಿ ಶೇಖರಣೆಯಾಗುತ್ತದೆ ಎಂಬ ಕಾರಣವನ್ನು ಆಧರಿಸಿ, ಬೇರೆ ಬೇರೆ ಚರ್ಮದ ರೋಗಗಳಂತೆ ಬಿಂಬಿತವಾಗುತ್ತದೆ._
_ಈ ಅಂಶಗಳನ್ನು ಆಧುನಿಕ ವಿಜ್ಞಾನ ಪರಿಗಣಿಸದೇ ಕೇವಲ ಬ್ಯಾಕ್ಟೀರಿಯಾ, ಫಂಗಸ್ ಎಂದು ಹೊರಗಿನ ಕಾರಣಗಳನ್ನೇ ನೋಡುತ್ತದೆ. ನಿಜ ಫಂಗಲ್ ಸೋಂಕು ಸತ್ಯವಾದರೂ ಅದರ ಬೆಳವಣಿಗೆಗೆ ಸೂಕ್ತ ಪೋಷಣೆ ಒದಗಿಸುವುದು ಮೇಲೆ ತಿಳಿಸಿದ ಆಹಾರ-ವಿಹಾರಗಳು..._
*ಉದಾಹರಣೆಗೆ:* _ನೊಣಗಳನ್ನು ಓಡಿಸುವ ಬದಲು ಇಟ್ಟಿರುವ ಬೆಲ್ಲವನ್ನು ತೆಗೆಯುವುದು ಸೂಕ್ತ ಚಿಕಿತ್ಸೆ ಅಲ್ಲವೇ? ಶರೀರದಲ್ಲಿ ಕ್ರಿಮಿಗಳಿಗೆ ಬೇಕಾದ ಆಹಾರವನ್ನು (ಬೆಲ್ಲವನ್ನು) ಇಟ್ಟುಕೊಂಡು ಕ್ರಿಮಿನಿವಾರಕ ಮಾತ್ರೆ ointment ಗಳನ್ನು ಲೇಪಿಸುವುದು ಕೇವಲ ತಾತ್ಕಾಲಿಕ ಪರಿಣಾಮ ಬೀರಬಲ್ಲದು ಅಷ್ಟೇ._
_ಸೋರಿಯಾಸಿಸ್‌ನಲ್ಲಿ ಯಾವುದೇ ಕ್ರಿಮಿಗಳು ಇರುವುದಿಲ್ಲ, ಅಲ್ಲಿ ಇಮ್ಯೂನಿಟಿಯ ತೀಕ್ಷ್ಣ ಪ್ರತಿಕ್ರಿಯೆ ಇರುತ್ತದೆ. ಇಲ್ಲಿ ಇಮ್ಯೂನ್ ಸಿಸ್ಟಂ ಅನ್ನು ಸಪ್ರೆಸ್ ಮಾಡುವ steroids, anti malarial tablets... etc., ಗಳಂತಹ completely irrelevant ಔಷಧ ಪ್ರಯೋಗಿಸಿ, ಲಿವರ್, ಕಿಡ್ನಿಗಳನ್ನು ಹಾಳುಮಾಡುವ ಬದಲು ಮೇಲಿನ ಆಹಾರಗಳ ನಿಯಂತ್ರಣ ಮತ್ತು ಸೂಕ್ತ ಕ್ಲೇದ ನಿವಾರಕ ಔಷಧಗಳನ್ನು ಯೋಜಿಸುವುದು ಸೂಕ್ತ._
_ಆಯುರ್ವೇದ ಚಿಕಿತ್ಸೆ ಅಡ್ಡಪರಿಣಾಮ ಇಲ್ಲದ್ದು ಮತ್ತು ದೀರ್ಘಕಾಲೀನ ಪರಿಣಾಮ ಬೀರಬಲ್ಲದು ಆಗಿದೆ. ಇಲ್ಲಿ ಸಂಕ್ಲೇದವನ್ನು ಕರಗಿಸಲು ಬೇಕಾದ ಆಹಾರ-ವಿಹಾರ-ಔಷಧಿಗಳನ್ನೂ ಮತ್ತು ಕರಗದೇ ಇರುವಷ್ಡು ಹೆಚ್ಚು ಸಂಗ್ರಹವಾಗಿದ್ದರೆ ಸೂಕ್ತ ಪಂಚಕರ್ಮ ಚಿಕಿತ್ಸೆಗಳಿಂದ ಯಥಾವತ್ತಾಗಿ ಹೊರಹಾಕುವ ವಿಧಾನಗಳನ್ನೂ ಯಶಸ್ವಿಯಾಗಿ ಯೋಜಿಸಲಾಗುತ್ತದೆ._
_ರೋಗಿಯಿಂದ ನಾವು ಅತ್ಯಾವಶ್ಯಕವಾಗಿ ಬಯಸುವುದೇನೆಂದರೆ_ *ಆಹಾರದ ಶುದ್ಧತೆ ಮತ್ತು ಶಾಂತ ಚಿತ್ತತೆ.*
🙏 *ಧನ್ಯವಾದಗಳು* 🙏
••••••••••••••••••••••••••••••••••
Thursday, 9 December 2021
Friday, 3 December 2021
Subscribe to:
Posts (Atom)
MATHS TIME LINE
MATHS TIME LINE https://mathigon.org/timeline
-
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ...
-
CLICK HERE TO DOWNLOAD
-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ...